Tag: ರಾಜ್ಯಸಭೆ ಚುನಾವಣೆ

  • ಲೋಕಸಭೆಗೆ ಅಲ್ಲ, ರಾಜ್ಯಸಭೆಗೆ ದೆಹಲಿಯಲ್ಲಿ ವಿ.ಸೋಮಣ್ಣ ಲಾಬಿ!

    ಲೋಕಸಭೆಗೆ ಅಲ್ಲ, ರಾಜ್ಯಸಭೆಗೆ ದೆಹಲಿಯಲ್ಲಿ ವಿ.ಸೋಮಣ್ಣ ಲಾಬಿ!

    ನವದೆಹಲಿ: ರಾಜ್ಯಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಲಾಬಿ ಶುರುವಾಗಿದ್ದು ಮಾಜಿ ಸಚಿವ ವಿ.ಸೋಮಣ್ಣ (v.Somanna)  ವರಿಷ್ಠರ ಭೇಟಿಗೆ ಪ್ರಯತ್ನ ಆರಂಭಿಸಿದ್ದಾರೆ. ಭಾನುವಾರವ ರಾತ್ರಿಯೇ ದೆಹಲಿಗೆ ಆಗಮಿಸಿರುವ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಪ್ರಮುಖ ನಾಯಕರ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ.

    ರಾಜ್ಯದ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮೂರು ಸ್ಥಾನ ಕಾಂಗ್ರೆಸ್‌ಗೆ (Congress) ಲಭ್ಯವಾಗಲಿದೆ. ಉಳಿದ ಬಾಕಿ ಒಂದು ಸ್ಥಾನ ಆಯ್ಕೆ ಮಾಡಿಕೊಳ್ಳಲು ಬಿಜೆಪಿಗೆ (BJP) ಅವಕಾಶವಿರುತ್ತದೆ. ಈ ಹಿನ್ನಲೆಯಲ್ಲಿ ದೆಹಲಿಯಲ್ಲಿ ಠಿಕಾಣಿ ಹೂಡಿರುವ ಅವರು ಲೋಕಸಭೆ ಬದಲಿಗೆ ರಾಜ್ಯಸಭೆಗೆ ತಮ್ಮ ಹೆಸರು ಘೋಷಿಸುವಂತೆ ವರಿಷ್ಠರಿಗೆ ಮನವಿ ಮಾಡುತ್ತಿದ್ದಾರೆ. ಇದನ್ನೂ ಓದಿ:  ವಿಶ್ವಾಸಮತ ಗೆದ್ದ ಜಾರ್ಖಂಡ್‌ ನೂತನ ಸಿಎಂ ಚಂಪೈ ಸೊರೇನ್‌

    ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ವರಿಷ್ಠರಿಗೆ ನನ್ನ ಭಾವನೆ ವ್ಯಕ್ತಪಡಿಸಿದ್ದೇನೆ. ಯಾರಿಗೆ ಅವಕಾಶ ಕೊಡುತ್ತಾರೆ ಗೊತ್ತಿಲ್ಲ. ಒಂದು ವೇಳೆ ಕೊಟ್ಟರೆ ಒಳ್ಳೆ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಕೊಡಲಿಲ್ಲ ಅಂದರೆ ಯಾವುದೇ ಬೇಸರ ಇಲ್ಲ ಎಂದಿದ್ದಾರೆ. ತುಮಕೂರು ಕ್ಷೇತ್ರಕ್ಕೆ ನಾನು ಸ್ಪರ್ಧಿಸಬೇಕು ಎನ್ನುವುದು ಹಾಲಿ ಸಂಸದ ಬಸವರಾಜು ಅವರ ಅಭಿಲಾಷೆ. ಸ್ಥಳೀಯ ನಾಯಕರೂ ಸಹ ಬೆಂಬಲ ನೀಡುತ್ತಿದ್ದಾರೆ. ಅಂತಿಮವಾಗಿ ಎಲ್ಲವೂ ಹೈಕಮಾಂಡ್ ನಿರ್ಧರ ಮಾಡಲಿದೆ. ಕೊಟ್ಟರೆ ಜವಾಬ್ದಾರಿ ನಿಭಾಯಿಸುತ್ತೇನೆ. ಇಲ್ಲ ಅಂದರೆ ಪಕ್ಷದ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನ ರಾಮನನ್ನು ಬಿಜೆಪಿಗೆ ಬಿಟ್ಟುಕೊಡಲ್ಲ – ಶಶಿ ತರೂರ್‌

    ಮಾಜಿ ಸಿಎಂ ಹೆಚ್‌ಡಿ.ಕುಮಾರಸ್ವಾಮಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಪಕ್ಷ ಬೇರೆ ಇರಬಹುದು. ಆದರೆ ನಾವು ಮೊದಲಿನಿಂದ ಪರಿಚಯ. ಮೊನ್ನೆ ಅವರ ತೋಟದ ಮನೆಯಲ್ಲಿ ಭೇಟಿ ಆಗಿದ್ದೇನೆ. ಅವರು 2 ಬಾರಿ ಮುಖ್ಯಮಂತ್ರಿಯಾದವರು. ಹೀಗಾಗಿ ಸಹಜವಾಗಿ ಮಾತಾಡಿದ್ದೇವೆ ಅಷ್ಟೇ. ನಾವು ಹಿಂದು ಹಿಂಗೇ ಮಾತಾಡೋಕೆ ದೇವೇಗೌಡರು ಕಾರಣ. ಅವರ ಒಡನಾಟ ಮತ್ತು ಅವರು ಕೊಟ್ಟಿರುವ ಅನುಭವ ಮಹತ್ವ ಎಂದು ಮಾಜಿ ಪ್ರಧಾನಿ ದೇವೇಗೌಡರನ್ನು ಸೋಮಣ್ಣ ಹೋಗಳಿದ್ದಾರೆ. ಇದನ್ನೂ ಓದಿ: ಹಸಿವು ಎಂದು ಬೆಕ್ಕಿನ ಹಸಿಮಾಂಸ ತಿಂದ ಭೂಪ!

