Tag: ರಾಜ್ಯಸಭೆ ಚುನಾವಣೆ

  • ರಾಜ್ಯಸಭೆ ಚುನಾವಣೆಯ ಟೆನ್ಶನ್ ಮಧ್ಯೆಯೇ ಸಿದ್ದರಾಮಯ್ಯ ಶಾಪಿಂಗ್

    ರಾಜ್ಯಸಭೆ ಚುನಾವಣೆಯ ಟೆನ್ಶನ್ ಮಧ್ಯೆಯೇ ಸಿದ್ದರಾಮಯ್ಯ ಶಾಪಿಂಗ್

    ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯಸಭಾ ಚುನಾವಣೆ ನಡೆಯಲಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ನಡುವೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಪಿಂಗ್ ತೆರಳಿರುವುದು ಗಮನಸೆಳೆದಿದೆ.

    ರಾಜ್ಯಸಭೆ ಸಂಬಂಧ ಜೆಡಿಎಸ್ ನಿಯೋಗ ಸಿದ್ದರಾಮಯ್ಯರನ್ನ ಭೇಟಿ ಮಾಡಿ ಮಾತುಕತೆ ನಡೆಸಿತ್ತು. ನಿಯೋಗದ ಭೇಟಿ ಬಳಿಕ ನೇರವಾಗಿ ಸಿದ್ದರಾಮಯ್ಯ ಶಾಪಿಂಗ್ ಗೆ ತೆರಳಿದ್ದಾರೆ.

    ಬೆಂಗಳೂರಿನ ಅವೆನ್ಯೂ ರಸ್ತೆಯ ಖಾದಿ ಭಂಡಾರ್ ಮಳಿಗೆಯಲ್ಲಿ ತೆರಳಿದ ಸಿದ್ದರಾಮಯ್ಯ ಪಂಚೆಗಳನ್ನ ಖರೀದಿಸಿದ್ದಾರೆ. 30 ಪಂಚೆಗಳನ್ನ ಏಕ ಕಾಲಕ್ಕೆ‌ ಖರೀದಿ ಮಾಡಿದ್ದಾರೆ. ಒಂದು ಪಂಚೆಗೆ ಸಿದ್ದರಾಮಯ್ಯ 650 ರೂ. ನೀಡಿದ್ದಾರೆ. ಡಿಸ್ಕೌಂಟ್ ಹೋಗಿ ಪ್ರತಿ ಪಂಚೆಗೆ 650 ರೂ.ಗೆ ನೀಡಿ ಖರೀದಿ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಜೆಡಿಎಸ್‍ಗೆ ಸಿದ್ದರಾಮಯ್ಯ ಚೆಕ್ – ಬಿಜೆಪಿಗೆ ಕುದುರುತ್ತಾ ಲಕ್?

    ಪಂಚೆ ಖರೀದಿ ಸಮಯದಲ್ಲಿ ವಿವಿಧ ಬ್ರ್ಯಾಂಡ್ ಬಗ್ಗೆಯೂ ಸಿದ್ದರಾಮಯ್ಯ ವಿಚಾರಿಸಿದ್ದಾರೆ. ಮೈಸೂರು ತಿರುಪುರು ಖಾದಿಯಲ್ಲಿ ತೆಗೆದುಕೊಂಡಿದ್ದ ಪಂಚೆ ಬಗ್ಗೆ ಸಿದ್ದರಾಮಯ್ಯ ಅಂಗಡಿಯವರ ಬಳಿ ವಿಚಾರಿಸಿದ್ದಾರೆ. ಅಂತಿಮವಾಗಿ ಮೈಸೂರಿನ ತಿರುಪುರು ಖಾದಿಯ 30 ಪಂಚೆಗಳನ್ನ ಖರೀದಿ ಮಾಡಿದ್ದಾರೆ.

