ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ 3,064 ಕಾನ್ಸ್‌ಟೇಬಲ್ ಹುದ್ದೆ ನೇಮಕಾತಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ರಾಜ್ಯಸರ್ಕಾರವು 2,996 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR – DAR) ಹುದ್ದೆಗೆ ಅಧಿಸೂಚನೆ ಹೊರಡಿಸಿದೆ. ಇದೇ ಮೊದಲ ಬಾರಿಗೆ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್(Constable) ಹುದ್ದೆ ತೃತೀಯ ಲಿಂಗಿಗಳ ನೇಮಕಾತಿಗೆ ಸರ್ಕಾರ ಅಧಿಸೂಚನೆ (CAR- DAR) ಹೊರಡಿಸಿದ, 68 ತೃತೀಯ ಲಿಂಗಿಗಳ ನೇಮಕಾತಿಗೆ ಸರ್ಕಾರ ಆದೇಶಿಸಿದೆ.
ಆದರೆ ಹುದ್ದೆಗೆ ಅರ್ಜಿ ಹಾಕುವವರಿಗೆ ವಯಸ್ಸಿನ ಮಿತಿಯಿದ್ದು, 18 ವರ್ಷ ತುಂಬಿರಬೇಕು. SC-ST, OBC ಅಭ್ಯರ್ಥಿಗಳಿಗೆ 27 ವರ್ಷ ಹಾಗೂ ಸಾಮಾನ್ಯ ವರ್ಗಕ್ಕೆ 25 ವರ್ಷ ಮೀರಿರಬಾರದು. ಜೊತೆಗೆ ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಅಭ್ಯರ್ಥಿಗಳಿಗೆ 30 ವರ್ಷ ವಯೋಮಿತಿ ನಿಗದಿ ಮಾಡಿದೆ. ಇದನ್ನೂ ಓದಿ:ಗಣೇಶ ಮೆರವಣಿಗೆಯಲ್ಲಿ ಹಿಂದೂ ಕಾರ್ಯಕರ್ತರಿಂದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ
ತೃತೀಯ ಲಿಂಗಗಳಿಗೆ ಭಾರತ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧಿಸೂಚನೆ ಅನ್ವಯ ಕೇಂದ್ರ ಸರ್ಕಾರ ಹೊರಡಿಸಿರುವ ತೃತೀಯ ಲಿಂಗ ವ್ಯಕ್ತಿಗಳ ನಿಯಮ (ರಕ್ಷಣಾ ಹಕ್ಕುಗಳು) 2020 ಅನ್ವಯ ಪ್ರಮಾಣ ಪತ್ರ ಇರಬೇಕು. ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಂದ ಪ್ರಮಾಣ ಪತ್ರ ಪಡೆಯಬೇಕು. ಈ ಪ್ರಮಾಣ ಪತ್ರ ಇಲ್ಲದೆ ಹೋದರೆ ನೇಮಕಾತಿಗೆ ತೃತೀಯ ಲಿಂಗಿ ಮೀಸಲಾತಿ ಅನ್ವಯ ಆಗುವುದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಹೊನ್ನಾವರ ಮೀನುಗಾರರ ಮೇಲೆ ದೌರ್ಜನ್ಯ – ಜಿಲ್ಲಾಧಿಕಾರಿ, ಎಸ್ಪಿಗೆ ಸಮನ್ಸ್ ಜಾರಿ
Live Tv
[brid partner=56869869 player=32851 video=960834 autoplay=true]
ದಾವಣಗೆರೆ: ಮಠಗಳು ರಾಜಕೀಯ ಮಾಡಬಾರದು, ರಾಜಕೀಯ ಮಾಡಿಸಬೇಕು ಎಂದು ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೋಡಿ ಕನಕ ಗುರು ಪೀಠದಲ್ಲಿಂದು `ಮಠಗಳು ರಾಜಕೀಯ ಕೇಂದ್ರಗಳಾಗಿ ಪರಿಣಮಿಸಿವೆ’ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: FASTag ನಿಂದ ಹಣ ಕದಿಯುತ್ತಾರೆ – ಫೇಕ್ ವೀಡಿಯೋ ಶೇರ್ ಮಾಡಬೇಡಿ
ಮಠಗಳು ರಾಜಕೀಯ ಮಾಡಬಾರದು, ಮಾಡಿಸಬೇಕು. ಮಠಗಳಿಗೆ ಪಕ್ಷದ ವರಿಷ್ಠರು ಭೇಟಿ ನೀಡುವುದು ಅವರ ವೈಯಕ್ತಿಕ. ನಾವು ಮಠಕ್ಕೆ ಬರುವುದು ಬೇಡ ಎನ್ನಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪಠ್ಯಪುಸ್ತಕ ಗೊಂದಲ ಸರಿಪಡಿಸಿ: ರಾಜ್ಯದಲ್ಲಿ ಪಠ್ಯಪುಸ್ತಕ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ. ನಿಮ್ಮ ಉದ್ಧಟತನಗಳು ಕಾರ್ಯವೈಖರಿಗಳು ಹೀಗೇ ಮುಂದುವರಿದರೆ ಬಹಳ ಕಷ್ಟ ಅನುಭವಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಇಂದು ರಾತ್ರಿ 9:30 ರಿಂದ ಬೆಳಗ್ಗೆ 7 ಗಂಟೆ ವರೆಗೂ ನೇರಳೆ ಮಾರ್ಗದ ಮೆಟ್ರೋ ಸೇವೆ ಸ್ಥಗಿತ
ಶಿಕ್ಷಣ ಯಾವುದೇ ಜಾತಿಗೆ ಸೀಮಿತವಾಗಬಾರದು. ಕುವೆಂಪು, ಬಸವಣ್ಣ, ಕನಕದಾಸರು ಸೇರಿದಂತೆ ಹಲವು ಮಹನೀಯರ ಜೀವನದ ಸತ್ಯಾಂಶಗಳ ಚರಿತ್ರೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು. ಪಠ್ಯದಲ್ಲಿ ಕೆಲ ಅಂಶಗಳನ್ನು ಮುಚ್ಚಿಟ್ಟು, ಇಲ್ಲಸಲ್ಲದ ಅಂಶಗಳನ್ನು ಸೇರಿಸಿ ಜನರಿಗೆ ತೋರಿಸುವುದು ಅಕ್ಷಮ್ಯ ಅಪರಾಧ. ಸರಿಪಡಿಸದೇ ಇದ್ದರೆ ಬೃಹತ್ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ವಿಚಾರವಾಗಿ ಮಾತನಾಡಿದ ಶ್ರೀಗಳು, ಎಲ್ಲ ಸಂಶೋಧನೆ ನಡೆದು ಸರ್ಕಾರಕ್ಕೆ ಇನ್ನು ಕೆಲವೇ ದಿನಗಳಲ್ಲಿ ವರದಿ ಬರಲಿದೆ. ನಮ್ಮ ಹೋರಾಟ ಶುರುವಾದಾಗಿನಿಂದ ಒಂದು ದಿನವೂ ನಾವು ನೆಮ್ಮದಿಯಿಂದ ಇಲ್ಲ. ಪ್ರತಿದಿನ ಕೆಲಸ ಮಾಡುತ್ತಿದ್ದೇವೆ. ಬುಡಕಟ್ಟು ಸಂಶೋಧನಾ ಕೇಂದ್ರದಿಂದ ಸಮಗ್ರವಾದ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಒಂದು ತಿಂಗಳಲ್ಲಿ ಸಂಶೋಧನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ: ಬಿಜೆಪಿ ಸರ್ಕಾರ ಬಂದ ಮೇಲೆ ಯಾವುದೇ ಸಮುದಾಯವು ನಿರ್ಲಕ್ಷ್ಯಕ್ಕೆ ಒಳಗಾಗಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಕ್ರೈಸ್ತ ಸಮುದಾಯ ಸುರಕ್ಷಿತವಾಗಿದೆ ಎಂದು ಕ್ರೈಸ್ತ ಸಮುದಾಯದ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಂತಕುಮಾರ ಕೆನಡಿ ತಿಳಿಸಿದ್ದಾರೆ.
