Tag: ರಾಜ್ಯ ಸಭಾ ಚುನಾವಣೆ

  • ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್‍ನಿಂದ ಜೈರಾಮ್ ರಮೇಶ್‍ಗೆ ಟಿಕೆಟ್

    ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್‍ನಿಂದ ಜೈರಾಮ್ ರಮೇಶ್‍ಗೆ ಟಿಕೆಟ್

    ನವದೆಹಲಿ: ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ನಿಂದಲೂ ರಾಜ್ಯಸಭಾ ಚುನಾವಣೆಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಕೈ ಪಾಳಯದಿಂದ ಜೈರಾಮ್ ರಮೇಶ್ ಮುಂದುವರಿಸಲು ಹೈಕಮಾಂಡ್ ನಿರ್ಧಾರ ಮಾಡಿದೆ.

    ಕಾಂಗ್ರೆಸ್ ನಿಂದ ಜೈರಾಮ್ ರಮೇಶ್ ಅಂತಿಮವಾದ್ರೆ, ಬಿಜೆಪಿಯಿಂದ ನಿರ್ಮಲಾ ಸೀತರಾಮನ್ ಮತ್ತು ನಟ ಜಗ್ಗೇಶ್ ಅಂತಿಮ ಹೆಸರು ಘೋಷಣೆ ಮಾಡಲಾಗಿದೆ. ರಾಜ್ಯದ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಮೂವರು ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ. ನಾಲ್ಕನೇ ಸ್ಥಾನಕ್ಕೆ ಅಭ್ಯರ್ಥಿಯ ಯಾರು ಅನ್ನೋದು ಇನ್ನು ಕುತೂಹಲವಾಗಿಯೇ ಉಳಿದಿದೆ. ನಾಲ್ಕನೇ ಅಭ್ಯರ್ಥಿಗೆ ಕಾಂಗ್ರೆಸ್ ಬಿಜೆಪಿಯಿಂದ ಯಾರೇ ಅಭ್ಯರ್ಥಿಯಾದ್ರು ಜೆಡಿಎಸ್ ಬೆಂಬಲ ಬೇಕಿದೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಜಗ್ಗೇಶ್, ನಿರ್ಮಲಾ ಸೀತಾರಾಮನ್‍ಗೆ ಸಿಕ್ತು ಬಿಜೆಪಿ ಟಿಕೆಟ್

    ಒಂದು ವೇಳೆ ಜೆಡಿಎಸ್ ಅಭ್ಯರ್ಥಿ ಹೆಸರು ಘೋಷಿಸಿದ್ರು ಕಾಂಗ್ರೆಸ್ ಅಥವಾ ಬಿಜೆಪಿಯ ಬೆಂಬಲ ಬೇಕಿದೆ. ಆದರೆ ಈವರೆಗೂ ಮೈತ್ರಿ ಮಾತುಕತೆ ಅಂತಿಮವಾಗದ ಕಾರಣ ನಾಲ್ಕನೇ ಅಭ್ಯರ್ಥಿ ಯಾರು ಅನ್ನೋದು ಕುತೂಹಲವಾಗಿಯೇ ಉಳಿದಿದೆ. ಬಿಜೆಪಿ ಉದ್ಯಮಿ ಪ್ರಕಾಶ್ ಶೆಟ್ಟಿ ಮತ್ತು ಲಹರಿ ವೇಲು ಹೆಸರು ಮುಂಚೂಣಿಯಲ್ಲಿ ತಂದಿದ್ದರೇ ಜೆಡಿಎಸ್ ಕುಪೇಂದ್ರ ರೆಡ್ಡಿ ಹೆಸರನ್ನು ಪ್ರಸ್ತಾಪಿಸಿದೆ. ಕುಪೇಂದ್ರ ರೆಡ್ಡಿ ಬಿಜೆಪಿ ಬದಲು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದು, ಬಿಜೆಪಿ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ. ಹೀಗಾಗಿ ನಾಲ್ಕನೇ ಅಭ್ಯರ್ಥಿ ಯಾರಾಗಬಹುದು, ಯಾವ್ಯಾವ ಪಕ್ಷಗಳ ನಡುವೆ ಮೈತ್ರಿಯಾಗಲಿದೆ ಎಂದು ಇಂದು ಗೊತ್ತಾಗಲಿದೆ.

    ಒಟ್ಟಿನಲ್ಲಿ ಜೂನ್ 10ರಂದು ಕರ್ನಾಟಕ ಸೇರಿದಂತೆ 15 ರಾಜ್ಯಗಳಲ್ಲಿನ 57 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶವೊಂದರಲ್ಲೇ 11 ಸ್ಥಾನಗಳಿವೆ. ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ 6 ಸ್ಥಾನಗಳಿವೆ. ಬಿಹಾರದಲ್ಲಿ 5, ಕರ್ನಾಟಕ, ಆಂಧ್ರಪ್ರದೇಶ ಮತ್ತು ರಾಜಸ್ಥಾನದಲ್ಲಿ 4 ಸ್ಥಾನಗಳು ತೆರವಾಗಿದ್ದು, ಚುನಾವಣೆ ನಡೆಯಲಿದೆ. ಈ 57 ಸ್ಥಾನಗಳ ಪೈಕಿ ಕಾಂಗ್ರೆಸ್  8 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಇದನ್ನೂ ಓದಿ: ಜಗ್ಗೇಶ್‍ಗೆ ರಾಜ್ಯಸಭಾ ಟಿಕೆಟ್- ರಾಯರ ಕೃಪೆ, ಪವಾಡಕ್ಕೆ ಧನ್ಯ ಅಂದ್ರು ನವರಸ ನಾಯಕ

    ರಾಜಸ್ಥಾನದಲ್ಲಿ 2, ಛತ್ತೀಸ್‍ಗಡದಲ್ಲಿ 2, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ತಲಾ ಒಂದೊಂದು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ರಾಜಸ್ಥಾನದಲ್ಲಿ ಬಿಜೆಪಿಯೇತರ ಎಲ್ಲಾ ಪಕ್ಷಗಳ ಬೆಂಬಲ ಸಿಕ್ಕರೆ ಒಂದು ಹೆಚ್ಚುವರಿ ಸ್ಥಾನ ಕೂಡ ಕಾಂಗ್ರೆಸ್‍ಗೆ ಸಿಗುವ ಸಾಧ್ಯತೆಗಳಿವೆ.