Tag: ರಾಜ್ಯಾಧ್ಯಕ್ಷ

  • ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿ- ಪತ್ರಕ್ಕೆ ರಕ್ತದ ಹೆಬ್ಬೆಟ್ಟು ಒತ್ತಿ ಮಂಡ್ಯದಲ್ಲಿ ಆಗ್ರಹ

    ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿ- ಪತ್ರಕ್ಕೆ ರಕ್ತದ ಹೆಬ್ಬೆಟ್ಟು ಒತ್ತಿ ಮಂಡ್ಯದಲ್ಲಿ ಆಗ್ರಹ

    ಮಂಡ್ಯ: ಬಿಜೆಪಿ ರಾಜ್ಯಾಧ್ಯಕ್ಷ (BJP State President) ಸ್ಥಾನಕ್ಕೆ ಜಟಾಪಟಿ ನಡೆಯುತ್ತಿದ್ದು, ಈ ನಡುವೆ ಮಂಡ್ಯದಲ್ಲಿ ಬಿ.ವೈ ವಿಜಯೇಂದ್ರಗೆ (B Y Vijayendra) ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ವಿನೂತನ ಪ್ರತಿಭಟನೆ ಕೈಗೊಳ್ಳಲಾಗಿದೆ.

    ಮಂಡ್ಯ ಬಿಜೆಪಿ ಕಾರ್ಯಕರ್ತರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾಗೆ (J.P Nadda) ಪತ್ರ ಬರೆದಿದ್ದಾರೆ. ಮಂಡ್ಯದ ಪೋಸ್ಟ್ ಆಫೀಸ್ ಬಳಿ ಈ ಪ್ರತಿಭಟನೆ ನಡೆದಿದ್ದು, ಅಂಚೆ ಕಚೇರಿ (PostOffice) ಮೂಲಕ ನಡ್ಡಾಗೆ ಪತ್ರ ಪೋಸ್ಟ್ ಮಾಡಲಾಗಿದೆ. ಈ ಪತ್ರಕ್ಕೆ ರಕ್ತದ ಹೆಬ್ಬೆಟ್ಟು ಮುದ್ರೆ ಒತ್ತಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎಂದು ಆಗ್ರಹಿಸಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷನಾಗಿ ಬಿ.ವೈ.ವಿಜಯೇಂದ್ರರನ್ನ ನೇಮಕ ಮಾಡಿ. ಯಡಿಯೂರಪ್ಪ (B. S Yediyurappa) ಒಂದು ಸೀಟನ್ನ 114 ಸೀಟ್ ಮಾಡಿ ಪಕ್ಷವನ್ನ ಅಧಿಕಾರಕ್ಕೆ ತಂದ್ರು. ಆದರೆ ಈಗ ರಾಜ್ಯದ ನಾಯಕರ ಬೇಜವ್ದಾರಿತನದಿಂದ ಬಿಜೆಪಿ ಸೋತಿದೆ. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರಿಗೆ ಪಟ್ಟಕಟ್ಟಿ. ಲೋಕಸಭಾ ಚುನಾವಣೆಯಲ್ಲಿ (Loksabha Election) ರಾಜ್ಯದಲ್ಲಿ ಹೆಚ್ಚು ಸೀಟನ್ನು ಬಿಜೆಪಿ ಗೆಲ್ಲುತ್ತೆ. ಪತ್ರದಲ್ಲಿ ರಕ್ತದ ಸಹಿ ಮಾಡಿ ನಿಮಗೆ ಅರ್ಪಣೆ ಮಾಡಿದ್ದೇವೆ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಎಂ ಇಬ್ರಾಹಿಂ ರಾಜೀನಾಮೆ

    ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಎಂ ಇಬ್ರಾಹಿಂ ರಾಜೀನಾಮೆ

    ಬೆಂಗಳೂರು: ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿಎಂ ಇಬ್ರಾಹಿಂ (CM Ibrahim) ರಾಜೀನಾಮೆ ನೀಡಿದ್ದಾರೆ.

    ರಾಜೀನಾಮೆ ಬಳಿಕ ದೇವೇಗೌಡರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸೋಲಿನ ಹೊಣೆ ನಾನು ಹೊರುತ್ತೇನೆ. ಹೀಗಾಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೇನೆ. ದೇವೇಗೌಡ (HD Devegowda) ರಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

