Tag: ರಾಜ್ ದೀಪಕ್ ಶೆಟ್ಟಿ

  • ಇತಿಹಾಸ, ವಾಸ್ತವ ಎರಡನ್ನೂ ಹೇಳಲಿದೆ ಈ ‘ಗಡಿಯಾರ’ ಸಿನಿಮಾ

    ಇತಿಹಾಸ, ವಾಸ್ತವ ಎರಡನ್ನೂ ಹೇಳಲಿದೆ ಈ ‘ಗಡಿಯಾರ’ ಸಿನಿಮಾ

    ಸ್ಯಾಂಡಲ್‍ವುಡ್ ಅಂಗಳದಲ್ಲಿ ಮತ್ತೊಂದು ಸಿನಿಮಾ ಚಿತ್ರಮಂದಿರಕ್ಕೆ ಬರಲು ಸಿದ್ಧವಾಗಿದೆ. ಕಳೆದು ಹೋದ ಘಟನೆಗಳ ಜೊತೆ ವಾಸ್ತವವನ್ನು ತಿಳಿಸಲು ಬರುತ್ತಿರುವ ಈ ಚಿತ್ರದ ಹೆಸರು ‘ಗಡಿಯಾರ’. ಪ್ರಬಿಕ್ ಮೊಗವೀರ್ ನಿರ್ದೇಶನದ ‘ಗಡಿಯಾರ’ ಸಿನಿಮಾ ಕೋವಿಡ್ ಅನ್‍ಲಾಕ್ ಬಳಿಕ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿರುವ ಎರಡನೇ ಚಿತ್ರ. ಇದೇ ವಾರ ನವೆಂಬರ್ 27ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ.

    ಲಾಕ್‍ಡೌನ್ ಬಳಿಕ ಚಿತ್ರದ ತುಣುಕುಗಳ ಮೂಲಕ ಸದ್ದು ಮಾಡುತ್ತಿದ್ದ ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಗರಿಗೆದರಿದೆ. ಕಳೆದ ನವೆಂಬರ್ ನಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿದ್ದ ‘ಗಡಿಯಾರ’ ಸಿನಿಮಾ ಮಾರ್ಚ್ ನಲ್ಲಿ ರಿಲೀಸ್‍ಗೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಕೊರೊನಾದಿಂದಾಗಿ ಸಾಧ್ಯವಾಗಿರಲಿಲ್ಲ. ಈಗ ಬಹು ನಿರೀಕ್ಷೆಯೊಂದಿಗೆ ಸಿನಿಮಾ ತೆರೆಗೆ ತರಲು ಚಿತ್ರತಂಡ ಸಿದ್ಧವಾಗಿದೆ.

    ರಾಜಮನೆತನಗಳ ಇತಿಹಾಸ ನೆನಪಿಸುವುದರ ಜೊತೆಗೆ ಹಾರಾರ್, ಸಸ್ಪೆನ್ಸ್, ಕಾಮಿಡಿ, ಸಾಹಸ ಸೇರಿದಂತೆ ಪ್ರತಿಯೊಂದು ಕಮರ್ಶಿಯಲ್ ಎಳೆಯೂ ಚಿತ್ರದಲ್ಲಿದ್ದು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆ ಎನ್ನೋದು ಚಿತ್ರತಂಡದ ಮಾತು. ಸಿನಿಮಾ ಸೂತ್ರದಾರರಾದ ಪ್ರಬಿಕ್ ಮೊಗವೀರ್ ತಾವೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆ ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿದ್ದಾರೆ.