ಮತಾಂತರ ನಿಷೇಧ ಕಾಯ್ದೆಯನ್ನು ಕ್ರೈಸ್ತ ಸಮುದಾಯ ವಿರೋಧಿಸಿಲ್ಲ. ಆದರೆ ಕಾಯ್ದೆ ಜಾರಿಗೆ ತರುವ ಮೊದಲು ಚರ್ಚೆಗೆ ಒಳಪಡಿಸಬೇಕಿತ್ತು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ ಅಷ್ಟೇ. ಮತಾಂತರ ನಿಷೇಧ ಕಾಯ್ದೆಯಲ್ಲಿ ಸರ್ಕಾರದ ನಿರ್ಧಾರ ಏನಿದೆಯೋ, ಅದನ್ನು ಗೌರವಿಸಬೇಕಾಗುತ್ತದೆ. ಅಲ್ಲಲ್ಲಿ ಸಮುದಾಯದ ಪರವಾಗಿ ಸಣ್ಣಪುಟ್ಟ ವ್ಯತ್ಯಾಸ ಇರಬಹುದು. ಅದನ್ನೇ ವಿರೋಧ ಎನ್ನುವುದು ಸರಿಯಲ್ಲ. ವಿರೋಧವನ್ನು ಯಾರು ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನ ವಿಷಯಕ್ಕೆ ಬಂದು ಡಿಕೆಶಿ ಶೇಪ್ ಔಟ್ ಮಾಡಿಕೊಂಡಿದ್ದಾರೆ: ಅಶ್ವಥ್ ನಾರಾಯಣ
ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಮಾಸ್ಟರ್ ಮೈಂಡ್ ಆರೋಪಿ ದಿವ್ಯಾ ಹಾಗರಗಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೊಂದಿಗೆ ಕಾಣಿಸಿಕೊಂಡ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಪ್ರತಿ ಪಕ್ಷದ ನಾಯಕರು ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದು, ಟ್ವೀಟ್‌ನಲ್ಲೇ ತಕ್ಕ ಉತ್ತರ ಕೊಟ್ಟಿದ್ದಾರೆ. ದಿವ್ಯಾ ಹಾಗರಗಿ ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಸುಧಾಕರ್ ಇನ್ನೂ ಅನೇಕ ಬಿಜೆಪಿ ಮುಖಂಡರೊಂದಿಗೆ ಕ್ಲಿಕ್ಕಿಸಿದ ಫೋಟೋಗಳನ್ನು ಟ್ವೀಟ್ ಮಾಡಿದ್ದು, ಇದಕ್ಕೇನು ಹೇಳುವರಿ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದಿವ್ಯಾ ಹಾಗರಗಿ ಭೇಟಿಯಾಗಿದ್ದು ನಿಜ, ನನಗೂ ನೋಟಿಸ್ ಕೊಡಲಿ: ಡಿ.ಕೆ ಶಿವಕುಮಾರ್
ಗೃಹ ಸಚಿವರ ರಾಜೀನಾಮೆಗೆ ಆಗ್ರಹ: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ ರಾಜಭವನ ಕದ ತಟ್ಟಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ರಾಜೀನಾಮೆಗೆ ಎಎಪಿ ಆಗ್ರಹಿಸಿದ್ದು, ಎಎಪಿ ನಿಯೋಗ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಎಎಪಿ ನಾಯಕ ಭಾಸ್ಕರ್ ರಾವ್ ನೇತೃತ್ವದಲ್ಲಿ ರಾಜಭವನಕ್ಕೆ ತೆರಳಿದ್ದ ಎಎಪಿ ನಿಯೋಗ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ಮಾಡಿತ್ತು. ಪಿಎಸ್‌ಐ ಪರೀಕ್ಷಾ ಅಕ್ರಮಕ್ಕೆ ಗೃಹ ಸಚಿವರ ವೈಫಲ್ಯ ಕಾರಣ ಎಂದು ಆರೋಪಿಸಿದ್ದು, ಸಂಪುಟದಿಂದ ಗೃಹ ಸಚಿವ ಆರಗ ಜ್ಞಾನೇಂದ್ರರನ್ನು ವಜಾ ಮಾಡಲು ಆಪ್ ಆಗ್ರಹಿಸಿದೆ. ಇದನ್ನೂ ಓದಿ: PSI ನೇಮಕಾತಿಯಲ್ಲಿ ಅಕ್ರಮː ಪ್ರಮುಖ ಆರೋಪಿ ದಿವ್ಯಾ ಹಾಗರಗಿ – ಡಿಕೆಶಿ ಜೊತೆಗಿರುವ ಫೋಟೋ ವೈರಲ್
ಪಿಎಸ್‌ಐ ನೇಮಕ ಹಗರಣ ಕಾಂಗ್ರೆಸ್ ಕೃಪಾಪೋಷಿತರ ನಾಟಕ ಮಂಡಳಿಯ ಟೂಲ್ ಕಿಟ್ ಎಂದು ಸಾರಿ ಸಾರಿ ಹೇಳುವುದಕ್ಕೆ ಸಾಕ್ಷ್ಯ ಇಲ್ಲಿದೆ.
