Tag: ರಾಜ್ ಠಾಕ್ರೆ

  • ಹಿಂದಿ ಮಾತಾಡ್ತೀನಿ ಎಂದ ಆಟೋ ಚಾಲಕನಿಗೆ ಉದ್ಧವ್‌, ರಾಜ್‌ ಠಾಕ್ರೆ ಬಣದಿಂದ ಥಳಿತ

    ಹಿಂದಿ ಮಾತಾಡ್ತೀನಿ ಎಂದ ಆಟೋ ಚಾಲಕನಿಗೆ ಉದ್ಧವ್‌, ರಾಜ್‌ ಠಾಕ್ರೆ ಬಣದಿಂದ ಥಳಿತ

    – ಮರಾಠಿ & ಮಹಾರಾಷ್ಟ್ರಕ್ಕೆ ಅವಮಾನ ಮಾಡಿದವರಿಗೆ ತಕ್ಕ ಪಾಠ ಕಲಿಸ್ತೀವಿ ಅಂತ ಎಚ್ಚರಿಕೆ

    ಮುಂಬೈ: ಹಿಂದಿ (Hindi) ಮಾತನಾಡುತ್ತೇನೆ ಎಂದ ಆಟೋ ಚಾಲಕನಿಗೆ ಉದ್ಧವ್‌ ಠಾಕ್ರೆ ನೇತೃತ್ವದ ಶೀವಸೇನೆ ಮತ್ತು ರಾಜ್‌ ಠಾಕ್ರೆಯ ಎಂಎನ್‌ಎಸ್‌ ಕಾರ್ಯಕರ್ತರು ಥಳಿಸಿರುವ ಘಟನೆ ನಡೆದಿದೆ.

    ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯಲ್ಲಿ ವಲಸೆ ಬಂದ ಆಟೋರಿಕ್ಷಾ ಚಾಲಕನ ಮೇಲೆ ಭಾಷೆ ವಿಚಾರಕ್ಕೆ ಹಲ್ಲೆ ನಡೆಸಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಇದನ್ನೂ ಓದಿ: ಮತಾಂತರಕ್ಕೆ ‘ಮಿಟ್ಟಿ, ಕಾಜಲ್‌, ದರ್ಶನ್‌’ ಅಂತ ಕೋಡ್‌ ವರ್ಡ್‌ ಬಳಸುತ್ತಿದ್ದ ಛಂಗೂರ್‌ ಬಾಬಾ

    ಮರಾಠಿಯಲ್ಲಿ (Marathi) ಏಕೆ ಮಾತನಾಡುತ್ತಿಲ್ಲ ಎಂದು ಕೇಳಿದಾಗ ರಿಕ್ಷಾ ಚಾಲಕ, ‘ನಾನು ಹಿಂದಿಯಲ್ಲಿ ಮಾತನಾಡುತ್ತೇನೆ’ ಎಂದು ಪದೇ ಪದೇ ಹೇಳಿರುವುದು ವೀಡಿಯೊದಲ್ಲಿದೆ. ಸಾರ್ವಜನಿಕವಾಗಿ ಮರಾಠಿ ಬಳಸದಿರುವ ಬಗ್ಗೆ ಚಾಲಕನನ್ನು ಪ್ರಶ್ನಿಸಿದ್ದರು. ಚಾಲಕ ಹಿಂದಿ ಮತ್ತು ಭೋಜ್‌ಪುರಿಯಲ್ಲಿ ಮಾತನಾಡಲು ಇಷ್ಟಪಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದ.

    ವಿರಾರ್ ರೈಲ್ವೆ ನಿಲ್ದಾಣದ ಬಳಿ ಶಿವಸೇನೆ (ಯುಬಿಟಿ) ಮತ್ತು ಎಂಎನ್‌ಎಸ್ ಬೆಂಬಲಿಗರ ಗುಂಪೊಂದು ರಿಕ್ಷಾ ಚಾಲಕನನ್ನು ಥಳಿಸಿದೆ. ಗುಂಪುಗಳ ಮಹಿಳಾ ಸದಸ್ಯರು, ಚಾಲಕನಿಗೆ ಹಲವು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಇದನ್ನೂ ಓದಿ: ಕಸಬ್ ಗಲ್ಲಿಗೇರಲು ಕಾರಣರಾಗಿದ್ದ ವಕೀಲ ಉಜ್ವಲ್ ನಿಕಮ್‌, ಸದಾನಂದನ್ ಮಾಸ್ಟರ್ ಸೇರಿದಂತೆ ನಾಲ್ವರು ರಾಜ್ಯಸಭೆಗೆ ನಾಮನಿರ್ದೇಶನ

    ‘ಯಾರಾದರೂ ಮರಾಠಿ ಭಾಷೆ, ಮಹಾರಾಷ್ಟ್ರ ಅಥವಾ ಮರಾಠಿ ಜನರನ್ನು ಅವಮಾನಿಸಲು ಧೈರ್ಯ ಮಾಡಿದರೆ, ಅವರಿಗೆ ನಿಜವಾದ ಶಿವಸೇನಾ ಶೈಲಿಯಲ್ಲಿ ಉತ್ತರ ಸಿಗುತ್ತದೆ. ನಾವು ಸುಮ್ಮನಿರುವುದಿಲ್ಲ’ ಎಂದು ಶಿವಸೇನೆ ಉದ್ಧವ್‌ ಬಣದ ಉದಯ್‌ ಜಾಧವ್ ಎಚ್ಚರಿಸಿದ್ದಾರೆ.

    ಆ ಚಾಲಕ ಮಹಾರಾಷ್ಟ್ರ ಮತ್ತು ಮರಾಠಿ ಮನೂಸ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ. ಅವನಿಗೆ ತಕ್ಕ ಪಾಠ ಕಲಿಸಿದ್ದೇವೆ. ರಾಜ್ಯದ ಜನರ ಕ್ಷಮೆಯಾಚಿಸುವಂತೆ ಮಾಡಿದ್ದೇವೆಂದು ತಿಳಿಸಿದ್ದಾರೆ.

  • ಮರಾಠಿ ಕಲಿಯಲ್ಲ ಎಂದಿದ್ದಕ್ಕೆ ಉದ್ಯಮಿ ಕಚೇರಿಯೇ ಧ್ವಂಸ

    ಮರಾಠಿ ಕಲಿಯಲ್ಲ ಎಂದಿದ್ದಕ್ಕೆ ಉದ್ಯಮಿ ಕಚೇರಿಯೇ ಧ್ವಂಸ

    ಮುಂಬೈ: ಮರಾಠಿ (Marathi) ಕಲಿಯುವುದಿಲ್ಲ ಎಂದು ಹೇಳಿದ ಉದ್ಯಮಿಯೊಬ್ಬರ ಕಚೇರಿಯನ್ನು ರಾಜ್‌ ಠಾಕ್ರೆಯ (Raj Thackeray) ಎಂಎನ್‌ಎಸ್‌ (MNS) ಕಾರ್ಯಕರ್ತರು ಧ್ವಂಸ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಉದ್ಯಮಿ ಸುಶಿಲ್‌ ಕೇಡಿಯಾ ಅವರ ಕಚೇರಿ ಧ್ವಂಸದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಾಜ್ ಠಾಕ್ರೆ ಬೆಂಬಲಿಗರು ಕಚೇರಿಯ ಮೇಲೆ ಇಟ್ಟಿಗೆಯಂಥ ವಸ್ತುಗಳನ್ನು ಎಸೆಯುತ್ತಿರುವುದು ದೃಶ್ಯದಲ್ಲಿದೆ. ದಾಳಿಯನ್ನು ತಡೆಯಲು ಭದ್ರತಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರೂ, ವಿಧ್ವಂಸಕ ಕೃತ್ಯ ತಡೆಯಲಾಗಿಲ್ಲ. ಇದನ್ನೂ ಓದಿ: 20 ವರ್ಷಗಳ ಬಳಿಕ ಮತ್ತೆ ಒಂದಾದ ಉದ್ಧವ್‌-ರಾಜ್‌ ಠಾಕ್ರೆ

