ಹೈದರಾಬಾದ್: ತೆಲಂಗಾಣದಲ್ಲಿ ಬೆಟ್ಟಿಂಗ್ ಆಪ್ ಪ್ರಕರಣ ಸಂಚಲನ ಸೃಷ್ಟಿಸಿದೆ. ಇಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನಟ ರಾಣಾ ದಗ್ಗುಬಾಟಿ (RanaDaggubati) ಇಡಿ (ED) ವಿಚಾರಣೆಗೆ ಹಾಜರಾಗಿದ್ದಾರೆ. ಹೈದರಾಬಾದ್‌ನ (Hyderabad) ಬಶೀರ್‌ಬಾಗ್‌ನಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
#WATCH | Hyderabad, Telangana: Actor Rana Daggubati appears before the ED officials at Hyderabad Zonal ED office in connection with an illegal betting apps case inquiry. pic.twitter.com/9Ypct3Ml59
ಸಾಮಾಜಿಕ ಜಾಲತಾಣಗಳಲ್ಲಿ ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳನ್ನು (Illegal Betting Apps) ಪ್ರಚಾರ ಮಾಡಿದ ಆರೋಪದ ಮೇಲೆ ನಟ ಪ್ರಕಾಶ್ ರಾಜ್ (Prakash Raj) ಸೇರಿದಂತೆ ಸೆಲೆಬ್ರಿಟಿಗಳಿಗೆ ಇ.ಡಿ ಸಮನ್ಸ್ ನೀಡಿದೆ.
ಜು.23 ರಂದು ರಾಣಾ ದಗ್ಗುಬಾಟಿ, ಜು.30 ರಂದು ಪ್ರಕಾಶ್ ರಾಜ್ ಹಾಜರಾಗುವಂತೆ ಸೂಚಿಸಲಾಗಿದೆ. ಆ.6 ರಂದು ವಿಜಯ್ ದೇವರಕೊಂಡ ಅವರನ್ನು ವಿಚಾರಣೆಗೆ ಹಾಜರುಪಡಿಸಲಾಗಿದ್ದು, ಆ.13 ರಂದು ಲಕ್ಷ್ಮಿ ಮಂಚು ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಅನಧಿಕೃತ ಜೂಜಾಟ ಕಾರ್ಯಾಚರಣೆಗಳ ಮೂಲಕ ಕೋಟ್ಯಂತರ ರೂ. ಅಕ್ರಮ ಆದಾಯವನ್ನು ಗಳಿಸುತ್ತಿರುವ ಆರೋಪ ಹೊತ್ತಿರುವ ಬೆಟ್ಟಿಂಗ್ ಅಪ್ಲಿಕೇಶನ್‌ಗಳ ಟಾರ್ಗೆಟ್ ಮಾಡಲಾಗಿದೆ.
ಇಡಿ ಪ್ರಕರಣದಲ್ಲಿ ಒಟ್ಟು 29 ಸೆಲೆಬ್ರಿಟಿಗಳನ್ನು ಹೆಸರಿಸಲಾಗಿದೆ. ಅವರಲ್ಲಿ ಚಲನಚಿತ್ರ ವ್ಯಕ್ತಿಗಳಾದ ನಿಧಿ ಅಗರ್ವಾಲ್, ಪ್ರಣೀತಾ ಸುಭಾಷ್, ಅನನ್ಯಾ ನಾಗಲ್ಲ ಮತ್ತು ಟಿವಿ ನಿರೂಪಕಿ ಶ್ರೀಮುಖಿ ಸೇರಿದಂತೆ ಪ್ರಭಾವಿಗಳೂ ಇದ್ದಾರೆ.
ಟಾಲಿವುಡ್ ನಟರಾದ ವೆಂಕಟೇಶ್, ರಾಣಾ ದಗ್ಗುಬಾಟಿಗೆ (Rana Daggubati) ಸಂಕಷ್ಟ ಎದುರಾಗಿದೆ. ಕೋರ್ಟ್ ತಡೆಯಾಜ್ಞೆ ಇದ್ದರೂ ಕೂಡ ಆದೇಶ ಮೀರಿ ಡೆಕ್ಕನ್ ಕಿಚನ್ ಹೋಟೆಲ್ ನೆಲಸಮ ಮಾಡಿದ್ದಕ್ಕೆ ವೆಂಕಟೇಶ್ ಮತ್ತು ರಾಣಾ ಮೇಲೆ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ:ರಮ್ಯಾಗೆ ಮದುವೆಯ ಆಮಂತ್ರಣ ನೀಡಿದ ಡಾಲಿ
