Tag: ರಾಮದಾಸ್

  • ಟಿಕೆಟ್ ವಂಚಿತ ಶಾಸಕ ರಾಮದಾಸ್‌ರನ್ನು ತಬ್ಬಿ ಬೆನ್ನು ತಟ್ಟಿದ ಅಮಿತ್ ಶಾ

    ಟಿಕೆಟ್ ವಂಚಿತ ಶಾಸಕ ರಾಮದಾಸ್‌ರನ್ನು ತಬ್ಬಿ ಬೆನ್ನು ತಟ್ಟಿದ ಅಮಿತ್ ಶಾ

    ಮೈಸೂರು: ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಚಾರ ಕಾರ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಮೈಸೂರಿಗೆ (Mysuru) ಆಗಮಿಸಿದ್ದಾರೆ. ಈ ವೇಳೆ ಕೃಷ್ಣರಾಜೇಂದ್ರ ಕ್ಷೇತ್ರದ ಟಿಕೆಟ್ ವಂಚಿತರಾಗಿರುವ ಎಸ್‌ಎ ರಾಮದಾಸ್ (SA Ramadas) ಅವರನ್ನು ಅಮಿತ್ ಶಾ ಬಾಚಿ ತಬ್ಬಿ, ಬೆನ್ನು ತಟ್ಟಿದ್ದಾರೆ.

     

    ಅಮಿತ್ ಶಾ ಆಗಮಿಸುತ್ತಲೇ ಅವರ ಕಾಲಿಗೆ ನಮಸ್ಕರಿಸಿ ರಾಮದಾಸ್ ಸ್ವಾಗತಿಸಿದರು. ಈ ವೇಳೆ ಅಮಿತ್ ಶಾ ಅವರನ್ನು ಬಾಚಿ ತಬ್ಬಿ, ಬೆನ್ನು ತಟ್ಟಿದ್ದಾರೆ. ಈ ಬಗ್ಗೆ ತಿಳಿಸಿರುವ ರಾಮದಾಸ್, ನಾನು ಆರೋಗ್ಯದ ಸಮಸ್ಯೆಯ ಹಿನ್ನೆಲೆ ಆಸ್ಪತ್ರೆಯಲ್ಲಿದ್ದೆ. ರಾಷ್ಟ್ರೀಯ ನಾಯಕರು ಬಂದಾಗ ನಾನು ಸ್ವಾಗತ ಕೋರುವುದು ನನ್ನ ಜವಾಬ್ದಾರಿ. ಏರ್‌ಪೋರ್ಟ್‌ನಲ್ಲಿ ಇಳಿದಾಗ ಅಮಿತ್ ಶಾ ಅವರು ಬಹಳ ಆತ್ಮೀಯವಾಗಿ ಅಪ್ಪುಗೆ ನೀಡಿ ಮಾತನಾಡಿಸಿದರು. ರಾಮದಾಸ್ ಜಿ ಬಹುತ್ ಅಚ್ಚಾ ನಿರ್ಲಿಯಾ ಅಂತಾ ತಬ್ಬಿ ನಗು ಸೂಸಿದರು. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ರಾಮದಾಸ್ ಸಂತಸ ವ್ಯಕ್ತಪಡಿಸಿದರು.

    ನಾನು ಯಾವತ್ತೂ ಭರವಸೆ ಬೇಕು ಎಂದು ಕೇಳಿದವನಲ್ಲ. ಇದು ಇವತ್ತಿನ ಸಂಬಂಧ ಅಲ್ಲ. 25 ವರ್ಷ ಹಳೆಯ ಸಂಬಂಧ. ಅದನ್ನು ಮಾತಿನಲ್ಲಿ ಹೇಳುವ ಅವಶ್ಯಕತೆ ಇಲ್ಲ. ಅವರು ನನ್ನ ನಿರ್ಣಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನಗೆ ಅಷ್ಟೇ ಸಾಕು. ನಾನು ಕೂಡ ಇಷ್ಟು ಆತ್ಮೀಯತೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಮೋದಿಯವರು ಬೆನ್ನು ತಟ್ಟಿದಾಗಲೂ ನಾನು ನಿರೀಕ್ಷೆ ಮಾಡಿರಲಿಲ್ಲ. ಮೋದಿಯವರು ಆತ್ಮೀಯವಾಗಿ ಮಾತನಾಡಿಸಿದಾಗಲೂ ಕೂಡ ನಮ್ಮ 25 ವರ್ಷದ ಸಂಬಂಧವನ್ನು ಎಲ್ಲೂ ಹೊರಗೆ ಬಾರದಂತೆ ನೋಡಿಕೊಂಡಿದ್ದೆ. ಇಂದು ನನ್ನ ನಿರ್ಧಾರಕ್ಕೆ ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಟಿಕೆಟ್ ಕೈ ತಪ್ಪಿದ ವೇಳೆ ನನ್ನ ಮುಂದೆ 2 ಆಯ್ಕೆಗಳಿತ್ತು. ಸ್ವಾತಂತ್ರವಾಗಿ ನಿಂತು ಗೆಲ್ಲುವ ಅವಕಾಶ ಇದ್ದ ಸಂದರ್ಭದಲ್ಲಿ ನಾನು ಎಂಎಲ್‌ಎ ಆಗಬೇಕಾ? ಅಥವಾ ವಿಶ್ವಾನಾಯಕರ ಸಂಬಂಧ ಉಳಿಸಿಕೊಳ್ಳಬೇಕ? ಎಂಬ ಆಯ್ಕೆಗಳಿತ್ತು. ಕೇವಲ ಎಂಎಲ್‌ಎಗಾಗಿ ಆ ಬಾಂಧವ್ಯ ಕಳೆದುಕೊಳ್ಳೋದು ಬೇಡ ಎಂದು ನಾನು ಕಾರ್ಯಕರ್ತರ ಮನವೊಲಿಸಿ ಉಳಿಯುವ ಕೆಲಸ ಮಾಡಿದ್ದೇನೆ. ನನಗೆ ಟಿಕೆಟ್ ಯಾಕೆ ಕೈ ತಪ್ಪಿದೆ ಎನ್ನುವುದು ಈಗಲೂ ಗೊತ್ತಿಲ್ಲ. ಇದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ ಎಂದು ರಾಮದಾಸ್ ವಿಷಾದ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿಯಿಂದ ಜನರ ಭಾವನೆ ಕೆರಳಿಸುವ ಯತ್ನ: ಸಿದ್ದು ಪರ ಬ್ಯಾಟ್ ಬೀಸಿದ ಸವದಿ

    ಅಮಿತ್ ಶಾ ಸೋಮವಾರ ಮೈಸೂರು ಏರ್‌ಪೋರ್ಟ್‌ನಿಂದ ನೇರವಾಗಿ ರಸ್ತೆ ಮೂಲಕ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು. ಅರ್ಧ ಗಂಟೆಗಳ ಕಾಲ ಚಾಮುಂಡಿ ಬೆಟ್ಟದಲ್ಲಿ ಮಹಾಮಂಗಳಾರತಿ ಸೇರಿದಂತೆ ದೇವಿಯ ಪೂಜೆಯಲ್ಲಿ ಭಾಗಿಯಾದರು. ಅಮಿತ್ ಶಾಗೆ ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದರು.