ಈ ಪ್ರಕರಣಕ್ಕೆ ಸಂಭಂದಿಸಿದಂತೆ ಆಮ್‌ಆದ್ಮಿ ಪಕ್ಷದ ನಾಯಕ ಭಾಸ್ಕರ್ ರಾವ್ ಸಹ ಕಿಡಿ ಕಾರಿದ್ದು, ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಅಲ್ಲದೇ, ಇಲ್ಲಿವರೆಗೂ ಮಾಸ್ಟರ್ ಮೈಂಡ್ ಆರೋಪಿ ದಿವ್ಯಾ ಹಾಗರಗಿ ಅವರು ಏಕೆ ಬಂಧನವಾಗಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಈ ಹಿಂದೆ ಪರೀಕ್ಷೆಯನ್ನು ನಮ್ಮ ಸಹಪಾಠಿಗಳು ಅತ್ಯಂತ ಪಾರದರ್ಶಕತೆಯಿಂದ ಮಾಡ್ತಿದ್ರು. ಈಗ ಪಾರದರ್ಶಕತೆ ಕಳೆದುಕೊಂಡಿದೆ ಅಂತಾ ಆರೋಪಿಸಿದ್ರು. ಸರ್ಕಾರ ನಂಬಿದ ಯುವಕರು ಮೋಸ ಹೋಗಿದ್ದಾರೆ. ತನಿಖೆ ಪಾಡಿಗೆ ತನಿಖೆ ನಡೆಯಲಿ. ಆದರೆ ಅಲ್ಲಿವರೆಗೂ ಕಾಯದೇ ಮರು ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ತಾಳಿ ಭಾಗ್ಯ, ಅನ್ನ ಭಾಗ್ಯದಂತಹ ದರಿದ್ರ ಭಾಗ್ಯಗಳು ಬೇಡ: ಸಿಎಂ ಮುಂದೆ ಯತ್ನಾಳ್ ಕಿಡಿ
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ದೂರು ಬರುತ್ತಿದ್ದಂತೆಯೇ ತನಿಖೆ ಆರಂಭಿಸಿ, ಆರೋಪಿಯೊಬ್ಬರನ್ನೂ ಬಂಧಿಸಲಾಗಿದೆ.
ಪ್ರಕರಣ ತನಿಖೆಯ ಹಂತದಲ್ಲಿರುವಾಗ ಹಸ್ತಕ್ಷೇಪ ಮಾಡದೇ, ವಿಚಾರಣೆ ಪೂರ್ಣಗೊಂಡ ಬಳಿಕ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ಬದ್ಧರಾಗಿದ್ದೇವೆ. pic.twitter.com/ZApJ1aPNXB
— Dr. C.N. Ashwath Narayan (@drashwathcn) April 26, 2022
ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ತನಿಖೆ ಮುಗಿಯುವವರೆಗೂ ಕಾಯದೆ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಮಾಡಿಕೊಡಬೇಕು. ಪ್ರಕರಣದ ಆರೋಪಿ ದಿವ್ಯಾ ಹಾಗರಗಿ ಅಂತಿದ್ದಾರೆ. ಆದರೆ ಇನ್ನೂ ಅವರ ಬಂಧನ ಆಗಿಲ್ಲ. ಇದನ್ನೆಲ್ಲ ನೋಡ್ತಿದ್ರೆ ಈ ಪ್ರಕರಣದಲ್ಲಿ ಸರ್ಕಾರದ ಪ್ರಭಾವ ಇದೆ ಎಂಬ ಸಂಶಯ ಮೂಡ್ತಿದೆ ಎಂದು ಹೇಳಿದ್ದಾರೆ.
ಗೃಹ ಸಚಿವರಿಗೆ ಅನುಭವದ ಕೊರತೆ ಇದೆ. ಆಗಸ್ಟ್ ನಿಂದ ಇಲ್ಲಿವರೆಗೂ ಮೆಚ್ಯೂರ್ಡ್ ಆದ ಸ್ಟೆಪ್‌ಗಳನ್ನು ತೆಗೆದುಕೊಂಡಿಲ್ಲ. ಇದರಿಂದ ಪೊಲೀಸ್ ಇಲಾಖೆಯ ನೈತಿಕತೆ ಕುಸಿದಿದೆ ಅಂತಾ ವಾಗ್ದಾಳಿ ನಡೆಸಿದ್ರು.
ಲಕ್ನೋ: ಉತ್ತರಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಇಲ್ಲಿನ ಗೌತಮಬುದ್ಧ ಜಿಲ್ಲೆಯೊಂದರಲ್ಲೇ ಒಟ್ಟು ಸೋಂಕಿತರ ಶೇ.50 ರಷ್ಟು ಪ್ರಕರಣಗಳು ಪತ್ತೆಯಾಗಿದೆ. ಉತ್ತರಪ್ರದೇಶದ ಒಟ್ಟು 980 ಪ್ರಕರಣಗಳ ಪೈಕಿ 529 ಪ್ರಕರಣ ಜಿಲ್ಲೆಯೊಂದರಲ್ಲೇ ಇದೆ ಎಂದು ಹೇಳಲಾಗಿದೆ.
ಕಳೆದ 24 ಗಂಟೆಯಲ್ಲಿ ಇದೊಂದೇ ಜಿಲ್ಲೆಯಲ್ಲಿ 103 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ 529ಕ್ಕೆ ಏರಿಕೆಯಾಗಿದೆ. ಕೆಲ ದಿನಗಳಿಂದ ಈಚೆಗೆ ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ಕೋವಿಡ್ ಗಣನೀಯವಾಗಿ ಏರಿಕೆಯಾಗಿದೆ. ಆದರೂ ಸರ್ಕಾರ ಹಾಗೂ ಆರೋಗ್ಯಾಧಿಕಾರಿಗಳು ಯಾವುದೇ ಭಯವಿಲ್ಲ ಎನ್ನುತ್ತಿದ್ದಾರೆ. ಲಸಿಕೆ ಪಡೆಯದಿರುವುದು ಹಾಗೂ ಜನರು ಕೋವಿಡ್ ನಿಯಮಗಳನ್ನು ಉಲ್ಲಂಘಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ, ನೀರವ್ ಮೋದಿ ಬಗ್ಗೆ ಬೋರಿಸ್ ಹೇಳಿದ್ದೇನು?
ಉತ್ತರಪ್ರದೇಶದಲ್ಲಿ ಈಗಾಗಲೇ ದೆಹಲಿ ಮಾದರಿಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ವಿಧಿಸಲಾಗಿದೆ. 7 ಗೌತಮಬುದ್ಧನಗರ, ಗಾಝಿಯಾಬಾದ್, ಹಾಂಪುರ್, ಮೀರತ್, ಬುಲಂದ್‌ಶಹರ್ ಹಾಗೂ ಭಗ್‌ಪತ್, ಲಕ್ನೋ, ಗುರುಗ್ರಾಮ್, ಜ್ಹಗ್ಗರ್, ಸಾನಿಪತ್ ಹಾಗೂ ಫರಿದಾಬಾದ್‌ಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ನಿಮಯ ಉಲ್ಲಂಘಿಸಿದ ಅನೇಕ ಮಂದಿಗೆ ಈಗಾಗಲೇ ದಂಡ ವಿಧಿಸಲಾಗಿದೆ. 2ನೇ ಬಾರಿಗೆ ನಿಯಮ ಉಲ್ಲಂಘಿಸಿದವರಿಗೆ ಐಪಿಸಿ 188 ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನನ್ನ ಕೈಯಲ್ಲಿ ಭಾರತದ ಲಸಿಕೆಯಿದೆ: ಬ್ರಿಟನ್ ಪ್ರಧಾನಿ ಬೋರಿಸ್
ಬಳ್ಳಾರಿ: ರಾಜ್ಯದ ಗೃಹ ಸಚಿವರು ಶಾಂತಿ ಸಮಾಧಾನದಿಂದ ಇದ್ದರೆ ಆಗುವುದಿಲ್ಲ. ಇಂತಹ ಘಟನೆಗಳನ್ನು ಹತ್ತಿಕ್ಕಬೇಕಾದರೆ, ಅವರೂ ಚತ್ರಿ ಆಗಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುಟುಕಿದರು.
ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅಧಿಕಾರದಲ್ಲಿ ಇದ್ದಿದ್ದರೆ ರಾಜ್ಯದಲ್ಲೂ ಪಾಕಿಸ್ತಾನ ಇರುತ್ತಿತ್ತು. ಇಂದು ಮತಾಂಧರಿಗೆ ಭಯ ಹುಟ್ಟಿಸುವ ಕೆಲಸವನ್ನು ಸರ್ಕಾರ ಹಾಗೂ ಗೃಹ ಸಚಿವರು ಮಾಡಬೇಕು. ಅದು ಬಿಟ್ಟು ಸಮಾಧಾನ ಹೇಳುವುದರಲ್ಲಿ ಪ್ರಯೋಜನವಿಲ್ಲ ಎಂದು ಆಡಳಿತ ಪಕ್ಷದ ವಿರುದ್ಧವೇ ಕಿಡಿಕಾರಿದರು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯನ್ನು ಕೆಜಿ ಹಳ್ಳಿ, ಡಿಜೆಹಳ್ಳಿ ಘಟನೆಗೆ ಹೋಲಿಸಿದ ಗೃಹಸಚಿವ
ಕೆಲ ಮುಸ್ಲಿಮರಿಗೆ ಹಿಜಬ್, ದೇಶ ವಿರೋಧಿ ಚಟುವಟಿಕೆಗಳು ಬೇಕಾಗಿದೆಯೇ ಹೊರತು ಸಾಮರಸ್ಯ ಬೇಕಿಲ್ಲ. ಇವರನ್ನು ಹೀಗೆ ಬಿಟ್ಟರೇ ದೇಶಕ್ಕೆ ಮಾರಕವಾಗುತ್ತಾರೆ. ಕೆಜಿ ಹಳ್ಳಿ, ಡಿಜೆಹಳ್ಳಿ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಂಡಿದ್ದರೆ ಮತ್ತೆ ಇಂತಹ ಘಟನೆ ಮರುಕಳಿಸುತ್ತಿರಲಿಲ್ಲ ಎಂದರು.
ಉತ್ತರ ಪ್ರದೇಶದಲ್ಲಿ ರಾಮನವಮಿ ರ‍್ಯಾಲಿ ವೇಳೆ ಒಂದು ಗಲಭೆಯೂ ನಡೆದಿಲ್ಲ. ಇಲ್ಲಿನ ಘಟನೆ ನೋಡಿದರೆ, ಇದು ಬಿಜೆಪಿ ಹೆಸರು ಕೆಡಿಸಲು ಮಾಡಿರುವ ದೊಡ್ಡ ಷಡ್ಯಂತ್ರವೆಂಬುದು ಅರ್ಥವಾಗುತ್ತದೆ. ಇದಕ್ಕಾಗಿ ಸಂಬಂಧಪಟ್ಟವರಿಗೆ ವಿದೇಶಗಳಿಂದ ಹಣ ಹರಿದು ಬರುತ್ತಿದೆ. ಆದರೂ ನಮ್ಮಲ್ಲಿರುವ ಡೋಂಗಿ ಜಾತ್ಯಾತೀತರಿಗೆ ದೇಶದ ಬದಲಾಗಿ ಮುಸ್ಲಿಮರ ವೋಟು ಬೇಕಾಗಿದೆ ಎಂದು ಕುಟುಕಿದರು. ಇದನ್ನೂ ಓದಿ: ಪೊಲೀಸ್ ವಾಹನಗಳೇ ಟಾರ್ಗೆಟ್ – ದಿಡ್ಡಿ ಹನುಮಂತ ದೇಗುಲಕ್ಕೂ ಕಲ್ಲೇಟು
ಶಾಂತಿಮಂತ್ರದಿಂದ ಪ್ರಯೋಜನವಿಲ್ಲ: ರಾಜ್ಯದಲ್ಲಿ ಪದೇ ಪದೇ ಇಂಥ ಘಟನೆ ಆಗ್ತಿದೆ. ಇಂತಹ ಹೊತ್ತಿನಲ್ಲಿ ಸರ್ಕಾರ ಶಾಂತಿ ಮಂತ್ರ ಹೇಳ್ತಾ ಕೂತ್ರೆ ಆಗಲ್ಲ. ಕ್ರಮ ತಗೋತೀವಿ – ತಗೋತಿವಿ, ತೀವ್ರವಾಗಿ ಖಂಡಿಸ್ತೀವಿ ಅಂದ್ರೆ ಏನೂ ಆಗಲ್ಲ. ಸರ್ಕಾರದಿಂದ ಇಂತಹವರ ಮೇಲೆ ಕಠಿಣ ಕ್ರಮ ಆಗುತ್ತಿಲ್ಲ. ಏಕೆಂದರೆ ನಮ್ಮ ಸರ್ಕಾರ ಪೊಲೀಸರಿಗೂ ಫ್ರೀ ಹ್ಯಾಂಡ್ ಕೊಡ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಪೊಲೀಸ್ ವಾಹನಗಳೇ ಟಾರ್ಗೆಟ್ – ದಿಡ್ಡಿ ಹನುಮಂತ ದೇಗುಲಕ್ಕೂ ಕಲ್ಲೇಟು
ನಕಲಿ ಖಾತೆಗಳ ಹಾವಳಿ ನಿಲ್ಲಲಿ: ವಿವಾದಿತ ಪೋಸ್ಟ್ ಹಾಕಿದವನ ವಿರುದ್ಧ ಕ್ರಮ ಆಗಬೇಕು. ಎಷ್ಟೋ ಜನ ನಕಲೀ ಖಾತೆ ಮೂಲಕ ಶ್ರೀರಾಮನ ಬಗ್ಗೆ, ಪ್ರಧಾನಿ ಬಗ್ಗೆ ಹಗುರವಾದ ಹೇಳಿಕೆಗಳನ್ನು ಪೋಸ್ಟ್ ಮಾಡುತ್ತಾರೆ. ಹಾಗೆಯೇ ಹಿಂದೂಗಳ ಹೆಸರಿನಲ್ಲೂ ಖಾತೆ ತೆರೆದು ಪೋಸ್ಟ್ ಹಾಕುತ್ತಿದ್ದಾರೆ. ಅಲ್ಲಿ ಪ್ರಸಾದ್ ಅನ್ನೋ ಹೆಸರಿನಲ್ಲಿ ಖಾತೆ ಇದ್ದರೆ, ಪೋಸ್ಟ್ ಹಾಕೋನು ಮೆಹಬೂಬ್ ಆಗಿರ್ತಾನೆ. ಈ ಎಲ್ಲದರ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಕಲಬುರಗಿ: ಹಿಜಬ್ ವಿಚಾರದಲ್ಲಿ 6 ವಿದ್ಯಾರ್ಥಿನಿಯರು ಉದ್ದೇಶಪೂರ್ವಕವಾಗಿ ವಿವಾದ ಹುಟ್ಟುಹಾಕಿದ್ದಾರೆ. ಧರ್ಮ ಸಂಘರ್ಷವೂ 6 ಜನರ ಪಾಪದ ಕೂಸು. ಈ ವಿದ್ಯಾರ್ಥಿಗಳ ಮೆದುಳಿಗೆ ಮಾನಸಿಕ ಚಿಕಿತ್ಸೆ ಆಗಬೇಕಿದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಕುಟುಕಿದ್ದಾರೆ.