ಆಸ್ತಿ ವಿವಾದ ಪ್ರಕರಣದಲ್ಲಿ ಹೈದರಾಬಾದ್‌ನ ಫಿಲ್ಮ್ ಸಿಟಿಯಲ್ಲಿನ ಡೆಕ್ಕನ್ ಕಿಚನ್ ಹೋಟೆಲ್‌ಗೆ ಕೋರ್ಟ್‌ನಿಂದ ತಡೆಯಾಜ್ಞೆ ನೀಡಲಾಗಿತ್ತು. ಹೀಗಿದ್ದರೂ ಕೂಡ ಹೋಟೆಲ್ ಅನ್ನು ನೆಲಸಮ ಮಾಡಿದ ಹಿನ್ನೆಲೆ ನಟ ವೆಂಕಟೇಶ್ (Venkatesh) ಎ1, ರಾಣಾ ದಗ್ಗುಬಾಟಿ ಎ2, ಅಭಿರಾಮ್ ದಗ್ಗುಬಾಟಿ ಎ3, ಸುರೇಶ್ ಬಾಬು ಎ4 ಆರೋಪಿಗಳು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ನಂದಕುಮಾರ್ ದೂರಿನನ್ವಯ ವೆಂಕಟೇಶ್, ರಾಣಾ ದಗ್ಗುಬಾಟಿ ಮೇಲೆ ಫಿಲ್ಮ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಣಾ ಕುಟುಂಬ ಮತ್ತು ನಂದಕುಮಾರ್ ಎಂಬವರ ಮಧ್ಯೆ ಈ ಹೋಟೆಲ್ ವಿಚಾರವಾಗಿ ವಿವಾದವಿತ್ತು. ಈ ಬಗ್ಗೆ ನಾಂಪಲ್ಲಿಯ ಸಿಟಿ ಕೋರ್ಟ್‌ಗೆ ನಂದಕುಮಾರ್ ಮೊರೆ ಹೋಗಿದ್ದರು. ಈ ಹಿನ್ನೆಲೆ ಡೆಕ್ಕನ್ ಕಿಚನ್‌ಗೆ ತಡೆಯಾಜ್ಞೆ ನೀಡಲಾಗಿತ್ತು. ಕೋರ್ಟ್ ಆದೇಶವನ್ನು ಲೆಕ್ಕಿಸದೇ ಹೋಟೆಲ್ ಅನ್ನು ತೆರವು ಮಾಡಲಾಗಿದೆ.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ ಚಾಪ್ಟರ್ 1’ರಲ್ಲಿ (Kantara Chapter 1) ಬ್ಯುಸಿಯಾಗಿದ್ದಾರೆ. ಇನ್ನೂ ಕುಂದಾಪುರದ ಕೆರಾಡಿಗೆ ಬಂದ ತೆಲುಗು ನಟ ರಾಣಾ ದಗ್ಗುಬಾಟಿಗೆ (Rana Daggubati) ರಿಷಬ್ ಶೆಟ್ಟಿ ಕನ್ನಡ ಕಲಿಸಿದ್ದಾರೆ. ಅದಷ್ಟೇ ಅಲ್ಲ, ರಿಷಬ್ ಬಳಿ ರಾಜ್‌ಕುಮಾರ್ ಸಿನಿಮಾದ ಡೈಲಾಗ್ ಕೂಡ ಕಲಿತಿದ್ದಾರೆ. ಇದನ್ನೂ ಓದಿ:UI ಫ್ಯಾನ್ಸ್‌ಗೆ ಉಪ್ಪಿ ಪ್ರಶ್ನೆ- ಕೊನೆಯ ಶಾಟ್ ಡಿಕೋಡ್ ಮಾಡಿ ಎಂದ ನಟ
ಒಟಿಟಿ ಪ್ರಸಾರವಾಗುತ್ತಿರುವ ಈ ಶೋಗೆ ‘ದಿ ರಾಣಾ ದಗ್ಗುಬಾಟಿ ಶೋ’ ಎಂಬ ಹೆಸರನ್ನೇ ಇದಕ್ಕೆ ಇಟ್ಟಿದ್ದಾರೆ. ರಿಷಬ್‌ರನ್ನು ಸಂದರ್ಶನ ಮಾಡಲು ಕುಂದಾಪುರದ ಕೆರಾಡಿಗೆ ರಾಣಾ ಭೇಟಿ ಕೊಟ್ಟಿರೋದು ವಿಶೇಷ. ಇವರೊಂದಿಗೆ ಕುಡ್ಲದ ಬೆಡಗಿ ನೇಹಾ ಶೆಟ್ಟಿ ಕೂಡ ಸಾಥ್ ನೀಡಿದ್ದಾರೆ. ಇನ್ನೂ ಸಿನಿಮಾ ಮಾಡುಬೇಕು ಎಂದರೆ ನಗರಕ್ಕೆ ಬರಬೇಕು ಎಂಬುದನ್ನು ಅವರು ಸುಳ್ಳು ಮಾಡಿದ್ದಾರೆ. ಕುಂದಾಪುರದಲ್ಲಿ ‘ಕಾಂತಾರ ಚಾಪ್ಟರ್ 1’ ಶೂಟಿಂಗ್ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೆರಾಡಿಯ ಸರ್ಕಾರಿ ಶಾಲೆಗೆ ತೆರಳಿ ಕನ್ನಡ ಕಲಿಯುವ ಪ್ರಯತ್ನ ಮಾಡಿದ್ದಾರೆ. ರಾಜ್‌ಕುಮಾರ್ ಅವರ ‘ಹೇಳು ಪಾರ್ಥ’ ಡೈಲಾಗ್ ಅನ್ನು ರಾಣಾಗೆ ರಿಷಬ್ ಹೇಳಿ ಕೊಟ್ಟಿದ್ದಾರೆ. ಇದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಕನ್ನಡ ಕಲಿಯುವ ಆಸಕ್ತಿ ತೋರಿದ ರಾಣಾಗೆ ಫ್ಯಾನ್ಸ್ ಭೇಷ್ ಎಂದಿದ್ದಾರೆ.