    ಸುಶಿಲ್‌ ಕೇಡಿಯಾ ಅವರು ತಮ್ಮ X ಖಾತೆಯಲ್ಲಿ, 30 ವರ್ಷಗಳಿಂದ ಮುಂಬೈನಲ್ಲಿ ವಾಸಿಸುತ್ತಿದ್ದರೂ ನನಗೆ ಮರಾಠಿ ಸರಿಯಾಗಿ ತಿಳಿದಿಲ್ಲ. ನಿಮ್ಮ ಘೋರ ದುಷ್ಕೃತ್ಯಗಳ ಬಗ್ಗೆ ತಿಳಿದಿದೆ. ನಾನು ಮರಾಠಿ ಕಲಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇನೆ. ನೀವು ಏನು ಮಾಡುತ್ತೀರಿ ಎಂದು ರಾಜ್‌ ಠಾಕ್ರೆ ಅವರಿಗೆ ಟ್ಯಾಗ್‌ ಮಾಡಿ ಪೋಸ್ಟ್‌ ಹಾಕಿದ್ದಾರೆ.

    ವಿಧ್ವಂಸಕ ಕೃತ್ಯದ ಸ್ವಲ್ಪ ಸಮಯದ ನಂತರ ಕೇಡಿಯಾ ಮತ್ತೊಮ್ಮೆ ಎಕ್ಸ್‌ ಖಾತೆಯಲ್ಲಿ ಠಾಕ್ರೆಗೆ ಟ್ಯಾಗ್ ಮಾಡಿ, ನೂರಾರು MNS ಕಾರ್ಯಕರ್ತರೊಂದಿಗೆ ಬೆದರಿಕೆ ಹಾಕುವುದರಿಂದ ಅವರು ನಿರರ್ಗಳವಾಗಿ ಮರಾಠಿ ಭಾಷಿಕರಾಗುವುದಿಲ್ಲ. ಬೆದರಿಕೆಗಳಲ್ಲ, ಪ್ರೀತಿ ಜನರನ್ನು ಒಟ್ಟಿಗೆ ಸೇರಿಸುತ್ತದೆ ಎಂದು ಮತ್ತೊಂದು ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಉದ್ಯಮಿ ನೀರವ್ ಮೋದಿ ಸಹೋದರ ನೇಹಲ್ ಮೋದಿ ಬಂಧನ

    ತನಗೆ ಭದ್ರತೆ ಒದಗಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಒತ್ತಾಯಿಸಿದ್ದಾರೆ. ಅಂಬೋಲಿ, ಸೈಬರ್ ಕ್ರೈಂ ಬಾಂದ್ರಾ, SB1 ಹಲವಾರು ಪೊಲೀಸ್ ಠಾಣೆಗಳಿಂದ ನನಗೆ ಕರೆ ಬರುತ್ತಿದೆ ಎಂದು ಉದ್ಯಮಿ ತಿಳಿಸಿದ್ದಾರೆ.

  • 20 ವರ್ಷಗಳ ಬಳಿಕ ಮತ್ತೆ ಒಂದಾದ ಉದ್ಧವ್‌-ರಾಜ್‌ ಠಾಕ್ರೆ

    20 ವರ್ಷಗಳ ಬಳಿಕ ಮತ್ತೆ ಒಂದಾದ ಉದ್ಧವ್‌-ರಾಜ್‌ ಠಾಕ್ರೆ

    ಮುಂಬೈ: ಸತತ 20 ವರ್ಷಗಳ ಬಳಿಕ ಸೋದರಸಂಬಂಧಿಗಳಾದ ಉದ್ಧವ್‌ ಠಾಕ್ರೆ (Uddhav Thackeray) ಮತ್ತು ರಾಜ್‌ ಠಾಕ್ರೆ (Raj Thackeray) ಒಂದಾಗಿದ್ದಾರೆ.

    ಮುಂಬೈನಲ್ಲಿ ನಡೆದ ‘ಮರಾಠಿ ವಿಜಯೋತ್ಸ’ವದಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಈ ಸಮಾರಂಭವನ್ನು ಶಿವಸೇನೆ (ಉದ್ಧವ್‌ ಬಣ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್)‌ ಜಂಟಿಯಾಗಿ ಆಯೋಜಿಸಿತ್ತು. 2005ರಲ್ಲಿ ಭಿನ್ನಾಭಿಪ್ರಾಯದಿಂದ ಇಬ್ಬರೂ ಬೇರ್ಪಟ್ಟಿದ್ದರು. ಅದಾದ ಬಳಿಕ ನಾಯಕರು ಪರಸ್ಪರ ಒಂದೇ ವೇದಿಕೆ ಹಂಚಿಕೊಂಡಿದ್ದು ಇದೇ ಮೊದಲು. ಇದನ್ನೂ ಓದಿ: ಸೈನಿಕರಿಗೆ ಅಂಗವೈಕಲ್ಯ ಪಿಂಚಣಿ ನೀಡುವುದು ಔದಾರ್ಯಕ್ಕಲ್ಲ, ರಾಷ್ಟ್ರಕ್ಕಾಗಿ ಮಾಡಿದ ಸೇವೆಗೆ – ದೆಹಲಿ ಹೈಕೋರ್ಟ್

    ಮಹಾರಾಷ್ಟ್ರದ ಪ್ರಾಥಮಿಕ ಶಾಲೆಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಕಡ್ಡಾಯಗೊಳಿಸುವ ವಿವಾದಾತ್ಮಕ ನೀತಿಯನ್ನು ಆಡಳಿತಾರೂಢ ಮಹಾಯುತಿ ಒಕ್ಕೂಟ ಕೈಗೆತ್ತಿಕೊಂಡಿರುವುದು, ಠಾಕ್ರೆ ಸೋದರಸಂಬಂಧಿಗಳ ಈ ಒಗ್ಗಟ್ಟಿನ ಪ್ರದರ್ಶನಕ್ಕೆ ಕಾರಣವಾಗಿದೆ. 64 ವರ್ಷದ ಉದ್ಧವ್ ಮತ್ತು 57 ವರ್ಷದ ರಾಜ್ ಇಬ್ಬರೂ ಈ ಪ್ರಸ್ತಾಪವನ್ನು ಬಲವಾಗಿ ವಿರೋಧಿಸಿದ್ದರು.