    ಕೆಆರ್ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಬಳಿಕ ರಾಮದಾಸ್ ಫುಲ್ ಸೈಲೆಂಟ್ ಆಗಿದ್ದರು. ಶ್ರೀವತ್ಸ ಪರವಾಗಿ ನಾಮಪತ್ರ ಸಲ್ಲಿಕೆ ವೇಳೆ ಭಾಗಿಯಾಗಿ ಬಳಿಕ ತಣ್ಣಗಾಗಿದ್ದ ರಾಮದಾಸ್ 2 ದಿನದ ಹಿಂದೆ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಕೆಆರ್ ಕ್ಷೇತ್ರದ ಕಾರ್ಯಕರ್ತರ ಸಭೆಗೂ ಗೈರಾಗಿದ್ದರು. ಬಳಿಕ ಪಕ್ಷದ ಪ್ರಚಾರ ಕಾರ್ಯದಲ್ಲೂ ಹೆಚ್ಚಾಗಿ ರಾಮದಾಸ್ ಕಾಣಿಸಿಕೊಂಡಿರಲಿಲ್ಲ. ಇದೀಗ ಅಮಿತ್ ಶಾ ಮೈಸೂರಿಗೆ ಬಂದಿರುವ ಹಿನ್ನೆಲೆ ಅವರು ಖುದ್ದು ಹಾಜರಾಗಿ ಏರ್‌ಪೋರ್ಟ್ನಲ್ಲೇ ಶಾ ಅವರನ್ನು ಬರಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಈ ಸಲ ಕಪ್ ನಮ್ದೆ: ಶೆಟ್ಟರ್‌ಗೆ ಪ್ರಹ್ಲಾದ್ ಜೋಶಿ ಟಾಂಗ್

  • ಮೋದಿ ಅವರಿಂದ್ಲೆ ಬೆನ್ನು ತಟ್ಟಿಸಿಕೊಂಡಿರುವ ರಾಮದಾಸ್‌ಗೆ ಕಿರುಕುಳ ಕೊಡುವಷ್ಟು ಶಕ್ತಿ ನನಗಿಲ್ಲ – ಪ್ರತಾಪ್‌ ಸಿಂಹ

    ಮೋದಿ ಅವರಿಂದ್ಲೆ ಬೆನ್ನು ತಟ್ಟಿಸಿಕೊಂಡಿರುವ ರಾಮದಾಸ್‌ಗೆ ಕಿರುಕುಳ ಕೊಡುವಷ್ಟು ಶಕ್ತಿ ನನಗಿಲ್ಲ – ಪ್ರತಾಪ್‌ ಸಿಂಹ

    ಮೈಸೂರು: ಪ್ರಧಾನಿ ಮೋದಿ (Narendra Modi) ಅವರಿಂದಲೇ ಬೆನ್ನಿಗೆ ಗುದ್ದು ಕೊಡಿಸಿಕೊಂಡ ರಾಮದಾಸ್‌ (S.A.Ramdas) ಅವರಿಗೆ ಕಿರುಕುಳ ಕೊಡುವ ಶಕ್ತಿ ನನಗೆ ಎಲ್ಲಿದೆ ಹೇಳಿ ಎಂದು ಶಾಸಕ ಎಸ್‌.ಎ.ರಾಮದಾಸ್‌ ಆರೋಪಕ್ಕೆ ಸಂಸದ ಪ್ರತಾಪ್‌ ಸಿಂಹ (Pratap Simha) ತಿರುಗೇಟು ನೀಡಿದ್ದಾರೆ.

    ಗುಂಬಜ್‌ (Gumbaz) ಮಾದರಿಯಲ್ಲಿ ಮೈಸೂರು ಬಸ್‌ ನಿಲ್ದಾಣ (Mysuru Bus Stand) ನಿರ್ಮಾಣ ವಿವಾದದ ವಿಚಾರ ಮುಂದಿಟ್ಟುಕೊಂಡು ನನ್ನನ್ನು ಪಕ್ಷದಿಂದ ಬಿಡಿಸಲು ಕಿರುಕುಳ ನೀಡಲಾಗುತ್ತಿದೆ ಎಂಬ ಶಾಸಕ ರಾಮದಾಸ್‌ ಆರೋಪಕ್ಕೆ ಪ್ರತಾಪ್‌ ಸಿಂಹ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ಪಕ್ಷದಿಂದ ಬಿಡಿಸಲು ಕಿರುಕುಳ- ರಾಮ್‍ದಾಸ್ ಪರೋಕ್ಷ ಆರೋಪ

    ರಾಮದಾಸ್ ನಮ್ಮ ಹಿರಿಯ ನೇತಾರರು. ಗುಂಬಜ್ ಹೊಡೆದರೆ ಟಿಪ್ಲು ಅನುಯಾಯಿಗಳಿಗೆ ಕಿರುಕುಳ ಆಗುತ್ತದೆ. ಶಿವಾಜಿ ಅನುಯಾಯಿಗಳಿಗೆ ಕಿರುಕುಳ ಅನಿಸುವುದಿಲ್ಲ. ರಾಮದಾಸ್ ಅವರು ಯಾವ ಅರ್ಥದಲ್ಲಿ ತಮಗೆ ಕಿರುಕುಳ ಆಗಿದೆ ಎಂದು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ.

    ಮೈಸೂರಿನ ರಾಜಕಾರಣಿಗಳ ಬಳಿ ನನ್ನನ್ನೆ ಸುಟ್ಟು ಹಾಕುವಷ್ಟು ಹಣವಿದೆ. ಅವರಿಗೆ ಕಿರುಕುಳ ಕೊಡುವಷ್ಟು ಶಕ್ತಿವಂಥ ನಾನಲ್ಲ. ನಾನು ರಿಯಲ್ ಎಸ್ಟೇಟ್ ಮಾಡಲು ರಾಜಕಾರಣಕ್ಕೆ ಬಂದಿಲ್ಲ. ಮೈಸೂರಿನ ರಾಜಕಾರಣಿಗಳ ಜೊತೆ ಸೇರಿಕೊಂಡು ವ್ಯವಹಾರ ಮಾಡುವ ಅವಶ್ಯಕತೆ ಇಲ್ಲ. ನಾನು ಅಭಿವೃದ್ಧಿಗಾಗಿ ರಾಜಕಾರಣ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿವಾದಿತ ಗುಂಬಜ್ ತೆರವಿಗೆ ಪ್ರತಾಪ್ ಸಿಂಹ ಕೊಟ್ಟಿದ್ದ ಡೆಡ್‍ಲೈನ್ ಅಂತ್ಯ- ಇಂದು ತೆರವಿಗೆ ಮುಂದಾಗ್ತರಾ ಸಂಸದರು?

