Tag: ರಾಜ್ ಬಹದ್ದೂರ್

  • ಹೊಸಬರ ‘ಅಸುರರು’ ಚಿತ್ರದ ಟೀಸರ್ ರಿಲೀಸ್

    ಹೊಸಬರ ‘ಅಸುರರು’ ಚಿತ್ರದ ಟೀಸರ್ ರಿಲೀಸ್

    ‘ಹುಲಿಬೇಟೆ’ ಸಿನಿಮಾ ಮೂಲಕ ಭೂಗತ ಲೋಕದ ಪ್ರೇಮಕಥೆ ಹೇಳಿದ್ದ ನಿರ್ದೇಶಕ ರಾಜ್ ಬಹದ್ದೂರ್ (Raj Bahuddur) ಈಗ ದರೋಡೆ ಕಥೆ ಹೊತ್ತು ಬಂದಿದ್ದಾರೆ. ‘ಅಸುರರು’ (Asuraru) ಸಿನಿಮಾ ಟೀಸರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ವಸಂತನಗರದಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದಿದೆ. ಇದನ್ನೂ ಓದಿ:ಮಾನ್ವಿತಾ, ಶ್ರೇಯಶ್ ಸೂರಿ ನಟನೆಯ ‘ಒನ್ ಅಂಡ್ ಆ ಹಾಫ್’ ಚಿತ್ರದ ಸಾಂಗ್ ರಿಲೀಸ್

    ಈ ವೇಳೆ ನಿರ್ದೇಶಕ ರಾಜ್ ಬಹದ್ದೂರ್ ಮಾತನಾಡಿ, ಈ ಹಿಂದೆ ನಾನು ‘ಹುಲಿಬೇಟೆ’ (Hulibete Film) ಸಿನಿಮಾ ಮಾಡಿದ್ದೆ. ತಾತಾ ಹೇಳುತ್ತಿದ್ದ ಕಥೆ ಇದು. ಚಿಕ್ಕಂದಿನಿಂದ್ದಾಗ ಕಥೆ ಕೇಳಿ ರೋಮಾಂಚನವಾಗುತ್ತಿತ್ತು. ಅಂದು ನನಗೆ ತಲೆಯಲ್ಲಿತ್ತು. ಈ ಹಿಂದೆ ನಮಗೆ ಗೊತ್ತಿಲ್ಲದ ವಿಷಯ ತುಂಬಾ ನಡೆದಿದೆ. ಅಂತಹ ವಿಷಯವನ್ನು ಜನರಿಗೆ ಪರಿಚಯಿಸಬೇಕು ಎಂದಾಗ ‘ಅಸುರರು’ ಸಿನಿಮಾ ಮಾಡಿದ್ದು. ಅಸುರರು ಅಂದರೆ ರಾಕ್ಷಸರರು. ಇವರು ಬೇರೆ. ಇವರು ಊರಿನ ಜನಗಳ ಮಧ್ಯೆ ಇರುತ್ತಿರಲಿಲ್ಲ. ಇವರ ಕೆಲಸ ಕಳ್ಳತನ ದರೋಡೆ ಮಾಡುವುದು. ಅವರೇ ಅಸುರರು ಎಂದು ತಿಳಿಸಿದರು.

    ನಾಯಕ ತಮ್ಮಣ್ಣ ಮಾತನಾಡಿ, ಸಿನಿಮಾ ಇಲ್ಲಿವರೆಗೂ ಬರಲು ಕಾರಣ ಇಡೀ ಸಿನಿಮಾ ತಂಡ. ಎಲ್ಲರೂ ಎಲ್ಲಾ ಕೆಲಸ ಮಾಡಿದ್ದಾರೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿದೆ ಎಂದರು. ‘ಅಸುರರು’ (Asuraru) ಚಿತ್ರಕ್ಕೆ ರಾಜ್ ಬಹದ್ದೂರ್ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ಪ್ರಮುಖ ಪಾತ್ರದಲ್ಲಿಯೂ ನಟಿಸಿದ್ದಾರೆ. ಅಲ್ಲದೇ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ರಾಜ್ ಬಹದ್ದೂರ್ ಜೊತೆಯಲ್ಲಿ ರಾಹುಲ್ ಗಾಯಕವಾಡ, ತಿಪ್ಪಣ್ಣ ಟಿ.ಎಸ್, ಮಲ್ಲಿಕಾರ್ಜುನ್ ಮಿಮಿಕ್ರಿ, ಸುಪ್ರಿತಾ ರಾಜ್ ತಾರಾಬಳಗದಲ್ಲಿದ್ದಾರೆ.

