ಮುಂಬೈ: ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆಯನ್ನು ನೀಡಿ ದೇಶ ವಿದೇಶದಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿ, ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರ ಬೆಂಬಲಕ್ಕೆ ಮಂಗಳವಾರ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮುಂದಾಗಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ ಠಾಕ್ರೆ, ಎಲ್ಲರೂ ನೂಪುರ್ ಶರ್ಮಾ ಅವರಿಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು. ಆದರೆ ನಾನು ಆಕೆಯನ್ನು ಬೆಂಬಲಿಸಿದ್ದೇನೆ. ನೂಪುರ್ ನೀಡಿದ ಹೇಳಿಕೆಯನ್ನು ಈ ಹಿಂದೆ ಡಾ. ಜಾಕಿರ್ ನಾಯ್ಕ್ ಹೇಳಿದ್ದರು. ಆದರೆ ನಾಯ್ಕ್ ಅವರಿಗೆ ಯಾರೂ ಕೂಡಾ ಕ್ಷಮೆ ಕೇಳುವಂತೆ ಹೇಳಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ನೂಪುರ್ ಶರ್ಮಾ ಹತ್ಯೆಗೈಯಲು ಟರ್ಕಿಯಲ್ಲಿ ಉಗ್ರನಿಗೆ ಐಸಿಸ್ ತರಬೇತಿ!

ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ನೂಪುರ್ ಶರ್ಮಾ ಅವರು ನೀಡಿದ್ದ ಹೇಳಿಕೆಯಿಂದ ದೇಶಾದ್ಯಂತ ಪ್ರತಿಭಟನೆಗಳು ನಡೆದವು. ಅನೇಕ ಗಲ್ಫ್ ರಾಷ್ಟ್ರಗಳಿಂದ ತೀವ್ರವಾದ ವಿರೋಧ ವ್ಯಕ್ತವಾಯಿತು. ಬಳಿಕ ಬಿಜೆಪಿ ನೂಪುರ್ ಅವರನ್ನು ವಕ್ತಾರೆ ಸ್ಥಾನದಿಂದ ಅಮಾನತುಗೊಳಿಸಿತು. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನ – ತೆಲಂಗಾಣದ ಬಿಜೆಪಿ ಶಾಸಕ ಅರೆಸ್ಟ್
ನೂಪುರ್ ಶರ್ಮಾ ವಿರುದ್ಧ ದೇಶಾದ್ಯಂತ ದಾಖಲಾದ ಎಲ್ಲಾ ಎಫ್‌ಐಆರ್‌ಗಳನ್ನು ಸುಪ್ರೀಂ ಕೋರ್ಟ್ ದೆಹಲಿಗೆ ವರ್ಗಾಯಿಸುವಂತೆ ಆಗಸ್ಟ್ 10 ರಂದು ಆದೇಶ ನೀಡಿತ್ತು.




