    ರಾತ್ರಿ ಕೆಲಸ ಮಾಡುವುದು ಕಳ್ಳರು. ರಾತ್ರಿ ಯಾಕೆ ಬಸ್ ನಿಲ್ದಾಣದ ಕೆಲಸ ಮಾಡಬೇಕು? ಬಸ್ ನಿಲ್ದಾಣಕ್ಕೆ ಹೆಸರಿಡಲು ಕಾನೂನಿದೆ. ರಾತ್ರೋರಾತ್ರಿ ಹೇಗೆ ಹೆಸರಿಟ್ಟರು. ಈ ವಿಚಾರದಲ್ಲಿ ಎಲ್ಲಾ ಕಾನೂನು ಉಲ್ಲಂಘನೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಧ್ಯ ಪ್ರವೇಶಿಸಿದೆ. ಅವರೇ ಅನಧಿಕೃತ ಕಟ್ಟಡ ಎಂದು ಹೇಳಿದ್ದಾರೆ. ಅವರು ತೆರವು ಮಾಡಬಹುದು. ಮೂಲ ವಿನ್ಯಾಸದಲ್ಲಿ ಗುಂಬಜ್ ಇಲ್ಲ. ಹೊಸ ವಿನ್ಯಾಸದಲ್ಲಿ ಗುಂಬಜ್ ಇದೆ. ಆ ನಕ್ಷೆಗೆ ಶಾಸಕರ ಆಪ್ತ ಕಾರ್ಯದರ್ಶಿ ಸಹಿ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೊಟ್ಟ ಗಡುವು ಮುಗಿದ ಮೇಲೆ ಏನಾಗುತ್ತೋ ನೋಡೋಣ ಎಂದು ಹೇಳಿದ್ದಾರೆ.

    ನಾನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ್ದೇನೆ. ಟಿಪ್ಪು ಏಕ್ಸ್‌ಪ್ರೆಸ್‌ ಬದಲಾಯಿಸುತ್ತೇನೆ ಎಂದು ಹೇಳಿದ್ದೆ, ಬದಲಾಯಿಸಿದ್ದೇನೆ. ಮಹಿಷಾ ದಸರಾ ನಿಲ್ಲಿಸಿದ್ದೇನೆ. ಗುಂಬಜ್ ವಿಚಾರದಲ್ಲೂ ನನ್ನ ಮಾತಿಗೆ ಬದ್ಧ. ಬಸ್ ನಿಲ್ದಾಣದ ಮೇಲಿನ ಅನಧಿಕೃತ ಗುಂಬಜ್ ತೆರವು ಮಾಡಲೇಬೇಕು. ಮೈಸೂರಿನ ಅಭಿವೃದ್ಧಿ ಕಾರ್ಯಗಳು ಮಹಾರಾಜರ ಹೆಸರು ಹೇಳಬೇಕೆ ವಿನಃ ಅವರ ಶತೃಗಳ ಹೆಸರಲ್ಲ. ಗುಂಬಜ್ ಬಗ್ಗೆ ಪರಿಶೀಲನೆಗೆ ಹೊಸ ತಜ್ಞರ ಸಮಿತಿ ಅವಶ್ಯಕತೆ ಇಲ್ಲ. ಕೆಆರ್‌ಐಡಿಎಲ್‌ನ ತಜ್ಞರೇ ಮೂಲ ನಕ್ಷೆಗೆ ಅನುಮತಿ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಗುಂಬಜ್ ಗುದ್ದಾಟಕ್ಕೆ ಟ್ವಿಸ್ಟ್ – ಬಸ್‌ನಿಲ್ದಾಣದ ಜಾಗ ನಮ್ಮದು, ತೆರವು ಮಾಡಿ ಎಂದ NHAI

    Live Tv
    [brid partner=56869869 player=32851 video=960834 autoplay=true]

  • BJPvsBJP; ಶಾಸಕರು ಕಟ್ಟಿಸಿದ ಬಸ್‌ ನಿಲ್ದಾಣವನ್ನು ಸಂಸದ ಒಡೆಯಲು ಹೊರಟಿದ್ದಾರೆ – ಕಾಂಗ್ರೆಸ್‌ ಲೇವಡಿ

    BJPvsBJP; ಶಾಸಕರು ಕಟ್ಟಿಸಿದ ಬಸ್‌ ನಿಲ್ದಾಣವನ್ನು ಸಂಸದ ಒಡೆಯಲು ಹೊರಟಿದ್ದಾರೆ – ಕಾಂಗ್ರೆಸ್‌ ಲೇವಡಿ

    ಬೆಂಗಳೂರು: ಗುಂಬಜ್‌ ಮಾದರಿಯ ಬಸ್‌ ನಿಲ್ದಾಣ ವಿಚಾರವಾಗಿ ಬಿಜೆಪಿಯ ಕೆ.ಆರ್‌.ಕ್ಷೇತ್ರ ಶಾಸಕ ಎಸ್‌.ಎ.ರಾಮದಾಸ್‌ (S.A.Ramdas) ಹಾಗೂ ಸಂಸದ ಪ್ರತಾಪ್‌ ಸಿಂಹ (Pratap Simha) ನಡುವೆ ಮುಸುಕಿನ ಗುದ್ದಾಟ ಮತ್ತೆ ಶುರುವಾಗಿದೆ. ಇದನ್ನು ‘BJPvsBJPʼ ಎಂದು ಟ್ವೀಟ್‌ ಮಾಡಿ ಕಾಂಗ್ರೆಸ್‌ (Congress) ಕಾಲೆಳೆದಿದೆ.

    ಕಾಂಗ್ರೆಸ್‌ ಟ್ವೀಟ್‌ನಲ್ಲೇನಿದೆ?
    BJPvsBJP ಕಿಚ್ಚು ಎಷ್ಟಿದೆ ಎನ್ನಲು ಮೈಸೂರಿನಲ್ಲಿ ನಡೆಯುತ್ತಿರುವ ಪ್ರತಾಪ್ ಸಿಂಹ vs ರಾಮದಾಸ್ ಕಾಳಗವೇ ಸಾಕ್ಷಿ. ಶಾಸಕರು ಕಟ್ಟಿಸಿದ ಬಸ್ ನಿಲ್ದಾಣವನ್ನು ಸಂಸದ ಒಡೆಯಲು ಹೊರಟಿದ್ದಾರೆ! ಬೇರೆಯವರ ಮನೆಯ ದೋಸೆಯ ತೂತನ್ನು ಹುಡುಕುವ ಬದಲು ಬಿಜೆಪಿಯವರು ತಮ್ಮ ಮನೆಯ ಕಾವಲಿಯ ತೂತನ್ನು ನೋಡಿಕೊಂಡರೆ ಒಳಿತು! ಇದನ್ನೂ ಓದಿ: ಪಾರಂಪರಿಕವಾಗಿ ಗುಂಬಜ್ ನಿರ್ಮಾಣ – ತಜ್ಞರನ್ನು ಕಳಿಸಲು ಸರ್ಕಾರಕ್ಕೆ ರಾಮದಾಸ್ ಪತ್ರ