ತೆಲುಗಿನ ಖ್ಯಾತ ನಟ ರಾಣಾ ದಗ್ಗುಬಾಟಿ (Rana Daggubati)ಮತ್ತು ಕನ್ನಡದ ಹೆಸರಾಂತ ನಟ ರಿಷಬ್ ಶೆಟ್ಟಿ (Rishabh Shetty)ಜೊತೆಗಿನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ರಾಣಾ ಏನಾದರೂ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರಾ ಅನ್ನೋ ಅನುಮಾನ ಕೂಡ ಮೂಡಿದೆ. ಆದರೆ, ಕನ್ನಡಕ್ಕೆ ರಾಣಾ ಬಂದಿಲ್ಲ. ತೆಲುಗಿಗೆ ರಿಷಬ್ ಹೋಗಿದ್ದಾರೆ. ಜೈ ಹನುಮಾನ್ ಸಿನಿಮಾದಲ್ಲಿ ಈ ಜೋಡಿ ಒಟ್ಟಾಗಿ ನಟಿಸುತ್ತಿದೆ.
‘ಕಾಂತಾರ’ ಕಣಕ್ಕಿಳಿದಿರುವ ಕಾಡುಬೆಟ್ಟ ಶಿವನ ಲುಕ್ಕು ಕಣ್ತುಂಬಿಕೊಳ್ಳುವುದ್ದಕ್ಕೆ ಅಖಂಡ ಸಿನಿಮಾ ಪ್ರೇಮಿಗಳು ಕಾತರದಿಂದ ಕಾಯ್ತಿದ್ದಾರೆ. ಕುಂದಾಪುರದ ಕೆರಾಡಿ ಹುಡ್ಗ ‘ಕಾಂತಾರ’ ಪ್ರೀಕ್ವೆಲ್ ಮೂಲಕ ಕದಂಬರ ಕಥೆ ಹರವಿಡೋದಿಕ್ಕೆ ರೆಡಿಯಾಗಿರುವುದರ ಜೊತೆಗೆ ಪುರಾತನ ಸಮರ ಕಲೆ ಕಳರಿಪಯಟ್ಟು ಕಲೆಯನ್ನ ಕಟ್ಟಿಕೊಡಲು ಕಸರತ್ತು ನಡೆಸಿದ್ದಾರೆ. ಇದರ ನಡುವೆ ಹನುಮಾನ್ (Hanuman) ಪಾತ್ರದಲ್ಲಿ ಮಿಂಚಲು ರಿಷಬ್ ಶೆಟ್ಟಿ (Rishab Shetty) ರೆಡಿಯಾಗಿದ್ದಾರೆ. ಈ ಮೂಲಕ ತೆಲುಗಿಗೆ ನಟ ಎಂಟ್ರಿ ಕೊಟ್ಟಿದ್ದಾರೆ.
ಟಾಲಿವುಡ್ ಅಂಗಳದಲ್ಲಿ ಮೂಡಿಬಂದಿದ್ದ ‘ಜೈ ಹನುಮಾನ್’ (Jai Hanuman) ಸಿನಿಮಾ ಸಕ್ಸಸ್ ಕಂಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದ್ದ ಹನುಮಾನ್ ಸಿನಿಮಾದ ಸೀಕ್ವೆಲ್ ಮೂಡಿಬರುತ್ತಿದ್ದು, ಇದೀಗ ಪ್ಯಾನ್ ಇಂಡಿಯಾ ಹಿಟ್ ಸೀಕ್ವೆಲ್‌ನಲ್ಲಿ ‘ಕಾಂತಾರ’ (Kantara) ಶಿವ ನಟಿಸುವುದು ಅಧಿಕೃತವಾಗಿದೆ. ನಿರ್ದೇಶಕ ಪ್ರಶಾಂತ್ ವರ್ಮಾ ಡೈರೆಕ್ಷನ್ ಅಡಿಯಲ್ಲಿ ಮೂಡಿ ಬರುತ್ತಿರುವ ‘ಹನುಮಾನ್’ ಸಿನಿಮಾದ ಸೀಕ್ವೆಲ್‌ನಲ್ಲಿ ರಿಷಬ್ ಶೆಟ್ಟಿ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೀಪಾವಳಿಯ ವಿಶೇಷ ಸಂದರ್ಭದಲ್ಲಿ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ.
