Tag: ರಾಜ್ ಬಿ.ಶೆಟ್ಟಿ

  • ಬೆಂಗಳೂರಿನಲ್ಲಿ ಮಂಗಳೂರು ʻಕರಾವಳಿʼ – ರಾಜ್‌ ಬಿ ಶೆಟ್ಟಿ ಹೊಗಳಿದ ಪ್ರಜ್ವಲ್ ದೇವರಾಜ್‌

    ಬೆಂಗಳೂರಿನಲ್ಲಿ ಮಂಗಳೂರು ʻಕರಾವಳಿʼ – ರಾಜ್‌ ಬಿ ಶೆಟ್ಟಿ ಹೊಗಳಿದ ಪ್ರಜ್ವಲ್ ದೇವರಾಜ್‌

    ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ವಿಭಿನ್ನ ಕಥಾಹಂದರವಿರುವ ಸಿನಿಮಾ `ಕರಾವಳಿ’ (Karavali Cinema). ಈ ಚಿತ್ರದ ವಿಶೇಷ ದೃಶ್ಯದ ಶೂಟಿಂಗ್‌ ಅನ್ನು ಬೆಂಗಳೂರಿನ ಹೊರವಲಯದಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿದೆ. ಈ ವೇಳೆ ನಾಯಕ ಪ್ರಜ್ವಲ್ ದೇವರಾಜ್, ನಾಯಕಿ ಸಂಪದಾ, ನಟ ಮಿತ್ರ, ಶ್ರೀಧರ್, ನಿರ್ದೇಶಕ ರವಿ ಗಾಣಿಗ ಸೇರಿ ಇಡೀ ಚಿತ್ರತಂಡ ಹಾಜರಿತ್ತು. ಕರಾವಳಿ ಸಿನಿಮಾದ ವಿಶೇಷ ದೃಶ್ಯದ ಶೂಟಿಂಗ್ ವೇಳೆ ʻಪಬ್ಲಿಕ್ ಟಿವಿʼ (Public TV) ಜೊತೆ ನಟ ಪ್ರಜ್ವಲ್ ದೇವರಾಜ್ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ.

    ʻಕರಾವಳಿʼ ಸಿನಿಮಾದ ಶೂಟಿಂಗ್‌ ಅನ್ನು ಕರಾವಳಿ ಭಾಗದಲ್ಲೇ 99 ಭಾಗದ ಚಿತ್ರೀಕರಣ ಮಾಡಲಾಗಿದೆ. ಇದೊಂದು ಸೀನ್ ಮಾತ್ರ ಬೆಂಗಳೂರಿನಲ್ಲಿ (Bengaluru) ಮಾಡ್ತಿದ್ದೀವಿ. ಕರಾವಳಿ ಸಿನಿಮಾ ನನ್ನ ಕರಿಯರ್‌ನಲ್ಲೇ ಫಿಸಿಕಲಿ ಮೆಂಟಲಿ ಸ್ಟ್ರೇನಿಂಗ್‌ ಕ್ಯಾರೆಕ್ಟರ್. ಸಿನಿಮಾ ಶೂಟಿಂಗ್ ವೇಳೆ ಸಾಕಷ್ಟು ಇಂಜುರಿ.. ಬ್ರೇಕ್ಸ್.. ಕಟ್ಸ್ ಆಯ್ತು ಸರಿ ಮಾಡ್ಕೊಂಡು ಚಿತ್ರೀಕರಣ ಮಾಡಿದ್ದೇವೆ. ತುಂಬಾ ಇಷ್ಟಪಟ್ಟು ಕಷ್ಟಪಟ್ಟು ಮಾಡಿದ ಸಿನಿಮಾ ಕರಾವಳಿಯಾಗಿದೆ. ಅಮ್ಮ ನನ್ನ ಯಾವುದೇ ಶೂಟಿಂಗ್ ಇದ್ದಾಗಲೂ ಸೆಟ್‌ಗೆ ಬರುತ್ತಿದ್ದರು. ಆದರೆ ಈಗ ಅಮ್ಮನಿಗೆ ಹುಷಾರಿಲ್ಲ ಹಾಗಾಗಿ ಅಮ್ಮನಿಗಾಗಿ ಕೆಲ ದೃಶ್ಯಗಳನ್ನ ತಗೊಂಡು ಹೋಗಿ ತೋರಿಸಿದೆ. ಈ ಸಿನಿಮಾದ ಕೆಲವು ದೃಶ್ಯ ನೋಡಿ ಶಾಕ್ ಆದ್ರು. ಅಮ್ಮ ಪ್ರಸಂಶೆ ಕೊಟ್ಟಿದ್ದಾರೆ. ಅಷ್ಟೇ ಸಾಕು ಎನ್ನಿಸಿತು ಎಂದಿದ್ದಾರೆ ನಟ ಪ್ರಜ್ವಲ್ ದೇವರಾಜ್.

    ಇಂತಹ ವಿಭಿನ್ನ ಸಿನಿಮಾ ಮಾಡಬೇಕಾದಾಗ ಟೈಂ ತೆಗೆದುಕೊಳ್ಳುತ್ತೆ. ಈ ಸಿನಿಮಾದಲ್ಲಿ ಡಿಫರೆಂಟ್ ಶೇಡ್ಸ್ ಇವೆ. ಸಿನಿಮಾದ ಪಾತ್ರಕ್ಕಾಗಿ ಸಾಕಷ್ಟು ತಯಾರಿಯನ್ನ ಮೊದಲೇ ಮಾಡಿಕೊಂಡಿದ್ದೆ. ರಾಜ್ ಬಿ ಶೆಟ್ಟಿಯವರ (Raj B Shetty) ಜೊತೆ ಅಭಿನಯ ಮಾಡಿದ್ದು ಖುಷಿಕೊಟ್ಟಿದೆ. ಅವರಿಗೆ ಸಿನಿಮಾ ಮೇಲಿರುವ ಪ್ರೀತಿ ನೋಡಿದ್ರೆ ತುಂಬಾ ಖುಷಿ ಅನ್ನಿಸುತ್ತೆ. ಈ ಸಿನಿಮಾವನ್ನ ಕನ್ನಡದ ಜನರಿಗಾಗಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಅದಾಗಿಯೇ ಬೇರೆ ಭಾಷೆಗೆ ಡಿಮ್ಯಾಂಡ್ ಬಂದಾಗ ಮಾಡುವ ಪ್ರಯತ್ನ ಮಾಡುತ್ತೇವೆ. ಆದರೆ ನಮ್ಮ ಉದ್ದೇಶ ನಮ್ಮ ಪ್ರಾದೇಶಿಕ ಜನರಿಗೆ ಈ ಸಿನಿಮಾವನ್ನ ತಲುಪಿಸಬೇಕು ಎಂದಿದ್ದಾರೆ ಡೈನಾಮಿಕ್ ಪ್ರಿನ್ಸ್.