ಹಿಜಬ್ ಧರಿಸಿ ಪರೀಕ್ಷೆಗೆ ಅವಕಾಶ ನೀಡುವಂತೆ 6 ವಿದ್ಯಾರ್ಥಿಗಳು ಮನವಿ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯಿಸಿದ್ದು, ಇವರು ಸಂವಿಧಾನಕ್ಕೆ ಬೆಲೆ ಕೊಟ್ಟಿಲ್ಲ. ಶಾಲಾ ಮಂಡಳಿ, ಹೈಕೋರ್ಟ್ ಆದೇಶಗಳನ್ನು ಧಿಕ್ಕರಿಸಿ ವಿದ್ಯಾರ್ಥಿನಿಯರು ಹೋರಾಟ ಮಾಡಿದ್ದಾರೆ. ಈಗ ಹಿಜಬ್ ವಿವಾದ ಎದ್ದ ಮೇಲೆ ಕರ್ನಾಟಕದಲ್ಲಿ ನಡೆದ ಧರ್ಮಸಂಘರ್ಷಕ್ಕೆ ನಾವು ಕಾರಣವಲ್ಲ ಎನ್ನುತ್ತಾರೆ. ಹಾಗಾದರೆ, ಮತ್ತಾರು ಕಾರಣ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ನೀವು ಮತ್ತೆ ಬಾಯಿತೆಗೆದರೆ ಜನ ನಿಮಗೆ ಉಗೀತಾರೆ: ಮುತಾಲಿಕ್
ಇವರ ಹಠದಿಂದಲೇ ರಾಜ್ಯದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಹಲಾಲ್, ಆಜಾನ್ ಮತ್ತು ಮುಸ್ಲಿಂ ವ್ಯಾಪಾರಿಗಳ ಮೇಲಿನ ನಿರ್ಬಂಧಕ್ಕೂ ಈ ವಿದ್ಯಾರ್ಥಿಗಳೇ ಮೂಲ ಕಾರಣ. ಈ ವಿವಾದಗಳೆಲ್ಲವೂ ಇವರ ಪಾಪದ ಕೂಸುಗಳು. ಇವರ ಮೆದುಳಿಗೆ ಚಿಕಿತ್ಸೆ ಆಗಬೇಕಿದೆ. ಏಕೆಂದರೆ ಇವರ ಮನಸ್ಥಿತಿ ಭಾರತ ಸಂವಿಧಾನವನ್ನು ಒಪ್ಪುತ್ತಿಲ್ಲ. ಇವರಿಂದಲೇ ರಾಜ್ಯದಲ್ಲಿ ಅಶಾಂತಿ ಉಂಟಾಗಿದೆ. ಹಿಂದೂಗಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಪಾರ ಪ್ರಮಾಣದಲ್ಲಿ ಗೋಮಾಂಸ ರಫ್ತಾಗುತ್ತಿದ್ದರೂ ಪ್ರಧಾನಿ ಮೋದಿ ಮೌನವೇಕೆ? ಪ್ರಮೋದ್ ಮುತಾಲಿಕ್
ಈ ವಿದ್ಯಾರ್ಥಿಗಳು ಭಯೋತ್ಪಾದಕರು, ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳ ಸೂಚನೆಗಳ ಪ್ರಕಾರವೇ ಈ ದೇಶ, ರಾಜ್ಯದಲ್ಲಿ ಹೋರಾಟ ಮಾಡಿದ್ದಾರೆ. ಒಂದು ವೇಳೆ ಸರ್ಕಾರ ಹೈಕೋರ್ಟ್ ಆದೇಶ ತಳ್ಳಿಹಾಕಿ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟರೆ, ಅದು ಮೂರ್ಖತನದ ಪರಮಾವಧಿ ಆಗುತ್ತದೆ. ನ್ಯಾಯಾಂಗ ನಿಂದನೆಯೂ ಆಗುತ್ತದೆ. ಹಾಗಾಗಿ ಸರ್ಕಾರ ಹೈಕೋರ್ಟ್ ಆದೇಶವನ್ನು ಯಥಾವತ್ತಾಗಿ ಪಾಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ದೇಶದಲ್ಲಿ ಭ್ರಷ್ಟಾಚಾರದ ಮೆಟ್ಟಿಲುಗಳನ್ನು ಹಾಕಿದ್ದೇ ಕಾಂಗ್ರೆಸ್ ಪಕ್ಷ. ಅದನ್ನು ಎಲ್ಲ ಪಕ್ಷಗಳು ಹತ್ತುತ್ತಿವೆ. ದೇಶ ಅಭಿವೃದ್ಧಿ ಆಗಬೇಕಾದರೆ, ಇದಕ್ಕೆ ಕಡಿವಾಣ ಹಾಕಲೇಬೇಕು. ಈಶ್ವರಪ್ಪ ಅವರ ವಿಚಾರದಲ್ಲಿ ಸಂಪೂರ್ಣ ತನಿಖೆಯಾಗಬೇಕು. ಹಾಗೆಯೇ ಸಂತೋಷ್ ಪಾಟೀಲ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೋ ಇಲ್ಲವೋ ಎನ್ನುವ ಬಗ್ಗೆಯೂ ತನಿಖೆಯಾಗಬೇಕು. ಸತ್ಯಾಸತ್ಯತೆ ಹೊರಬರಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರು: ಹಲಾಲ್ ಕಟ್, ಜಟ್ಕಾ ಕಟ್ ಬಿಟ್ಟುಬಿಡಿ. ಬೆಲೆ ಏರಿಕೆ ವಿರುದ್ಧ ಹೋರಾಡಿ. ನಾನೂ ಕೇಸರಿ ಶಾಲು ಧರಿಸಿ ಹೋರಾಟಕ್ಕೆ ಬರುತ್ತೇನೆ. ಬೆಲೆ ಏರಿಕೆ ವಿರುದ್ಧ ಹೋರಾಟಕ್ಕೆ ರೆಡಿ ಇದ್ದೀರಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಬೆಂಗಳೂರಿನ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಸ್ಲೀಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್ ಕಟ್, ಹಿಜಬ್ ವಿವಾದ ಸೇರಿದಂತೆ ಭಜರಂಗದಳ, ಹಿಂದೂಪರ ಸಂಘಟನೆಗಳ ವಿರುದ್ಧ ಟೀಕಾಪ್ರಹಾರ ಮುಂದುವರೆಸಿದರು.