    ಮೈಸೂರಿನಲ್ಲಿ ಗುಂಬಜ್‌ ಮಾದರಿಯಲ್ಲಿ ಬಸ್‌ ನಿಲ್ದಾಣವೊಂದನ್ನು ನಿರ್ಮಿಸಲಾಗಿದೆ. ನಾನು ನೀಡಿರುವ ಗಡುವಿನಲ್ಲಿ ಅದನ್ನು ತೆರವುಗೊಳಿಸದಿದ್ದರೆ, ನಾನೇ ತೆರವುಗೊಳಿಸುತ್ತೇನೆ ಎಂದು ಸಂಸದ ಪ್ರತಾಪ್‌ ಸಿಂಹ ಎಚ್ಚರಿಕೆ ನೀಡಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿರುವ ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್‌, ಅದು ಅರಮನೆಯ ಮಾದರಿಯದ್ದು. ಧರ್ಮದ ಆಧಾರದ್ದಲ್ಲ. ಪಾರಂಪರಿಕ ನಗರಿಯ ಮಹತ್ವ ಸಾರಲು ಅರಮನೆ ವಿನ್ಯಾಸದ ಮಾದರಿಯಲ್ಲಿ ಬಸ್‌ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗುತ್ತಿದೆ. ಗುಂಬಜ್‌ ಮಾದರಿಯಲ್ಲಿದೆ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಗುತ್ತಿಗೆದಾರ ಮುಸ್ಲಿಂ ಎಂದು ವದಂತಿ ಹಬ್ಬಿಸುತ್ತಿರುವ ಕುರಿತು ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದು ದೂರು ನೀಡಿದ್ದೇನೆ. ಇದನ್ನು ಧರ್ಮಕ್ಕೆ ಥಳಕು ಹಾಕುವುದು ಸರಿಯಲ್ಲ ಎಂದು ಪ್ರತಾಪ್‌ ಸಿಂಹ ಹೇಳಿಕೆಗೆ ಟಾಂಗ್‌ ನೀಡಿದ್ದಾರೆ. ಇದನ್ನೂ ಓದಿ: ಬಸ್ ನಿಲ್ದಾಣ ತೆರವು ಮಾಡಲ್ಲ, ಗುಂಬಜ್ ಮಾತ್ರ ತೆರವು ಮಾಡ್ತೇನೆ: ಪ್ರತಾಪ್ ಸಿಂಹ

    Live Tv
    [brid partner=56869869 player=32851 video=960834 autoplay=true]

  • ಮೋದಿ ನನ್ನ ತಾಯಿಯನ್ನು ನೆನಪಿಸಿಕೊಂಡರು ಎಂದು ಕಣ್ಣೀರಿಟ್ಟ ರಾಮದಾಸ್ – ಇದು ಕೌಟುಂಬಿಕ ಸಂಬಂಧ

    ಮೋದಿ ನನ್ನ ತಾಯಿಯನ್ನು ನೆನಪಿಸಿಕೊಂಡರು ಎಂದು ಕಣ್ಣೀರಿಟ್ಟ ರಾಮದಾಸ್ – ಇದು ಕೌಟುಂಬಿಕ ಸಂಬಂಧ

    ಮೈಸೂರು: ನಗರದ ಮಹಾರಾಜ ಕಾಲೇಜ್‍ನ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ವೇದಿಕೆಯ ಮೇಲಿದ್ದ ಶಾಸಕ ಎಸ್.ಎ. ರಾಮದಾಸ್‍ರನ್ನು ಬಹಳ ಪ್ರೀತಿಯಿಂದ ಮಾತನಾಡಿಸಿ ಅವರ ಬೆನ್ನಿಗೆ ಗುದ್ದಿ ಪ್ರೀತಿ ತೋರಿಸಿದ್ದರು.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಮದಾಸ್, ನನ್ನ ತಾಯಿಯನ್ನು ಮೋದಿ ಅವರು ವೇದಿಕೆ ಮೇಲೆ ನೆನಪಿಸಿಕೊಂಡರು. ರಾಮದಾಸ್ ಅವರ ತಾಯಿ ಇದ್ದಾಗ ತಿಂಡಿ ತಂದು ಕೊಡುತ್ತಿದ್ದ. ಈಗ ಅದನ್ನು ಮರೆತಿದ್ದಾನೆ ಎಂದು ಮೋದಿ ಹೇಳಿದರು ಎಂದು ರಾಮದಾಸ್ ಗದ್ಗದಿತರಾದರು. ಇದನ್ನೂ ಓದಿ: ರಾಮ್‍ದಾಸ್ ಹತ್ತಿರ ಕರೆದು ಬಾಗಿಸಿ ಬೆನ್ನಿಗೆ ಗುದ್ದಿದ ಮೋದಿ- ಪ್ರಧಾನಿಯಿಂದ ಶಾಸಕರಿಗೆ ಆಪ್ತ ಹಾರೈಕೆ

    ಸಹಜ ಇದು ಕೌಟುಂಬಿವಾದ ಸಂಬಂಧ ಮನೆವರು ಸೇರಿದಾಗ ಎಲ್ಲರನ್ನು ವಿಚಾರಿಸುವುದು ಸಹಜ ಅದೇ ರೀತಿ ಮೋದಿ ಕೇಳಿದ್ದಾರೆ. ಮನೆಯಲ್ಲಿ ಎಲ್ಲಾ ಚೆನ್ನಾಗಿದ್ದಾರ ಎಂಬ ಕೌಟುಂಬಿಕ ಪ್ರೀತಿಯನ್ನು ತೋರಿಸಿದ್ದಾರೆ. ನಾನು ನಿರೀಕ್ಷೆ ಮಾಡಿರಲಿಲ್ಲ. ಮೋದಿ ಪ್ರೀತಿಯಿಂದ ನಡೆದುಕೊಂಡರು. ಅವರಿಗೆ ನನಪಿಗೆ ಬಂದಿದ್ದು ನಮ್ಮ ಅಮ್ಮ ಎಂದು ಮೋದಿ ಜೊತೆಗಿನ ಮಾತುಕತೆ ಬಗ್ಗೆ ತಿಳಿಸಿದರು. ಇದನ್ನೂ ಓದಿ: ನಿಮ್ಮ ಸೇವೆ ಮಾಡಲು ನನಗೆ ಆಶೀರ್ವಾದ ಮಾಡಿ: ಮೈಸೂರಿನಲ್ಲಿ ಮೋದಿ

    Live Tv

  • ರಾಮ್‍ದಾಸ್ ಹತ್ತಿರ ಕರೆದು ಬಾಗಿಸಿ ಬೆನ್ನಿಗೆ ಗುದ್ದಿದ ಮೋದಿ- ಪ್ರಧಾನಿಯಿಂದ ಶಾಸಕರಿಗೆ ಆಪ್ತ ಹಾರೈಕೆ

    ರಾಮ್‍ದಾಸ್ ಹತ್ತಿರ ಕರೆದು ಬಾಗಿಸಿ ಬೆನ್ನಿಗೆ ಗುದ್ದಿದ ಮೋದಿ- ಪ್ರಧಾನಿಯಿಂದ ಶಾಸಕರಿಗೆ ಆಪ್ತ ಹಾರೈಕೆ

    ಮೈಸೂರು: ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ತೆರಳಿದ್ದು, ಅಲ್ಲಿ ಶಾಸಕ ರಾಮದಾಸ್ ಅವರನ್ನು ಹತ್ತಿರ ಕರೆದು ಆಪ್ತತೆಯಿಂದ ಬೆನ್ನಿಗೆ ಗುದ್ದನ್ನು ನೀಡಿದ್ದಾರೆ.

    ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಅನೇಕ ಕಡೆಗಳಲ್ಲಿ ಕಾರ್ಯಕ್ರಮವನ್ನು ನೇವೆರಿಸಿ ನಾಳೆ ಯೋಗ ದಿನದ ನಿಮಿತ್ತ ಅರಮನೆ ನಗರಿ ಮೈಸೂರಿಗೆ ತೆರಳಿದರು. ಅಲ್ಲಿ ಇಂದು ಮೈಸೂರಿನ ಮಹಾರಾಜ ಕಾಲೇಜ್ ಮೈದಾನದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ರಾಮದಾಸ್ ಅವರನ್ನು ಹತ್ತಿರ ಕರೆದು ಮಾತನಾಡಿಸಿದರು. ಈ ಸಂದರ್ಭದಲ್ಲಿ ರಾಮದಾಸ್ ಅವರ ಬೆನ್ನನ್ನು ಬಾಗಿಸಿ ಆಪ್ತತೆಯಿಂದ ಗುದ್ದು ನೀಡಿದರು. ಉಕ್ರೇನ್‍ನಲ್ಲಿ ಮೃತಪಟ್ಟ ನವೀನ್ ಕುಟುಂಬಕ್ಕೆ ಸಾಂತ್ವನ ಹೇಳಿ ಭಾವುಕರಾದ ಮೋದಿ

    ಇಂದು ಮೈಸೂರಿನ ಮಹರಾಜ ಕಾಲೇಜ್ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಸುಮಾರು 50 ಸಾವಿರ ಜನರು ಭಾಗವಹಿಸಿದ್ದಾರೆ. ಈ ಸಮಾವೇಶದಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಭಾಗದಿಂದ ಕೇಂದ್ರ ಸರ್ಕಾರದ ಫಲಾನುಭವಿಗಳು ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳನ್ನು ಉದ್ದೇಶಿ ಸಂವಾದ ಹಾಗೂ ಭಾಷಣ ಮಾಡಿದರು. ಬೆಂಗಳೂರಿನ ಜನರು ಕೈ ಜೋಡಿಸಿದ್ರೆ ಏನೂ ಬೇಕಾದ್ರೂ ಮಾಡಬಹುದು: ಮೋದಿ ಮೆಚ್ಚುಗೆ

    ಎರಡು ದಿನ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಬೆಂಗಳೂರಿನ ಕೊಮ್ಮಘಟ್ಟದಲ್ಲಿ ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸುಮಾರು 15 ನಿಮಿಷಗಳ ಕಾಲ ಮಾತನಾಡಿದರು. ಕನ್ನಡದಲ್ಲೇ ಮಾತು ಪ್ರಾರಂಭಿಸಿದ ಮೋದಿ, ಕನ್ನಡಿಗರಿಗೆ ಇದು ಮಹತ್ವದ ದಿನ. ಇಂದು ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಹಲವು ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ನನಗಿದು ಬಹಳ ಸಂತೋಷವಾಗಿದೆ ಎಂದು ಹೇಳಿದರು.

    Live Tv

  • ಸ್ವಪಕ್ಷೀಯ ಶಾಸಕರ ವಿರುದ್ಧ  ಪ್ರತಾಪ್‍ ಸಿಂಹ ವಾಗ್ದಾಳಿ – ಮುಂದುವರಿದ ಟಾಕ್‌ವಾರ್‌

    ಸ್ವಪಕ್ಷೀಯ ಶಾಸಕರ ವಿರುದ್ಧ ಪ್ರತಾಪ್‍ ಸಿಂಹ ವಾಗ್ದಾಳಿ – ಮುಂದುವರಿದ ಟಾಕ್‌ವಾರ್‌

    ಮೈಸೂರು: ಗ್ಯಾಸ್‍ಪೈಪ್‍ಲೈನ್ ಅಳವಡಿಕೆ ವಿಚಾರವಾಗಿ ಮೈಸೂರಿನ ಬಿಜೆಪಿ ಶಾಸಕರಾದ ರಾಮದಾಸ್ ಮತ್ತು ನಾಗೇಂದ್ರ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

    ಮೈಸೂರಿನಲ್ಲಿ ನಿನ್ನೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರತಾಪ್ ಸಿಂಹ, ಮೈಸೂರಿನಲ್ಲಿ ಗ್ಯಾಸ್‍ಪೈಪ್‍ಲೈನ್ ಅಳವಡಿಕೆ ವಿಚಾರವಾಗಿ ಮಾತನಾಡುತ್ತಿರುವವರು ಈ ಹಿಂದೆ ನಗರ ಪಾಲಿಕೆ ಸದ್ಯರಾಗಿದ್ದರು. ಈ ಸಂದರ್ಭ ಮೊಬೈಲ್ ಕಂಪನಿ ಸೇರಿದಂತೆ ಇತರ ಕಾಮಗಾರಿಗೆ ಊರೂರು ಅಗೆದು ಹೋದರು ಆಗ ಯಾರೂ ಕೇಳಿಲ್ಲ. ಆಗ ರಸ್ತೆ ಹದಗೆಟ್ಟು ಹೋಗಿಲ್ವಾ, ಆಗ ಯಾಕೆ ಮಾತನಾಡಿಲ್ಲ. ಈಗಿರುವ ರಸ್ತೆಯ ಬಗ್ಗೆ ಮಾತನಾಡುವ ಶಾಸಕರು ರೋಡ್‍ನ ಕ್ವಾಲಿಟಿ ಗಮನಿಸಿದ್ದೀರಾ? 300 ಕೋಟಿ ರಸ್ತೆ ಮಾಡಿದ್ದೀರಿ ಎಂದು ಹೇಳುತ್ತಿರಿ ಅದೂ ವರ್ಷನೂ ಬಾಳಿಕೆ ಬರಲ್ಲ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಭಾರತದಲ್ಲಿ ಶೇ.75 ವಯಸ್ಕರಿಗೆ ಎರಡೂ ಡೋಸ್‌ ಲಸಿಕೆ – ಪ್ರಧಾನಿ ಅಭಿನಂದನೆ

    ಪ್ರತಾಪ್ ಸಿಂಹ ವಿರುದ್ಧ ಕಮಿಷನ್‌ ಆರೋಪ:
    ಇಂದು ಶಾಸಕ ನಾಗೇಂದ್ರಗೆ ಮೈಸೂರಿನಲ್ಲಿ ಮನೆ ಮನೆಗೆ ಗ್ಯಾಸ್ ಪೈಪ್ ಅಳವಡಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರತಾಪ್ ಸಿಂಹ ಅವರನ್ನು ಕಂಪನಿಯವರು ವೈಯಕ್ತಿಕವಾಗಿ ಭೇಟಿ ಮಾಡದಿರಬಹುದು, ಅದಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿರುಬಹುದು ಎಂದು ಟಾಂಗ್ ನೀಡಿ, ಚಾಮುಂಡೇಶ್ವರಿ ಆಣೆಗೂ ನಾನು ಕಮಿಷನ್‍ಗಾಗಿ ಅಲ್ಲ ಜನರ ಹಿತದೃಷ್ಟಿಯಿಂದಾಗಿ ಧ್ವನಿ ಎತ್ತಿದ್ದೇನೆ. ನನಗೆ ಕಮಿಷನ್ ವಿಚಾರ ಗೊತ್ತಿಲ್ಲ. ಇದು ನನ್ನೂರು ಇಲ್ಲಿನ ಸಮಸ್ಯೆಗಳು ನನಗೆ ಚೆನ್ನಾಗಿ ಗೊತ್ತಿದೆ. ಗ್ಯಾಸ್ ಯೋಜನೆ ಕಾಮಗಾರಿ ವೇಳೆ ಅನಾಹುತ ಆದರೆ ಯಾರು ಜವಾಬ್ದಾರಿ. ಬೇರೆ ಬೇರೆ ಕಡೆ ಅನಾಹುತಗಳು ಆಗಿವೆ. ಅನಾಹುತಕ್ಕೆ ಯಾರು ಹೊಣೆ ಅದನ್ನು ಪ್ರಶ್ನಿಸಿದರೆ ತಪ್ಪಾ? ಪ್ರತಾಪ್ ಸಿಂಹ ಅವರಿಗೆ ಏಕೆ ಕಂಪನಿ ಮೇಲೆ ಒಲವು? ಕಂಪನಿಯವರು ನೇರವಾಗಿ ಪಾಲಿಕೆ ಅಧಿಕಾರಿಗಳ ಜೊತೆ ಮಾತನಾಡಲಿ ಎಂದರು. ಇದನ್ನೂ ಓದಿ: ತಪಾಸಣೆ ನೆಪದಲ್ಲಿ ಮಹಿಳಾ ರೋಗಿಗೆ ಕಿರುಕುಳ – ವೈದ್ಯನ ವಿರುದ್ಧ ದೂರು

