Tag: ರಾಜ್ಯಸಭಾ ಸದಸ್ಯ

  • ಅಸ್ತಿತ್ವ ಉಳಿಸಿಕೊಳ್ಳಲು ರಾಜ್ಯಸಭಾ ಸ್ಥಾನಕ್ಕೆ ಬೇಡಿಕೆ ಇಟ್ಟರಾ ಶ್ರೀರಾಮುಲು?

    ಅಸ್ತಿತ್ವ ಉಳಿಸಿಕೊಳ್ಳಲು ರಾಜ್ಯಸಭಾ ಸ್ಥಾನಕ್ಕೆ ಬೇಡಿಕೆ ಇಟ್ಟರಾ ಶ್ರೀರಾಮುಲು?

    – ಆಂಧ್ರದಿಂದ ರಾಜ್ಯಸಭಾ ಸದಸ್ಯರನ್ನಾಗಿ ಮಾಡುವಂತೆ ರಾಜ್ಯ ನಾಯಕರ ಮೂಲಕ ಸಂದೇಶ

    ಬಳ್ಳಾರಿ: ಬಿಜೆಪಿ ನಾಯಕರ ಮೇಲೆ ಮುನಿಸಿಕೊಂಡರೋ ಶ್ರೀರಾಮುಲು ಅವರನ್ನ ಸಮಾಧಾನ ಮಾಡಲು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಸರ್ಕಸ್ ಮಾಡ್ತಿದ್ದಾರೆ. ಈ ನಡುವೆ ಶ್ರೀರಾಮುಲು (Sriramulu) ಇದೀಗ ಹೊಸ ವರಸೆ ಶುರು ಮಾಡಿದ್ದು, ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

    ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಎಷ್ಟೇ ಕರೆ ಮಾಡಿ ಕರೆದರೂ ಪಕ್ಷದ ನಾಯಕರಿಂದ ಶ್ರೀರಾಮುಲು ದೂರವೇ ಉಳಿಯುತ್ತಿದ್ದಾರೆ. ಸದ್ಯ ಪಕ್ಷದಲ್ಲಿ ಯಾವುದೇ ಹುದ್ದೇ ಇಲ್ಲ, ವಿಧಾನಸಭೆ ಮತ್ತು ಲೋಕಸಭೆ ಎರಡರಲ್ಲೂ ಸೋತಿರೋ ಶ್ರೀರಾಮುಲು‌, ಜೆ.ಪಿ ನಡ್ಡಾ (JP Nadda), ಅಮಿತ್ ಶಾ (Amit Shah) ದೆಹಲಿಗೆ ಬರುವಂತೆ ಸೂಚನೆ ನೀಡಿದ ಹಿನ್ನೆಲೆ ದೆಹಲಿ ಚುನಾವಣೆ ಮುಗಿದ ಬಳಿಕ ಹೈಕಮಾಂಡ್‌ ಭೇಟಿಯಾಗಲು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ನಿಮ್ಮ ಬೆಂಬಲದಿಂದ ಸವಾಲುಗಳನ್ನು ಎದುರಿಸುವ ಹುಮ್ಮಸ್ಸು ನೀಡಿದೆ- ಫ್ಯಾನ್ಸ್‌ಗೆ ಸುದೀಪ್‌ ಥ್ಯಾಂಕ್ಸ್