ಎಲ್ಲಿ ಇತ್ತು ಜಾತಿ ವ್ಯವಸ್ಥೆ? ಎಲ್ಲಿ ಇತ್ತು ಹಿಂದೂ ದೇಶ? ಎಲ್ಲವೂ ನಮ್ಮನಮ್ಮ ಅನುಕೂಲಕ್ಕೆ ಮಾಡಿಕೊಂಡದ್ದು. ಧರ್ಮ ವಿಭಜನೆ ಮಾಡಿ ಮಜಾ ತಗೊಳ್ಳುವವರು, ಉರಿಯುವ ಮನೆಯಲ್ಲಿ ಗಳ ಇರಿಯೋ ಕಾಯಕ ಮಾಡ್ತಿದ್ದೀರಿ. ಬಿಜೆಪಿ ಹಿಂದೂ ಧರ್ಮದಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡಿಲ್ಲ, ಅವರಿಗೆ ಬೇಕಾದಗ ಮಾತ್ರ ಒಟ್ಟಿಗೆ ತೆಗೆದುಕೊಳ್ಳುತ್ತಾರೆ. ಇದನ್ನೆಲ್ಲಾ ಇಲ್ಲಿಗೇ ನಿಲ್ಲಿಸಿ, ಬಡವರನ್ನ ರಕ್ಷಿಸಿ ಎಂದು ಕರೆನೀಡಿದ್ದಾರೆ. ಇದನ್ನೂ ಓದಿ: ಗಂಡಸ್ತನ ಪದ ಬಳಕೆಗೆ ಹೆಚ್.ಡಿ.ಕುಮಾರಸ್ವಾಮಿ ವಿಷಾದ
ಬಿಜೆಪಿ ಜನರನ್ನು ನಿರ್ಗತಿಕರನ್ನಾಗಿ ಮಾಡುತ್ತಿದೆ. ಇದರಲ್ಲಿ ಕಾಂಗ್ರೆಸ್ ಪಾಲೂ ಇದೆ ಎರಡು ರಾಷ್ಟ್ರೀಯ ಪಕ್ಷಗಳು 150ರ ರೋಡ್ ಮ್ಯಾಪ್ ಪ್ಲಾನ್ ಮಾಡಿಕೊಂಡು ಮನೆ ಮನೆಗೆ ಬೆಂಕಿ ಹಚ್ಚಲು ಹೊರಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಬಿಜೆಪಿಯ ಬಿ-ಟೀಮ್ ಎಂದು ಸಾರಿದ್ದ ಸಿದ್ದರಾಮ್ಯಯ ಅವರೇ ಈಗೇನು ದೊಡ್ಡ ಸಾಧನೆ ಮಾಡಿದ್ದೀರಾ? ಹಿಜಬ್ ಹೆಸರು ಹೇಳ್ಬೇಡಿ ಹಿಂದೂ ಓಟ್ ಹೋಗುತ್ತೆ ಎಂದು ನಿಮ್ಮ ಅಧ್ಯಕ್ಷರೇ ಹೇಳಿದ್ದಾರೆ. ಹಿಂದೂ ಮುಸ್ಲಿಂ ನವರು ದಡ್ಡರಲ್ಲ. ವಿಶ್ವ ಹಿಂದೂ ಪರಿಷತ್‌ನವರು ಬೆಂಕಿ ಹಚ್ಚಲು ಬರುತ್ತಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ಬಹಳ ಸಲ ಗಂಡಸ್ತತನ ಪ್ರೂವ್ ಮಾಡಿದ್ದಾರೆ: ಸಿ.ಟಿ.ರವಿ
ಮೌನಿ ಬಾಬಾ ಬೊಮ್ಮಾಯಿ: ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಮೌನದ ಬಗ್ಗೆ ಟೀಕಿಸಿರುವ ಹೆಚ್.ಡಿ.ಕುಮಾರಸ್ವಾಮಿ, ಇಷ್ಟೆಲ್ಲಾ ವಿವಾದ ಇದ್ದರೂ ಸಿಎಂ ಬಸವರಾಜ ಬೊಮ್ಮಾಯಿ ಮೌನಿ ಬಾಬಾ ಆಗಿದ್ದಾರೆ. ಮನ್ ಮೋಹನ್ ಸಿಂಗ್ ಮೌನಿ ಅನ್ನುತಿದ್ದರು ಈಗ ಬೊಮ್ಮಾಯಿ ಮೌನವಾಗಿದ್ದಾರೆ. ಸರ್ಕಾರ ಸ್ವತಂತ್ರವಾಗಿ ನಡೆಯುತ್ತಿಲ್ಲ ರಿಮೋಟ್ ಕಂಟ್ರೋಲ್ ನಲ್ಲಿ ನಡೆಯುತ್ತಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ರಾಜ್ಯದಲ್ಲಿ ಸೌಹಾರ್ದತೆಗೆ ಧಕ್ಕೆ ಬಂದಾಗ ಮೌನವಾಗಿದ್ದವರು ಯಾರು? ಅಧಿವೇಶನದಲ್ಲಿ ಸುಮ್ಮನೆ ಕೂತವರು ಯಾರು? ಮತಾಂತರ ಬಿಲ್ ಬಗ್ಗೆ ಬೆಳಗಾವಿಯಲ್ಲಿ ಎದುರಿಸಲಾಗದೇ ಪಲಾಯನ ಮಾಡಿದ್ದು ಯಾಕೆ? ಗೋಹತ್ಯೆ ಬಿಲ್ ಬಂದಾಗ ಸದನದಲ್ಲಿ ಗೊಂದಲ ಸೃಷ್ಟಿಸಿದ್ದು ಯಾರು? ಗೋಹತ್ಯೆ ನಿಷೇಧ ಕಾಯ್ದೆ ವಿರುದ್ದ ಮೊದಲು ರಾಷ್ಟ್ರಪತಿಗೆ ದೂರು ಕೊಟ್ಟಿದ್ದು ದೇವೇಗೌಡರು. ನಮ್ಮ ಪಕ್ಷವೇ ಮೊದಲು ಅದರ ಬಗ್ಗೆ ಧ್ವನಿ ಎತ್ತಿದ್ದು. ನಾವು ಅದರ ವಿರುದ್ಧ ಮತ ಚಲಾಯಿಸಲು ತಯಾರಿದ್ದೆವು. ಅವರ ತಪ್ಪು ಇಟ್ಕೊಂಡು ನಮ್ಮ ಬಗ್ಗೆ ಮತನಾಡಲು ಕಾಂಗ್ರೆಸ್‌ಗೆ ನೈತಿಕತೆ ಏನಿದೆ ಎಂದು ಹೇಳಿದರು. ಇದನ್ನೂ ಓದಿ: ಗಂಡಸ್ತನ ಯಾವ ಯಾವುದಕ್ಕೆ ಬಳಸಬೇಕು ಎಂದು ಕುಮಾರಸ್ವಾಮಿಗೆ ಗೊತ್ತಿದೆ: ಈಶ್ವರಪ್ಪ
ರಾಜ್ಯದಲ್ಲಿ ಬೆಂಕಿಹಚ್ಚಿದ್ದು ಕಾಂಗ್ರೆಸ್
ರಾಹುಲ್‌ಗಾಂಧಿ ಬಂದಾಗ ಸಿದ್ದರಾಮಯ್ಯ, ಹಲಾಲ್ ಹಾಗೂ ಹಿಜಬ್ ವಿಚಾರದಲ್ಲಿ ನಾವು ಮಾತನ್ನಾಡಬೇಕಿತ್ತು ಎಂದು ಹೇಳುತ್ತಾರೆ. ಇಷ್ಟಾದ ಮೇಲೂ ಜೆಡಿಎಸ್ ಬಿಜೆಪಿಯ ಬಿ-ಟೀಮ್ ಎಂದು ಹೇಳುತ್ತಾರೆ. ನೀವೆ ರಾಜ್ಯದಲ್ಲಿ ಬೆಂಕಿ ಹಚ್ಚಿದ್ದು, ನೀವೇ ಬಿಜೆಪಿ ಸರ್ಕಾರ ನಿರ್ಮಾಣ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದು, ಇನ್ನಾದರೂ ಹಲಾಲ್, ಹಿಜಬ್ ವಿಚಾರದಲ್ಲಿ ಧೈರ್ಯವಾಗಿ ಎದುರಿಸಿ ಎಂದು ಕುಟುಕಿದರು.
