Tag: ರಾತ್ರಿ

  • ಬೆಂಗ್ಳೂರಲ್ಲಿ ಬೆಳಗ್ಗೆವರೆಗೂ ಬಂದ ಮಳೆ – ರಾತ್ರಿ ಅಬ್ಬರಿಸಿದ ಮಳೆಗೆ ಜನರು ಹೈರಾಣು

    ಬೆಂಗ್ಳೂರಲ್ಲಿ ಬೆಳಗ್ಗೆವರೆಗೂ ಬಂದ ಮಳೆ – ರಾತ್ರಿ ಅಬ್ಬರಿಸಿದ ಮಳೆಗೆ ಜನರು ಹೈರಾಣು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶನಿವಾರ ಸಂಜೆ ಆಗುತ್ತಿದ್ದಂತೆ ಸಣ್ಣಗೆ ಶುರುವಾಗಿದ್ದ ಮಳೆ, ರಾತ್ರಿ ಆಗುತ್ತಿದ್ದಂತೆ ಅಬ್ಬರಿಸಿತು. ಏಕಾಏಕಿ ಶುರುವಾದ ಮಳೆಗೆ ವಾಹನ ಸವಾರರು ತತ್ತರಿಸಿದ್ರು.. ಕ್ಷಣಮಾತ್ರದಲ್ಲಿ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ನಿಂತು ಸಂಚಾರಕ್ಕೆ ಅಡ್ಡಿಯುಂಟು ಮಾಡಿತ್ತು.

    ಮೆಜೆಸ್ಟಿಕ್, ಕಾರ್ಪೊರೇಷನ್, ಮಾರ್ಕೆಟ್, ವಿಧಾನಸೌಧ, ಜಯನಗರ 2ನೇ ಹಂತ, ಕುಮಾರಸ್ವಾಮಿ ಲೇಔಟ್, ಶೇಷಾದ್ರಿಪುರಂ, ಮಲ್ಲೇಶ್ವರಂ, ಯಶವಂತಪುರ, ರಾಜಾಜಿನಗರ, ಮಹಾಲಕ್ಷ್ಮಿಲೇಔಟ್, ಇಸ್ಕಾನ್ ಟೆಂಪಲ್ ರಸ್ತೆ ಸೇರಿದಂತೆ ಹಲವೆಡೆ ಭಾರೀ ಮಳೆ ಸುರಿಯಿತು. ರಸ್ತೆಗಳಲ್ಲಿ ನೀರು ನಿಂತು ಸವಾರರು ಪರದಾಡಿದ್ರು.

    ಆನಂದ್ ರಾವ್ ರಸ್ತೆಯಲ್ಲಿ ಒಂದೂವರೆ ಅಡಿಯಷ್ಟು ನೀರು ನಿಂತು ಸವಾರರು ಪರದಾಡಿದ್ರು. ಇನ್ನು ಮಳೆಯಿಂದಾಗಿ ಮಹಾಲಕ್ಷ್ಮಿ ಲೇಔಟ್‍ನ ರಾಜೇಂದ್ರ ಟೆಕ್ಸ್‍ಟೈಲ್ಸ್ ಸ್ಲಂ ಮನೆಗಳಿಗೆ ಮಳೆ ನೀರು ನುಗ್ಗಿದೆ. ರಾತ್ರಿ ಸುರಿದ ಮಳೆಗೆ ಇಸ್ಕಾನ್ ಟೆಂಪಲ್ ಬಳಿ ರಸ್ತೆಗಳೆಲ್ಲ ಸಂಪೂರ್ಣ ಜಲಾವೃತವಾಗಿತ್ತು. ಇದನ್ನೂ ಓದಿ: ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ – ಬೆಳಗ್ಗೆಯ ಆದೇಶ ಸಂಜೆಗೆ ವಾಪಸ್ ಪಡೆದ ಸರ್ಕಾರ