    ರಾಜ್ ಬಹದ್ದೂರ್ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ನಿರ್ಮಾಣವಾಗಿರುವ ‘ಅಸುರರು’ ಸಿನಿಮಾಗೆ ಸುರೇಶ್ ಅರಸ್ ಸಂಕಲನ, ಸುಭಾಷ್ ಸಂಗೀತ, ನವೀನ್ ಸೂರ್ಯ ಛಾಯಾಗ್ರಹಣ ಒದಗಿಸಿದ್ದಾರೆ. ನೈಜ ಘಟನೆಯಾಧಾರಿತ ‘ಅಸುರರು’ ಸಿನಿಮಾದಲ್ಲಿ ದರೋಡೆ ಕಥೆಯನ್ನು ಕಟ್ಟಿಕೊಡಲಾಗಿದೆ.

  • ರಜನಿಕಾಂತ್  ಆಪ್ತಮಿತ್ರ ರಾಜ್ ಬಹದ್ದೂರ್ ಚಿತ್ರಕ್ಕೆ ಮುಹೂರ್ತ

    ರಜನಿಕಾಂತ್ ಆಪ್ತಮಿತ್ರ ರಾಜ್ ಬಹದ್ದೂರ್ ಚಿತ್ರಕ್ಕೆ ಮುಹೂರ್ತ

    ಶಿವಪೂರ್ಣ(ಲೋಕೇಶ್) ಹಾಗೂ ಮುತ್ತುರಾಜ್ ನಿರ್ಮಾ‌ಣ ಮಾಡುತ್ತಿರುವ, ಆರೋನ್ ಕಾರ್ತಿಕ್ ನಿರ್ದೇಶನದ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಆಪ್ತಮಿತ್ರ ರಾಜ್ ಬಹದ್ದೂರ್ (Raj Bahadur) ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ ‘ಶಿವಾಜಿ ಬಹದ್ದೂರ್’  (Shivaji Bahadur) ಚಿತ್ರದ ಮುಹೂರ್ತ ಸಮಾರಂಭ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ನಿರ್ದೇಶಕ ಹೆಚ್ ವಾಸು, ಸ್ವಸ್ತಿಕ್ ಶಂಕರ್, ನಟ ಷಣ್ಮುಖ ಗೋವಿಂದರಾಜು, ಗಾಯಕ ಆಲೂರು ನಾಗಪ್ಪ, ಸಿರಿ ಮ್ಯೂಸಿಕ್ ಚಿಕ್ಕಣ್ಣ ಸೇರಿದಂತೆ ಸಾಕಷ್ಟು ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

