Tag: ರಾಧಿಕಾಪಂಡಿತ್

  • ಮಗಳ ಕ್ಯೂಟ್ ಫೋಟೋ ಶೇರ್ ಮಾಡ್ಕೊಂಡ ಸಿಂಡ್ರೆಲ್ಲಾ

    ಮಗಳ ಕ್ಯೂಟ್ ಫೋಟೋ ಶೇರ್ ಮಾಡ್ಕೊಂಡ ಸಿಂಡ್ರೆಲ್ಲಾ

    – ಐರಾ ಫೋಟೋಗೆ ಅಭಿಮಾನಿಗಳು ಫಿದಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ತಮ್ಮ ಮಗಳ ಕ್ಯೂಟ್ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

    ರಾಧಿಕಾ ಪಂಡಿತ್, ಯಶ್ ಅವರು ಮುದ್ದಿನ ಸಂಸಾರಕ್ಕೆ ಐರಾ, ಯಥರ್ವ್ ಮುದ್ದಾದ ಮುಕ್ಕಳಿದ್ದಾರೆ. ಈ ಕ್ಯೂಟ್ ಕಪ್ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ಮುದ್ದಿನ ಮಕ್ಕಳ ಫೊಟೋ ವೀಡಿಯೋವನ್ನು ಶೇರ್ ಮಾಡುತ್ತಿರುತ್ತಾರೆ. ಹಾಗೇ ಇಂದು ತಮ್ಮ ಮುದ್ದಿನ ಮಗಳು ಐರಾ ಬುಟ್ಟಿಯಲ್ಲಿ ಕುಳಿತು ಕ್ಯೂಟ್ ಆಗಿ ಫೋಸ್ ಕೊಟ್ಟಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋವನ್ನು ನೋಡಿದ ನೆಟ್ಟಿಗರು ಐರಾ ಕೊಟ್ಟ್ ಪೋಸ್‍ಗೆ ಫಿದಾ ಆಗಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

    ಇನ್‍ಸ್ಟಾಗ್ರಾಮ್‍ನಲ್ಲಿ ಸಖತ್ ಆ್ಯಕ್ಟಿವ್ ಆಘಿರುವ ರಾಧಿಕಾ ಪಂಡಿತ್ ತಮ್ಮ ದುದ್ದಾದ ಸಂಸಾರದ ಕುರಿತಾಗಿ ಅಭಿಮಾನಿಗಳಿಗೆ ಕೆಲವು ಅಪ್‍ಡೇಟ್ಸ್ ನೀಡುತ್ತಿರುತ್ತಾರೆ. ಮಕ್ಕಳ ಆರೈಕೆಯಲ್ಲಿ ಬ್ಯಸಿಯಾಗಿರುವ ರಾಧಿಕಾ ಮಕ್ಕಳ ಜೊತೆಗೆ ಕಳೆಯುತ್ತಿರುವ ಸುಂದರಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕವಾಗಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಐರಾ, ಯಥರ್ವ್ ಕೂಡ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಮೆಚ್ಚುಗೆ ಪಡೆಯುತ್ತಿರುವ ಸ್ಟಾರ್ ಕಿಡ್‍ಗಳ ಪಟ್ಟಿಯಲ್ಲಿದ್ದಾರೆ. ಇದನ್ನೂ ಓದಿ:  ಬೆನ್ನ ಮೇಲಿನ ಟ್ಯಾಟೂ ರಿವೀಲ್ ಮಾಡಿ ಪತಿಗೆ ಸಂಜನಾ ಧನ್ಯವಾದ

    ರಾಕಿಂಗ್ ಸ್ಟಾರ್ ಯಶ್ ದಂಪತಿ ಇತ್ತೀಚೆಗೆ ಹೊಸ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ನೂತನ ಮನೆಯ ಗೃಹಪ್ರವೇಶವನ್ನು ಅತ್ಯಂತ ಸಿಂಪಲ್ ಆಗಿ ಮಾಡುವ ಮೂಲಕವಾಗಿ ಹೊಸ ಮನೆಗೆ ಹೋಗಿದ್ದಾರೆ.