    ಪ್ರಜ್ವಲ್ ಸಿನಿಮಾ ಜರ್ನಿಯಲ್ಲೇ ಈ ಸಿನಿಮಾ ತುಂಬಾ ಸ್ಪೆಷಲ್ ಅಂತಾ ಹೇಳಲಾಗ್ತಿದೆ. ಇನ್ನು ಇಡೀ ಚಿತ್ರತಂಡ ಮಾತನಾಡಿ, ತಮ್ಮ ಶೂಟಿಂಗ್ ಅನುಭವ ಹಂಚಿಕೊಂಡಿದೆ. ಸದ್ಯ ಶೂಟಿಂಗ್ ಕಂಪ್ಲೀಟ್ ಮಾಡಿರುವ ಕರಾವಳಿ ಈ ವರ್ಷದ ಕೊನೆಯಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

  • `ಕೆಲಸ ಇದೆ ಮತ್ತೆ ಸಿಗ್ತೀನಿ’ ಅಂತ ಇನ್‌ಸ್ಟಾದಿಂದ ದಿಢೀರ್ ದೂರಾದ ರಾಜ್ ಬಿ ಶೆಟ್ಟಿ

    `ಕೆಲಸ ಇದೆ ಮತ್ತೆ ಸಿಗ್ತೀನಿ’ ಅಂತ ಇನ್‌ಸ್ಟಾದಿಂದ ದಿಢೀರ್ ದೂರಾದ ರಾಜ್ ಬಿ ಶೆಟ್ಟಿ

    ಟ, ನಿರ್ದೇಶಕ, ನಿರ್ಮಾಪಕ ರಾಜ್ ಬಿ ಶೆಟ್ಟಿ (Raj B Shetty) ಇನ್ನು ಹಲವು ದಿನಗಳ ಕಾಲ ಇನ್‌ಸ್ಟಾಗ್ರಾಂನಿಂದ ದೂರ ಇರೋದಾಗಿ ಘೋಷಣೆ ಮಾಡಿದ್ದಾರೆ. ಹಾಗಂತ ಇನ್‌ಸ್ಟಾದಿಂದ ಪರ್ಮನೆಂಟ್‌ ಆಗಿ ದೂರಾಗ್ತೀನಿ ಅಂತ ಅವರು ಹೇಳಿಲ್ಲ. ಕೆಲಸದ ಮೇಲೆ ಗಮನ ಹರಿಸಬೇಕಾಗಿದೆ, ಸದ್ಯಕ್ಕೆ ಇನ್‌ಸ್ಟಾದಿಂದ ದೂರ ಇರ್ತೀನಿ, ಇನ್ಮುಂದೆ ನನ್ನ ತನ್ನ ಟೀಮ್ ಇದನ್ನು ಮುಂದುವರೆಸುತ್ತದೆ ಎಂದು ಹೇಳಿದ್ದಾರೆ.

    ಸು ಫ್ರಂ ಸೋ (Su From So) ಚಿತ್ರದ ಮೂಲಕ ಇತ್ತೀಚೆಗೆ ಭಾರಿ ಟ್ರೆಂಡ್‌ನಲ್ಲಿರೋ ಸ್ಟಾರ್ ರಾಜ್ ಬಿ ಶೆಟ್ಟಿ, ಸದಾ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಎಂಗೇಜ್ ಆಗಿರೋ ವ್ಯಕ್ತಿತ್ವದವರು ಅಲ್ಲ. ಆದರೂ ಆಗಾಗ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡ್ತಿದ್ದ ಶೆಟ್ರು ಇದೀಗ ಆ ಕಾಯಕಕ್ಕೂ ಬ್ರೇಕ್ ಹಾಕೋದಾಗಿ ಪೋಸ್ಟ್ ಮೂಲಕವೇ ತಿಳಿಸಿದ್ದಾರೆ. ಮೂಲಗಳ ಪ್ರಕಾರ ಮತ್ತೊಂದು ಚಿತ್ರದ ತಯಾರಿಯಲ್ಲಿರುವ ರಾಜ್, ಅದಕ್ಕಾಗಿ ಸ್ಕ್ರಿಪ್ಟ್ ಮಾಡಬೇಕಾದ ಕಾರಣಕ್ಕೆ ಸೋಶಿಯಲ್ ಮೀಡಿಯಾದಿಂದ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಸಭ್ಯ ಕಾಮೆಂಟ್ – 5 ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ FIR

    ಅನುಶ್ರೀ ಮದುವೆಯಲ್ಲಿ ರಾಜ್ ಬಿ ಶೆಟ್ಟಿ ಕಾಣಿಸ್ಕೊಂಡ್ರು. ಇದೀಗ ಮತ್ತೆ ಅಜ್ಞಾತ ಸ್ಥಳಕ್ಕೆ ತೆರಳಿ ಕೆಲಸದೊಂದಿಗೆ ಮರಳಲಿದ್ದಾರೆ ಎನ್ನಲಾಗ್ತಿದೆ. ಸೋಶಿಯಲ್ ಮೀಡಿಯಾದಿಂದ ದೂರ ಇರ್ತೀನಿ ಅಂತ ಅಧಿಕೃತ ಘೋಷಣೆ ಮಾಡಿರುವ ಶೆಟ್ರಿಗೆ ಭಾರೀ ಶುಭಾಷಯದ ಸುರಿಮಳೆ ಬರ್ತಿದೆ. ಮತ್ತೊಂದು ಒಳ್ಳೆಯ ಸಿನಿಮಾದೊಂದಿಗೆ ವಾಪಸ್ಸಾಗಿ ಎಂಬ ಕಾಮೆಂಟ್ಸ್ ಬಂದಿದೆ. ಜೊತೆಗೆ ಸು ಫ್ರಂ ಸೋ ನೂರು ಕೋಟಿ ಕಲೆಕ್ಷನ್ ಮಾಡಿರೋದಕ್ಕೆ ಶೆಟ್ರು ದುಡ್ಡು ಎಣಿಸೋಕೆ ಹೋಗ್ತಿರಬೇಕು ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ಏನೇ ಇದ್ರೂ ರಾಜ್ ಬಿ ಶೆಟ್ಟಿ ಆಲೋಚನೆ ವಿಭಿನ್ನವಾಗಿಯೇ ಇರುತ್ತದೆ.

  • ‘ಮಾವೀರ’ನಾಗಿ ಎಂಟ್ರಿ ಕೊಟ್ಟ ಸು ಫ್ರಂ ಸೋ ಕರುಣಾಕರ ಗುರೂಜಿ

    ‘ಮಾವೀರ’ನಾಗಿ ಎಂಟ್ರಿ ಕೊಟ್ಟ ಸು ಫ್ರಂ ಸೋ ಕರುಣಾಕರ ಗುರೂಜಿ

    ಮಾವೀರ…ರಾಜ್ ಬಿ ಶೆಟ್ಟಿ (Raj B Shetty) ಅವರ ಹೊಸ ಪಾತ್ರದ ಹೆಸರು..ಸದ್ಯ ಕರುಣಾಕರ ಗುರೂಜಿಯಾಗಿ ಅಭಿಮಾನಿಗಳ ಹೃದಯ ಗೆದ್ದಿರುವ ರಾಜ್ ಬಿ ಶೆಟ್ಟಿ ಇದೀಗ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಅಂದಹಾಗೆ ಮಾವೀರನಾಗಿ ರಾಜ್ ಶೆಟ್ಟಿ ಕಾಣಿಸಿಕೊಳ್ಳುತ್ತಿರುವುದು ಈಗಾಗಲೇ ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವುದು ಕರಾವಳಿ ಸಿನಿಮಾದಲ್ಲಿ.

    ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕರಾವಳಿ (Karavali Movie) ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಕರಾವಳಿ ಸಿನಿಮಾಗೆ ರಾಜ್ ಬಿ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ರಾಜ್ ಎಂಟ್ರಿ ಇಂದ ಕರಾವಳಿ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಸದ್ಯ ರಾಜ್ ಬಿ ಶೆಟ್ಟಿ ಅವರ ಪಾತ್ರ ಪರಿಚಯದ ಟೀಸರ್ ರಿಲೀಸ್ ಆಗಿದೆ.

    ರಾಜ್ ಬಿ ಶೆಟ್ಟಿ ಲುಕ್ ಆಕರ್ಷಕವಾಗಿದ್ದು, ಯಾವ ಪಾತ್ರ ಎನ್ನುವ ಕುತೂಹಲ ಹೆಚ್ಚಾಗಿದೆ. ಎರಡು ಕೋಣಗಳ ಮಧ್ಯೆ ನಿಂತು ದಿಟ್ಟಿಸಿ ನೋಡುತ್ತಿರುವ ರಾಜ್ ಬಿ ಶೆಟ್ಟಿ ಒಂದು ಕೈಯಲ್ಲಿ ಪಂಜು ಹಿಡಿದು ಕಾಣಿಸಿಕೊಂಡಿದ್ದಾರೆ. ರಾಜ್ ಲುಕ್ ನೋಡುತ್ತಿದ್ದರೆ ಕಂಬಳ ಓಡಿಸುವ ಓಟಗಾರನ ಅಥವಾ ಕಂಬಳ ನಡೆಸುವ ಕುಟುಂಬದ ಮಾವೀರ ಎನ್ನುವುದು ಕುತೂಹಲ ಮೂಡಿಸಿದೆ. ರಾಜ್ ಪಾತ್ರದ ಬಗ್ಗೆ ಸಿನಿಮಾ ತಂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ ಲುಕ್ ರಿಲೀಸ್ ಮಾಡುವ ಮೂಲಕ ಕರಾವಳಿ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ ಸಿನಿಮಾ ತಂಡ.

    ಈಗಾಗಲೇ ಕರಾವಳಿ ಸಿನಿಮಾದಿಂದ ರಿಲೀಸ್ ಆಗಿರುವ ಪೋಸ್ಟರ್ ಮತ್ತು ಟೀಸರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೀಗ ರಾಜ್ ಬಿ ಶೆಟ್ಟಿ ಪೋಸ್ಟರ್ ಮತ್ತಷ್ಟು ಆಕರ್ಷಕವಾಗಿದ್ದು, ಸಿನಿಮಾದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕರಾವಳಿಯಲ್ಲಿ ನಟ ಮಿತ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ರಮೇಶ್ ಇಂದಿರಾ ಅವರ ಪಾತ್ರ ಕೂಡ ಸಿಕ್ಕಾಪಟ್ಟೆ ಪವರ್ಫುಲ್ ಆಗಿದೆ. ನಾಯಕಿಯಾಗಿ ಸಂಪದಾ ಕಾಣಿಸಿಕೊಂಡಿದ್ದಾರೆ.

    ಕರಾವಳಿ ಹೆಸರೇ ಹೇಳುವ ಹಾಗೆ ಬಹುತೇಕ ಸಿನಿಮಾ ಕರಾವಳಿಯ ಸುತ್ತಮುತ್ತನೇ ಚಿತ್ರೀಕರಣಗೊಂಡಿದೆ. ಈ ಸಿನಿಮಾ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಗಾಣಿಗ ಫಿಲ್ಮ್ಸ್‌ನಲ್ಲಿ ನಿರ್ಮಾಣಾಗುತ್ತಿದೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯೂ ಸದಾನಂದನ್ ಅವರ ಕ್ಯಾಮರಾ ವರ್ಕ್ ಚಿತ್ರಕ್ಕಿದೆ.

  • ರಾಜ್ ಬಿ ಶೆಟ್ಟಿ ಹೊಸ ಸಾಹಸ – ಸು ಫ್ರಮ್ ಸೋ ಸಾಂಗ್ ರಿಲೀಸ್

    ರಾಜ್ ಬಿ ಶೆಟ್ಟಿ ಹೊಸ ಸಾಹಸ – ಸು ಫ್ರಮ್ ಸೋ ಸಾಂಗ್ ರಿಲೀಸ್

    ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ (Lighter Buddha Films) ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣಗೊಂಡ `ಸು ಫ್ರಮ್ ಸೋ’ (Su From So) ಕನ್ನಡ ಸಿನಿಮಾದ ಡ್ಯಾಂಕ್ಸ್ ಅಂಥಮ್ ವಿಡಿಯೋ ಸಾಂಗ್ ಬಿಡುಗಡೆ ಆಗಿ ಜನರ ಮನ ಸೆಳೆಯುತ್ತಿದೆ. ಮುಂದೆ ಎಲ್ಲಾ ಪಾರ್ಟಿ ಹಾಗೂ ಇತರೆ ಕಾರ್ಯಕ್ರಮದಲ್ಲಿ ಈ ಹಾಡು ಕೇಳಿಸೋದು ಕನ್ಫರ್ಮ್ ಅನ್ನಿಸುತ್ತಿದೆ.

