Tag: ರಾಜ್ಯ ಹವಾಮಾನ ಇಲಾಖೆ

  • ನೈಋತ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ – ರಾಜ್ಯದ ಹಲವು ಜಿಲ್ಲೆಗಳಿಗೆ ಇಂದು ಮಳೆ ಅಲರ್ಟ್

    ನೈಋತ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ – ರಾಜ್ಯದ ಹಲವು ಜಿಲ್ಲೆಗಳಿಗೆ ಇಂದು ಮಳೆ ಅಲರ್ಟ್

    ಬೆಂಗಳೂರು: ಶ್ರೀಲಂಕಾದ ಪೂರ್ವ ಕರಾವಳಿ, ನೈಋತ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಿಗೆ ಇಂದು (ಜ.13) ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (State Meteorological Department) ಮೂನ್ಸೂಚನೆ ನೀಡಿದೆ.ಇದನ್ನೂ ಓದಿ: ಕಣ್ವ ಜಲಾಶಯದಲ್ಲಿ ಪತ್ನಿಯೊಂದಿಗೆ ಸಿಪಿವೈ ವಾಟರ್ ಬೈಕ್ ರೈಡ್

    ಮೈಸೂರು, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಮಂಜು ಇರುವ ಸಾಧ್ಯತೆಯಿದೆ. ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ರಾಮನಗರ ಜಿಲ್ಲೆಗಳಿಗೆ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಕರಾವಳಿ ಕರ್ನಾಟಕದ ಭಾಗಗಳು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಹೆಚ್ಚಾಗಿರಲಿದೆ.

    ಇನ್ನೂ ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಮಂಜುಕವಿದ ವಾತವರಣ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಇದನ್ನೂ ಓದಿ: ಆ್ಯಪಲ್ ಸಹ ಸಂಸ್ಥಾಪಕ ಸ್ವೀವ್‌ ಜಾಬ್ಸ್‌ ಪತ್ನಿ ಲಾರೆನ್ ಇನ್ಮುಂದೆ ʻಕಮಲಾʼ – ಹಿಂದೂ ಹೆಸರು ನಾಮಕರಣ

     

     

  • ವಾಯುಭಾರ ಕುಸಿತ – ನಾಳೆಯಿಂದ ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ ಶುರು

    ವಾಯುಭಾರ ಕುಸಿತ – ನಾಳೆಯಿಂದ ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ ಶುರು

    ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ರಾಜ್ಯದಲ್ಲಿ ಮಳೆ (Rain) ಮತ್ತೆ ಆರಂಭವಾಗಲಿದೆ. ಬೆಂಗಳೂರು (Bengaluru) ಸೇರಿ 4 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ದಕ್ಷಿಣ ಅಂಡಮಾನ್ ಸಮುದ್ರದಲ್ಲಿ 5.8 ಕಿಲೋ ಮೀಟರ್ ಎತ್ತರದಷ್ಟು ಮೇಲ್ಮೈ ಸುಳಿಗಾಳಿ ಎದ್ದಿದೆ. ಇದರ ಪ್ರಭಾವದಿಂದಾಗಿ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮಳೆ ಎಚ್ಚರಿಕೆ ನೀಡಿದೆ. ಇಂದಿನಿಂದ ಡಿಸೆಂಬರ್ 8 ರವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಯ ಕೆಲವೆಡೆಗಳಲ್ಲಿ ಭಾರೀ ಮಳೆ ಸಾಧ್ಯತೆ ಗೋಚರಿಸಿದ್ದು, ಡಿಸೆಂಬರ್ 8, 9 ಮತ್ತು 10 ರಂದು ಗುಡುಗು ಸಹಿತ ವ್ಯಾಪಕ ಮಳೆ ಬರುವ ಸಾಧ್ಯತೆ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ನಾಳೆ ಮದ್ದೂರು ಬೈಪಾಸ್ ಓಪನ್

    weather

     