    ಬಾಳಾ ಸಾಹೇಬ್‌ ಠಾಕ್ರೆ ಮತ್ತು ಇತರೆ ನಾಯಕರು ಮಾಡಲು ಸಾಧ್ಯವಾಗದ್ದನ್ನು ದೇವೇಂದ್ರ ಫಡ್ನವೀಸ್‌ ಮಾಡಿದ್ದಾರೆ. ಅವರು ನಮ್ಮಿಬ್ಬರನ್ನು ಒಗ್ಗೂಡಿಸಿದ್ದಾರೆ. ವಿಧಾನ ಭವನದಲ್ಲಿ ನಿಮಗೆ ಅಧಿಕಾರವಿರಬಹುದು. ಆದರೆ, ಬೀದಿ-ಕೇರಿಗಳಲ್ಲಿ ನಮಗೆ ಜನರ ಬೆಂಬಲವಿದೆ ಎಂದು ಸರ್ಕಾರಕ್ಕೆ ರಾಜ್‌ ಠಾಕ್ರೆ ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಯುಕೆ ಮೂಲದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್ ಭಂಡಾರಿ ಪರಾರಿಯಾದ ಆರ್ಥಿಕ ಅಪರಾಧಿ: ದೆಹಲಿ ವಿಶೇಷ ಕೋರ್ಟ್‌ ಆದೇಶ

    ಈ ತ್ರಿಭಾಷಾ ಸೂತ್ರ ನಿಮಗೆ ಎಲ್ಲಿಂದ ಬಂತು? ಇದು ಕೇಂದ್ರ ಸರ್ಕಾರದಿಂದ ಮಾತ್ರ ಬಂದಿದೆ. ಇಂದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಎಲ್ಲವೂ ಇಂಗ್ಲಿಷ್‌ನಲ್ಲಿದೆ. ಅದು ಬೇರೆ ಯಾವುದೇ ರಾಜ್ಯದಲ್ಲೂ ಇಲ್ಲ. ಮಹಾರಾಷ್ಟ್ರದಲ್ಲಿ ಮಾತ್ರ ಏಕೆ? ಮಹಾರಾಷ್ಟ್ರ ಎಚ್ಚರವಾದಾಗ, ಏನಾಗುತ್ತದೆ ಎಂದು ನೀವು ನೋಡುತ್ತೀರಿ ಎಂದು ಎಚ್ಚರಿಸಿದ್ದಾರೆ.

    ಬೃಹತ್‌ ಮುಂಬೈ ಮುನಿಸಿಪಲ್‌ ಕಾರ್ಪೊರೇಷನ್‌ (ಬಿಎಂಸಿ) ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಉದ್ಧವ್‌ ಮತ್ತು ರಾಜ್‌ ಒಟ್ಟಿಗೆ ವೇದಿಕೆ ಹಂಚಿಕೊಂಡಿರುವುದು ಕುತೂಹಲ ಮೂಡಿಸಿದೆ. ಇವರ ನಡೆಯು ಚುನಾವಣಾ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು ಎಂದು ವಿಶ್ಲೇಷಿಸಲಾಗಿದೆ.

  • ಮರಾಠಿ ಜನರ ಹಿತಾಸಕ್ತಿಗಾಗಿ ಭಿನ್ನಾಭಿಪ್ರಾಯ ಬದಿಗಿಡಲು ಸಿದ್ಧ – ಮೈತ್ರಿ ಸುಳಿವು ನೀಡಿದ ಉದ್ಧವ್, ರಾಜ್ ಠಾಕ್ರೆ ಸಹೋದರರು

    ಮರಾಠಿ ಜನರ ಹಿತಾಸಕ್ತಿಗಾಗಿ ಭಿನ್ನಾಭಿಪ್ರಾಯ ಬದಿಗಿಡಲು ಸಿದ್ಧ – ಮೈತ್ರಿ ಸುಳಿವು ನೀಡಿದ ಉದ್ಧವ್, ರಾಜ್ ಠಾಕ್ರೆ ಸಹೋದರರು

    ಮುಂಬೈ: ಮಹಾರಾಷ್ಟ್ರ ಮತ್ತು ಮರಾಠಿ ಜನರ ಹಿತಾಸಕ್ತಿಗಾಗಿ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಾಗಿ ಬರಲು ಸಿದ್ಧರಿದ್ದೇವೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ (Raj Thackeray) ಮತ್ತು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ. ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ನೀಡಿರುವ ಈ ಹೇಳಿಕೆ ಮಹರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

    ಚಲನಚಿತ್ರ ನಿರ್ಮಾಪಕ ಮಹೇಶ್ ಮಂಜ್ರೇಕರ್ ಅವರೊಂದಿಗಿನ ಪಾಡ್‌ಕ್ಯಾಸ್ಟ್‌ನಲ್ಲಿ ಕೇಳಿದ ಪ್ರಶ್ನೆಗೆ ರಾಜ್ ಠಾಕ್ರೆ ಉತ್ತರಿಸುತ್ತಾ, ಮಹಾರಾಷ್ಟ್ರದ ಹಿತಾಸಕ್ತಿಗಾಗಿ ಸಣ್ಣ ವಿವಾದಗಳನ್ನು ಬದಿಗಿಡಬಹುದು. ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ಸಿದ್ಧರಿದ್ದರೆ ಅವರೊಂದಿಗೆ ಕೆಲಸ ಮಾಡಬಹುದು ಎಂದು ಹೇಳಿದರು. ಇದನ್ನೂ ಓದಿ: ಪ. ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತನ್ನಿ – ಕೇಂದ್ರಕ್ಕೆ ನಟ ಮಿಥುನ್ ಚಕ್ರವರ್ತಿ ಆಗ್ರಹ

    ಠಾಕ್ರೆ ಸಹೋದರರು ಇಬ್ಬರೂ ಒಟ್ಟಿಗೆ ಬಂದರೆ ಎಂಬ ಮಂಜ್ರೇಕರ್ ಅವರ ಪ್ರಶ್ನೆಗೆ ಉತ್ತರಿಸಿದ ರಾಜ್ ಠಾಕ್ರೆ, ನನಗೆ ಮಹಾರಾಷ್ಟ್ರದ ಹಿತಾಸಕ್ತಿ ದೊಡ್ಡದು ಮತ್ತು ಉಳಿದೆಲ್ಲವೂ ಅದರ ಮುಂದೆ ಗೌಣ. ಅದಕ್ಕಾಗಿ ನಾನು ಸಣ್ಣಪುಟ್ಟ ವಿವಾದಗಳನ್ನು ಬದಿಗಿಡಬಹುದು ಮತ್ತು ನಾನು ಉದ್ಧವ್ ಜೊತೆ ಕೆಲಸ ಮಾಡಲು ಸಿದ್ಧನಿದ್ದೇನೆ. ಅವರು ಕೂಡ ಅದಕ್ಕೆ ಸಿದ್ಧರಿದ್ದಾರೆಯೇ ಎಂದು ಮರು ಪ್ರಶ್ನಿಸಿದ್ದಾರೆ.

    ತಮ್ಮ ಪಕ್ಷದ ಟ್ರೇಡ್ ಯೂನಿಯನ್ ವಿಭಾಗವಾದ ಭಾರತೀಯ ಕಾಮಗರ್ ಸೇನಾದ ಸಮಾರಂಭದಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ಮರಾಠಿ ಭಾಷೆ ಮತ್ತು ಮಹಾರಾಷ್ಟ್ರಕ್ಕಾಗಿ ವಿವಾದಗಳನ್ನು ಬದಿಗಿಡಲು ನಾನು ಸಿದ್ಧ ಎಂದು ಹೇಳಿದ್ದಾರೆ. ಆದಾಗ್ಯೂ, ಆ ಸಂದರ್ಭದಲ್ಲಿ ರಾಜ್ ಠಾಕ್ರೆ ಮಹಾರಾಷ್ಟ್ರ ವಿರೋಧಿಗಳು ಅಥವಾ ಅಂತಹ ಪಕ್ಷಗಳಿಗೆ ಕೆಲಸ ಮಾಡುವವರೊಂದಿಗೆ ಸಹವಾಸ ಮಾಡಬಾರದು ಎಂಬ ಷರತ್ತನ್ನು ಹಾಕಿದ್ದಾರೆ. ಇದನ್ನೂ ಓದಿ: ಈ ವರ್ಷಾಂತ್ಯದಲ್ಲಿ ಭಾರತಕ್ಕೆ ಬರುತ್ತೇನೆ: ಮಸ್ಕ್‌ ಘೋಷಣೆ

    ನಾನು ಕೂಡ ಮರಾಠಿ ಭಾಷೆ ಮತ್ತು ಮಹಾರಾಷ್ಟ್ರಕ್ಕಾಗಿ ಸಣ್ಣಪುಟ್ಟ ವಿವಾದಗಳನ್ನು ಬದಿಗಿಡಲು ಸಿದ್ಧನಿದ್ದೇನೆ. ನಾನು ಒಟ್ಟಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ. ಆದರೆ ರಾಜ್ ಠಾಕ್ರೆ ಇನ್ನು ಮುಂದೆ ಮಹಾರಾಷ್ಟ್ರ ವಿರೋಧಿ ಜನರು ಮತ್ತು ಪಕ್ಷಗಳನ್ನು ಆಯೋಜಿಸಬಾರದು ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಮುಂದೆ ಪ್ರಮಾಣ ವಚನ ಸ್ವೀಕರಿಸಬೇಕು ಎಂದು ಹೇಳಿದ್ದಾರೆ. ಈ ಹೇಳಿಕೆಗಳು ಭವಿಷ್ಯಸಲ್ಲಿ ಠಾಕ್ರೆ ಸಹೋದರರು ಒಂದಾಗುವ ಸುಳಿವು ನೀಡಿದೆ.