     

    ಈ ಹಾಡಿಗೆ ಸಾಹಿತ್ಯ ರಾಜ್ ಬಿ ಶೆಟ್ಟಿ (Raj B Shetty) ಅವರದ್ದು ಅನುರಾಗ್ ಕುಲಕರ್ಣಿ (Anurag Kulkarni) ಅವರು ಸೊಗಸಾಗಿ ಹಾಡಿದ್ದಾರೆ ಹಾಗೂ ಸುಮೇಧ್ ಕೆ ಅವರು ಉತ್ತಮ ಸಂಗೀತ ನೀಡಿದ್ದಾರೆ. ಇದರ ನೃತ್ಯ ಸಂಯ್ಯೋಜನೆಯನ್ನು ವಿನಾಯಕ ಆಚಾರ್ಯ ಮಾಡಿದ್ದಾರೆ. ಈ ಹಾಡಿನಲ್ಲಿ ಜೆಪಿ ತುಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡು (Thuminad), ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಅರ್ಜುನ್ ಕಜೆ ಹಾಗೂ ಇತರರು ಹೆಜ್ಜೆ ಹಾಕಿದ್ದಾರೆ.

    ಸು ಫ್ರಮ್ ಸೋ ಸಿನಿಮಾವನ್ನು ಜೆಪಿ ತುಮಿನಾಡು ನಟಿಸಿ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ಎಸ್ ಚಂದ್ರಸೆಕರನ್ ಕಾರ್ಯ ನಿರ್ವಹಿಸಿದ್ದಾರೆ. ಈ ಸಿನಿಮಾವನ್ನು ಶಶಿಧರ್ ಶೆಟ್ಟಿ ಬರೋಡಾ, ರವಿ ರೈ ಕಳಸ, ರಾಜ್ ಬಿ ಶೆಟ್ಟಿ ಮೂವರು ಸೇರಿ ಅದ್ದೂರಿ ಯಾಗಿ ನಿರ್ಮಿಸಿದ್ದಾರೆ. ಸಂದೀಪ್ ತುಳಸಿದಾಸ್ ಅವರ ಹಿನ್ನೆಲೆ ಸಂಗೀತ ಇರುವ ಈ ಚಿತ್ರಕ್ಕಿದೆ ಅರ್ಜುನ್ ರಾಜ್ ಸಾಹಸ ಸಂಯೋಜನೆ ಮಾಡಿದ್ದಾರೆ.

    ಮಂಗಳೂರು ಸುತ್ತಮುತ್ತಲಿನ ಊರಾದ ವೇಣೂರು, ಕಕ್ಯಪದವು ಹಾಗು ಇತರ ಕಡೆ ಸಿನಿಮಾ 50 ದಿನಗಳ ಕಾಲ ಚಿತ್ರಕರಣಗೊಂಡು ಇದೀಗ ಮುಂದಿನ ತಿಂಗಳು ಬಿಡುಗಡೆಯಾಗುತ್ತಿದೆ.

  • ಪ್ರಯಾಗ್‌ರಾಜ್‌ನಿಂದ ಕಾಶಿಗೆ ಬಂದ ರಾಜ್ ಬಿ ಶೆಟ್ಟಿ, ಆ್ಯಂಕರ್ ಅನುಶ್ರೀ

    ಪ್ರಯಾಗ್‌ರಾಜ್‌ನಿಂದ ಕಾಶಿಗೆ ಬಂದ ರಾಜ್ ಬಿ ಶೆಟ್ಟಿ, ಆ್ಯಂಕರ್ ಅನುಶ್ರೀ

    ಹಾ ಕುಂಭಮೇಳದಲ್ಲಿ ನಟ ರಾಜ್ ಬಿ ಶೆಟ್ಟಿ, ಅನುಶ್ರೀ (Anchor Anushree) ಭಾಗಿಯಾದ ಬಳಿಕ ಸದ್ಯ ಕಾಶಿಯಲ್ಲಿದ್ದಾರೆ. ಸ್ನೇಹಿತರ ಜೊತೆ ರಾಜ್ ಮತ್ತು ಅನುಶ್ರೀ ಕಾಲ ಕಳೆಯುತ್ತಿದ್ದಾರೆ. ಕಾಶಿಗೆ ಭೇಟಿ ನೀಡಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ಕುಂಭಮೇಳದಲ್ಲಿ ಅನುಶ್ರೀ, ರಾಜ್ ಬಿ ಶೆಟ್ಟಿ (Raj B Shetty) ಮತ್ತು ಸ್ನೇಹಿತರು ಪವಿತ್ರಾ ಸ್ನಾನ ಮಾಡಿ ದೇವರ ದರ್ಶನ ಪಡೆದ ಬಳಿಕ ಪ್ರಯಾಗ್‌ರಾಜ್‌ನಿಂದ ಕಾಶಿಗೆ ಆಗಮಿಸಿದ್ದಾರೆ. ಅಲ್ಲಿನ ಬೀದಿ ನಾಯಿ ಜೊತೆ ಸಮಯ ಕಳೆಯುತ್ತಾ ನಟ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಕುರಿತ ಸುಂದರ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮಿಸ್ಟರಿ ಮ್ಯಾನ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಖುಷಿ ಕಪೂರ್

     

    View this post on Instagram

     

    A post shared by Raj B Shetty (@rajbshetty)

    ಇನ್ನೂ ಅನುಶ್ರೀ ರಿಯಾಲಿಟಿ ಶೋ ನಿರೂಪಣೆಯಲ್ಲಿ ಬ್ಯುಸಿಯಿದ್ರೆ, ರಾಜ್ ಬಿ ಶೆಟ್ಟಿ ಕೈಯಲ್ಲಿ ಹಲವು ಸಿನಿಮಾಗಳಿವೆ. ಕನ್ನಡ, ಮಲಯಾಳಂ, ಹಿಂದಿ ಚಿತ್ರಗಳಲ್ಲಿ ರಾಜ್ ಬಿ ಶೆಟ್ಟಿ ತೊಡಗಿಸಿಕೊಂಡಿದ್ದಾರೆ.

