Tag: ರಾಜ್ ಪತ್ತಿಪಾಟಿ

  • ಕಾಮಿಡಿ, ಲವ್, ಆ್ಯಕ್ಷನ್, ಫ್ಯಾಂಟಸಿ ಹದವಾಗಿ ಬೆರೆತ ‘ಕಾಣದಂತೆ ಮಾಯಾದನು’

    ಕಾಮಿಡಿ, ಲವ್, ಆ್ಯಕ್ಷನ್, ಫ್ಯಾಂಟಸಿ ಹದವಾಗಿ ಬೆರೆತ ‘ಕಾಣದಂತೆ ಮಾಯಾದನು’

    ಜಯಮ್ಮನ ಮಗ ಖ್ಯಾತಿಯ ನಿರ್ದೇಶಕ ವಿಕಾಸ್ ಹಾಗೂ ಸಿಂಧು ಲೋಕನಾಥ್ ನಟಿಸಿರುವ `ಕಾಣದಂತೆ ಮಾಯವಾದನು’ ಚಿತ್ರ ಇಂದು ಯಶಸ್ವಿಯಾಗಿ ತೆರೆಕಂಡಿದೆ. ಟ್ರೈಲರ್, ಹಾಡುಗಳ ಮೂಲಕ ಎಲ್ಲರ ಮನೆಗೆದ್ದಿದ್ದ ಚಿತ್ರ ಚಿತ್ರಮಂದಿರದಲ್ಲೂ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

    ‘ಕಾಣದಂತೆ ಮಾಯವಾದನು’ ಒಂದು ಕುತೂಹಲ ಭರಿತ ಸಿನಿಮಾವಾಗಿದ್ದು, ಚಿತ್ರದುದ್ದಕ್ಕೂ ಟ್ವಿಸ್ಟ್ ಅಂಡ್ ಟನ್ಸ್ರ್ಗಳು ಸಖತ್ ಮನರಂಜನೆಯನ್ನು ನೀಡುತ್ತೆ. ರಮ್ಮಿ ಚಿತ್ರದ ನಾಯಕ. ರೌಡಿ ಜಯಣ್ಣನಿಂದ ಕೊಲೆಯಾಗುವ ರಮ್ಮಿ ಮತ್ತೆ ಭೂತವಾಗಿ ಬಂದು ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ. ಹಾಗೆಯೇ ತನ್ನನ್ನು ಸಾಯಿಸಿದವನ ಮೇಲೆ ಯಾವ ರೀತಿ ರಿವೇಂಜ್ ತೀರಿಸಿಕೊಳ್ಳುತ್ತಾನೆ ಎಂದು ಫ್ಯಾಂಟಸಿ ರೂಪದಲ್ಲಿ ಕಟ್ಟಿಕೊಡಲಾಗಿದೆ.

    ವಿಭಿನ್ನ ಕಥಾಹಂದರ ಚಿತ್ರದಲ್ಲಿದ್ದು ಹೊಸ ಅಭಿರುಚಿಯಲ್ಲಿ ಕಟ್ಟಿಕೊಡೋ ಪ್ರಯತ್ನವನ್ನು ಮಾಡಲಾಗಿದೆ. ಅಲ್ಲಲ್ಲಿ ಕೊಂಚ ಲ್ಯಾಗ್ ಅನ್ಸಿದ್ರು ಹಾಸ್ಯ, ಆ್ಯಕ್ಷನ್ ಸೀಕ್ವೆನ್ ಗಳು ಅದನ್ನು ಸರಿದೂಗಿಸಿಕೊಂಡು ಹೋಗಿದೆ. ಧರ್ಮಣ್ಣ ಕಡೂರ್ ತಮ್ಮ ಹಾಸ್ಯದ ಮೂಲಕ ಎಲ್ಲರನ್ನು ನಕ್ಕು ನಗಿಸುತ್ತಾರೆ. ಇನ್ನು ಕಾಮಿಡಿ, ಆ್ಯಕ್ಷನ್, ಡಾನ್ಸ್ ಎಲ್ಲಾ ಕಡೆಗಳಲ್ಲೂ ವಿಕಾಸ್ ಅಭಿನಯ ಭರವಸೆಯನ್ನು ಮೂಡಿಸಿದ್ದು. ಸಿಂಧು ಲೋಕನಾಥ್ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಒಟ್ಟಿನಲ್ಲಿ ಒಂದೊಳ್ಳೆ ಮನರಂಜನೆಯನ್ನು ಚಿತ್ರಮಂದಿರದ ಒಳಗೆ ಹೋದವರಿಗೆ ನೀಡುವಲ್ಲಿ ಚಿತ್ರ ಯಶಸ್ವಿಯಾಗಿದೆ.