    ಇದಕ್ಕೂ ಮೊದಲು ಕಳೆದ ಫೆಬ್ರವರಿಯಲ್ಲಿ ಮುಂಬೈನ ಅಂಧೇರಿಯಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಉದ್ಧವ್ ಮತ್ತು ರಾಜ್ ಠಾಕ್ರೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಭೇಟಿಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದು ರಾಜಕೀಯ ಸಮೀಕರಣಗಳಲ್ಲಿ ಬದಲಾವಣೆಯ ಸಂಕೇತವೆಂದು ರಾಜಕೀಯ ವಿಶ್ಲೇಷಕರು ಭಾವಿಸಿದ್ದರು. ಈಗ ರಾಜ್ ಠಾಕ್ರೆಯ ಇತ್ತೀಚಿನ ಹೇಳಿಕೆಯು ಆ ಊಹಾಪೋಹಗಳಿಗೆ ಪುಷ್ಠಿ ನೀಡಿವೆ. ಇದನ್ನೂ ಓದಿ: ಮಹಾ ಕುಂಭಮೇಳಕ್ಕೆ ಟೆಂಟ್‌ ಸಾಮಗ್ರಿ ಪೂರೈಸುತ್ತಿದ್ದ ಕಂಪನಿಯ ಗೊಡೋನ್​ನಲ್ಲಿ ಅಗ್ನಿ ದುರಂತ

  • ಮತ್ತೆ ಒಂದಾಗ್ತಾರಾ ಉದ್ಧವ್, ರಾಜ್ ಠಾಕ್ರೆ? – ಆ ಫೋಟೋ ಮೂಡಿಸಿತು ಕುತೂಹಲ

    ಮತ್ತೆ ಒಂದಾಗ್ತಾರಾ ಉದ್ಧವ್, ರಾಜ್ ಠಾಕ್ರೆ? – ಆ ಫೋಟೋ ಮೂಡಿಸಿತು ಕುತೂಹಲ

    ಮುಂಬೈ: ಮಾಜಿ ಸಿಎಂ ಉದ್ಧವ್‌ ಠಾಕ್ರೆ (Uddhav Thackeray) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನಾ (MNS) ಮುಖ್ಯಸ್ಥ ರಾಜ್ ಠಾಕ್ರೆ (Raj Thackeray ) ಒಂದಾಗುತ್ತಾರಾ ಎಂಬ ಪ್ರಶ್ನೆ ಈಗ ಎದ್ದಿದೆ. ಇಬ್ಬರೂ ನಾಯಕರು ಪರಸ್ಪರ ಉಭಯ ಕುಶಲೋಪರಿ ನಡೆಸುತ್ತಿರುವ ಫೋಟೋ ವೈರಲ್‌ ಆಗುತ್ತಿದ್ದಂತೆ ಈ ಪ್ರಶ್ನೆ ಈಗ ಎದ್ದಿದೆ.

    ಭಾನುವಾರ ರಾತ್ರಿ ಮುಂಬೈನ ಅಂಧೇರಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಇಬ್ಬರೂ ನಾಯಕರು ಭೇಟಿಯಾಗಿ ಮಾತನಾಡಿದರು. ಮುಂದೆ ನಡೆಯಲಿರುವ ನಗರ ಪಾಲಿಕೆ ಚುನಾವಣೆ ಸಮಯದಲ್ಲೇ ಇಬ್ಬರು ನಾಯಕರ ಭೇಟಿ ಮಹತ್ವ ಪಡೆದಿದೆ.

    ಅಂಧೇರಿಯಲ್ಲಿ ಮೊದಲ ಬಾರಿಗೆ ಇಬ್ಬರು ಭೇಟಿಯಾಗಿಲ್ಲ. ಕಳೆದ ಮೂರು ತಿಂಗಳಿನಲ್ಲಿ ಮೂರನೇ ಬಾರಿ ನಡೆದ ಭೇಟಿ ಇದಾಗಿದೆ. ಇಬ್ಬರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಒಂದಾಗುತ್ತಾರಾ ಎಂಬ ವದಂತಿ ಹಬ್ಬಲು ಆರಂಭವಾಗಿದೆ. ಇದನ್ನೂ ಓದಿ: ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪಲು 15 ನಿಮಿಷ ತಡವಾಗಿ ಬಂದ ಮೋದಿ!

    ಉದ್ದವ್‌ ಮತ್ತು ರಾಜ್‌ ಠಾಕ್ರೆ ಇಬ್ಬರೂ ಸೋದರ ಸಂಬಂಧಿಗಳು. ಬಾಳಾ ಠಾಕ್ರೆಯ ಸಹೋದರ ಶ್ರೀಕಾಂತ್ ಠಾಕ್ರೆಯ ಪುತ್ರನಾಗಿರುವ ರಾಜ್‌ ಆರಂಭದಲ್ಲಿ ಜೊತೆಯಾಗಿಯೇ ಶಿವಸೇನೆಯಲ್ಲಿ (Shiv Sena) ಕೆಲಸ ಮಾಡಿದ್ದರು. ಬಾಳಾ ಠಾಕ್ರೆ (Bal Thackeray) ಅವರ ಹಲವರು ಕಾರ್ಯಕ್ರಮಗಳನ್ನು ರಾಜ್‌ ಠಾಕ್ರೆ ಆಯೋಜಿಸುತ್ತಿದ್ದರು.

    ಪಕ್ಷಕ್ಕೆ ಒಟ್ಟಾಗಿ ಕೆಲಸ ಮಾಡುತ್ತಿದ್ದರೂ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ 2005ರಲ್ಲಿ ಶಿವಸೇನೆಗೆ ರಾಜೀನಾಮೆ ನೀಡಿದ್ದ ರಾಜ್‌ ಮಾರ್ಚ್ 9, 2006 ರಂದು ಮುಂಬೈನಲ್ಲಿ ಎಂಎನ್‌ಎಸ್ ಘೋಷಿಸಿದ್ದರು.

    ಏಕನಾಥ್ ಶಿಂಧೆ ಶಿವಸೇನೆಯಿಂದ ಹೊರ ಬಂದು ಪ್ರತ್ಯೇಕ ಶಿವಸೇನೆ ರಚಿಸಿದಾಗ ರಾಜ್ ಠಾಕ್ರೆ ಉದ್ಧವ್‌ ಅವರನ್ನು ಟೀಕಿಸಿದ್ದರು. ಹಲವಾರು ಬಾರಿ ಉದ್ಧವ್‌ ಮತ್ತು ರಾಜ್‌ ಠಾಕ್ರೆ ಮಧ್ಯೆ ವಾಗ್ದಾಳಿ ನಡೆದಿತ್ತು. ಆದರೆ ಈಗ ಇಬ್ಬರು ಭಿನ್ನಾಭಿಪ್ರಾಯ ಮರೆತು ಒಂದಾಗುತ್ತಾರಾ ಎಂಬ ಪ್ರಶ್ನೆಗೆ ಮುಂದಿನ ಕೆಲ ತಿಂಗಳಿನಲ್ಲಿ ಉತ್ತರ ಸಿಗಲಿದೆ.