    ಇನ್ನೂ ಕನ್ನಡದ ಟೋಬಿ, ಮಲಯಾಳಂ ‘ಟರ್ಬೊ’ ಚಿತ್ರದಲ್ಲಿನ ರಾಜ್ ಬಿ ಶೆಟ್ಟಿ ನಟನೆ ನೋಡಿ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಅವರ ಮುಂಬರುವ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

  • ಕೊರಳಿನಲ್ಲಿ ರುದ್ರಾಕ್ಷಿ ಮಾಲೆ, ಹಣೆಯಲ್ಲಿ ಶ್ರೀರಾಮ್‌ – ಕುಂಭಮೇಳದಲ್ಲಿ ಭಾಗಿಯಾದ ರಾಜ್‌ ಬಿ ಶೆಟ್ಟಿ

    ಕೊರಳಿನಲ್ಲಿ ರುದ್ರಾಕ್ಷಿ ಮಾಲೆ, ಹಣೆಯಲ್ಲಿ ಶ್ರೀರಾಮ್‌ – ಕುಂಭಮೇಳದಲ್ಲಿ ಭಾಗಿಯಾದ ರಾಜ್‌ ಬಿ ಶೆಟ್ಟಿ

    ಪ್ರಯಾಗ್‌ರಾಜ್‌: ಮಹಾ ಕುಂಭಮೇಳದಲ್ಲಿ (Maha Kumbh Mela) ನಟ, ನಿರ್ದೇಶಕ ರಾಜ್‌ ಬಿ ಶೆಟ್ಟಿ (Raj B Shetty), ನಟಿ, ನಿರೂಪಕಿ ಅನುಶ್ರೀ (Anushree) ಚಾರ್ಲಿ ಸಿನಿಮಾ ನಿರ್ದೇಶಕ ಕಿರಣ್ ರಾಜ್ (Kiran Raj) ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

    ರಾಜ್‌ ಬಿ ಶೆಟ್ಟಿ ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಧರಿಸಿ ಹಣೆಯಲ್ಲಿ  ಶ್ರೀರಾಮ್‌ ಎಂದು ಬರೆದುಕೊಂಡಿದ್ದಾರೆ.

    ಕುಂಭಮೇಳದಲ್ಲಿ ಭಾಗಿಯಾದ ಬಗ್ಗೆ ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ರಾಜ್‌ ಬಿ ಶೆಟ್ಟಿ, ನಾವು ಬೆಂಗಳೂರಿನ ಸ್ನೇಹಿತರ ಜೊತೆ ಕುಂಭಮೇಳಕ್ಕೆ ಆಗಮಿಸಿದ್ದೇವೆ. ನಿನ್ನೆ ನಾವು ಪವಿತ್ರ ಸ್ನಾನ ಮಾಡಿದೆವು ಎಂದು ತಿಳಿಸಿದರು.

    ಮೌನಿ ಅಮಾವಾಸ್ಯೆಯಂದೇ ನೀವು ಸ್ನಾನ ಮಾಡಲು ತೆರಳಿದ್ದೀರಾ ಎಂಬ ಪ್ರಶ್ನೆಗೆ, ನಾವು ಹಾಗೆ ಯಾವುದೇ ಪ್ಲ್ಯಾನ್‌ ಮಾಡಿ ಬಂದಿಲ್ಲ. 144 ವರ್ಷಗಳಿಗೊಮ್ಮೆ ನಡೆಯುವ ಈ ಕುಂಭ ಮೇಳದಲ್ಲಿ ಭಾಗವಹಿಸುವ ಸಲುವಾಗಿ ಬಂದಿದ್ದೇವೆ. ನಮ್ಮ ಅದೃಷ್ಟ ಎಂಬಂತೆ ಮೌನಿ ಅಮವಾಸ್ಯೆಯಂದೇ ನಮಗೆ ಸ್ನಾನ ಮಾಡುವ ಅದೃಷ್ಟ ಸಿಕ್ಕಿತು ಎಂದು ಸಂತಸ ವ್ಯಕ್ತಪಡಿಸಿದರು.  ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ 30 ಮಂದಿ ಬಲಿ – ಇಂದು ಪ್ರಯಾಗ್‌ರಾಜ್‌ಗೆ ಯೋಗಿ ಭೇಟಿ

    ಕೋಟ್ಯಂತರ ಜನರು ಇಲ್ಲಿ ಭಾಗವಹಿಸುತ್ತಿದ್ದಾರೆ. ಇಷ್ಟೊಂದು ಜನರನ್ನು ನಿರ್ವಹಣೆ ಮಾಡುವುದು ಬಹಳ ಕಷ್ಟ. ಪೊಲೀಸರು ಬಹಳ ಚೆನ್ನಾಗಿ ಕೆಲಸ ಮಾಡಿ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

     

    ಬಹಳ ದೂರ ನಡೆದುಕೊಂಡೇ ಪವಿತ್ರ ಸ್ನಾನ ಮಾಡಲು ಬರಬೇಕು. ಆಧ್ಯಾತ್ಮಿಕವಾಗಿ ಇದೊಂದು ಪವಿತ್ರ ಕಾರ್ಯಕ್ರಮ. ಇಂದು ನಾವು ಅಖಾಡಗಳಿಗೆ ಭೇಟಿ ನೀಡಲಿದ್ದೇವೆ ಎಂದು ಹೇಳಿದರು.

     

  • ಅಪರ್ಣಾ ಬಾಲಮುರಳಿ ಜೊತೆ ರಾಜ್ ಬಿ ಶೆಟ್ಟಿ ಮತ್ತೊಂದು ಮಲಯಾಳಂ ಸಿನಿಮಾ

    ಅಪರ್ಣಾ ಬಾಲಮುರಳಿ ಜೊತೆ ರಾಜ್ ಬಿ ಶೆಟ್ಟಿ ಮತ್ತೊಂದು ಮಲಯಾಳಂ ಸಿನಿಮಾ

    ನ್ನಡದ ನಟ ರಾಜ್ ಬಿ ಶೆಟ್ಟಿ (Raj B Shetty) ಅವರು ಮಮ್ಮುಟ್ಟಿಗೆ ವಿಲನ್ ಆಗಿ ನಟಿಸಿ ಗೆದ್ಮೇಲೆ ಇದೀಗ ಮತ್ತೊಂದು ಮಲಯಾಳಂ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅಪರ್ಣಾ (Aparna Balamurali) ಜೊತೆ ‘ರುಧಿರಂ’ (Rudhiram) ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ.

