Tag: ರಾಮಜನ್ಮ ಭೂಮಿ

  • ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್

    ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್

    ಲಕ್ನೋ/ಅಯೋಧ್ಯೆ: ರಾಮಜನ್ಮಭೂಮಿ (Ram Janmabhoomi) -ಬಾಬ್ರಿ ಮಸೀದಿ (Babri Masjid) ವಿವಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ (Supreme Court) ತೀರ್ಪಿನ ಅನುಸಾರ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಯೋಜನೆಗೆ ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರ (ADA) ಅಂತಿಮ ಅನುಮೋದನೆ ನೀಡಿದೆ.

    ಸುಪ್ರೀಂ ತೀರ್ಪಿನ ಅನುಸಾರ ಮಸೀದಿ ನಿರ್ಮಾಣ ಮಾಡಲು ಉತ್ತರ ಪ್ರದೇಶ ಸರ್ಕಾರವು (UP Government) 5 ಎಕರೆ ಭೂಮಿ ಮಂಜೂರು ಮಾಡಿದೆ. `ಮಸೀದಿ ನಿರ್ಮಾಣ ಯೋಜನೆಗೆ ಅನುಮೋದನೆ ನೀಡಲಾಗಿದೆ. ಒಂದೆರಡು ದಿನಗಳಲ್ಲಿ ಅನುಮೋದನೆ ಪಡೆದ ನಕ್ಷೆಯನ್ನು ಐಐಸಿಎಫ್ ಪ್ರತಿನಿಧಿಗಳಿಗೆ ನೀಡಲಾಗುವುದು’ ಎಂದು ಎಡಿಎನ ಹೆಚ್ಚುವರಿ ಆಯುಕ್ತ ಗೌರವ್ ದಯಾಳ್ ತಿಳಿಸಿದ್ದಾರೆ. ಇದನ್ನೂ ಓದಿ: 

    Babri Masjid

    ಮಸೀದಿಯ ಜೊತೆಗೆ ಆಸ್ಪತ್ರೆ, ಸಂಶೋಧನಾ ಸಂಸ್ಥೆ, ಸಮುದಾಯ ಅಡುಗೆಮನೆ, ಗ್ರಂಥಾಲಯ ನಿರ್ಮಾಣ ಮಾಡಲು ಇಂಡೋ-ಇಸ್ಲಾಮಿಕ್ ಸಾಂಸ್ಕೃತಿಕ ಫೌಂಡೇಷನ್ (IICF) ನಿರ್ಧರಿಸಿದೆ. ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು (ಎಡಿಎ) ಅನುಮೋದನೆ ನೀಡುವುದು ವಿಳಂಬ ಮಾಡಿದ್ದರಿಂದಾಗಿ ನಿರ್ಮಾಣ ಚಟುವಟಿಕೆ ಇದುವರೆಗೂ ಆರಂಭವಾಗಿರಲಿಲ್ಲ.

    ಐಐಸಿಎಫ್ ಕಾರ್ಯದರ್ಶಿ ಅತ್ತಾರ್ ಹುಸೇನ್ ಅವರು, ಮಂಜೂರಾತಿಯ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಮಸೀದಿ ನಿರ್ಮಾಣ ಯೋಜನೆಗೆ ಅಂತಿಮರೂಪ ನೀಡಲು ಟ್ರಸ್ಟ್ ಸಭೆ ನಡೆಸಲಿದೆ ಎಂದು ತಿಳಿಸಿದ್ದಾರೆ.

    Babri Masjid

    ಮಸೀದಿ ನಿರ್ಮಿಸಲು ಜನವರಿ 26, 2021ರಂದು ಶಂಕುಸ್ಥಾಪನೆ ಮಾಡಲಾಗಿತ್ತು. ಭಾರತದ ಸಂವಿಧಾನವು ಜಾರಿಗೆ ಬಂದ ದಿನವಾದ ಕಾರಣ ಆ ದಿನದಂದೇ ಶಂಕುಸ್ಥಾಪನೆ ನೆರವೇರಿಸಲಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಾಬ್ರಿ ಮಸೀದಿ ವಿವಾದ: ಅಡ್ವಾಣಿ ಸೇರಿ ಹಲವು ನಾಯಕರನ್ನು ಖುಲಾಸೆಗೊಳಿಸಿದ್ದ ಅರ್ಜಿ ಆ.1ಕ್ಕೆ ವಿಚಾರಣೆ