ನಿರ್ದೇಶಕ ಪ್ರಶಾಂತ್ ವರ್ಮಾ ‘ಜೈ ಹನುಮಾನ್’ ಚಿತ್ರದ ಸೀಕ್ವೆಲ್‌ನಲ್ಲಿ ಹನುಮಾನ್ ಪಾತ್ರಧಾರಿಗೆ ಬಹಳಷ್ಟು ಅಳೆದೂ ತೂಗಿ ರಿಷಬ್ ಶೆಟ್ಟಿ ಅವರನ್ನು ಆಯ್ಕೆ ಮಾಡಿದ್ದಾರೆ. ಕಾಂತಾರ ಸೀಕ್ವೆಲ್‌ಗಾಗಿ ನ್ಯಾಷನಲ್ ಅವಾರ್ಡ್ ಮುಡಿಗೇರಿಸಿಕೊಂಡಿರುವ ಡಿವೈನ್ ಸ್ಟಾರ್ ಕೇವಲ ನಟರಾಗಿ ಅಷ್ಟೇ ಅಲ್ಲದೆ, ನಿರ್ದೇಶಕರಾಗಿಯೂ ಪ್ಯಾನ್ ಇಂಡಿಯಾದಾದ್ಯಂತ ಮೋಡಿ ಮಾಡಿದ್ದಾರೆ. ಇದೇ ಕಾರಣಕ್ಕೆ ಯಾವುದೇ ಪಾತ್ರವನ್ನಾದರೂ ರಿಷಬ್ ನಿಭಾಯಿಸಬಲ್ಲರು. ಜೊತೆಗೆ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ವಿಭಾಗಗಳಲ್ಲೂ ರಿಷಬ್ ಶೆಟ್ಟಿಗೆ ಕಂಟ್ರೋಲ್ ಇರೋದ್ರಿಂದ ‘ಹನುಮಾನ್’ ಸಿನಿಮಾದ ಸೀಕ್ವೆಲ್‌ಗೆ ಪ್ಲಸ್ ಪಾಯಿಂಟ್ಸ್ ಆಗಲಿದೆ.
ಕೈಯಲ್ಲಿ ರಾಮನ ವಿಗ್ರಹ ಹಿಡಿದು ರಿಷಬ್ ಶೆಟ್ಟಿ ಹನುಮಾನ್ ಪಾತ್ರದಲ್ಲಿ ಪವರ್‌ಫುಲ್ ಪೋಸ್ಟ್ ಕೊಟ್ಟಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಬಹಳ ಆಕರ್ಷಕವಾಗಿದೆ. ‘ಜೈ ಹನುಮಾನ್’ ಸಿನಿಮಾವನ್ನು ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್‌ನ ಭಾಗವಾಗಿ ತಯಾರಾಗಲಿದೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಲಿದ್ದಾರೆ.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ‘ಜೈ ಹನುಮಾನ್’ (Jai Hanuman) ಸಿನಿಮಾದಲ್ಲಿ ನಟಿಸುತ್ತಿರುವ ಕುರಿತು ಈಗಾಗಲೇ ಅಧಿಕೃತ ಘೋಷಣೆ ಆಗಿದೆ. ಈ ಬೆನ್ನಲ್ಲೇ, ರಾಣಾ ದಗ್ಗುಬಾಟಿ (Rana Daggubati) ಕೂಡ ಈ ಸಿನಿಮಾದ ಭಾಗವಾಗಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ತೆಲುಗಿನ ನಟ ರಾಣಾ ದಗ್ಗುಬಾಟಿ ಅವರು ‘ಜೈ ಹನುಮಾನ್’ ಸಿನಿಮಾ ತಂಡದ ಜೊತೆ ಕೈ ಜೋಡಿಸಿದ್ದಾರೆ ಎನ್ನಲಾಗಿದೆ. ನಿರ್ದೇಶಕ ಪ್ರಶಾಂತ್ ವರ್ಮಾ (Prashanth Varma) ಅವರು ರಿಷಬ್ ಶೆಟ್ಟಿ (Rishab Shetty) ಮತ್ತು ರಾಣಾ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ‘ಜೈ ಜೈ ಹನುಮಾನ್’ ಎಂದು ಅಡಿಬರಹ ನೀಡಿದ್ದಾರೆ. ಪ್ರಶಾಂತ್, ರಿಷಬ್ ಜೊತೆಗಿನ ರಾಣಾ ಫೋಟೋ ಮತ್ತು ಅಡಿಬರಹ ನೋಡಿ ಈ ಸಿನಿಮಾದಲ್ಲಿ ಅವರು ನಟಿಸುವ ಕುರಿತು ಚರ್ಚೆಯಾಗುತ್ತಿದೆ.
ರಾಣಾ ದಗ್ಗುಬಾಟಿ ಅವರು ಚಿತ್ರದಲ್ಲಿ ಶ್ರೀ ರಾಮನ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಚಿತ್ರತಂಡ ಅಧಿಕೃತವಾಗಿ ಘೋಷಿಸುವವರೆಗೂ ಕಾದುನೋಡಬೇಕಿದೆ. ಇದನ್ನೂ ಓದಿ:ಯಶ್ ನಟನೆಯ ‘ರಾಮಾಯಣ’ ಚಿತ್ರದ ಮೊದಲ ಪೋಸ್ಟರ್ ರಿಲೀಸ್
ಇನ್ನೂ ಇತ್ತೀಚೆಗೆ ರಿಷಬ್ ಶೆಟ್ಟಿ ಹನುಮಂತನ ಪಾತ್ರದ ಫಸ್ಟ್ ಲುಕ್ ಅನ್ನು ಚಿತ್ರತಂಡ ರಿವೀಲ್ ಮಾಡಿತ್ತು. ರಿಷಬ್ ಅವತಾರಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದರು. ‘ಕಾಂತಾರ’ ಸಿನಿಮಾದ ಬಳಿಕ ಈ ಚಿತ್ರದ ಮೇಲೆಯೂ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ.
