Tag: ರಾಣಾ ದಗ್ಗುಭಾಟಿ

  • ರಾಣಾ ದಗ್ಗುಭಾಟಿ ಪತ್ನಿ ಪ್ರೆಗ್ನೆಂಟ್? ಮಿಹಿಕಾ ಬಜಾಜ್ ಪ್ರತಿಕ್ರಿಯೆ

    ರಾಣಾ ದಗ್ಗುಭಾಟಿ ಪತ್ನಿ ಪ್ರೆಗ್ನೆಂಟ್? ಮಿಹಿಕಾ ಬಜಾಜ್ ಪ್ರತಿಕ್ರಿಯೆ

    ಬಾಹುಬಲಿ (Bahubali) ನಟ ರಾಣಾ ದಗ್ಗುಭಾಟಿ (Rana Daggubati) ಪೋಷಕರಾಗುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಸಖತ್ ಸೌಂಡ್ ಮಾಡ್ತಿದೆ. ರಾಣಾ ಪತ್ನಿ ಮಿಹಿಕಾ ಬಜಾಜ್ (Miheeka Bajaj) ಗರ್ಭಿಣಿ (Pregnant) ಎಂಬ ಸುದ್ದಿ ವೈರಲ್ ಆಗ್ತಿದ್ದಂತೆ ಮಿಹಿಕಾ ಸ್ಪಷ್ಟನೆ ನೀಡಿದ್ದಾರೆ.

    ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ರಾಣಾ- ಮಿಹಿಕಾ ಗುರುಹಿರಿಯರ ಸಮ್ಮುಖದಲ್ಲಿ 2020ರಲ್ಲಿ ಮದುವೆಯಾದರು. ಉದ್ಯಮಿ ಮಿಹಿಕಾ ಜೊತೆ ರಾಣಾ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದರು.

    ರಾಣಾ ಪತ್ನಿ ಗರ್ಭಿಣಿ ಎನ್ನುವ ಸುದ್ದಿಗೆ ಮಿಹಿಕಾ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯಕ್ಕೆ ತಾನು ಗರ್ಭಿಣಿಯಲ್ಲ ಎಂದು ರಾಣಾ(Rana) ಪತ್ನಿ ಮಿಹಿಕಾ ಹೇಳಿದ್ದಾರೆ. ಗರ್ಭಿಣಿ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ನಿಜವಾಗಲೂ ಗರ್ಭಿಣಿಯಾಗಿದ್ರೆ ಖಂಡಿತಾ ಎಲ್ಲರಿಗೂ ಹೇಳುತ್ತೇನೆ ಎಂದು ಮಿಹಿಕಾ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಮ್ಯಾರೇಜ್ ಆ್ಯನಿವರ್ಸರಿ ದಿನ ಮೊದಲ ಬಾರಿಗೆ ಮಗನ ಮುಖ ರಿವೀಲ್‌ ಮಾಡಿದ ಸೋನಂ ಕಪೂರ್

    ಸಮಂತಾ (Samantha) ಡಿವೋರ್ಸ್ ಬಳಿಕ ರಾಣಾ- ಮಿಹಿಕಾ ಕೂಡ ಡಿವೋರ್ಸ್‌ ಪಡೆಯುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆಗ ಮಿಹಿಕಾ, ಪತಿ ಜೊತೆಗಿನ ಪೋಸ್ಟ್ ಶೇರ್ ಮಾಡಿ ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ್ದರು. ಇದೀಗ ಪ್ರೆಗ್ನೆಂಟ್ ಸುದ್ದಿಗೂ ಸ್ಪಷ್ಟನೆ ನೀಡಿದ್ದಾರೆ.

  • ಅಭಿಷೇಕ್ ಅಂಬರೀಶ್ ಚಿತ್ರದಲ್ಲಿ ಅಬ್ಬರಿಸಲಿದ್ದಾರಾ ರಾಣಾ ದಗ್ಗುಭಾಟಿ?

    ಅಭಿಷೇಕ್ ಅಂಬರೀಶ್ ಚಿತ್ರದಲ್ಲಿ ಅಬ್ಬರಿಸಲಿದ್ದಾರಾ ರಾಣಾ ದಗ್ಗುಭಾಟಿ?

    ಯೋಗ್ಯ, ಮದಗಜ ಸಿನಿಮಾದ ಪ್ರತಿಭಾನ್ವಿತ ನಿರ್ದೇಶಕ ಎಸ್.ಮಹೇಶ್ ಕುಮಾರ್ (S. Mahesh Kumar) ಇದೀಗ ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್‌ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೀಗ ಹೊಸ ವಿಚಾರವೊಂದು ಗಾಂಧಿನಗರದಲ್ಲಿ ಸದ್ದು ಮಾಡ್ತಿದೆ. ಅಭಿಷೇಕ್ ಮುಂಬರುವ ಸಿನಿಮಾಗೆ ರಾಣಾ ದಗ್ಗುಭಾಟಿ(Rana Daggubati) ಎಂಟ್ರಿ ಕೊಡ್ತಿದ್ದಾರೆ ಎನ್ನಲಾಗುತ್ತಿದೆ.

