Tag: ರಾಫೆಲ್

  • ಇಂಫಾಲ ವಿಮಾನ ನಿಲ್ದಾಣದ ಮೇಲೆ ಕಾಣಿಸಿಕೊಂಡ ಡ್ರೋನ್ – ಹುಡುಕಾಟಕ್ಕೆ ತೆರಳಿದ 2 ರಾಫೆಲ್ ಜೆಟ್

    ಇಂಫಾಲ ವಿಮಾನ ನಿಲ್ದಾಣದ ಮೇಲೆ ಕಾಣಿಸಿಕೊಂಡ ಡ್ರೋನ್ – ಹುಡುಕಾಟಕ್ಕೆ ತೆರಳಿದ 2 ರಾಫೆಲ್ ಜೆಟ್

    ಇಂಫಾಲ: ಭಾನುವಾರ ಇಂಫಾಲದ ವಿಮಾನ ನಿಲ್ದಾಣದ (Imphal Airport) ಮೇಲೆ ಡ್ರೋನ್ (Drone) ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಹಲವು ವಿಮಾನಗಳ ಹಾರಾಟ ವಿಳಂಬ ಮಾಡಿದ್ದು, ಮಾಹಿತಿ ಪಡೆದ ಭಾರತೀಯ ವಾಯುಪಡೆ (IAF) 2 ರಾಫೆಲ್ ವಿಮಾನವನ್ನು (Rafale Jet) ಅಪರಿಚಿತ ವಸ್ತುವನ್ನು ಹುಡುಕಲು ಕಳುಹಿಸಿದೆ.

    ಮಣಿಪುರದ ಇಂಫಾಲ ವಿಮಾನ ನಿಲ್ದಾಣದ ಬಳಿ ಡ್ರೋನ್ ಇರುವಿಕೆ ಬಗ್ಗೆ ಮಾಹಿತಿ ಪಡೆದ ಬಳಿಕ ಐಎಎಫ್ ಹಶಿಮಾರಾದಿಂದ ಒಂದು ರಾಫೆಲ್ ಅನ್ನು ಹುಡುಕಾಟಕ್ಕೆ ಕಳುಹಿಸಿತು. ಆದರೆ ಅದು ಯಾವುದೇ ಅಪರಿಚಿತ ವಸ್ತುವನ್ನು ಪತ್ತೆಹಚ್ಚಿಲ್ಲ ಎಂದು ಮೂಲಗಳು ತಿಳಿಸಿವೆ.

    ಮೊದಲ ವಿಮಾನ ಏನನ್ನೂ ಪತ್ತೆ ಹಚ್ಚದೇ ವಾಪಸ್ ತನ್ನ ನೆಲೆಗೆ ಮರಳಿದ ಬಳಿಕ ಮತ್ತೊಂದು ಬಾರಿ ಪರಿಶೀಲಿಸಲು ರಾಫೆಲ್ ಅನ್ನು ಕಳುಹಿಸಲಾಯಿತು. 2ನೇ ಬಾರಿಯೂ ಆಕಾಶದಲ್ಲಿ ಹಾರುತ್ತಿದ್ದ ಅಪರಿಚಿತ ವಸ್ತುವನ್ನು ಪತ್ತೆ ಮಾಡದೇ ಹಿಂತಿರುಗಿದೆ. ಇದನ್ನೂ ಓದಿ: ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಅಧಿಕಾರಿ, ಕಚೇರಿಗೆ ಜೀವ ಬೆದರಿಕೆ- ಭದ್ರತೆ ಹೆಚ್ಚಿಸಿದ ಪೊಲೀಸರು