    ಸುಪ್ರೀಂ ಕೋರ್ಟ್ ತೀರ್ಪು ಏನು?
    ಸುಪ್ರೀಂ ಕೋರ್ಟ್ ತನ್ನ ಅಯೋಧ್ಯೆ ತೀರ್ಪಿನಲ್ಲಿ 2019ರ ನವೆಂಬರ್ 2019 ರಂದು ರಾಮಜನ್ಮಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಆಕ್ಟ್ 1993 ಅಥವಾ ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಅಯೋಧ್ಯೆಯ ಯಾವುದೇ ಸೂಕ್ತ ಪ್ರಮುಖ ಸ್ಥಳದಲ್ಲಿ 5 ಎಕರೆ ಭೂಮಿಯನ್ನು ಮಂಜೂರು ಮಾಡಲು ಆದೇಶಿಸಲಾಗಿತ್ತು. ಅದರಂತೆ ಇದೀಗ ಧನ್ನಿಪುರದಲ್ಲಿ ಸರ್ಕಾರ ನೀಡಿದ 5 ಎಕರೆ ಕೃಷಿ ಭೂಮಿಯನ್ನು ಭೂ ಬಳಕೆ ಮಾಡುವ ಕುರಿತು ಪ್ರಾಧಿಕಾರ ಅನುಮೋದನೆ ನೀಡಿದೆ ಎನ್ನಲಾಗಿದೆ.

  • ರಾಮಮಂದಿರ ಭಾರತದ ರಾಷ್ಟ್ರೀಯ ದೇವಾಲಯವಾಗಲಿದೆ: ಯೋಗಿ ಆದಿತ್ಯನಾಥ್

    ರಾಮಮಂದಿರ ಭಾರತದ ರಾಷ್ಟ್ರೀಯ ದೇವಾಲಯವಾಗಲಿದೆ: ಯೋಗಿ ಆದಿತ್ಯನಾಥ್

    ಲಕ್ನೋ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಅಭಿಜಿತ್ ಮುಹೂರ್ತ, ಮೃಗಶಿರ ನಕ್ಷತ್ರ, ಆನಂದ ಯೋಗದಲ್ಲಿ ಗರ್ಭಗುಡಿಗೆ ಶಿಲಾನ್ಯಾಸ ನೆರವೇರಿಸಿದರು.

    ಶಿಲಾನ್ಯಾಸದ ಬಳಿಕ ಮಾತನಾಡಿದ ಯುಪಿ ಸಿಎಂ, ರಾಮಮಂದಿರ ಭಾರತದ ರಾಷ್ಟ್ರೀಯ ದೇವಾಲಯವಾಗಲಿದೆ. ಜನರು ಈ ದಿನಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದರು. ಈ ರಾಮಮಂದಿರ ಭಾರತದ ಏಕತೆಯ ಸಂಕೇತವಾಗಲಿದೆ ಎಂದು ತಿಳಿಸಿದರು.

    ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ 2 ವರ್ಷಗಳ ಹಿಂದೆ ಪ್ರಾರಂಭಿಸಿದರು. ನಿರ್ಮಾಣಕಾರ್ಯ ಯಶಸ್ವಿಯಾಗಿ ಮುಂದುವರಿಯುತ್ತಿದ್ದು, ಇಂದು ಗರ್ಭಗುಡಿಯಲ್ಲಿ ಶಿಲಾರಾಧನೆ ನಡೆಸುತ್ತಿರುವುದು ನಮ್ಮ ಅದೃಷ್ಟ ಎಂದು ಯೋಗಿ ನುಡಿದರು. ಇದನ್ನೂ ಓದಿ: ರಾಮಮಂದಿರ ಸುತ್ತಮುತ್ತಲಿನ ಮದ್ಯ ಮಾರಾಟಗಾರರ ಪರವಾನಗಿ ರದ್ದು: ಯುಪಿ ಸರ್ಕಾರ