    ಚಿತ್ರ: ಕಾಣದಂತೆ ಮಾಯವಾದನು
    ನಿರ್ದೇಶಕ: ರಾಜ್ ಪತ್ತಿಪಾಟಿ
    ನಿರ್ಮಾಪಕ: ಚಂದ್ರಶೇಖರ್ ನಾಯ್ಡು
    ಸಂಗೀತ: ಗುಮ್ಮಿನೇನಿ ವಿಜಯ್
    ಛಾಯಾಗ್ರಹಣ: ಸುಜ್ಞಾನ್
    ತಾರಾಂಗಣ: ವಿಕಾಸ್, ಸಿಂಧು ಲೋಕನಾಥ್, ರಾಘವ್ ಉದಯ್, ಭಜರಂಗಿ ಲೋಕಿ, ಇತರರು

    ರೇಟಿಂಗ್: 3.5/5

  • ಥಿಯೇಟರ್‌ನಿಂದ ಹೊರ ಬಂದ್ರು ‘ಕಾಣದಂತೆ ಮಾಯವಾದನು’ ಪ್ರೇಕ್ಷಕರ ತಲೆಯಲ್ಲಿರುತ್ತೆ!

    ಥಿಯೇಟರ್‌ನಿಂದ ಹೊರ ಬಂದ್ರು ‘ಕಾಣದಂತೆ ಮಾಯವಾದನು’ ಪ್ರೇಕ್ಷಕರ ತಲೆಯಲ್ಲಿರುತ್ತೆ!

    ಸ್ಯಾಂಡಲ್‍ವುಡ್‍ನಲ್ಲಿ ನಿರ್ದೇಶಕ, ಪೋಷಕ ನಟನಾಗಿ ಗುರುತಿಸಿಕೊಂಡಿದ್ದ ವಿಕಾಸ್ ನಾಯಕ ನಟನಾಗಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ರಾಜ್ ಪಾತಿಪಾಟಿ ನಿರ್ದೇಶನದಲ್ಲಿ ಮೂಡಿಬಂದಿರೋ ಕಾಣದಂತೆ ಮಾಯವಾದನು ಚಿತ್ರದಲ್ಲಿ ವಿಕಾಸ್, ಸಿಂಧು ಲೋಕ್‍ನಾಥ್ ಜೋಡಿಯಾಗಿ ಅಭಿನಯಿಸಿದ್ದು, ಸಖತ್ ಕ್ಯೂರಿಯಾಸಿಟಿಯನ್ನು ಸ್ಯಾಂಡಲ್‍ವುಡ್‍ನಲ್ಲಿ ಈ ಚಿತ್ರ ಹುಟ್ಟಿಸಿದೆ.

    ಸಿನಿ ಪ್ರೇಕ್ಷಕನಿಗೆ ಬೇಕಾದ ಲವ್ ಆಕ್ಷನ್ ಹಾರಾರ್, ಸೆಂಟಿಮೆಂಟ್ ಎಲ್ಲಾ ಕಂಟೆಟ್ ಚಿತ್ರದಲ್ಲಿದ್ದೂ 5ಲಕ್ಕಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ ಚಿತ್ರದ ಟ್ರೈಲರ್. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರದ ಮೆಲೋಡಿ ಹಾಡಿಗೆ ದನಿಯಾಗುವುದರ ಜೊತೆಗೆ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಪವರ್ ಸ್ಟಾರ್ ಹಾಡಿರುವ ಹಾಡು ಸೂಪರ್ ಹಿಟ್ ಆಗಿದ್ದು ಗುಮ್ಮಿನೇನಿ ವಿಜಯ್ ಸಂಗೀತ ಮ್ಯಾಜಿಕ್ ಕ್ರಿಯೇಟ್ ಮಾಡಿದೆ. ಚಿತ್ರದ ಪ್ಯಾಥೊ ಹಾಡಿಗೆ ವಿಜಯ್ ಪ್ರಕಾಶ್ ದನಿಯಾಗಿದ್ದು, ವಿ.ನಾಗೇಂದ್ರ ಪ್ರಸಾಧ್, ಚೇತನ್ ಕುಮಾರ್ ಸಾಹಿತ್ಯ ಕೃಷಿ ಚಿತ್ರಕ್ಕಿದೆ.