    ಮಣಿಪುರದ (Manipur) ಇಂಫಾಲದಲ್ಲಿರುವ ಬಿರ್ ಟಿಕೇಂದ್ರಜಿತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಡ್ರೋನ್ ಕಂಡುಬಂದ ಬಳಿಕ ಹಲವು ಗಂಟೆಗಳ ಕಾಲ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಯುಎಫ್‌ಒ ಸಂಜೆ 4 ಗಂಟೆಯವರೆಗೆ ವಾಯುನೆಲೆಯ ಪಶ್ಚಿಮಕ್ಕೆ ಚಲಿಸುತ್ತಿದ್ದು, ಅದು ಬರಿ ಕಣ್ಣುಗಳಿಗೂ ಕಾಣಿಸುತ್ತಿತ್ತು ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕೋಲ್ಕತ್ತಾದಿಂದ ಆಗಮಿಸುತ್ತಿದ್ದ ಇಂಡಿಗೋ ವಿಮಾನ ಸೇರಿದಂತೆ ಹಲವು ವಿಮಾನಗಳ ಮಾರ್ಗ ಬದಲಿಸಲಾಗಿತ್ತು. 25 ನಿಮಿಷಗಳ ನಂತರ ಅದನ್ನು ಗುವಾಹಟಿಗೆ ಕಳುಹಿಸಲಾಯಿತು. ತಡವಾದ ವಿಮಾನಗಳು ಸುಮಾರು 3 ಗಂಟೆಗಳ ಬಳಿಕ ಇಂಫಾಲ ನಿಲ್ದಾಣದಿಂದ ಹೊರಟಿವೆ. ಘಟನೆ ಬಗ್ಗೆ ಶಿಲ್ಲಾಂಗ್‌ನಲ್ಲಿರುವ ಭಾರತೀಯ ವಾಯುಪಡೆಯ ಪೂರ್ವ ಕಮಾಂಡರ್‌ಗೂ ತಿಳಿಸಲಾಗಿದೆ. ಇದನ್ನೂ ಓದಿ: ಹಣಕಾಸು ಕೊರತೆಯ ನೆಪ ಬೇಡ; 6 ಮತ್ತು 7ನೇ ವೇತನ ಆಯೋಗ ಶಿಫಾರಸಿನನ್ವಯ ಶಿಕ್ಷಕರಿಗೆ ವೇತನ ನೀಡಿ: ಹೈಕೋರ್ಟ್‌ ಆದೇಶ

  • ಮಗಳ ಮದ್ವೆ ಸುದ್ದಿ ಬಗ್ಗೆ ರಮ್ಯಾ ತಾಯಿ ಸ್ಪಷ್ಟನೆ

    ಮಗಳ ಮದ್ವೆ ಸುದ್ದಿ ಬಗ್ಗೆ ರಮ್ಯಾ ತಾಯಿ ಸ್ಪಷ್ಟನೆ

    ಬೆಂಗಳೂರು: ಮೋಹಕ ತಾರೆ ರಮ್ಯಾ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ ಎಂದು ಸುದ್ದಿ ಹರಿದಾಡುತ್ತಿತ್ತು. ಇದೆಲ್ಲದರ ಬಗ್ಗೆ ಅವರ ತಾಯಿ ರಂಜಿತಾ ಅವರು ಸ್ಪಷ್ಟನೆ ನೀಡಿದ್ದಾರೆ.

    ರಮ್ಯಾ ತಮ್ಮ ಬಹುಕಾಲದ ಗೆಳೆಯ ರಾಫೆಲ್ ಜೊತೆಗೆ ದುಬೈನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. ಏಳೆಂಟು ವರ್ಷಗಳಿಂದ ರಿಲೇಷನ್‍ಶಿಪ್‍ನಲ್ಲಿರುವ ಪೋರ್ಚುಗಲ್ ದೇಶದ ರಾಫೆಲ್ ಅವರು ರಮ್ಯಾ ಅವರನ್ನು ಮದುವೆಯಾಗುತ್ತಿದ್ದಾರೆ ಎಂದು ತಿಳಿದು ಬಂದಿತ್ತು. ಆದರೆ ಅವರ ತಾಯಿ, ರಮ್ಯಾ ರಾಫೆಲ್ ಜೊತೆ ವಿವಾಹವಾಗುತ್ತಾರೆ ಎಂಬ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