ಟಾಲಿವುಡ್ ಹ್ಯಾಂಡ್ಸಮ್ ಹಂಕ್ ರಾಣಾ ದಗ್ಗುಬಾಟಿ (Rana Daggubati) ಹಾಗೂ ಮಲಯಾಳಂ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ (Dulquer Salmaan) ‘ಕಾಂತ’ (Kaantha) ಸಿನಿಮಾಗಾಗಿ ಕೈ ಜೋಡಿಸಿದ್ದಾರೆ. ಸೆಲ್ವಮಣಿ ಸೆಲ್ವರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಹೈದರಾಬಾದ್‌ನ ರಾಮ ನಾಯ್ಡು ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಸೆಟ್ಟೇರಿದೆ. ನಟ ಕಂ ನಿರ್ಮಾಪಕ ವೆಂಕಟೇಶ್ ದಗ್ಗುಬಾಟಿ ‘ಕಾಂತ’ ಸಿನಿಮಾಗೆ ಕ್ಲ್ಯಾಪ್ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು.
‘ಕಾಂತ’ ಸಿನಿಮಾವನ್ನು ರಾಣಾ ಒಡೆತನ ರಾಣಾಸ್ ಸ್ಪಿರಿಟ್ ಮೀಡಿಯಾ ಹಾಗೂ ದುಲ್ಕರ್ ಸಲ್ಮಾನ್ ಒಡೆತನದ ವೇಫೇರರ್ ಫಿಲ್ಮಂ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ದುಲ್ಕರ್ ಚಿತ್ರ ನಿರ್ಮಾಣದ ಜೊತೆ ನಾಯಕನಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. 1950ರ ಮದ್ರಾಸ್ ಬ್ಯಾಕ್ ಡ್ರಾಪ್ ನಲ್ಲಿ ಕಾಂತ ಚಿತ್ರ ತಯಾರಾಗಲಿದೆ. ದುಲ್ಕರ್ ಗೆ ಜೋಡಿಯಾಗಿ ಭಾಗ್ಯಶ್ರೀ ಬೋರ್ಸೆ (Bhagyashri Borse) ಸಾಥ್ ಕೊಟ್ಟಿದ್ದು, ಸಮುದ್ರಖನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಿರ್ಮಾಪಕ ರಾಣಾ ದಗ್ಗುಬಾಟಿ ಮಾತನಾಡಿ, ರಾಣಾಸ್ ಸ್ಪಿರಿಟ್ ಮೀಡಿಯಾ ವೇಫೇರರ್ ಫಿಲ್ಮಂ ಜೊತೆಯಾಗಿರುವುದು ಕಾಂತ ಚಿತ್ರಕ್ಕೆ ಹೊಸ ಆಯಾಮಾ ಸಿಕ್ಕಂತಾಗಿದೆ. ಪ್ರೇಕ್ಷಕರಿಗೆ ಸ್ಪಿರಿಟ್ ಮೀಡಿಯಾ ಕ್ವಾಲಿಟಿ ಸಿನಿಮಾ ನೀಡಲಿದೆ. ಸುರೇಶ್ ಪ್ರೊಡಕ್ಷನ್ 60ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಸ್ಪಿರಿಟ್ ಮೀಡಿಯಾದೊಂದಿಗೆ ಹೊಸ ಯುಗವನ್ನು ಪ್ರಾರಂಭಿಸಲು ಕಾಂತ ಅತ್ಯುತ್ತಮ ಚಿತ್ರವಾಗಿದೆ ಎಂದರು. ಇದನ್ನೂ ಓದಿ:ರಶ್ಮಿಕಾ ಮಂದಣ್ಣಗೆ ಅಪಘಾತ: ಜೀವನ ಕ್ಷಣಿಕ ಎಂದ ‘ಪುಷ್ಪ’ ನಟಿ
ಪ್ರಶಾಂತ್ ಪೊಟ್ಲೂರಿ, ರಾಣಾ ದಗ್ಗುಬಾಟಿ, ದುಲ್ಕರ್ ಸಲ್ಮಾನ್ ಮತ್ತು ಜೋಮ್ ವರ್ಗೀಸ್ ಕಾಂತ ಚಿತ್ರ ನಿರ್ಮಾಣ ಮಾಡುತ್ತಿದ್ದು, ದಾನಿ ಸ್ಯಾಂಚೆಜ್ ಲೋಪೆಜ್ ಛಾಯಾಗ್ರಹ, ಜಾನು ಸಂಗೀತ, ರಾಮಲಿಂಗಂ ಕಲಾ ನಿರ್ದೇಶನ, ಲೆವೆಲ್ಲಿನ್ ಆಂಥೋನಿ ಗೊನ್ಸಾಲ್ವಿಸ್ ಸಂಕಲನ ಚಿತ್ರಕ್ಕಿದೆ. ‘ಕಾಂತ’ ಚಿತ್ರದ ಫಸ್ಟ್ ಲುಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ.
