Tag: ರಾಮಚಂದ್ರ ರಾವ್‌

  • ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಡಿಆರ್‌ಐ ಅಧಿಕಾರಿಗಳಿಂದ ರಾಮಚಂದ್ರ ರಾವ್ ವಿಚಾರಣೆ

    ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಡಿಆರ್‌ಐ ಅಧಿಕಾರಿಗಳಿಂದ ರಾಮಚಂದ್ರ ರಾವ್ ವಿಚಾರಣೆ

    – ಮತ್ತೆ ನೋಟಿಸ್ ನೀಡಲು ತಯಾರಿ

    ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ (Ranya Rao Gold Smuggling Case) ಮತ್ತೆ ಸದ್ದು ಮಾಡುತ್ತಿದೆ. ಈಗಾಗಲೇ ಕಾಫಿಪೋಸಾ ಕಾಯ್ದೆಯಡಿ ಜೈಲು ಸೇರಿರೋ ರನ್ಯಾರಾವ್ ವಿರುದ್ಧ ಡಿಆರ್‌ಐ ತನ್ನ ತನಿಖೆಯನ್ನು ಮುಂದುವರೆಸಿದೆ. ಇದು ಕೇವಲ ರನ್ಯಾರಾವ್‌ಗೆ ಮಾತ್ರ ಅಲ್ಲ ಅವರ ತಂದೆ ರಾಮಚಂದ್ರರಾವ್‌ಗೂ ಬಿಸಿ ತಟ್ಟಿದೆ.

    ರಾಮಚಂದ್ರರಾವ್ ಅವರಿಗೆ ನೋಟಿಸ್ ಮಾಡಿದ್ದ ಡಿಆರ್‌ಐ (DRI) ಅಧಿಕಾರಿಗಳು ಒಂದೆರಡು ದಿನದ ಹಿಂದೆ ಅವರ ವಿಚಾರಣೆ ನಡೆಸಿದೆ. ಮ್ಯಾರಥಾನ್ ವಿಚಾರಣೆ ಮಾಡಿದ ಡಿಆರ್‌ಐ ಅಧಿಕಾರಿಗಳು ರನ್ಯಾರಾವ್‌ಗೆ ಮತ್ತು ರಾಮಚಂದ್ರರಾವ್‌ಗೆ ಇರೋ ಸಂಬಂಧ, ಚಿನ್ನ ಸಾಗಾಟ ಮಾಡೋ ಸಂದರ್ಭದಲ್ಲಿ ಸಹಾಯ ಮಾಡಲಾಗಿತ್ತಾ? ಪ್ರೋಟೋ ಕಾಲ್ ದುರ್ಬಳಕೆ ಮಾಡಿಕೊಂಡಿದ್ದರ ಬಗ್ಗೆ, ಜೊತೆಗೆ ಎರಡೇ ತಿಂಗಳಲ್ಲಿ 20ಕ್ಕೂ ಹೆಚ್ಚು ಬಾರಿ ದುಬೈಗೆ ಹೋಗಿ ಬಂದ ವಿಚಾರವನ್ನು ಸವಿರವಾಗಿ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ – ಮಹೇಶ್ ಶೆಟ್ಟಿ ತಿಮರೋಡಿ ಅರೆಸ್ಟ್‌

    ಆದರೆ ಮೂಲಗಳ ಮಾಹಿತಿ ಪ್ರಕಾರ, ಇವೆಲ್ಲಾ ಆರೋಪವನ್ನು ರಾಮಚಂದ್ರರಾವ್ ತಳ್ಳಿ ಹಾಕಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಡಿಆರ್‌ಐ ಮತ್ತೆ ನೋಟಿಸ್ ನೀಡಲು ತಯಾರಿ ನಡೆಸಿದೆ. ಇದನ್ನೂ ಓದಿ: ಟೈರ್ ಬ್ಲಾಸ್ಟ್ ಆಗಿ ಕಾಂಪೌಂಡ್ ಗೋಡೆಗೆ ಖಾಸಗಿ ಬಸ್ ಡಿಕ್ಕಿ – 10 ಮಂದಿಗೆ ಗಂಭೀರ ಗಾಯ