    ರಾಜ್ ದೀಪಕ್ ಶೆಟ್ಟಿ, ಶೀತಲ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಯಶ್ ಶೆಟ್ಟಿ, ಸುಚೇಂದ್ರಪ್ರಸಾದ್, ಶರತ್ ಲೋಹಿತಾಶ್ವ, ಮನ್‍ದೀಪ್ ರಾಯ್, ಲೀಲಾಮೋಹನ್, ಗಣೇಶ್ ರಾವ್ ಸೇರಿದಂತೆ ದೊಡ್ಡ ಕಲಾವಿದರ ದಂಡು ಚಿತ್ರದಲ್ಲಿದೆ. ಇನ್ನೊಂದು ಇಂಟ್ರಸ್ಟಿಂಗ್ ಸಂಗತಿಯಂದ್ರೆ ಮಾಜಿ ಪೊಲೀಸ್ ಕಮಿಷನರ್ ಎಸ್.ಪಿ. ಸಾಂಗ್ಲಿಯಾನ, ಮಲಯಾಳಂ ನಟ ಎಂ.ಟಿ.ರಿಹಾಜ್, ಬಾಲಿವುಡ್ ನಟ ಗೌರಿಶಂಕರ್ ಅವರನ್ನು ಚಿತ್ರದ ವಿಶೇಷ ಸನ್ನಿವೇಶಕ್ಕಾಗಿ ತೆರೆ ಮೇಲೆ ಕರೆತರಲಾಗಿದೆ.

    ಆತ್ಮ ಸಿನಿಮಾಸ್ ಬ್ಯಾನರ್‍ನಡಿ ನಿರ್ಮಾಣವಾಗಿರೋ ‘ಗಡಿಯಾರ’ ಚಿತ್ರಕ್ಕೆ ಶ್ಯಾಮ್ ಸಿಂಧನೂರು ಕ್ಯಾಮೆರಾ ನಿರ್ದೇಶನ, ರಾಘವ್ ಸುಭಾಷ್ ಸಂಗೀತ ನಿರ್ದೇಶನವಿದೆ. ಸಾಕಷ್ಟು ಕುತೂಹಲವನ್ನು ಸಿನಿರಸಿಕರಲ್ಲಿ ಹುಟ್ಟುಹಾಕಿರುವ ಗರಿಯಾರ ಚಿತ್ರ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾ ಎಂಬ ಪ್ರಶ್ನೆಗೆ ನಾಳೆ ಉತ್ತರ ಸಿಗಲಿದೆ.

  • ಮದ್ವೆ ಮುಂದೂಡಿದ ಸ್ಯಾಂಡಲ್‍ವುಡ್‍ನ ಖ್ಯಾತ ಖಳನಟ

    ಮದ್ವೆ ಮುಂದೂಡಿದ ಸ್ಯಾಂಡಲ್‍ವುಡ್‍ನ ಖ್ಯಾತ ಖಳನಟ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಪ್ರತಿಭಾವಂತ ಖಳನಟ ರಾಜ್ ದೀಪಕ್ ಶೆಟ್ಟಿ ತಮ್ಮ ವಿವಾಹ ಸಮಾರಂಭವನ್ನು ಮುಂದೂಡಿದ್ದಾರೆ.

    ರಾಜ್ ದೀಪಕ್ ಶೆಟ್ಟಿ ‘ಪಂಚತಂತ್ರ, ‘ಗಡಿಯಾರ’, ‘ಭರ್ಜರಿ’, ‘ಕೋಟಿಗೊಬ್ಬ 3’, ಸೇರಿದಂತೆ 30ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಎರಡು ತೆಲುಗು ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿರುವ ನಟ ರಾಜ್ ದೀಪಕ್ ಶೆಟ್ಟಿ ಕೊರೊನಾ ಕಾರಣದಿಂದ ತಮ್ಮ ಮದುವೆಯನ್ನು ಮುಂದೂಡಿದ್ದಾರೆ.

    ರಾಜ್ ದೀಪಕ್ ಶೆಟ್ಟಿ ದಕ್ಷಿಣ ಭಾರತದ ಹೆಸರಾಂತ ಖಳನಟರಲ್ಲಿ ಒಬ್ಬರು. ಇವರು ಸೋನಿಯಾ ರಾಡ್ರಿಗೋಸ್ ಅವರನ್ನು ಮದುವೆಯಾಗುತ್ತಿದ್ದಾರೆ. ಮೇ 17ಕ್ಕೆ ಮಂಗಳೂರಿನಲ್ಲಿ ವಿವಾಹವಾಗಬೇಕೆಂದು ಪ್ಲಾನ್ ಕೂಡ ಮಾಡಿಕೊಂಡಿದ್ದರು. ಆದರೆ ಕೊರೊನಾ ಕಾರಣದಿಂದಾಗಿ ವಿವಾಹ ಸಮಾರಂಭವನ್ನು ಮುಂದೂಡಿದ್ದಾರೆ.