‘ಕೆಜಿಎಫ್’ (KGF) ಸಿನಿಮಾದ ಯಶ್ (Yash) ನಾಯಕಿ ಶ್ರೀನಿಧಿ ಶೆಟ್ಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ‘ಕೆಜಿಎಫ್-2’ ಸಿನಿಮಾದ ಸಕ್ಸಸ್ ನಂತರ ಸೈಲೆಂಟ್ ಆಗಿದ್ದರು. ಈಗ ಹೊಸ ಸಿನಿಮಾದ ಅಪ್‌ಡೇಟ್ ಸಿಕ್ಕಿದೆ. ‘ಬಾಹುಬಲಿ’ ನಟನ ಜೊತೆ ಡ್ಯುಯೆಟ್ ಹಾಡೋಕೆ ನಟಿ ಸಜ್ಜಾಗಿದ್ದಾರೆ.
ಶ್ರೀನಿಧಿ ಶೆಟ್ಟಿ (Srinidhi Shetty) ಮಾಡಿದ್ದು ಎರಡ್ಮೂರು ಸಿನಿಮಾ ಆಗಿದ್ರೂ ಅವರ ಮೇಲೆ ಫ್ಯಾನ್ಸ್‌ಗೆ ಭಾರೀ ಕ್ರೇಜ್ ಇದೆ. ಹೊಸ ಚಿತ್ರದ ಬಗ್ಗೆ ಅಪ್‌ಡೇಟ್ ಕೊಡಲಿ ಎಂದು ಕಾದು ಕುಳಿತವರಿಗೆ ಈಗ ಖುಷಿಯ ಸುದ್ದಿ ಸಿಕ್ಕಿದೆ. ‘ಬಾಹುಬಲಿ’ ಖ್ಯಾತಿಯ ರಾಣಾ ದಗ್ಗುಬಾಟಿ ಹೊಸ ಚಿತ್ರಕ್ಕೆ ಶ್ರೀನಿಧಿ ನಾಯಕಿ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ನಟ ದರ್ಶನ್ ಬಳಿ ಇದೆ 2 ಯುಎಸ್ ಮೇಡ್ ಪಿಸ್ತೂಲ್‍ಗಳು!
ರಾಣಾ (Rana Daggubati) ನಟನೆಯ ಹೊಸ ಚಿತ್ರಕ್ಕೆ ‘ಕೆಜಿಎಫ್’ ನಟಿಯನ್ನು ಸಂಪರ್ಕಿಸಲಾಗಿದೆ ಎನ್ನಲಾಗಿದೆ. ಕಥೆ ಕೇಳಿ ನಟಿ ಕೂಡ ಥ್ರಿಲ್ ಆಗಿದ್ದಾರಂತೆ. ಇನ್ನೂ ಚಿತ್ರತಂಡದ ಕಡೆಯಿಂದ ಅಧಿಕೃತ ಘೋಷಣೆಯೊಂದೇ ಬರಬೇಕಿದೆ. ಇದನ್ನೂ ಓದಿ:ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಆಲಿಯಾ ಭಟ್
ಅಂದಹಾಗೆ, ಕಿಚ್ಚ ಸುದೀಪ್ (Kichcha Sudeep) ನಟನೆಯ ಹೊಸ ಚಿತ್ರಕ್ಕೂ ಶ್ರೀನಿಧಿ ಶೆಟ್ಟಿ ನಾಯಕಿಯಾಗಿದ್ದಾರೆ. ‘ಮ್ಯಾಕ್ಸ್’ (Max Film) ಸಿನಿಮಾದ ರಿಲೀಸ್ ನಂತರ ಇವರಿಬ್ಬರ ಕಾಂಬಿನೇಷನ್ ಚಿತ್ರದ ಶೂಟಿಂಗ್ ಶುರುವಾಗಲಿದೆ.
ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ‘ಲಾಲ್ ಸಲಾಂ’ (Lal Salam) ಸಿನಿಮಾ ಸೋಲಿನ ನಂತರ ವೆಟ್ಟೈಯಾನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ತಲೈವಾ ಸಿನಿಮಾದಲ್ಲಿ ಟಾಲಿವುಡ್ ನಟ ರಾಣಾ ದಗ್ಗುಬಾಟಿ (Rana Daggubati) ನಟಿಸಿದ್ದಾರೆ. ರಜನಿಕಾಂತ್ ಮುಂದೆ ರಾಣಾ ಅಬ್ಬರಿಸಿದ್ದಾರೆ.
‘ಜೈ ಭೀಮ್’ (Jai Bhim) ಖ್ಯಾತಿಯ ಜ್ಞಾನ್‌ವೇಲ್ ನಿರ್ದೇಶನದ ‘ವೆಟ್ಟೈಯಾನ್’ ಸಿನಿಮಾಗೆ ಸಾಥ್ ನೀಡಿದ್ದಾರೆ. ಚಿತ್ರೀಕರಣ ಕೂಡ ಬಿರುಸಿನಿಂದ ನಡೆಯುತ್ತಿದೆ. ರಜನಿಕಾಂತ್ ಮುಂದೆ ರಾಣಾ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ತಲೈವಾ ಮುಂದೆ ನೆಗೆಟಿವ್ ಶೇಡ್‌ನಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.
