Tag: ರಾಣಿ

  • ಅಶ್ಲೀಲ ವಿಡಿಯೋ ಆರೋಪ: ನಟಿ ರಾಣಿ ಮೇಲೆ ಮಾನನಷ್ಟ ಮೊಕದ್ದಮೆ ಎಂದ ಡಿಂಗ್ರಿ

    ಅಶ್ಲೀಲ ವಿಡಿಯೋ ಆರೋಪ: ನಟಿ ರಾಣಿ ಮೇಲೆ ಮಾನನಷ್ಟ ಮೊಕದ್ದಮೆ ಎಂದ ಡಿಂಗ್ರಿ

    ನ್ನಡ ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಹಾಗೂ ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಮೇಲೆ ನಟಿ ರಾಣಿ ಗುರುತರ ಆರೋಪಗಳನ್ನು ಮಾಡಿದ್ದರು. ಸಂಘದಲ್ಲಿ ಹಣದ ದುರುಪಯೋಗ ಮತ್ತು ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್, ಮಹಿಳೆಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎನ್ನುವುದು ರಾಣಿ ಆರೋಪವಾಗಿತ್ತು. ರಾಣಿ ಅವರ ಆರೋಪಕ್ಕೆ ಅಧ್ಯಕ್ಷ ಡಿಂಗ್ರಿ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ರಾಣಿ ಆರೋಪ ಎಲ್ಲವೂ ನಿರಾಧಾರ ಎಂದು ತಿಳಿಸಿದ್ದಾರೆ.

    ‘ರಾಣಿ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕ್ತಿವಿ. ಪೋಷಕ ಕಲಾವಿದರ ಸಂಘದ ಹಣ ದುರುಪಯೋಗ ಮಾಡಿಲ್ಲ. ಅವರು ಸಂಘದ ಆವರಣದಲ್ಲಿ ವೈಯಕ್ತಿಕ ಕಾರಣಕ್ಕಾಗಿ ಗಲಾಟೆ ಶುರು ಮಾಡಿದ್ರು. ಹಾಗಾಗಿ ಅವರನ್ನು ಸಂಘದಿಂದ ಉಚ್ಚಾಟನೆ ಮಾಡಿದ್ದೇವೆ. ಈಗ ನಾವು ಕಾರ್ಯಕ್ರಮ ಮಾಡ್ತಿದ್ದಿವಿ. ಅದನ್ನು ವಿರೋಧಿಸೋಕೆ ಈ ರೀತಿ ಆರೋಪ ಮಾಡಿದ್ದಾರೆ. ಅಶ್ಲೀಲ ವಿಡಿಯೋ ಕಳಿಸಿರೋದು ಸುಳ್ಳು ಮಾಹಿತಿ. ನಾವೇ ರಾಣಿ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ತೀವಿ’ ಎಂದಿದ್ದಾರೆ ಡಿಂಗ್ರಿ ನಾಗರಾಜ್. ಇದನ್ನೂ ಓದಿ:`ಕಾಂತಾರ’ ಮುಂದೆ ಬೆದರಿದ ಬಾಲಿವುಡ್: ಥಿಯೇಟರ್‌ಗೆ `ಗುಡ್ ಬೈ’ ಹೇಳಿದ ರಶ್ಮಿಕಾ ಚಿತ್ರ

    ಕರ್ನಾಟಕ ಪೋಷಕ ಕಲಾವಿದರ ಸಂಘದ ಭಿನ್ನಾಭಿಪ್ರಾಯ ಇದೀಗ ಬೀದಿಗೆ ಬಂದಿದೆ. ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ನಡೆಗೆ ಸಿನಿಮಾ ಹಾಗೂ ಕಿರುತೆರೆ ನಟಿ ರಾಣಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹಣಕಾಸಿನ ಅವ್ಯವಹಾರದ ಜೊತೆ ಮಹಿಳೆಯರಿಗೆ ಸಂಘದಲ್ಲಿರುವವರು ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದರು ಎಂದು ಗುರುತರ ಆರೋಪ ಮಾಡಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ ರಾಣಿ, ‘ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಮತ್ತು ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಮೇಲೆ ಆರೋಪ ಮಾಡಿದ್ದು, ತಮ್ಮದು ಪೋಷಕ ಕಲಾವಿದರ ಸಂಘದ ಮೇಲೆ ಆರೋಪ ಮಾಡುವುದಿಲ್ಲ’  ಎಂದಿದ್ದಾರೆ. ಮಹಿಳೆಯರನ್ನು ಅಗೌರವದಿಂದ ಇವರು ನಡೆಸಿಕೊಳ್ಳುತ್ತಾರೆ. ಅದರಲ್ಲೂ ಸಂಘದ ಕಾರ್ಯದರ್ಶಿಗಳೇ ಸಂಘದಲ್ಲಿ ಇರುವಂತಹ ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎಂದು ಆರೋಪ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪೋಷಕ ಕಲಾವಿದರ ಸಂಘದ ಕಾರ್ಯದರ್ಶಿ ಅಶ್ಲೀಲ ವಿಡಿಯೋ ಕಳಿಸ್ತಾರೆ : ನಟಿ ರಾಣಿ ಆರೋಪ