  • ನಟಿ ರನ್ಯಾ ಕೇಸ್: ಸತತ 3 ಗಂಟೆ ವಿಚಾರಣೆ ಎದುರಿಸಿದ ರಾಮಚಂದ್ರ ರಾವ್

    ನಟಿ ರನ್ಯಾ ಕೇಸ್: ಸತತ 3 ಗಂಟೆ ವಿಚಾರಣೆ ಎದುರಿಸಿದ ರಾಮಚಂದ್ರ ರಾವ್

    ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ಅವರು ವಿಚಾರಣೆ ಎದುರಿಸಿದ್ದಾರೆ.

    ಪ್ರೋಟೋಕಾಲ್ ದುರ್ಬಳಕೆ ಕುರಿತು ತನಿಖೆ ಕೈಗೊಂಡಿರುವ ಗೌರವ್ ಗುಪ್ತ ತಂಡವು ರಾಮಚಂದ್ರ ರಾವ್ ಅವರನ್ನು ಇಂದು ಶಕ್ತಿ ಭವನದಲ್ಲಿ ವಿಚಾರಣೆಗೊಳಪಡಿಸಿತು. ವಿಚಾರಣೆ ವೇಳೆ ಐಪಿಎಸ್ ಅಧಿಕಾರಿಯ ಹೇಳಿಕೆಗಳನ್ನು ತನಿಖಾ ತಂಡ ದಾಖಲಿಸಿಕೊಂಡಿದೆ.

    ಈಗಾಗಲೇ 10 ಕ್ಕೂ ಹೆಚ್ಚು ಜನರ ವಿಚಾರಣೆಯನ್ನು ತಂಡ ನಡೆಸಿದೆ. ಇಂದು ರಾಮಚಂದ್ರ ರಾವ್ ಹೇಳಿಕೆ ದಾಖಲಿಸಿಕೊಂಡಿದೆ. ರನ್ಯಾರಾವ್‌ಗೆ ಪ್ರೋಟೋಕಾಲ್ ನೀಡಿದ್ದರ ಬಗ್ಗೆ ಹೇಳಿಕೆ ದಾಖಲು ಮಾಡಿದೆ.

    ಸಂಜೆ ಆರು ಗಂಟೆಗೆ ವಿಚಾರಣೆಗೆ ರಾಮಚಂದ್ರ ರಾವ್ ಅವರು ವಿಚಾರಣೆಗೆ ಹಾಜರಾಗಿದ್ದರು. ಸತತ ಮೂರು ಗಂಟೆ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು.

    ಐಎಎಸ್ ಅಧಿಕಾರಿ ಗೌರವ್ ಗುಪ್ತ, ಡಿಐಜಿ ವಂಶಿ ಕೃಷ್ಣ ನೇತೃತ್ವದಲ್ಲಿ ತನಿಖೆ ನಡೆಸಲಾಗಿದೆ. ಪ್ರಕರಣ ಸಂಬಂಧ ಬುಧವಾರ ತನಿಖಾ ವರದಿಯನ್ನು ಸಲ್ಲಿಸಬೇಕಿದೆ.

  • ಡಿಜಿಪಿ ರಾಮಚಂದ್ರ ರಾವ್‌ಗೆ ಮತ್ತೊಂದು ಸಂಕಷ್ಟ – 2014 ರ ಇಲವಾಲ ಪೊಲೀಸ್ ದರೋಡೆ ಕೇಸ್ ಮತ್ತೆ ಮುನ್ನೆಲೆಗೆ

    ಡಿಜಿಪಿ ರಾಮಚಂದ್ರ ರಾವ್‌ಗೆ ಮತ್ತೊಂದು ಸಂಕಷ್ಟ – 2014 ರ ಇಲವಾಲ ಪೊಲೀಸ್ ದರೋಡೆ ಕೇಸ್ ಮತ್ತೆ ಮುನ್ನೆಲೆಗೆ

    – ಮಲಮಗಳು ರನ್ಯಾ ರಾವ್ ಕೇಸಲ್ಲಿ ಸಂಕಷ್ಟದಲ್ಲಿರೋ ಪೊಲೀಸ್ ಅಧಿಕಾರಿ
    – ಏನಿದು 11 ವರ್ಷಗಳ ಹಿಂದಿನ ಕೇಸ್?