    ಸೋನಿಯಾ ರಾಡ್ರಿಗಸ್ ಇವೆಂಟ್ ಆರ್ಗನೈಸರ್ ಆಗಿದ್ದು, ಮಂಗಳೂರು ಫ್ಯಾಷನ್ ವೀಕ್‍ನ ಮಾಲಕಿ ಕೂಡ ಆಗಿದ್ದಾರೆ. ರಾಜ್ ದೀಪಕ್ ಶೆಟ್ಟಿ ಮತ್ತು ಸೋನಿಯಾ ಫೇಸ್ ಬುಕ್‍ನಲ್ಲಿ ಸ್ನೇಹಿತರಾಗಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇಬ್ಬರು ತಮ್ಮ ಪ್ರೀತಿಯ ವಿಚಾರವನ್ನು ಮನೆಯಲ್ಲಿ ಹೇಳಿದ್ದಾರೆ. ಬಳಿಕ ಎರಡು ಮನೆಯವರು ಇವರ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದರು.

    ಸದ್ಯಕ್ಕೆ ಅಕ್ಟೋಬರ್ ತಿಂಗಳಲ್ಲಿ ಮದುವೆ ಕಾರ್ಯಕ್ರಮವನ್ನು ಇಟ್ಟುಕೊಳ್ಳುವ ಯೋಚನೆ ಮಾಡಿದ್ದಾರೆ. ಅಕ್ಟೋಬರ್ 18 ರಂದು ದೀಪಕ್ ಶೆಟ್ಟಿ ಹುಟ್ಟುಹಬ್ಬ. ಹೀಗಾಗಿ ಅಂದಿನ ದಿನ ಮದುವೆಯಾಗಲಿದ್ದಾರೆ. ಸದ್ಯಕ್ಕೆ ಲಾಕ್‍ಡೌನ್‍ನಿಂದಾಗಿ ಸಿನಿಮಾ ಚಿತ್ರೀಕರಣ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ದೀಪಕ್ ರಾಜ್ ಮಂಗಳೂರಿನ ಸ್ವಗೃಹದಲ್ಲಿ ಕುಟುಂಬದೊಂದಿಗೆ ಕಾಲಕಳೆಯುತ್ತಿದ್ದಾರೆ.

    ಈ ಬಗ್ಗೆ ಮಾತನಾಡಿದ ದೀಪಕ್ ಶೆಟ್ಟಿ, “ಮಂಗಳೂರಿನಲ್ಲಿ ಇವೆಂಟ್ ಆರ್ಗನೈಸರ್ ಆಗಿರುವ ಸೋನಿಯಾ ರಾಡ್ರಿಗಸ್ ಮತ್ತು ನಾನು ಬಹಳ ದಿನಗಳಿಂದ ಪ್ರೀತಿಸುತ್ತಿದ್ದೆವು. ಮೇ 10ರಂದು ನಿಶ್ಚಿತಾರ್ಥ ಮಾಡಿಕೊಂಡು, 17ಕ್ಕೆ ಮಂಗಳೂರಿನಲ್ಲಿ ಮದುವೆಯಾಗಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದೆ. ಆದರೆ ಕೊರೊನಾ ಕಾರಣದಿಂದ ಎಲ್ಲವೂ ಕ್ಯಾನ್ಸಲ್ ಆಗಿದೆ. ಅಕ್ಟೋಬರ್ ತಿಂಗಳಿನಲ್ಲಿ ನನ್ನ ಹುಟ್ಟುಹಬ್ಬವಿದೆ. ಅಂದು ಮದುವೆ ಆಗಲಿದ್ದೇನೆ” ಎಂದಿದ್ದಾರೆ.

    ‘ಕೋಟಿಗೊಬ್ಬ-3’ ಸೇರಿದಂತೆ ದೀಪಕ್ ನಟನೆಯ ಕೆಲ ಸಿನಿಮಾಗಳೂ ರಿಲೀಸ್ ಆಗಬೇಕಿದೆ. ಈಗ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಸಿನಿಮಾ ಆಯ್ಕೆ ಆಗಿದ್ದಾರೆ.