    ಪೋಷಕ ಕಲಾವಿದರ ಸಂಘದ ಕಾರ್ಯದರ್ಶಿ ಅಶ್ಲೀಲ ವಿಡಿಯೋ ಕಳಿಸ್ತಾರೆ : ನಟಿ ರಾಣಿ ಆರೋಪ

    ರ್ನಾಟಕ ಪೋಷಕ ಕಲಾವಿದರ ಸಂಘದ ಭಿನ್ನಾಭಿಪ್ರಾಯ ಇದೀಗ ಬೀದಿಗೆ ಬಂದಿದೆ. ಪೋಷಕ ಕಲಾವಿದರ ಸಂಘದ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ನಡೆಗೆ ಸಿನಿಮಾ ಹಾಗೂ ಕಿರುತೆರೆ ನಟಿ ರಾಣಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹಣಕಾಸಿನ ಅವ್ಯವಹಾರದ ಜೊತೆ ಮಹಿಳೆಯರಿಗೆ ಸಂಘದಲ್ಲಿರುವವರು ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದರು ಎಂದು ಗುರುತರ ಆರೋಪ ಮಾಡಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ ರಾಣಿ, ‘ ಸಂಘದ ಅಧ್ಯಕ್ಷ ಡಿಂಗ್ರಿ ನಾಗರಾಜ್ ಮತ್ತು ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಮೇಲೆ ಆರೋಪ ಮಾಡಿದ್ದು, ತಮ್ಮದು ಪೋಷಕ ಕಲಾವಿದರ ಸಂಘದ ಮೇಲೆ ಆರೋಪ ಮಾಡುವುದಿಲ್ಲ’  ಎಂದಿದ್ದಾರೆ. ಮಹಿಳೆಯರನ್ನು ಅಗೌರವದಿಂದ ಇವರು ನಡೆಸಿಕೊಳ್ಳುತ್ತಾರೆ. ಅದರಲ್ಲೂ ಸಂಘದ ಕಾರ್ಯದರ್ಶಿಗಳೇ ಸಂಘದಲ್ಲಿ ಇರುವಂತಹ ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎಂದು ಆರೋಪ ಮಾಡಿದ್ದಾರೆ.

    ‘ನಾನು ಈ ಸಂಘದಲ್ಲಿ 15 ವರ್ಷಗಳಿಂದ ಇದ್ದೇನೆ. ಚುನಾವಣೆಯಲ್ಲಿ ಗೆದ್ದು ಉಪಾಧ್ಯಕ್ಷೆ ಆಗಿದ್ದೇನೆ. ಸಂಘದ ಚಟುವಟಿಕೆಗಳಲ್ಲಿ ಭಾಗಿ ಆಗಲು ಬಿಡುತ್ತಿಲ್ಲ. ಸಂಘದ ಲೆಕ್ಕಾಚಾರ ಕೇಳಿದರೆ, ನಮಗೆ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ಅವರವರೇ ಸೇರಿಕೊಂಡು ಕೆಲಸ ಮಾಡಿಕೊಳ್ಳುತ್ತಾರೆ. ಪ್ರತಿಭಟಿಸಿದರೆ ಕೊಳಕು ಭಾಷೆ ಬಳಸುತ್ತಾರೆ. ಸುಮ್ಮನೆ ಇರದೇ ಇದ್ದರೆ ರಾಜಿನಾಮೆ ಕೊಟ್ಟು ಹೋಗಿ ಎಂದು ಹೆದರಿಸುತ್ತಾರೆ’ ಎನ್ನುತ್ತಾರೆ ರಾಣಿ.