    “ರಮ್ಯಾ ಮದುವೆ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು. ಆಕೆ ವಿವಾಹದ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ರಮ್ಯಾಗೆ ಮದುವೆ ಮಾಡುವಾಗ ಎಲ್ಲರಿಗೂ ತಿಳಿಸಿ ಮದುವೆ ಮಾಡುತ್ತೇವೆ. ಕದ್ದು ಮುಚ್ಚಿ ಮದುವೆ ಮಾಡುವ ಅವಶ್ಯಕತೆ ಇಲ್ಲ. ಈ ರೀತಿ ಇಲ್ಲದ ವದಂತಿಗಳನ್ನು ಹಬ್ಬಿಸಬೇಡಿ” ಎಂದು ರಂಜಿತಾ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

    ನನ್ನ ಮಗಳು ಮತ್ತು ರಾಫೆಲ್ ಇಬ್ಬರು ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ. ಆದರೆ ಇಬ್ಬರ ನಡುವೆ ಸ್ನೇಹ ಇದೆ. ರಾಫೆಲ್ ಕುಟುಂಬದವರು ನಮ್ಮ ಜೊತೆಗೆ ಚೆನ್ನಾಗಿದ್ದಾರೆ. ರಮ್ಯಾ ರಾಜಕೀಯದಲ್ಲಿ ಬ್ಯುಸಿ, ರಾಫೆಲ್ ಬ್ಯುಸಿನೆಸ್ ನೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಇಬ್ಬರು ಪರಸ್ಪರ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲದೇ ನನ್ನ ಮಗಳಿಗೆ ವಿದೇಶಕ್ಕೆ ಹೋಗಲು ಇಷ್ಟವಿಲ್ಲ. ಈ ಕಾರಣದಿಂದ ಇಬ್ಬರು ಬೇರೆಯಾದರು ಎಂದು ಬ್ರೇಕಪ್‍ಗೆ ಕಾರಣವನ್ನು ತಿಳಿಸಿದರು.

    ರಮ್ಯಾಗೆ ತನ್ನನ್ನು ಪ್ರೀತಿಯಿಂದ ನೋಡಿಕೊಳ್ಳುವಂತಹ ಜೊತೆಗೆ ತುಂಬಾ ಕಾಳಜಿ ಮಾಡುವ ಹುಡುಗನ ಜೊತೆ ಜೀವನ ಕಳೆಯಬೇಕೆಂಬ ಕನಸು ಇದೆ. ಹೀಗಾಗಿ ಹುಡುಗ ರಾಜಕೀಯದವರೇ ಆಗಿರಬೇಕು ಅಥವಾ ಸಿನಿಮಾದವರೇ ಆಗಿರಬೇಕು ಎಂಬುದು ಇಲ್ಲ ಎಂದರು.

  • ವೈವಾಹಿಕ ಜೀವನಕ್ಕೆ ಕಾಲಿಡಲು ರಮ್ಯಾ ನಿರ್ಧಾರ!

    ವೈವಾಹಿಕ ಜೀವನಕ್ಕೆ ಕಾಲಿಡಲು ರಮ್ಯಾ ನಿರ್ಧಾರ!

    ಬೆಂಗಳೂರು: ಮೋಹಕ ತಾರೆ ರಮ್ಯಾ ಅವರ ಕುರಿತು ಅಚ್ಚರಿಯ ಸುದ್ದಿಯೊಂದು ಬೆಳಕಿಗೆ ಬಂದಿದ್ದು, ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ಸುಮಾರು 10 ವರ್ಷಗಳ ಕಾಲ ಸ್ಯಾಂಡಲ್‍ವುಡ್‍ನಲ್ಲಿ ಮಿಂಚಿದ್ದ ನಟಿ ರಮ್ಯಾ ಸಂಸದೆಯಾದ ಬಳಿಕ ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆಯಾಗಿ ಗುರುತಿಸಿಕೊಂಡಿದ್ದರು. ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