ಅಲ್ಲದೆ, ಬಿಜೆಪಿಯವರು ನಾನು ದಾರ್ಶನಿಕ ಎನ್ನುತ್ತಾರೆ, ನಾನು ದಾರ್ಶನಿಕ ಎಂದು ಬೋರ್ಡ್ ಹಾಕಿಕೊಂಡಿಲ್ಲ, ನೀವೆ ಹಾಕಿಕೊಂಡಿರುವುದು.ನಾನು ಸಮಾಜ ಪರಿವರ್ತನಾಕಾರಕ ಅಲ್ಲ, ಇಂತ ವಿಷಯ ತೆಗೆದು ಮತಬ್ಯಾಂಕ್ ಮಾಡಲ್ಲ, ಬೆಂದ ಮನೆಯಲ್ಲಿ ಗಳ ಇಡುವ ಬುದ್ಧಿ ನನಗಿಲ್ಲ, ಕಂದಾಚಾರ ಇರುವ ನೀವು ನನಗೆ ಬುದ್ದಿ ಹೇಳುತ್ತೀರಾ? ಎಂದು ತಿರುಗೇಟು ನೀಡಿದ್ದಾರೆ.
ಯುಗಾದಿಗೆ ಇಷ್ಟು ಪ್ರಚಾರ ಯಾವತ್ತು ಸಿಕ್ಕಿರಲಿಲ್ಲ. ಒಳ್ಳೆಯ ಮನರಂಜನೆ ಸಿಕ್ಕಿತು. ಪ್ರತಿದಿನ ಯುಗಾದಿ ಮಾದರಿಯ ಸುದ್ದಿಗಳೇ ವಿಜ್ರಂಭಿಸಲಿದೆ. ಮುಂದಿನ ಚುನಾವಣೆ ವರೆಗೂ ಪರಿಸ್ಥಿತಿ ಹೀಗೆ ಇರಲಿದೆ.
ಬೆಂಗಳೂರು: 2023ರ ಚುನಾವಣೆ ಪೂರ್ವ ಸಿದ್ಧತೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 2 ದಿನಗಳ ಕಾಲ ಪ್ರವಾಸ ಕೈಗೊಂಡಿರುವ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲೇ ಅತಿ ದೊಡ್ಡ ಭ್ರಷ್ಟ ಸರ್ಕಾರ ಕರ್ನಾಟಕದಲ್ಲಿದೆ. ಬಿಜೆಪಿ ರಾಜ್ಯ ಸರ್ಕಾರ ಬಡವರಿಂದ ಹಣ ತೆಗೆದುಕೊಂಡು ಬೆರಳೆಣಿಕೆಯಷ್ಟು ಶ್ರೀಮಂತ ಉದ್ಯಮಿಗಳಿಗೆ ನೀಡುತ್ತಿದೆ. ಇದು ಶೇ.40ರಷ್ಟು ಕಮಿಷನ್ ಪಡೆಯುವ ಸರ್ಕಾರ. ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ವಿರುದ್ಧ ಸದಾ ಮಾತನಾಡುತ್ತಾರೆ. ಈಗ ಅವರು ಕರ್ನಾಟಕಕ್ಕೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಎಲ್ಲರೂ ನಗುತ್ತಾರೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಿಂದ ಆರಂಭಗೊಂಡ ಭಾರತ ದರ್ಶನ ಸುಶಾಸನ ಯಾತ್ರೆಗೆ ಅಮಿತ್ ಶಾ ಚಾಲನೆ
ಬಿಜೆಪಿ ನಿರುದ್ಯೋಗ ಮತ್ತು ಆರ್ಥಿಕತೆಯ ವಿಷಯಗಳ ಬಗ್ಗೆ ಬಿಜೆಪಿ ಮಾತನಾಡುವುದಿಲ್ಲ. ಹೀಗಾಗಿಯೇ ಕೋಮುವಾದದ ವಿಷಯವನ್ನು ಮುಂದಿಟ್ಟಿದೆ. ಬಿಜೆಪಿ ಸರ್ಕಾರದ ನೀತಿಗಳಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಂಪೂರ್ಣವಾಗಿ ನಷ್ಟಕ್ಕೆ ಒಳಗಾಗಿವೆ. ದೇಶದ ಆರ್ಥಿಕತೆ ಕುಸಿದಿದೆ. ಈ ನಡುವೆ ಹಣದುಬ್ಬರವೂ ಹೆಚ್ಚಾಗುತ್ತಿದ್ದು, ಉದ್ಯೋಗ ಕ್ಷೇತ್ರವನ್ನು ನಾಶಪಡಿಸುತ್ತಿದೆ. ಬಿಜೆಪಿ ಬಯಸಿದರೂ ಇನ್ನು ಜನರಿಗೆ ಉದ್ಯೋಗ ನೀಡಲು ಸಾಧ್ಯವಿಲ್ಲ. ಏಕೆಂದರೆ ಉದ್ಯೋಗ ಕ್ಷೇತ್ರಗಳನ್ನೇ ನಾಶಪಡಿಸಿದ್ದಾರೆ. ಆದರೆ, ಬಿಜೆಪಿ ವಿಭಜಿಸುವ ಕಾರ್ಯದಲ್ಲಿ ತೊಡಗಿದರೆ ಕಾಂಗ್ರೆಸ್ ಜೋಡಿಸುವ ಕಾರ್ಯದಲ್ಲಿ ತೊಡಗಿದೆ. ಅಂತಹ ಅವಕಾಶ ನಮಗೆ ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ಮೋದಿಗೆ ಸ್ಟಾಲಿನ್ ಮನವಿ
2019ರ ನಂತರ ಕಾಂಗ್ರೆಸ್ ಸರ್ಕಾರ ಪತನವಾದ ನಂತರ ಕರ್ನಾಟಕದಲ್ಲಿ ಪ್ರಕ್ಷುಬ್ಧತೆಯ ವಾತಾವರಣ ನಿರ್ಮಾಣವಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಒಂದಾಗಿ ಹೋರಾಟ ನಡೆಸುವ ಮೂಲಕ 2023ರಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಸ್ಪಷ್ಟ ಬಹುಮತ ಪಡೆಯುವ ಗುರಿ ಹೊಂದಬೇಕು ಎಂದು ಕರೆ ನೀಡಿದ್ದಾರೆ.