    ಅಭಿಷೇಕ್ (Abhishek Ambareesh) ಮತ್ತು ಮಹೇಶ್ ಕುಮಾರ್ ಕಾಂಬಿನೇಷನ್ ಹೊಸ ಸಿನಿಮಾಗೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ಇತ್ತೀಚೆಗೆ ಅಭಿಷೇಕ್, ಮಹೇಶ್ ಜೊತೆಗಿನ ರಾಣಾ ದಗ್ಗುಭಾಟಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಅಭಿಷೇಕ್‌ ಮುಂದಿನ ಸಿನಿಮಾಗೆ ರಾಣಾ ಬರುತ್ತಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಸ್ಟಾರ್ ನಟನ ಮಗಳ ಜೊತೆ ಸಮಂತಾ ಮಾಜಿ ಪತಿ ನಾಗಚೈತನ್ಯ

     

    View this post on Instagram

     

    A post shared by S Mahesh Kumar (@mahesh_director)

    `ಕೆಜಿಎಫ್ 2′, ಕಾಂತಾರ ಸಿನಿಮಾದ ನಂತರ ಕನ್ನಡದ ಮಾರುಕಟ್ಟೆ ದೊಡ್ಡದಾಗಿದೆ. ಕನ್ನಡ ಸಿನಿಮಾದಲ್ಲಿ ನಟಿಸಲು ಪರಭಾಷೆಯ ಸ್ಟಾರ್ಸ್ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ರಾಣಾ ಎಂಟ್ರಿ ನೆಟ್ಟಿಗರಿಗೆ ಕುತೂಹಲ ಮೂಡಿಸಿದೆ.

    ಇತ್ತೀಚೆಗೆ ರಾಣಾ ದಗ್ಗುಭಾಟಿ ಅಂಬರೀಶ್ ಮನೆಗೆ ಭೇಟಿ ನೀಡಿದ್ದರು. ಈಗ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ, ಅಭಿಷೇಕ್ ನಟನೆಯ ಐತಿಹಾಸಿಕ ಸಿನಿಮಾಗೆ ರಾಣಾ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾ ಶೂಟಿಂಗ್ ಏಪ್ರಿಲ್‌ನಿಂದ ಶುರುವಾಗಲಿದೆ. ಅಷ್ಟಕ್ಕೂ ಈ ಚಿತ್ರಕ್ಕೆ ರಾಣಾ ಎಂಟ್ರಿಯ ಸುದ್ದಿ ನಿಜಾನಾ, ಅಥವಾ ಇದು ಜಸ್ಟ್ ಭೇಟಿಗಷ್ಟೇ ಸೀಮಿತನಾ ಎಂಬುದನ್ನ ಮುಂದಿನ ದಿನಗಳವೆರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ವಿಮಾನ ನಿಲ್ದಾಣದಲ್ಲಿ ಲಗೇಜ್ ನಾಪತ್ತೆ: ಇಂಡಿಗೋ ವಿರುದ್ಧ ರಾಣಾ ದಗ್ಗುಭಾಟಿ ರಾಂಗ್