    ಹೊಸ ಸರ್ಕಾರ ಬಂದಿದೆ. ಅವರಿಗೆ ಶುಭವಾಗಲಿ. ರಾಜ್ಯದಲ್ಲಿ ಬಿಜೆಪಿ (BJP) ಆಡಳಿತ ವಿರೋಧಿ ಇತ್ತು. ಇದನ್ನ ಕಾಂಗ್ರೆಸ್ (Congress) ಅವರು ಹಣದಿಂದ ಮತ್ತೊಂದು ಮಗದೊಂದು ವಿಚಾರದಲ್ಲಿ ಗೆದ್ದಿದ್ದಾರೆ. ನಮ್ಮದು ಪ್ರಾದೇಶಿಕ ಪಕ್ಷ, ಹಣ ಇಲ್ಲ. ನಮಗೆ ಯಾರ ಬೆಂಬಲವೂ ಇರಲಿಲ್ಲ. ಆದರೂ ನಾವು 60 ಲಕ್ಷ ಮತ ಪಡೆದಿದ್ದೇವೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯ್ತಿ, ಲೋಕಸಭೆ ಚುನಾವಣೆ (Loksabha Election) ಗೆ ನಾವು ಸಿದ್ಧವಾಗಿ ಕೆಲಸ ಮಾಡ್ತೀವಿ. ಸಿಎಂಗೆ ಒಳ್ಳೆಯದಾಗಲಿ. ಕೊಟ್ಟ ಭರವಸೆ ಈಡೇರಿಸಲಿ. 3 ತಿಂಗಳು ಅವರಿಗೆ ಸಮಯ ಕೊಡ್ತೀವಿ. 3 ತಿಂಗಳು ಹನಿಮೂನ್ ಸಮಯ. ಜನರಿಗೆ ಕೊಟ್ಟ ಭರವಸೆ ಕಾಂಗ್ರೆಸ್ ಅವರು ಈಡೇರಿಸಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ನೂತನ ಸಂಸತ್ ಭವನದಲ್ಲಿ ಇಡಲಾಗುತ್ತದೆ ಚಿನ್ನದ ರಾಜದಂಡ – ಸೆಂಗೊಲ್ ವಿಶೇಷತೆ ಏನು?

    ನಮ್ಮ ಸಮಾವೇಶಕ್ಕೆ ಜನ ಸೇರುತ್ತಿದ್ದರು. ಆದರೆ ಮತವಾಗಿ ಅದನ್ನ ಕನ್ವರ್ಟ್ ಮಾಡೋಕೆ ನಮ್ಮ ಸ್ಥಳೀಯ ನಾಯಕರುಗಳಿಗೆ ಆಗಲಿಲ್ಲ. ನಮ್ಮ ನಾಯಕರು ಮತ ಪಡೆಯಲು ವಿಫಲರಾದ್ರು. 15-20 ಕ್ಷೇತ್ರದಲ್ಲಿ 2 ಸಾವಿರ ಮತಗಳಲ್ಲಿ ಸೋತಿದ್ದೇವೆ. ಈ ಚುನಾವಣೆಯಲ್ಲಿ ಬಿಜೆಪಿ ಅವರು ಜೆಡಿಎಸ್ ಮುಗಿಸೋಕೆ ಒಳ ಒಪ್ಪಂದ ಮಾಡಿಕೊಂಡಿದ್ರು. ಹಾಸನ, ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳೇ ಇದಕ್ಕೆ ಸಾಕ್ಷಿ. ಹಾಸನದಲ್ಲಿ ಕಾಂಗ್ರೆಸ್ ವೋಟ್ ಯಾರಿಗೆ ಹೋಯ್ತು. ಬಿಜೆಪಿ- ಕಾಂಗ್ರೆಸ್ ಒಳ ಒಪ್ಪಂದ ಎಂದು ಇದೇ ವೇಳೆ ಇಬ್ರಾಹಿಂ ಗಂಭೀರ ಆರೋಪ ಮಾಡಿದರು.

    ಜೆಡಿಎಸ್ ನಲ್ಲಿ ಇಬ್ರಾಹಿಂ ಪಾತ್ರ ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸದಾ ಜನರ ಮಧ್ಯೆ ಇರೋನು. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡ್ತೀನಿ ಎಂದ ಅವರು, ಕಾಂಗ್ರೆಸ್ ನಲ್ಲಿ ಇದ್ದಿದ್ದರೆ ಸಚಿವ ಸ್ಥಾನ ಸಿಗುತ್ತಿತ್ತು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಗೌರವ ಇಲ್ಲದ ಕಡೆ ನಾನು ಇರೊಲ್ಲ. ಸ್ಥಾನಕ್ಕೆ ನಾನು ಹೋಗಿಲ್ಲ. ಮಾನಕ್ಕಾಗಿ ನಾನು ಬಿಟ್ಟು ಬಂದೆ. ಅಧಿಕಾರದ ಆಸೆ ಇಲ್ಲ ಎಂದರು.

  • ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪಕ್ಷ ಇನ್ನಷ್ಟು ಬಲಗೊಳ್ಳಲಿದೆ: ಸಿಎಂ

    ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪಕ್ಷ ಇನ್ನಷ್ಟು ಬಲಗೊಳ್ಳಲಿದೆ: ಸಿಎಂ

    ಬೆಂಗಳೂರು: ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪಕ್ಷ ಮುಂದುವರಿಯುತ್ತಿದೆ. ಅಲ್ಲದೆ ಅವರ ನೇತೃತ್ವದಲ್ಲಿ ಪಕ್ಷ ಇನ್ನಷ್ಟು ಬಲಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

    ರಾಜ್ಯಾಧ್ಯಕ್ಷರಾಗಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನಳಿನ್ ಕುಮಾರ್ ಕಟೀಲ್‍ಗೆ ಅಭಿನಂದನೆ ಸಲ್ಲಿಸಿದರು. ಕಟೀಲ್ ಅವರು ಪಕ್ಷವನ್ನು ಸಮರ್ಥವಾಗಿ ಕಟ್ಟಿದ್ದಾರೆ. ಹಲವು ಸಲ ರಾಜ್ಯ ಪ್ರವಾಸ ಮಾಡಿದ್ದಾರೆ. ಬೂತ್ ಮಟ್ಟದಿಂದ ಪಕ್ಷ ಸಂಘಟಿಸಿ ಯಶಸ್ವಿಗೊಳಿಸಿದ್ದಾರೆ ಎಂದರು.

    ಕಟೀಲ್ ನೇತೃತ್ವದಲ್ಲಿ ಮುಂದುವರೆಯುತ್ತಿದ್ದೇವೆ. ಅವರ ನೇತೃತ್ವದಲ್ಲಿ ಪಕ್ಷ ಇನ್ನಷ್ಟು ಬಲಗೊಳ್ಳಲಿದೆ ಎಂದು ಹೇಳಿದರು. ಇದೇ ವೇಳೆ ರಾಜ್ಯಾಧ್ಯಕ್ಷರ ಬದಲಾವಣೆಯ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಪಕ್ಷದಲ್ಲಿ ಬದಲಾವಣೆ ಚರ್ಚೆ ನಡೆಯುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.

    ರಾಜ್ಯದ ವಿವಿಧೆಡೆ ಮಳೆ ಹಿನ್ನೆಲೆ ಇಂದು ಡಿಸಿಗಳ ಜೊತೆ ಮಾಹಿತಿ ಪಡೆದುಕೊಳ್ಳುತ್ತೇನೆ. ಎಲ್ಲೆಲ್ಲಿ ಮಳೆಯಾಗ್ತಿದೆ ಅನ್ನೋ ಮಾಹಿತಿ ತಗೋತೇನೆ. ಇನ್ನಷ್ಟು ಪರಿಹಾರ ಕ್ರಮ ಏನು ತಗೋಬೇಕು ಅಂತ ನಿರ್ಧರಿಸ್ತೇವೆ ಎಂದರು.  ಇದನ್ನೂ ಓದಿ: ಶ್ರೀಲಂಕಾಗೆ ಬೆಂಬಲ ಬೇಕು, ಅನಗತ್ಯ ಒತ್ತಡ ಅಲ್ಲ- ಚೀನಾವನ್ನು ತರಾಟೆಗೆ ತೆಗೆದುಕೊಂಡ ಭಾರತ

    Live Tv
    [brid partner=56869869 player=32851 video=960834 autoplay=true]

  • ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯಲ್ಲಿ ಬದಲಾವಣೆ – ಆಗಸ್ಟ್ ಅಂತ್ಯಕ್ಕೆ ಮತ್ತಷ್ಟು ಶಾಕ್ ಸಾಧ್ಯತೆ

    ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯಲ್ಲಿ ಬದಲಾವಣೆ – ಆಗಸ್ಟ್ ಅಂತ್ಯಕ್ಕೆ ಮತ್ತಷ್ಟು ಶಾಕ್ ಸಾಧ್ಯತೆ

    ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಬಿಜೆಪಿಗೆ ಹೈಕಮಾಂಡ್ ಬೂಸ್ಟರ್ ಡೋಸ್ ಕೊಟ್ಟಿದೆ. ಒಂದು ರೀತಿಯಲ್ಲಿ ಪೊಲಿಟಿಕಲ್ ಸರ್ಜಿಕಲ್ ಸ್ಟ್ರೈಕ್ ಶುರುವಾಗಿದೆ.

    ಮಾಸ್ ಲೀಡರ್ ಯಡಿಯೂರಪ್ಪಗೆ ಬಿಜೆಪಿಯ ಸರ್ವೋಚ್ಛ ಸಮಿತಿಗಳಾದ ಕೇಂದ್ರ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಯಲ್ಲಿ ಸ್ಥಾನ ನೀಡಿದೆ. ಈ ಬೆನ್ನಲ್ಲೇ ಬಿಜೆಪಿ ಸಂಘಟನೆಗೆ ಸರ್ಜರಿ ನಡೆದಿದೆ ಅನ್ನೋ ಮಾತುಗಳ ಕೇಳಿ ಬರುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಎದುರು ಯಡಿಯೂರಪ್ಪ ಮಾಸ್ ಇಮೇಜ್ ಅಸ್ತ್ರ – ಬಿಜೆಪಿ ಸಂಸದೀಯ ಮಂಡಳಿಗೆ ಬಿಎಸ್‍ವೈ ಆಯ್ಕೆ ಹಿಂದಿನ ಪ್ಲಾನ್ ಏನು?