    ತನ್ನ ಹುಟ್ಟೂರಲ್ಲಿ ಲೀಡ್ ಸಿಕ್ಕಿಲ್ಲ ಎಂದ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿ, ಸಂಸದರು ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಜಿ.ಪಂ ತಾ.ಪಂ ಸದಸ್ಯರನ್ನು ಗೆಲ್ಲಿಸಿದ್ದಾರೆ. 7 ವರ್ಷದಿಂದ ನೀವೆ ಸಂಸದರಾಗಿದ್ದೀರಾ ಮೊದಲು ಅದನ್ನು ಹೇಳಿ. ನಾನು ನನ್ನ ಹುಟ್ಟೂರಿನಲ್ಲಿ ಪಾಲಿಕೆ ಸದಸ್ಯನಾಗಿದ್ದೇನೆ. ನೀವು ನಮ್ಮ ಊರಲ್ಲಿ ಜಿ.ಪಂ ಗೆದ್ದು ಬಂದಿದ್ದರೆ ನಿಮಗೆ ಶರಣಾಗುತ್ತೇನೆ. ನಾನು ನಿಮ್ಮ ರೀತಿ ದಿಢೀರ್ ಅಂತಾ ಬಂದು ಪದವಿ ಪಡೆದವನಲ್ಲ. 25 ವರ್ಷದಿಂದ ಜನಪ್ರತಿನಿಧಿಯಾಗಿದ್ದೇನೆ. ನನ್ನ ಲೀಡ್ ಕಡಿಮೆಯಾಗಲು ಒಂದೇ ಊರಿನ ಇಬ್ಬರು ಅಭ್ಯರ್ಥಿಗಳು ಕಾರಣ ಮುಂದಿನ ಚುನಾವಣೆಯಲ್ಲಿ ಅತಿ ಹೆಚ್ಚು ಲೀಡ್ ಪಡೆಯುತ್ತೇನೆ. ನಿಮ್ಮ ಚುನಾವಣೆಯಲ್ಲಿ ನನ್ನ ಮುಖ ನನ್ನ ಅಭಿವೃದ್ಧಿ ನೋಡಿ ನಿಮಗೆ ಲೀಡ್ ಕೊಟ್ಟಿದ್ದು. ನನ್ನ ಕ್ಷೇತ್ರದಲ್ಲಿ ಪಾಲಿಕೆ ಸದಸ್ಯರು ಸೋಲಲು ಕಾರಣ ನೀವು. ನೀವೆ ಅದರ ಜವಾಬ್ದಾರಿ ಪಡೆದು ಟಿಕೆಟ್ ನೀಡಿದ್ದೀರಿ. ಅದರಲ್ಲಿ ಎಷ್ಟು ಜನರನ್ನು ಗೆಲ್ಲಿಸಿದ್ದೀರಾ? ಎಂ.ಎಲ್.ಸಿ ಚುನಾವಣೆ ಉಸ್ತುವಾರಿ ನೀವೆ ವಹಿಸಿದ್ದಿರಿ ಅದನ್ನು ಗೆಲ್ಲಿಸಿದ್ದೀರಾ?. ನಾನು ನಿಮ್ಮಷ್ಟು ವಿದ್ಯಾವಂತ ಬುದ್ದಿವಂತ ಅಲ್ಲಬೀದಿಯಲ್ಲಿ ನಿಂತು ನಮಗೆ ಪಾಠ ಮಾಡಬೇಡಿ ಎಂದು ತಿರುಗೇಟು ನೀಡಿದ್ದಾರೆ.

  • ಪ್ರತಾಪ್ ಸಿಂಹ, ರಾಮದಾಸ್ ಕಿತ್ತಾಟ- ಕಣ್ಣೀರಾಕಿದ ಮೇಯರ್

    ಪ್ರತಾಪ್ ಸಿಂಹ, ರಾಮದಾಸ್ ಕಿತ್ತಾಟ- ಕಣ್ಣೀರಾಕಿದ ಮೇಯರ್

    ಮೈಸೂರು: ಶಾಸಕ ರಾಮದಾಸ್ ವರ್ಸಸ್ ಸಂಸದ ಪ್ರತಾಪಸಿಂಹ ಫೈಟ್‍ಗೆ ಕೊನೇ ಕೌನ್ಸಿಲ್ ಸಭೆ ಬಲಿಯಾಗಿದೆ. ಅಲ್ಲದೆ ಮೇಯರ್ ಸುನಂದಾ ಪಾಲನೇತ್ರ ಕಣ್ಣೀರು ಹಾಕಿದ್ದಾರೆ.

    ಕೇಂದ್ರ ಸರ್ಕಾರದ ಮನೆಗಳಿಗೆ ನೇರ ಗ್ಯಾಸ್ ಪೈಪ್‍ಲೈನ್ ಮತ್ತು ಕೇಬಲ್ ಅಳವಡಿಕೆಗೆ ಶಾಸಕ ರಾಮದಾಸ್ ವಿರೋಧಿಸಿದ್ದಾರೆ. ಕೆ.ಆರ್. ಕ್ಷೇತ್ರದಲ್ಲಿ ಉತ್ತಮ ರಸ್ತೆ ಮಾಡಿದ್ದೇವೆ. ಈಗ ಅದನ್ನು ಅಗೆದು ಅನಿಲ ಪೈಪ್‍ಲೈನ್ ಹಾಕುವುದು ಬೇಡ. ಜನರ ಹಿತದೃಷ್ಟಿಯಿಂದ ಗ್ಯಾಸ್ ಪೈಪ್‍ಲೈನ್‍ಗೆ ಅನುಮತಿ ಕೊಡಬಾರದು ಅಂತ ಮೈಸೂರು ಪಾಲಿಕೆ ಆಯುಕ್ತರಿಗೆ ರಾಮದಾಸ್ ಪತ್ರ ಬರೆದಿದ್ದರು.

    ಇದಕ್ಕೆ ಕೆಂಡಾಮಂಡಲ ಆಗಿರೋ ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್-ಜೆಡಿಎಸ್‍ನವರೇ ವಿರೋಧಿಸಿಲ್ಲ. ನಮ್ಮದೇ ಶಾಸಕರು ವಿರೋಧಿಸ್ತಾರೆ. ರಾಮದಾಸ್ ಮೋದಿಗಿಂತ ಸೀನಿಯರ್ರಾ..? ಬುದ್ದಿವಂತರು, ಜ್ಞಾನಿಗಳಾ..? ಬ್ಯಾನರ್‍ನಲ್ಲಿ ಮೋದಿ ಫೋಟೋ ಹಾಕಿಕೊಂಡು ಉತ್ಸವ ಮಾಡಿದರೆ ಆಗಲ್ಲ. ಇದ್ಯಾವುದಕ್ಕೂ ನಾನು ಕೇರ್ ಮಾಡಲ್ಲ. ಯೋಜನೆಯನ್ನು ಪೂರ್ತಿ ಮಾಡುತ್ತೇನೆ ಅಂತ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಕಾಗೆ ಕಾಟಕ್ಕೆ ಚಿತ್ರದುರ್ಗದ ಓಬಳಾಪುರ ಜನ ಸುಸ್ತು..!