    ಸಂಘದ ಕಾರ್ಯದರ್ಶಿ ಬಗ್ಗೆಯೇ ಹೆಚ್ಚು ಮಾತನಾಡಿರುವ ರಾಣಿ, ‘ಮಹಿಳೆಯರಿಗೆ ಅಗೌರವ ತೋರೋ ರೀತಿಯಲ್ಲಿ ಅವರು ಮಾತಾಡಿದ್ದಾರೆ. ಕೆಲವೊಮ್ಮೆ ಅಶ್ಲೀಲ ವಿಡಿಯೋ ಕಳಿಸ್ತಿದ್ರು. ಆ ವಿಚಾರವಾಗಿ ಗಲಾಟೆಯೂ ಆಗಿದೆ. ಸಭೆಯಲ್ಲಿ ದೊಡ್ಡ ಚರ್ಚೆಯಾಗಿ ಸಮಾಧಾನ ಮಾಡಿದರು. ಹಣಕಾಸಿನ ದುರುಪಯೋಗದ ಬಗ್ಗೆ ಕೇಳೀದಾಗ ಅವಾಚ್ಯ ಶಬ್ದಗಳಿಂದ  ನಿಂದನೆ ಮಾಡಿದರು. ಉಪಾಧ್ಯಕ್ಷೆ ಸ್ಥಾನದಿಂದ ಏಕಾಏಕಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ. ಹೀಗಾಗಿ ನ್ಯಾಯ ಸಿಗಬೇಕು ಅಂತ ಹೋರಾಟ ಮಾಡ್ತಿದ್ದಿನಿ’ ಎಂದಿದ್ದಾರೆ ರಾಣಿ.

    Live Tv
    [brid partner=56869869 player=32851 video=960834 autoplay=true]

  • ಎಲ್ಲೆಂದರಲ್ಲಿ ಭಿಕ್ಷೆ ಬೇಡದೆ ಇತರರಿಗೆ ಮಾದರಿಯಾದ ತೃತೀಯ ಲಿಂಗಿ

    ಎಲ್ಲೆಂದರಲ್ಲಿ ಭಿಕ್ಷೆ ಬೇಡದೆ ಇತರರಿಗೆ ಮಾದರಿಯಾದ ತೃತೀಯ ಲಿಂಗಿ

    ಭುವನೇಶ್ವರ್: ತೃತೀಯ ಲಿಂಗಿ ರಾಣಿ ಕಿಣ್ಣರ್ ದೇಶದ ಮೊದಲ ಉಬರ್ ಕ್ಯಾಬ್ ಡ್ರೈವರ್ ಆಗಿದ್ದು, ಸದ್ಯ ಉಬರ್ ಕಂಪನಿಯ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಣಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಫುಟ್ ಪಾತ್ ನಲ್ಲಿ ಭಿಕ್ಷೆ ಬೇಡುವುದನ್ನು ನಿರಾಕರಿಸಿದ್ದಾರೆ. ಹೀಗಾಗಿ ಸಮಾಜದಲ್ಲಿ ಧೈರ್ಯವಾಗಿ ಮೆಟ್ಟಿ ನಿಂತು ಇತರರಿಗೆ ಮಾದರಿಯಾಗಿದ್ದಾರೆ.

    ರಾಣಿ 2016ರಲ್ಲಿ ಆಟೋ ರಿಕ್ಷಾ ತೆಗೆದುಕೊಂಡು ಆ ಮೂಲಕ ತಮ್ಮ ಜೀವನ ನಡೆಸಿಕೊಳ್ಳಲು ಆರಂಭಿಸಿದ್ದರು. ಆದರೆ ರಾಣಿ ತೃತೀಯ ಲಿಂಗಿ ಎಂಬ ಕಾರಣಕ್ಕೆ ಯಾರೂ ಅವರ ಆಟೋವನ್ನು ಬಳಸಿಕೊಂಡಿರಲಿಲ್ಲ. ಸಮಾಜದಲ್ಲಿ ತನಗೆ ಬೆಂಬಲ ಸಿಗದ ಹಿನ್ನೆಲೆಯಲ್ಲಿ ಬೇಸರಗೊಂಡ ರಾಣಿ, ಪುರಿ ಪವಿತ್ರ ರಥ ಯಾತ್ರೆಯ ಸಂದರ್ಭದಲ್ಲಿ ಅಂಬುಲೆನ್ಸ್ ಡ್ರೈವರ್ ಆಗುವ ಮೂಲಕ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.