    ಜಯನಗರ 5 ನೇ ಹಂತ ರಸ್ತೆ ಸಂಪೂರ್ಣ ಜಲಾವೃತವಾಗಿ ಸಂಸದ ತೇಜಸ್ವಿ ಸೂರ್ಯ ಕಚೇರಿ ಸುತ್ತಲೂ ನೀರು ನಿಂತಿತ್ತು. ಯಶವಂತಪುರ ಸರ್ಕಲ್‍ನಲ್ಲಿರುವ ವೈ.ಮುನಿಸ್ವಾಮಪ್ಪ ಕಲ್ಯಾಣ ಮಂಟಪದ ಎದುರೇ ಬೃಹತ್ ಮರವೊಂದು ಧರಾಶಾಯಿ ಆಗಿತ್ತು. ಮಳೆ ಹಿನ್ನೆಲೆ ವಾಹನಗಳ ಸಂಖ್ಯೆ ಕಡಿಮೆ ಇದ್ದ ಹಿನ್ನೆಲೆ ಭಾರೀ ಅನಾಹುತವೊಂದು ತಪ್ಪಿದೆ. ಒಟ್ಟಿನಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ಬೆಂಗಳೂರಿನ ಜನರು ಹೈರಾಣಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಂದನ್ ಶೆಟ್ಟಿ ಮನೇಲಿ ಇರದೇ ಹೋದರೆ ನಿವೇದಿತಾ ಗೌಡಗೆ ಭಯಂಕರ ಭಯವಂತೆ

    ಚಂದನ್ ಶೆಟ್ಟಿ ಮನೇಲಿ ಇರದೇ ಹೋದರೆ ನಿವೇದಿತಾ ಗೌಡಗೆ ಭಯಂಕರ ಭಯವಂತೆ

    ನಿನ್ನೆಯಷ್ಟೇ ಮಿಸೆಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ನಟಿ ನಿವೇದಿತಾ ಗೌಡ, ತಮ್ಮ ಖಾಸಗಿ ಬದುಕಿನ ಬಗ್ಗೆ ಹತ್ತು ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಮನೆಯಲ್ಲಿ ಒಂಟಿಯಾಗಿ ಇರುವುದು ತುಂಬಾ ಕಷ್ಟ ಎಂದು ಹೇಳಿದ್ದಾರೆ. ರಾತ್ರಿ ಹೊತ್ತು ಪತಿ ಚಂದನ್ ಶೆಟ್ಟಿ ಮನೆಯಲ್ಲಿ ಇರದೇ ಇದ್ದರೆ, ಇಡೀ ರಾತ್ರಿ ನಿದ್ದೆಯೇ ಬರುವುದಿಲ್ಲ ಎನ್ನುವ ಸಂಗತಿಯನ್ನೂ ಅವರು ಹೇಳಿದ್ದಾರೆ.

    ರಾತ್ರಿ ಹೊತ್ತು ಒಬ್ಬಳೆ ಮನೆಯಲ್ಲಿ ಇದ್ದರೆ ತುಂಬಾ ಭಯವಾಗುತ್ತದೆ. ಹಾಗಾಗಿ ಇಡೀ ಮನೆ ಬೆಳಕಿನಿಂದ ತುಂಬಿರುತ್ತದೆ. ಅಷ್ಟೂ ಲೈಟ್ಸ್ ಆನ್ ಮಾಡಿಕೊಂಡೇ ಮನೆತುಂಬಾ ಓಡಾಡಿಕೊಂಡಿರುತ್ತೇನೆ. ನನ್ನಿಷ್ಟದ ವೆಬ್ ಸೀರಿಸ್ ನೋಡುತ್ತೇನೆ. ಒಂದೊಂದು ವೆಬ್ ಸೀರಿಸ್ ಅನ್ನು ಹತ್ತಿಪ್ಪತ್ತು ಬಾರಿ ನೋಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಸಲುವಾಗಿಯೇ ಆದಷ್ಟು ಒಂಟಿಯಾಗಿ ಇರದಂತೆ ಪತಿ ಎಚ್ಚರಿಕೆ ವಹಿಸುತ್ತಾರೆ ಎಂದೂ ಗಂಡನ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಇದನ್ನೂ ಓದಿ:ರಣ್‌ವೀರ್ ಸಂಪೂರ್ಣ ಬೆತ್ತಲೆ:ಕಣ್ಣುಮುಚ್ಚಿಕೊಂಡ ದೀಪಿಕಾ