    ಕರ್ನಾಟಕ ಸೇರಿದಂತೆ 15 ರಾಜ್ಯಗಳಲ್ಲಿನ 57 ರಾಜ್ಯಸಭಾ ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದೆ. ಇದರಲ್ಲಿ ಉತ್ತರ ಪ್ರದೇಶವೊಂದರಲ್ಲೇ 11 ಸ್ಥಾನಗಳಿವೆ. ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ 6 ಸ್ಥಾನಗಳಿವೆ. ಬಿಹಾರದಲ್ಲಿ 5, ಕರ್ನಾಟಕ, ಆಂಧ್ರಪ್ರದೇಶ ಮತ್ತು ರಾಜಸ್ಥಾನದಲ್ಲಿ 4 ಸ್ಥಾನಗಳು ತೆರವಾಗಿದ್ದು, ಚುನಾವಣೆ ನಡೆಯಲಿದೆ. ಈ 57 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ ಎಂಟು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ರಾಜಸ್ಥಾನದಲ್ಲಿ 2, ಛತ್ತೀಸ್‍ಗಡದಲ್ಲಿ 2, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ತಲಾ ಒಂದೊಂದು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ರಾಜಸ್ಥಾನದಲ್ಲಿ ಬಿಜೆಪಿಯೇತರ ಎಲ್ಲಾ ಪಕ್ಷಗಳ ಬೆಂಬಲ ಸಿಕ್ಕರೆ ಒಂದು ಹೆಚ್ಚುವರಿ ಸ್ಥಾನ ಕೂಡ ಕಾಂಗ್ರೆಸ್‍ಗೆ ದಕ್ಕಬಹುದು.

     

  • ರಾಜ್ಯಸಭೆ ಚುನಾವಣೆ: ಜೆಡಿಎಸ್‍ಗೆ ಸಿದ್ದರಾಮಯ್ಯ ಚೆಕ್ – ಬಿಜೆಪಿಗೆ ಕುದುರುತ್ತಾ ಲಕ್?

    ರಾಜ್ಯಸಭೆ ಚುನಾವಣೆ: ಜೆಡಿಎಸ್‍ಗೆ ಸಿದ್ದರಾಮಯ್ಯ ಚೆಕ್ – ಬಿಜೆಪಿಗೆ ಕುದುರುತ್ತಾ ಲಕ್?

    ಬೆಂಗಳೂರು: ರಾಜ್ಯಸಭೆ ಚುನಾವಣೆ ಅಖಾಡ ರಂಗೇರಿದ್ದು, ಬಿಜೆಪಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸಿದೆ. ಎರಡು ರಾಷ್ಟ್ರೀಯ ಪಕ್ಷಗಳ ಮೇಲಾಟ ಜೆಡಿಎಸ್ ಪರದಾಟಕ್ಕೆ ಕಾರಣವಾಗಿದೆ. ನಾಲ್ಕನೇ ಗೆಲುವಿಗೆ ಮೂರು ಪಕ್ಷಗಳಿಗೂ ಸವಾಲಿದ್ದು, ಸದ್ಯಕ್ಕೆ ಬಿಜೆಪಿ ಮುಂದಿದೆ. ಹಾಗಾದರೆ ಯಾರಿಗೆ ಲಾಭ? ಯಾರಿಗೆ ನಷ್ಟ? ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ.

    ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ಈಗ ರಂಗು ಪಡೆದುಕೊಂಡಿದೆ. ಅವಿರೋಧ ಆಯ್ಕೆಯಾಗಬಹುದೆಂಬ ನಿರೀಕ್ಷೆಗಳು ಉಲ್ಟಾ ಹೊಡೆದಿದ್ದು, ನಾಲ್ಕನೇ ಸ್ಥಾನಕ್ಕೆ ಮೂರು ಪಕ್ಷಗಳು ಈಗ ಕಾದಾಟಕ್ಕೆ ನಿಂತಿವೆ. ಅಂದಹಾಗೆ ಈಗ ಇರುವ ಬಲಾಬಲದಂತೆ ಬಿಜೆಪಿಗೆ ಎರಡು ಸ್ಥಾನ, ಕಾಂಗ್ರೆಸ್‍ಗೆ ಒಂದು ಸ್ಥಾನ ಸುಲಭವಾಗಿ ದಕ್ಕಲಿದೆ. ಆದರೆ ನಾಲ್ಕನೇ ಸ್ಥಾನ ಗೆಲ್ಲಲು ಮೂರು ಪಕ್ಷಗಳ ಬಳಿ ಸ್ಪಷ್ಟವಾದ ಬಲ ಇಲ್ಲಂದಾಗಿತ್ತು. ಚದುರಂಗದಾಟ ಕುತೂಹಲ ಮೂಡಿಸಿದೆ. ಜೆಡಿಎಸ್‍ಗೆ ಟಕ್ಕರ್ ಕೊಡಲು ಕಾಂಗ್ರೆಸ್ ನಿನ್ನೆಯೇ ಎರಡನೇ ಅಭ್ಯರ್ಥಿ ಮನ್ಸೂರ್ ಖಾನ್ ಅವರಿಂದ ನಾಮಪತ್ರ ಸಲ್ಲಿಸಿತ್ತು. ಈ ಬೆನ್ನಲ್ಲೇ ಇವತ್ತು ಬಿಜೆಪಿ ಕೂಡ ತನ್ನ ಮೂರನೇ ಅಭ್ಯರ್ಥಿಯಾಗಿ ಲೆಹರ್ ಸಿಂಗ್ ಅವರನ್ನು ಕಣಕ್ಕಿಳಿಸಿದ್ದು ಮೇಲಾಟಕ್ಕೆ ವೇದಿಕೆ ಸಿದ್ಧಪಡಿಸಿದೆ. ಇದನ್ನೂ ಓದಿ: ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಸಿಎಂ ವೀಡಿಯೋ ಸಂವಾದ