    ಆಕ್ಷನ್ ಸೀಕ್ವೆನ್ಸ್ ಗಳು ಚಿತ್ರದಲ್ಲಿದ್ದು ಲೀಲಾಜಾಲವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ನಟ ವಿಕಾಸ್. ಚಿತ್ರದ ಮೊದಲ ಹಾಗೂ ಕೊನೆಯ ದೃಶ್ಯ ಇದುವರೆಗೂ ಕನ್ನಡ ಸಿನಿಮಾದಲ್ಲಿ ಬಂದಿಲ್ಲ. ಸಿನಿಮಾ ನೋಡಿ ಥಿಯೇಟರ್ ನಿಂದ ಹೊರ ಬಂದ ಮೇಲೆ ಬಹಳ ದಿನ ಪ್ರೇಕ್ಷರ ತಲೆಯಲ್ಲಿರುತ್ತೆ ಎಂದು ವಿಕಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ ಚಿತ್ರದ ತಾರಾಬಳಗವೂ ದೊಡ್ಡದಿದ್ದು ಸುಚೇಂದ್ರ ಪ್ರಸಾಧ್, ಅಚ್ಯುತ್ ಕುಮಾರ್, ಭಜರಂಗಿ ಲೋಕಿ, ರಾಘವ್ ಉದಯ್, ಧರ್ಮಣ್ಣ ಕಾಣದಂತೆ ಮಾಯವಾದನ್ನು ಬಳಗದಲ್ಲಿ ಬಣ್ಣ ಹಚ್ಚಿದ್ದಾರೆ. ಸೆನ್ಸಾರ್ ನಲ್ಲಿ ಯು/ಎ ಸರ್ಟಿಫಿಕೇಟ್ ಪಡೆದಿರೋ ಈ ಚಿತ್ರ ಇಂದು ಬಿಡುಗಡೆಯಾಗಿದೆ. ಅಚ್ಯುತ್ ಕುಮಾರ್, ಭಜರಂಗಿ ಲೋಕಿ , ಧರ್ಮಣ್ಣ ಚಿತ್ರದಲ್ಲಿ ನಟಿಸಿದ್ದು ಸ್ಟಾರ್ ಸಿನಿಮಾಟೋಗ್ರಾಫರ್ ಸುಜ್ಞಾನ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ.

  • ಇದೇ ಸಿನಿ ಶುಕ್ರವಾರ ತೆರೆಗೆ ಬರಲಿದೆ ಬಹು ನಿರೀಕ್ಷಿತ ‘ಕಾಣದಂತೆ ಮಾಯವಾದನು’ ಚಿತ್ರ

    ಇದೇ ಸಿನಿ ಶುಕ್ರವಾರ ತೆರೆಗೆ ಬರಲಿದೆ ಬಹು ನಿರೀಕ್ಷಿತ ‘ಕಾಣದಂತೆ ಮಾಯವಾದನು’ ಚಿತ್ರ

    ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿರುವ ‘ಕಾಣದಂತೆ ಮಾಯವಾದನು’ ಚಿತ್ರ ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಟಾಕ್ ಕ್ರಿಯೇಟ್ ಮಾಡಿದೆ. ನಿರ್ದೇಶಕರಾಗಿದ್ದ ವಿಕಾಸ್ ನಟನಾಗಿ ಗಾಂಧಿನಗರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ವಿಕಾಸ್, ಸಿಂಧು ಲೋಕನಾಥ್ ಜೋಡಿಯಾಗಿ ನಟಿಸಿರುವ ಚಿತ್ರದ ಟ್ರೈಲರ್ ಗೆ ಸಿನಿ ಪ್ರೇಕ್ಷಕ ಕ್ಲೀನ್ ಬೋಲ್ಡ್ ಆಗಿದ್ದು, ಚಿತ್ರ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.

    ಚಿತ್ರದಲ್ಲಿ ಲವರ್ ಬಾಯ್, ಆ್ಯಕ್ಷನ್ ಹೀರೋ ಆಗಿ ಮಿಂಚಿರುವ ವಿಕಾಸ್‍ಗೆ ಈ ಚಿತ್ರವನ್ನು ಒಪ್ಪಿಕೊಳ್ಳಲು ಕಥೆಯೇ ಪ್ರೇರಣೆ. ರಾಜ್ ಪಾತ್ತಿಪಾಟಿ ಚಿತ್ರದ್ರ ಸೂತ್ರಧಾರ. ಇನೋಸೆಂಟ್ ಪ್ರೇಮಕಥೆ ಚಿತ್ರದಲ್ಲಿದ್ದು, ಅದ್ರ ಜೊತೆಗೆ ಹಾರಾರ್, ಸಸ್ಪೆನ್ಸ್ ಹಾಗೂ ಥ್ರಿಲ್ ಕೊಡೊ ಎಲಿಮೆಂಟ್‍ಗಳು ಚಿತ್ರದಲ್ಲಿವೆ. ಒಟ್ಟಿನಲ್ಲಿ ಸಿನಿಮಾ ನೋಡಲು ಚಿತ್ರಮಂದಿರದ ಒಳಗೆ ಹೋದ ಪ್ರೇಕ್ಷಕರನಿಗೆ ಮನೋರಂಜನೆಯ ಮಹಾಪೂರದ ಜೊತೆ ಬೇರೆಯದ್ದೆ ಪ್ರಪಂಚ ಕಾಣಸಿಗಲಿದೆ ಎನ್ನುವುದು ಚಿತ್ರತಂಡದ ಮಾತು.