    ಮುಂದಿನ ರಾಜ್ಯಾಧ್ಯಕ್ಷ ರೇಸ್‍ನಲ್ಲಿ ಯಾರ್ಯಾರು ಇದ್ದಾರೆ?, ನಾಲ್ವರು ಹೊಸ ಪ್ರಧಾನ ಕಾರ್ಯದರ್ಶಿಗಳ ನೇಮಕ ಆಗುತ್ತಾ ಅನ್ನೋ ಮಾತು ಕೇಳಿ ಬರುತ್ತಿದೆ. ಹೈಕಮಾಂಡ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ವಿಜಯೇಂದ್ರ ಹೆಸರು ಪರಿಗಣಿಸ್ತಾರಾ ಅಥವಾ ಆಗಸ್ಟ್ ಕಡೇ ವಾರದಲ್ಲಿ ಹೈಕಮಾಂಡ್‍ನಿಂದ ಮತ್ತೊಂದು ಶಾಕಿಂಗ್ ಸುದ್ದಿ ಹೊರಬೀಳುತ್ತಾ ಎಂಬುದನ್ನು ಕಾದದುನೋಡಬೇಕಿದೆ.

    ಬಿಜೆಪಿ ನಿಯಮದಂತೆ ಆಗಸ್ಟ್ 28ಕ್ಕೆ ಕಟೀಲ್ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ಪಕ್ಷಕ್ಕೆ ಅಗತ್ಯವಿದ್ದರೆ ಅವಧಿ ವಿಸ್ತರಿಸಬಹುದು ಅಥವಾ ಪುನರ್ ಆಯ್ಕೆ ಮಾಡಬಹುದು. ಸದ್ಯದ ಬೆಳವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡುವ ಸಾಧ್ಯತೆಗಳಿವೆ. ರಾಜ್ಯಾಧ್ಯಕ್ಷರ ರೇಸ್‍ನಲ್ಲಿ ಮೂವರು ಹೆಸರುಗಳು ಮುಂಚೂಣಿ ಕೇಳಿಬರುತ್ತಿವೆ. ಸಿ.ಟಿ.ರವಿ, ಶೋಭಾ ಕರಂದ್ಲಾಜೆ ಹಾಗೂ ಸಚಿವ ಸುನೀಲ್ ಕುಮಾರ್ ಹೆಸರು ಮುಂಚೂಣಿಯಲ್ಲಿದೆ. ಇತ್ತ ಪಕ್ಷ ಸಂಘಟನೆ ಜವಾಬ್ದಾರಿ ನೀಡುವಂತೆ ಅರವಿಂದ್ ಲಿಂಬಾವಳಿ ಮನವಿ ಮಾಡಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಳಿನ್ ಕುಮಾರ್ ಕಟೀಲ್‍ಗೆ ಶುಭ ಕೋರಿದ ಸಿಎಂ ಬೊಮ್ಮಾಯಿ

    ನಳಿನ್ ಕುಮಾರ್ ಕಟೀಲ್‍ಗೆ ಶುಭ ಕೋರಿದ ಸಿಎಂ ಬೊಮ್ಮಾಯಿ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ಶುಭಕೋರಿದ್ದಾರೆ.

    ರಾಜ್ಯಾಧ್ಯಕ್ಷರಾಗಿ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಿಎಂ ವಿಶ್ ಮಾಡಿದ್ದಾರೆ. ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿ ಎರಡು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ನಳಿನ್ ಕುಮಾರ್ ಕಟೀಲ್ ಅವರಿಗೆ ಹಾರ್ದಿಕ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಪಕ್ಷವು ತಮ್ಮ ನೇತೃತ್ವದಲ್ಲಿ ರಾಜ್ಯದಲ್ಲಿ ಇನ್ನಷ್ಟು ಬಲಗೊಳ್ಳಲಿ. ಸರ್ವ ವ್ಯಾಪಿ ಸರ್ವ ಸ್ಪರ್ಶಿಯಾಗಿ ಬೆಳೆಯಲಿ ಎಂದು ಶುಭ ಹಾರೃಸುತ್ತೇನೆ ಎಂದು ತಿಳಿಸಿದ್ದಾರೆ.

    2019ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಸಂಸದ ನಳಿನ್ ಕುಮಾರ್ ಕಟೀಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ನರೇಂದ್ರ ಮೋದಿ ಅಲೆಯಲ್ಲಿ 2,74,621 ಮತಗಳ ಅಂತರದಿಂದ ಮೂರನೇ ಬಾರಿ ಲೋಕಸಭೆ ಪ್ರವೇಶ ಮಾಡಿದ್ದಾರೆ. ಕಟೀಲ್ 7,74,285 ಮತಗಳನ್ನು ಪಡೆದರೆ ಕಾಂಗ್ರೆಸ್ಸಿನ ಮಿಥುನ್ ರೈ 4,99,664 ಮತಗಳನ್ನು ಪಡೆದಿದ್ದರು.

    ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯ ಸಂಘಟನೆ, ಮುನ್ನಡೆಸುವ ಜವಾಬ್ದಾರಿಯನ್ನು ಹೈಕಮಾಂಡ್ ಕಟೀಲ್ ಅವರ ಹೆಗಲಿಗೆ ಹೊರಸಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು 2019ರ ಆಗಸ್ಟ್ ನಲ್ಲಿ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆದೇಶ ಹೊರಡಿಸಿದ್ದಾರೆ.

  • ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಣ್ಣಾಮಲೈ ನೇಮಕ- ನಡ್ಡಾ ಆದೇಶ

    ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಣ್ಣಾಮಲೈ ನೇಮಕ- ನಡ್ಡಾ ಆದೇಶ

    ನವದೆಹಲಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರನ್ನು ನೇಮಕ ಮಾಡಲಾಗಿದೆ.

    ಈ ಕುರಿತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಆದೇಶಿಸಿದ್ದು, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ತಕ್ಷಣದಿಂದಲೇ ಈ ಆದೇಶ ಜಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

    ನಿನ್ನೆಯಷ್ಟೇ ಕೇಂದ್ರ ಸಚಿವ ಸಂಪುಟ ಪುನಾರಚನೆ, ನೂತನ ಸಚಿವರ ಪ್ರಮಾಣವಚನ ಸ್ವೀಕಾರದ ವೇಳೆ ಅಣ್ಣಾಮಲೈ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್‍ನಲ್ಲಿದ್ದರು. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಎಲ್.ಮುರುಗನ್ ಅವರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹೀಗಾಗಿ ಅಣ್ಣಾಮಲೈ ಅವರನ್ನು ತಮಿಳುನಾಡಿನ ಮುಂದಿನ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಹಲವರು ಆಗ್ರಹಿಸಿದ್ದರು. ಹೀಗಾಗಿ ನಿನ್ನೆ ಅಣ್ಣಾಮಲೈ ಟ್ರೆಂಡಿಂಗ್‍ನಲ್ಲಿದ್ದರು.

    ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅಣ್ಣಾಮಲೈ ಸೋತರೂ, ಜನಪ್ರಿಯತೆ ಪಡೆದಿದ್ದಾರೆ. ಪಕ್ಷವನ್ನು ಮುನ್ನಡೆಸುವ ನಾಯಕತ್ವ ಗುಣ ಅವರಲ್ಲಿದೆ. ಹೀಗಾಗಿ ತಮಿಳುನಾಡು ಅಧ್ಯಕ್ಷ ಸ್ಥಾನವನ್ನು ಅಣ್ಣಾಮಲೈ ಅವರಿಗೆ ನೀಡಬೇಕು ಎಂದು ಬಿಜೆಪಿ ಅಭಿಮಾನಿಗಳು ಒತ್ತಾಯಿಸಿದ್ದರು.

    ತಮಿಳುನಾಡು ಬಿಜೆಪಿಯ ಮುಂದಿನ ಅಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ಅವರೇ ಸೂಕ್ತ ವ್ಯಕ್ತಿ ಎಂದು ಹಲವರು ಹೇಳಿದ್ದರು. ಇನ್ನೂ ಕೆಲವರು ಬಿ.ಎಲ್.ಸಂತೋಷ್ ಅವರೊಂದಿಗೆ ಅಣ್ಣಾಮಲೈ ಅವರು ಇರುವ ಫೋಟೋ ಹಂಚಿಕೊಂಡು ಯಂಗ್‍ಸ್ಟರ್ಸ್ ವೇಟಿಂಗ್ ಫಾರ್ ಗುಡ್ ನ್ಯೂಸ್ ಎಂದು ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಅಣ್ಣಾಮಲೈ ಅವರನ್ನು ತಮಿಳುನಾಡು ರಾಜ್ಯಾಧ್ಯಕ್ಷರನ್ನಾಗಿ ಜೆ.ಪಿ.ನಡ್ಡಾ ನೇಮಿಸಿದ್ದಾರೆ.

  • ನಮ್ಮ ಶಾಸಕರನ್ನು ಅನರ್ಹ ಮಾಡಿದವರನ್ನು ಜನರೇ ಅನರ್ಹಗೊಳಿಸಿದ್ದಾರೆ: ಕಟೀಲ್

    ನಮ್ಮ ಶಾಸಕರನ್ನು ಅನರ್ಹ ಮಾಡಿದವರನ್ನು ಜನರೇ ಅನರ್ಹಗೊಳಿಸಿದ್ದಾರೆ: ಕಟೀಲ್

    ನವದೆಹಲಿ: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಮ್ಮ ಶಾಸಕರನ್ನು ಅನರ್ಹ ಎನ್ನುತ್ತಿದ್ದರು. ಇಂದು ಕಾಂಗ್ರೆಸ್, ಜೆಡಿಎಸ್ ಪಕ್ಷವನ್ನೇ ಜನರು ಅನರ್ಹ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

    ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟೀಂ ವರ್ಕ್ ಮಾಡಿ ಗೆಲುವು ಸಾಧಿಸಿದ್ದೇವೆ. ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಸುಭದ್ರ ಮತ್ತು ಅತ್ಯುತ್ತಮ ಸರ್ಕಾರ ನೀಡುತ್ತೇವೆ ಎಂದು ಭರವಸೆ ನಿಡಿದರು.