    ಬಹುಭಾಷೆಗಳಲ್ಲಿ ಮೂಡಿ ಬರಲಿರುವ ‘ರುಧಿರಂ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಜೇನು ಸಾಕಾಣಿಕೆ ವ್ಯಕ್ತಿಯಾಗಿ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಅದಷ್ಟೇ ಅಲ್ಲ, ಹಲವು ಶೇಡ್‌ಗಳಲ್ಲಿ ನಟ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ಹೀರೋನಾ? ವಿಲನ್ ಪಾತ್ರನಾ? ಎಂಬ ಕುತೂಹೂಲ ನೋಡುಗರಿಗೆ ಮೂಡಿದೆ.

     

    View this post on Instagram

     

    A post shared by Rudhiram (@rudhiramthemovie)

    ಇಡೀ ಟೀಸರ್‌ನಲ್ಲಿ ರಾಜ್ ಬಿ ಶೆಟ್ಟಿ, ಅಪರ್ಣಾ ಮತ್ತು ಒಂದು ನಾಯಿ ಮಾತ್ರ ತೋರಿಸಲಾಗಿದೆ. ಅಲ್ಲಲ್ಲಿ ರಕ್ತ, ಕೆಲವು ಆಯುಧಗಳು, ಬಂದೂಕುಗಳು ಸಹ ಕಾಣಿಸಿಕೊಳ್ಳುತ್ತದೆ. ಇದೊಂದು ಪಕ್ಕಾ ಥ್ರಿಲ್ಲರ್ ಸಿನಿಮಾ ಆಗಿದೆ. ಇನ್ನೂ ‘ರುಧಿರಂ’ ಚಿತ್ರವನ್ನು ಜಿಶೋ ಲೋನ್ ಆಂಟನಿ ನಿರ್ದೇಶನ ಮಾಡಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಆಗಲಿದೆ. ಇದನ್ನೂ ಓದಿ:ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಪಕ ಅರುಣ್ ರೈ ವಿರುದ್ಧ ಎಫ್‌ಐಆರ್

    ಇನ್ನೂ ‘ಟೋಬಿ’ ನಟ ರಾಜ್ ಬಿ ಶೆಟ್ಟಿಗೆ ಬಾಲಿವುಡ್‌ನಿಂದಲೂ ಬುಲಾವ್ ಬಂದಿದೆ. ನಿರ್ದೇಶಕ ಅನುರಾಗ್ ಕಶ್ಯಪ್ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

  • ‘ರಕ್ಕಸಪುರದೋಳ್’ ರಾಜ್ ಬಿ ಶೆಟ್ಟಿ  ಆರ್ಭಟ

    ‘ರಕ್ಕಸಪುರದೋಳ್’ ರಾಜ್ ಬಿ ಶೆಟ್ಟಿ ಆರ್ಭಟ

    ಸಾಹಸ ನಿರ್ದೇಶಕರಾಗಿ ಭಾರತದಾದ್ಯಂತ ಜನಪ್ರಿಯರಾಗಿರುವ ಕನ್ನಡದ ಹೆಮ್ಮೆಯ ಸಾಹಸ ನಿರ್ದೇಶಕ ಕೆ.ರವಿವರ್ಮ ಅವರ ಪ್ರಥಮ ನಿರ್ಮಾಣದ, ರವಿ ಸಾರಂಗ ಚೊಚ್ಚಲ ನಿರ್ದೇಶನದ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಖ್ಯಾತರಾಗಿರುವ ರಾಜ್ ಬಿ ಶೆಟ್ಟಿ (Raj B Shetty) ನಾಯಕರಾಗಿ ನಟಿಸುತ್ತಿರುವ ‘ರಕ್ಕಸಪುರದೋಳ್’ (Rakkasapuradol) ಚಿತ್ರದ ಮುಹೂರ್ತ ಸಮಾರಂಭ ನೆಟಕಲ್ಲಪ್ಪ ಸರ್ಕಲ್ ನಲ್ಲಿರುವ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಹಬ್ಬದಂದು ಅದ್ದೂರಿಯಾಗಿ ನೆರವೇರಿತು. ನಟಿ ರಕ್ಷಿತ ಹಾಗೂ ನಿರ್ದೇಶಕ ಪ್ರೇಮ್ ಚಿತ್ರದ ಮೊದಲ ಸನ್ನಿವೇಶಕ್ಕೆ ಚಾಲನೆ ನೀಡಿ, ಶೀರ್ಷಿಕೆ ಅನಾವರಣ ಮಾಡಿದರು. ಕೆ.ವಿ.ಎನ್ ಸಂಸ್ಥೆಯ ಸುಪ್ರೀತ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

    ಸಾಹಸ ನಿರ್ದೇಶಕರಾಗಿ ಜನಪ್ರಿರಾಗಿರುವ ರವಿವರ್ಮ ಅವರು ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ದಿ ವಿಲನ್, ಏಕ್ ಲವ್ ಯಾ ,‌ ಕೆಡಿ ಮುಂತಾದ ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದ ರವಿ ಸಾರಂಗ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಜನಪ್ರಿಯ ನಟ ರಾಜ್ ಬಿ ಶೆಟ್ಟಿ ನಾಯಕರಾಗಿ ನಟಿಸುತ್ತಿದ್ದಾರೆ. ರಕ್ಕಸಪುರದೋಳ್ ಚಿತ್ರ ಚಂದನವನದಲ್ಲಿ ಭರ್ಜರಿ ಯಶಸ್ಸು ಕಾಣಲಿ ಎಂದು ರಕ್ಷಿತ – ಪ್ರೇಮ್ ದಂಪತಿ ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ರಕ್ಕಸಪುರದೋಳ್ ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ಜನರನ್ನು ಚಿತ್ರಮಂದಿರಕ್ಕೆ ಕರೆತರಲು ಬೇಕಾಗಿರುವಂತಹ ಕಥೆಯನ್ನು ನಿರ್ದೇಶಕ ರವಿ ಮಾಡಿಕೊಂಡಿದ್ದಾರೆ. ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹಿಂದಿನ ಚಿತ್ರಗಳಿಗಿಂತ ಭಿನ್ನ ಪಾತ್ರ ಎಂದರು ರಾಜ್ ಬಿ ಶೆಟ್ಟಿ.