    ಕಥೆ ಈ ಚಿತ್ರದ ಜೀವಾಳವಾದರೆ ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಚಿತ್ರದ ಮತ್ತೊಂದು ಶಕ್ತಿ. ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದು ಗುಮ್ಮಿನೇನಿ ವಿಜಯ್ ಮ್ಯೂಸಿಕ್ ಗಾನಪ್ರಿಯರ ಮನಸೆಳೆದಿದೆ. ಚಿತ್ರದ ಮೆಲೋಡಿ ಹಾಡೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದನಿಯಾಗಿದ್ದು ಈ ಹಾಡು ಸಖತ್ ವೈರಲ್ ಆಗೋದ್ರ ಜೊತೆ ಎಲ್ಲರ ಫೇವರೇಟ್ ಆಗಿದೆ.

    ಚಿತ್ರದ ಪ್ರತಿ ತುಣುಕಿಗಳು ಸೋಶಿಯಲ್ ಮೀಡಿಯಾದಲ್ಲಿ ಬೊಂಬಾಟ್ ರೆಸ್ಪಾನ್ಸ್ ಪಡೆದುಕೊಂಡಿದ್ದು ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಅಚ್ಯುತ್ ಕುಮಾರ್, ಭಜರಂಗಿ ಲೋಕಿ, ರಾಘವ್ ಉದಯ್ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಕಾಣದಂತೆ ಮಾಯವಾದನು: ಟ್ಯಾಗ್ ಲೈನ್ ಕೊಟ್ಟು ಬಂಪರ್ ಬಹುಮಾನ ಗೆಲ್ಲೋ ಅವಕಾಶ!

    ಕಾಣದಂತೆ ಮಾಯವಾದನು: ಟ್ಯಾಗ್ ಲೈನ್ ಕೊಟ್ಟು ಬಂಪರ್ ಬಹುಮಾನ ಗೆಲ್ಲೋ ಅವಕಾಶ!

    ದುನಿಯಾ ವಿಜಯ್ ಅಭಿನಯದ ಜಯಮ್ಮನ ಮಗ ಚಿತ್ರವನ್ನು ನಿರ್ದೇಶನ ಮಾಡಿ ಗೆಲುವು ಕಂಡಿದ್ದವರು ವಿಕಾಸ್. ಈ ಮೂಲಕವೇ ಯಶಸ್ವೀ ನಿರ್ದೇಶಕರಾಗಿಯೂ ಗುರುತಿಸಿಕೊಂಡ ವಿಕಾಸ್ ಆ ನಂತರದಲ್ಲಿ ಒಂದಷ್ಟು ಕಾಲ ಗ್ಯಾಪ್ ತೆಗೆದುಕೊಂಡು ಇದೀಗ ಕಾಣದಂತೆ ಮಾಯವಾದನು ಚಿತ್ರದ ಹೀರೋ ಆಗಿ ಪ್ರತ್ಯಕ್ಷರಾಗಿದ್ದಾರೆ. ಈಗಾಗಲೇ ಟ್ರೈಲರ್ ಮುಖೇನ ಅಲೆಯೆಬ್ಬಿಸಿರೋ ಈ ಸಿನಿಮಾ ತಂಡ ಪ್ರೇಕ್ಷಕರಿಗೊಂದು ಭರ್ಜರಿ ಸ್ಪರ್ಧೆ ಏರ್ಪಡಿಸಿದೆ. ಇದಕ್ಕೆ ಬಂಪರ್ ಬಹುಮಾನವನ್ನೂ ಕೊಡಲು ತಯಾರಾಗಿದೆ.