    ಅಸ್ತಿತ್ವದ ಪ್ರಶ್ನೆ ಹಾಗೂ ಅಸ್ತಿತ್ವದ ಉಳಿವಿನ ಹೊರಾಟದಲ್ಲಿರುವ ರಾಮುಲುರಿಂದ ರಾಜ್ಯ ಸಭಾಸದಸ್ಯರನ್ನಾಗಿ ಮಾಡುವಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಮತ್ತೊಮ್ಮೆ ಸಕ್ರಿಯರಾಗಿ ಪಕ್ಷ ಕಟ್ಟಲು, ತಮ್ಮನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡುವಂತೆ ಬೇಡಿಕೆ ಇಡಲಿದ್ದಾರೆ. ಮೊನ್ನೆ ಆಂಧ್ರದ ರಾಜ್ಯಸಭೆ ಸದಸ್ಯ ವೈಎಸ್ಆರ್‌ಪಿ ಪಕ್ಷದ ವಿಜಯ ಸಾಯಿರೆಡ್ಡಿ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: Economic Survey 2025| ಜಿಡಿಪಿ 6.3-6.8% ನಿರೀಕ್ಷೆ – ಆರ್ಥಿಕ ಸಮೀಕ್ಷೆಯಲ್ಲಿ ಏನಿದೆ? ಯಾವ ವಲಯದ ಸಾಧನೆ ಎಷ್ಟಿದೆ?

    ವಿಜಯ ಸಾಯಿ ರೆಡ್ಡಿಯವರ 4 ವರ್ಷದ ಅವಧಿ ಇನ್ನೂ ಬಾಕಿ ಇರೋ ಹಿನ್ನೆಲೆ ಆಂಧ್ರ ಕೋಟಾದಡಿ ರಾಜ್ಯಸಭೆ ಮಾಡುವಂತೆ ಮನವಿ ಮಾಡಲಿದ್ದಾರಂತೆ. ಈ ಬಗ್ಗೆ ಸೂಕ್ಷ್ಮವಾಗಿ ರಾಜ್ಯ ಮುಖಂಡ ಮೂಲಕ ಸಂದೇಶ ನೀಡಿರುವ ರಾಮುಲು, ದೆಹಲಿ ಭೇಟಿ ವೇಳೆ ಈ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: Maha Kumbh Mela| ಸನ್ಯಾಸಿನಿಯಾಗಲು ಹೊರಟ ಮಮತಾ ಕುಲಕರ್ಣಿ ಅಖಾಡದಿಂದಲೇ ಔಟ್‌

  • MLC ಆಗಬೇಕೆಂದು ಪ್ರಯತ್ನಿಸಿದ್ದೆ, ಆದ್ರೆ ರಾಯರು ರಾಜ್ಯಸಭಾ ಸದಸ್ಯ ಸ್ಥಾನ ಕೊಟ್ಟಿದ್ದಾರೆ: ನಟ ಜಗ್ಗೇಶ್

    MLC ಆಗಬೇಕೆಂದು ಪ್ರಯತ್ನಿಸಿದ್ದೆ, ಆದ್ರೆ ರಾಯರು ರಾಜ್ಯಸಭಾ ಸದಸ್ಯ ಸ್ಥಾನ ಕೊಟ್ಟಿದ್ದಾರೆ: ನಟ ಜಗ್ಗೇಶ್

    ರಾಯಚೂರು: ಶ್ರಮವಿಲ್ಲದೆ, ಕಷ್ಟಪಡದೆ, ಸುಖವಾಗಿ ನಿಂತು ನನಗಿದು ಕೊಡಿ ಎಂದರೆ ರಾಯರು ಕೊಡಲ್ಲ. ಶ್ರಮಜೀವಿಗಳಿಗೆ, ಜೀವನ ಅರ್ಥಮಾಡಿಕೊಂಡವರಿಗೆ ರಾಯರು ಎಲ್ಲಾ ಕೊಡುತ್ತಾರೆ. ಎಂಎಲ್‌ಸಿ (MLC) ಆಗಬೇಕು ಅಂತ ಕೇಳಿಕೊಂಡಿದ್ದೆ. ಆದರೆ ರಾಜ್ಯಸಭಾ ಸದಸ್ಯ (Rajya Sabha Member) ಸ್ಥಾನ ರಾಯರು ಕೊಟ್ಟಿದ್ದಾರೆ ಎಂದು ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ (Jaggesh) ಹೇಳಿದ್ದಾರೆ.

    ಮಂತ್ರಾಲಯದಲ್ಲಿ (Mantralayam) ಗುರುವೈಭವೋತ್ಸವ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಜಗ್ಗೇಶ್, ಸಿಎಂ ಬೊಮ್ಮಾಯಿ, ಸಚಿವ ಶ್ರೀರಾಮುಲು, ಅಶ್ವಥ್ ನಾರಾಯಣ್ ಎಲ್ಲರಿಗೂ ಕೇಳಿದ್ದೆ. ಆದರೆ ಎಂಎಲ್‌ಸಿ ಆಗಲಿಲ್ಲ. ಅಚ್ಚರಿ ರೂಪದಲ್ಲಿ ವಾಟ್ಸಪ್ ಕಾಲ್ ಬಂತು, ರಾಜ್ಯಸಭಾ ಸದಸ್ಯನಾದೆ. ಪದವಿ ಮುಖ್ಯವಲ್ಲ. ಅದು ಬರುತ್ತದೆ, ಹೋಗುತ್ತದೆ ಆದರೆ ನಂಬಿಕೆ ಮುಖ್ಯ ಎಂದರು.

    ಯಾವುದೇ ರಾಷ್ಟ್ರ ಪ್ರಶಸ್ತಿಗಿಂತಲೂ ದೊಡ್ಡ ಪ್ರಶಸ್ತಿಯನ್ನು ಮಂತ್ರಾಲಯದಲ್ಲಿ ಪಡೆದ ಅನುಭವವಾಗಿದೆ. ಇದು ಪ್ರಶಸ್ತಿಯಲ್ಲ, ರಾಯರ ಆಶಿರ್ವಾದ. ಈ ತಿರುಕನ ಕನಸನ್ನು ರಾಯರು ನನಸು ಮಾಡಿದ್ದಾರೆ. ನಾನು ನನ್ನ ಪತ್ನಿಯನ್ನು ಪಡೆಯಲು ರಾಯರ ಆಶಿರ್ವಾದವೇ ಕಾರಣ ಎಂದು ಹೇಳಿದ ಜಗ್ಗೇಶ್ ತಮ್ಮ ಲವ್ ಸ್ಟೋರಿ ಹಾಗೂ ಪಟ್ಟ ಕಷ್ಟಗಳನ್ನು ಮೆಲುಕು ಹಾಕಿದರು.

    ಲವ್ ಮ್ಯಾರೇಜ್‌ಗೆ ಮನೆಯಲ್ಲಿ ವಿರೋಧವಿದ್ದಾಗ ಮಂತ್ರಾಲಯಕ್ಕೆ ಬಂದು ಆಶ್ರಯ ಪಡೆದಿದ್ದೆವು. ರಾಯರಲ್ಲಿ ವೃತ್ತಿ ಹಾಗೂ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬೇಡಿಕೊಂಡಿದ್ದೆ. ರಾಯರಲ್ಲಿ ಬೇಡಿಕೊಂಡಂತೆ ಮಕ್ಕಳಿಗೆ ಗುರುರಾಜ್, ಯತಿರಾಜ್ ಎಂಬ ಹೆಸರು ಇಟ್ಟಿದ್ದೇನೆ ಎಂದರು. ಇದನ್ನೂ ಓದಿ: ನಟ ಉಪೇಂದ್ರ ಪಕ್ಷಕ್ಕೆ ಅಧಿಕೃತ ಚಿಹ್ನೆ ನೀಡಿದ ಚುನಾವಣಾ ಆಯೋಗ

    ರಾಯರು ನಾನು ಬದುಕಿರುವವರೆಗೆ ನನ್ನ ಜೊತೆ ಇರಬೇಕು ಅಂತ ಅವರ ಹಸ್ತಾಕ್ಷರ ಮೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದೇನೆ ಎಂದು ಶರ್ಟ್ ಎತ್ತಿ ಜನರಿಗೆ ಮೈಮೇಲಿನ ಹಚ್ಚೆಯನ್ನು ತೋರಿಸಿದರು.

    ಮಂತ್ರಾಲಯಕ್ಕೆ ಏರೋಡ್ರಮ್ ತರುವುದು ನನ್ನ ಆಸೆ. ಅದು ಶೀಘ್ರದಲ್ಲಿ ಬರುವಂತೆ ಪ್ರಯತ್ನ ಮಾಡುತ್ತೇನೆ. ಮಂತ್ರಾಲಯಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಏರೋಡ್ರಮ್ ಅವಶ್ಯಕತೆಯಿದೆ. ಆಂಧ್ರಪ್ರದೇಶದ ಸಿಎಂ ಜೊತೆ ಮಾತುಕತೆ ಮಾಡುತ್ತಿದ್ದೇವೆ. ನಮ್ಮ ಮುಖ್ಯಮಂತ್ರಿಗಳು ಸಹ ಕೈಜೊಡಿಸಬೇಕು. ಯಡಿಯೂರಪ್ಪನವರು ಅನನ್ಯವಾದ ರಾಯರ ಭಕ್ತರು. ಎಲ್ಲರ ಪ್ರಯತ್ನದಿಂದ ಮಂತ್ರಾಲಯಕ್ಕೆ ಏರೋಡ್ರಮ್ ತರುತ್ತೇವೆ ಎಂದು ಜಗ್ಗೇಶ್ ಹೇಳಿದರು. ಇದನ್ನೂ ಓದಿ: ಕೈ ಟಿಕೆಟ್‌ ಆಕಾಂಕ್ಷಿಯ ಮೇಲೆ ಹಣದ ಮಳೆ ಸುರಿದ ಅಭಿಮಾನಿಗಳು

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಸ್ ಚಾರ್ಜ್‍ಗೂ ದುಡ್ಡಿರಲಿಲ್ಲ, ಆದ್ರೀಗ ದೊಡ್ಡ ನಟನಾಗಿ, ರಾಜ್ಯಸಭಾ ಸದಸ್ಯನಾಗಿದ್ದೇನೆ: ಜಗ್ಗೇಶ್

    ಬಸ್ ಚಾರ್ಜ್‍ಗೂ ದುಡ್ಡಿರಲಿಲ್ಲ, ಆದ್ರೀಗ ದೊಡ್ಡ ನಟನಾಗಿ, ರಾಜ್ಯಸಭಾ ಸದಸ್ಯನಾಗಿದ್ದೇನೆ: ಜಗ್ಗೇಶ್

    ರಾಯಚೂರು: ಬಸ್ ಚಾರ್ಜ್‍ಗೂ 39 ರೂ. ದುಡ್ಡಿರಲಿಲ್ಲ. ಈಗ ದೊಡ್ಡ ನಟನಾಗಿ, ರಾಜ್ಯಸಭಾ ಸದಸ್ಯನಾಗಿದ್ದೇನೆ. ಅದಕ್ಕೆ ರಾಯರ ಆಶೀರ್ವಾದ ಕಾರಣ ಎಂದು ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿದ್ದಾರೆ.

    ಗುರು ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ಹಿನ್ನೆಲೆ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ಜಗ್ಗೇಶ್ ಅವರು, ಶ್ರೀಗಳ ಆಶೀರ್ವಾದ ಪಡೆದು ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಶ್ರೀಗಳ ನೇತೃತ್ವದಲ್ಲಿ ಮಠದ ಘನತೆ ಹೆಚ್ಚುತ್ತಿದೆ. ನನಗೆ ವೈಯಕ್ತಿಕವಾಗಿ ಇರುವ ದೊಡ್ಡ ಆಸೆ ಎಂದರೆ ಮಠಕ್ಕೆ ಒಂದು ಏರೋಡ್ರಮ್ ಬರಬೇಕು. ನಾವೇನು ಮಾಡುವುದಿಲ್ಲ. ರಾಯರೇ ಅದನ್ನು ಮಾಡಿಸುತ್ತಾರೆ. ರಾಯರ ಮೇಲೆ ಭಾರಹಾಕಿ ನಾನು ಈ ವಿಷಯವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೇನೆ ಅಂತ ತಿಳಿಸಿದರು. ಇದನ್ನೂ ಓದಿ: ‘ಹರ್ ಘರ್ ತಿರಂಗ’ ರ‍್ಯಾಲಿ ವೇಳೆ ಮಾಜಿ ಸಿಎಂ ನಿತಿನ್ ಪಟೇಲ್‍ಗೆ ತಿವಿದ ಹಸು

    ಅಧಿಕಾರಕ್ಕೆ ಬಂದಾಗ ಯಾರೂ ತಮ್ಮ ಕೈ ಗಲೀಜು ಮಾಡಿಕೊಳ್ಳುತ್ತಾರೋ ಅವರನ್ನು ರಾಯರೂ ಎಂದೂ ಕ್ಷಮಿಸಲ್ಲ. ಅಂತವರು ಮುಂದೆ ಬೆತ್ತಲಾಗಿ ನಿಲ್ಲಬೇಕಾಗುತ್ತದೆ. ಅದಕ್ಕೆ ಸದ್ಭಾವನೆಯಿಂದ ಕೆಲಸ ಮಾಡಬೇಕು. ಬಸ್ ಚಾರ್ಜ್‍ಗೂ 39 ರೂ. ದುಡ್ಡಿರಲಿಲ್ಲ. ಈಗ ದೊಡ್ಡ ನಟನಾಗಿ, ರಾಜ್ಯಸಭಾ ಸದಸ್ಯನಾಗಿದ್ದೇನೆ. ಅದಕ್ಕೆ ರಾಯರ ಆಶೀರ್ವಾದ ಕಾರಣ ಎಂದರು.

    ಎಷ್ಟೋ ಯೋಜನೆಗಳ ಬಗ್ಗೆ ಸರಿಯಾಗಿ ಯಾರೂ ಓದಿ ತಿಳಿದುಕೊಳ್ಳುವುದಿಲ್ಲ. ಎಷ್ಟೋ ಫಂಡ್‍ಗಳು ವಾಪಸ್ ಹೋಗಿವೆ. ಹೀಗಾಗಿ ನಮಗೆ ಯೋಜನೆಗಳ ಲಾಭ ಸಿಗುವುದಿಲ್ಲ. ಯೋಜನೆ ಬಗ್ಗೆ ಓದಿ ತಿಳಿದುಕೊಳ್ಳಬೇಕು. ನಮಗೆ ಪ್ರಹ್ಲಾದ್ ಜೋಶಿ, ಸಂತೋಷ ಜಿ ಮಾರ್ಗದರ್ಶನ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಎಣ್ಣೆ ಏಟಲ್ಲಿ ರೆಸ್ಟೋರೆಂಟ್‍ನಲ್ಲಿ ರಂಪಾಟ – ಗಗನಸಖಿ ಸೇರಿ ಮೂವರು ಅರೆಸ್ಟ್