    ಕಳೆದ ಹತ್ತು ವರ್ಷಗಳಿಂದ ಪ್ರೇಮ್ ಸರ್ ಬಳಿ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಅವರ ಸಹಕಾರ ನನಗೆ ಎಂದಿಗೂ ಇರುತ್ತದೆ. ಪ್ರೇಮ್ ಮತ್ತು ರಕ್ಷಿತ ಅವರಿಗೆ ಧನ್ಯವಾದ. “ರಕ್ಕಸ” ಎಂದರೆ ರಾಕ್ಷಸ. “ಪುರ” ಎಂದರೆ ಊರು. ರಾಕ್ಷಸರೆ ಇರುವ ಊರು ಎಂಬುದು ಈ ಶೀರ್ಷಿಕೆಯ ಅರ್ಥ. ಮನುಷ್ಯನಲ್ಲಿ ಎರಡು ಗುಣಗಳಿರುತ್ತದೆ. ಒಂದು ಒಳ್ಳೆಯದು. ಮತ್ತೊಂದು ಕೆಟ್ಟದ್ದು. ಆ ಕೆಟ್ಟ ಗುಣಗಳನ್ನು “ರಕ್ಕಸ” ಎನ್ನಬಹುದು. ನಿರ್ಮಾಪಕ ರವಿವರ್ಮ ಹಾಗೂ ನಾಯಕ ರಾಜ್ ಬಿ ಶೆಟ್ಟಿ ಅವರು ಕಥೆ ಮೆಚ್ಚಿಕೊಂಡದ್ದು ಸಂತೋಷವಾಗಿದೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದ‌ರು‌ ನಿರ್ದೇಶಕ ರವಿ ಸಾರಂಗ.

    ರವಿ ಸಾರಂಗ ಅವರು ನನಗೆ ಎರಡು ವರ್ಷಗಳ ಪರಿಚಯ ಎಂದು‌ ಮಾತು ಆರಂಭಿಸಿದ ನಿರ್ಮಾಪಕ ಕೆ.ರವಿವರ್ಮ, ಸಾಹಸ ನಿರ್ದೇಶಕನಾಗಿ ನನಗೆ ಎಲ್ಲರೂ ಪ್ರೋತ್ಸಾಹ ನೀಡಿದ್ದೀರಿ. ನಿರ್ಮಾಪಕನಾಗಿ ಇದು ಮೊದಲ ಚಿತ್ರ. ರವಿ ಸಾರಂಗ ಒಳ್ಳೆಯ ಕಥೆ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಆ ಕಥೆಯನ್ನು ಒಪ್ಪಿ ನಟಿಸುತ್ತಿದ್ದಾರೆ. ಅರ್ಜುನ್ ಜನ್ಯ‌ ಸಂಗೀತ ನಿರ್ದೇಶನ, ವಿಲಿಯಂ ಡೇವಿಡ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ,  ಮೋಹನ್ ಬಿ ಕೆರೆ ಕಲಾ ನಿರ್ದೇಶನವಿರುವ ಹಾಗೂ ನರಸಿಂಹ ಜಾಲಹಳ್ಳಿ ಅವರ ನಿರ್ಮಾಣ ನಿರ್ವಹಣೆಯಿರುವ “ರಕ್ಕಸಪುರದೋಳ್” ಚಿತ್ರಕ್ಕೆ ಕ್ರಾಂತಿ ಕುಮಾರ್ ಸಂಭಾಷಣೆ ಬರೆಯತ್ತಿದ್ದಾರೆ. ವರಮಹಾಲಕ್ಷ್ಮೀ ಹಬ್ಬದ ಶುಭ ದಿನದಂದು ರಕ್ಷಿತ – ಪ್ರೇಮ್ ಅವರು ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಒಂದೊಳ್ಳೆ ಚಿತ್ರ ನಿರ್ಮಾಣ ಮಾಡುತ್ತಿರುವ ಖುಷಿಯಿದೆ ಎಂದರು.

    ರವಿವರ್ಮ ಅವರು ಸಾಹಸ ನಿರ್ದೇಶಕರಾಗಿ ನನ್ನ ನಿರ್ದೇಶನದ ಚಿತ್ರದಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ.  ರಾಜ್ ಬಿ ಶೆಟ್ಟಿ ಅವರ ನಟನೆಯನ್ನು ಹತ್ತಿರದಿಂದ ನೋಡಿದ್ದೇನೆ. ಅವರೊಬ್ಬ ಉತ್ತಮ ಕಲಾವಿದ. ಇನ್ನು ರವಿ ಸಾರಂಗ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಇದು ಕನ್ನಡದ “ಆರ್ ಆರ್ ಆರ್” ಚಿತ್ರ. ತ್ರಿಬಲ್ ಆರ್ ತರಹ‌ ಈ ಚಿತ್ರ ಕೂಡ ಯಶಸ್ವಿಯಾಗಲಿ ಎಂದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾರೈಸಿದರು. ನಾಯಕಿ ಸ್ವಾತಿಷ್ಟ ಕೃಷ್ಣ,  ನಟ ಬಿ.ಸುರೇಶ್, ನಟಿ ಅರ್ಚನಾ ಕೊಟ್ಟಿಗೆ, ಚಿತ್ರದಲ್ಲಿ ಅಭಿನಯಿಸುತ್ತಿರುವ ಗೌರವ್ ಶೆಟ್ಟಿ, ಸಿದ್ದಣ್ಣ, ಸುಮ, ಅನಿರುದ್ದ್ ಭಟ್, ಛಾಯಾಗ್ರಾಹಕ ವಿಲಿಯಂ ಡೇವಿಡ್, ಸಂಭಾಷಣೆಕಾರ ಕ್ರಾಂತಿ ಕುಮಾರ್ ಹಾಗೂ ನರಸಿಂಹ ಜಾಲಹಳ್ಳಿ ಮುಂತಾದವರು “ರಕ್ಕಸಪುರದೋಳ್” ಚಿತ್ರದ ಕುರಿತು ಮಾತನಾಡಿದರು.

  • ಬಾಲಿವುಡ್‌ನತ್ತ ಕನ್ನಡದ ನಟ- ಬಾಬಿ ಡಿಯೋಲ್ ಜೊತೆ ರಾಜ್ ಬಿ ಶೆಟ್ಟಿ ಹೊಸ ಸಿನಿಮಾ

    ಬಾಲಿವುಡ್‌ನತ್ತ ಕನ್ನಡದ ನಟ- ಬಾಬಿ ಡಿಯೋಲ್ ಜೊತೆ ರಾಜ್ ಬಿ ಶೆಟ್ಟಿ ಹೊಸ ಸಿನಿಮಾ

    ನ್ನಡದ ಪ್ರತಿಭಾನ್ವಿತ ನಟ ರಾಜ್ ಬಿ ಶೆಟ್ಟಿಗೆ (Raj B Shetty) ಬೇಡಿಕೆ ಹೆಚ್ಚಾಗಿದೆ. ಮಾಲಿವುಡ್ ಬಳಿಕ ಬಾಲಿವುಡ್‌ನಿಂದ (Bollywood) ಕನ್ನಡದ ಈ ನಟನಿಗೆ ಬುಲಾವ್ ಬಂದಿದೆ. ಸ್ಟಾರ್ ನಿರ್ದೇಶಕನ ಸಿನಿಮಾದಲ್ಲಿ ನಟಿಸುವ ಚಾನ್ಸ್ ಸಿಕ್ಕಿದೆ.