    ಕಾಣದಂತೆ ಮಾಯವಾದನು ಚಿತ್ರವೀಗ ತೆರೆಗಾಣುವ ಸನ್ನಾಹದಲ್ಲಿದೆ. ಈ ಹೊತ್ತಿನಲ್ಲಿಯೇ ಇದಕ್ಕೊಂದು ಸೂಕ್ತವಾದ ಟ್ಯಾಗ್ ಲೈನ್ ಹುಡುಕಾಟದಲ್ಲಿ ಚಿತ್ರತಂಡ ನಿರತವಾಗಿದೆ. ಈಗಾಗಲೇ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆಯಲ್ಲಾ? ಅದನ್ನು ಆನಂದ್ ಆಡಿಯೂ ಯೂಟ್ಯೂಬ್ ಚಾನೆಲ್ ಮೂಲಕ ಒಮ್ಮೆ ವೀಕ್ಷಿಸಿ ಅದಕ್ಕೆ ತಕ್ಕುದಾದ ಟ್ಯಾಗ್ ಲೈನ್ ಅನ್ನು ಕಮೆಂಟ್ ಬಾಕ್ಸ್ ಮೂಲಕ ಸೂಚಿಸಬಹುದು. ಹೀಗೆ ಒಂದು ಸಲ ಕಮೆಂಟ್ ಬಾಕ್ಸ್ ಮೂಲಕ ಒಂದೇ ಟ್ಯಾಗ್ ಲೈನ್ ಅನ್ನು ಸೂಚಿಸಬಹುದು. ಆದರೆ ಒಬ್ಬರು ಎಷ್ಟು ಟ್ಯಾಗ್ ಲೈನುಗಳನ್ನಾದರೂ ಬಿಡಿ ಬಿಡಿಯಾಗಿ ದಾಖಲಿಸಬಹುದು. ಇದರಲ್ಲಿ ಆಯ್ಕೆಯಾದ ಟ್ಯಾಗ್ ಲೈನಿಗೆ ಐವತ್ತು ಸಾವಿರ ರೂಪಾಯಿ ಬಹುಮಾನ ನೀಡಲು ಚಿತ್ರತಂಡ ತೀರ್ಮಾನಿಸಿದೆ. ಇದು ಅಂತಿಮಗೊಳ್ಳುತ್ತಲೇ ಬಿಡುಗಡೆಯ ದಿನಾಂಕ ಘೋಷಣೆ ಮಾಡಲೂ ಚಿತ್ರತಂಡ ಯೋಜನೆ ಹಾಕಿಕೊಂಡಿರುವಂತಿದೆ.

    ಸದರಿ ಟ್ರೈಲರ್ ಮೂಲಕವೇ ಕಾಣದಂತೆ ಮಾಯವಾದನು ಭಿನ್ನ ಜಾಡಿನ ಹಾರರ್ ಕಥಾನಕ ಹೊಂದಿರೋ ಚಿತ್ರವೆಂಬುದು ಸಾಬೀತಾಗಿದೆ. ಆತ್ಮದ ಪ್ರೇಮವೃತ್ತಾಂತ ಹೊಂದಿರೋ ಕಾಣದಂತೆ ಮಾಯವಾದನು ಸಿನಿಮಾ ಪಕ್ಕಾ ಆಕ್ಷನ್ ಮೂವಿಯಾಗಿಯೂ ಎದುರುಗೊಳ್ಳಲು ರೆಡಿಯಾಗಿದೆ. ಇದರೊಂದಿಗೆ ನಿರ್ದೇಶರಾಗಿದ್ದ ವಿಕಾಸ್ ಆಕ್ಷನ್ ಹೀರೋ ಆಗಿ ಅವತರಿಸುವ ಕಾತರದಲ್ಲಿದ್ದಾರೆ. ನಿರ್ದೇಶಕ ರಾಜ್ ಪತ್ತಿಪಾಟಿ ಕನ್ನಡಕ್ಕೆ ಅಪರೂಪವಾದಂಥಾ ಕಥೆಯೊಂದಿಗೆ ಈ ಚಿತ್ರವನ್ನು ರೋಚಕವಾಗಿ ಕಟ್ಟಿ ಕೊಟ್ಟಿದ್ದಾರೆ.

    https://www.youtube.com/watch?v=GNaimyGV1m4

  • ಕಾಣದಂತೆ ಮಾಯವಾದನು ಟ್ರೈಲರ್‌‌ಗೆ ಪವರ್ ಸ್ಟಾರ್ ಫಿದಾ!

    ಕಾಣದಂತೆ ಮಾಯವಾದನು ಟ್ರೈಲರ್‌‌ಗೆ ಪವರ್ ಸ್ಟಾರ್ ಫಿದಾ!