    ಮೈಸೂರು: ನಟಿ ರನ್ಯಾ ರಾವ್ (Ranya Rao) ಪ್ರಕರಣದ ಜೊತೆಗೆ ಈಗ ಡಿಜಿಪಿ ಕೆ.ರಾಮಚಂದ್ರ ರಾವ್ (Ramachandra Rro) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಮಚಂದ್ರ ರಾವ್ ಅವರ ಹೆಸರು ತಳಕು ಹಾಕಿಕೊಂಡಿರುವ 2014ರ ಇಲವಾಲ ಪೊಲೀಸ್ ದರೋಡೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.

    ಚಿನ್ನ ಕಳ್ಳಸಾಗಣೆಯಲ್ಲಿ ಬಂಧನಕ್ಕೊಳಗಾಗಿರುವ ಮಲಮಗಳು ನಟಿ ರನ್ಯಾ ರಾವ್‌ರಿಂದ ರಾಮಚಂದ್ರ ರಾವ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಹಳೇ ಪ್ರಕರಣವೊಂದರಲ್ಲಿ ಅಧಿಕಾರಿಗೆ ಮತ್ತೊಂದು ತಲೆನೋವು ಎದುರಾಗಿದೆ. ಪ್ರಕರಣ ನಡೆದು 11 ವರ್ಷಗಳಾಗಿದ್ದು, ಮತ್ತೆ ಕೇಸ್ ಬಗ್ಗೆ ಚರ್ಚೆಗೆ ಬಂದಿದೆ. ಪ್ರಕರಣಕ್ಕೆ ಮರುಜೀವ ಕೊಡಬೇಕೆಂದು ದೂರುದಾರ ಸ್ನೇಹಮಯಿ ಕೃಷ್ಣ ಸಿಬಿಐಗೆ 9 ಪುಟಗಳ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಕೇಂದ್ರ ಸಚಿವರು ಭಾಗಿ – ಶರಣಪ್ರಕಾಶ್ ಪಾಟೀಲ್ ಬಾಂಬ್

    ಏನಿದು ಪ್ರಕರಣ?
    2.27 ಕೋಟಿ ಹಣ ಹಾಗೂ ಎರಡು ಕೆಜಿ ಚಿನ್ನ ದರೋಡೆ ಮಾಡಿದ್ದ ಬಗ್ಗೆ ಪೊಲೀಸರ ವಿರುದ್ಧವೇ ದೂರು ದಾಖಲಾಗಿತ್ತು. ಈ ಬಗ್ಗೆ ಸಿಐಡಿ ತನಿಖೆ ಕೂಡ ನಡೆದಿತ್ತು. ಐಜಿಪಿ ರಾಮಚಂದ್ರ ರಾವ್ ಗನ್‌ಮ್ಯಾನ್ ಹಾಗೂ ಸೌತ್ ಪೊಲೀಸ್ ಠಾಣೆ ಸಿಬ್ಬಂದಿ ಸೇರಿ ಡಿವೈಎಸ್‌ಪಿ ಸ್ಕ್ವಾಡ್ ಮೇಲೆ ದರೋಡೆ ಆರೋಪ ಬಂದಿತ್ತು. ಪ್ರಕರಣದಲ್ಲಿ ವಿಚಾರಣೆ ನಡೆದು ಎಲ್ಲರೂ ಆರೋಪ ಮುಕ್ತರಾಗಿದ್ರು. ಆದರೆ, ಈವರೆಗೂ ಗೋಲ್ಡ್ ಸ್ಮಗ್ಲಿಂಗ್ ಹಾಗೂ ಹವಾಲ ಹಣದ ಮೂಲದ ಬಗ್ಗೆ ಸಿಐಡಿ ಪೊಲೀಸರು ಯಾವುದೇ ತನಿಖೆ ಮಾಡಿರಲಿಲ್ಲ. ಸದ್ಯ ಮತ್ತೆ ಪ್ರಕರಣಕ್ಕೆ ಮರುಜೀವ ಕೊಡಬೇಕೆಂದು ದೂರುದಾರ ಸ್ನೇಹಮಯಿಕೃಷ್ಣ ಕೃಷ್ಣ, ಸಿಬಿಐಗೆ ಪತ್ರ ಬರೆದಿದ್ದಾರೆ.