    ಮಮ್ಮುಟ್ಟಿ ಜೊತೆ ನಟಿಸಿ ಫಳಗಿದ ಮೇಲೆ ರಾಜ್ ಬಿ ಶೆಟ್ಟಿಗೆ ಮತ್ತಷ್ಟು ಅವಕಾಶಗಳು ಅರಸಿ ಬರುತ್ತಿವೆ. ಸದ್ಯ ಬಾಲಿವುಡ್ ಡೈರೆಕ್ಟರ್ ಅನುರಾಗ್ ಕಶ್ಯಪ್ (Anurag Kashyap) ನಿರ್ದೇಶನದಲ್ಲಿ ನಟಿಸಲು ರಾಜ್‌ರನ್ನು ಕೇಳಲಾಗಿದೆ. ಇದನ್ನೂ ಓದಿ:ಪತ್ರಕರ್ತ ಹರೀಶ್ ನಟನೆಯ ‘ಕ್ರೆಡಿಟ್ ಕುಮಾರ’ ಚಿತ್ರಕ್ಕೆ ಸರ್ಜಾ ಚಾಲನೆ

    ಅವರ ಸಿನಿಮಾದಲ್ಲಿ ಕ್ಯಾಮಿಯೋ ಪಾತ್ರವಾಗಿದ್ರೂ ಅದಕ್ಕೆ ಪ್ರಾಮುಖ್ಯತೆ ಇದ್ದು, ನಟಿಸಲು ರಾಜ್ ಬಿ ಶೆಟ್ಟಿ ಓಕೆ ಎಂದಿದ್ದಾರೆ. ‘ಅನಿಮಲ್‌’ ಖ್ಯಾತಿಯ ನಟ ಬಾಬಿ ಡಿಯೋಲ್ (Bobby Deol) ಜೊತೆ ರಾಜ್‌ ಬಿ ಶೆಟ್ಟಿ ಕಾಣಿಸಿಕೊಳ್ತಿದ್ದಾರೆ. ಸದ್ಯದಲ್ಲೇ ಅನುರಾಗ್ ಕಶ್ಯಪ್ ಸಿನಿಮಾ ಟೈಟಲ್ ಮತ್ತು ತಾರಾಬಳಗದ ಬಗ್ಗೆ ಅವರೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

    ಅಂದಹಾಗೆ, ಅರ್ಜುನ್ ಜನ್ಯ ನಿರ್ದೇಶನದ ’45’ ಎಂಬ ಸಿನಿಮಾದಲ್ಲಿ ಶಿವಣ್ಣ ಮತ್ತು ಉಪೇಂದ್ರ ಜೊತೆ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾದ ಬಗ್ಗೆ ಮಾಹಿತಿ ಸಿಗಲಿದೆ.

  • ಅರೇಬಿಕ್ ಭಾಷೆಗೆ ಡಬ್ ಆಯ್ತು ರಾಜ್ ಬಿ ಶೆಟ್ಟಿ ನಟನೆಯ ಸಿನಿಮಾ

    ಅರೇಬಿಕ್ ಭಾಷೆಗೆ ಡಬ್ ಆಯ್ತು ರಾಜ್ ಬಿ ಶೆಟ್ಟಿ ನಟನೆಯ ಸಿನಿಮಾ

    ‘ಒಂದು ಮೊಟ್ಟೆಯ ಕಥೆ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ (Raj B Shetty) ಇತ್ತೀಚೆಗೆ ‘ರೂಪಾಂತರ’ ಎಂಬ ಚಿತ್ರದ ಮೂಲಕ ಮೋಡಿ ಮಾಡಿದ್ದರು. ಇದರ ನಡುವೆ ಅವರು ನಟಿಸಿದ ಸಿನಿಮಾ ಒಂದು ಅರೇಬಿಕ್ ಭಾಷೆಗೆ ಡಬ್ ಆಗಿ ರಿಲೀಸ್‌ಗೆ ಸಿದ್ಧವಾಗಿದೆ.

    ರಾಜ್ ಬಿ ಶೆಟ್ಟಿ ಅವರು ಇತ್ತೀಚೆಗೆ ಮಮ್ಮುಟ್ಟಿಗೆ ವಿಲನ್ ಆಗಿ ‘ಟರ್ಬೋ’ (Turbo Film) ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದ ನಟನೆಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವೆಟ್ರಿವೇಲ್ ಷಣ್ಮುಖಂ ಎಂಬ ಹೆಸರಿನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಗಮನ ಸೆಳೆದಿದ್ದರು. ಈಗ ಇದೇ ಚಿತ್ರ ಅರೇಬಿಕ್ ಭಾಷೆಗೆ ಡಬ್ ಆಗಿ ಸದ್ಯದಲ್ಲೇ ರಿಲೀಸ್ ಆಗಲಿದೆ.

    ಗಲ್ಫ್ ರಾಷ್ಟ್ರದಲ್ಲಿ ‘ಟರ್ಬೋ’ ಚಿತ್ರ ರಿಲೀಸ್ ಆಗುತ್ತಿದೆ. ಇದು ಅರೇಬಿಕ್ ಭಾಷೆಗೆ ಡಬ್ ಆದ ಮೊದಲ ಭಾರತೀಯ ಸಿನಿಮಾ ಅನ್ನೋದು ವಿಶೇಷ. ಇದನ್ನೂ ಓದಿ:ತೆಲುಗಿನಲ್ಲಿ ಬಿಗ್ ಚಾನ್ಸ್- ಪ್ರಭಾಸ್‌ಗೆ ಮೃಣಾಲ್ ಠಾಕೂರ್ ಜೋಡಿ

    ಅಂದಹಾಗೆ, ರಾಜ್ ಬಿ ಶೆಟ್ಟಿ ಸದ್ಯ ಅರ್ಜುನ್ ಜನ್ಯ ನಿರ್ದೇಶನದ ’45’ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಕಿರುತೆರೆ ನಟಿ ಕೌಸ್ತುಭ ಮಣಿ ನಟಿಸಿದ್ದಾರೆ.