    ಬೆಂಗಳೂರು: ಕೆಲ ಚಿತ್ರಗಳು ತಡವಾದಷ್ಟೂ ಕ್ಯೂರಿಯಾಸಿಟಿ ಹುಟ್ಟಿಸುತ್ತಾ ಸಾಗುತ್ತವೆ. ಅದು ಸಾಧ್ಯವಾಗೋದು ಒಳಗೇನೇ ವಿಶೇಷವಾದ ಕಂಟೆಂಟು, ಕ್ರಿಯೇಟಿವಿಟಿಗಳಿದ್ದಾಗ ಮಾತ್ರ. ಸದ್ಯ ಟ್ರೈಲರ್ ಮೂಲಕ ಎಲ್ಲೆಡೆ ಮೆಚ್ಚುಗೆ ಗಳಿಸಿಕೊಂಡಿರೋ ರಾಜ್ ಪತ್ತಿಪಾಟಿ ನಿರ್ದೇಶನದ ಕಾಣದಂತೆ ಮಾಯವಾದನು ಚಿತ್ರ ಕೂಡಾ ಅದೇ ಮಾದರಿಯದ್ದು. ಆಗಾಗ ಮರೆಗೆ ಸರಿದಂತೆ ಕಾಣಿಸಿದ್ದರೂ ಕೂಡಾ ಈ ಸಿನಿಮಾ ಅಡಿಗಡಿಗೆ ಸದ್ದು ಮಾಡಿದ್ದು ಕ್ರಿಯೇಟಿವಿಟಿಯಿಂದಲೇ. ಕೆಲ ದಿನಗಳ ಹಿಂದೆ ಬಿಡುಗಡೆಯಾಗಿರೋ ಟ್ರೈಲರ್ ಅಂತೂ ಇದೊಂದು ವಿಶಿಷ್ಟ ಚಿತ್ರ ಎಂಬುದನ್ನು ಪಕ್ಕಾ ಮಾಡಿದೆ.

    ಈ ಟ್ರೈಲರ್ ಅನ್ನು ವೀಕ್ಷಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೂ ಕೂಡಾ ಇದೀಗ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಟ್ರೈಲರಿನ ದೃಷ್ಯಾವಳಿಗಳೇ ಇದರಲ್ಲೇನೋ ಇದೆ ಎಂಬುದನ್ನು ಸೂಚಿಸುವಂತಿವೆ. ಕಮರ್ಶಿಯಲ್ ಸೇರಿದಂತೆ ಎಲ್ಲ ಅಂಶಗಳೂ ಮಿಳಿತವಾದಂತಿವೆ. ಈ ಚಿತ್ರಕ್ಕೆ ಯಶ ಸಿಗಲಿ ಅನ್ನುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಪವರ್ ಸ್ಟಾರ್ ಕಡೆಯಿಂದಲೇ ಇಂಥಾ ಮಾತುಗಳು ಬಂದಿರೋದರಿಂದ ಚಿತ್ರತಂಡವೂ ಖುಷಿಗೊಂಡಿದೆ.

    ಈ ಮೂಲಕ ವಿಕಾಸ್ ಅವರ ಹೊಸಾ ಅನ್ವೇಷಣೆಗೂ ಗೆಲುವಿನ ಮುನ್ಸೂಚನೆ ಸಿಕ್ಕಮತಾಗಿದೆ. ಅಷ್ಟಕ್ಕೂ ಈ ಟ್ರೈಲರ್ ನೋಡಿದ ಪ್ರತಿಯೊಬ್ಬರೂ ಕಥೆಯ ಜಾಡಿನ ಜೊತೆಗೇ ವಿಶಾಲ್ ಅವರ ನಟನೆಯನ್ನೂ ಮೆಚ್ಚಿಕೊಂಡಿದ್ದಾರೆ. ಆತ್ಮವೊಂದರ ಪ್ರೇಮಕಥೆ, ರಿವೇಂಜಿನ ಸ್ಟೋರಿ ಹೊಂದಿರೀ ಈ ಚಿತ್ರ ಮಾಮೂಲಿ ಶೈಲಿಯದ್ದಂತೂ ಅಲ್ಲ ಎಂಬ ವಿಚಾರವೂ ಈ ಮೂಲಕವೇ ಸಾಬೀತಾಗಿದೆ. ಅದುವೇ ಕಾಣದಂತೆ ಮಾಯವಾದವನಿಗಾಗಿ ಕಾಯುವಂತೆಯೂ ಮಾಡಿ ಬಿಟ್ಟಿದೆ.