     

  • ಮತ್ತೆ ಒಂದಾಗುತ್ತಾ ಬಿಜೆಪಿ-ಉದ್ಧವ ಸೇನೆ?; ರಾಜ್ ಠಾಕ್ರೆ ಗೆಳೆಯ, ಉದ್ಧವ್ ಶತ್ರು ಅಲ್ಲ ಎಂದ ಮಹಾರಾಷ್ಟ್ರ ಸಿಎಂ

    ಮತ್ತೆ ಒಂದಾಗುತ್ತಾ ಬಿಜೆಪಿ-ಉದ್ಧವ ಸೇನೆ?; ರಾಜ್ ಠಾಕ್ರೆ ಗೆಳೆಯ, ಉದ್ಧವ್ ಶತ್ರು ಅಲ್ಲ ಎಂದ ಮಹಾರಾಷ್ಟ್ರ ಸಿಎಂ

    ಮುಂಬೈ: ರಾಜ್‌ ಠಾಕ್ರೆ ನನ್ನ ಗೆಳೆಯ, ಉದ್ಧವ್‌ ಠಾಕ್ರೆ ನನ್ನ ಶತ್ರು ಅಲ್ಲ ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್‌ (Devendra Fadnavis) ಹೇಳಿದ್ದಾರೆ. ಅವರ ಹೇಳಿಕೆಯು, ಮತ್ತೆ ಬಿಜೆಪಿ ಮತ್ತು ಉದ್ಧವ್‌ ಸೇನೆ ಒಂದಾಗುತ್ತಾ ಎಂಬ ಪ್ರಶ್ನೆ ಮೂಡಿದೆ.

    ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಸೇರಿದಂತೆ ಸ್ಥಳೀಯ ಚುನಾವಣೆಗಳಿಗೆ ಮುಂಚಿತವಾಗಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶುಕ್ರವಾರ ಮಹತ್ವದ ಹೇಳಿಕೆ ನೀಡಿದ್ದಾರೆ. ಭವಿಷ್ಯದಲ್ಲಿ ರಾಜಕೀಯ ಸಮೀಕರಣಗಳು ಬದಲಾಗಬಹುದು ಎಂದು ಸೂಚಿಸಿದ್ದಾರೆ. ಇದನ್ನೂ ಓದಿ: ದೆಹಲಿ ಮದ್ಯ ನೀತಿಯಲ್ಲಿ ಅಕ್ರಮ – ಸರ್ಕಾರದ ಬೊಕ್ಕಸಕ್ಕೆ 2,026 ಕೋಟಿ ನಷ್ಟ: ಸಿಎಜಿ ವರದಿ

    ಹಿರಿಯ ಪತ್ರಕರ್ತರೊಂದಿಗಿನ ಸಂದರ್ಶನದಲ್ಲಿ ಸ್ಪಷ್ಟವಾಗಿ ಮಾತನಾಡಿದ ಫಡ್ನವಿಸ್, ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್) ರಾಜ್ ಠಾಕ್ರೆ ಈಗಲೂ ನನಗೆ ಸ್ನೇಹಿತ. ಉದ್ಧವ್ ಠಾಕ್ರೆ ಅವರನ್ನು ವಿರೋಧಿ ಎಂದು ನೋಡಬಾರದು. ರಾಜಕೀಯದಲ್ಲಿ ಯಾವುದೂ ಖಚಿತವಿಲ್ಲ. ಮೊದಲು, ಉದ್ಧವ್ ಠಾಕ್ರೆ ಸ್ನೇಹಿತರಾಗಿದ್ದರು. ನಂತರ ರಾಜ್ ಠಾಕ್ರೆ ಸ್ನೇಹಿತರಾದರು. ರಾಜ್ ಠಾಕ್ರೆ ಸ್ನೇಹಿತನಾಗಿದ್ದರೂ, ಉದ್ಧವ್ ಠಾಕ್ರೆ ಶತ್ರುವಲ್ಲ ಎಂದಿದ್ದಾರೆ. ಇದು ಬಿಜೆಪಿ ಮತ್ತು ಶಿವಸೇನೆ (ಯುಬಿಟಿ) ನಡುವಿನ ಸಂಭಾವ್ಯ ಹೊಂದಾಣಿಕೆಯ ಸಂಕೇತವಾಗಿದೆ.

    ನಾಗ್ಪುರದಲ್ಲಿ ನಡೆದ ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಅವರು ಫಡ್ನವಿಸ್ ಅವರನ್ನು ವೈಯಕ್ತಿಕವಾಗಿ ಅಭಿನಂದಿಸಿದ್ದರಿಂದ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಅಂದಿನಿಂದ, ಆದಿತ್ಯ ಠಾಕ್ರೆ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಫಡ್ನವಿಸ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಆಕಸ್ಮಿಕವಾಗಿ ಗುಂಡು ತಗುಲಿ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾವು

    ಒಂದು ಗಂಟೆಯ ಸಂದರ್ಶನದಲ್ಲಿ, ಫಡ್ನವಿಸ್ ಇತ್ತೀಚಿನ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳು, ಮುಖ್ಯಮಂತ್ರಿಯಾಗಿ ಅವರ ಪಾತ್ರ ಮತ್ತು ಪಕ್ಷದ ಚಲನಶೀಲತೆ ಸೇರಿದಂತೆ ವಿವಿಧ ರಾಜಕೀಯ ವಿಷಯಗಳನ್ನು ಪ್ರಸ್ತಾಪಿಸಿದರು. ಸಹೋದ್ಯೋಗಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರಲ್ಲಿ ಯಾರನ್ನು ಹೆಚ್ಚು ನಂಬುತ್ತಾರೆ ಎಂದು ಕೇಳಿದಾಗ, ಫಡ್ನವೀಸ್ ಸಮತೋಲಿತ ಪ್ರತಿಕ್ರಿಯೆ ನೀಡಿದರು. ‘ನನಗೆ ಅವರಿಬ್ಬರೊಂದಿಗೂ ಬಹಳ ವಿಶೇಷ ಸಂಬಂಧವಿದೆ. ನಾನು ಶಿಂಧೆ ಸಾಹೇಬ್ ಅವರೊಂದಿಗೆ ದೀರ್ಘಕಾಲದ ಸ್ನೇಹವನ್ನು ಹಂಚಿಕೊಳ್ಳುತ್ತೇನೆ. ಆದರೆ ಅಜಿತ್ ದಾದಾ ಅವರ ರಾಜಕೀಯ ಪ್ರಬುದ್ಧತೆಯು ನನ್ನ ತರಂಗಾಂತರದೊಂದಿಗೆ ಹೊಂದಿಕೆಯಾಗುತ್ತದೆ’ ಎಂದಿದ್ದಾರೆ.

    ನಾನು ಪಕ್ಷದ ಶಿಸ್ತಿನ ಕಾರ್ಯಕರ್ತ. ಪಕ್ಷವು ಈಗಲೂ ನನ್ನ ರಾಜೀನಾಮೆ ಪಡೆದು ಯಾವುದೇ ಜವಾಬ್ದಾರಿ ಕೊಟ್ಟರೂ ನಿರ್ವಹಿಸಲು ಸಿದ್ಧನಿದ್ದೇನೆ. ನನ್ನ ಬೆಳವಣಿಗೆಗೆ ನನ್ನ ಸಾಮರ್ಥ್ಯ ಕಾರಣವಲ್ಲ. ಬದಲಾಗಿ ಪಕ್ಷ ಮತ್ತು ಅದರ ಕಾರ್ಯಕರ್ತರ ಬಲ ಕಾರಣ ಎಂದು ತಿಳಿಸಿದ್ದಾರೆ.