    ಸುಧಾರಕರ್‌ಗೆ ಚಿಕ್ಕಬಳ್ಳಾಪುರದಿಂದ ಭರವಸೆ ನೀಡಿದ್ದಾರಾ ಇಲ್ವಾ ಗೊತ್ತಿಲ್ಲ. ಅದರ ಮಾಹಿತಿ ಇಲ್ಲ ಮತ್ತು ಆ ಬಗ್ಗೆ ಮಾತನಾಡುವುದಿಲ್ಲ. ಸುಮಲತಾ ಸ್ಪರ್ಧಿಸುವುದರ ಬಗ್ಗೆ ಹೈಕಮಾಂಡ್ ನಿರ್ಧರ ಮಾಡಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಮಥುರಾದಲ್ಲಿ ಕೃಷ್ಣ ದೇವಸ್ಥಾನ ಕೆಡವಿ ಮಸೀದಿ ನಿರ್ಮಾಣ – ಭಾರತೀಯ ಪುರಾತತ್ವ ಇಲಾಖೆ

  • ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ – ಜೆಡಿಎಸ್‌ನ ಇಬ್ಬರು ಶಾಸಕರಿಗೆ ನೋಟಿಸ್ ಜಾರಿ

    ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ – ಜೆಡಿಎಸ್‌ನ ಇಬ್ಬರು ಶಾಸಕರಿಗೆ ನೋಟಿಸ್ ಜಾರಿ

    ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ (Rajya Sabha Election) ಅಡ್ಡ ಮತದಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ JDS ಇಬ್ಬರು ಶಾಸಕರಿಗೆ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ನೋಟಿಸ್ ಜಾರಿ ಮಾಡಿದ್ದಾರೆ.

    ಕೋಲಾರ ಶಾಸಕ ಶ್ರೀನಿವಾಸಗೌಡ (Srinivas Gowda) ಹಾಗೂ ಗುಬ್ಬಿ ಶಾಸಕ ಶ್ರೀನಿವಾಸ್‌ಗೆ (Gubbi Srinivas) ನೋಟಿಸ್ ಜಾರಿ ಮಾಡಿದ್ದು, ಲಿಖಿತ ರೂಪದಲ್ಲಿ ‌ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ JDS ಇಬ್ಬರು ಶಾಸಕರು ಉಚ್ಚಾಟನೆ

    ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಶಾಸಕರನ್ನ ಅನರ್ಹ ಮಾಡುವಂತೆ ವಿಧಾನಸಭೆ ಕಾರ್ಯದರ್ಶಿಗಳಿಗೆ ಜೆಡಿಎಸ್ ಪಕ್ಷದಿಂದ ದೂರು ನೀಡಲಾಗಿತ್ತು. ಜೆಡಿಎಸ್ ದೂರು ಹಿನ್ನೆಲೆಯಲ್ಲಿ ವಿವರಣೆ ಕೇಳಿ ಮಾಡಿದ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರ ಅರೆ ನ್ಯಾಯಿಕ ಪ್ರಾಧಿಕಾರ ನೋಟಿಸ್ ಜಾರಿ ಮಾಡಿದೆ.

    ರಾಜ್ಯಸಭಾ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಲೇಹರ್‌ಸಿಂಗ್ ಪರ ಮತದಾನ ಮಾಡಿದ್ದಾರೆ ಎಂದು ಗುಬ್ಬಿ ಶ್ರೀನಿವಾಸ್ ವಿರುದ್ಧ ಆರೋಪಿಸಲಾಗಿತ್ತು. ಇನ್ನು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದು ಬಹಿರಂಗವಾಗಿ ಕೋಲಾರ ಶ್ರೀನಿವಾಸಗೌಡ ಹೇಳಿದ್ದರು. ಹೀಗಾಗಿ ಪಕ್ಷ ವಿರೋಧಿ ಚಟುವಟಿಕೆ ನಿಯಮದಡಿ ಇಬ್ಬರು ಶಾಸಕರ ಸದಸ್ಯತ್ವ ಅನರ್ಹತೆಗೆ ಜೆಡಿಎಸ್ ದೂರು ನೀಡಿತ್ತು. ಜೆಡಿಎಸ್ ದೂರು ವಿಚಾರ ನಡೆಸಿದ ವಿಧಾನಸಭೆ ಸಭಾಧ್ಯಕ್ಷರ ಅರೆ ನ್ಯಾಯಿಕ ಪ್ರಾಧಿಕಾರ ವಿವರಣೆ ನೀಡುವಂತೆ ಶಾಸಕರಿಗೆ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಅಡ್ಡ ಮತದಾನ: ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರಿಗೆ JDS ನಿರ್ಧಾರ

    Live Tv
    [brid partner=56869869 player=32851 video=960834 autoplay=true]

  • ಅಡ್ಡ ಮತದಾನ: ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರಿಗೆ JDS ನಿರ್ಧಾರ

    ಅಡ್ಡ ಮತದಾನ: ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ದೂರಿಗೆ JDS ನಿರ್ಧಾರ

    ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಜೆಡಿಎಸ್ ಶಾಸಕರು ಮತ್ತು ಅಡ್ಡ ಮತದಾನ ಮಾಡಿಸಿದ ಕಾಂಗ್ರೆಸ್, ಬಿಜೆಪಿ ಪಕ್ಷದ ವಿರುದ್ಧ ಜೆಡಿಎಸ್ ಪಕ್ಷದ ಸದಸ್ಯರು ಇಂದು ಪ್ರತಿಭಟನೆ ನಡೆಸಿದರು.

