Tag: ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್

  • ‘ಪುಷ್ಪಕ ವಿಮಾನ’ ರೀ- ರಿಲೀಸ್: ಅಪ್‌ಡೇಟ್‌ ಕೊಟ್ಟ ಕಮಲ್‌ ಹಾಸನ್

    ‘ಪುಷ್ಪಕ ವಿಮಾನ’ ರೀ- ರಿಲೀಸ್: ಅಪ್‌ಡೇಟ್‌ ಕೊಟ್ಟ ಕಮಲ್‌ ಹಾಸನ್

    ಭಾರತೀಯ ಚಿತ್ರರಂಗ ಕಂಡ ಎವರ್‌ಗ್ರೀನ್ ಸಿನಿಮಾ ಅಂದರೆ ಕಮಲ್ ಹಾಸನ್ (Kamal Haasan) ನಟನೆಯ ‘ಪುಷ್ಪಕ ವಿಮಾನ’. ಸಿನಿಮಾದಲ್ಲಿ ಒಂದೇ ಒಂದು ಡೈಲಾಗ್ ಇಲ್ಲದೇ ನಟನೆಯ ಮೂಲಕ ಕಮಲ್ & ಟೀಮ್ ಕಮಾಲ್ ಮಾಡಿದ್ರು. ಇದೀಗ ಮತ್ತೆ ಈ ಚಿತ್ರ ರೀ-ರಿಲೀಸ್ ಆಗುತ್ತಿದೆ. ಈ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ‘ಪುಷ್ಪಕ ವಿಮಾನ’ (Pushpaka Vimana) ಸಿನಿಮಾ ಮತ್ತೆ ಮರು ಬಿಡುಗಡೆ ಮಾಡೋದಕ್ಕೆ ಕಮಲ್ ಹಾಸನ್ ನಿರ್ಮಾಣ ಸಂಸ್ಥೆ ನಿರ್ಧರಿಸಿದೆ. ಕಮಲ್ ಒಡೆತನದ ರಾಜ್ ಕಮಲ್ ಫಿಲ್ಮ್ಸ್‌ ಇಂಟರ್‌ನ್ಯಾಷನಲ್ ಸಂಸ್ಥೆ ಟ್ವೀಟ್ ಮಾಡಿ ತಿಳಿಸಿದೆ. ಇದನ್ನೂ ಓದಿ:ಒಟಿಟಿಯಲ್ಲಿ ‘ತುಂಗಾ ಹಾಸ್ಟೆಲ್ ಬಾಯ್ಸ್’ ಹಾವಳಿ ಶುರು

    ಬೆಂಗಳೂರಿನ ವಿಂಡ್ಸರ್ ಮ್ಯಾನರ್‌ನಲ್ಲಿ ಬಹುತೇಕ ಸಿನಿಮಾ ಚಿತ್ರೀಕರಣವನ್ನು ಮಾಡಲಾಗಿತ್ತು. ಹೀಗಾಗಿ ಪುಷ್ಪಕ ವಿಮಾನ ಸಿನಿಮಾಗೂ ಕರ್ನಾಟಕಕ್ಕೂ ಬಿಡಲಾರದ ನಂಟಿದೆ. ಈ ಹಿಂದೆ ಕೂಡ ಈ ಸಿನಿಮಾ ಕನ್ನಡದಲ್ಲೂ ‘ಪುಷ್ಪಕ ವಿಮಾನ’ (Pushpaka Vimana) ಅಂತ ಟೈಟಲ್ ಕೊಟ್ಟು ಬಿಡುಗಡೆ ಮಾಡಲಾಗಿತ್ತು. ಆದ್ರೀಗ ಮರುಬಿಡುಗಡೆ ಬಗ್ಗೆ ಅನೌನ್ಸ್ಮೆಂಟ್‌ನಲ್ಲಿ ಪೋಸ್ಟರ್‌ನಲ್ಲಿ ತಮಿಳು ಮತ್ತ ಹಿಂದಿ ಚಿತ್ರದ ಪೋಸ್ಟರ್ ಇದೆ. ಕನ್ನಡದ ಟೈಟಲ್ ಇಲ್ಲದಂತಾಗಿದೆ. ಹೀಗಾಗಿ ಕನ್ನಡದ ಟೈಟಲ್ ಎಲ್ಲಿ ಅಂತಾ ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ.

    ಕಮಲ್ ಹಾಸನ್ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ಇಂಟರ್‌ನ್ಯಾಷನಲ್ ಪುಷ್ಪಕ ವಿಮಾನ ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಹಾಗೇ ಶ್ರೀನಗರ ನಾಗರಾಜ್ ಈ ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದರು. ಸುಮಾರು 35 ಲಕ್ಷ ರೂಪಾಯಿ ವೆಚ್ಚದಲ್ಲಿ ಅಂದೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರಕ್ಕೆ ಎಲ್ಲಾ ಭಾಷೆಯಲ್ಲೂ ಅದ್ಭುತ ಯಶಸ್ಸು ಸಿಕ್ಕಿದ್ದರಿಂದ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಆಗಿತ್ತು.

    1987ರಲ್ಲಿ ಬಹುಭಾಷೆಗಳಲ್ಲಿ ರಿಲೀಸ್ ಆದ ಹಾಗೇ ಈಗಲೂ ರಿಲೀಸ್ ಆಗುತ್ತಾ? ಮುಂದಿನ ದಿನಗಳಲ್ಲಿ ರಿಲೀಸ್‌ ಕುರಿತು ಹೆಚ್ಚಿನ ಅಪ್‌ಡೇಟ್ ಸಿಗುತ್ತಾ ಕಾಯಬೇಕಿದೆ. ಚಿತ್ರದಲ್ಲಿ ಕಮಲ್ ಜೊತೆ ಸಮೀರ್ ಕಕ್ಕರ್, ಟೀನು ಆನಂದ್, ಅಮಲಾ(Amala), ಕೆ.ಎಸ್ ರಮೇಶ್ ಸೇರಿದಂತೆ ಹಲವರು ನಟಿಸಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]