    ಅಲ್ಲದೆ ಕೆಲಸ ಕಾರ್ಯ ಬಿಟ್ಟು ಸಭೆಗೆ ಬಂದರೆ ಏಕಾಏಕಿ ಮೀಟಿಂಗ್ ಕ್ಯಾನ್ಸಲ್ ಮಾಡ್ತೀರಾ ಅಂತ ಮೇಯರ್‍ಗೆ ಗದರಿದ್ದಾರೆ. ಇದರಿಂದ ಕಣ್ಣೀರು ಹಾಕಿದ ಮೇಯರ್ ಸುನಂದಾ, ಕಾಂಗ್ರೆಸ್-ಜೆಡಿಎಸ್ ಸದಸ್ಯರು ಗೈರಾದ ಕಾರಣ ಕೋರಂ ಅಭಾವ ಆಗಿ ಸಭೆಯನ್ನು ಮುಂದೂಡಿದೆ. ಸದಸ್ಯರನ್ನು ಕೌನ್ಸಿಲ್‍ಗೆ ಬರಬೇಡಿ ಎಂದು ಯಾರು ಹೇಳಿದ್ದಾರೋ ಗೊತ್ತಿಲ್ಲ. ಇದು ನನಗೆ ಮಾಡಿದ ಅಪಮಾನವಲ್ಲ, ಮೇಯರ್ ಹುದ್ದೆಗೆ ಅಪಮಾನ ಅಂತ ಹೇಳಿದ್ದಾರೆ. ಇದನ್ನೂ ಓದಿ: ಲಂಚ ಕೊಡೋಕೆ ಹಣ ಇರ್ಲಿಲ್ಲ – ಅಮ್ಮನ ಹೊಟ್ಟೆಯಲ್ಲೇ ಮಗು ಸತ್ತೋಯ್ತು..!

  • ಹಿಂದೂಗಳ ಧಾರ್ಮಿಕ ಕೇಂದ್ರ ರಕ್ಷಣೆಗೂ ಬೋರ್ಡ್ ಬೇಕು: ಶಾಸಕ ರಾಮದಾಸ್

    ಹಿಂದೂಗಳ ಧಾರ್ಮಿಕ ಕೇಂದ್ರ ರಕ್ಷಣೆಗೂ ಬೋರ್ಡ್ ಬೇಕು: ಶಾಸಕ ರಾಮದಾಸ್

    ಮೈಸೂರು: ಮುಸ್ಲಿಮರು, ಕ್ರಿಶ್ಚಿಯನ್ನರ ಧಾರ್ಮಿಕ ಕೇಂದ್ರಗಳ ರಕ್ಷಣೆಗೆ ಬೋರ್ಡ್ ಇದೆ. ಇದೇ ರೀತಿಯ ಬೋರ್ಡ್ ಹಿಂದೂಗಳಿಗೂ ಬೇಕು ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.

    ದೇವಾಲಯಗಳನ್ನು ಮುಜರಾಯಿ ಇಲಾಖೆಯಿಂದ ಕೈಬಿಡುವ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೋಟ್ ಬ್ಯಾಂಕ್ ಓಲೈಕೆಗಾಗಿ ಕಾಂಗ್ರೆಸ್‌ನಿಂದ ವಿರೋಧ ವ್ಯಕ್ತವಾಗುತ್ತಿದೆ. ಇದು ರಾಜಕೀಯ ಕಾರಣಕ್ಕಾಗಿ ಮಾಡುತ್ತಿರುವ ವಿರೋಧವಾಗಿದೆ. ಕಾಂಗ್ರೆಸ್‌ನವರದ್ದು ಯಾವಾಗಲೂ ರಾಜಕೀಯ ಲೆಕ್ಕಾಚಾರವಾಗಿದೆ. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಅವರು ನುಡಿದಂತೆ ನಡೆಯುವ ವ್ಯಕ್ತಿಯಾಗಿದ್ದಾರೆ. ನಾವು ಬಿಲ್ ತಂದೇ ತರುತ್ತೇವೆ ಎಂದರು.

    2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಕಾಯ್ದೆಗಳನ್ನು ಹಿಂಪಡೆಯುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದವರು ಕನಸು ಕಾಣುತ್ತಿದ್ದಾರೆ. 2023ರವರೆಗೂ ಕನಸು ಕಾಣಲು ಯಾವುದೇ ಅಭ್ಯಂತರ ಇಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ- ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಯುವಕರು

    ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಮಾತನಾಡಿ, ಸಿಎಂ ಬದಲಾವಣೆ ಆಗುವುದಿಲ್ಲ. ಆದರೆ ಸಂಕ್ರಾಂತಿ ನಂತರ ಕ್ರಾಂತಿಯಾಗಲಿದೆ. ಸಂಘಟನೆ ಅಭಿವೃದ್ಧಿ ವಿಚಾರವಾಗಿ ಕ್ರಾಂತಿಯಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸುವುದು ಸಂತಸದ ವಿಚಾರ: ಸಿದ್ದಗಂಗಾ ಶ್ರೀ

  • ಹಿಂದೂ ದೇವಾಲಯಗಳನ್ನ ಏಕಾಏಕಿ ತೆರವು ಮಾಡುತ್ತಿಲ್ಲ: ಶಾಸಕ ರಾಮದಾಸ್

    ಹಿಂದೂ ದೇವಾಲಯಗಳನ್ನ ಏಕಾಏಕಿ ತೆರವು ಮಾಡುತ್ತಿಲ್ಲ: ಶಾಸಕ ರಾಮದಾಸ್

    ಮೈಸೂರು: ದೇವಸ್ಥಾನ ತೆರವು ವಿಚಾರದಲ್ಲಿ ಆ ಧರ್ಮ ಈ ಧರ್ಮ ಎಂಬುದೇನೂ ಇಲ್ಲ ಎನ್ನುವ ಮೂಲಕ ಶಾಸಕ ರಾಮದಾಸ್ ಅವರು ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ದೇವಸ್ಥಾನ ತೆರವು ವಿಚಾರ ಕ್ರಮ ಸರಿಯಲ್ಲ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ಅವರ ಅಭಿಪ್ರಾಯ ಬೇರೆ, ನನ್ನ ಅಭಿಪ್ರಾಯ ಬೇರೆ. ಹಿಂದೂ ದೇವಾಲಯಗಳನ್ನು ಏಕಾಏಕಿ ತೆರವು ಮಾಡುತ್ತಿಲ್ಲ. ಮೊದಲು ದೇವಸ್ಥಾನಗಳನ್ನು ಉಳಿಸಿಕೊಳ್ಳಲು ಯೋಚನೆ ಮಾಡಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಸೋನಿಯಾ ಗಾಂಧಿ ಅನಿವಾರ್ಯತೆ ಇದೆ, ನಮಗೆ ಇಲ್ಲ: ಪ್ರತಾಪ್ ಸಿಂಹ