ಮೈಸೂರು: ಹಿಜಬ್ ವಿವಾದಕ್ಕೆ ಬಿಜೆಪಿಯೇ ಕಾರಣ. ಹಿಂದೂ ಹೆಣ್ಣು ಮಕ್ಕಳು ತಲೆಯ ಮೇಲೆ ಬಟ್ಟೆ ಹಾಕಿ ಕೊಳ್ಳಲ್ವಾ? ಹಾಗೆಯೇ ಮುಸ್ಲಿಂ ಹೆಣ್ಣು ಮಕ್ಕಳೂ ಒಂದು ದುಪ್ಪಟ್ಟ ಹಾಕಿ ಕೊಳ್ಳುತ್ತೇನೆ ಅಂದರೆ ಅದರಲ್ಲಿ ತಪ್ಪೇನಿದೆ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮೈಸೂರು ಜಿಲ್ಲೆಯ ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಮೂರು ದಿನಗಳಕಾಲ ನಡೆಯುತ್ತಿರುವ ಶ್ರೀ ಸಿದ್ದರಾಮೇಶ್ವರ ಚಿಕ್ಕಮ್ಮತಾಯಿ ಜಾತ್ರಾಮಹೋತ್ಸವಕ್ಕೆ ಭೇಟಿ ನೀಡಿದ್ದ ಅವರು ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಗ್ರಾಮದ ಜಾತ್ರೆಯಲ್ಲಿ ನೃತ್ಯ ಮಾಡಿ ರಂಜಿಸಿದ ಸಿದ್ದರಾಮಯ್ಯ
ಸ್ವಾಮೀಜಿಗಳೂ ತಲೆಯ ಮೇಲೆ ಬಟ್ಟೆ ಹಾಕುತ್ತಾರೆ ಅದನ್ನು ನೀವು ಪ್ರಶ್ನೆ ಮಾಡುತ್ತೀರಾ? ಇಂತಹ ವಿವಾದಗಳನ್ನು ಸೃಷ್ಟಿಸಿ ಅದನ್ನು ಅರಗಿಸಿ ಕೊಳ್ಳುತ್ತೇವೆ ಎಂದು ಬಿಜೆಪಿ ಅಂದುಕೊಂಡಿದೆ. ಆದರೆ, ಜನ ಬುದ್ದಿವಂತರು. ಜನರಿಗೆ ಬಿಜೆಪಿಯ ತಂತ್ರ ಅರ್ಥವಾಗಿದೆ ಎಂದು ತಿಳಿಸಿದ್ದಾರೆ.
ಸಂಘ ಪರಿವಾರದವರು ಅಲ್ಪ ಸಂಖ್ಯಾತರನ್ನು ಕೊಲೆ ಮಾಡಿದರೆ ಅವರಿಗೆ ಕಡಿಮೆ ಪರಿಹಾರ ಹಣ ಕೊಡ್ತಾರೆ. ಅದೇ ಮುಸ್ಲಿಮರು ಹಿಂದೂಗಳನ್ನು ಕೊಲೆ ಮಾಡಿದರೆ ಜಾಸ್ತಿ ಪರಿಹಾರ ಕೊಡ್ತಾರೆ. ಇಂತಹ ತಾರತಮ್ಯ ಏಕೆ? ಇಂತಹ ವರ್ತನೆಯಿಂದ ಮತ ಕ್ರೂಢೀಕರಣ ಆಗುತ್ತದೆ ಎಂಬ ಬಿಜೆಪಿ ಲೆಕ್ಕಾಚಾರ ಉಲ್ಟಾ ಆಗುತ್ತೆ ನೋಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನನಗೆ ವಯಸ್ಸಾಯ್ತು ಅಂತ ಕಾಲೆಳೆಯುತ್ತಾರೆ ಅದಕ್ಕೆ ವಾರಕ್ಕೊಮ್ಮೆ ಶೇವ್ ಮಾಡಿಸ್ತೀನಿ: ಸಿದ್ದರಾಮಯ್ಯ
ಸ್ಪೀಕರ್ ಹೇಳಿಕೆಗೆ ವಿರೋಧ
ಸ್ಪೀಕರ್ ನಿನ್ನೆ ಆ ಕುರ್ಚಿಯಲ್ಲಿ ಕೂತು ನಮ್ಮನ್ನು ಆರ್‌ಎಸ್‌ಎಸ್ ಅಂದಿದ್ದು ತಪ್ಪು. ಸ್ಪೀಕರ್ ಆದ ಮೇಲೆ ಅವರು ಪಕ್ಷಾತೀತರಾಗಿ ಇರಬೇಕು. ಆದರೆ, ನಿನ್ನೆ ನಮ್ಮನ್ನು ಆರ್‌ಎಸ್‌ಎಸ್ ಅಂದಿದ್ದು ಸರಿಯಲ್ಲ. ನಾವು ಯಾವಾಗಲೂ ಆರ್‌ಎಸ್‌ಎಸ್ ಗೆ ವಿರೋಧ. ಏಕೆಂದರೆ ಅವರದ್ದು ಮನುವಾದ ಸಂಸ್ಕೃತಿ. ಸ್ವಾತಂತ್ರ‍್ಯಕ್ಕಾಗಿ ಹೋರಾಡಿಲ್ಲ. ಸಮಾಜ ಒಡೆಯುವುದೇ ಅವರ ಅಜೆಂಡಾ. ಸಭಾಧ್ಯಕ್ಷರ ಹೇಳಿಕೆಯನ್ನು ನಾನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ.
ಜನರ ಒತ್ತಾಯಕ್ಕೆ ಕುಣಿದೆ
ಇದೇ ವೇಳೆ ವೀರನ ಕುಣಿತದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ನಾನು ಪ್ರತಿದಿನ ವಾಕ್ ಮಾಡುವ ಕಾರಣ ಫಿಟ್ ಆಗಿದ್ದೇನೆ. ಹಾಗಾಗಿ ನಿನ್ನೆ ೪೦ ನಿಮಿಷ ಕುಣಿದೆ. ನನಗೆ ಡಯಾಬಿಟಿಸ್ ಇದೆ. ಇದರಿಂದ ಸ್ವಲ್ಪ ಎನರ್ಜಿ ಕಡಮೆಯಾಗಿದೆ. ಬಹಳ ವರ್ಷಗಳ ನಂತರ ಕೆಲವು ಸ್ಟೆಪ್ಸ್, ಕೆಲ ಹಾಡು ಮರೆತಿದ್ದೇನೆ. ನಿನ್ನೆಯೂ ಕುಣಿಯಬಾರದು ಅಂದುಕೊಂಡಿದ್ದೆ, ಆದರೆ ಜನರ ಒತ್ತಾಯ, ತಮಟೆ ಸದ್ದು ನನ್ನನ್ನು ಕುಣಿಯುವಂತೆ ಮಾಡಿತು ಎಂದು ನಗೆ ಬೀರಿದ್ದಾರೆ.