    ಗರ್ಭಗುಡಿ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ರಾಮಮಾರ್ಚ, ದುರ್ಗಾ ಸಪ್ತಶತಿ, ರುದ್ರಾಭಿಷೇಕ, ರಾಮರಕ್ಷಾ ಸ್ತೋತ್ರ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸ, ಸುಂದರಕಾಂಡ ಪಾರಾಯಣ ನಡೆಯಿತು. ಇದನ್ನೂ ಓದಿ: ಎಡಪಂಥೀಯ ಸಾಹಿತಿಗಳ ಬ್ಲ್ಯಾಕ್‍ಮೇಲ್‍ಗೆ ತಿರುಗೇಟು- ಬಿಜೆಪಿಯಿಂದ #AcceptToolkitResignation ಅಭಿಯಾನ

    ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್ ಅವರು ಗರ್ಭಗುಡಿಗಾಗಿ ಕೆತ್ತಿದ ಮೊದಲ ಶಿಲೆಯನ್ನು ಇಟ್ಟು, ನಿರ್ಮಾಣ ಕಾರ್ಯಕ್ಕೆ ಅನುವು ಮಾಡಿಕೊಟ್ಟರು. ರಾಮಮಂದಿರದ ಗರ್ಭಗುಡಿ 2023ರ ಡಿಸೆಂಬರ್ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ದೇವಾಲಯದ ಉಸ್ತುವಾರಿ ವಹಿಸಿರುವ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.

  • ಅಯೋಧ್ಯೆ ಕೇಸ್ – ವಿಚಾರಣೆಗೆ ಅ.18ರವರೆಗೆ ಗಡುವು ವಿಧಿಸಿದ ಸುಪ್ರೀಂ

    ಅಯೋಧ್ಯೆ ಕೇಸ್ – ವಿಚಾರಣೆಗೆ ಅ.18ರವರೆಗೆ ಗಡುವು ವಿಧಿಸಿದ ಸುಪ್ರೀಂ

    ನವದೆಹಲಿ: ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂಮಿ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್‍ನ ಪಂಚ ನ್ಯಾಯಾಧೀಶರ ಪೀಠವು ಅಕ್ಟೋಬರ್ 18ರಂದು ಕೊನೆಯ ವಿಚಾರಣೆ ಹಾಕಿಕೊಂಡಿದೆ.

    ಇಂದು ನಡೆದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಈ ಕುರಿತು ಪ್ರಸ್ತಾಪಿಸಿದ್ದು, ಅಕ್ಟೋಬರ್ 18ರೊಳಗೆ ಇದನ್ನು ಮುಕ್ತಾಯಗೊಳಿಸಲು ಜಂಟಿ ಪ್ರಯತ್ನ ಮಾಡೋಣ ಎಂದು ತಿಳಿಸಿದ್ದಾರೆ.

    ಮಂಗಳವಾರ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಎರಡು ಕಡೆಯವರ ವಾದಗಳನ್ನು ಪೂರ್ಣಗೊಳಿಸಲು ತಾತ್ಕಾಲಿಕ ವೇಳಾಪಟ್ಟಿಯನ್ನು ಹಂಚಿಕೊಳ್ಳುವಂತೆ ನಿನ್ನೆಯೇ ಪೀಠ ತಿಳಿಸಿತ್ತು. ವಾದಗಳನ್ನು ಪೂರ್ಣಗೊಳಿಸಲು ತಾತ್ಕಾಲಿಕ ವೇಳಾಪಟ್ಟಿಯೊಂದಿಗೆ ಎಲ್ಲ ವಕೀಲರು ಒಟ್ಟಿಗೆ ಕುಳಿತುಕೊಳ್ಳುವಂತೆ ತಿಳಿಸಿದ್ದರಿಂದ ಇಂದು ಎಲ್ಲ ವಕೀಲರು ಸಿದ್ಧತೆ ಮಾಡಿಕೊಂಡು ಬಂದಿದ್ದರು. ಅಲ್ಲದೆ, ಈ ಗಡುವಿನಿಂದ ನ್ಯಾಯಾಧೀಶರು ತೀರ್ಪು ಬರೆಯಲು ಎಷ್ಟು ಸಮಯ ಬೇಕಾಗಬಹುದು ಎಂಬುದರ ಲೆಕ್ಕಾಚಾರ ಹಾಕಬಹುದು ಎಂದು ಪೀಠ ತಿಳಿಸಿತ್ತು.