    ನಾವು ಶಾಸಕರನ್ನು ಸೆಳೆಯುವುದಿಲ್ಲ. ಜೆಡಿಎಸ್, ಕಾಂಗ್ರೆಸ್ ಶಾಸಕರು ಅಸಮಾಧಾನ ಹೊಂದಿದ್ದಾರೆ. ಅವರು ನಮ್ಮ ಪಾರ್ಟಿಗೆ ಬಂದರೆ ನಾವು ಸ್ವೀಕಾರ ಮಾಡುತ್ತೇವೆ. ಸಾಮಾನ್ಯ ಕಾರ್ಯಕರ್ತರು ಬಂದರೂ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.

    ಪ್ರಧಾನಿ ಮೋದಿ ಮಾರ್ಗದರ್ಶನ ಹಾಗೂ ಯಡಿಯೂರಪ್ಪ ನೇತೃತ್ವದಲ್ಲಿ ಉಪಚುನಾವಣೆಯಲ್ಲಿಯೂ ಗೆದ್ದಿದ್ದೇವೆ. ಜನರು ಬಿಜೆಪಿಗೆ ಆರ್ಶೀವಾದ ಮಾಡಿದ್ದಾರೆ. 15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳನ್ನು ಗೆದ್ದಿದ್ದೇವೆ. ಅಭಿವೃದ್ಧಿ ಪರ ಯೋಜನೆಗಳನ್ನು ನೋಡಿ ಜನ ಮತ ಹಾಕಿದ್ದಾರೆ. ಕಲ್ಯಾಣ ಕರ್ನಾಟಕ ದೃಷ್ಟಿಯಿಂದ ಜನರು ಬಿಎಸ್‍ವೈಯನ್ನು ಬೆಂಬಲಿಸಿದ್ದಾರೆ. ಅಭಿವೃದ್ಧಿ ಚಿಂತನೆಗಳಿಗೆ ಮತ ಹಾಕಿದ್ದಾರೆ ಎಂದು ಹೇಳುತ್ತಾ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

    ಇದೇ ವೇಳೆ ಮಂಡ್ಯ, ಚಿಕ್ಕಬಳ್ಳಾಪುರ, ಕೆಆರ್ ಪೇಟೆಯಲ್ಲಿ ಮೊದಲ ಬಾರಿ ಬಿಜೆಪಿ ದ್ವಜ ಹಾರಿದೆ. ಜಿದ್ದಾಜಿದ್ದಿ ಹೋರಾಟ ಮಾಡಿ ಗೆದ್ದಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

  • ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ನೇಮಕ

    ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ನೇಮಕ

    ಬೆಂಗಳೂರು: ರಾಜ್ಯ ಬಿಜೆಪಿಯ ಸಂಘಟನೆ, ಮುನ್ನಡೆಸುವ ಜವಾಬ್ದಾರಿಯನ್ನು ಹೈಕಮಾಂಡ್ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಹೆಗಲಿಗೆ ಹೊರಸಿದೆ.

    ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆದೇಶ ಹೊರಡಿಸಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಬಿಜೆಪಿಯ ಸಿದ್ಧಾಂತದ ಪ್ರಕಾರ ಒಬ್ಬರಿಗೆ ಒಂದೇ ಹುದ್ದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನವನ್ನು ಸಿಎಂ ಯಡಿಯೂರಪ್ಪ ಅವರಿಂದ ಹಿಂಪಡೆದಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ನೀಡಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    2019ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಸಂಸದ ನಳಿನ್ ಕುಮಾರ್ ಕಟೀಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ನರೇಂದ್ರ ಮೋದಿ ಅಲೆಯಲ್ಲಿ 2,74,621 ಮತಗಳ ಅಂತರದಿಂದ ಮೂರನೇ ಬಾರಿ ಲೋಕಸಭೆ ಪ್ರವೇಶ ಮಾಡಿದ್ದಾರೆ. ಕಟೀಲ್ 7,74,285 ಮತಗಳನ್ನು ಪಡೆದರೆ ಕಾಂಗ್ರೆಸ್ಸಿನ ಮಿಥುನ್ ರೈ 4,99,664 ಮತಗಳನ್ನು ಪಡೆದಿದ್ದರು.