    ಫ್ರೀಡಂ ಪಾರ್ಕ್‍ನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮತ್ತು ಪರಾಜಿತ ಅಭ್ಯರ್ಥಿ ಕುಪೇಂದ್ರ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ವೇಳೆ 420 ಶ್ರೀನಿವಾಸರು ಅಂತ ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು. ಚಪ್ಪಲಿ ತೋರಿಸಿ ಕಿಡಿಕಾರಿದರು. ಇದೇ ವೇಳೆ ಇಬ್ಬರು ಶಾಸಕರನ್ನು ಉಚ್ಚಾಟನೆ ಮಾಡಲು ಹಾಗೂ ಪಕ್ಷಾಂತರ ನಿಷೇಧ ಕಾಯ್ದೆಯಡಿ ಸ್ಪೀಕರ್‌ಗೆ ದೂರು ನೀಡಲು ಜೆಡಿಎಸ್ ನಿರ್ಧಾರ ಮಾಡಿತು. ಇದನ್ನೂ ಓದಿ:  ಕೋವಿಡ್ ಸಮಸ್ಯೆ – ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು 

    ಪ್ರತಿಭಟನೆಯಲ್ಲಿ ಮಾತನಾಡಿದ ಇಬ್ರಾಹಿಂ, ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿಗೆ ಮತ ಹಾಕಿಸಿದ್ದಾರೆ. ತಾಕತ್ ಇದ್ದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸುರ್ಜೆವಾಲ ಇಬ್ಬರನ್ನು ಕಿತ್ತು ಹಾಕಿ ಎಂದು ಸವಾಲ್ ಹಾಕಿದರು.

    ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಡೀಲ್ ಮಾಡಿಕೊಂಡು ಕನ್ನಡಿಗರನ್ನು ಸೋಲಿಸಿದ್ದಾರೆ. ನಿಮಗೆ ಮಾನ ಮರ್ಯಾದೆ ಇದೆಯಾ. ನೀವು ಪತಿವ್ರತೆಯರಾ ಎಂದು ವ್ಯಂಗ್ಯವಾಡಿದರು.

    ಪರಾಜಿತ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಮಾತನಾಡಿ, ಕಾಂಗ್ರೆಸ್‍ನಿಂದಲೇ ಕಾಂಗ್ರೆಸ್ ದೇಶದಲ್ಲಿ ಮುಕ್ತವಾಗ್ತಿದೆ. ನನ್ನ ಸೋಲಿಗೆ ಸಿದ್ದರಾಮಯ್ಯ ಕಾರಣ. ಮನವಿ ಮಾಡಿದರು ಕಾಂಗ್ರೆಸ್ ನಾಯಕರು ಎರಡನೇ ಪ್ರಾಶಸ್ತ್ಯ ಮತಗಳನ್ನು ಕೊಟ್ಟಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಖಾಸಗಿ ಶಾಲಾ-ಕಾಲೇಜುಗಳಿಗೆ ನಮ್ಮ ಶಾಲೆಗಳು ಸ್ಪರ್ಧಿಸುವಂತೆ ಕೆಲಸ ಮಾಡುತ್ತೇವೆ: ಶ್ರೀರಾಮುಲು 

    ಪರಿಷತ್ ಸದಸ್ಯ ಶರವಣ ಮಾತನಾಡಿ, ಸಿದ್ದರಾಮಯ್ಯ ಡೀಲ್ ರಾಜ, ಡೀಲ್ ರಾಮಯ್ಯ. ಸಿದ್ದರಾಮಯ್ಯ ಸುಳ್ಳು ರಾಮಯ್ಯ. ಮಾತಾಡೋದು ಆಚಾರ ಮಾಡೋದು ಬದನೆಕಾಯಿ. ಈಗ ಬಿಜೆಪಿ ಬಿ ಟೀಂ ಸಿದ್ದರಾಮಯ್ಯ ಅಂತ ಗೊತ್ತಾಗಿದೆ. ಎಷ್ಟು ಸೂಟ್ ಕೇಸ್ ಸಿದ್ದರಾಮಯ್ಯ ಅವರಿಗೆ ಬಂದಿದೆ ಹೇಳಬೇಕು. ಜಾತ್ಯತೀತ ಪಕ್ಷ ಎಂದು ಕಾಂಗ್ರೆಸ್‍ಗೆ ಹೇಳೋಕೆ ನೈತಿಕತೆ ಇಲ್ಲ ಆಕ್ರೋಶ ಹೊರಹಾಕಿದರು.

  • ಸೋತು ಗೆದ್ದ ಸಿದ್ದರಾಮಯ್ಯ – ಬಿಜೆಪಿ 3, ಕಾಂಗ್ರೆಸ್‍ಗೆ 1 ಸ್ಥಾನ

    ಸೋತು ಗೆದ್ದ ಸಿದ್ದರಾಮಯ್ಯ – ಬಿಜೆಪಿ 3, ಕಾಂಗ್ರೆಸ್‍ಗೆ 1 ಸ್ಥಾನ

    ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯಸಭೆ ಚುನಾವಣೆ ಮುಗಿದು ಫಲಿತಾಂಶವೂ ಹೊರಬಿದ್ದಿದೆ. ನಿರೀಕ್ಷೆಯಂತೆ ಬಿಜೆಪಿ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ ಒಂದು ಸ್ಥಾನಕ್ಕೆ ತೃಪ್ತಿಪಟ್ಟಿದೆ. ಜೆಡಿಎಸ್ ಶೂನ್ಯ ಸಂಪಾದನೆ ಮಾಡಿ ಹಿನ್ನಡೆ ಅನುಭವಿಸಿದೆ.

    ಜಾತ್ಯತೀತ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಪ್ರತಿಷ್ಠೆಯ ಸಮರದಲ್ಲಿ ಅಗತ್ಯ ಸಂಖ್ಯಾಬಲ ಇಲ್ಲದಿದ್ರೂ, ನಾಲ್ಕನೇ ಸ್ಥಾನವನ್ನು ಬಿಜೆಪಿ ರಾಜಕೀಯದಾಟದ ಮೂಲಕ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಬಿಜೆಪಿಯ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್, ಕಾಂಗ್ರೆಸ್‍ನ ಜೈರಾಮ್‌ ರಮೇಶ್ ಮೊದಲ ಪ್ರಾಶಸ್ತ್ಯದ ಮತಗಳಿಂದ, ಬಿಜೆಪಿ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಮೊದಲ ಮತ್ತು ಎರಡನೇ ಪ್ರಾಶಸ್ತ್ಯದ ಮತಗಳಿಂದ ಸುಲಭ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಪ್ರವಾದಿ ವಿರುದ್ಧ ಅವಹೇಳನ – ಕ್ರಮಕ್ಕೆ ಆಗ್ರಹಿಸಿ ದೇಶಾದ್ಯಂತ ಮುಸ್ಲಿಮರ ಪ್ರತಿಭಟನೆ, ಬುರ್ಕಾ ಧರಿಸಿ ಬೀದಿಗಿಳಿದ ಮಹಿಳೆಯರು

    ಜೆಡಿಎಸ್ ಮಣಿಸುವ ಹಠಕ್ಕೆ ಬಿದ್ದು ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಮನ್ಸೂರ್ ಖಾನ್ ಗೆಲ್ಲಿಸಿಕೊಳ್ಳಲಾಗದೇ ಮುಖಭಂಗ ಅನುಭಸಿದ್ದರೂ ಕೂಡ ತಮ್ಮ ಗೇಮ್ ಪ್ಲಾನ್ ಮೂಲಕ ರಾಜಕೀಯ ಚದುರಂಗದಾಟದಲ್ಲಿ ಮೇಲುಗೈ ಸಾಧಿಸಿದ್ದಾರೆ. ಚುನಾವಣೆಗೂ ಮುನ್ನ ಆತ್ಮಸಾಕ್ಷಿ ಅಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ ಒಂದರ್ಥದಲ್ಲಿ ಗೆದ್ದು ಬೀಗಿದ್ದಾರೆ. ಇದನ್ನೂ ಓದಿ: ರೇವಣ್ಣಗೆ ಕ್ಲೀನ್ ಚಿಟ್ ಕೊಟ್ಟ ಚುನಾವಣಾ ಆಯೋಗ

    ಕಾಂಗ್ರೆಸ್ಸಿನ ಎರಡನೇ ಅಭ್ಯರ್ಥಿ ಮನ್ಸೂರ್ ಖಾನ್ ಗೆಲ್ಲದಿದ್ದರೂ, ಜೆಡಿಎಸ್ ಮತಗಳನ್ನು ವಿಭಜನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನೆಲ್ಲ ಮತಗಳನ್ನು ಉಳಿಸಿಕೊಂಡಿದೆ. ಹೆಚ್ಚುವರಿ ಮತಗಳು ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ, ಜೆಡಿಎಸ್‍ನಿಂದ ಅಮಾನತಾದ ಶಾಸಕ ಶ್ರೀನಿವಾಸಗೌಡ ರೂಪದಲ್ಲಿ ಬಂದಿದೆ. ಆದ್ರೆ, ಎರಡನೇ ಅಭ್ಯರ್ಥಿಯನ್ನು ಮಾತ್ರ ಕಾಂಗ್ರೆಸ್‍ಗೆ ಗೆಲ್ಲಿಸಿಕೊಳ್ಳಲು ಆಗಲಿಲ್ಲ.

  • ಕಾಂಗ್ರೆಸ್, ಜೆಡಿಎಸ್ ಗೆಲ್ಲುವುದಕ್ಕೆ ಚಾನ್ಸ್ ಇಲ್ಲ: ಆರ್. ಅಶೋಕ್

    ಕಾಂಗ್ರೆಸ್, ಜೆಡಿಎಸ್ ಗೆಲ್ಲುವುದಕ್ಕೆ ಚಾನ್ಸ್ ಇಲ್ಲ: ಆರ್. ಅಶೋಕ್

    ಬೆಂಗಳೂರು: ನಮ್ಮ ಅಭ್ಯರ್ಥಿಗೆ ಬಹುಮತ ಇದೆ. ಅವರು ಗೆದ್ದೆ ಗೆಲ್ಲುತ್ತಾರೆ. ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಗೆಲ್ಲುವ ಚಾನ್ಸ್ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

    ಆರ್.ಟಿ. ನಗರದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಅಶೋಕ್ ಅವರು, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಈ ಬಾರಿ ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆದ್ದೆ ಗೆಲ್ಲುತ್ತಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಗೆಲ್ಲುವುದಕ್ಕೆ ಅವಕಾಶವೇ ಇಲ್ಲ. ಆದರೂ ಸುಮ್ಮನೆ ನಾಟಕವಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಜೊತೆ ಡೀಲ್, ಸಿದ್ದರಾಮಯ್ಯ ಬಣ್ಣ ಬಯಲಾಯ್ತು: ಹೆಚ್‌ಡಿಕೆ ಬಾಂಬ್

    bjP

    ನಮ್ಮಲ್ಲಿ ಅಡ್ಡ ಮತದಾನ ಯಾವುದೇ ಕಾರಣಕ್ಕೂ ಆಗುವುದಿಲ್ಲ. ಬಿಜೆಪಿ ಹೈಕಮಾಂಡ್ ತುಂಬಾ ಸ್ಟ್ರಾಂಗ್ ಇದೆ. ಜೆಡಿಎಸ್ ಮತ್ತು ಕಾಂಗ್ರೆಸ್‍ನಲ್ಲಿ ಆತ್ಮ ಬೇರೆ ಸಾಕ್ಷಿ ಬೇರೆ ಆಗಿದೆ. ನಮ್ಮಲ್ಲಿ ಎರಡನೇ ಪ್ರಶಾಸ್ತದ 90 ಮತಗಳಿವೆ. ನಾವು ಗೆದ್ದೆ ಗೆಲ್ಲುತ್ತೇವೆ. ನಮ್ಮ ಮೂರನೇ ಅಭ್ಯರ್ಥಿಯೂ ಸಹ ಗೆದ್ದೆ ಗೆಲ್ಲುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಕಚೇರಿಗೆ ಸಿಟಿ ರವಿ!

  • ಕೈ ಶಾಸಕರನ್ನು ಸೆಳೆಯದಂತೆ ಇಂಟರ್‌ನೆಟ್ ಸೇವೆಯನ್ನೇ ಸ್ಥಗಿತಗೊಳಿಸಿದ ರಾಜಸ್ಥಾನ

    ಕೈ ಶಾಸಕರನ್ನು ಸೆಳೆಯದಂತೆ ಇಂಟರ್‌ನೆಟ್ ಸೇವೆಯನ್ನೇ ಸ್ಥಗಿತಗೊಳಿಸಿದ ರಾಜಸ್ಥಾನ

    ಜೈಪುರ: ಕೊನೆ ಕ್ಷಣದಲ್ಲಿ ಬಿಜೆಪಿ ತನ್ನ ಶಾಸಕರನ್ನು ಸೆಳೆಯಬಹುದು ಎಂಬ ಭೀತಿಯಿಂದ ರಾಜಸ್ಥಾನ ಸರ್ಕಾರ ಜೈಪುರ ಜಿಲ್ಲೆಯ ಅಮೇರ್ ಪ್ರದೇಶದಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ.

    ಉದಯಪುರದಿಂದ ಹಿಂದಿರುಗಿದ ನಂತರ ಕೆಲ ಕಾಂಗ್ರೆಸ್ ಶಾಸಕರು ಗುರುವಾರ ರಾತ್ರಿ 9 ಗಂಟೆಯಿಂದ ಶುಕ್ರವಾರ ಬೆಳಗ್ಗೆ 9 ಗಂಟೆಯವರೆಗೆ ಜೈಪುರದ ಅಮೇರ್ ಪ್ರದೇಶದಲ್ಲಿ ತಂಗಿದ್ದಾರೆ. ಹೀಗಾಗಿ ಗುರುವಾರ ರಾತ್ರಿ 9 ಗಂಟೆಯಿಂದ ಶುಕ್ರವಾರ ಬೆಳಗ್ಗೆ 9 ಗಂಟೆಯವರೆಗೆ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಗೋಲ್ಡೀ ಬ್ರಾರ್‌ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ – ಸಿಧು ಹತ್ಯೆ ಕೇಸ್‌ನಲ್ಲಿ ಅಲ್ಲ

    ಶುಕ್ರವಾರ ಸಂಸತ್ತಿನ ಮೇಲ್ಮನೆಗೆ ಮತದಾನ ನಡೆಯಲಿದೆ. ಹೀಗಾಗಿ ಎಲ್ಲಾ ಕಾಂಗ್ರೆಸ್ ಶಾಸಕರನ್ನು ಅಮೇರ್ ಪ್ರದೇಶದ ಹೋಟೆಲ್ ಲೀಲಾಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಧ್ವನಿ ಕರೆಗಳು ಮತ್ತು ಬ್ರಾಡ್‍ಬ್ಯಾಂಡ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿಲ್ಲ ಎಂದು ತಿಳಿಸಿದ್ದಾರೆ.

    ಶುಕ್ರವಾರ ನಡೆಯಲಿರುವ ರಾಜ್ಯಸಭಾ ಚುನಾವಣೆ ಮತದಾನಕ್ಕೂ ಮುನ್ನ ರಾಜಸ್ಥಾನದ ಕಾಂಗ್ರೆಸ್ ಶಾಸಕರನ್ನು ಉದಯಪುರದಿಂದ ಜೈಪುರಕ್ಕೆ ಸ್ಥಳಾಂತರಿಸಲಾಯಿತು ಮತ್ತು ಸಂಸತ್ತಿನ ಮೇಲ್ಮನೆಯಲ್ಲಿ ಮೂರು ಸ್ಥಾನಗಳನ್ನು ಪಡೆಯಲು ಕಾಂಗ್ರೆಸ್ ಸರ್ಕಸ್ ನಡೆಸುತ್ತಿದೆ.

    ಬಲಾಬಲ ಹೇಗಿದೆ?
    ವಿಧಾನಸಭೆಯಲ್ಲಿ ಕಾಂಗ್ರೆಸ್ 108 ಶಾಸಕರ ಬಲವನ್ನು ಹೊಂದಿದ್ದು ನಾಲ್ಕು ಸ್ಥಾನಗಳ ಪೈಕಿ ಎರಡನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಅಭ್ಯರ್ಥಿ ಗೆಲ್ಲಲು 41 ಮತಗಳ ಅಗತ್ಯವಿದ್ದು 26 ಹೆಚ್ಚುವರಿ ಮತಗಳಿದ್ದು 3ನೇ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು 15 ಮತಗಳ ಕೊರತೆಯಿದೆ. ಇದನ್ನೂ ಓದಿ: ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ – ಬಿಎಸ್‍ವೈ ಆಪ್ತ ಎದುರೇ ಕಲ್ಲುತೂರಾಟ

    ಬಿಜೆಪಿ 71 ಶಾಸಕರ ಬಲವನ್ನು ಹೊಂದಿದ್ದು 1 ಸ್ಥಾನವನ್ನು ಸುಲಭವಾಗಿ ಗೆಲ್ಲಲಿದೆ. ನಂತರ 30 ಹೆಚ್ಚುವರಿ ಮತಗಳಿವೆ. ಹೀಗಾಗಿ ಅಡ್ಡ ಮತದಾನ ಭೀತಿ ಕಾಂಗ್ರೆಸ್ಸಿಗಿದೆ. 13 ಪಕ್ಷೇತರ ಶಾಸಕರ ಪೈಕಿ 10 ಮಂದಿ ಜೊತೆ ಸಿಎಂ ಗೆಹ್ಲೋಟ್ ಮಾತನಾಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.

  • ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ – ಬಿಎಸ್‍ವೈ ಆಪ್ತ ಎದುರೇ ಕಲ್ಲುತೂರಾಟ

    ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ – ಬಿಎಸ್‍ವೈ ಆಪ್ತ ಎದುರೇ ಕಲ್ಲುತೂರಾಟ

    ಹಾಸನ: ರಾಜ್ಯಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಫೈಟ್ ನಡೆಯುತ್ತಿದೆ. ಅತ್ತ ಹಾಸನದ ಅರಸೀಕೆರೆಯಲ್ಲಿ ಜೆಡಿಎಸ್, ಬಿಜೆಪಿ ಬೆಂಬಲಿತ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

    ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಅಮ್ಮನಹಟ್ಟಿ ಗ್ರಾಮದಲ್ಲಿ ರಾಜಕೀಯ ವೈಷಮ್ಯದಿಂದಾಗಿ ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಜೆಡಿಎಸ್ ಬೆಂಬಲಿಗರ ಗುಂಪಿನಿಂದ ಬಿಜೆಪಿ ಬೆಂಬಲಿತ ಗುಂಪಿನ ಮನೆಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಬಿಜೆಪಿ ಪ್ಲ್ಯಾನ್‌ ಏನು?

    ಬಿಜೆಪಿ ಮುಖಂಡ ಸಿಎಂ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಸಮ್ಮುಖದಲ್ಲೇ ಎರಡು ಗುಂಪುಗಳು ಕಿತ್ತಾಟ ನಡೆಸಿದ್ದು, ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಲವರನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಇದನ್ನೂ ಓದಿ: ಸಿದ್ದು-ಎಚ್‌ಡಿಕೆ ಪ್ರತಿಷ್ಠೆಯಲ್ಲಿ ಮೈತ್ರಿ ಅನುಮಾನ – ಜೆಡಿಎಸ್‌ ಮುಂದಿರುವ ಆಯ್ಕೆಗಳೇನು?

  • ಯಾರಾದ್ರೂ ಮೋಸ ಮಾಡಿದ್ರೆ ಹುಷಾರ್ – ಕೈ ಶಾಸಕರಿಗೆ ಡಿಕೆಶಿ ವಾರ್ನ್

    ಯಾರಾದ್ರೂ ಮೋಸ ಮಾಡಿದ್ರೆ ಹುಷಾರ್ – ಕೈ ಶಾಸಕರಿಗೆ ಡಿಕೆಶಿ ವಾರ್ನ್

    ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಕೌಂಟ್‍ಡೌನ್ ಶುರುವಾಗಿದೆ. ಈ ನಡುವೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮ್ಮ ಶಾಸಕರಿಗೆ ಅಡ್ಡ ಮತದಾನ ಮಾಡದಂತೆ ವಾರ್ನಿಂಗ್ ಕೊಟ್ಟಿದ್ದಾರೆ.