    ಈ ನಡುವೆ ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಬಿಜೆಪಿ ಮೊದಲ ಅಭ್ಯರ್ಥಿಯಾಗಿ ನಿರ್ಮಲಾ ಸೀತಾರಾಮನ್, ಎರಡನೇ ಅಭ್ಯರ್ಥಿಯಾಗಿ ಜಗ್ಗೇಶ್ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದ್ದರು. ಬಿಎಸ್‍ವೈ, ಬೊಮ್ಮಾಯಿ, ಕಟೀಲ್ ಸಾಥ್ ನೀಡಿ ಒಗ್ಗಟ್ಟು ಪ್ರದರ್ಶಿಸಿದರು. ಇನ್ನೊಂದೆಡೆ ಜೆಡಿಎಸ್ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿದರು. ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಶಾಸಕರು ಸಾಥ್ ನೀಡಿದರು. ಇನ್ನೊಂದೆಡೆ ಕಾಂಗ್ರೆಸ್ ನಡೆ ಬಗ್ಗೆ ಜೆಡಿಎಸ್ ಅಸಮಾಧಾನ ವ್ಯಕ್ತಪಡಿಸಿದೆ. ದೇವೇಗೌಡರು ಸೋನಿಯಾ ಗಾಂಧಿ ಅವರ ಜೊತೆ ಮಾತನಾಡಿದ್ದಾರೆ. ಕೋಮುವಾದಿ ಪಕ್ಷ ಬಿಜೆಪಿಯನ್ನು ದೂರ ಇಡುವುದಕ್ಕೆ ನಾವು ಕಾಂಗ್ರೆಸ್ ಬೆಂಬಲ ಕೇಳಿದ್ದೇವೆ. ಆದರೆ ಸಿದ್ದರಾಮಯ್ಯ ಯಾಕೆ ಎರಡನೇ ಅಭ್ಯರ್ಥಿ ಇಳಿಸಲು ಹಠ ಮಾಡಿದರು ಅಂತ ಗೊತ್ತಿಲ್ಲ ಅಂತ ಹೆಚ್.ಡಿ.ರೇವಣ್ಣ ಹೇಳಿದ್ದಾರೆ. ಈ ನಡುವೆ ಅಶೋಕ್ ಮಾತನಾಡಿ ನಾವು ಕ್ರಾಸ್ ವೋಟ್ ಮಾಡಿಸಲ್ಲ. ಆದರೆ ನಮ್ಮ ಅಭ್ಯರ್ಥಿಯನ್ನು ನಾವು ಗೆಲ್ಲಿಸುತ್ತೇವೆ ಎಂದು ಹೇಳುವ ಮೂಲಕ ಕುತೂಹಲ ಹುಟ್ಟು ಹಾಕಿಸಿದ್ದಾರೆ. ಇದನ್ನೂ ಓದಿ: ದೇಶದ 10 ಕೋಟಿ ರೈತರಿಗೆ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್

    ಒಟ್ಟಾರೆ ರಾಜ್ಯಸಭೆ ಕಣ ಚದುರಂಗದಾಟಕ್ಕೆ ವೇದಿಕೆ ಒದಗಿಸಿದ್ದು, ಕಡೇ ಕ್ಷಣದಲ್ಲಿ ಯಾರು ಯಾವ್ ಪಾನ್ ವೂವ್ ಮಾಡುತ್ತಾರೆ ಎಂಬ ಕುತೂಹಲವಿದ್ದು, ಜೂನ್ 3ರೊಳಗೆ ಎಲ್ಲರ ಅಸಲಿ ಆಟ ಗೊತ್ತಾಗಲಿದೆ.