    ಶಿವಾಜಿ ಬಹದ್ದೂರ್ ಎಂದರೆ ಎರಡು ಪಾತ್ರಗಳ ಹೆಸರು ಎಂದು ಮಾತನಾಡಿದ ನಿರ್ದೇಶಕ ಆರೋನ್ ಕಾರ್ತಿಕ್ (Aaron Karthik), ನಮ್ಮ ಚಿತ್ರದಲ್ಲಿ ಶಿವಾಜಿ ಎಂಬುದು ಪ್ರಧಾನ ಮಂತ್ರಿ ಪಾತ್ರದ ಹೆಸರು. ಬಹದ್ದೂರ್ ಎಂದರೆ ಮುಖ್ಯಮಂತ್ರಿ ಪಾತ್ರದ ಹೆಸರು. ಶಿವಾಜಿ ಪಾತ್ರದ ಧ್ವನಿ ಮಾತ್ರ ಸಿನಿಮಾದಲ್ಲಿ ಕೇಳುತ್ತದೆ. ಬಹದ್ದೂರ್ ಅಂದರೆ ಮುಖ್ಯಮಂತ್ರಿ ಪಾತ್ರದಲ್ಲಿ ರಾಜ್ ಬಹದ್ದೂರ್ ನಟಿಸುತ್ತಿದ್ದಾರೆ. ಪ್ರಪಂಚಕ್ಕೆ ಮಾರಕವಾಗಿರುವ ಉಗ್ರವಾದ(ಭಯೋತ್ಪಾದನೆ) ತಡೆಗಟ್ಟಲು ಹೋರಾಡುವ ಉತ್ತಮ ಮುಖ್ಯಮಂತ್ರಿಯಾಗಿ ರಾಜ್ ಬಹದ್ದೂರ್ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ವಿಲನ್ ಪಾತ್ರದಲ್ಲಿ ಖ್ಯಾತ ನಟ ಅಮೀರ್ ಖಾನ್ ಸಹೋದರ ಫೈಸಲ್ ಖಾನ್ ನಟಿಸಲಿದ್ದಾರೆ. “ರಂಗಿನ ರಾಟೆ” ಖ್ಯಾತಿಯ ರಾಜೀವ್ ರಾಥೋಡ್, ಪಲ್ಲವಿ ಪ್ರಕಾಶ್, ಸುಶ್ಮಿತ, ಶೋಭ, ಗಣೇಶ್ ರಾವ್ ಮುಂತಾದವರು ಮುಖ್ಯಭೂಮಿಕೆಯಲ್ಲಿದ್ದಾರೆ. ಸಂಗೀತ ನಿರ್ದೇಶನವನ್ನು ನಾನೇ ಮಾಡುತ್ತಿದ್ದೇನೆ ಎಂದು ತಿಳಿಸಿದರು.

    ರಜನಿಕಾಂತ್ ಹಾಗೂ ತಮ್ಮ ಸ್ನೇಹದ ಕುರಿತು ಮಾಹಿತಿ ನೀಡಿದ ನಟ ರಾಜ್ ಬಹದ್ದೂರ್, ರಜನಿಕಾಂತ್ ಅವರಿಗೆ ನಾನು ಈ ಚಿತ್ರದಲ್ಲಿ ನಟಿಸುತ್ತಿರುವ ವಿಷಯ ತಿಳಿಸಿದೆ. ತುಂಬಾ ಖುಷಿಪಟ್ಟರು. ಚಿತ್ರ ಸಿದ್ದವಾದ ಮೇಲೆ ಬಂದು ನೋಡುವುದಾಗಿಯೂ ಹೇಳಿದ್ದಾರೆ. ನಾನು ಈ ಹಿಂದೆ ರಜನಿ ಅವರ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದೆ. ಮೈನ್ ಲೀಡ್ ನಲ್ಲಿ ನಟಿಸುತ್ತಿರುವ ಮೊದಲ ಚಿತ್ರವಿದು. ನಾನು ನಟಿಸುತ್ತಿರುವ ವಿಷಯ ತಿಳಿದು ಇಲ್ಲಿನ ರಜನಿಕಾಂತ್ ಅಭಿಮಾನಿಗಳು ತುಂಬಾ ಸಂತೋಷ ಪಟ್ಟಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಕಾಯುತ್ತಿರುವುದಾಗಿಯೂ ಹೇಳಿದ್ದಾರೆ. ರಜನಿಕಾಂತ್ ಅಭಿಮಾನಿಗಳು ಸಿನಿಮಾ ನೋಡಿದರೆ ಸಿನಿಮಾ ಗೆದ್ದ ಹಾಗೆ ಎಂದರು ನಟ ರಾಜ್ ಬಹದ್ದೂರ್.

    ನಮ್ಮ ಮೊದಲ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ಮಾಪಕರಾದ ಶಿವಪೂರ್ಣ ಹಾಗೂ ಮುತ್ತುರಾಜ್. ಚಿತ್ರದಲ್ಲಿ ನಟಿಸುತ್ತಿರುವ ರಾಜೀವ್ ರಾಥೋಡ್, ಪಲ್ಲವಿ ಪ್ರಕಾಶ್, ಸುಶ್ಮಿತ, ಶೋಭ, ಗಣೇಶ್ ರಾವ್ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.