    https://www.facebook.com/publictv/videos/323777685235397/

    ಇದು ರಾಜ್ ಪತ್ತಿಪಾಟಿ ನಿರ್ದೇಶನದ ಚಿತ್ರ. ಹಾರರ್ ಚಿತ್ರವೆಂದರೆ ಭೂತಗಳನ್ನು ಬಿಟ್ಟು ಹೆದರಿಸೋದು, ಅದಕ್ಕೆ ಸಪೋರ್ಟಿಗೆಂಬಂತೆ ಕಥೆಯೊಂದನ್ನು ಹರಿಯ ಬಿಡೋದು ಎಂಬಂಥಾ ಸೂತ್ರ ಸಾಕಷ್ಟು ಕಾಲದಿಂದಲೂ ಇದೆ. ಅದನ್ನು ಬ್ರೇಕ್ ಮಾಡುವಂತೆ ಬಂದಿರೋ ಚಿತ್ರಗಳು ವಿರಳ. ಹಾಗೆ ಬಂದವೆಲ್ಲ ಗೆದ್ದಿವೆ. ಸದ್ಯ ಕಾಣದಂತೆ ಮಾಯವಾದನು ಚಿತ್ರವೂ ಅದೇ ಹಾದಿಯಲ್ಲಿದೆ.

  • ಕಾಣದಂತೆ ಮಾಯವಾದನು: ಎಲ್ಲರನ್ನೂ ಸೆಳೆಯೋ ಮಾಯೆಯಂಥಾ ಟ್ರೈಲರ್!

    ಕಾಣದಂತೆ ಮಾಯವಾದನು: ಎಲ್ಲರನ್ನೂ ಸೆಳೆಯೋ ಮಾಯೆಯಂಥಾ ಟ್ರೈಲರ್!

    ಬೆಂಗಳೂರು: ರಾಜ್ ಪತ್ತಿಪಾಟಿ ನಿರ್ದೇಶನದ ಕಾಣದಂತೆ ಮಾಯವಾದನು ಚಿತ್ರವೀಗ ಬಿಡುಗಡೆಯ ಹೊಸ್ತಿಲಲ್ಲಿದೆ. ಒಂದಷ್ಟು ಕಾಲ ಯಾವ ಸುದ್ದಿಯೂ ಇಲ್ಲದಂತಿದ್ದ ಈ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದ್ದ ಕ್ಯಾರೆಕ್ಟರ್ ಪ್ರೋಮೋ ಮೂಲಕ ಮತ್ತೆ ಚರ್ಚೆಗೆ ಕಾರಣವಾಗಿತ್ತು. ಈ ಮೂಲಕವೇ ತನ್ನ ತಾರಾಗಣವನ್ನು ಪರಿಚಯಿಸಿದ್ದ ಚಿತ್ರತಂಡವೀಗ ಟ್ರೈಲರ್ ಮೂಲಕ ಇಡೀ ಸಿನಿಮಾದ ಆಂತರ್ಯವನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದೆ.

    ಕಾಣದಂತೆ ಮಾಯವಾದನು ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ವರ್ಷಾಂತರದಿಂದಲೂ ಸುದ್ದಿಯಾಗುತ್ತಾ ಸಾಗುತ್ತಿದ್ದ ಈ ಚಿತ್ರ ಯಾವ ಜಾನರಿನದ್ದು, ಇದರ ಕಥೆಯೇನು ಅಂತೆಲ್ಲ ಜನರಲ್ಲಿ ನಾನಾ ಪ್ರಶ್ನೆಗಳಿದ್ದವು. ಅದಕ್ಕೆ ಉತ್ತರಿಸುತ್ತಲೇ ಪ್ರೇಕ್ಷಕರ ನಿರೀಕ್ಷೆಯ ಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ರೀತಿಯಲ್ಲಿ ಈ ಟ್ರೈಲರ್ ಮೂಡಿ ಬಂದಿದೆ.

    ಹಾರರ್ ಕಥೆಗಳೆಂದರೆ ದೆವ್ವ, ಪ್ರೇತಗಳ ಮೂಲಕ ಭೀತಗೊಳಿಸೋದು ಎಂಬಂಥಾ ಕಲ್ಪನೆಯಿದೆ. ಆದರೆ ಅದಕ್ಕೆ ತದ್ವಿರುದ್ಧ ರೀತಿಯಲ್ಲಿ, ಹೊಸತನದೊಂದಿಗೆ ಈ ಸಿನಿಮಾ ಮೂಡಿಬಂದಿದೆ ಅನ್ನೋದಕ್ಕೂ ಟ್ರೈಲರ್ ಸಾಕ್ಷಿಯಂತಿದೆ. ಈ ಹಿಂದೆ ಜಯಮ್ಮನ ಮಗ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿಕಾಸ್ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಅವರಿಲ್ಲಿ ಪಕ್ಕಾ ಆಕ್ಷನ್ ಹೀರೋ ಆಗಿ ವಿಜೃಭಿಸಿರೋ ಸ್ಪಷ್ಟ ಸೂಚನೆಯನ್ನೂ ಈ ಟ್ರೈಲರ್ ನೀಡಿದೆ.