    ಮಿಸೆಸ್ ಇಂಡಿಯಾ ತಯಾರಿ ಬಗ್ಗೆಯೂ ಅವರು ಅನಿಸಿಕೆಗಳನ್ನು ಹಂಚಿಕೊಂಡಿದ್ದು, ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿ ಆಗಬೇಕು ಎನ್ನುವುದು ಅವರ ಚಿಕ್ಕಂದಿನ ಕನಸಾಗಿತ್ತಂತೆ. ಅದಕ್ಕೆ ಪ್ರೋತ್ಸಾಹ ನೀಡಿದ್ದು ಅವರು ತಾಯಿ ಎನ್ನುವುದನ್ನೂ ಹೇಳಿದ್ದಾರೆ. ಹಲವು ದಿನಗಳಿಂದ ಕಷ್ಟಪಟ್ಟು ಮಿಸೆಸ್‍ ಇಂಡಿಯಾ ಸ್ಪರ್ಧೆಗಾಗಿ ತಯಾರಿ ನಡೆಸಿದ್ದನ್ನೂ ಅವರು ಹಂಚಿಕೊಂಡಿದ್ದಾರೆ. ಕೊನೆಗೂ ಆ ಟೈಟಲ್ ಅನ್ನು ಗೆಲ್ಲುವಲ್ಲಿ ಸಫಲರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಧ್ಯರಾತ್ರಿ ಮಚ್ಚು ಹಿಡಿದು ಬಾಗಿಲು ಬಡಿಯುವ ವ್ಯಕ್ತಿ

    ಮಧ್ಯರಾತ್ರಿ ಮಚ್ಚು ಹಿಡಿದು ಬಾಗಿಲು ಬಡಿಯುವ ವ್ಯಕ್ತಿ

    – ಬೆಚ್ಚಿಬಿದ್ದ ಲಿಂಗಸುಗೂರು ಜನತೆ

    ರಾಯಚೂರು: ಜಿಲ್ಲೆಯ ಲಿಂಗಸುಗೂರು ನಗರದ ವಿವೇಕಾನಂದ ಬಡಾವಣೆಯ ಜನ ಅಪರಿಚಿತ ವ್ಯಕ್ತಿಯ ವಿಲಕ್ಷಣ ವರ್ತನೆಗೆ ಬೆಚ್ಚಿಬಿದ್ದಿದ್ದಾರೆ.

    ಅಪರಿಚಿತ ವ್ಯಕ್ತಿ ಮಧ್ಯರಾತ್ರಿ ಮಚ್ಚು ಹಿಡಿದು ಮನೆಗಳ ಬಾಗಿಲು ಬಡಿಯುತ್ತಿದ್ದಾನೆ. ಈ ವಿಲಕ್ಷಣ ನಡವಳಿಕೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಲಿಂಗಸುಗೂರು ಪಟ್ಟಣದ ಜನ ಬೆಚ್ಚಿಬಿದ್ದಿದ್ದಾರೆ. ಕಳೆದೆರಡು ದಿನಗಳಿಂದ ವಿವಿಧ ಏರಿಯಾಗಳಲ್ಲಿ ರಾತ್ರಿ ಮಚ್ಚು ಹಿಡಿದು ವ್ಯಕ್ತಿ ತಿರುಗಾಟ ನಡೆಸಿದ್ದಾನೆ. ಇದನ್ನೂ ಓದಿ: ಆಪರೇಷನ್‌ ಕಲಬುರಗಿ: ಖರ್ಗೆ, ದೇವೇಗೌಡರು ಚರ್ಚಿಸಿದ್ದಾರೆ ಎಂದ ಡಿ.ಕೆ. ಶಿವಕುಮಾರ್