    ಅಂದು ಚಿನ್ನ ಕಳ್ಳಸಾಗಣೆ ಮಾಡಿದ ವ್ಯಕ್ತಿಗಳ ವಿರುದ್ಧ ಹಾಗೂ ಪ್ರಕರಣ ಮುಚ್ಚಿ ಹಾಕಿದ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ದೂರಿದ್ದಾರೆ. ಅಂದಿನ ಸಿಐಡಿ ಡಿಜಿಪಿ ಕಿಶೋರ್ ಚಂದ್ರ, ಅಂದಿನ ಸಿಐಡಿ ಐಜಿಪಿ ಪ್ರಣವೌ ಮೊಹಂತಿ, ಎಸ್‌ಪಿ ಕೃಷ್ಣ ಭಟ್, ಡಿವೈಎಸ್‌ಪಿ ರಾಘವೇಂದ್ರ ಹೆಗ್ಡೆ, ಅಂದಿನ ಮೈಸೂರು ಎಸ್‌ಪಿ ಅಭಿನವ ಖರೆ, ಡಿವೈಎಸ್‌ಪಿ ವಿಕ್‌ಂ ಆಮ್ಟೆ ಹಾಗೂ ಇಲವಾಲ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಗಣೇಶ್ ಸೇರಿ ಹಲವರ ವಿರುದ್ಧ ಸಿಬಿಐಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ನನ್ನ ಕಪಾಳಕ್ಕೆ 10-15 ಬಾರಿ ಹೊಡೆದಿದ್ದಾರೆ – ನಾನು ಅಮಾಯಕಿ ಎಂದ ರನ್ಯಾ

    ದೂರಿನ ಜೊತೆಗೆ ವೀಡಿಯೋ ಸಾಕ್ಷಿಗಳು ಹಾಗೂ ಇತರ ದಾಖಲೆಗಳನ್ನು ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದಾರೆ. ನಟಿ ರನ್ಯಾ ರಾವ್ ಪ್ರಕರಣದ ಜೊತೆಗೆ ಇದನ್ನು ಸೇರಿಸಿಕೊಂಡು ತನಿಖೆ ಮಾಡಬೇಕು. ಸಾಧ್ಯವಾಗದಿದ್ದರೆ ಪ್ರತ್ಯೇಕ ಪ್ರಕರಣವಾಗಿ ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ. 2014 ರಿಂದಲೇ ಈ ರೀತಿ ಚಿನ್ನ ಕಳ್ಳಸಾಗಣೆ ನಡೆದುಕೊಂಡು ಬರುತ್ತಿದೆ. ಪೊಲೀಸರು ಸರಿಯಾಗಿ ತನಿಖೆ ಮಾಡಿ, ಆರೋಪಿಗಳನ್ನು ಪತ್ತೆ ಹಚ್ಚಿದ್ದರೆ ಇಂತಹ ಪ್ರಕರಣ ಮರುಕಳಿಸುವುದನ್ನು ತಡೆಯಬಹುದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.