Tag: ರಾಜ್ಯ ರೈತ ಸಂಘ

  • ರಾಜ್ಯ ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ವಜಾ

    ರಾಜ್ಯ ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ವಜಾ

    ಶಿವಮೊಗ್ಗ: ರಾಜ್ಯ ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ವಜಾ ಮಾಡಲಾಗಿದೆ.

    ಇಂದು ಶಿವಮೊಗ್ಗದ ರೈತ ಸಂಘದ ಕಚೇರಿಯಲ್ಲಿ ನಡೆದ ರಾಜ್ಯ ರೈತ ಸಂಘದ ತುರ್ತು ಸಭೆಯಲ್ಲಿ ಈ ತೀರ್ಮಾನವನ್ನು ತೆಗದುಕೊಳ್ಳಲಾಗಿದೆ. ಸಭೆಯಲ್ಲಿ ರೈತರು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಕೋಡಿಹಳ್ಳಿ ವಜಾ ಮಾಡಲು ಆಗ್ರಹಿಸಿದರು.

    ಹಸಿರು ಟವೆಲ್ ತಿರುಗಿಸಿ ಕೋಡಿಹಳ್ಳಿ ಚಂದ್ರಶೇಖರ್ ವಜಾ ಮಾಡುವಂತೆ ಆಕ್ರೋಶ ಹೊರಹಾಕಿದರು. ಅಂತೆಯೇ ರಾಜ್ಯ ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ವಜಾಗೊಳಿಸಿ ನೂತನ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡಲಾಯಿತು. ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ಅಣಕು ಶವಯಾತ್ರೆ ನಡೆಸಿ ಕರವೇ ಪ್ರತಿಭಟನೆ

    ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷರಾಗಿ ಹೆಚ್.ಆರ್. ಬಸವರಾಜಪ್ಪ ಆಯ್ಕೆಯಾಗಿದ್ದಾರೆ. ರೈತ ಸಂಘ ಒಮ್ಮತದಿಂದ ತೀರ್ಮಾನಿಸಲಾಗಿದೆ.

  • ಹಲಾಲ್ ಕಟ್ ಮಾಂಸ ಖರೀದಿ ಉತ್ತೇಜಿಸಲು ಅಭಿಯಾನ: ದೇವನೂರ ಮಹಾದೇವ ನೇತೃತ್ವ

    ಹಲಾಲ್ ಕಟ್ ಮಾಂಸ ಖರೀದಿ ಉತ್ತೇಜಿಸಲು ಅಭಿಯಾನ: ದೇವನೂರ ಮಹಾದೇವ ನೇತೃತ್ವ

    ಮೈಸೂರು: ಹೊಸತೊಡಕು ಹಿನ್ನೆಲೆಯಲ್ಲಿ ಮಾಂಸ ಖರೀದಿ ಜೋರಾಗಿ ನಡೆಯುತ್ತಿದೆ. ಈ ನಡುವೆ ಮುಸ್ಲಿಂ ಬಾಂಧವರ ನಡುವೆ ಸಾಮರಸ್ಯ ಸಾರಿ, ಹಲಾಲ್ ಕಟ್ ಮಾಂಸ ಖರೀದಿಗೆ ಉತ್ತೇಜನ ನೀಡಲು ಪ್ರಗತಿಪರರು ವಿಶೇಷ ಅಭಿಯಾನವನ್ನೇ ಆರಂಭಿಸಿದ್ದಾರೆ. ಮಾಂಸದ ಅಂಗಡಿಗಳಲ್ಲೂ ಬೇವು-ಬೆಲ್ಲ ಹಂಚಿ ಸಂಭ್ರಮಿಸುತ್ತಿದ್ದಾರೆ.

    ಮೈಸೂರಿನಲ್ಲಿ ಸಕಲೆಂಟು ಜಾತಿ ಸಹಬಾಳ್ವೆ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಸೇರಿದಂತೆ ಪ್ರತಿಪರ ಸಂಘಟನೆಗಳಿಂದ ಮೈಸೂರಿನ ಉದಯಗಿರಿ ರಸ್ತೆಯಲ್ಲಿರುವ ಮುಸ್ಲಿಂ ಅಂಗಡಿಯಲ್ಲಿ ಶಾಂತಿ ಸೌಹಾರ್ದತೆ, ಸಹಬಾಳ್ವೆಯ ಸಂದೇಶ ಸಾರುವ ಕಾರಣಕ್ಕಾಗಿ ಮಾಂಸ ಖರೀದಿಸುವ ಅಭಿಯಾನವೂ ನಡೆದಿದೆ. ಇದನ್ನೂ ಓದಿ: ಜಟ್ಕಾ ಕಟ್ ಮಟನ್ ಅಂಗಡಿಗಳ ಮುಂದೆ ಕೇಸರಿ ಧ್ವಜ