    ಸಿಸಿ ಟಿವಿ ವೀಡಿಯೋ ನೋಡಿ ಭಯಭೀತರಾದ ಜನ, ರಾತ್ರಿ ನಿದ್ದೆಗೆಡಿಸಿಕೊಂಡಿದ್ದಾರೆ. ಬಡಾವಣೆಯಲ್ಲಿ ಈಗಾಗಲೇ ಒಂದು ಮನೆ ಕಳ್ಳತನವಾಗಿದೆ. ಮನೆ ಬಾಗಿಲು ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಹೀಗಾಗಿ ಜನರಿಗೆ ಭಯ ಶುರುವಾಗಿದೆ.

    ಮಚ್ಚು ಹಿಡಿದು ರಾತ್ರಿ ಗಸ್ತು ತಿರುಗುವ ವ್ಯಕ್ತಿಯ ವೀಡಿಯೋ ವೈರಲ್ ಆಗಿದೆ. ಹೀಗಾಗಿ ಭಯಭೀತರಾಗಿರುವ ಜನ ಅಪರಿಚಿತ ವ್ಯಕ್ತಿಯ ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

  • ಬಾಗಲಕೋಟೆಯಲ್ಲಿ ಭೂ ಕಂಪನದ ಅನುಭವ – ಜನರಲ್ಲಿ ಆತಂಕ

    ಬಾಗಲಕೋಟೆಯಲ್ಲಿ ಭೂ ಕಂಪನದ ಅನುಭವ – ಜನರಲ್ಲಿ ಆತಂಕ

    ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಕೆಲ ಭಾಗಗಳಲ್ಲಿ ಶನಿವಾರ ತಡರಾತ್ರಿ 11.50ರ ಸುಮಾರಿಗೆ ಭೂ ಕಂಪನದ ಅನುಭವ ಆಗಿದೆ ಎಂದು ಹೇಳಲಾಗುತ್ತಿದೆ.

    earth quack

    ಜಿಲ್ಲೆಯ ಜಮಖಂಡಿ, ಬಾಗಲಕೋಟೆ ವಿದ್ಯಾಗಿರಿಯ 22 ಕ್ರಾಸ್, ಬಾಗಲಕೋಟೆ ತಾಲೂಕಿನ ಶಾರದಾಳ, ಅಂಕಲಗಿ, ಹಿರೇ ಶೆಲ್ಲಿಕೇರಿ ಕ್ರಾಸ್ ನಲ್ಲಿ ಭೂ ಕಂಪನ ಅನುಭವವಾಗಿದೆ. ಭೂಮಿ ಕಂಪನದ ಅನುಭವ ಆಗುದ್ದಂತೆ ಶೆಲ್ಲಿಕೇರಿ ಕ್ರಾಸ್‍ನ ಕೆಲವರು ಮನೆಯಿಂದ ಹೊರ ಬಂದಿದ್ದು, ಈ ವೇಳೆ ದನದ ಕೊಟ್ಟಿಗೆಯಲ್ಲಿದ್ದ ದನಕರುಗಳು ಕೂಡ ಎದ್ದು ನಿಂತಿವೆ. ಇದನ್ನೂ ಓದಿ: ಕೋವಿಡ್‌ಗೂ ಮೊದಲು ಬಂದಿದ್ದ ನಿಫಾ ವೈರಸ್‌ಗೆ ಕೇರಳದಲ್ಲಿ 12ರ ಬಾಲಕ ಬಲಿ