    ನ್ಯಾಯಮೂರ್ತಿ ಗೊಗೊಯ್ ಅವರು ನವೆಂಬರ್ 17ರಂದು ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತಿ ಆಗಲಿದ್ದಾರೆ. ಹೀಗಾಗಿ ಗೊಗೋಯ್ ಅವರು ಅ.18ರ ಗಡುವು ಹಾಕಿಕೊಂಡಿದ್ದಾರೆ.

    ಬುಧವಾರ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಪುನರಾರಂಭಿಸುತ್ತಿದ್ದಂತೆ ಎರಡೂ ಕಡೆಯ ವಕೀಲರು ಈ ವೇಳಾಪಟ್ಟಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ನ್ಯಾಯಪೀಠವು ಎರಡೂ ಕಡೆಯ ವಕೀಲರು ತಿಳಿಸಿದ ಸಮಯವನ್ನು ಗಮನಿಸಿದ ನಂತರ, ಅಕ್ಟೋಬರ್ 18ರಂದು ವಿಚಾರಣೆಗೆ ಕಡೆಯ ದಿನಾಂಕವನ್ನು ನಿಗದಿಪಡಿಸಿತು.

    ಅಗತ್ಯವಿದ್ದರೆ, ನಾವು ಇನ್ನೂ ಒಂದು ಗಂಟೆ ಹೆಚ್ಚು ಸಮಯ ಕೂರಲು ಸಿದ್ಧ, ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಇದೇ ವೇಳೆ ತಿಳಿಸಿದರು.

    ಸುಪ್ರೀಂ ಕೋರ್ಟ್ ನೇಮಿಸಿದ್ದ ಮಧ್ಯಸ್ಥಿಕೆ ಸಮಿತಿಯು ಸೌಹಾರ್ದಯುತ ನಿರ್ಣಯಕ್ಕೆ ಬರಲು ಎರಡೂ ಪಕ್ಷಗಳ ಒಡುವೆ ಒಮ್ಮತ ಮೂಡಿಸುವಲ್ಲಿ ವಿಫಲವಾಗಿದೆ. ಹೀಗಾಗಿ ದಶಕಗಳಿಂದ ಬಾಕಿ ಉಳಿದಿರುವ ರಾಮಜನ್ಮ ಭೂಮಿ ಹಾಗೂ ಬಾಬರಿ ಮಸೀದಿ ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸಲು ಪಂಚ ನ್ಯಾಯಾಧೀಶರ ಪೀಠ ಆಗಸ್ಟ್‍ನಿಂದ ಪ್ರತಿನಿತ್ಯ ವಿಚಾರಣೆ ನಡೆಸಲು ಪ್ರಾರಂಭಿಸಿದೆ.

  • ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ದೀಪಾವಳಿ ಆಚರಣೆ- ವಿಶೇಷ ಸಂಭ್ರಮ ಯಾಕೆ..?

    ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ದೀಪಾವಳಿ ಆಚರಣೆ- ವಿಶೇಷ ಸಂಭ್ರಮ ಯಾಕೆ..?

    ಲಕ್ನೋ: ದೇಶಾದ್ಯಂತ ಮನೆ ಮನೆಗಳಲ್ಲೂ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಅದ್ರಲ್ಲೂ ಶ್ರೀರಾಮಜನ್ಮಭೂಮಿ ಅಯೋಧ್ಯೆಯಲ್ಲಿ ದೀಪಾವಳಿ ಸ್ವಲ್ಪ ಸ್ಪೆಷಲ್ ಹಬ್ಬವಾಗಿದೆ. ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ದೀಪಾವಳಿ ಹಬ್ಬ ಆಚರಿಸಲಾಯ್ತು.

    ಇದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ದೀಪಾವಳಿ ದೀಪೋತ್ಸವದ ಸಂಭ್ರಮ ಮನೆಮಾಡಿತ್ತು. ವೇದಿಕೆ ಮೇಲೆ ರಂಗುರಂಗಿನ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಹಾಗೆಯೇ ಕತ್ತಲಾದ ಮೇಲೆ ಎಲ್ಲೆಲ್ಲೂ ದೀಪಗಳ ಚಿತ್ತಾರ ಆಕರ್ಷಣೀಯವಾಗಿತ್ತು.