    ರಾಜ್ಯಸಭೆ ಚುನಾವಣೆ ಹಿನ್ನೆಲೆ ಸಿಎಲ್‍ಪಿ ಸಭೆ ನಡೆಸಿದ ಅವರು, ತಮ್ಮ ಪಕ್ಷದ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ. ಅಡ್ಡ ಮತದಾನ ಆಗಬಾರದು. ಒಂದೇ ಒಂದು ಮತ ಅಡ್ಡಮತದಾನವಾದರೂ ಹುಷಾರ್.. ನಾನು ಬದುಕಿರುವವರೆಗೂ ನಿಮಗೆ `ಬಿ ಫಾರಂ’ ಸಿಗದಂತೆ ನೋಡಿಕೊಳ್ಳುತ್ತೇನೆ. ಯಾರು ಅಡ್ಡ ಮತದಾನ ಮಾಡುತ್ತಾರೋ ಅವರ ರಾಜಕೀಯ ಭವಿಷ್ಯ ಮುಂದೆ ಕಷ್ಟವಾಗಲಿದೆ ಎಂದಿದ್ದಾರೆ. ಇದನ್ನೂ ಓದಿ: ದೇವೇಗೌಡರ ಕುಟುಂಬದರಿಗೆ ಸಾಲ ಕೊಟ್ಟಿರುವ ಕುಪೇಂದ್ರ : ಪಟ್ಟಿಯಲ್ಲಿ ದಾಖಲು

    Congress

    ಪಕ್ಷದ ಅಧಿಕೃತ ಏಜೆಂಟ್ ಆಗಿ ಡಿಕೆಶಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ, ಕಾಂಗ್ರೆಸ್‍ನ ಪ್ರತಿ ಶಾಸಕರು ಸಹ ಡಿ.ಕೆ.ಶಿವಕುಮಾರ್‌ಗೆ ಮತ ಪತ್ರ ತೋರಿಸಿಯೇ ಮತದಾನ ಮಾಡಬೇಕಾಗಿದೆ. ಇದನ್ನೂ ಓದಿ: ರಾಜ್ಯಸಭೆ ಚುನಾವಣೆಗೆ ಮತದಾನ – ಯಾರ ಪಾಲಾಗಲಿದೆ ನಾಲ್ಕನೇ ಸ್ಥಾನ?

  • ರಾಜ್ಯಸಭೆ ಚುನಾವಣೆ ಫೈಟ್: ಗುರು, ಶಿಷ್ಯರ ಕಾಳಗದಲ್ಲಿ ಗೆದ್ದು ಬೀಗಿದ ಸಿದ್ದರಾಮಯ್ಯ – ಹೆಚ್‍ಡಿಡಿಗೆ ಹಿನ್ನಡೆ

    ರಾಜ್ಯಸಭೆ ಚುನಾವಣೆ ಫೈಟ್: ಗುರು, ಶಿಷ್ಯರ ಕಾಳಗದಲ್ಲಿ ಗೆದ್ದು ಬೀಗಿದ ಸಿದ್ದರಾಮಯ್ಯ – ಹೆಚ್‍ಡಿಡಿಗೆ ಹಿನ್ನಡೆ

    ನವದೆಹಲಿ: ರಾಜ್ಯದಲ್ಲಿ ರಾಜ್ಯಸಭೆ ಚುನಾವಣೆ ಕಾವು ಜೋರಾಗುತ್ತಿದ್ದು, ಕಾಂಗ್ರೆಸ್‍ನ ಎರಡನೇ ಅಭ್ಯರ್ಥಿ ಹಿಂದೆ ಸರಿಸುವ ಪ್ರಯತ್ನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಹಿನ್ನಡೆಯಾಗಿದೆ. ಎರಡನೇ ಅಭ್ಯರ್ಥಿಯನ್ನು ಹಿಂದೆ ಸರಿಸುವ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿದೆ.

    ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕಾಗಿ ಮೂರು ಪಕ್ಷಗಳ ನಡುವೆ ಬಾರಿ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸದರೆ, ಜೆಡಿಎಸ್‍ನ ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಡದ ಮೇರೆಗೆ ಹೈಕಮಾಂಡ್ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಿತ್ತು. ಇದನ್ನೂ ಓದಿ:  ಉಪಚುನಾವಣೆ: ಉತ್ತರಾಖಂಡ್ ಸಿಎಂಗೆ ಧಾಮಿಗೆ ಭರ್ಜರಿ ಗೆಲುವು

    SIDDARAMAIAH

    ಮನ್ಸೂರ್ ಅಲಿ ಖಾನ್ ಸ್ಪರ್ಧೆಯಿಂದ ತನ್ನ ಪಾಲಿಗೆ ಬರಬಹುದಾದ ಒಂದು ಸ್ಥಾನವನ್ನು ಕಳೆದುಕೊಳ್ಳುವ ಭೀತಿಯಲ್ಲಿ ಜೆಡಿಎಸ್ ಇದ್ದು, ಈ ಹಿನ್ನೆಲೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಜೊತೆಗೆ ಹೆಚ್.ಡಿ ದೇವೇಗೌಡ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದರು. ಇತ್ತ ದೆಹಲಿಯಲ್ಲಿ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮೂಲಕ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಬೆಂಬಲಕ್ಕೆ ಮನವಿ ಮಾಡಿದರು.

    ಇದಕ್ಕೆ ಉತ್ತರಿಸಿರುವ ಸೋನಿಯಾಗಾಂಧಿ ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ, ಸ್ಥಳೀಯ ನಾಯಕರು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಏನೇ ಮಾತುಕತೆ ಇದ್ದರೂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಉಸ್ತುವಾರಿ ರಣದೀಪ್ ಸುರ್ಜೆವಾಲ ಜೊತೆಗೆ ನಡೆಸಿ ಎಂದು ಸೋನಿಯಾಗಾಂಧಿ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ:  ಸೋನಿಯಾ ಗಾಂಧಿ ಬಳಿಕ ಪ್ರಿಯಾಂಕಾ ಗಾಂಧಿಗೂ ಕೊರೊನಾ

    ಎರಡನೇ ಅಭ್ಯರ್ಥಿಯನ್ನು ಹಿಂದೆ ಪಡೆಯುವ ಪ್ರಶ್ನೆ ಇಲ್ಲ, ಜೆಡಿಎಸ್ ಜೊತೆಗೆ ಹೊಂದಾಣಿಕೆಯ ಮಾತೇ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ಜೊತೆಗೆ ಮೈತ್ರಿ ಇಲ್ಲ ಎಂದಿದ್ದರು. ಆದರೆ ಹೆಚ್.ಡಿ ದೇವೇಗೌಡರು ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆಸುವ ಪ್ರಯತ್ನ ನಡೆಸಿದ್ದರು.

    KUMARASWAMY

    ಹೈಕಮಾಂಡ್‍ನ ಈ ನಿರ್ಧಾರದಿಂದ ಹೆಚ್.ಡಿ ದೇವೇಗೌಡರಿಗೆ ಭಾರೀ ಮುಖಭಂಗವಾಗಿದ್ದು, ಮಾಜಿ ಗುರು – ಶಿಷ್ಯರ ರಾಜಕೀಯ ಯುದ್ಧದಲ್ಲಿ ಶಿಷ್ಯ ಸಿದ್ದರಾಮಯ್ಯ ಗೆದ್ದು ಬೀಗುವಂತಾಗಿದೆ. ಜೂನ್ 10 ರಂದು ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಇಂದು ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನವಾಗಿದೆ.

  • ರಾಜ್ಯಸಭೆ ಚುನಾವಣೆ- ಕರ್ನಾಟಕ ಉಸ್ತುವಾರಿಯಾಗಿ ಕಿಶನ್ ರೆಡ್ಡಿ ನೇಮಕ

    ರಾಜ್ಯಸಭೆ ಚುನಾವಣೆ- ಕರ್ನಾಟಕ ಉಸ್ತುವಾರಿಯಾಗಿ ಕಿಶನ್ ರೆಡ್ಡಿ ನೇಮಕ

    ನವದೆಹಲಿ: ಜೂನ್ 10ರಂದು ರಾಜ್ಯಸಭಾ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಮಧ್ಯೆ ಬಿಜೆಪಿ ಆಯಾ ರಾಜ್ಯಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಿದೆ.

    ಕರ್ನಾಟಕದ ಉಸ್ತುವಾರಿಯಾಗಿ ಕೇಂದ್ರ ಸಚಿವ ಕೆ.ಕಿಶನ್ ರೆಡ್ಡಿ ಅವರನ್ನು ನೇಮಿಸಲಾಗಿದೆ. ರಾಜಸ್ಥಾನಕ್ಕೆ ನರೇಂದ್ರ ಸಿಂಗ್ ತೋಮರ್, ಹರಿಯಾಣಕ್ಕೆ ಗಜೇಂದ್ರ ಸಿಂಗ್ ಶೇಖಾವತ್ ಹಾಗೂ ಮಹಾರಾಷ್ಟ್ರ ಉಸ್ತುವಾರಿಯಾಗಿ ಅಶ್ವಿನಿ ವೈಷ್ಣವ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

    ಚುನಾವಣೆಯ ದಿನ ಹತ್ತಿರವಾಗುತ್ತಿದ್ದಂತೆಯೇ ಶಾಸಕರ ಕುದುರೆ ವ್ಯಾಪಾರದ ಭೀತಿ ಎದುರಾಗಿದೆ. ಹರಿಯಾಣದಲ್ಲಿ ಕಾಂಗ್ರೆಸ್ ತನ್ನ ಶಾಸಕರನ್ನು ರೆಸಾರ್ಟ್‍ಗೆ ಕಳುಹಿಸಲು ಮುಂದಾಗಿದೆ. ಛತ್ತೀಸ್ ಗಢದಲ್ಲಿ ಈಗಾಗಲೇ ರೂಮ್‍ಗಳು ಸಹ ಬುಕ್ ಆಗಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ನಮಗೆ ಬೆಂಬಲ ನೀಡಿ – ಸಿದ್ದು ಬಳಿ JDS ನಾಯಕರ ಮನವಿ

    ಜೂ.10ರಂದು ನಡೆಯುವ ರಾಜ್ಯಸಭೆ ಚುನಾವಣೆಗೆ ಹರಿಯಾಣದಿಂದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಕೇನ್ ಸ್ಪರ್ಧಿಸಿದ್ದಾರೆ. ಪಕ್ಷವು ರಾಜ್ಯದ ಹೊರಗಿನವರನ್ನು ಕಣಕ್ಕಿಳಿಸಿರುವ ಕಾರಣ ಅತೃಪ್ತಿ ಉಂಟಾಗಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಸಕರ ಕುದುರೆ ವ್ಯಾಪಾರದ ಆತಂಕವೂ ಕಾಂಗ್ರೆಸ್‍ಗೆ ಕಾಡುತ್ತಿದೆ. ಹೀಗಾಗಿ ಗುರುವಾರ ಛತ್ತೀಸ್‍ಗಢದ ರೆಸಾರ್ಟ್ ನಲ್ಲಿ ರೂಮ್ ಬುಕ್ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.