    ಮೊದಲ ಹಂತದಲ್ಲಿ ದೇವಸ್ಥಾನವನ್ನು ಉಳಿಸಿಕೊಳ್ಳಲು ಆಗದಿದ್ದರೆ ಎರಡನೇ ಹಂತದಲ್ಲಿ ಸ್ಥಳಾಂತರಕ್ಕೆ ಚಿಂತನೆ ಮಾಡುತ್ತಿದ್ದೇವೆ. ಇದೆರೆಡು ಸಾಧ್ಯವಾಗದಿದ್ದಾಗ ಮಾತ್ರ ತೆರವು ಕಾರ್ಯ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಆ ಧರ್ಮದ್ದು ಈ ಧರ್ಮದ್ದು ಎಂಬುದೇನು ಇಲ್ಲ. ಸುಪ್ರೀಂ ಕೋರ್ಟ್ ಸೂಚನೆಯಂತೆ ಕ್ರಮ ಜರುಗಿಸಲಾಗುತ್ತಿದೆ ಎಂದು ಹೇಳಿದರು.  ಇದನ್ನೂ ಓದಿ: ನಿಮ್ಮ ಧಮ್ಕಿಗೆ ಹೆದರಲ್ಲ – ಪ್ರತಾಪ್ ಸಿಂಹಗೆ ತನ್ವೀರ್ ಸೇಠ್ ತಿರುಗೇಟು

    ನಾವು ಆದಷ್ಟು ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ಉಳಿಸಿಕೊಳ್ಳಲು ಹಾಗೂ ಸ್ಥಳಾಂತರಿಸಲು ಪ್ರಯತ್ನ ನಡೆಸಿದ್ದೇವೆ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರುತ್ತೇವೆ. ಇದರಲ್ಲಿ ಒಂದು ಕ್ಷೇತ್ರ ಒಂದು ಧರ್ಮ ಎಂಬುವ ವಿಚಾರ ಇರುವುದಿಲ್ಲ ಎಂದು ರಾಮದಾಸ್ ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈ ಅತ್ಯಾಚಾರ ಪ್ರಕರಣ- ಚಿಕಿತ್ಸೆ ಫಲಿಸದೆ ಮೃತಪಟ್ಟ ಸಂತ್ರಸ್ತೆ

    ಪ್ರತಾಪ್ ಸಿಂಹ ಹೇಳಿದ್ದೇನು..?

    ಕೇವಲ ಹಿಂದೂ ಧರ್ಮದ ದೇವಸ್ಥಾನಗಳನ್ನು ಮಾತ್ರ ಟಾರ್ಗೆಟ್ ಮಾಡಿದರೆ ಸುಮ್ಮನಿರಲ್ಲ. ರಸ್ತೆ ಆಗಲೀಕರಣಕ್ಕೆ ತೊಂದರೆಯಾಗಿರುವ ಇರ್ವಿನ್ ರಸ್ತೆಯ ಮಸೀದಿಯನ್ನು ತೆರವುಗೊಳಿಸಿಲ್ಲ. ದೇವರಾಜ ರಸ್ತೆಯಲ್ಲಿರುವ ದರ್ಗಾವನ್ನು ಯಾಕೆ ತೆರವು ಮಾಡಿಲ್ಲ ಎಂದು ಮೈಸೂರು ಜಿಲ್ಲಾಡಳಿತದ ವಿರುದ್ಧ ಸಂಸದ ಪ್ರತಾಪ್ ಸಿಂಹ ಕೆಡಿಪಿ ಮೀಟಿಂಗ್‍ನಲ್ಲಿ ಕಿಡಿಕಾರಿದ್ದರು.

     

  • ಮಿತ್ರಮಂಡಳಿಯಲ್ಲಿ ಬಿರುಕು: ಎಸ್‍ಟಿಎಸ್ ವಿರುದ್ಧ ಹೆಚ್. ವಿಶ್ವನಾಥ್ ಬಹಿರಂಗ ಅಸಮಾಧಾನ

    ಮಿತ್ರಮಂಡಳಿಯಲ್ಲಿ ಬಿರುಕು: ಎಸ್‍ಟಿಎಸ್ ವಿರುದ್ಧ ಹೆಚ್. ವಿಶ್ವನಾಥ್ ಬಹಿರಂಗ ಅಸಮಾಧಾನ

    ಮೈಸೂರು: ರಾಜ್ಯ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಮುಂಬೈ ಟೀಂನಲ್ಲಿ ದೊಡ್ಡ ಬಿರುಕು ಮೂಡಿದೆ. ಇಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಕಾರ್ಯವೈಖರಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವ ಮೂಲಕ ಮಿತ್ರ ಮಂಡಳಿಯಲ್ಲಿ ಬಿರುಕನ್ನು ಬಹಿರಂಗಪಡಿಸಿದರು.

    ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಬೆಂಗಳೂರಿನಿಂದ ಮೈಸೂರಿಗೆ ಕಾರಿನಲ್ಲಿ ಬರುವಾಗ ನಮಗೆ ಫೋನ್ ಮಾಡಿ ಸಭೆಗೆ ಆಹ್ವಾನಿಸುತ್ತಾರೆ. ಎರಡು ಮೂರು ಗಂಟೆ ಮುಂಚಿತವಾಗಿ ಸಭೆಗೆ ಬರುವಂತೆ ಫೋನ್‍ನಲ್ಲಿ ಆಹ್ವಾನ ಕೊಡುತ್ತಾರೆ. ನಾವೇನು ನಿರುದ್ಯೋಗಿಗಳಾ? ನೀವು ಕರೆದ ಕೂಡಲೇ ಓಡಿ ಬರೋಕೆ. ಒಂದು ದಿನ ಮುಂಚಿತವಾಗಿ ಜನಪ್ರತಿನಿಧಿಗಳಿಗೆ ಸಭೆಗೆ ಆಹ್ವಾನ ನೀಡಬೇಕು. ನಮ್ಮನ್ನು ಟೇಕ್ ಇಟ್ ಫ್ಹಾರ್ ಗ್ರ್ಯಾಟೆಂಡ್ ಅಂದು ಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

    ಮೈಸೂರಿಗೆ ಒಂದು ಸಚಿವ ಸ್ಥಾನ ಕೊಡಿ ಅಂತಾ ಸಿಎಂ ಬಳಿ ಕೇಳಿದ್ದೇನೆ. ಮೈಸೂರು ವಿಭಾಗಕ್ಕೆ ಸಚಿವರೇ ಇಲ್ಲ. ರಾಜಕೀಯವಾಗಿ ಶಕ್ತಿ ಇರುವ ವಿಭಾಗವಿದು. ಮೈಸೂರಿನ ರಾಮದಾಸ್ ರನ್ನು ಮಂತ್ರಿ ಮಾಡಿ. ಅವರನ್ನು ಯಾಕೆ ಮಂತ್ರಿ ಮಾಡಬಾರದು? ನಾಲ್ಕು ಸ್ಥಾನ ಖಾಲಿ ಇದೆ. ರಾಮದಾಸ್ ಹಿರಿಯರು ಇದ್ದಾರೆ. ಅವರಿಗೆ ಒಂದು ಸ್ಥಾನ ಕೊಡಿ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕಾಲಜ್ಞಾನಿಯಲ್ಲ, ಅವರ ಬಾಯಲ್ಲಿ ಉಲ್ಟಾ ಮಚ್ಚೆ ಇದೆ: ಸಿ.ಟಿ.ರವಿ ವ್ಯಂಗ್ಯ