    2016ರಲ್ಲಿ ನಾನು ಆಟೋ ಮೂಲಕ ಚಾಲಕ ವೃತ್ತಿಯನ್ನು ಆರಂಭಿಸಿದೆ. ಆದರೆ ಆ ಕೆಲಸ ನನ್ನ ಕೈ ಹಿಡಿಯಲಿಲ್ಲ. ಯಾಕೆಂದರೆ ಜನರು ನನ್ನ ಆಟೋವನ್ನು ಬಳಸಿಕೊಂಡಿಲ್ಲ. ನಂತರ 2017ರಲ್ಲಿ ಪುರಿ ರಥಯಾತ್ರೆಯ ಸಂದರ್ಭದಲ್ಲಿ ಅಂಬ್ಯುಲೆನ್ಸ್ ನಲ್ಲಿ ಕೆಲಸ ಮಾಡಿದೆ ಎಂದು ರಾಣಿ ತಿಳಿಸಿದ್ದಾರೆ.

    ಮಾಜಿ ಕ್ಯಾಬ್ ಚಾಲಕರೊಬ್ಬರು ಉಬರ್ ಕಂಪನಿಗೆ ರಾಣಿಯನ್ನು ಪರಿಚಯ ಮಾಡಿಸಿಕೊಟ್ಟರು. ಅಲ್ಲದೆ ಈ ಮೂಲಕ ತಮ್ಮ ಪಾರ್ಟ್ನರ್  ಆಗಿ ಕೆಲಸ ಮಾಡುವಂತೆ ಪ್ರೋತ್ಸಾಹಿಸಿದರು. ಅಂತೆಯೇ ಕಂಪನಿ ನಡೆಸಿದ ಸಂದರ್ಶನದಲ್ಲಿ ಪಾಸಾದ ರಾಣಿ, ನಂತರ ತಾನೇ ಕಾರೊಂದನ್ನು ಖರೀದಿಸಿದರು.

    ಸದ್ಯ ರಾಣಿ ಅವರು ಇತರ ತೃತೀಯ ಲಿಂಗಿಗಳಿಗೆ ಮಾದರಿಯಾಗಿ ನಿಂತಿದ್ದಾರೆ. ಕೇವಲ ಬೀದಿಯಲ್ಲಿ ಭಿಕ್ಷೆ ಬೇಡದೇ ಧೈರ್ಯವಾಗಿ ಮುನ್ನುಗ್ಗಿ, ಸಮಾಜದಲ್ಲಿ ತಮಗೆ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಂತರೆ ನಾವು ಕೂಡ ಇತರರಂತೆ ಜೀವನ ನಡೆಸಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ.

    ರಾಣಿ ಮೇಡಂ ಅವರನ್ನು ನೋಡಿ, ಆಕೆಯ ಅಭಿಮಾನಿಯಾಗಿದ್ದೇನೆ. ಅಲ್ಲದೆ ನಾನು ಕೂಡ ಓರ್ವ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೇನೆ. ಈ ಮೂಲಕ ನನಗೆ ಅವರು ಸ್ಫೂರ್ತಿಯಾಗಿದ್ದಾರೆ. ಪುರುಷ ಚಾಲಕರಿಗೆ ಹೋಲಿಸಿದರೆ ವಿಶೇಷವಾಗಿ ರಾತ್ರಿ ಹೊತ್ತು ಪ್ರಯಾಣ ಮಾಡುವ ಹುಡುಗಿಯರು ಸುರಕ್ಷತೆಯ ದೃಷ್ಟಿಯಿಂದ ನನ್ನ ಕ್ಯಾಬನ್ನೇ ಆಯ್ಕೆ ಮಾಡುತ್ತಾರೆ ಎಂದು ಒಡಿಶಾದ ಮತ್ತೊಬ್ಬ ತೃತೀಯ ಲಿಂಗಿ ಸ್ನೇಹಶ್ರೀ ಹೇಳಿದ್ದಾರೆ.