Tag: ರಾಝಿ

  • ಸಾಮಾನ್ಯ ಹುಡ್ಗಿಯ ಅಸಾಧಾರಣ ಕಥೆ ರಾಝಿ

    ಸಾಮಾನ್ಯ ಹುಡ್ಗಿಯ ಅಸಾಧಾರಣ ಕಥೆ ರಾಝಿ

    ಮುಂಬೈ: ಬಾಲಿವುಡ್‍ನಲ್ಲಿ ಜೀವನಾಧರಿತ ಮತ್ತು ನೈಜ ಘಟನೆಯಾಧರಿತ ಸಿನಿಮಾಗಳು ಒಂದಾದ ನಂತರ ಬರುತ್ತಿವೆ. ಇತ್ತೀಚೆಗೆ ಅಜಯ್ ದೇವಗನ್ ಅಭಿನಯದ ರೇಡ್ ಸಿನಿಮಾ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಇಂದು ಬಹು ನಿರೀಕ್ಷೆಗಳನ್ನು ಹುಟ್ಟಿಸಿದ್ದ ಆಲಿಯಾ ಭಟ್ ಲೀಡ್‍ರೋಲ್ ನಲ್ಲಿ ನಟಿಸಿರುವ ‘ರಾಝಿ’ ತೆರೆಕಂಡಿದೆ.

    ಸಿನಿಮಾ ನೋಡಿದ ಸೆಲೆಬ್ರಿಟಿಗಳು ಚಿತ್ರದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ನೀಡುವ ಮೂಲಕ ರಾಝಿಗೆ ಜೈ ಅಂದಿದ್ದಾರೆ. ಭಾರತದ ಸಾಮನ್ಯ ಯುವತಿ ಪಾಕಿಸ್ತಾನದ ಸೊಸೆಯಾಗಿ ಹೇಗೆ ದೇಶಸೇವೆ ಮಾಡ್ತಾಳೆ ಎಂಬುದು ಕಥೆಯ ತಿರುಳು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರು ಯಾರಿಗೂ ಕಾಣದಂತೆ ತೆರೆಯ ಹಿಂದಿನಿಂದಲೇ ಕಾಣೆ ಆಗ್ತಾರೆ. ಅಂತಹ ಓರ್ವ ಮಹಿಳೆಯ ಸಾಹಸ ಕಥೆಯೇ ರಾಝಿ.

    ಆಲಿಯಾ ನಟನೆ ಟ್ರೇಲರ್‍ನಲ್ಲಿ ಭಾರೀ ಕುತೂಹಲವನ್ನು ಮೂಡಿಸಿತ್ತು. ಪ್ರತಿ ಬಾರಿಯೂ ಬಬ್ಲಿ ಗರ್ಲ್ ಪಾತ್ರದಲ್ಲಿ ನಟಿಸಿದ್ದ ಆಲಿಯಾ ನಟನಾ ಕೌಶಲ್ಯವನ್ನು ರಾಝಿಯಲ್ಲಿ ನೋಡಬಹುದು ಅಂತಾ ಬಾಲಿವುಡ್ ತಜ್ಞರು ವಿಶ್ಲೇಷಿಸಿದ್ದಾರೆ. ಈಗಾಗಲೇ ನಿರ್ದೇಶಕ ರಾಜ್‍ಕುಮಾರ್ ಹಿರಾನಿ, ನಟಿ ತಾಪ್ಸಿ ಪನ್ನು ಸೇರಿದಂತೆ ಹಲವರು ಆಲಿಯಾ ಶುಭಾಶಯ ತಿಳಿಸಿದ್ದಾರೆ.

    1971ರಲ್ಲಿ ನಡೆದ ನೈಜ ಘಟನೆ ಆಧರಿತ ಕಥೆಯನ್ನು `ರಾಝಿ’ ಹೊಂದಿದ್ದು, ಹರೀಂದರ್ ಸಿಕ್ಕಾರ `ಕಾಲಿಂಗ್ ಸೆಹಮತ್’ ಕಾದಂಬರಿ ಎಳೆಯನ್ನು ಸಿನಿಮಾ ಹೊಂದಿದೆ. ಭಾರತೀಯ ಮಹಿಳಾ ಪತ್ತೆದಾರಿ ಪಾಕಿಸ್ತಾನ ವ್ಯಕ್ತಿಯೊಂದಿಗೆ ಮದುವೆ ಆಗುವ ಮೂಲಕ ದೇಶದ ಪರವಾಗಿ ಕೆಲಸ ಮಾಡುವ ಮಹಿಳೆಯ ಪಾತ್ರದಲ್ಲಿ ಆಲಿಯಾ ನಟಿಸಿದ್ದಾರೆ. ಧರ್ಮ ಪ್ರೊಡಕ್ಷನ್ ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ವಿನೀತ್ ಜೈನ್, ಕರಣ್ ಜೋಹರ್, ಯಶ್ ಜೋಹರ್ ಮತ್ತು ಅಪೂರ್ವ ಮೆಹ್ತಾ ಜಂಟಿಯಾಗಿ ಬಂಡವಾಳ ಹೂಡಿದ್ದು, ಮೇಘನಾ ಗುಲ್ಜರ್ ನಿರ್ದೇಶನವನ್ನು ಹೊಂದಿದೆ.