  • ಮೂರನೇ ಅಭ್ಯರ್ಥಿ ಕಣಕ್ಕಿಳಿಸಿದ ಬಿಜೆಪಿ- ಲೆಹರ್ ಸಿಂಗ್‍ಗೆ ಟಿಕೆಟ್

    ಮೂರನೇ ಅಭ್ಯರ್ಥಿ ಕಣಕ್ಕಿಳಿಸಿದ ಬಿಜೆಪಿ- ಲೆಹರ್ ಸಿಂಗ್‍ಗೆ ಟಿಕೆಟ್

    ನವದೆಹಲಿ: ರಾಜ್ಯಸಭೆ ಚುನಾವಣೆಗೆ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

    ಕಾಂಗ್ರೆಸ್ ಎರಡನೇ ಅಭ್ಯರ್ಥಿ ಕಣಕ್ಕಿಳಿಸಿದ ಬೆನ್ನಲ್ಲೇ ಬಿಜೆಪಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮೂರನೇ ಅಭ್ಯರ್ಥಿಯಾಗಿ ಲೆಹರ್ ಸಿಂಗ್ ಅವರಿಗೆ ಭಾರತೀಯ ಜನತಾ ಪಾರ್ಟಿ ಟಿಕೆಟ್ ನೀಡಿದೆ.

    ಕಾಂಗ್ರೆಸ್ ನಿಂದ ಜೈರಾಮ್ ರಮೇಶ್ ಅವರನ್ನು ಕಣಕ್ಕಿಳಿಸಿದೆ. ಇತ್ತ ಬಿಜೆಪಿಯಿಂದ ನಿರ್ಮಲಾ ಸೀತರಾಮನ್ ಮತ್ತು ನಟ ಜಗ್ಗೇಶ್ ಅಂತಿಮ ಹೆಸರನ್ನು ನಿನ್ನೆ ಘೋಷಣೆ ಮಾಡಿತ್ತು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್‍ನಿಂದ ಜೈರಾಮ್ ರಮೇಶ್‍ಗೆ ಟಿಕೆಟ್

    ಕರ್ನಾಟಕ ಸೇರಿದಂತೆ 15 ರಾಜ್ಯಗಳಲ್ಲಿನ 57 ರಾಜ್ಯಸಭಾ ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದೆ. ಇದರಲ್ಲಿ ಉತ್ತರ ಪ್ರದೇಶವೊಂದರಲ್ಲೇ 11 ಸ್ಥಾನಗಳಿವೆ. ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ 6 ಸ್ಥಾನಗಳಿವೆ. ಬಿಹಾರದಲ್ಲಿ 5, ಕರ್ನಾಟಕ, ಆಂಧ್ರಪ್ರದೇಶ ಮತ್ತು ರಾಜಸ್ಥಾನದಲ್ಲಿ 4 ಸ್ಥಾನಗಳು ತೆರವಾಗಿದ್ದು, ಚುನಾವಣೆ ನಡೆಯಲಿದೆ. ಈ 57 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ ಎಂಟು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ.

    ರಾಜಸ್ಥಾನದಲ್ಲಿ 2, ಛತ್ತೀಸ್‍ಗಡದಲ್ಲಿ 2, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು ಮತ್ತು ಮಧ್ಯಪ್ರದೇಶದಲ್ಲಿ ತಲಾ ಒಂದೊಂದು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ರಾಜಸ್ಥಾನದಲ್ಲಿ ಬಿಜೆಪಿಯೇತರ ಎಲ್ಲಾ ಪಕ್ಷಗಳ ಬೆಂಬಲ ಸಿಕ್ಕರೆ ಒಂದು ಹೆಚ್ಚುವರಿ ಸ್ಥಾನ ಕೂಡ ಕಾಂಗ್ರೆಸ್‍ಗೆ ದಕ್ಕಬಹುದು.