    ವಿಶೇಷ ಸಂಭ್ರಮ ಯಾಕೆ..?: ದೀಪಾವಳಿ ಅಯೋಧ್ಯೆ ಜನರಿಗೆ ವಿಶೇಷವಾದ ಹಬ್ಬವಾಗಿದೆ. ಯಾಕಂದ್ರೆ 14 ವರ್ಷಗಳ ವನವಾಸ ಮುಗಿಸಿ ಶ್ರೀರಾಮು ಅಯೋಧ್ಯೆಗೆ ವಾಪಸ್ ಆಗಿದ್ದ ದಿನವಾಗಿದೆ. ಅಯೋಧ್ಯೆಯ ರಾಮಮಂದಿರ ವಿವಾದದ ಬಿಸಿಯ ನಡುವೆಯೇ ಬುಧವಾರ ದೀಪಾವಳಿ ಹಬ್ಬವನ್ನು ವೈಭವೋಪಿತವಾಗಿ ಆಚರಿಸಲಾಯ್ತು. ಇದೇ ವೇಳೆ ಫೈಜಾಬಾದ್ ನಗರಕ್ಕೆ ಶ್ರೀ ಅಯೋಧ್ಯೆ ಅಂತ ಮರುನಾಮಕರಣ ಮಾಡಲಾಯ್ತು. ಇತ್ತೀಚೆಗಷ್ಟೇ ಅಲಹಬಾದ್ ಹೆಸರನ್ನು ಪ್ರಯೋಗ್‍ರಾಜ್ ಅಂತ ಹೆಸರು ಬದಲಿಸಲಾಗಿತ್ತು ಅಂತ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

    ಈ ಬಾರಿಯ ದೀಪೋತ್ಸವದಲ್ಲಿ ಕೊರಿಯಾ ಅಧ್ಯಕ್ಷೆ ಕಿಮ್ ಜುಂಗ್ ಸೂಕ್, ಕೊರಿಯಾದ ಪ್ರಥಮ ಪ್ರಜೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಅದೃಷ್ಟ ಅಂದ್ರು. ಅಲ್ಲದೇ ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್‍ಗೆ ಕೃತಜ್ಞತೆ ಸಲ್ಲಿಸಿದ್ರು.

    ದೀಪೋತ್ಸವದಲ್ಲಿ ಕಿಮ್ ಜುಂಗ್ ಸೂಕ್ ಭಾಗಿಯಾಗಲು ಕಾರಣವಿದೆ. ಅಯೋಧ್ಯೆಗೂ, ಕೊರಿಯಾಗೂ ಪ್ರಾಚೀನ ಕಾಲದಿಂದಲೂ ಸಂಬಂಧ ಇದೆ. ಕ್ರಿ.ಶ 48 ರ ಸುಮಾರಿಗೆ ಅಯೋಧ್ಯೆ ರಾಜಮನೆತನದ ಸುರೋ ಎಂಬವರನ್ನು ಕೊರಿಯಾದ ರಾಜ ಮದ್ವೆಯಾಗಿದ್ದರಂತೆ. ರಾಮಜನ್ಮಭೂಮಿಯಿಂದ ಬಂದವರು ಅಂತ ಅಲ್ಲಿನ ಜನ ತಾಯಿಯಂತೆ ನೋಡಿಕೊಂಡ್ರಂತೆ. ಅಂದಿನಿಂದ ಇಂದಿನವರೆಗೂ ಅಯೋಧ್ಯೆ ಜೊತೆ ಬಾಂಧವ್ಯ ಇಟ್ಟುಕೊಂಡಿದ್ದಾರೆ ಅನ್ನೋ ಪ್ರತೀತಿ ಇದೆ. ಒಟ್ಟಿನಲ್ಲಿ ರಾಮಜನ್ಮಭೂಮಿ ವಿವಾದ ದೇಶದ ಗಮನ ಸೆಳೆಯುತ್ತಿರುವ ಹೊತ್ತಲ್ಲೇ ಅಯೋಧ್ಯೆಯ ಅದ್ಧೂರಿ ದೀಪಾವಳಿ ವಿಶೇಷವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv