ರಾಯಚೂರು: 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ರಾಯಚೂರು (Raichuru) ಜಿಲ್ಲೆಯ ಇಬ್ಬರು ಸಾಧಕರು ಭಾಜನರಾಗಿದ್ದಾರೆ. ರಂಗಭೂಮಿ ಕ್ಷೇತ್ರದಲ್ಲಿ ಕಲಾವಿದೆಯಾಗಿರುವ ಡಿ.ರತ್ನಮ್ಮ ದೇಸಾಯಿ ಹಾಗೂ ಸಂಕೀರ್ಣ ಕ್ಷೇತ್ರದಲ್ಲಿ ಜಾಫರ್ ಮೊಹಿನುದ್ದೀನ್ ರಾಜ್ಯೋತ್ಸವ ಪ್ರಶಸ್ತಿಗೆ (Rajyostava Award) ಆಯ್ಕೆಯಾಗಿದ್ದಾರೆ.
50 ವರ್ಷಗಳಿಂದ ವೃತ್ತಿರಂಗಭೂಮಿ, ನಾಟಕ ಕಂಪನಿಗಳಲ್ಲಿ ಹಾಸ್ಯ ಪಾತ್ರ, ನಾಯಕಿ ಪಾತ್ರಗಳನ್ನು ಮಾಡಿ ಕಲಾಸೇವೆ ಸಲ್ಲಿಸಿದ್ದಾರೆ. ದುತ್ತರಗಿ ನಾಟಕ ಕಂಪನಿ, ಮಾಲತಿ ಸುಧೀರ್ ನಾಟಕ ಕಂಪನಿ, ಗುಬ್ಬಿ ವೀರಣ್ಣ ನಾಟಕ ಕಂಪನಿ, ಗುಮ್ಮಗೇರಿ ನಾಟಕ ಕಂಪನಿ ಸೇರಿ ಹಲವಾರು ಪ್ರಸಿದ್ಧ ನಾಟಕ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಇದನ್ನೂ ಓದಿ:2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ – ನಟ ಪ್ರಕಾಶ್ ರಾಜ್ ಸೇರಿ 70 ಸಾಧಕರಿಗೆ ಗೌರವ
ಇನ್ನೂ ಜಾಫರ್ ಮೊಹಿನುದ್ದೀನ್ ವೃತ್ತಿಪರ ವಾಸ್ತುಶಿಲ್ಪಿ, ರಂಗಭೂಮಿ, ಸಿನಿಮಾ ಮತ್ತು ಧ್ವನಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಉರ್ದು ಮತ್ತು ಹಿಂದಿಯಲ್ಲಿ ಹಲವಾರು ನಾಟಕಗಳನ್ನು ಬರೆದು, ನಟಿಸಿ ನಿರ್ದೇಶಿಸಿದ್ದಾರೆ. ರಂಗಭೂಮಿಯಲ್ಲಿ ಸಕ್ರಿಯರಾಗಿದ್ದು, ಸಮುದಾಯ, ಬೆಂಗಳೂರು ಲಿಟಲ್ ಥಿಯೇಟರ್ ಮತ್ತು ಇನ್ನೂ ಅನೇಕ ಪ್ರಸಿದ್ಧ ನಾಟಕ ತಂಡಗಳೊಂದಿಗೆ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ. ಈ ಇಬ್ಬರು ಕಲಾವಿದರ ಸೇವೆಯನ್ನು ಗುರುತಿಸಿ, ರಾಜ್ಯ ಸರ್ಕಾರ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.
– ಈ ಬಾರಿ 70 ಮಂದಿ ಅರ್ಹ ಸಾಧಕರಿಗೆ ಪ್ರಶಸ್ತಿ ನೀಡಲು ನಿರ್ಧಾರ
– ಕಳೆದ ವರ್ಷ 2,000ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿತ್ತು
ಬೆಂಗಳೂರು: ವರ್ಷದಿಂದ ವರ್ಷಕ್ಕೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ (Kannada Rajyotsava Award) ಡಿಮ್ಯಾಂಡ್ ಹೆಚ್ಚಾಗುತ್ತಿದ್ದು, ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಹೆಚ್ಚಾಗ್ತಿದೆ. ಹೀಗಾಗಿ ಮಹತ್ವದ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುವ ಪ್ರಕ್ರಿಯೆಯನ್ನೇ ಕೈಬಿಟ್ಟಿದೆ
ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಹೊಸ ನಿಯಮ ಜಾರಿಗೊಳಿಸಲಾಗುತ್ತಿದ್ದು, ಆನ್‌ಲೈನ್ ಮೂಲಕ ಅರ್ಜಿ (Online Application) ಆಹ್ವಾನಿಸುವ ಪ್ರಕ್ರಿಯೆಯನ್ನೇ ಕೈಬಿಟ್ಟಿದೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಮಾಹಿತಿ ನೀಡಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಲಹಾ ಸಮಿತಿ ಹಾಗೂ ಉನ್ನತ ಆಯ್ಕೆ ಸಮಿತಿ ರಚಿಸಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದೆ. ಸಮಿತಿಯಿಂದ ಆಯ್ಕೆಯಾದ ಸಾಧಕರಿಗೆ ಮಾತ್ರ ಪ್ರಶಸ್ತಿ ನೀಡಲು ಸರ್ಕಾರ ನಿರ್ಧರಿಸಿದೆ.
ಇನ್ನೂ ಈ ಬಾರಿ 70 ಜನ ಅರ್ಹ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಸರ್ಕಾರದ ನಿರ್ಧಾರ ಮಾಡಿದೆ. ಈಗಾಗಲೇ ಇಲಾಖೆಗೆ ಸಲ್ಲಿಕೆಯಾಗಿರುವ ಸ್ವಯಂ ಅರ್ಜಿಗಳನ್ನು ಸಹ ಪ್ರಶಸ್ತಿ ಸಲಹಾ ಸಮಿತಿ ಮುಂದೆ ಮಂಡಿಸಲು ನಿರ್ಧರಿಸಲಾಗಿದೆ.
ಕಳೆದ ವರ್ಷ 2,000ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ
ಕಳೆದ ವರ್ಷ 69 ಪ್ರಶಸ್ತಿಗಳಿಗೆ 2,000 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿತ್ತು. ಇದರಲ್ಲಿ ಆನ್‌ಲೈನ್ ಸೇವಾಸಿಂಧು ಪೋರ್ಟಲ್ ಮೂಲಕವೇ ಬರೋಬ್ಬರಿ 1,135ಕ್ಕೂ ಹೆಚ್ಚು ಹಾಗೂ ಭೌತಿಕವಾಗಿ 85ಕ್ಕೂ ಹೆಚ್ಚು ಅರ್ಜಿಗಳು ಸಂದಾಯವಾಗಿತ್ತು.
ಬಿಜೆಪಿ ಅವಧಿಯಲ್ಲೇ ಈ ಕ್ರಮ ಇತ್ತು
2022ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿತ್ತು. ಅಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಸುನಿಲ್ ಕುಮಾರ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿಗಳನ್ನು ಪಡೆಯದೆ, ಆಯ್ಕೆ ಸಮಿತಿಯನ್ನು ರಚಿಸಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು ಎಂದು ಘೋಷಿಸಿದ್ದರು. ಆದ್ರೆ 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಪ್ರಕ್ರಿಯೆಗೆ ಬ್ರೇಕ್ ಬಿದ್ದಿತ್ತು.
ಬೆಂಗಳೂರು: ಕರ್ನಾಟಕ ಸರ್ಕಾರದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ (Rajyotsava Award) ಭಾಜನವಾಗಿದ್ದ ಮುಂಬೈನ ‘ಚಿಣ್ಣರ ಬಿಂಬ’ (Chinnara Bimba) ಸಾಂಸ್ಕೃತಿಕ ಸಂಸ್ಥೆ, ಕನ್ನಡ ರಾಜ್ಯೋತ್ಸವ ದಿನದಂದು (ಬುಧವಾರ) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಕನ್ನಡ ರಾಜ್ಯೋತ್ಸವ ದಿನದಂದು (ಬುಧವಾರ) ಬೆಂಗಳೂರಿನಲ್ಲಿ ಸಂಸ್ಥೆಯ ಪರವಾಗಿ ಪ್ರಕಾಶ್ ಭಂಡಾರಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿಎಂ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಗೃಹ ಸಚಿವ ಜಿ.ಪರಮೇಶ್ವರ್ ಹಾಜರಿದ್ದರು.
ಮುಂಬೈನಂಥ ಜನನಿಬಿಡ ಮಹಾನಗರದಲ್ಲಿ ಆಧುನಿಕ ಜಗತ್ತಿನ ವೈಭವೋಪೇತ ದಿನಚರಿಗಳಲ್ಲಿ ಮುಳುಗಿ ಹೋಗಿರುವ, ಪಾಶ್ಚಿಮಾತ್ಯ ಜೀವನ ಶೈಲಿಯನ್ನು ಅನುಸರಿಸಿಕೊಂಡು ಬದುಕಿ ನಮ್ಮ ತನವನ್ನೇ ಕಳೆದುಕೊಳ್ಳುವ ಅಪಾಯದಿಂದ ಹೊರತರುವ ಬಹುದೊಡ್ಡ ಜವಾಬ್ದಾರಿಯನ್ನು ಕಳೆದ 21 ವರ್ಷಗಳಿಂದ ನಿಷ್ಠೆಯಿಂದ ನಿಭಾಯಿಸಿಕೊಂಡು ಬಂದಿರುವ ಸಂಸ್ಥೆ ಚಿಣ್ಣರ ಬಿಂಬ. ಇಲ್ಲಿ ಮಕ್ಕಳಿಗೆ ನಮ್ಮ ನಾಡಿನ ರೀತಿ-ನೀತಿ, ಕಟ್ಟುಕಟ್ಟಳೆ, ಧಾರ್ಮಿಕ ವಿಧಿ-ವಿಧಾನಗಳನ್ನು ಹೇಳಿಕೊಡುತ್ತಿದೆ. ಎಲ್ಲದಕ್ಕೂ ಮುಖ್ಯವಾಗಿ ನಮ್ಮ ಪುರಾತನ ಹಾಗೂ ಸನಾತನ ಸಂಸ್ಕೃತಿಯ ಎಳೆಎಳೆಯನ್ನು ಬಿಡಿಸಿ ಹೇಳಿ, ಈ ಮಕ್ಕಳು ಇವೆಲ್ಲವನ್ನೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಮಾಡಿ ನಾಳಿನ ಬಾಳಿನ ಭದ್ರ ಬುನಾದಿಗೆ ನಾಂದಿ ಹಾಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ತನ್ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸುತ್ತಿದೆ. ಇದನ್ನೂ ಓದಿ: ಮಕ್ಕಳಿಗೆ ಕನ್ನಡ ಭಾಷೆಯಲ್ಲೇ ಪರೀಕ್ಷೆ ಮಾಡುವಂತೆ ಪ್ರಧಾನಿಗೆ ಪತ್ರ ಬರೀತಿನಿ: ಸಿಎಂ
ಚಿಣ್ಣರ ಬಿಂಬವು ತನ್ನದೇ ಆದ ವಿಶಿಷ್ಟ ಚಟುವಟಿಕೆಗಳಿಂದಾಗಿ ಇಂದು ಹೊರನಾಡು ಮಹಾರಾಷ್ಟ್ರದಲ್ಲಿ ಮಾತ್ರವಲ್ಲ ಒಳನಾಡಾದ ಕರ್ನಾಟಕದಲ್ಲೂ ಮನೆಮಾತಾಗಿದೆ. 6 ರಿಂದ 14 ರ ವರೆಗಿನ ವಯಸ್ಸಿನ ಮಕ್ಕಳಿಗೆ ಯೋಗ್ಯ ತರಬೇತಿ, ಮಾರ್ಗದರ್ಶನ ದೊರಕಿದಲ್ಲಿ ಈ ಎಳೆಯರು ಯಾವ ಮಟ್ಟಕ್ಕೆ ಏರಬಹುದು? ಇವರ ಪ್ರತಿಭೆ ಯಾವ ಶಿಖರವನ್ನು ಮುಟ್ಟಬಹುದು ಎಂಬುದಕ್ಕೆ ಕಲಾ ಜಗತ್ತು ಚಿಣ್ಣರ ಬಿಂಬ. ಇದು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ವರ್ಗಾಯಿಸಲು ಗುರುತರವಾದ ಕಾಯಕದಲ್ಲಿ ತೊಡಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಭಾಷೆ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆ ಎರಡೂ ಮುಖಗಳು ಚಿಣ್ಣರ ಬಿಂಬದಲ್ಲಿದೆ ಎಂದು ಹೆಮ್ಮೆಯಿಂದ ಹೇಳಬಹುದು.
ನಮ್ಮ ಮಕ್ಕಳಲ್ಲಿರುವ ಅಂತರ್ಗತ ಪ್ರತಿಭೆ, ಶಕ್ತಿ, ಸಾಮರ್ಥ್ಯಗಳ ಸಾಣೆ ಹಿಡಿದು ಅವರನ್ನು ಸಾಂಸ್ಕೃತಿಕ ನೆಲೆಯ ಮೂಲಕ ಒಗ್ಗೂಡಿಸುವ ಒಂದು ಅಪೂರ್ವ ಕಾರ್ಯ ಸಾಧನೆಯನ್ನು ‘ಚಿಣ್ಣರ ಬಿಂಬ’ ಮಾಡುತ್ತಿದೆ. ಇದರ ಕಾರ್ಯ ಚಟುವಟಿಕೆಗಳ ತ್ವರಿತ ಗತಿಯ ವೇಗೋತ್ಕರ್ಷಕ್ಕೆ ಒಂದು ಅರ್ಥದಲ್ಲಿ ಬೆರಗಾದರೆ, ಇನ್ನೊಂದರ್ಥದಲ್ಲಿ ಅಂದು ನಾವೆಲ್ಲಾ ಕಂಡಿದ್ದ ಕನಸು ಇಂದು ನನಸಾಗುತ್ತಿರುವುದಕ್ಕೆ ಆನಂದ ತುಂದಿಲರಾಗಿದ್ದೇವೆ. ಇದನ್ನೂ ಓದಿ: ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್, ಕುಡಿಯುವ ನೀರು: ಸಿಎಂ ಘೋಷಣೆ
ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತಾರೆ. ಅತ್ಯಂತ ಶಿಸ್ತುಬದ್ಧವಾಗಿ ನಡೆಯುವ ಈ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹೆಚ್ಚಾಗಿ ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ಚಿಣ್ಣರ ಬಿಂಬದ ಮಕ್ಕಳು ಕನ್ನಡದಲ್ಲಿ ಸ್ಪಷ್ಟವಾಗಿ, ಸುಲಲಿತವಾಗಿ ಮಾತನಾಡುತ್ತಾರೆ. ಅಸ್ವಲಿತವಾಗಿ ಚರ್ಚಾ ಸ್ಪರ್ಧೆಯನ್ನು ಕೇಳುವುದೇ ಒಂದು ಕರ್ಣಾನಂದ. ಅವರೇ ಕಾರ್ಯಕ್ರಮ ನಿರೂಪಣೆ ಮಾಡುತ್ತಾರೆ ಎನ್ನುವುದು ಎಷ್ಟು ಆಶ್ಚರ್ಯವೋ ಅಷ್ಟೇ ಸತ್ಯ.
ಕುಮಾರಿ ಪೂಜಾ ಭಂಡಾರಿ ಸ್ಥಾಪಕಾಧ್ಯಕ್ಷೆ, ನೈನಾ ಪ್ರಕಾಶ್ ಭಂಡಾರಿ ಅವರು ಕಾರ್ಯಾಧ್ಯಕ್ಷರಾಗಿ ಸಾವಿರಾರು ಜನರ ಶ್ರಮದಿಂದ ಈ ಸಂಸ್ಥೆ ವರ್ಷದಿಂದ ವರ್ಷಕ್ಕೆ ಪ್ರವರ್ಧಮಾನವಾಗಿ ಬೆಳಗುವಂತೆ ಮಾಡಿದ್ದಾರೆ. ಯಾಕೆಂದರೆ ಮಕ್ಕಳು ಸಣ್ಣವರಿರುವಾಗಲೇ ಅವರಿಗೆ ಸತ್ಯ, ಪ್ರಾಮಾಣಿಕತೆ, ಮಾನವೀಯತೆ, ಹಿರಿಯರಿಗೆ ಗೌರವ ನೀಡುವ ರೀತಿ, ಕಿರಿಯರನ್ನು ಮಮತೆಯಿಂದ ನೋಡುವ ಪರಿ ಈ ಎಲ್ಲಾ ಅಂಶಗಳನ್ನು ತಿಳಿಯಪಡಿಸುವುದು ಅಗತ್ಯ. ಅಂತಹ ಮಹತ್ವವಾದ ಕಾರ್ಯವನ್ನು ಮಾಡುತ್ತಿರುವ ಚಿಣ್ಣರ ಬಿಂಬ, ಅದಕ್ಕೆ ಪೂರಕವಾದ ವಾತಾವರಣ ಹಾಗೂ ಹಿನ್ನೆಲೆಯನ್ನು ತನ್ನ ಶಿಬಿರಗಳಲ್ಲಿ ಮಾಡಿಕೊಡುತ್ತದೆ. ಇದನ್ನೂ ಓದಿ: ಕರ್ನಾಟಕ ಆಧುನಿಕ ಉದ್ಯಮದ ತೊಟ್ಟಿಲು – ರಾಜ್ಯೋತ್ಸವಕ್ಕೆ ಶುಭಕೋರಿದ ಮೋದಿ, ಸಿಎಂ
ಪ್ರಕಾಶ್ ಭಂಡಾರಿ ಅವರಂತಹ ಸದ್ಗುಣಿ ಮಾರ್ಗದರ್ಶಕರ ಸಮರ್ಥ ನಾಯಕತ್ವ, ಅವರ ದೂರದೃಷ್ಟಿ, ಚಿಣ್ಣರ ಬಹುದೊಡ್ಡ ಆಸ್ತಿಯಾಗಿದೆ. ಅವರು ಎಂದಿಗೂ ತಾನು ಸುಖಾಸೀನರಾಗಿ ಇತರರಲ್ಲಿ ಕೆಲಸ ಮಾಡಿಸಿದವರಲ್ಲ. ಹಿರಿಯ ಕಿರಿಯರೆನ್ನದೆ ಆಪ್ತವಾಗಿ ಸಮಾಲೋಚಿಸಿ ಪ್ರತಿಯೊಂದು ಹೆಜ್ಜೆಯನ್ನು ಇಡುತ್ತಿರುವ ಅವರ ಹೃದಯ ವೈಶಾಲ್ಯದಿಂದಲೇ ಇಂದು ಚಿಣ್ಣರ ಬಿಂಬ ಈ ಮಟ್ಟಕ್ಕೆ ಏರಿದೆ. ಸಂಸ್ಥೆಯ ಕಾರ್ಯವೈಖರಿ ಕರ್ನಾಟಕ ಸರ್ಕಾರದ ಗಮನ ಸೆಳೆದು ಅರ್ಹವಾಗಿ ಈ ರಾಜ್ಯೋತ್ಸವದ ಗರಿ ಮುಡಿಗೇರಿಸಿಕೊಂಡಿದೆ.
ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿಗೆ (Rajyotsava Award) ಆಯ್ಕೆ ಮಾಡುವ ಸಂದರ್ಭದಲ್ಲಿ ಅರ್ಹರಿಗೆ ಪ್ರಶಸ್ತಿ ನೀಡಬೇಕು. ಕಡ್ಡಾಯವಾಗಿ ಸಾಮಾಜಿಕ ನ್ಯಾಯ ಪಾಲಿಸಬೇಕು, ಎಲ್ಲಾ ಜಾತಿ, ಧರ್ಮ, ಲಿಂಗಗಳಿಗೂ ಪ್ರಾತಿನಿಧ್ಯ ದೊರೆಯಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸೂಚಿಸಿದ್ದಾರೆ.
ಮುಖ್ಯಮಂತ್ರಿ @siddaramaiah ಅವರ ಅಧ್ಯಕ್ಷತೆಯಲ್ಲಿ ಇಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಉನ್ನತ ಮಟ್ಟದ ಸಭೆ ನಡೆಯಿತು.
ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಸಚಿವರಾದ ಡಾ: ಜಿ.ಪರಮೇಶ್ವರ್, ಡಾ: ಹೆಚ್.ಸಿ.ಮಹದೇವಪ್ಪ, ಮುಖ್ಯ ಮಂತ್ರಿಗಳ ರಾಜಕೀಯ… pic.twitter.com/iMJfOwv72X
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ (Kannada Rajyotsava Award Selection Committee) ಉನ್ನತ ಮಟ್ಟ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಕನ್ನಡದ ಪರವಾಗಿ ಕಾರ್ಯನಿರ್ವಹಿಸಿರುವ ಸಂಘ ಸಂಸ್ಥೆಗಳಿಗೆ ಒಟ್ಟಾರೆ 10 ಪ್ರಶಸ್ತಿಗಳನ್ನ ನೀಡಬೇಕು ಎಂದು ಆಯ್ಕೆ ಸಮಿತಿ ಸದಸ್ಯರು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಕನಕಪುರ ಬೆಂಗಳೂರಿಗೆ ಸೇರಿಸಿ, ರೈತರು ಭೂಮಿ ಮಾರಿಕೊಳ್ಳಲಿ ಎಂಬ ಕುತಂತ್ರ: ಅಶ್ವಥ್ ನಾರಾಯಣ್ ವಾಗ್ದಾಳಿ
ಈ ಬಾರಿ 68 ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಬೇಕಿದ್ದು, ಕರ್ನಾಟಕ ಸಂಭ್ರಮದ ಪ್ರಯುಕ್ತ ಸಂಘ ಸಂಸ್ಥೆಗಳಿಗೆ 10 ಪ್ರಶಸ್ತಿಗಳನ್ನು ನೀಡಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅರ್ಜಿ ಸಲ್ಲಿಸುವವರು ಹೆಚ್ಚಿದ್ದ ಕಾರಣ, ಅದಕ್ಕೆ ಕಡಿವಾಣ ಹಾಕಲು ಏಕೀಕರಣ ಆಗಿ ಎಷ್ಟು ವರ್ಷಗಳಾಯಿತೋ, ಅಷ್ಟು ಪ್ರಶಸ್ತಿಗಳನ್ನು ನೀಡಲು ಹಿಂದೆ ನಮ್ಮ ಸರ್ಕಾರವೇ ತೀರ್ಮಾನ ಕೈಗೊಂಡಿತ್ತು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಇದನ್ನೂ ಓದಿ: ಕನಕಪುರ ಡೈರಿಗೆ ಜಾಗ ಕೊಟ್ಟ ರೈತರಿಗೆ ಎಷ್ಟು ಕೊಟ್ರಿ, ನಿಮ್ಮ ಪಟಾಲಂಗೆ ಎಷ್ಟು ಕೊಟ್ರಿ – ಡಿಕೆಶಿಗೆ ಹೆಚ್‍ಡಿಕೆ ಪ್ರಶ್ನೆ
ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಸಚಿವರಾದ ಡಾ.ಜಿ ಪರಮೇಶ್ವರ್, ಡಾ.ಹೆಚ್.ಸಿ ಮಹದೇವಪ್ಪ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹ್ಮದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ, ನಿರ್ದೇಶಕಿ ಧರಣಿದೇವಿ ಮಾಲಗತ್ತಿ, ಆಯ್ಕೆ ಸಮಿತಿ ಸದಸ್ಯರಾದ ಪ್ರೊ. ಜಾಣಗೆರೆ ವೆಂಕಟರಾಮಯ್ಯ, ಡಾ.ಎಚ್.ಎಲ್ ಪುಷ್ಪ, ಡಾ.ವೀರಣ್ಣ ದಂಡೆ, ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಅಲ್ಲಮಪ್ರಭು ಬೆಟ್ಟದೂರ, ಕಾ.ತ ಚಿಕ್ಕಣ್ಣ, ಪಿಂಡಿಪಾಪನಹಳ್ಳಿ ವೆಂಕಟಪ್ಪ, ಟಾಕಪ್ಪ ಕಣ್ಣೂರು, ಪಿಚ್ಚಳ್ಳಿ ಶ್ರೀನಿವಾಸ್, ಡಾ.ವಿಠಲ್ ಐ.ಬೆಣಗಿ-ಕೃಷಿ, ಡಾ. ಸಣ್ಣರಾಮು, ವೆಂಕಟರಾಮಯ್ಯ, ಡಾ.ಎಂ.ಎಸ್ ಮೂರ್ತಿ, ಡಾ.ಗೀತಾ ಶಿವಮೊಗ್ಗ, ಡಾ.ಜಯದೇವಿ ಜಂಗಮಶೆಟ್ಟಿ, ಐರೋಡಿ ಗೋವಿಂದಪ್ಪ, ಸಾಧುಕೋಕಿಲ, ಸುಕನ್ಯಾ ಪ್ರಭಾಕರ್, ಫಯಾಜ್ ಖಾನ್, ಹೃಷಿಕೇಶ್ ಬಹದ್ದೂರ್ ದೇಸಾಯಿ, ನರಸಿಂಹಲು ವಡವಾಟಿ, ಡಿ.ಎನ್ ನರಸಿಂಹರಾಜು, ಡಾ.ಪುರುಷೋತ್ತಮ ಬಿಳಿಮಲೆ, ಚನ್ನಬಸವಣ್ಣ, ಶೈಲೇಶ್ ಚಂದ್ರಗುಪ್ತ , ಜೆ.ಲೋಕೇಶ್ ಉಪಸ್ಥಿತರಿದ್ದರು.
ಯಾದಗಿರಿ: ಕಳೆದ ಮೂವತ್ತೈದು ವರ್ಷಗಳಿಂದ ಜನರ ಪಾಲಿಗೆ ಸಂಜೀವಿನಿಯಾಗಿ ಸೇವೆ ಸಲ್ಲಿಸುತ್ತಿರುವ ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದ ನಿವಾಸಿ ಭೂದೇವಿ, ಹಾವು ಕಚ್ಚಿಸಿಕೊಂಡು (Snake Bite) ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವವರ ಪ್ರಾಣ ಉಳಿಸುವ ಕೆಲಸ ಮಾಡುತ್ತಿದ್ದಾಳೆ. ಸಾವಿರಾರು ಜನರ ಪ್ರಾಣ ಉಳಿಸಿದ ಆ ಮಹಾ ತಾಯಿಯ ನಿಸ್ವಾರ್ಥ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕು ಅನ್ನೋ ಒತ್ತಾಯ ಕೇಳಿಬಂದಿದೆ.
ಯಾದಗಿರಿ (Yadagiri) ಜಿಲ್ಲೆಯ ವಡಗೇರ ಪಟ್ಟಣದ ಭೂದೇವಿ ಎನ್ನುವ ಮಹಿಳೆ ಕಳೆದ ಮೂವತ್ತೈದು ವರ್ಷಗಳಿಂದ ಸತತವಾಗಿ ಹಾವು ಕಚ್ಚಿಸಿಕೊಂಡವರಿಗೆ ಔಷಧ ನೀಡುವ ಮೂಲಕ ಜೀವ ಉಳಿಸುವ ಕೆಲಸ ಮಾಡುತ್ತಿದ್ದಾಳೆ. ವಡಗೇರ ಪಟ್ಟಣದಲ್ಲಿ ವಾಸ ಮಾಡುತ್ತಿರುವ ಭೂದೇವಿ ಹಾವು ಕಚ್ಚಿದವರು ಬಂದ್ರೆ ಸಾಕು ಎಲೆಯ ಔಷಧಿಯನ್ನ ಕೊಟ್ಟು ಪ್ರಾಣ ಉಳಿಸುವ ಕೆಲಸ ಮಾಡುತ್ತಿದ್ದಾಳೆ. ಮೂರು ತಲೆ ಮಾರುಗಳಿಂದ ಈ ಕುಟುಂಬ ಹಾವು ಕಚ್ಚಿದವರಿಗೆ ಔಷಧಿ ನೀಡುವ ಕಾಯಕವನ್ನ ಮುಂದುವರಿಸಿಕೊಂಡು ಬಂದಿದೆ. ಭೂದೇವಿಗಿಂತ ಮೊದಲು ಭೂದೇವಿಯ ಅತ್ತೆ ತಾಯಮ್ಮ ಔಷಧಿಯನ್ನ ನೀಡುವ ಕೆಲಸ ಮಾಡುತ್ತಿದ್ದರು.
ತಾಯಮ್ಮಗಿಂತ ಮೊದಲು ತಾಯಮ್ಮಳ ಅತ್ತೆ ನಾಗಮ್ಮ ಗಿಡದ ಎಲೆಗಳನ್ನ ತಂದು ಔಷಧಿಯನ್ನ ಕೊಡುವ ಕೆಲಸ ಮಾಡುತ್ತಿದ್ದರು. ಆದರೆ ನಾಗಮ್ಮ ಹಾಗೂ ತಾಯಮ್ಮಳ ಬಳಿಕ ನಿಸ್ವಾರ್ಥ ಸೇವೆಯನ್ನ ಭೂದೇವಿ ಮಾಡುತ್ತಾ ಬರುತ್ತಿದ್ದಾರೆ. ಕಳೆದ ಮೂವತ್ತೈದು ವರ್ಷಗಳಿಂದ ಸುಮಾರು 4 ಸಾವಿರಕ್ಕೂ ಅಧಿಕ ಜನರಿಗೆ ಔಷಧಿಯನ್ನ ನೀಡಿ ಪ್ರಾಣ ಉಳಿಸುವ ಕೆಲಸ ಮಾಡಿದ್ದಾರೆ. ವಡಗೇರ ಸುತ್ತಮುತ್ತಲಿನ ಗ್ರಾಮದಲ್ಲಿ ಯಾರಿಗಾದ್ರು ಹಾವು ಕಚ್ಚಿದ್ರೆ ನೇರವಾಗಿ ಆಸ್ಪತ್ರೆಗೆ ಹೋಗುವ ಬದಲಿಗೆ ಭೂದೇವಿಯ ಮನೆಗೆ ಬಂದು ಔಷಧಿ ಪಡೆದು ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಸಾವಿರಾರು ಜನರಿಗೆ ಔಷಧಿಯನ್ನ ಕೊಟ್ರು ಯಾರಿಂದಲೂ ನಯಾ ಪೈಸೆಯನ್ನ ಭೂದೇವಿ ತೆಗೆದುಕೊಂಡಿಲ್ವಂತೆ.
ಭೂದೇವಿ ವರ್ಷಕ್ಕೆ ಒಂದೇ ಬಾರಿ ಜಮೀನಿಗೆ ಹೋಗಿ ಔಷಧಿಯನ್ನ ತೆಗೆದುಕೊಂಡು ಬರುತ್ತಾಳೆ. ಜಮೀನಿಗೆ ಹೋಗಿ ಔಷಧಿಯನ್ನ ತರಬೇಕು ಅಂದ್ರೆ ಸಾಕಷ್ಟು ನೀತಿ ನಿಯಮಗಳನ್ನ ಪಾಲನೆ ಮಾಡಬೇಕಂತೆ. ಔಷಧಿ ತರಲು ಹೋಗಬೇಕು ಅಂದ್ರೆ ನಸುಕಿನ ಜಾವನೇ ಹೋಗಬೇಕು. ಯಾಕೆಂದ್ರೆ ನಮ್ಮ ನೆರಳು ಸಹ ನಮ್ಮ ಹಿಂದೆ ಬರಬಾರದು. ಇದೇ ಕಾರಣಕ್ಕೆ ನಸುಕಿನ ಜಾವ ಹೋಗಬೇಕು. ಔಷಧಿ ತರಲು ಹೋಗುವ ಮೊದಲು ಮನೆಯನ್ನ ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ಇಷ್ಟೆಲ್ಲ ನಿಯಮಗಳನ್ನ ಪಾಲನೆ ಮಾಡಿಕೊಂಡು ಹೋಗಿ ಔಷಧಿಯನ್ನ ತರಬೇಕು. ಗಿಡಗಳ ಸಮೇತವಾಗಿ ಔಷಧಿಯನ್ನ ತಂದು ಒಂದು ತಿಂಗಳುಗಳ ಕಾಲ ನೆರಳಲ್ಲಿ ಒಣಗಿಸಬೇಕು. ನೆರಳಲ್ಲಿ ಒಣಗಿಸಿದ ಮೇಲೆ ಎಲೆಯನ್ನ ಗಿಡದಿಂದ ಬೇರ್ಪಡಿಸಿ ಚೆನ್ನಾಗಿ ಅರೆದು ರೆಡಿ ಮಾಡಿಕೊಂಡು ಇಟ್ಟುಕೊಳ್ಳುತ್ತಾರೆ. ಬಳಿಕ ಮನೆಗೆ ಯಾರೆ ಹಾವು ಕಚ್ಚಿದವರು ಬಂದ್ರೆ ಔಷಧಿಯನ್ನ ಕೊಡಲಾಗುತ್ತೆ.
ಔಷಧಿಯನ್ನ ಪಡೆದವರು ಆವತ್ತು ಒಂದು ದಿನ ಇಡೀ ರಾತ್ರಿ ಮಲಗವಾರದು. ಜೊತೆಗೆ ಹಾವು ಕಚ್ಚಿದೆ ಅಂತ ಬಂದ್ರೆ ಅವರಿಗೆ ಬೇವಿನ ಸೊಪ್ಪು ತಿನ್ನಿಸಿ ಹಾವು ಕಚ್ಚಿದೆ ಇಲ್ಲ ಅಂತ ಚೆಕ್ ಮಾಡಿ ಔಷಧಿಯನ್ನ ನೀಡಲಾಗುತ್ತೆ. ಕಷ್ಟಪಟ್ಟು ಭೂದೇವಿ ಸುಮಾರು ನಾಲ್ಕು ಸಾವಿರ ಜನರ ಪ್ರಾಣವನ್ನ ಉಳಿಸಿದ್ದಾಳೆ. ಎಂತಹದ್ದೆ ಹಾವು ಕಚ್ಚಿದ್ರು ಭೂದೇವಿ ಔಷಧಿಯನ್ನ ನೀಡಿ ಗುಣಪಡಿಸುತ್ತಾಳೆ. ಇಷ್ಟೆಲ್ಲಾ ನಿಸ್ವಾರ್ಥ ಸೇವೆ ಮಾಡಿದ ತಾಯಿಗೆ ಇನ್ನುವರೆಗೆ ಯಾರೂ ಗುರುತಿಸಿಲ್ಲ. ಜಿಲ್ಲಾಡಳಿತ ಆಗಲಿ ಸಂಘ ಸಂಸ್ಥೆಗಳಾಗಲಿ ಗುರುತಿಸಿ ಗೌರವಿಸುವ ಕೆಲಸ ಮಾಡಿಲ್ಲ. ಹೀಗಾಗಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಭೂದೇವಿ ಸೇವೆ ಗೌರವ ಸಲ್ಲಿಸಬೇಕೆಂದು ಚಿಕಿತ್ಸೆ ಪಡೆದವರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಸರ್ಕಾರ ಎಂತೆಂತವರಿಗೆ ಗುರುತಿಸಿ ಗೌರವಿಸುವ ಕೆಲಸ ಮಾಡುತ್ತೆ. ಆದರೆ ಇಂತಹ ಸದ್ದಿಲ್ಲದೆ ಸಾಧನೆ ಮಾಡುವವರನ್ನ ಗುರುತಿಸುವ ಕೆಲಸ ಮಾಡಬೇಕಾಗಿದೆ. ಸಾವಿರಾರು ಜನರ ಪ್ರಾಣ ಉಳಿಸಿದ ತಾಯಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ ಎನ್ನೋದು ನಮ್ಮ ಆಶಯವಾಗಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾ ಭಾರತಾದ್ಯಂತ ಭರ್ಜರಿ ಪ್ರದರ್ಶನ ನಡೆಯುತ್ತಿದೆ. ಬಾಕ್ಸ್ ಆಫೀಸ್ ಕೂಡ ಭರ್ತಿಯಾಗಿದೆ. ಈಗಾಗಲೇ ಅಂದಾಜು 300 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನುವ ಮಾಹಿತಿಯೂ ಹರಿದಾಡುತ್ತಿದೆ. ಈ ಸಿನಿಮಾ ಕೇವಲ ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಮಾತ್ರವಲ್ಲ, ದೈವನರ್ತಕರ ಬಾಳಲ್ಲೂ ನಗೆ ಮೂಡಿಸಿದೆ. ಈ ಸಿನಿಮಾದ ನೋಡಿದ ನಂತರ ದೈವ ನರ್ತಕರಿಗೆ ಹಲವು ಸೌಲಭ್ಯಗಳು ಒಲಿದು ಬಂದಿವೆ.
ಇತ್ತೀಚೆಗಷ್ಟೇ ಕರ್ನಾಟಕ ಸರಕಾರವು ದೈವನರ್ತಕರಿಗೆ ಮಾಸಾಶನವನ್ನು ಘೋಷಣೆ ಮಾಡಿದ್ದರು. ಸರಕಾರದ ಈ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು, ಇದೀಗ ಮೊದಲ ಬಾರಿಗೆ ದೈವನರ್ತಕರಿಗೂ ರಾಜ್ಯೋತ್ಸವ ಪ್ರಶಸ್ತಿಯನ್ನು (Rajyotsava Award) ಘೋಷಣೆ ಮಾಡಿದ್ದಾರೆ. ಈ ಬಾರಿ ದೈವನರ್ತಕ ಗುಡ್ಡಪಾಣಾರಗೆ (Guddapana) ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಉಡುಪಿ ಜಿಲ್ಲೆಯ ಕಾಪುವಿನ ಗುಡ್ಡ ಪಾಣಾರು ಇಂಥದ್ದೊಂದು ಗೌರವಕ್ಕೆ ಪಾತ್ರರಾಗಿದ್ದಾರೆ. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ
ಉಡುಪಿ (Udupi) ಜಿಲ್ಲೆಯ ಕಾಪು ಹಳೆ ಮಾರಿಗುಡಿಯಲ್ಲಿ ಎರಡು ವರ್ಷಕೊಮ್ಮೆ ನಡೆಯುವ ಪಿಲಿಕೋಲದಲ್ಲಿ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿರುವ ಗುಡ್ಡ ಪಾಣರಿಗೆ ಜಾನಪದ ವಿಭಾಗದಲ್ಲಿ ಈ ಬಾರಿ ಪ್ರಶಸ್ತಿ ಘೋಷಣೆ ಆಗಿದ್ದು, ಇಂದು ಬೆಂಗಳೂರಿನಲ್ಲಿ ಅವರು ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದಾರೆ. 68ರ ವಯಸ್ಸಿನ ಗುಡ್ಡ ಪಾಣಾರು 25ನೇ ವಯಸ್ಸಿನಿಂದಲೇ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ.
ಅಷ್ಟೇ ಅಲ್ಲದೇ, ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ದೈವಾರಾಧಕ ನಾಗರಾಜ ಪಾಣ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಆಗಿದೆ. ಯಾವುದೇ ಅರ್ಜಿ ಹಾಕದೇ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ ಎನ್ನುವುದು ಮತ್ತೊಂದು ವಿಶೇಷ. ಕಾಂತಾರ ಸಿನಿಮಾದಿಂದಾಗಿ ದೈವ ನರ್ತಕರು ಕೂಡ ಇದೀಗ ಮುನ್ನೆಲೆಗೆ ಬಂದಿದ್ದಾರೆ.
Live Tv
[brid partner=56869869 player=32851 video=960834 autoplay=true]
ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ದೈವ ನರ್ತಕ ಗುಡ್ಡ ಪಾಣಾರರಿಗೆ (Gudda Panara) ರಾಜ್ಯೋತ್ಸವ ಪ್ರಶಸ್ತಿ (Kannada Rajyotsava Award) ಒಲಿದಿದೆ. ರಾಜ್ಯ ಸರ್ಕಾರ ಹೊರಡಿಸಿದ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಹಳ್ಳಿಯ ಬಡವನಿಗೆ ಪ್ರಶಸ್ತಿ ನೀಡಿದ್ದು ಭಾರೀ ಖುಷಿಯಾಗಿದೆ ಎಂದು ಗುಡ್ಡ ಪಾಣಾರಾ ಸಂತಸ ವ್ಯಕ್ತಪಡಿಸಿದ್ದಾರೆ.
ಗ್ರಾಮದ 10 ಸಮಸ್ತರ ಸಹಕಾರದಿಂದ ಈ ಪ್ರಶಸ್ತಿ ಸಿಕ್ಕಿತು. ನಾನು ನಂಬಿಕೊಂಡು ಬಂದ ಧರ್ಮ ಮತ್ತು ದೇವರು, ಭಕ್ತರ ಸಹಕಾರದಿಂದ ಪ್ರಶಸ್ತಿ ಸಿಕ್ಕಿತು. ಕಳೆದ 38 ವರ್ಷಗಳಿಂದ ನಾನು ದೈವದ ಸೇವೆ ಮಾಡುತ್ತಿದ್ದೇನೆ. ಕಳೆದ 27 ವರ್ಷಗಳಿಂದ ನಾನು ಕಾಪುವಿನಲ್ಲಿ ಹುಲಿಭೂತ ಕಟ್ಟುತ್ತಿದ್ದೇನೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಜ್ಯೂ.ಎನ್‌ಟಿಆರ್ ಮನೆಯಲ್ಲಿನ ಅಪ್ಪು ಫೋಟೋ ವೈರಲ್
ನನಗೀಗ 68 ವರ್ಷ ವಯಸ್ಸಾಗಿದೆ. ಈವರೆಗೆ ನಾನು ಭೂತಾರಾಧನೆಯನ್ನು ಕಾಯಕವಾಗಿ ಮಾಡುತ್ತಿದ್ದೇನೆ. ಧರ್ಮದ ದಾರಿಯಲ್ಲಿ ನಡೆದಿದ್ದೇನೆ. ಮುಂದೆಯೂ ದೈವದೇವರ ಚಾಕರಿ ಮಾಡುವ ಶಕ್ತಿ ಕೊಡು ಎಂದು ಈ ಸಂದರ್ಭದಲ್ಲಿ ಪ್ರಾರ್ಥನೆ ಮಾಡುತ್ತಿದ್ದೇನೆ ಎಂದಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಈ ಬಾರಿಯ ರಾಜ್ಯೋತ್ಸವ (Kannada Rajyotsava) ಪ್ರಶಸ್ತಿ ಪ್ರಕಟಗೊಂಡಿದೆ. ಸಿನಿಮಾ ನಟ ಅವಿನಾಶ್ (avinash), ಕಿರುತೆರೆ ನಟ, ನಿರ್ದೇಶಕ ಸಿಹಿಕಹಿ ಚಂದ್ರು, ಇಸ್ರೋ ಮಾಜಿ ಅಧ್ಯಕ್ಷ ಕೆ. ಶಿವನ್, ಮೈಸೂರಿನ ರಾಮಕೃಷ್ಣ ಆಶ್ರಮ ಸೇರಿದಂತೆ 67 ಗಣ್ಯರಿಗೆ ಪ್ರಶಸ್ತಿ ಸಿಗಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್ (Sunil Kumar) ಅವರು ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಪ್ರತಿ ವರ್ಷ ನೀಡಲಾಗುತ್ತಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಈ ವರ್ಷ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ 67 ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಸಂಕೀರ್ಣ
ಸುಬ್ಬರಾಮ ಶೆಟ್ಟಿ ಆರ್.ಎ. ಸಂಸ್ಥೆಗಳು ಬೆಂಗಳೂರು, ಸೋಲಿಗರ ಮಾದಮ್ಮ, (ಚಾಮರಾಜನಗರ).
ಸಾಹಿತ್ಯ
ಶಂಕರ ಚಚಡಿ( ಬೆಳಗಾವಿ), ಕೃಷ್ಣೆಗೌಡ(ಮೈಸೂರು), ಅಶೋಕ್ ಬಾಬು ನೀಲಗಾ (ಬೆಳಗಾವಿ), ಪ್ರೊ. ಅ.ರಾ. ಮಿತ್ರ(ಹಾಸನ), ರಾಮಕೃಷ್ಣ ಮರಾಠೆ (ಕಲಬುರಗಿ)
ಶಿಕ್ಷಣ
ಕೋಟಿ ರಂಗಪ್ಪ(ತುಮಕೂರು), ಡಾ. ಎಂ.ಜಿ. ನಾಗರಾಜ್ ಸಂಶೋಧಕರು (ಬೆಂಗಳೂರು)
ಕ್ರೀಡೆ ದತ್ತಾತ್ರೇಯ ಗೋವಿಂದ ಕುಲಕರ್ಣಿ(ಧಾರವಾಡ), ರಾಘವೇಂದ್ರ ಅಣ್ಣೇಕರ್ (ಬೆಳಗಾವಿ)
ನ್ಯಾಯಾಂಗ
ವೆಂಕಟಾಚಲಪತಿ (ಬೆಂಗಳೂರು), ನಂಜುಂಡ ರೆಡ್ಡಿ(ಬೆಂಗಳೂರು)
ನೃತ್ಯ ಕಮಲಾಕ್ಷಾಚಾರ್ಯ (ದಕ್ಷಿಣ ಕನ್ನಡ)
ಸಂಸ್ಥೆ:
ರಾಮಕೃಷ್ಣ ಆಶ್ರಮ (ಮೈಸೂರು), ಲಿಂಗಾಯುತ ಪ್ರಗತಿಶೀಲ ಸಂಸ್ಥೆ (ಗದಗ), ಅಗಡಿ ತೋಟ(ಹಾವೇರಿ), ತಲಸೇಮಿಯಾ ಮತ್ತು ಹೀಮೋಫೀಲಿಯ ಸೊಸೈಟಿ(ಬಾಗಲಕೋಟೆ), ಅಮ್ಮತ ಶಿಶು ನಿವಾಸ (ಬೆಂಗಳೂರು), ಸುಮನಾ ಫೌಂಡೇಷನ್ (ಬೆಂಗಳೂರು), ಯುವ ವಾಹಿನಿ ಸಂಸ್ಥೆ (ದಕ್ಷಿಣಕನ್ನಡ), ನೆಲೆ ಫಂಡೇಶನ್- ಅನಾಥ ಮಕ್ಕಳ ಪುನರ್ವಸತಿ ಕೇಂದ್ರ (ಬೆಂಗಳೂರು), ನಮ್ಮನೆ ಸುಮ್ಮನೆ- ನಿರಾಶ್ರಿತ ಆಶ್ರಮ (ಮಂಗಳಮುಖಿ ಸಂಸ್ಥೆ) (ಬೆಂಗಳೂರು), ಉಮಾಮಹೇಶ್ವರಿ ಹಿಂದುಳಿದ ವರ್ಗ ಅಭಿವದ್ಧಿ ಟ್ರಸ್ಟ್ (ಮಂಡ್ಯ)
Live Tv
[brid partner=56869869 player=32851 video=960834 autoplay=true]
ಬಳ್ಳಾರಿ: ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ದಾರುಣವಾಗಿ ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ಬಂಡಿಹಟ್ಟಿಯಲ್ಲಿ ನಡೆದಿದೆ.