  • ರಾಜ್ಯಸಭೆಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಮನಿರ್ದೇಶನ – ಅವಿರೋಧವಾಗಿ ಆಯ್ಕೆಯಾಗಲಿರುವ ಬಜ್ಜಿ

    ರಾಜ್ಯಸಭೆಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ನಾಮನಿರ್ದೇಶನ – ಅವಿರೋಧವಾಗಿ ಆಯ್ಕೆಯಾಗಲಿರುವ ಬಜ್ಜಿ

    ನವದೆಹಲಿ : ಮಾರ್ಚ್ 31 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಆಮ್ ಅದ್ಮಿ ಪಂಜಾಬ್‍ನಿಂದ ಐದು ಮಂದಿ ಅಭ್ಯರ್ಥಿಗಳನ್ನು ನಾಮ ನಿರ್ದೇಶನ ಮಾಡಿದ್ದು ಇದರಲ್ಲಿ ಮಾಜಿ ಕ್ರಿಕೆಟಿಗ ಹರ್ಭಜನ್‍ಸಿಂಗ್ ಕೂಡಾ ಒಳಗೊಂಡಿದ್ದಾರೆ.

    ಹರ್ಭಜನ್ ಸಿಂಗ್ ಜೊತೆಗೆ ದೆಹಲಿಯ ಆಪ್ ಶಾಸಕ ರಾಘವ್ ಚಡ್ಡಾ, ಸಂದೀಪ್ ಪಾಟಕ್, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಕುಲಪತಿ ಅಶೋಕ್ ಮಿತ್ತಲ್ ಹಾಗೂ ಕೃಷ್ಣ ಪ್ರಾಣ್ ಸ್ತನ ಕ್ಯಾನ್ಸರ್ ಕೇರ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಸಂಜೀವ್ ಅರೋರಾ ಅವರನ್ನು ಪಂಜಾಬ್‍ನಿಂದ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಇದನ್ನೂ ಓದಿ: ಉಕ್ರೇನ್‍ನಿಂದ 22,500 ವಿದ್ಯಾರ್ಥಿಗಳು ವಾಪಸ್- ಆಪರೇಷನ್ ಗಂಗಾ ಪೂರ್ಣ

    ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳ ಪೈಕಿ 92 ಸ್ಥಾನಗಳಲ್ಲಿ ಆಮ್ ಅದ್ಮಿ ಗೆಲವು ಸಾಧಿಸಿರುವ ಹಿನ್ನಲೆ ಐದು ಮಂದಿ ನಾಮನಿರ್ದೇಶಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಇದರಿಂದ ರಾಜ್ಯಸಭೆಯಲ್ಲಿ ಆಪ್ ಸಂಖ್ಯೆ 3 ರಿಂದ 8ಕ್ಕೆ ಏರಿಕೆಯಾಗಲಿದೆ. ಇದನ್ನೂ ಓದಿ: ಸ್ವಂತ ಜಮೀನು ಮಾರಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಹಿರಿಯ ನಟಿ ಲೀಲಾವತಿ

    ಹರ್ಭಜನ್ ಸಿಂಗ್ ಆಯ್ಕೆ ಹಿಂದೆ ಹಲವು ಲೆಕ್ಕಾಚಾರಗಳನ್ನು ಆಮ್ ಅದ್ಮಿ ಹಾಕಿಕೊಂಡಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಹರ್ಭಜನ್ ಸಿಂಗ್ ಪಂಜಾಬ್‍ನಲ್ಲಿ ಸ್ಪೋರ್ಟ್ಸ್ ಐಕಾನ್ ಆಗಲಿದ್ದಾರೆ. ಈ ಮೂಲಕ ಪಂಜಾಬ್‍ನಲ್ಲಿ ಕ್ರೀಡೆಗಳಿಗೆ ಹೆಚ್ಚು ಆದ್ಯತೆ ನೀಡುವುದು ಮತ್ತು ಯುವಕರನ್ನು ಪಕ್ಷದತ್ತ ಸೆಳೆಯುವ ಲೆಕ್ಕಾಚಾರ ಹೊಂದಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

  • ರಾಜ್ಯಸಭಾ ಟಿಕೆಟ್ ಆಕಾಂಕ್ಷಿಗಳು ಅಸಮಾಧಾನ ಆಗುವ ಪ್ರಶ್ನೆಯೇ ಇಲ್ಲ: ಶೆಟ್ಟರ್

    ರಾಜ್ಯಸಭಾ ಟಿಕೆಟ್ ಆಕಾಂಕ್ಷಿಗಳು ಅಸಮಾಧಾನ ಆಗುವ ಪ್ರಶ್ನೆಯೇ ಇಲ್ಲ: ಶೆಟ್ಟರ್

    ಧಾರವಾಡ: ರಾಜ್ಯಸಭಾ ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ ಹೈಕಮಾಂಡ್ ತೀರ್ಮಾನ ಅಂತಿಮ. ಪಕ್ಷ ಸಂಘಟನೆಯಲ್ಲಿ ತೊಡಗಿರುವವರನ್ನು ನೋಡಿ ಟಿಕೆಟ್ ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಭಾಕರ್ ಕೋರೆ, ರಮೇಶ ಕತ್ತಿ ಅಸಮಾಧಾನವಾಗುವ ಪ್ರಶ್ನೆಯೇ ಇಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿರಬೇಕು. ಕೋರೆ ಮತ್ತು ರಮೇಶ ಕತ್ತಿ ಜೊತೆ ಮಾತನಾಡುತ್ತೇನೆ ಎಂದರು.

    ರಾಜ್ಯ ಬಿಜೆಪಿಯಿಂದ ಮೂವರ ಹೆಸರನ್ನು ಶಿಫಾರಸು ಮಾಡಿ ಹೈಕಮಾಂಡ್‍ಗೆ ಕಳುಹಿಸಿತ್ತು. ಅಂತಿಮವಾಗಿ ಹೈಕಮಾಂಡ್ ಇಬ್ಬರ ಹೆಸರನ್ನು ಅಂತಿಮಗೊಳಿಸಿದೆ, ಈಗ ಟಿಕೆಟ್ ಸಿಕ್ಕವರು ಪಕ್ಷಕ್ಕಾಗಿ ದುಡಿದಿದ್ದಾರೆ. ಹೀಗಾಗಿ ಇವರನ್ನು ಗುರುತಿಸಿ ಹೈಕಮಾಂಡ್ ಟಿಕೆಟ್ ನೀಡಿದೆ ಎಂದು ಹೇಳಿದರು.

  • ಮಧ್ಯಪ್ರದೇಶದ ಬೆನ್ನಲ್ಲೇ ಗುಜರಾತ್‍ನಲ್ಲಿ ಇಕ್ಕಟ್ಟಿಗೆ ಸಿಲುಕಿದ ಕಾಂಗ್ರೆಸ್

    ಮಧ್ಯಪ್ರದೇಶದ ಬೆನ್ನಲ್ಲೇ ಗುಜರಾತ್‍ನಲ್ಲಿ ಇಕ್ಕಟ್ಟಿಗೆ ಸಿಲುಕಿದ ಕಾಂಗ್ರೆಸ್

    – ರಾಜ್ಯಸಭೆ ಚುನಾವಣೆಗೂ ಮುನ್ನ 5 ಶಾಸಕರು ರಾಜೀನಾಮೆ
    – ಶಾಸಕರನ್ನು ಉಳಿಸಿಕೊಳ್ಳಲು ರೆಸಾರ್ಟ್ ಮೊರೆ

    ಗಾಂಧಿನಗರ: ಮಧ್ಯಪ್ರದೇಶದ ಸಿಎಂ ಕಮಲ್‍ನಾಥ್ ಸರ್ಕಾರವನ್ನು ಅತಂತ್ರಕ್ಕೆ ಸಿಲುಕಿದ ಬೆನ್ನಲ್ಲೇ ಗುಜರಾತ್‍ನಲ್ಲಿ ಕಾಂಗ್ರೆಸ್ ಶಾಸಕರ ಹೈಜಾಕ್‍ಗೆ ‘ಕಮಲ ಪಡೆ’ ಸರ್ವಪ್ರಯತ್ನ ನಡೆಸಿದೆ.