  • ಬಾಲಿವುಡ್‍ನ ಬಬ್ಲಿ ಗರ್ಲ್, ಈಗ ಪಾಕಿಸ್ತಾನದಲ್ಲಿರುವ ಭಾರತದ ಗೂಢಚಾರಿಣಿ

    ಬಾಲಿವುಡ್‍ನ ಬಬ್ಲಿ ಗರ್ಲ್, ಈಗ ಪಾಕಿಸ್ತಾನದಲ್ಲಿರುವ ಭಾರತದ ಗೂಢಚಾರಿಣಿ

    ಮುಂಬೈ: ಬಾಲಿವುಡ್‍ನ ಬಬ್ಲಿ ಗರ್ಲ್ ಆಲಿಯಾ ಭಟ್ ಮೊದಲ ಬಾರಿಗೆ ‘ರಾಝಿ’ ಸಿನಿಮಾದಲ್ಲಿ ಸಿರೀಯಸ್ ಪಾತ್ರದಲ್ಲಿ ನಟಿಸಿದ್ದಾರೆ. ಮಂಗಳವಾರ ಬಿಡುಗೊಡೆಗೊಂಡ ಟ್ರೇಲರ್ ಕೇವಲ ಒಂದು ದಿನದಲ್ಲಿಯೇ 1 ಕೋಟಿಗೂ ಅಧಿಕ ವ್ಯೂವ್ ಪಡೆಯುವ ಮೂಲಕ ಯೂ ಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ನಲ್ಲಿದೆ.

    ರೊಮ್ಯಾಂಟಿಕ್ ಮತ್ತು ಯಂಗ್ ಜನರೇಶನ್ ಫಿಲ್ಮ್‍ಗಳಲ್ಲಿ ನಟಿಸುತ್ತಾ ಬಂದಿದ್ದ ಆಲಿಯಾರ ನಟನೆಯ ಪಕ್ವತೆಯನ್ನು ಟ್ರೇಲರ್ ನಲ್ಲಿ ನೋಡಬಹುದಾಗಿದೆ. 1971ರಲ್ಲಿ ನಡೆದ ನೈಜ ಘಟನೆ ಆಧರಿತ ಕಥೆಯನ್ನು ‘ರಾಝಿ’ ಹೊಂದಿದ್ದು, ಹರೀಂದರ್ ಸಿಕ್ಕಾರ ‘ಕಾಲಿಂಗ್ ಸೆಹಮತ್’ ಕಾದಂಬರಿ ಎಳೆಯನ್ನು ಸಿನಿಮಾ ಹೊಂದಿದೆ. ಭಾರತೀಯ ಮಹಿಳಾ ಪತ್ತೆದಾರಿ ಪಾಕಿಸ್ತಾನ ವ್ಯಕ್ತಿಯೊಂದಿಗೆ ಮದುವೆ ಆಗುವ ಮೂಲಕ ದೇಶದ ಪರವಾಗಿ ಕೆಲಸ ಮಾಡುವ ಮಹಿಳೆಯ ಪಾತ್ರದಲ್ಲಿ ಆಲಿಯಾ ನಟಿಸಿದ್ದಾರೆ.

    ಟ್ರೇಲರ್ ನೋಡಿದ ಬಾಲಿವುಡ್ ಗಣ್ಯರೆಲ್ಲಾ ಆಲಿಯಾ ನಟನೆಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಭಾರತೀಯ ಪತ್ತೆದಾರಿಯಾಗಿ ಪಾಕಿಸ್ತಾನದಲ್ಲಿ ಯಾವೆಲ್ಲ ಮಾಹಿತಿಗಳನ್ನು ರವಾನಿಸುತ್ತಾರೆ. ಅಲ್ಲಿಂದ ತಿರುಗಿ ಭಾರತಕ್ಕೆ ರಾಝಿ ಬರ್ತಾಳಾ ಎಂಬ ಪ್ರಶ್ನೆಗಳಿಗೆ ಸಿನಿಮಾ ನೋಡಿದ ಮೇಲೆಯೇ ಉತ್ತರ ಸಿಗಲಿದೆ.

    ಧರ್ಮ ಪ್ರೊಡಕ್ಷನ್ ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ವಿನೀತ್ ಜೈನ್, ಕರಣ್ ಜೋಹರ್, ಯಶ್ ಜೋಹರ್ ಮತ್ತು ಅಪೂರ್ವ ಮೆಹ್ತಾ ಜಂಟಿಯಾಗಿ ಬಂಡವಾಳ ಹೂಡಿದ್ದು, ಮೇಘನಾ ಗುಲ್ಜರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಝಿ ನಾಯಕಿ ಆಧಾರಿತ ಸಿನಿಮಾ ಇದಾಗಿದ್ದು, ಆಲಿಯಾಗೆ ಜೊತೆಯಾಗಿ ವಿಕ್ಕಿ ಕೌಶಲ್ ನಟಿಸಿದ್ದಾರೆ. ಟ್ರೇಲರ್ ನಿಂದಲೇ ನಿರೀಕ್ಷೆ ಹುಟ್ಟುಹಾಕಿರುವ ರಾಝಿ ಮೇ 11ರಂದು ರಿಲೀಸ್ ಆಗಲಿದೆ.