    ವಿಮಾನ ನಿಲ್ದಾಣದಲ್ಲಿ ಲಗೇಜ್ ನಾಪತ್ತೆ: ಇಂಡಿಗೋ ವಿರುದ್ಧ ರಾಣಾ ದಗ್ಗುಭಾಟಿ ರಾಂಗ್

    ಟ ರಾಣಾ ದಗ್ಗುಭಾಟಿ (Rana Daggubati) ಟಾಲಿವುಡ್‌ನ (Tollywood) ಪ್ರತಿಭಾನ್ವಿತ ನಟ, ಇದೀಗ ತಮ್ಮ ಲಗೇಜ್ ನಾಪತ್ತೆ ಆಗಿರುವ ವಿಚಾರಕ್ಕೆ ರೊಚ್ಚಿಗೆದ್ದಿದ್ದಾರೆ. ಅವರ ಲಗೇಜ್ ವಿಮಾನ ನಿಲ್ದಾಣದಲ್ಲಿ ನಾಪತ್ತೆಯಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿರುವ ರಾಣಾ ಏರ್‌ಲೈನ್ಸ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಆಗಾಗ ವಿಮಾನದಲ್ಲಿ ಪಯಣ ಮಾಡುವ ರಾಣಾ, ಇದು ಆದ ಕೆಟ್ಟ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಇತ್ತೀಚೆಗೆ ಇಂಡಿಗೋ (Indigo Airlines) ವಿಮಾನದಲ್ಲಿ ಪ್ರಯಾಣ ಮಾಡಿದ ರಾಣಾಗೆ ಕಹಿ ಅನುಭವ ಆಗಿದೆ. ಪ್ರಯಾಣಿಸುವಾಗ ರಾಣಾ ಅವರ ಲಗೇಜ್ ಕಳೆದು ಹೋಗಿದೆ. ಈವರೆಗೂ ಅವರ ಲಗೇಜ್ ಪತ್ತೆ ಆಗಿಲ್ಲ. ಇದೀಗ ಅವರು ನೇರವಾಗಿ ಟ್ವೀಟ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ತನ್ನ ಅನಿಕೆಯನ್ನ ಟ್ವೀಟ್ ಮಾಡುವ ಮೂಲಕ ಇಂಡಿಗೋ ಖಾತೆಗೆ ಟ್ಯಾಗ್ ಮಾಡಿದ್ದಾರೆ. ಇದರಿಂದ ಇಂಡಿಗೋ ಕಂಪನಿಗೆ ಮುಜುಗರ ಆಗಿದೆ. ಈ ಬಗ್ಗೆ ಇಂಡಿಗೋ ಸಂಸ್ಥೆ ಕ್ಷಮೆ ಕೇಳಿದೆ. ಇಂಡಿಗೋ ವಿರುದ್ಧ ಗರಂ ಆಗಿರುವುದು ರಾಣಾ ಮಾತ್ರವಲ್ಲ, ಈ ಹಿಂದೆ ನಟಿ ಪೂಜಾ ಹೆಗ್ಡೆ (Pooja Hegde) ಕೂಡ ಈ ವಿಮಾನಯಾನ ಸಂಸ್ಥೆಯ ಸಿಬ್ಬಂದಿಗಳ ವರ್ತನೆ ವಿರುದ್ಧ ಬೇಸರ ಹೊರಹಾಕಿದ್ದರು. ಇದೀಗ ರಾಣಾ ಕೂಡ ಇಂಡಿಯೋ ವಿರುದ್ಧ ರಾಂಗ್ ಆಗಿದ್ದಾರೆ.

    `ಭಾರತದ ಅತ್ಯಂತ ಕೆಟ್ಟ ಏರ್‌ಲೈನ್ ಅನುಭವ ಇಂಡಿಗೋ. ವಿಮಾನದ ಸಮಯದ ಬಗ್ಗೆಯೂ ಯಾವುದೇ ಸುಳಿವು ಇಲ್ಲ. ಲಗೇಜ್‌ಗಳು ಕಾಣೆಯಾಗಿವೆ’ ಎಂದು ರಾಣಾ ದಗ್ಗುಬಾಟಿ ಸಾಮಾಜಿಕ ಜಾಲತಾಣದಲ್ಲಿ ಅಸಮಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‌ವುಡ್‌ ನಟ ಮನದೀಪ್ ರಾಯ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

    ಇದಾದ ಬಳಿಕ ಇಂಡಿಗೋ ಸಂಸ್ಥೆ ಅನಾನುಕುಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ನಿಮ್ಮ ಲಗೇಜ್ ಅನ್ನು ಆದಷ್ಟು ಬೇಗ ನಿಮಗೆ ತಲುಪಿಸಲು ನಮ್ಮ ತಂಡ ಸಕ್ರಿಯವಾಗಿದೆ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರತಿಕ್ರಿಯೆ ನೀಡಿದರು. ಇಂಡಿಯೋ ಪ್ರತಿಕ್ರಿಯೆ ಬಳಿಕ ರಾಣಾ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿದರು. ಆದರೆ ರಾಣಾ ಟ್ವೀಟ್ ಆಗಲೇ ಸುದ್ದಿ ಆಗಿತ್ತು. ಕೆಲ ನೆಟ್ಟಿಗರು ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ಇಂಡಿಯೋ ತಕ್ಷಣ ಪ್ರತಿಕ್ರಿಯೆ ನೀಡಿದೆ ಜನ ಸಾಮಾನ್ಯರ ಕಥೆ ಏನು ಪ್ರಶ್ನೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್

    ಯೂಟ್ಯೂಬ್‌ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಉಪ್ಪಿ- ಕಿಚ್ಚ ನಟನೆಯ ‘ಕಬ್ಜ’ ಟೀಸರ್

    ಸ್ಯಾಂಡಲ್‌ವುಡ್‌ನ ಸೂಪರ್ ಸ್ಟಾರ್ ಉಪೇಂದ್ರ(Upendra) ಸದ್ಯ ʻಕಬ್ಜʼ (Kabza) ಚಿತ್ರದ ಟೀಸರ್ ಮೂಲಕ ಸದ್ದು ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ  ವಿವ್ಸ್ ಗಿಟ್ಟಿಸಿಕೊಳ್ತಿದೆ. ಉಪ್ಪಿ ನಯಾ ಅವತಾರ ನೋಡಿ, ಫ್ಯಾನ್ಸ್ ಉಘೇ ಉಘೇ ಅಂತಿದ್ದಾರೆ.

    ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ವಿಶೇಷವಾಗಿ ರಿಲೀಸ್ ಆಗಿರುವ ‘ಕಬ್ಜ’ ಟೀಸರ್ ಧೂಳೆಬ್ಬಿಸಿದೆ. 24 ಗಂಟೆಗಳಲ್ಲಿ 1 ಕೋಟಿ 30 ಲಕ್ಷ ವೀವ್ಸ್ ಪಡೆದುಕೊಂಡು ಸದ್ದು ಮಾಡ್ತಿದೆ. ಟೀಸರ್‌ನ ಬಹುತೇಕ ಫ್ರೇಮ್‌ಗಳಲ್ಲಿ `ಕೆಜಿಎಫ್’ (Kgf) ಸಿನಿಮಾ ಛಾಯೆ ಕಾಣಿಸುತ್ತಿದ್ದರೂ ಕೂಡ ಸಿನಿರಸಿಕರು ಪದೇ ಪದೇ ಟೀಸರ್ ನೋಡಿ ಖುಷಿ ಪಡ್ತಿದ್ದಾರೆ. ಇದನ್ನೂ ಓದಿಸೋನು ಶ್ರೀನಿವಾಸ್ ಗೌಡ ಸಂಬಳ ಕೇಳಿದ್ರೆ, ನೀವೂ ಅದೇ ಕೆಲಸ ಮಾಡ್ತೀರಿ

    ಆರ್‌. ಚಂದ್ರು (R. Chandru) ನಿರ್ದೇಶನದ ಹೈವೋಲ್ಟೇಜ್ ಆಕ್ಷನ್ ಸಿನಿಮಾ ‘ಕಬ್ಜ’. ರಿಯಲ್ ಸ್ಟಾರ್ ಉಪೇಂದ್ರ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಅಬ್ಬರಿಸಿದ್ದಾರೆ. ನಾಯಕಿಯಾಗಿ ಬಹುಭಾಷಾ ಶ್ರಿಯಾ ಶರಣ್  ಕಾಣಿಸಿಕೊಂಡಿದ್ದರು, ಕಿಚ್ಚ ಸುದೀಪ್ (Kiccha Sudeep) ಪ್ರಮುಖ ಪಾತ್ರದಲ್ಲಿ‌ ಅಬ್ಬರಿಸಿದ್ದಾರೆ. ಉಪ್ಪಿ ಹುಟ್ಟುಹಬ್ಬಕ್ಕೂ ಒಂದು ದಿನ ಮೊದಲೇ ಅದ್ಧೂರಿ ಕಾರ‍್ಯಕ್ರಮದಲ್ಲಿ ‘ಕಬ್ಜ’ ಟೀಸರ್ ಬಿಡುಗಡೆಯಾಗಿತ್ತು. ತೆಲುಗು ನಟ ರಾಣಾ ದಗ್ಗುಬಾಟಿ(Rana Daggubati) ಟೀಸರ್ ಲಾಂಚ್ ಮಾಡಿ ತಂಡಕ್ಕೆ ಶುಭ ಹಾರೈಸಿದ್ದರು.

    ಇನ್ನು ಟೀಸರ್ ನೋಡಿರುವ ಅಭಿಮಾನಿಗಳು ಕೆಜಿಎಫ್ ಸಿನಿಮಾಗೆ ಹೋಲಿಸಿ, ʻಕಬ್ಜʼ ಚಿತ್ರಕ್ಕೆ ಜೈ ಅಂದಿದ್ದಾರೆ. ಒಟ್ಟು 7 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಗೆ ಅಬ್ಬರಿಸುತ್ತಿದೆ. ಆರ್. ಚಂದ್ರು, ನಿರ್ದೇಶನದ ಜತೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಸದ್ಯ ʻಕಬ್ಜʼ ಟೀಸರ್ ಯೂಟ್ಯೂಬ್ ಕೋಟಿಗಟ್ಟಲೇ‌‌ ವಿವ್ಸ್‌ ಗಿಟ್ಟಿಸಿಕೊಂಡು ಟ್ರೆಂಡ್ ಸೃಷ್ಟಿಸಿದೆ.

    Live Tv
    [brid partner=56869869 player=32851 video=960834 autoplay=true]