  • ಕಗ್ಗಂಟಾಗಿದೆ ಜೆಡಿಎಸ್ ನೂತನ ಸಾರಥಿಯ ನೇಮಕ

    ಕಗ್ಗಂಟಾಗಿದೆ ಜೆಡಿಎಸ್ ನೂತನ ಸಾರಥಿಯ ನೇಮಕ

    ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್ ವಿಶ್ವನಾಥ್ ಅವರು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದು, ಇದೀಗ ಜೆಡಿಎಸ್‍ನ ಹೊಸ ಸಾರಥಿ ಆಯ್ಕೆ ಮಾಡುವಲ್ಲಿ ಪಕ್ಷ ನಿರತವಾಗಿದೆ.

    ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಅಪ್ಪ-ಮಗನ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ. ತಂದೆ ದೊಡ್ಡಗೌಡ್ರು ಒಬ್ಬರ ಪರ ಬ್ಯಾಟಿಂಗ್ ಮಾಡಿದರೆ ಸಿಎಂಗೆ ಮತ್ತೊಬ್ಬರ ಮೇಲೆ ಪ್ರೀತಿ. ಈ ಹಿನ್ನೆಲೆಯಲ್ಲಿ ಪಕ್ಷದ ಹೊಸ ಸಾರಥಿ ನೇಮಕ ಮಾಡಲು ವರಿಷ್ಠರಿಗೆ ಕಗ್ಗಂಟಾಗಿದೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸಿವೆ.

    ಪಕ್ಷದ ವರಿಷ್ಠ ದೇವೇಗೌಡ, ವಿಶ್ವನಾಥ್ ಸೇರಿದಂತೆ ದಳದ ಬಹುತೇಕ ನಾಯಕರಿಗೆ ಹಿಂದುಳಿದ ವರ್ಗದ ನಾಯಕ ಮಧು ಬಂಗಾರಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕೆಂಬ ಹಂಬಲವಿದೆ. ಆದರೆ ಸಚಿವ ಸ್ಥಾನ ವಂಚಿತ ಅಲ್ಪಸಂಖ್ಯಾತ ನಾಯಕ ಫಾರೂಖ್ ಅವರನ್ನು ಮಾಡಬೇಕು ಎಂಬುವುದು ಸಿಎಂ ವಾದವಾಗಿದೆ. ಹೀಗಾಗಿ ದೇವೇಗೌಡರು ಯಾರನ್ನು ರಾಜ್ಯಾಧ್ಯಕ್ಷ ಮಾಡೋದು ಅನ್ನೋ ಚಿಂತೆಯಲ್ಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಇತ್ತೀಚೆಗೆ ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ದೇವೇಗೌಡರು ಮಧು ಬಂಗಾರಪ್ಪ ಅವರ ಅಭಿಪ್ರಾಯ ಕೇಳಿದ್ದರು. ಈ ವೇಳೆ ಮಧು ನಿಮ್ಮ ಮಾತಿನಂತೆ ನಡೆಯುತ್ತೇನೆ ಎಂದಿದ್ದರು. ವಿಶ್ವನಾಥ್ ಕೂಡ ಬಹಿರಂಗವಾಗಿಯೇ ಮಧು ಬಂಗಾರಪ್ಪ ಪರ ಬ್ಯಾಟಿಂಗ್ ಮಾಡಿದ್ದರು. ಆದರೆ ಸಿಎಂಗೆ ಫಾರೂಖ್ ಮೇಲಿನ ಪ್ರೀತಿಗೆ ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಗೊಂದಲವುಂಟಾಗಿದೆ. ಒಟ್ಟಿನಲ್ಲಿ ದೇವೇಗೌಡರು ಪಕ್ಷ ಸಂಘಟನೆ, ಮುಂಬರುವ ಚುನಾವಣೆ ದೃಷ್ಟಿ ಇಟ್ಟುಕೊಂಡು ರಾಜ್ಯಾಧ್ಯಕ್ಷರನ್ನ ನೇಮಕ ಮಾಡಲಿದ್ದಾರೆ ಎನ್ನಲಾಗಿದೆ.

    ಇತ್ತ ಇಬ್ಬರ ಜಗದಲ್ಲಿ ಮೂರನೆಯವರಿಗೆ ಲಾಭ ಎಂಬಂತೆ ದಲಿತ ಶಾಸಕ ಎಚ್.ಕೆ ಕುಮಾರಸ್ವಾಮಿ ಹೆಸರು ರೇಸ್‍ನಲ್ಲಿದೆ. ಒಟ್ಟಿನಲ್ಲಿ ಜೆಡಿಎಸ್‍ಗೆ ನೂತನ ಸಾರಥಿ ಯಾರಾಗ್ತಾರೆ ಅನ್ನೋದು ಸದ್ಯದ ಕುತೂಹಲವಾಗಿದ್ದು, ಇನ್ನೆರಡು ದಿನಗಳಲ್ಲಿ ರಾಜ್ಯಾಧ್ಯಕ್ಷ ನೇಮಕ ಬಹುತೇಕ ಖಚಿತವಾಗಲಿದೆ.