ಅಂದಹಾಗೆ, ರಜನಿಕಾಂತ್ ನಟನೆಯ 170ನೇ ಸಿನಿಮಾ ವೆಟ್ಟೈಯಾನ್ ಇದೇ ಅಕ್ಟೋಬರ್ ತಿಂಗಳಲ್ಲಿ ಸಿನಿಮಾ ಬಿಗ್ ಸ್ಕ್ರೀನ್‌ಗೆ ಲಗ್ಗೆ ಇಡಲಿದೆ. ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ವೆಟ್ಟೈಯಾನ್ ಸಿನಿಮಾ ಮೂಲಕ ಮೂರು ದಶಕದ ಬಳಿಕ ಮತ್ತೊಮ್ಮೆ ಒಟ್ಟಿಗೆ ನಟಿಸಿದ್ದಾರೆ. ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ ಈ ಅಭೂತಪೂರ್ವ ಸಮಾಗಮಕ್ಕೆ ವೇದಿಕೆ ನಿರ್ಮಿಸಿದೆ. ಇದನ್ನೂ ಓದಿ:ಡಾಲಿ ನಟನೆಯ ‘ಉತ್ತರಕಾಂಡ’ ಟೀಮ್ ಸೇರಿಕೊಂಡ ಚೈತ್ರಾ ಆಚಾರ್
ವೆಟ್ಟೈಯಾನ್ ಸಿನಿಮಾಗೆ ರಾಕ್ ಸ್ಟಾರ್ ಖ್ಯಾತಿಯ ಅನಿರುದ್ಧ್ ರವಿಚಂದರ್ ಸಂಗೀತ, ಎಸ್.ಆರ್. ಕಥಿರ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲನವಿರಲಿದೆ. ಇಂಡಿಯನ್, ಖೈದಿ ನಂಬರ್ 150, ರೋಬೋ 2.0, ದರ್ಬಾರ್ ಇತ್ತೀಚೆಗೆ ‘ಪೊನ್ನಿಯಿನ್ ಸೆಲ್ವನ್’ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್ ‘ವೆಟ್ಟೈಯಾನ್’ ಸಿನಿಮಾ ನಿರ್ಮಿಸುತ್ತಿದೆ.
‘ಬಾಹುಬಲಿ’ ಖ್ಯಾತಿಯ ರಾಣಾ ದಗ್ಗುಬಾಟಿ(Rana Daggubati) ಅವರು ಸಿನಿಮಾ, ವೆಬ್ ಸಿರೀಸ್ ಅಂತಾ ಸಾಲು ಸಾಲು ಪ್ರಾಜೆಕ್ಟ್‌ಗಳನ್ನ ಅನೌನ್ಸ್ ಮಾಡ್ತಿದ್ದಾರೆ. ಈಗ ಹಿರಣ್ಯಕಶ್ಯಪ ಸಿನಿಮಾವನ್ನ ಅನೌನ್ಸ್ ಮಾಡಿದ್ದಾರೆ. ನಿರ್ದೇಶಕ ತ್ರಿವಿಕ್ರಮ್ ಜೊತೆ ರಾಣಾ ಕೈಜೋಡಿಸಿದ್ದಾರೆ. ರಾಣಾ ಹೊಸ ಸಿನಿಮಾ ಅನೌನ್ಸ್ ಮಾಡ್ತಿದ್ದಾರೆ. ‘ಶಾಕುಂತಲಂ’ ನಿರ್ದೇಶಕ ಗುಣಶೇಖರ್ (Gunashekar) ಅವರು ರಾಣಾ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇತ್ತೀಚಿಗೆ ರಾಣಾ ಸಿನಿಮಾಗಿಂತ ತಮ್ಮ ವೈಯಕ್ತಿಕ ವಿಚಾರವಾಗಿಯೂ ಸುದ್ದಿಯಾಗುತ್ತಿದ್ದರು. ಪತ್ನಿ ಮಿಹಿಕಾಗೆ ಡಿವೋರ್ಸ್ ನೀಡುತ್ತಾರೆ ಎಂದು ಸುದ್ದಿಯಾದ್ರು. ಬಳಿಕ ಮಿಹಿಕಾ (Miheeka) ಪ್ರೆಗ್ನೆಂಟ್ ಎಂದು ಮತ್ತೊಂದು ವಿಚಾರ ಟಾಲಿವುಡ್ ಗಾಸಿಪ್ ಪ್ರಿಯರ ಬಾಯಿಗೆ ಆಹಾರವಾದ್ರು. ಇದಕ್ಕೆಲ್ಲಾ ಈ ಜೋಡಿ ಸ್ಪಷ್ಟನೆ ನೀಡಿದ್ದರು. ನಮ್ಮ ನಡುವೆ ಎಲ್ಲವೂ ಸರಿಯಿದೆ. ನಾವು ಚೆನ್ನಾಗಿ ಬಾಳುತ್ತಿದ್ದೇವೆ ಎಂದು ಕ್ಲ್ಯಾರಿಟಿ ನೀಡಿದ್ದರು. ಈಗ ಸಿನಿಮಾವೊಂದರ ವಿಚಾರವಾಗಿ ರಾಣಾ ಮತ್ತೆ ಸೌಂಡ್ ಮಾಡ್ತಿದ್ದಾರೆ.