    ರಾಜಧಾನಿ ಬೆಂಗಳೂರಿನಲ್ಲಿ (Bengaluru) ವಾತಾವರಣ ಸಹಜ ಸ್ಥಿತಿಯಲ್ಲಿದ್ದು, ಡಿಸೆಂಬರ್ 8 ರವರೆಗೆ ಚಳಿ, ಸಾಧಾರಣ ಮಳೆಯಾಗಲಿದೆ. ಬೆಳಗಿನ ಜಾವ ದಟ್ಟ ಮಂಜು ಇರಲಿದೆ. ಡಿಸೆಂಬರ್ 7 ರಿಂದ 10 ರವರೆಗೆ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಮಿಂಚು ಸಹಿತ ಹಗುರ ಮಳೆ ಸುರಿಯುವ ಸಾಧ್ಯತೆ ಕಂಡುಬಂದಿದೆ. ಹಿಂಗಾರು ಮಳೆ ಮತ್ತೆ ಚುರುಕು ಪಡೆಯಲಿದ್ದು, ಡಿಸೆಂಬರ್ 8 ರಿಂದ ದಕ್ಷಿಣ ಒಳನಾಡಿನ ಭಾಗದಲ್ಲಿ ಮಳೆ ಅಬ್ಬರ ಶುರುವಾಗಲಿದೆ. ಇದನ್ನೂ ಓದಿ: ಕರ್ನಾಟಕ ಚುನಾವಣೆಗೆ ಹಿಂದುತ್ವ, ದೇಶಾಭಿಮಾನವೇ ಬಿಜೆಪಿ ತಂತ್ರ- ಸಚಿವರಿಗೆ ಹೈಕಮಾಂಡ್ ಟಾಸ್ಕ್ ಡೆಡ್ ಲೈನ್

    ಚಿಕ್ಕಬಳ್ಳಾಪುರ, ಕೋಲಾರ, ಕೊಡಗು ಮತ್ತು ರಾಮನಗರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆ ಬೀಳಲಿದ್ದು, ಗುಡುಗು ಸಹಿತ ಸುಮಾರು 11 ಸೆಂಟಿಮೀಟರ್ ನಷ್ಟು ಮಳೆ ದಾಖಲಾಗಬಹುದು ಎಂದು ಎಚ್ಚರಿಕೆ ನೀಡಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಹ ಜೋರು ಮಳೆ ಆಗಲಿದೆ. ಮಳೆ ನಿಗದಿತ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಗ್ರಹಣದ ಬಳಿಕ ಹಠಾತ್ ತಾಪಮಾನ ಏರಿಕೆ

    ಗ್ರಹಣದ ಬಳಿಕ ಹಠಾತ್ ತಾಪಮಾನ ಏರಿಕೆ

    – 4, 5 ದಿನ ರಾಜ್ಯದಲ್ಲಿ ತಾಪಮಾನ ಏರಿಕೆ ಸಾಧ್ಯತೆ

    ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿ ಘರ್ಜಿಸುತ್ತಿದ್ದರೆ, ಇತ್ತ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಸಿಲಿನ ಪ್ರತಾಪ ಹೆಚ್ಚಾಗಿದೆ. ಕಂಕಣ ಸೂರ್ಯಗ್ರಹಣ ಮುಗಿದ ಬಳಿಕ ರಾಜ್ಯದಲ್ಲಿ ಹಠಾತ್ ತಾಪಮಾನ ಏರಿಕೆಯಾಗಿದೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಾಖಲೆಯ ಚಳಿ ದಾಖಲಾಗಿದೆ. 2.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದೆಹಲಿಯಲ್ಲಿ ದಾಖಲಾಗಿದ್ದು, ಕೊರೆಯುವ ಚಳಿಯಿಂದಾಗಿ ಹಿಮ ಕೂಡ ಹೆಚ್ಚಾಗಿದೆ. ಇತ್ತ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಳೆದ ಎರಡು ದಿನಗಳಿಂದ ಹವಾಮಾನದಲ್ಲಿ ವೈಪರೀತ್ಯ ಉಂಟಾಗಿದೆ. ಕಂಕಣ ಸೂರ್ಯಗ್ರಹಣ ಬಳಿಕ ರಾಜ್ಯದಲ್ಲಿ ಹಠಾತ್ ಬಿಸಿಲಿನ ತಾಪಮಾನ ಏರಿಕೆಯಾಗಿದೆ. ಇಷ್ಟು ದಿನ ಚಳಿಯಿಂದ ನಡುಗುತ್ತಿದ್ದ ಜನ, ಇದೀಗಾ ಬಿಸಿಲು ಸೆಕೆಯನ್ನ ಅನುಭವಿಸುತ್ತಿದ್ದಾರೆ.

