Tag: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

  • ರಾಯಚೂರಿನಲ್ಲಿ ಮತ್ತೊಂದು ಕಲುಷಿತ ನೀರು ಪ್ರಕರಣ: 20ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    ರಾಯಚೂರಿನಲ್ಲಿ ಮತ್ತೊಂದು ಕಲುಷಿತ ನೀರು ಪ್ರಕರಣ: 20ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

    ರಾಯಚೂರು: ಕಲುಷಿತ ನೀರು (Contaminated Water) ಸೇವಿಸಿ 20ಕ್ಕೂ ಹೆಚ್ಚು ಜನ ಆಸ್ಪತ್ರೆ ಸೇರಿದ ಪ್ರಕರಣ ಲಿಂಗಸೂರಿನ (Lingsugur) ಯರಗುಂಟಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಜನರು ತಡರಾತ್ರಿಯಿಂದ ತೀವ್ರ ವಾಂತಿ, ಭೇದಿಯಿಂದ ಬಳಲಿದ್ದಾರೆ. ಇದರಿಂದ ಹಲವರು ಅಸ್ವಸ್ಥರಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ವಸ್ಥಗೊಂಡ ಗ್ರಾಮಸ್ಥರನ್ನು ಲಿಂಗಸುಗೂರು, ಸಿಂಧನೂರು ಹಾಗೂ ರಾಯಚೂರಿನ (Raichur) ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಕಲುಷಿತ ನೀರು ಕುಡಿದು ಬಾಲಕ ಸಾವು ಪ್ರಕರಣ: ರಾಯಚೂರು ಜಿಪಂ ಸಿಇಓಗೆ ನೋಟಿಸ್

    ಗ್ರಾಮಕ್ಕೆ ಜಿಪಂ ಸಿಇಓ (Raichur ZP CEO) ಶಶಿಧರ್ ಕುರೇರಾ, ಡಿಎಚ್‍ಓ ಡಾ.ಸುರೇಂದ್ರ ಬಾಬು ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಯರಗುಂಟಿ ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಕಲುಷಿತ ನೀರಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಅಧಿಕಾರಿಗಳು ನೀರಿನ ಮಾದರಿ ಪಡೆದು ಪರೀಕ್ಷೆಗೆ ರವಾನಿಸಿದ್ದಾರೆ.

    ಗ್ರಾಮಸ್ಥರು ಕುಡಿಯಲು ಬೋರ್‌ವೆಲ್ ನೀರನ್ನು ಬಳಸುತ್ತಿದ್ದರು. ಅಲ್ಲಲ್ಲಿ ಪೈಪ್ ಒಡೆದು ಚರಂಡಿ ನೀರು ಮಿಶ್ರಣಗೊಂಡಿರುವ ಸಾಧ್ಯತೆಗಳಿವೆ. ಇದರಿಂದ ಆರೋಗ್ಯ ಸಮಸ್ಯೆ ಎದುರಾಗಿರುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಜಿಲ್ಲೆಯ ರೇಕಲಮರಡಿ, ಗೊರೆಬಾಳದಲ್ಲಿ ಇದೆ ರೀತಿಯ ಸಮಸ್ಯೆ ಎದುರಾಗಿ ಬಾಲಕ ಮೃತಪಟ್ಟಿದ್ದ. ಈ ಸಂಬಂಧ ಸಿಇಓ ಶಶಿಧರ್ ಕುರೇರಾ ಅವರಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಜಾರಿ ಮಾಡಿತ್ತು. ಇದನ್ನೂ ಓದಿ: ಕಲುಷಿತ ನೀರು ಸೇವಿಸಿ ಬಾಲಕ ಸಾವು – 30ಕ್ಕೂ ಹೆಚ್ಚು ಜನ ಅಸ್ವಸ್ಥ

  • ಪರಿಸರ ದಿನಾಚರಣೆಗೆ 20 ಲಕ್ಷ ಖರ್ಚು

    ಪರಿಸರ ದಿನಾಚರಣೆಗೆ 20 ಲಕ್ಷ ಖರ್ಚು

    ಬೆಂಗಳೂರು: ಪರಿಸರ ದಿನಾಚರಣೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಲಕ್ಷ ಲಕ್ಷ ದುಂದು ವೆಚ್ಚ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

    ಪರಿಸರ ದಿನಾಚರಣೆಗಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬರೋಬ್ಬರಿ 20 ಲಕ್ಷ ರೂಪಾಯಿ ಖರ್ಚು ಮಾಡಿದೆ ಎಂದು ತಿಳಿದು ಬಂದಿದೆ. ಜೂನ್ 5 ರಂದು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಮಾಡಲಾಗಿತ್ತು.

    ಸರಳವಾಗಿ ಆಚರಿಸಬೇಕಿದ್ದ ಪರಿಸರ ದಿನಾಚರಣೆಗೆ 20.45 ಲಕ್ಷ ರೂ. ಹಣ ಖರ್ಚಾಗಿದೆ. ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಪರಿಸರ ದಿನಾಚರಣೆಯನ್ನು ಆಚರಣೆ ಮಾಡಲಾಗಿದೆ.

    ಯಾವ್ಯಾವುದಕ್ಕೆ ಎಷ್ಟೆಷ್ಟು ವೆಚ್ಚ?
    * ತಿಂಡಿ – 1,77,975 ರೂ.
    * ಊಟ – 4,44,000 ರೂ.
    * ಸೌಂಡ್ ಮಿಕ್ಸರ್ ವ್ಯವಸ್ಥೆ – 1,10,250 ರೂ.
    * ತ್ಯಾಜ್ಯ ನಿರ್ವಹಣೆ ತಂಡ – 1,05,000 ರೂ.
    * ಸ್ಟೇಜ್ – 1,01,250 ರೂ.
    * ವೀಡಿಯೋಗ್ರಾಫರ್ – 94,920 ರೂ.
    * ಫೋಟೋಗ್ರಾಫರ್ – 47,460 ರೂ.
    * ಹೂಗುಚ್ಛ + ಹಣ್ಣಿನ ಬುಟ್ಟಿ – 94,500 ರೂ.
    * ಪ್ರೆಸ್ ಕಿಟ್ – 20,000 ರೂ.
    * ಫ್ಲವರ್ ಪಾಟ್ – 30,000 ರೂ.
    * ಹಣ್ಣು + ಡ್ರೈ ಫ್ರೂಟ್ಸ್ – 15,750 ರೂ.

    ಈ ರೀತಿಯಾ ಒಟ್ಟಾಗಿ 20.45 ಲಕ್ಷ ರೂ. ಹಣ ಖರ್ಚಾಗಿದೆ. ಇದರಿಂದ ಸಾರ್ವಜನಿಕರು ಸರಳವಾಗಿ ಮಾಡಬೇಕಿದ್ದ ಪರಿಸರ ದಿನಾಚರಣೆಯನ್ನು ಈ ರೀತಿಯಾಗಿ ಅದ್ಧೂರಿಯಾಗಿ ಮಾಡಿ ಸುಮ್ಮನೆ ಲಕ್ಷ ಲಕ್ಷ ಹಣವನ್ನು ದುಂದು ವೆಚ್ಚ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.