  • NDA ಸೇರುತ್ತಾರಾ ನವನಿರ್ಮಾಣ ಸೇನೆಯ ರಾಜ್‌ ಠಾಕ್ರೆ?

    NDA ಸೇರುತ್ತಾರಾ ನವನಿರ್ಮಾಣ ಸೇನೆಯ ರಾಜ್‌ ಠಾಕ್ರೆ?

    ಮುಂಬೈ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪ್ರತಿನಿತ್ಯ ರಾಜಕೀಯ ಬೆಳವಣಿಗೆಗಳು ನಡೆಯುತ್ತಲೇ ಇವೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಮಂತ್ರಿ ಮನೀಶ್ ತಿವಾರಿ ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳು ಈಗಾಗಲೇ ಹಬ್ಬಿವೆ. ಈ ಪಟ್ಟಿಗೆ ಇದೀಗ ರಾಜ್‌ ಠಾಕ್ರೆ (Raj Thackeray) ಕೂಡ ಸೇರಿದ್ದಾರೆ.

    ಹೌದು. ಸದ್ಯ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಅಧ್ಯಕ್ಷ ರಾಜ್‌ ಠಾಕ್ರೆ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹವೊಂದು ಕೇಳಿಬಂದಿದೆ. ಇದಕ್ಕೆ ಮುಖ್ಯ ಕಾರಣ ಇಂದು ಮುಂಬೈ ಬಿಜೆಪಿ ಮುಖ್ಯಸ್ಥ ಆಶಿಶ್ ಶೆಲಾರ್ ಅವರು ರಾಜ್ ಠಾಕ್ರೆಯವರನ್ನು ಭೇಟಿಯಾಗಿದ್ದಾಗಿದೆ.

    ರಾಜ್‌ ಠಾಕ್ರೆಯನ್ನು ಭೇಟಿಯಾಗಿರುವ ಶೆಲಾರ್ (Ashish Shelar), ಎನ್‌ಡಿಎ ಜೊತೆ ಕೈಜೋಡಿಸುವಂತೆ ಕೇಳಿಕೊಂಡಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಸಮಾವೇಶದಲ್ಲಿ ಚರ್ಚೆಯ ಬಳಿಕ ಈ ಬೆಳವಣಿಗೆ ನಡೆದಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಮಂತ್ರಿ ಮನೀಶ್ ತಿವಾರಿ ಬಿಜೆಪಿ ಸೇರ್ಪಡೆ?

    ರಾಜ್‌ ಠಾಕ್ರೆಯವರು ಕೂಡ ಬಿಜೆಪಿಯಂತೆಯೇ ಹಿಂದುತ್ವ ಸಿದ್ಧಾಂತವನ್ನು ನಂಬಿರುವುದರಿಂದ ನ್ಯಾಷನಲ್ ಡೆಮೆಕ್ರಾಟಿಕ್ ಅಲೈಯೆನ್ಸ್ (NDA) ಒಕ್ಕೂಟದ ಕಡೆ ಒಲವು ತೋರಿದ್ದಾರೆ. ಚುನಾವಣೆಯಲ್ಲಿ7 ರಿಂದ 8% ರಷ್ಟು ಮತಗಳನ್ನು ಗಳಿಸುವ ಮೂಲಕ ಠಾಕ್ರೆಯವರ ಪಕ್ಷವು ಮುಂಬೈನಲ್ಲಿ ಹಿಡಿತ ಸಾಧಿಸಿದೆ. ಆದ್ದರಿಂದ ಎನ್‌ಡಿಎ, ರಾಜ್‌ ಠಾಕ್ರೆಯವರನ್ನು ಕರೆತರುವಲ್ಲಿ ಯಶಸ್ವಿಯಾದರೆ ಬಿಜೆಪಿಗೆ ಸಹಾಯ ಮಾಡುತ್ತದೆ ಎಂಬ ಲೆಕ್ಕಾಚಾರವಿದೆ.

    ಇತ್ತ ಬಿಜೆಪಿ (BJP) ಮತ್ತು ಎಂಎನ್‌ಎಸ್ ಎರಡೂ ಪಕ್ಷದ ನಾಯಕರು ಮೈತ್ರಿ ಬಗ್ಗೆ ಬಹಿರಂಗವಾಗಿ ಮಾತನಾಡದೆ ಸಮಯ ಬಂದಾಗ ಎಲ್ಲವೂ ನಡೆಯುತ್ತದೆ ಎಂಬ ಹೇಳಿಕೆಗಳನ್ನು ನೀಡಿದ್ದಾರೆ. ಇಂದು ರಾಜ್ ಠಾಕ್ರೆ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಸಮಯ ಬಂದಾಗ ಎಲ್ಲವನ್ನೂ ತಿಳಿಸಲಾಗುವುದು ಎಂದು ಆಶಿಶ್ ಶೆಲಾರ್ ಹೇಳಿದ್ದಾರೆ.

  • ರಾಜ್ ಠಾಕ್ರೆ ವಾರ್ನಿಂಗ್ – ಸಮುದ್ರದಲ್ಲಿ ನಿರ್ಮಾಣವಾಗುತ್ತಿದ್ದ ಅಕ್ರಮ ದರ್ಗಾವನ್ನು ಕೆಡವಿದ ಬಿಎಂಸಿ

    ರಾಜ್ ಠಾಕ್ರೆ ವಾರ್ನಿಂಗ್ – ಸಮುದ್ರದಲ್ಲಿ ನಿರ್ಮಾಣವಾಗುತ್ತಿದ್ದ ಅಕ್ರಮ ದರ್ಗಾವನ್ನು ಕೆಡವಿದ ಬಿಎಂಸಿ

    ಮುಂಬೈ: ಮಹಾರಾಷ್ಟ್ರದ (Maharashtra) ನವನಿರ್ಮಾಣ ಸೇನೆ (MNS) ನಾಯಕ ರಾಜ್ ಠಾಕ್ರೆ (Raj Thackeray) ಅಕ್ರಮವಾಗಿ ನಿರ್ಮಿಸಲಾಗುತ್ತಿದ್ದ ದರ್ಗಾದ (Dargah) ಬಗ್ಗೆ ಟ್ವೀಟ್ ಒಂದನ್ನು ಹಂಚಿಕೊಂಡ ಬಳಿಕ ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಗುರುವಾರ ಮಾಹಿಮ್ ಕರಾವಳಿ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದ್ದ ದರ್ಗಾವನ್ನು ಕೆಡವಿ ಹಾಕಿದೆ.

    ರಾಜ್ ಠಾಕ್ರೆ ಅವರು ಮಾಹಿಮ್ ಕರಾವಳಿ ಪ್ರದೇಶದಲ್ಲಿ ಅನಧಿಕೃತವಾಗಿ ದರ್ಗಾವನ್ನು ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಡ್ರೋನ್ ಕ್ಯಾಮೆರಾದಲ್ಲಿ ತೆಗೆಯಲಾಗಿದ್ದ ದೃಶ್ಯಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಠಾಕ್ರೆ ಟ್ವೀಟ್ ಮಾಡಿದ ಕೇವಲ 1 ದಿನದ ಬಳಿಕ ಮುಂಬೈ ನಾಗರಿಕ ಮಂಡಳಿ ಅಕ್ರಮ ದರ್ಗಾವನ್ನು ನೆಲಸಮಗೊಳಿಸುವ ಕಾರ್ಯಾಚರಣೆಗೆ ಮುಂದಾಗಿದೆ.

    ಟ್ವೀಟ್‌ನಲ್ಲೇನಿದೆ?
    ರಾಜ್ ಠಾಕ್ರೆ ಮಾಡಿರುವ ಟ್ವೀಟ್‌ನಲ್ಲಿ, ಮಾಹಿಮ್‌ನ ಮಗ್ದೂಮ್ ಬಾಬಾ ದರ್ಗಾವನ್ನು ಸಮುದ್ರದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗುತ್ತಿದೆ. 2 ವರ್ಷಗಳ ಹಿಂದೆ ಇಲ್ಲಿ ಏನೂ ಇರಲಿಲ್ಲ. ದರ್ಗಾ ನಿರ್ಮಾಣದ ಕಾರ್ಯಾಚರಣೆ ಹಗಲು ಹೊತ್ತಿನಲ್ಲಿ ನಡೆಯುತ್ತಿದ್ದರೂ ಇದು ಪೊಲೀಸರ ಹಾಗೂ ಪುರಸಭೆಯ ಗಮನಕ್ಕೆ ಬಂದಿಲ್ಲವೇ ಎಂದು ಟೀಕಿಸಿದ್ದರು. ಇದನ್ನೂ ಓದಿ: ರಾಹುಲ್‌ಗೆ ಬಿಗ್‌ ರಿಲೀಫ್‌ – 30 ದಿನಗಳ ಜಾಮೀನು ಮಂಜೂರು

    ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮುಂಬೈ ಪೊಲೀಸರಿಗೆ ವಾರ್ನಿಗ್ ನೀಡಿದ ರಾಜ್ ಠಾಕ್ರೆ, ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ದರ್ಗಾದ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಿ. ಈಗಲೇ ಇದನ್ನು ನೆಲಸಮಗೊಳಿಸಿ. ಇಲ್ಲದೇ ಹೋದಲ್ಲಿ ನಾವು ಆ ಪ್ರದೇಶದಲ್ಲಿ ದೊಡ್ಡ ಗಣಪತಿಯ ದೇವಾಲಯವನ್ನು ನಿರ್ಮಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಟ್ವೀಟ್ ಬೆನ್ನಲೇ ಗುರುವಾರ ಬೆಳಗ್ಗೆ ಬಿಎಂಸಿ ತಂಡ ಹೆಚ್ಚಿನ ಭದ್ರತೆಯೊಂದಿಗೆ ಸಣ್ಣ ದ್ವೀಪ ಮಾದರಿಯ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದ್ದ ದರ್ಗಾದ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಬಿಎಂಸಿ ತಂಡ ಭಾರೀ ಪೊಲೀಸ್ ಬಂದೋಬಸ್ತ್‌ನೊಂದಿಗೆ ಜೆಸಿಬಿ ಹಾಗೂ ಇತರ ಸಲಕರಣೆಗಳೊಂದಿಗೆ ಸ್ಥಳಕ್ಕೆ ತೆರಳಿ ದರ್ಗಾವನ್ನು ನೆಲಸಮಗೊಳಿಸಿದೆ. ಇದನ್ನೂ ಓದಿ: ವಿಜಯ ಮಲ್ಯ ಬಳಿ ಸಾಲ ತೀರಿಸುವಷ್ಟು ಹಣವಿದೆ – CBIನಿಂದ 3ನೇ ಚಾರ್ಜ್‌ಶೀಟ್‌ ಸಲ್ಲಿಕೆ

  • ಮರಾಠಿ ಸಾಂಗ್ ಹಾಕಲ್ಲ – ಹೋಟೆಲ್ ಮ್ಯಾನೇಜರ್ ಮೇಲೆ MNS ಕಾರ್ಯಕರ್ತರಿಂದ ಹಲ್ಲೆ

    ಮರಾಠಿ ಸಾಂಗ್ ಹಾಕಲ್ಲ – ಹೋಟೆಲ್ ಮ್ಯಾನೇಜರ್ ಮೇಲೆ MNS ಕಾರ್ಯಕರ್ತರಿಂದ ಹಲ್ಲೆ

    ಮುಂಬೈ: ಮರಾಠಿ ಸಾಂಗ್ ಹಾಕಲಿಲ್ಲ ಎಂಬ ಕಾರಣಕ್ಕೆ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (Maharashtra Navnirman Sena) (ಎಂಎನ್‍ಎಸ್) ಕಾರ್ಯಕರ್ತರು ಮುಂಬೈ (Mumbai) ಸಮೀಪದ ವಾಶಿಯಲ್ಲಿರುವ (Vashi) ಹೋಟೆಲ್‍ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

    ಬುಧವಾರ ಸಂಜೆ ಈ ಘಟನೆ ನಡೆದಿದ್ದು, ಮರಾಠಿ ಹಾಡು ಹಾಕುವ ವಿಚಾರವಾಗಿ ಎಂಎನ್‍ಎಸ್ ಕಾರ್ಯಕರ್ತರು ಮತ್ತು ಹೋಟೆಲ್ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಸಿಬ್ಬಂದಿ ಮತ್ತು ವ್ಯವಸ್ಥಾಪಕರು ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದರು, ಆದರೆ ಗಲಾಟೆ ಹೆಚ್ಚಾಗಿ ಹಿಂಸಾತ್ಮಕಕ್ಕೆ ತಿರುಗಿತು. ಈ ಘಟನೆಯ ವೀಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ವಿದ್ಯಾಭರಣ್ ಬಗ್ಗೆ ಮೊದಲೇ ಗೊತ್ತಾಗಿದ್ದು ಒಳ್ಳೆಯದಾಯ್ತು: ನಟಿ ವೈಷ್ಣವಿ ಸ್ಪಷ್ಟನೆ

    Raj Thackeray

    ಬೇರೆ ಹಾಡುಗಳನ್ನು ಪ್ಲೇ ಮಾಡಲಾಗುತ್ತಿದೆ ಎಂದು ಕೆಲವು ಮಹಿಳೆಯರು ಹೋಟೆಲ್ ಸಿಬ್ಬಂದಿಯೊಂದಿಗೆ ವಾದ ಮಾಡುತ್ತಿರುತ್ತಾರೆ. ಈ ವೇಳೆ ಮ್ಯಾನೇಜರ್ ಮಹಿಳೆಯ ಕೋರಿಕೆಯನ್ನು ನಿರಾಕರಿಸುತ್ತಾರೆ. ಅಷ್ಟೋತ್ತಿಗೆ ಪಕ್ಕದಲ್ಲಿಯೇ ಇದ್ದ ಎಂಎನ್‍ಎಸ್ ಕಾರ್ಯಕರ್ತರೊಬ್ಬರು ನಾವು ಇರುವುದು ಮಹಾರಾಷ್ಟ್ರದಲ್ಲಿ, ಮರಾಠಿ ಹಾಡುಗಳನ್ನಷ್ಟೇ ಹಾಕಬೇಕು ಹೇಳಿದ್ದಾರೆ. ಇದಕ್ಕೆ ಮ್ಯಾನೇಜರ್ ಇಲ್ಲ ಎಂದಿದ್ದಕ್ಕೆ ಕಪಾಳಮೋಕ್ಷ ಮಾಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

    ಇದೇ ವೇಳೆ ಇತರ ಕಾರ್ಯಕರ್ತರು ಸೇರಿಕೊಂಡು ಮ್ಯಾನೇಜರ್‌ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಆದರೆ ಇದುವರೆಗೂ ಈ ಸಂಬಂಧ ಯಾವುದೇ ಪೊಲೀಸ್ ದೂರು ದಾಖಲಿಸಿಲ್ಲ. ಇದನ್ನೂ ಓದಿ: ವೈಷ್ಣವಿ ಜೊತೆಗಿನ ವಿದ್ಯಾಭರಣ್ ಫೋಟೋ ವೈರಲ್ ಬೆನ್ನಲ್ಲೇ ‘ರಹಸ್ಯ’ ನಟಿ ಗಂಭೀರ ಆರೋಪ!