  • ಚದುರಂಗದಾಟದಲ್ಲಿ ಸಿಲುಕಿದೆಯಾ ಬಿಎಸ್‍ವೈ ಸಿಎಂ ಕುರ್ಚಿ ಕನಸು?

    ಚದುರಂಗದಾಟದಲ್ಲಿ ಸಿಲುಕಿದೆಯಾ ಬಿಎಸ್‍ವೈ ಸಿಎಂ ಕುರ್ಚಿ ಕನಸು?

    ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಯಡಿಯೂರಪ್ಪ ಆಸೆ ನಿರಾಸೆಯಾಗುತ್ತಿದ್ದು, ಮೋದಿ-ಅಮಿತ್ ಶಾ ತಂತ್ರಕ್ಕೆ ಬಿಎಸ್‍ವೈ ಕುರ್ಚಿ ಕಳೆದುಕೊಳ್ತಾರಾ ಅನ್ನೋ ಪ್ರಶ್ನೆಯೊಂದು ಇದೀಗ ಬಿಜೆಪಿ ನಾಯಕರನ್ನು ಕಾಡುತ್ತಿದೆ.

    ಹೌದು. ದೋಸ್ತಿ ಸರ್ಕಾರ ಬೀಳಿಸುವ ಸಾಹಸಕ್ಕಿಳಿದ ಬಿಎಸ್‍ವೈ ಅವರ ಸಿಎಂ ಕುರ್ಚಿಯ ಕನಸು ಕನಸಾಗಿಯೇ ಉಳಿಯುತ್ತಾ ಎಂಬ ಅನುಮಾನವೊಂದು ಎದ್ದಿದೆ. ಯಾಕಂದರೆ ಆಪರೇಷನ್ ಕಮಲ ಮತ್ತೆ ಕೈಗೂಡುವುದು ಸದ್ಯಕ್ಕಂತೂ ಅನುಮಾನವಾಗಿದೆ. ಈ ಹೊತ್ತಲ್ಲೇ ಯಡಿಯೂರಪ್ಪಗೆ ಹೈಕಮಾಂಡ್ ನಿಂದ ಶಾಕ್‍ಂಗ್ ಸುದ್ದಿ ಸಿಕ್ಕಿದೆಯಂತೆ.

    ಏನದು ಶಾಕಿಂಗ್ ನ್ಯೂಸ್?
    ಶೀಘ್ರವೇ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರು ಬದಲಾವಣೆಯಾಗುವ ಸಾಧ್ಯತೆಗಳಿವೆ. ಸಂಸತ್ ಅಧಿವೇಶನ ಬಳಿಕ ಯಡಿಯೂರಪ್ಪ ಜಾಗದಲ್ಲಿ ಹೊಸಬರ ನೇಮಕವಾಗಲಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ರಾಜ್ಯಾಧ್ಯಕ್ಷ ಸ್ಥಾನ ಕೈ ತಪ್ಪಿದರೆ ಬಿಎಸ್‍ವೈ ಪಾಲಿಗೆ ವಿರೋಧ ಪಕ್ಷ ನಾಯಕ ಸ್ಥಾನವಷ್ಟೇ ಉಳಿಯುತ್ತದೆ. ಆಪರೇಷನ್ ಕಮಲ ವರ್ಕೌಟ್ ಆಗಬೇಕಾದರೆ ಕಾಂಗ್ರೆಸ್-ಜೆಡಿಎಸ್‍ನ 15 ಶಾಸಕರು ರಾಜೀನಾಮೆ ಕೊಡಲೇ ಬೇಕು. ಆಗ ವಿಧಾನಸಭೆ ಬಲಾಬಲ 209ಕ್ಕೆ ಕುಸಿಯುತ್ತೆ, ಸಹಜವಾಗಿಯೇ ಬಿಜೆಪಿ ಅಧಿಕಾರ ಹಿಡಿಯಬಹುದು. ಆದರೆ ಆ 15 ಶಾಸಕರು ಬಿಜೆಪಿಗೆ ಸಿಗುತ್ತಿಲ್ಲ. ಹೀಗಾಗಿ ಕಷ್ಟವಾಗುತ್ತದೆ ಎಂದು ಆಪರೇಷನ್ ಆಪರೇಟಿಂಗ್ ಸ್ಟಾರ್ಸ್ ಹೇಳುತ್ತಿದ್ದಾರೆ.

    ಒಟ್ಟಿನಲ್ಲಿ ಮತ್ತೆ ಸಿಎಂ ಆಗಲು ನಡೆಸುತ್ತಿರುವ ಆಪರೇಷನ್ ಕಮಲ ಸದ್ಯಕ್ಕೆ ಫಲಕೊಡುವುದು ಅನುಮಾನವಾಗಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ರಾಜಕೀಯ ಭವಿಷ್ಯ ಮಂಕು ಕವಿತಿದೆಯಾ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ಆರಂಭವಾಗಿದೆ.