    earth quack

    ಈ ಬಗ್ಗೆ ಶೆಲ್ಲಿಕೇರಿ ಕ್ರಾಸ್‍ನ ಬಾಗಲಕೋಟೆ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಸಲೀಮ್ ಶೇಕ್, ರಾತ್ರಿ 11.43ರ ಸುಮಾರಿಗೆ ನಮಗೆ ಭೂ ಕಂಪನದ ಅನುಭವ ಆಗಿದೆ. 10-12 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದ್ದು, ರೂಲರ್ ಸಂಚರಿಸುವ ವೇಳೆ ಬರುವ ಶಬ್ದದ ಹಾಗೇ ಶಬ್ದ ಕೇಳಿಸಿದೆ. ನಾವೆಲ್ಲ ಮನೆಯ ಸದಸ್ಯರು ಹೊರಗೆ ಬಂದು ನಿಂತಿದ್ದೇವು. ಮಕ್ಕಳು ಮನೆಮಂದಿ ಭಯಗೊಂಡಿದ್ದರು ಎಂದಿದ್ದಾರೆ. ಅಲ್ಲದೇ ಸಲೀಮ್ ಶೇಖ್ ಅವರ ಮನೆ ಗೋಡೆ ಮೇಲೆ ಚಿಕ್ಕದಾಗಿ ಬಿರುಕು ಕಾಣಿಸಿಕೊಂಡಿದೆ. ಇದನ್ನೂ ಓದಿ: ಮೈಸೂರಿನ ದರೋಡೆ, ಶೂಟ್‍ಔಟ್ ಪ್ರಕರಣ- ಖತರ್ನಾಕ್ ಬಾಂಬೆ ಬುಡ್ಡಾ ಅಂದರ್

  • ರಾತ್ರಿ ಬಹಿರ್ದೆಸೆಗೆಂದು ಹೊರ ಹೋಗಿದ್ದ ಹುಡುಗಿಯ ಕತ್ತು ಸೀಳಿ ಹತ್ಯೆ

    ರಾತ್ರಿ ಬಹಿರ್ದೆಸೆಗೆಂದು ಹೊರ ಹೋಗಿದ್ದ ಹುಡುಗಿಯ ಕತ್ತು ಸೀಳಿ ಹತ್ಯೆ

    ಶಿವಮೊಗ್ಗ: ರಾತ್ರಿ ಬಹಿರ್ದೆಸೆಗೆಂದು ಹೊರ ಹೋಗಿದ್ದ ಹುಡುಗಿಯನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಭದ್ರಾವತಿ ತಾಲೂಕಿನ ಕಾಳಿಂಗನಹಳ್ಳಿಯಲ್ಲಿ ನಡೆದಿದೆ.

    ಭದ್ರಾವತಿಯ ಸಂಚಿ ಹೊನ್ನಮ್ಮ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ 17 ವರ್ಷದ ಇಂದಿರಾ ಕೊಲೆಯಾದ ಹುಡುಗಿ. ನಿನ್ನೆ ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ.

    ಇಂದಿರಾ ತನ್ನ ಕಿವಿ ಕೇಳದ, ಮಾತು ಬಾರದ ಇಬ್ಬರು ಚಿಕ್ಕಮ್ಮಂದಿರ ಜೊತೆ ರಾತ್ರಿ ಮಲಗಿದ್ದಾಳೆ. ಮನೆಯ ಹೊರಭಾಗದ ಕೊಠಡಿಯಲ್ಲಿ ಹುಡುಗಿಯ ಸೋದರಮಾವ ಜಗದೀಶ್ ಮಲಗಿದ್ದ ಎನ್ನಲಾಗಿದೆ. ಈ ವೇಳೆ ಬಹಿರ್ದೆಸೆಗೆಂದು ಹೊರಗೆ ಹೋದ ಹುಡುಗಿಯನ್ನು ಯಾರೋ ದುಷ್ಕರ್ಮಿಗಳು ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ಹುಡುಗಿಯ ಕೊಲೆಗೆ ಕಾರಣ ಏನೂ ಎಂಬುದು ತಿಳಿದುಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಭದ್ರಾವತಿಯ ಹೊಸಮನೆ ಠಾಣಾ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

  • ಆಧಾರ್  ಕಾರ್ಡ್ ಗಾಗಿ ಬ್ಯಾಂಕ್ ಮುಂದೆ ಮಲಗಿದ ಜನ

    ಆಧಾರ್ ಕಾರ್ಡ್ ಗಾಗಿ ಬ್ಯಾಂಕ್ ಮುಂದೆ ಮಲಗಿದ ಜನ

    ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಆಧಾರ  ಕಾರ್ಡ್  ಗಾಗಿ ರಾತ್ರಿ ಜನರು ಬ್ಯಾಂಕ್ ಮುಂದೆ ಮಲಗುತ್ತಿದ್ದಾರೆ.