    DEVANURA MAHADEVA

    ಸಾಹಿತಿ ದೇವನೂರ ಮಹಾದೇವ, ಸಮಾಜವಾದಿ ಪ.ಮಲ್ಲೇಶ್, ಬಡಗಲಪುರ ನಾಗೇಂದ್ರ, ಗುರುಪ್ರಸಾದ್ ಕೆರಗೋಡು, ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ, ಪಿ.ಮರಂಕಯ್ಯ, ಬಸವರಾಜು, ಕಲ್ಲಹಳ್ಳಿ ಕುಮಾರ ಅವರು ಅಜೀಜ್ ಸೇಠ್ ಮುಖ್ಯ ರಸ್ತೆಯಲ್ಲಿನ ಸೈಯ್ಯದ್ ರಿಜ್ವಾನ್ ಅವರ ಕರ್ನಾಟಕ ಮಟನ್ ಅಂಡ್ ಚಿಕನ್ ಸ್ಟಾಲ್‌ನಲ್ಲಿ ಸಾಮೂಹಿಕವಾಗಿ ಹಲಾಲ್ ಕಟ್ ಮಾಂಸವನ್ನು ಖರೀದಿಸಿದ್ದಾರೆ.

  • ರೈತ ಸಂಘದ ಜಿಲ್ಲಾಧ್ಯಕ್ಷರನ್ನ ಏಕವಚನದಲ್ಲಿ ತರಾಟೆ ತೆಗೆದುಕೊಂಡ ರೈತ ಮಹಿಳೆ ಜಯಶ್ರೀ

    ರೈತ ಸಂಘದ ಜಿಲ್ಲಾಧ್ಯಕ್ಷರನ್ನ ಏಕವಚನದಲ್ಲಿ ತರಾಟೆ ತೆಗೆದುಕೊಂಡ ರೈತ ಮಹಿಳೆ ಜಯಶ್ರೀ

    ಬೆಳಗಾವಿ: ರಾಜ್ಯ ರೈತ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ಮತ್ತು ರೈತ ಮಹಿಳೆ ಜಯಶ್ರೀ ನಡುವೆ ಸಾರ್ವಜನಿಕವಾಗಿ ವಾಗ್ವಾದ ನಡೆದಿರುವ ಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ನಡೆದಿದೆ.

    ಕೊಡಿಹಳ್ಳಿ ಚಂದ್ರಶೇಖರ ಅವರ ವಿರುದ್ಧ ಜಯಶ್ರೀ ಮಾತನಾಡಿದ್ದಾರೆ ಎನ್ನಲಾಗಿದ್ದು, ಈ ವೇಳೆ ಸಂಘದ ಅಧ್ಯಕ್ಷ ಸತ್ಯಪ್ಪಾ ಅವರು ಏಕವಚನದಲ್ಲಿ ಜಯಶ್ರೀ ಅವರ ಕುರಿತು ಮಾತನಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಜಯಶ್ರೀ ಅವರು ನನ್ನ ಬಗ್ಗೆ ಮಾತನಾಡ ಬೇಡ. ನನ್ನ ಬಗ್ಗೆ ಕೇವಲವಾಗಿ ಮಾತನಾಡಿದರೆ ಸರಿ ಇರುವುದಿಲ್ಲ. ನಿನ್ನ ಹಿಂದೆ ಎಷ್ಟು ಜನ ಬರುತ್ತಾರೆ ಎಂದು ಏಕವಚನದಲ್ಲೇ ಪ್ರಶ್ನಿಸಿ ತರಾಟೆ ತೆಗೆದುಕೊಂಡಿದ್ದಾರೆ.

    ವಿವಿಧ ಭೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ರೈತ ಸಂಘದ ಮುಂದಾಳತ್ವದಲ್ಲಿ ಇಂದಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಘಟನೆ ನಡೆದಿದ್ದು, ಇಬ್ಬರ ಜಗಳವನ್ನು ಕಂಡ ಸಂಘದ ಇತರೇ ಸದಸ್ಯರು ಜಗಳ ಬಿಡಿಸಿದ್ದಾರೆ. ಬಳಿಕ ಸ್ಥಳದಿಂದ ರೈತ ಮಹಿಳೆ ಜಯಶ್ರೀ  ತೆರಳಿದ್ದಾರೆ.

    ಬೆಳಗಾವಿ ಅಧಿವೇಶನಕ್ಕೂ ಮುನ್ನ ಜಿಲ್ಲಾ ರೈತ ಸಂಘದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಆ ಬಳಿಕ ಸಂಘ ಎರಡು ಬಣಗಳಾಗಿ ವಿಭಜನೆ ಆಗಿದೆ ಎನ್ನಲಾಗಿದೆ. ಅಧಿವೇಶನಕ್ಕೂ ಮುನ್ನ ಕೋಡಿಹಳ್ಳಿ ಚಂದ್ರಶೇಖರ್ ಅವರು ಕೂಡ ಸಂಘದಲ್ಲಿ ಉಂಟಾದ ಬಿರುಕಿನಿಂದ ಅಸಮಾಧಾನಗೊಂಡಿದ್ದರು ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಅಂದು ಉಂಟಾದ ಅಸಮಾಧಾನವೇ ಇಂದು ಸದಸ್ಯರ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv