Tag: ರಾಜ್ಯ ವಿಧಾನಸಭಾ ಚುನಾವಣೆ

  • ದಲಿತ ಮತಗಳ ಮೇಲೆ ಕಣ್ಣು-  ಎರಡು ಕ್ಷೇತ್ರಗಳಲ್ಲಿ ಸಿಎಂ ಚನ್ನಿ ಸ್ಪರ್ಧೆ?

    ದಲಿತ ಮತಗಳ ಮೇಲೆ ಕಣ್ಣು- ಎರಡು ಕ್ಷೇತ್ರಗಳಲ್ಲಿ ಸಿಎಂ ಚನ್ನಿ ಸ್ಪರ್ಧೆ?

    ನವದೆಹಲಿ : ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎರಡು ಸ್ಥಾನಗಳಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ದಲಿತ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಮತಗಳ ಕ್ರೋಢೀಕರಣಕ್ಕೆ ಈ ತಂತ್ರ ರೂಪಿಸಿದೆ ಎನ್ನಲಾಗಿದೆ.

    ವಿಧಾನಸಭೆ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಿನ್ನೆ ಮಹತ್ವದ ಸಭೆ ನಡೆಸಲಾಯಿತು. ತಡರಾತ್ರಿವರೆಗೂ ನಡೆದ ಸಭೆಯಲ್ಲಿ 70 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ. ಸುಮಾರು 5 ಸ್ಥಾನಗಳ ಬಗ್ಗೆ ಒಮ್ಮತ ಮೂಡದ ಕಾರಣ ಮತ್ತೊಮ್ಮೆ ಪಕ್ಷದ ಸ್ಕ್ರೀನಿಂಗ್ ಕಮಿಟಿ ಸಭೆ ಸೇರಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದು ಇಂದು ಅಥವಾ ನಾಳೆ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಇದನ್ನೂ ಓದಿ: ರೇಷನ್‌ ಕಾರ್ಡ್‌ ಇದೆಯಾ: ಸ್ನಾನ ಮಾಡ್ತಿದ್ದ ವ್ಯಕ್ತಿ ಬಳಿ ಹೋಗಿ ಬಿಜೆಪಿ ಶಾಸಕನ ಪ್ರಶ್ನೆ

    ಸಭೆಯಲ್ಲಿ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್ ಚನ್ನಿ ಸ್ಪರ್ಧೆ ಬಗ್ಗೆಯೂ ಗಂಭೀರ ಚರ್ಚೆ ನಡೆದಿದೆ. ಪ್ರಸ್ತುತ ಚಮ್ಕೌರ್ ಸಾಹಿಬ್ ಕ್ಷೇತ್ರದ ಶಾಸಕರಾಗಿರುವ ಚನ್ನಿ, ಅವರನ್ನು ದಲಿತರು ಅತಿ ಹೆಚ್ಚು ಸಂಖ್ಯೆಯಲ್ಲಿರುವ ದೋಬಾ ಪ್ರದೇಶದಲ್ಲಿ ಬರುವ ಆದಂಪುರ ಕ್ಷೇತ್ರದಿಂದಲೂ ಕಣಕ್ಕಿಳಿಸಲು ಚಿಂತಿಸಲಾಗಿದೆ. ಇದನ್ನೂ ಓದಿ: ವಿಶೇಷ ವಿಕಲಚೇತನ ಅಪ್ಪು ಅಭಿಮಾನಿಯಿಂದ ಬೆಂಗಳೂರಿಗೆ ಪಾದಯಾತ್ರೆ

    ಸಮೀಕ್ಷೆಗಳ ಪ್ರಕಾರ ಗೆಲುವಿನ ಸನಿಹದಲ್ಲಿರುವ ಕಾಂಗ್ರೆಸ್, ದಲಿತರ ಮತಗಳನ್ನು ಸೆಳೆಯಲು ಈ ತಂತ್ರ ರೂಪಿಸುತ್ತಿದೆ ಎನ್ನಲಾಗಿದ್ದು, 1 ಅಥವಾ 2 ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಫೆಬ್ರವರಿ 10 ರಿಂದ ಪಂಚ ರಾಜ್ಯಗಳ ಚುನಾವಣೆ ಆರಂಭವಾಗಲಿದ್ದು, 2ನೇ ಹಂತದಲ್ಲಿ ಪಂಜಾಬ್‍ನಲ್ಲಿ ಚುನಾವಣೆ ನಡೆಯಲಿದೆ.

  • ಸಿಎಂ ಯಾರಾಗ್ತಾರೆ ಅನ್ನೋ ನಿರ್ಧಾರ ಮಾಡೋದು ಎಚ್‍ಡಿಡಿ: ಶಾ ನಿವಾಸದ ಮುಂದೆ ಜ್ಯೋತಿಷಿ ಭವಿಷ್ಯ

    ಸಿಎಂ ಯಾರಾಗ್ತಾರೆ ಅನ್ನೋ ನಿರ್ಧಾರ ಮಾಡೋದು ಎಚ್‍ಡಿಡಿ: ಶಾ ನಿವಾಸದ ಮುಂದೆ ಜ್ಯೋತಿಷಿ ಭವಿಷ್ಯ

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಾಕಷ್ಟು ಪ್ರಯತ್ನಪಟ್ಟರೆ ಮಾತ್ರ ಸರಳ ಬಹುಮತಗಳಿಸುತ್ತದೆ. ಇಲ್ಲವಾದರೆ ರಾಜ್ಯದಲ್ಲಿ ಸಿಎಂ ಪಟ್ಟ ಯಾರಿಗೆ ಅನ್ನೋದು ದೇವೇಗೌಡರ ಕೈಯಲ್ಲಿರುತ್ತದೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

    ಚುನಾವಣೆಯ ಕುರಿತಂತೆ ಭವಿಷ್ಯ ತಿಳಿಸಲು ಶಿರಸಿಯ ಶ್ರೀಕಾಂತ್ ಭಟ್ ಎಂಬವರು ಅಮಿತ್ ಶಾ ಅವರ ನಿವಾಸದ ಬಳಿ ಆಗಮಿಸಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ಮನೆ ಒಳ ಪ್ರವೇಶಿಸಲು ಅನುಮತಿ ನಿರಾಕರಿಸಿದ್ದರು. ಹೀಗಾಗಿ ಅಮಿತ್ ಶಾ ಮನೆಯ ಮುಂದೆ ನಿಂತು ಮಾಧ್ಯಮಗಳ ಜೊತೆ ತನ್ನ ಭವಿಷ್ಯವಾಣಿಯನ್ನು ಹೇಳಿದರು.

    ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಯಾವುದೇ ಸರ್ಕಾರ ಬಹುಮತ ಪಡೆಯುವುದಿಲ್ಲ. ಆದರೆ ಪ್ರಯತ್ನಪಟ್ಟರೆ ಬಿಜೆಪಿಗೆ ಬಹುಮತ ಬರಬಹುದು. ಬಿಜೆಪಿಯಲ್ಲಿ 2, 3 ಸಾವಿರ ಮತಗಳ ಅಂತರದಲ್ಲಿ ಸೋಲುವ ಅಭ್ಯರ್ಥಿಗಳು ಇದ್ದಾರೆ. ಅವರ ಕುರಿತು ತಾನು ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

    ಬಿಜೆಪಿ ನಾಯಕರು ಪಕ್ಷದಲ್ಲಿನ ಈ ತಪ್ಪುಗಳನ್ನು ಸರಿಪಡಿಸಿಕೊಂಡಿಲ್ಲ ಎಂದರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುತ್ತಾರೆ. ರಾಜ್ಯದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಎಂಬುವುದನ್ನು ಮಾಜಿ ಪ್ರಧಾನಿ ದೇವೇಗೌಡ ಅವರು ನಿರ್ಧರಿಸುತ್ತಾರೆ.

    ಅತಂತ್ರ ಸರ್ಕಾರ ಬಂದರೆ ಸಿದ್ದರಾಮಯ್ಯ ಹಾಗೂ ಬಿಎಸ್ ಯಡಿಯೂರಪ್ಪ ಅವರು ಮತ್ತೆ ಸಿಎಂ ಆಗಲು ಸಾಧ್ಯವಿಲ್ಲ. ಇನ್ನು ಹೆಚ್‍ಡಿ ರೇವಣ್ಣಗೆ ಸಿಎಂ ಆಗುವ ಅದೃಷ್ಟ ಇಲ್ಲದಿದ್ದರೂ, ಡಿಸಿಎಂ ಆಗುತ್ತಾರೆ ಎಂದು ಹೇಳಿದ್ದಾರೆ.