    Live Tv
    [brid partner=56869869 player=32851 video=960834 autoplay=true]

  • ‘ಆದಿ ಪುರುಷ್’ ಬೆನ್ನಿಗೆ ನಿಂತ ರಾಜ್ ಠಾಕ್ರೆ ಸೇನೆ: ನಿಜವಾದ ರಾವಣನನ್ನು ಬಿಜೆಪಿ ನೋಡಿದ್ಯಾ?

    ‘ಆದಿ ಪುರುಷ್’ ಬೆನ್ನಿಗೆ ನಿಂತ ರಾಜ್ ಠಾಕ್ರೆ ಸೇನೆ: ನಿಜವಾದ ರಾವಣನನ್ನು ಬಿಜೆಪಿ ನೋಡಿದ್ಯಾ?

    ಬಾಲಿವುಡ್ ನಲ್ಲಿ ತಯಾರಾದ ಆದಿ ಪುರುಷ್ (Adipurush) ಸಿನಿಮಾ ಕುರಿತು ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಇದರ ಬೆನ್ನೆಲ್ಲೇ ಸಿನಿಮಾವನ್ನು ಬೈಕಾಟ್ ಮಾಡಬೇಕು ಎಂಬ ಕೂಗು ಎದ್ದಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಬಿಜೆಪಿ ನಾಯಕರು ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ. ಬಿಜೆಪಿ ನಾಯಕರ ಹೇಳಿಕೆಗೆ ರಾಜ್ ಠಾಕ್ರೆ (Raj Thackeray) ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಪ್ರತ್ಯುತ್ತರ ಕೊಟ್ಟಿದೆ. ನಿಜವಾದ ರಾವಣನನ್ನು ಬಿಜೆಪಿಯವರು ನೋಡಿದ್ದಾರಾ ಎಂಬ ಪ್ರಶ್ನೆಯನ್ನು ಕೇಳಿದೆ.

    ಸಿನಿಮಾದ ನಿರ್ದೇಶಕ ಓಂ ರಾವತ್ ನಿಜವಾದ ಹಿಂದೂತ್ವವಾದಿ. ಅವರು ಹಿಂದೂ. ಹಾಗಾಗಿ ಹಿಂದೂ ಧರ್ಮವನ್ನು ಹಾಗೂ ಮಹಾಕಾವ್ಯಗಳನ್ನು ಅವಮಾನ ಮಾಡುವಂತಹ ಕೆಲಸಕ್ಕೆ ಅವರು ಮುಂದಾಗಲಾರರು. ಹಿಂದೂ ಹೆಸರಿನಲ್ಲಿ ಬಿಜೆಪಿ (BJP)ಅಹಿತಕರ ವಾತಾವರಣ ಸೃಷ್ಟಿ ಮಾಡುತ್ತಿದೆ. ಟ್ರೇಲರ್ ನೋಡಿಯೇ ಇಷ್ಟೊಂದು ಗಲಾಟೆ ಮಾಡುವುದು ಸರಿಯಲ್ಲ. ಸಿನಿಮಾ ನೋಡಿದ ನಂತರ ಮಾತನಾಡಿ ಎಂದಿದ್ದಾರೆ ಮಹಾರಾಷ್ಟ್ರ (Maharashtra) ನವ ನಿರ್ಮಾಣ ಸೇನೆಯ ನಾಯಕ ಅಮೇಯಾ ಕೋಪ್ಕರ್ (Ameyah Kopkar).

    ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಟೀಸರ್ ಕೂಡ ಕಳಪೆ ಮಟ್ಟದ್ದಾಗಿದೆ ಎಂದು ಟ್ರೋಲಿಗರು ಸಿನಿಮಾ ಬೆನ್ನು ಬಿದ್ದಿದ್ದು, ಈ ನಡುವೆ ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಚಿತ್ರತಂಡಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಆದ ಪ್ರಮಾದಗಳನ್ನು ಪಟ್ಟಿ ಮಾಡಿರುವ ಅವರು, ತಪ್ಪುಗಳನ್ನು ತಿದ್ದಿಕೊಳ್ಳಲು ಸೂಚಿಸಿದ್ದಾರೆ. ಇದನ್ನೂ ಓದಿ:ಪವನ್ ಒಡೆಯರ್ ಬಾಲಿವುಡ್ ಚಿತ್ರಕ್ಕೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಪತ್ನಿ ನಾಯಕಿ

    ಆದಿಪುರುಷ್ ಸಿನಿಮಾದಲ್ಲಿ ಹಿಂದೂಗಳ ಭಾವನೆ ಧಕ್ಕೆ ಮಾಡಲಾಗಿದೆ ಎಂದು ಗೃಹ ಸಚಿವರು ಆರೋಪಿಸಿದ್ದು, ಈಗಾಗಲೇ ಬಿಡುಗಡೆಗೊಂಡ ಟೀಸರ್ ನಲ್ಲಿ ಹನುಮಂತ ಪಾತ್ರಧಾರಿಗೆ ಲೆದರ್ ಬಟ್ಟೆಗಳನ್ನು ತೊಡಿಸಲಾಗಿದೆ. ಹನುಮನ ಸೈನ್ಯಕ್ಕೂ ಲೆದರ್ ಬಟ್ಟೆ ಇದೆ. ಹೀಗಾಗಿ ಹನುಮ ದೇವರಿಗೆ ಅಪಮಾನ ಮಾಡಲಾಗಿದೆ ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅದನ್ನು ಸರಿ ಮಾಡದೇ ಇದ್ದರೆ ಪರಿಣಾಮ ಸರಿ ಇರಲ್ಲ ಎಂದು ಚಿತ್ರತಂಡಕ್ಕೆ ತಿಳಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಮಿಶ್ರಾ, ಲೆದರ್ ಬಟ್ಟೆಗಳನ್ನು ಹಾಕಿರುವ ಕುರಿತು ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಪತ್ರ ಬರೆಯುವುದಾಗಿ ತಿಳಿಸಿರುವ ಅವರು, ಒಂದು ವೇಳೆ ಆ ದೃಶ್ಯಗಳನ್ನು ತಗೆದು ಹಾಕದೇ ಇದ್ದರೆ ಕಾನೂನು ಕ್ರಮಕ್ಕೂ ತಾವು ಹಿಂಜರಿಯುವುದಿಲ್ಲ ಎನ್ನುತ್ತಾರೆ.  ಇಂತಹ ಅಪಮಾನಗಳನ್ನು ಯಾವತ್ತಿಗೂ ಹಿಂದೂಗಳ ಸಹಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ.

    ಆದಿ ಪುರುಷ್ ಟೀಸರ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಸ್ವತಃ ಪ್ರಭಾಸ್ ಕೂಡ ಕೋಪ ಮಾಡಿಕೊಂಡಿದ್ದಾರೆ. ಟೀಸರ್ ಬಿಡುಗಡೆ ಸಮಾರಂಭ ಮುಗಿದ ನಂತರ ನಿರ್ದೇಶಕರನ್ನು ತಮ್ಮ ರೂಮ್ ಗೆ ಕರೆದು ಬೈದಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ಸೈಫ್ ಅಲಿ ಖಾನ್ ಅವರಿಗೆ ರಾವಣನ ಪಾತ್ರ ಕೊಟ್ಟಿದ್ದಕ್ಕೂ ಹಲವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ರಾವಣನ ರೀತಿಯಲ್ಲಿ ಅವರು ಕಾಣುತ್ತಿಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]