ಜಿಲ್ಲೆಯ ಬಂಡಿಹಟ್ಟಿಯಲ್ಲಿ ವಿದ್ಯುತ್ ಸ್ಪರ್ಶಿಸಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಪಾಪತಿ ಹಾಗೂ ಪತ್ನಿ ದ್ಯಾವಮ್ಮಾ ಮೃತಪಟ್ಟಿದ್ದಾರೆ. ಮನೆಯ ಮೇಲೆ ಹಾದುಹೋಗಿರುವ ವಿದ್ಯುತ್ ತಂತಿ ತಾಗಿದ್ದರಿಂದ ದ್ಯಾವಮ್ಮಗೆ ಮೊದಲು ವಿದ್ಯುತ್ ಶಾಕ್ ಹೊಡೆದಿದೆ. ಈ ಸಂದರ್ಭದಲ್ಲಿ ಪತ್ನಿಯನ್ನು ಉಳಿಸಲು ಪಂಪಾಪತಿ ಅವರು ಸಹಾಯಕ್ಕೆ ಧಾವಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ಕ್ಷಮಾಪಣೆ ಪತ್ರ ನೀಡಿದ್ರೆ ಗುತ್ತಿಗೆದಾರರ ವಿರುದ್ಧದ ಮಾನನಷ್ಟ ಮೊಕದ್ದಮೆ ವಾಪಸ್ – ಮುನಿರತ್ನ
ಈ ವೇಳೆ ಇಬ್ಬರಿಗೂ ವಿದ್ಯುತ್ ಶಾಕ್ ಹೊಡೆದು ಇಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಘಟನೆ ಸಂಬಂಧಿಸಿ ಕೌಲ್ ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಸಂಬಂಧಿಸಿ ಅಲ್ಲಿನ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ಗುಜರಾತ್‌ಗೆ ಕಳಂಕ ತರುವ ಸಂಚು ನಡೆಯುತ್ತಿದೆ – ಮೋದಿ ಅಸಮಾಧಾನ
Live Tv
[brid partner=56869869 player=32851 video=960834 autoplay=true]
ಮಂಗಳೂರು: ಮುಂದಿನ ವರ್ಷದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿಗಳನ್ನು ಪಡೆಯದೆ, ಆಯ್ಕೆ ಸಮಿತಿಯನ್ನು ರಚಿಸಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ತಿಳಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಪ್ರಶಸ್ತಿಗಾಗಿ ನಾವು ಎಂದು ಹುಡುಕಿಕೊಂಡು ಹೋಗಬಾರದು, ಪ್ರಶಸ್ತಿ ಸಾಧಕರನ್ನು ಗುರುತಿಸಿ ನೀಡುವಂತಾಗಬೇಕು. ಆ ನಿಟ್ಟಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ಸಾಧಕರ ಆಯ್ಕೆ ನಡೆಯಲಿದೆ ಎಂದು ಹೇಳಿದರು.
ನಾಡಿನೆಲ್ಲಡೆ ನೀರಿಗಾಗಿ ಗಲಾಟೆ, ಸಂಘರ್ಷ, ನ್ಯಾಯಾಲಯದ ಮೆಟ್ಟಿಲೇರುವ ಈ ಸಂದರ್ಭದಲ್ಲಿ ಮಹಾಲಿಂಗ ನಾಯ್ಕರ ಸಾಧನೆ ಯುವ ಪೀಳಿಗೆಗೆ ಪ್ರೇರಣೆಯಾಗಿದೆ. ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ದೇಶದ ಜನರನ್ನು ಕಣ್ತೆರೆಸುವಲ್ಲಿ ಈ ಪ್ರಶಸ್ತಿ ಅರ್ಹವಾಗಿಯೇ ಮಹಾಲಿಂಗ ನಾಯ್ಕರನ್ನು ಹುಡುಕಿಕೊಂಡು ಬಂದಿದೆ ಎಂದರು.
ಮಹಾಲಿಂಗ ನಾಯ್ಕರದ್ದು ಮೌನ ಕ್ರಾಂತಿ. ಅವರು ವಾಸವಿದ್ದ ಗುಡ್ಡದಲ್ಲಿ ಬಾವಿ ತೋಡಿ ನೀರು ಸಿಗದಿದ್ದಾಗ ಅವರು ವಿಚಲಿತರಾಗದೆ ನಿರಂತರ ಶ್ರಮದಿಂದ ಅವರು ಕಲಿಯುಗದಲ್ಲಿ ಸುರಂಗವನ್ನು ಕೊರೆದು ಗಂಗೆಯನ್ನು ಭೂಮಿಗೆ ತರಿಸಿದ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಿದೆ. ಇಂತಹ ಭಗೀರಥರನ್ನು ಕೇಂದ್ರ ಸರ್ಕಾರ ಗುರುತಿಸಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತೋಷದ ವಿಷಯ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹಾಲಿಂಗ ನಾಯ್ಕ ಅವರು, ಇಂದು ನೀರಿಗಾಗಿ ಸಮಸ್ಯೆಗಳು ಹೆಚ್ಚಾಗುತ್ತಿರುವಂತೆಯೇ ಮುಂದಿನ ದಿನಗಳಲ್ಲಿ ನೀರು ಬಂಗಾರಕ್ಕಿಂತಲೂ ಹೆಚ್ಚು ಬೆಲೆ ಬಾಳಲಿದೆ. ಅದಕ್ಕಾಗಿ ನೀರಿನ ಮಹತ್ವವನ್ನು ಅರಿತು ಸಾರ್ವಜನಿಕರು ಮಿತವಾಗಿ ಉಪಯೋಗಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಲತಾ ಮಂಗೇಶ್ಕರ್ ಹಾಡು ಕೇಳಿ ವೇದಿಕೆಯಲ್ಲಿ ಕಣ್ಣೀರು ಹಾಕಿದ್ರು ಜವಾಹರ್‌ಲಾಲ್ ನೆಹರೂ