    ಬ್ಯಾಂಕಿನ ಸಿಬ್ಬಂದಿ ರಾತ್ರಿ ಬಂದವರಿಗೆ ಮಾತ್ರ ಟೋಕನ್ ನೀಡುತ್ತಾರೆ. ಆದ ಕಾರಣ ಗಂಗಾವತಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂದೆ ಜನರು ಆಧಾರ್ ಕಾರ್ಡ್ ಮಾಡಿಸಲು ಕ್ಯೂ ನಿಲ್ಲಲು ಬಂದು ಅಲ್ಲೇ ರಾತ್ರಿ ಮಲಗುವ ಪರಿಸ್ಥಿತಿ ಬಂದಿದೆ.

    ವಾರಕ್ಕೆ ಕೇವಲ ನೂರು ಆಧಾರ್ ಕಾರ್ಡ್ ಮಾಡಿಕೊಡುವುದರಿಂದ, ಗಂಗಾವತಿ ತಾಲೂಕಿನ ಹಳ್ಳಿಯ ಜನರು ರಾತ್ರಿ ಬಂದು ಆಧಾರ ಕಾರ್ಡ್ ಗಾಗಿ ಸಾಲಿನಲ್ಲಿ ನಿಲ್ಲುತ್ತಾರೆ. ಈ ವಿಚಾರವಾಗಿ ತಹಶೀಲ್ದಾರ್ ಅವರಿಗೆ ಗಮನಕ್ಕೆ ತಂದರು ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ ಎಂದು ಹಳ್ಳಿಯ ಜನರು ಕಿಡಿಕಾರಿದ್ದಾರೆ.

  • ಒಂದೇ ರಾತ್ರಿಯಲ್ಲಿ ನಾಲ್ಕು ಮನೆಗಳಿಗೆ ಕನ್ನ ಹಾಕಿದ ಕಳ್ಳರು

    ಒಂದೇ ರಾತ್ರಿಯಲ್ಲಿ ನಾಲ್ಕು ಮನೆಗಳಿಗೆ ಕನ್ನ ಹಾಕಿದ ಕಳ್ಳರು

    ಕೋಲಾರ: ಕೋಲಾರ ನಗರದಲ್ಲಿ ಸರಣಿ ಕಳ್ಳತನ ಮುಂದುವರಿದಿದ್ದು, ಒಂದೇ ರಾತ್ರಿಯಲ್ಲಿ ನಾಲ್ಕು ಮನೆಗಳಿಗೆ ಕಳ್ಳರು ಕನ್ನ ಹಾಕಿದ್ದಾರೆ.

    ತಡರಾತ್ರಿ ನಗರದ ಕಾರಂಜಿಕಟ್ಟೆ ಮತ್ತು ಮುನೇಶ್ವರ ನಗರದಲ್ಲಿ ಕಳ್ಳತನ ಮಾಡಿದ್ದು, ಶಿಕ್ಷಕ ಸತೀಶ್, ವಕೀಲ ಶ್ರೀನಿವಾಸ್, ಚಾಲಕ ಹನುಮೇಶ್, ಸೌಮ್ಯ ಬಾರ್ ಮಾಲೀಕ ಗೋವರ್ಧನ್ ಎಂಬವರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ.

    ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ಮಾಡಿರುವ ಚೋರರು. ಮನೆಗಳ ಬಾಗಿಲನ್ನು ಒಡೆದು ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ, ನಗದು ಹಾಗೂ ಟಿವಿಗಳನ್ನು ದೋಚಿಕೊಂಡು ಹೋಗಿದ್ದಾರೆ. ಈ ಸಂಬಂಧ ಕೋಲಾರ ನಗರ ಠಾಣೆ ಪೊಲೀಸರು ಹಾಗೂ ಗಲ್‍ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.