  • ಸಿಎಂ ಬಾರ್ ನಲ್ಲಿ ಪೆಗ್ ಹಾಕಿದವರಂತೆ ಮಾತನಾಡ್ತಿದ್ದಾರೆ: ಎಚ್‍ಡಿಕೆ

    ಸಿಎಂ ಬಾರ್ ನಲ್ಲಿ ಪೆಗ್ ಹಾಕಿದವರಂತೆ ಮಾತನಾಡ್ತಿದ್ದಾರೆ: ಎಚ್‍ಡಿಕೆ

    ವಿಜಯಪುರ: ಸಿಎಂ ಸಿದ್ದರಾಮಯ್ಯ ಅವರು ಬಾರ್ ನಲ್ಲಿ ಕುಡಿದು ಮಾತನಾಡುವ ಹಾಗೇ ಮಾತನಾಡುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯಲ್ಲಿ ಪಕ್ಷದ ಪರ ಪ್ರಚಾರ ನಡೆಸುವ ವೇಳೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಅಪ್ಪನ ಮೇಲೆ ಆಣೆ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯಿಸಿದರು. ಸಿಎಂ ಬಾರ್ ನಲ್ಲಿ ಕುಳಿತು ಮಾತನಾಡಿದಂತೆ ಮಾತನಾಡುತ್ತಾರೆ. ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಯಾಗಿ ಮಾತನಾಡಲ್ಲ. ಈ ರೀತಿ ಮಾತನಾಡುವುದನ್ನು ಮೊದಲು ಅವರು ನಿಲ್ಲಿಸಬೇಕು ಎಂದು ಟಾಂಗ್ ನೀಡಿದರು.

    ರಾಹುಲ್ ಗಾಂಧಿ ರಾಜ್ಯದಲ್ಲಿ ಪ್ರಚಾರ ಮಾಡಿದಷ್ಟು ಕಾಂಗ್ರೆಸ್ ಪಕ್ಷ ಕುಸಿಯುತ್ತ ಹೋಗುತ್ತೆ. ರಾಹುಲ್ ಪ್ರಚಾರದಿಂದ ಜನಾಕರ್ಷಣೆ ಆಗುವುದಿಲ್ಲ. ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ಯಶಸ್ವಿಯಾಗುವುದಿಲ್ಲ. ಕೋಲಾರ, ಚಿಕ್ಕಬಳ್ಳಾಪುರ ದಲ್ಲಿ ಜನರು ಸೇರಿಲ್ಲ. ಜನತೆಗೆ ರಾಷ್ಟ್ರೀಯ ಪಕ್ಷಗಳ ನಾಯಕರ ಮೇಲಿನ ವಿಶ್ವಾಸ ಹಾಗೂ ಆಕರ್ಷಣೆ ಕಡಿಮೆಯಾಗಿದೆ ಎಂದರು.

    ಸಿಎಂ ಸಿದ್ದರಾಮಯ್ಯ ಅವರು ಸ್ವಂತ ರಾಮನಗರಕ್ಕೆ ಬಂದು ಪ್ರಚಾರ ಮಾಡಿದ್ರೂ ನಾನು ಗಾಬರಿಯಾಗಲ್ಲ. ಇದಕ್ಕೆ ರಾಮನಗರ ಜನರು ಉತ್ತರ ಕೊಡುತ್ತಾರೆ. ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಮಾತೆ ಮಹಾದೇವಿಗೆ ಕಾಂಗ್ರೆಸ್ ಗೆ ಮತ ಹಾಕಿ ಎಂದು ಹೇಳಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಮತ ಬೀಳುವುದಿಲ್ಲ. ಜೆಡಿಎಸ್ ಗೆ ಪರವಾಗಿ ಮತ ನೀಡುತ್ತಾರೆ. ಎಂದರು.

    ಕೇಂದ್ರ ಸರ್ಕಾರದ ಆಡಳಿತ ನೋಡಿದ ಜನರು ಅಲ್ಲದೇ ಪ್ರಾಣಿಗಳು ಕೂಡ ಅವರ ವಿರುದ್ಧ ಹೋರಾಟ ಮಾಡುವ ಭಾವನೆ ಮೂಡಿದೆ. ಕೇಂದ್ರ ಸರ್ಕಾರದ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಜೋಡಿ ಆಡಳಿತ ನೋಡಿ ಪ್ರಾಣಿಗಳಿಗೆ ಬೇಸರವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಅವರಿಗೆ ಟಾಂಗ್ ನೀಡಿದರು. ಶಾಸಕ ಸಿಪಿ ಯೋಗಿಶ್ವರ್ ಗೆ ನೋಟಿಸ್ ನೀಡಿರುವ ಕುರಿತು, ಅವರು ಏನು? ಉತ್ತರ ನೀಡುತ್ತಾರೆ ನೋಡೋಣ, ಯಾರು ಬೇನಾಮಿ, ಸ್ವನಾಮೀ ಆಸ್ತಿ ಮಾಡಿಕೊಂಡಿದ್ದಾರೆ ಎಂಬುವುದು ತಿಳಿಯುತ್ತದೆ ಎಂದು ಹೇಳಿದರು.