    ತಮ್ಮ ಬಹುಕಾಲದ ಗೆಳೆಯ ರಾಫೆಲ್ ಜೊತೆಗೆ ರಮ್ಯಾ ದುಬೈನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. ಏಳೆಂಟು ವರ್ಷಗಳಿಂದ ರಿಲೇಷನ್‍ಶಿಪ್‍ನಲ್ಲಿರುವ ಪೋರ್ಚುಗಲ್ ದೇಶದ ರಾಫೆಲ್ ಅವರು ರಮ್ಯಾ ಅವರನ್ನು ಮದುವೆಯಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ವರ್ಷವೇ ಈ ಕುರಿತು ರಮ್ಯಾ ಸುಳಿವು ನೀಡಿದ್ದರು. ಅವರ ತಾಯಿ ರಂಜಿತಾ, ಮುಂದಿನ ವರ್ಷ ರಮ್ಯಾ ಮದುವೆಯಾಗುವುದಾಗಿ ತಿಳಿಸಿದ್ದರು. ಇದೀಗ ಮದುವೆಯ ಸಿದ್ಧತೆಗಳು ನಡೆದಿದ್ದು, ದುಬೈನಲ್ಲಿ ರಾಫೆಲ್ ಅವರನ್ನು ಕೈ ಹಿಡಿಯಲು ರಮ್ಯಾ ತಯಾರಾಗಿದ್ದಾರೆ.

    ಪುನೀತ್ ರಾಜ್‍ಕುಮಾರ್ ಅವರ ‘ಅಭಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರಮ್ಯಾ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುವ ಮೂಲಕ ಸ್ಯಾಂಡಲ್‍ವುಟ್‍ನಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಸಾಲುಸಾಲು ಹಿಟ್ ಚಿತ್ರಗಳನ್ನು ನೀಡುವ ಮೂಲಕ ಕನ್ನಡದ ಎಲ್ಲ ಸೂಪರ್ ಸ್ಟಾರ್ ಗಳ ಜೊತೆಯೂ ತೆರೆ ಹಂಚಿಕೊಂಡಿದ್ದಾರೆ. ಆದರೆ, 2016ರಲ್ಲಿ ತೆರೆಕಂಡ ‘ನಾಗರಹಾವು’ ಸಿನಿಮಾ ನಂತರ ರಮ್ಯಾ ಯಾವ ಚಿತ್ರದಲ್ಲೂ ನಟಿಸಿಲ್ಲ.

    2013ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ಸಂಸದೆಯೂ ಆಗಿದ್ದರು. ಆಯ್ಕೆಯಾದ ನಂತರ ರಮ್ಯಾ ಅವರ ಕೆಲಸಕ್ಕಿಂತ ಹೆಚ್ಚಾಗಿ ಅವರ ಸುತ್ತ ವಿವಾದಗಳೇ ಸುತ್ತಿಕೊಂಡವು. ಹೀಗಾಗಿ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋಲನುಭವಿಸಿ ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣಗಳ ಉಸ್ತುವಾರಿ ವಹಿಸಿಕೊಂಡಿದ್ದರು. ಆಗಲೂ ಸಹ ಪ್ರಾರಂಭದಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿದ್ದ ರಮ್ಯಾ ಬರು ಬರುತ್ತ ತೆಮರೆಗೆ ಸರಿದರು. ಇತ್ತೀಚೆಗೆ ರಾಜಕೀಯದಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳದ ರಮ್ಯಾ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿತ್ತು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಾಕುತ್ತಿದ್ದ ಪೋಸ್ಟ್ ಗಳಿಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿತ್ತು. ಅಲ್ಲದೆ, ಹೆಚ್ಚು ಜನ ಟ್ರೋಲ್ ಮಾಡುತ್ತಿದ್ದರು. ಹೀಗಾಗಿ ಇತ್ತೀಚೆಗೆ ರಮ್ಯಾ ಅವರು ಸಾಮಾಜಿಕ ಜಾಲತಾಣದ ಖಾತೆಯನ್ನು ಡಿಸೆಬಲ್ ಮಾಡಿದ್ದರು.