    ರಾಜ್ಯಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಗುಜರಾತ್‍ನ 5 ಜನ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ. ಶಾಸಕರ ನಡೆಯಿಂದ ಕಾಂಗ್ರೆಸ್ ಹೈಕಮಾಂಡ್ ಕಂಗೆಟ್ಟು ಹೋಗಿದ್ದು, ಉಳಿದ ಶಾಸಕರನ್ನು ಪಕ್ಷದಲ್ಲೇ ಇರಿಸಿಕೊಳ್ಳಲು ರೆಸಾರ್ಟ್ ಮೊರೆ ಹೋಗಿದೆ. ಇದನ್ನೂ ಓದಿ:  ನಾಳೆ ಬೆಳಗ್ಗೆಯೇ ಬಹುಮತ ಸಾಬೀತುಪಡಿಸಿ- ಕೈ ಸರ್ಕಾರಕ್ಕೆ ಎಂಪಿ ರಾಜ್ಯಪಾಲ ಆದೇಶ

    ಗುಜರಾತ್‍ನ 4 ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 26ರಂದು ಚುನಾವಣೆ ನಡೆಯಲಿದೆ. ಈ ಮಧ್ಯೆ ಕಾಂಗ್ರೆಸ್ ಶಾಸಕರಾದ ಪ್ರವೀಣ್ ಮಾರು, ಮಂಗಲ್ ಗವಿತ್, ಸೋಮಭಾಯ್ ಪಟೇಲ್, ಜೆ.ವಿ.ಕಾಕಾಡಿಯಾ ಹಾಗೂ ಪ್ರದ್ಯುಮನ್ ಜಡೇಜಾ ಭಾನುವಾರ ರಾಜೀನಾಮೆ ನೀಡಿದ್ದಾರೆ.

    ಇದಕ್ಕೂ ಮೊದಲು ಆಪರೇಷನ್ ಕಮಲದ ಭಯದಿಂದ ಕಾಂಗ್ರೆಸ್ ತನ್ನ 14 ಶಾಸಕರನ್ನು ಜೈಪುರಕ್ಕೆ ಕಳುಹಿಸಿತ್ತು. ಜೊತೆಗೆ 36 ಶಾಸಕರನ್ನು ರಾಜಸ್ಥಾನಕ್ಕೆ ಕಳುಹಿಸಲಾಗಿದೆ. ಈ ಮೂಲಕ ಎಲ್ಲ ಶಾಸಕರನ್ನು ರೆಸಾರ್ಟಿಗೆ ಕರೆದೊಯ್ಯಲಾಗಿದೆ. ಮೊಬೈಲ್ ಬಳಸದಂತೆ ಹಾಗೂ ತಮ್ಮ ಬಳಿ ಇಟ್ಟುಕೊಳ್ಳದಂತೆ ಶಾಸಕರಿಗೆ ಕಾಂಗ್ರೆಸ್ ನಾಯಕರು ಸೂಚನೆ ನೀಡಿದ್ದಾರೆ. ಒಂದು ರೀತಿ ಬಂಧನಕ್ಕೆ ಒಳಗಾಗಿರುವ ಶಾಸಕರು ಕುಟುಂಬ ಅಥವಾ ಪರಿಚಯಸ್ಥರನ್ನು ಭೇಟಿಯಾಗಲು ಸಹ ಸಾಧ್ಯವಾಗುತ್ತಿಲ್ಲ. ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರವು ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಗುಜರಾತ್‍ನ ‘ಕೈ’ ಶಾಸಕರಿಗೆ ರಕ್ಷಣೆ ಒದಗಿಸಿದೆ ಎಂದು ವರದಿಯಾಗಿದೆ.

    14 ಶಾಸಕರನ್ನು ಜೈಪುರಕ್ಕೆ ಕಳುಹಿಸಲಾಗಿದೆ. 36 ಶಾಸಕರನ್ನು ರಾಜಸ್ಥಾನಕ್ಕೆ ಕಳುಹಿಸಲಾಗಿದ್ದು, ಅವರನ್ನು ಉದಯಪುರಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಉಳಿದ 5 ಶಾಸಕರನ್ನು ಗುಜರಾತ್‍ನ ರೆಸಾರ್ಟಿಗೆ ಕರೆದೊಯ್ಯಲು ಕಾಂಗ್ರೆಸ್ ನಿರ್ಧರಿಸಿದೆಯಂತೆ.