ರಾಣಾ ದಗ್ಗುಬಾಟಿ ನಟಿಸಲಿರುವ ‘ಹಿರಣ್ಯಕಶ್ಯಪ’ ಸಿನಿಮಾವನ್ನು ತೆಲುಗಿನ ಯಶಸ್ವಿ ನಿರ್ದೇಶಕ ತ್ರಿವಿಕ್ರಮ್ ನಿರ್ದೇಶನ ಮಾಡಲಿದ್ದಾರೆ. ಆದರೆ ಈ ಸಿನಿಮಾವನ್ನು ನಿರ್ದೇಶನದ ಮಾತುಕತೆ ನಡೆದಿದ್ದು, ನಿರ್ದೇಶಕ ಗುಣಶೇಖರ್ ಜೊತೆಗೆ. ಅನುಷ್ಕಾ ಶೆಟ್ಟಿ (Anushka Shetty) ನಟನೆಯ ‘ರುದ್ರಮ್ಮದೇವಿ’ ಸಮಂತಾ (Samantha) ನಟಿಸಿದ್ದ ‘ಶಾಕುಂತಲಂ’ (Shakuntalam) ಸಿನಿಮಾಗಳನ್ನು ನಿರ್ದೇಶಿಸಿರುವ ಗುಣಶೇಖರ್, ‘ಹಿರಣ್ಯಕಷ್ಯಪ’ ಸಿನಿಮಾವನ್ನು ನಿರ್ದೇಶಿಸಬೇಕಿತ್ತು. ಆದರೆ ಈಗ ತ್ರಿವಿಕ್ರಮ್ ಎಂಟ್ರಿ ಕೊಟ್ಟಿದ್ದಾರೆ.
ಗುಣಶೇಖರ್ ಅವರು ಈ ಹಿಂದೆ ಹಲವು ಬಾರಿ ‘ಹಿರಣ್ಯಕಶ್ಯಪ’ ತಮ್ಮ ಡ್ರೀಮ್ ಪ್ರಾಜೆಕ್ಟ್ ಎಂದು ಹೇಳಿಕೊಂಡಿದ್ದರು. ರಾಣಾ- ಗುಣಶೇಖರ್ ಒಟ್ಟಿಗೆ ಸಿನಿಮಾ ಮಾಡುವ ಬಗ್ಗೆ ಚರ್ಚೆ ಆಗಿತ್ತಂತೆ. ಆದರೆ ಹಠಾತ್ತನೆ ರಾಣಾ ದಗ್ಗುಬಾಟಿ, ತ್ರಿವಿಕ್ರಮ್ ಜೊತೆಗೆ ಸಿನಿಮಾ ಘೋಷಣೆ ಮಾಡಿದ್ದಾರೆ. ಇದು ಗುಣಶೇಖರ್ ಅಸಮಾಧಾನಕ್ಕೆ ಕಾರಣವಾಗಿದೆ. ಸಿನಿಮಾ ಘೋಷಣೆಯಾದ ಬೆನ್ನಲ್ಲೇ ಟ್ವೀಟ್ ಒಂದನ್ನು ಗುಣಶೇಖರ್ ಮಾಡಿದ್ದಾರೆ. ಇದನ್ನೂ ಓದಿ:ನಟನೆಗೆ ಗುಡ್ ಬೈ ಹೇಳಿ, ವೇಟ್ ಲಿಫ್ಟಿಂಗ್ ಸ್ಪರ್ಧೆಗೆ ಅಭ್ಯಾಸ ಆರಂಭಿಸಿದ ನಟಿ ಪ್ರಗತಿ
ದೇವರು ನಿನ್ನ ಕತೆ ಹೆಣೆದಿದ್ದಾನೆ ಎಂದರೆ ನಿನ್ನ ಮೇಲೆ ಆತ ನಿಗಾ ಸಹ ವಹಿಸಿರುತ್ತಾನೆ ಎಂಬುದನ್ನು ಮರೆಯಬೇಡ. ಅನೈತಿಕ ಕೃತ್ಯಗಳಿಗೆ ನೈತಿಕ ವಿಧಾನಗಳ ಮೂಲಕ ಉತ್ತರ ನೀಡಲಾಗುವುದು ಎಂದು ಗುಣಶೇಖರ್ ಟ್ವೀಟ್ ಮಾಡಿದ್ದಾರೆ. ಹಿರಣ್ಯಕಶ್ಯಪ ಸಿನಿಮಾದ ಕತೆ ರೆಡಿ ಮಾಡಲು ಗುಣಶೇಖರ್ ಸಾಕಷ್ಟು ಕಡೆ ತಿರುಗಾಡಿದ್ದರು. ಮಾಹಿತಿಗಳನ್ನು ಸಂಗ್ರಹಿಸಿದ್ದರು. ಸಿನಿಮಾ ಮಾಡುವ ಬಗ್ಗೆ ಗ್ರೀನ್ ಸಿಗ್ನಲ್ ನೀಡಿ ಈಗ ಈ ಚಿತ್ರಕ್ಕೆ ಬೇರೇ ನಿರ್ದೇಶಕ ಎಂಟ್ರಿ ಕೊಟ್ಟಿರೋದು ಗುಣಶೇಖರ್ ಅವರಿಗೆ ಬೇಸರ ತಂದಿದೆ. ಗುಣಶೇಖರ್ ಅವರ ಮಾತಿಗೆ ರಾಣಾ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಅಲ್ಲಿಯವರೆಗೂ ಕಾದುನೋಡಬೇಕಿದೆ.