    ಗ್ರಹಣ ಮುಗಿದ ಬಳಿಕ ಕಳೆದ ಎರಡು ದಿನಗಳಿಂದ ಕರ್ನಾಟಕದಾದ್ಯಂತ ತಾಪಮಾನ ಏರಿಕೆಯಾಗಿದೆ. ಪೂರ್ವ, ಆಗ್ನೇಯ ದಿಕ್ಕಿನಿಂದ ಬಿಸಿಗಾಳಿ ಬೀಸುತ್ತಿದೆ. ಅರಬ್ಬೀ ಸಮುದ್ರದ ಪಶ್ಚಿಮ ಭಾಗದಲ್ಲಿ ಲೋ ಪ್ರೆಸರ್ ಸಿಸ್ಟಮ್ ಇತ್ತು. ಇದರಿಂದ ಪೂರ್ವ ಭಾಗದಿಂದ ಗಾಳಿ ಬರುತ್ತಿದೆ. ಇಲ್ಲಿಂದ ಬರುವ ಗಾಳಿ ತೇವಾಂಶವನ್ನ ತರುತ್ತದೆ. ಇದರಿಂದನೇ ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಿದೆ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ 15-17 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಆದರೆ ಇಂದು 17-19 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ನಾಲ್ಕೈದು ದಿನಗಳಲ್ಲಿ ಮತ್ತಷ್ಟೂ ತಾಪಮಾನ ಹೆಚ್ಚಾಗುವ ಸಾಧ್ಯತೆಗಳಿವೆ. ಒಟ್ಟಾರೆ ರಾಜ್ಯದಲ್ಲಿ ಉಷ್ಣಾಂಶದ ಪ್ರಮಾಣ 20 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ತಿಳಿಸಿದ್ದಾರೆ.

    ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆಗಿಂತ 2 ರಿಂದ 5 ಡಿಗ್ರಿ ಸೆಲ್ಸಿಯಸ್ ತನಕ ತಾಪಮಾನ ಏರಿಕೆಯಾಗುವ ಸಾಧ್ಯತೆಗಳಿವೆ. ಉತ್ತರ ದಿಕ್ಕಿನಿಂದ ಗಾಳಿ ಬೀಸಿದರೆ ಮಾತ್ರ ರಾಜ್ಯದಲ್ಲಿ ತಾಪಮಾನ ಇಳಿಕೆಯಾಗುತ್ತೆ. ಪೂರ್ವ ದಿಕ್ಕಿನಿಂದ ಮತ್ತೇ ಏನಾದರೂ ಬಿಸಿಗಾಳಿ ಬಂದರೆ ಮತ್ತಷ್ಟು ತಾಪಮಾನ ಏರಿಕೆಯಾಗಲಿದ್ದು, ಬೇಸಿಗೆಯ ಅನುಭವ ಆಗೋದು ಗ್ಯಾರಂಟಿ. ಪ್ರಾಕೃತಿಕ ವಲಯದಲ್ಲಿ ಈ ವ್ಯತ್ಯಾಸಗಳು ಸಾಮಾನ್ಯ ಆಗಿರುವುದರಿಂದ ಒಂದು ವಾರದೊಳಗೆ ಸಹಜಸ್ಥಿತಿಗೆ ಹವಾಮಾನ ಬರಲಿದೆ.