    ಅಂಕಿ ಅಂಶ:
    * ಗುಜರಾತ್ ವಿಧಾನಸಭೆಯಲ್ಲಿ ಒಟ್ಟು ಸ್ಥಾನಗಳು- 180
    * ಕಾಂಗ್ರೆಸ್ 5 ಶಾಸಕರ ರಾಜೀನಾಮೆಯಿಂದ 175ಕ್ಕೆ ಕುಸಿತ
    * ಬಿಜೆಪಿಯ ಬಲ 106 (ಬಿಜೆಪಿ ಶಾಸಕರು 103, ಎನ್‍ಸಿಪಿ 1, ಭಾರತೀಯ ಬುಡಕಟ್ಟು ಪಕ್ಷ2 )
    * ಕಾಂಗ್ರೆಸ್‍ನ ಬಲ 69 (ಕಾಂಗ್ರೆಸ್ 68, ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ 1)
    * ಗುಜರಾತ್‍ನಲ್ಲಿ ರಾಜ್ಯಸಭೆಯ ಎಷ್ಟು ಸ್ಥಾನಗಳಲ್ಲಿ ಚುನಾವಣೆ – 4

    ಅಭಯ್ ಭಾರದ್ವಾಜ್, ರಾಮಿವಾ ಬೆನ್ ಬಾರಾ ಮತ್ತು ನರ್ಹಾರಿ ಅಮೀನ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಶಕ್ತಿ ಸಿಂಗ್ ಗೋಹಿಲ್ ಮತ್ತು ಭಾರತ್ ಸಿಂಗ್ ಸೋಲಂಕಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

    ಸದ್ಯದ ಪರಿಸ್ಥಿಯ ಪ್ರಕಾರ ಬಿಜೆಪಿ 2 ಮತ್ತು ಕಾಂಗ್ರೆಸ್ 1 ಸುಲಭವಾಗಿ ಸ್ಥಾನವನ್ನು ಗೆಲ್ಲುತ್ತವೆ. ಆದರೆ ಕಾಂಗ್ರೆಸ್‍ನ ಇಬ್ಬರು ಶಾಸಕರು ಅಡ್ಡ ಮತ ಚಲಾಯಿಸಿದರೆ ಬಿಜೆಪಿ 3 ಸ್ಥಾನಗಳನ್ನು ಗೆಲ್ಲುತ್ತದೆ. ಬಿಜೆಪಿಯಲ್ಲಿ 106 ಶಾಸಕರು ಇದ್ದಾರೆ. ಈ ಮೂಲಕ 3 ರಾಜ್ಯಸಭಾ ಸ್ಥಾನಗಳನ್ನು ಗೆಲ್ಲಲು ಅವರಿಗೆ ಇನ್ನೂ 2 ಮತಗಳು ಬೇಕಾಗುತ್ತವೆ. ಹೀಗಾಗಿ ಕಾಂಗ್ರೆಸ್‍ನ ಇಬ್ಬರು ಶಾಸಕರ ಅಡ್ಡ ಮತದಾನ ಬಿಜೆಪಿಗೆ ಅಗತ್ಯವಿದೆ.

    2017ರಲ್ಲಿ ಗುಜರಾತ್‍ನ 3 ರಾಜ್ಯಸಭಾ ಸ್ಥಾನಗಳ ಚುನಾವಣೆಯ ಸಂದರ್ಭದಲ್ಲಿ ಇದೇ ರೀತಿಯ ಪರಿಸ್ಥಿತಿ ಸೃಷ್ಟಿಯಾಗಿತ್ತು. ಅಹ್ಮದ್ ಪಟೇಲ್ ಅವರ ವಿಜಯವನ್ನು ನಿರ್ಧರಿಸಲು ಕಾಂಗ್ರೆಸ್ ತನ್ನ ಶಾಸಕರನ್ನು ಕರ್ನಾಟಕಕ್ಕೆ ಕಳುಹಿಸಿತ್ತು. ಕೆಲವು ಶಾಸಕರು ಸಹ ಅಡ್ಡ ಮತದಾನ ಮಾಡಿದರು. ಆದರೆ ಅಹ್ಮದ್ ಪಟೇಲ್ ಮೇಲುಗೈ ಸಾಧಿಸಿದ್ದರು.