    ಹಾರರ್ ಕಂಟೆಂಟಿದೆಯಾದರೂ ಇದು ಮಾಮೂಲಿ ಶೈಲಿಯ ಚಿತ್ರವಲ್ಲ. ಇಲ್ಲಿರೋ ಆತ್ಮ ಬದುಕಿರೋ ಘಳಿಗೆಯಲ್ಲಿ ಜೀವದಂತಿದ್ದ ಪ್ರೀತಿಯ ಕಾವಲಿಗೆ ನಿಲ್ಲುತ್ತಲೇ ಸೇಡು ತೀರಿಸಿಕೊಳ್ಳೋ ಕಥೆಯ ಹೊಳಹೂ ಕೂಡಾ ಈ ಮೂಲಕವೇ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಇದರ ಆಚೀಚೆಗೆ ಥ್ರಿಲ್ಲರ್ ಸ್ಟೋರಿ ಇರುವ ಲಕ್ಷಣಗಳೊಂದಿಗೇ ಮೇಕಿಂಗ್‍ನಲ್ಲಿಯೂ ಈ ಟ್ರೈಲರ್ ಗಮನ ಸೆಳೆಯುವಂತಿದೆ.

    ಆಗಾಗ ಸದ್ದು ಮಾಡುತ್ತಾ ಸೈಲೆಂಟಾಗುತ್ತಿದ್ದ ಈ ಚಿತ್ರ ಕೊಂಚ ತಡವಾಗಿದೆ ಎಂಬ ಕಂಪ್ಲೇಂಟು ಪ್ರೇಕ್ಷಕರಲ್ಲಿತ್ತು. ಆದರೆ ಈಗ ಬಿಡುಗಡೆಯಾಗಿರೋ ಟ್ರೈಲರ್ ಆ ಮುನಿಸನ್ನು ಮರೆಯಾಗಿಸಿ ಚಿತ್ರ ಬಿಡುಗಡೆಯಾಗೋದನ್ನ ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡುವಲ್ಲಿಯೂ ಶಕ್ತವಾಗಿದೆ. ಈ ಮೂಲಕ ನಿರ್ದೇಶಕ ರಾಜ್ ಪತ್ತಿಪಾಟಿ ಭರವಸೆ ಹುಟ್ಟಿಸಿದ್ದಾರೆ. ಬಹುಶಃ ಮಾಸ್ತಿಗುಡಿ ದುರಂತದಲ್ಲಿ ಸಾವಿಗೀಡಾಗಿದ್ದ ಅನಿಲ್ ನಟಿಸಿರೋ ಕಡೆಯ ಚಿತ್ರವಿದು. ಈ ಮೂಲಕ ಉದಯ್ ಅವರನ್ನು ಅಬ್ಬರದ ಪಾತ್ರವೊಂದರ ಮೂಲಕ ಕಣ್ತುಂಬಿಕೊಳ್ಳೋ ಸದಾವಕಾಶವೂ ಪ್ರೇಕ್ಷಕರಿಗೆ ಸಿಕ್ಕಿದೆ.

    ಒಟ್ಟಾರೆಯಾಗಿ ಈ ಟ್ರೈಲರ್ ಮೂಲಕವೇ ಕಾಣದಂತೆ ಮಾಯವಾದನು ಚಿತ್ರ ಮತ್ತೆ ಜನಮಾನಸ ತಲುಪಿಕೊಂಡಿದೆ. ಬಿಡುಗಡೆಯಾದ ಕ್ಷಣದಿಂದಲೇ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಾ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುತ್ತಿದೆ. ಇದನ್ನು ಕಂಡು ಪ್ರೇಕ್ಷಕರು ಅದೆಷ್ಟು ಖುಷಿಗೊಂಡಿದ್ದಾರೆಂಬುದಕ್ಕೆ ಯೂ ಟ್ಯೂಬ್‍ನಲ್ಲಿ ಹರಿದು ಬರುತ್ತಿರೋ ಕಮೆಂಟುಗಳಿಗಿಂತಲೂ ಬೇರೆ ಪುರಾವೆ ಬೇಕಿಲ್ಲ.

    https://youtu.be/GNaimyGV1m4