    ಇಡೀ ವಿಶ್ವದಲ್ಲಿ ಯುದ್ಧಗಳು ನಿಲ್ಲಬೇಕು ಅಂದರೆ ಮೋದಿಯವರಂತೆ ಸಾಮರ್ಥ್ಯ ಬೇಕು. ಅಮೇರಿಕ, ರಷ್ಯಾ, ಚೀನಾ ಮೂರು ದೇಶಗಳೊಂದಿಗೆ ಮಾತನಾಡಿ ಅವರನ್ನು ಸಾತ್ವಿಕರನ್ನಾಗಿ ಮಾಡುವ ಶಕ್ತಿ ಮೋದಿಗೆ ಇದೆ. ಹರ್ ಘರ್ ತಿರಂಗದಿಂದ ಪ್ರತಿಯೊಬ್ಬರಲ್ಲೂ ದೇಶ ಭಕ್ತಿ ಬರುತ್ತದೆ. ಚಿಕ್ಕಮಕ್ಕಳು ಸಹ ಬಾವುಟ ಕೈಯಲ್ಲಿ ಹಿಡಿಯುವುದರಿಂದ ಅವರಿಗೆ ಸ್ವಾತಂತ್ರ್ಯದ ಪೂರ್ವ ತಿಳಿಯುತ್ತದೆ. ಮೇಧಾವಿಯಾದ ಮೋದಿ ರಾಷ್ಟ್ರ ಭಕ್ತಿ ಹೆಚ್ಚಿಸಲು ಈ ಯೋಚನೆ ಮಾಡಿದ್ದಾರೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ನಿಮ್ಮನ್ನು ಮತ್ತೆ ಸದನಕ್ಕೆ ಆಹ್ವಾನಿಸುತ್ತೇನೆ: ಪ್ರಧಾನಿ ಮೋದಿ

    ನಿಮ್ಮನ್ನು ಮತ್ತೆ ಸದನಕ್ಕೆ ಆಹ್ವಾನಿಸುತ್ತೇನೆ: ಪ್ರಧಾನಿ ಮೋದಿ

    ನವದೆಹಲಿ: ಸಂಸತ್ತಿನ ಸದಸ್ಯರ ಅನುಭವವು ಶೈಕ್ಷಣಿಕ ಜ್ಞಾನಕ್ಕಿಂತ ಹೆಚ್ಚು ಅಮೂಲ್ಯಯುತವಾಗಿದೆ. ನಿಮ್ಮನ್ನು ಮತ್ತೆ ಸದನಕ್ಕೆ ಬನ್ನಿ ಎಂದು ಆಹ್ವಾನಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

    ರಾಜ್ಯಸಭೆಯ 72 ಸದಸ್ಯರ ಸದಸ್ಯತ್ವ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇಂದು ರಾಜ್ಯಸಭೆಯಲ್ಲಿ ಬೀಳ್ಕೊಡುಗೆ ಮಾಡಲಾಯಿತು. ಬಳಿಕ ಮಾತನಾಡಿದ ಅವರು, ನಮ್ಮ ರಾಜ್ಯಸಭಾ ಸದಸ್ಯರಿಗೆ ಸಾಕಷ್ಟು ಅನುಭವವಿದೆ. ನಿಮ್ಮ ಅನುಭವಗಳು ರಾಷ್ಟ್ರಹಿತಕ್ಕೆ ಬಳಕೆಯಾಗಬೇಕು ಎಂದರು.

    ನಾವು ಈ ಸಂಸತ್ತಿನಲ್ಲಿ ಬಹಳ ಸಮಯ ಕಳೆದಿದ್ದೇವೆ. ಈ ಸದನವು ನಮ್ಮ ಜೀವನಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದೆ. ನಾವು ಸಹಿತ ಸಂಸತ್‍ಗೆ ಕೊಡುಗೆಯನ್ನು ನೀಡಿದ್ದೇವೆ. ಈ ಸದನದ ಸದಸ್ಯರಾಗಿ ಸಂಗ್ರಹಿಸಿದ ಅನುಭವವನ್ನು ದೇಶದ ನಾಲ್ಕೂ ದಿಕ್ಕುಗಳಿಗೆ ಕೊಂಡೊಯ್ಯಬೇಕು. ದೇಶವನ್ನು ಮತ್ತಷ್ಟು ಸಬಲಗೊಳಿಸಲು ನಿಮ್ಮ ಅನುಭವಗಳನ್ನು ಧಾರೆ ಎರೆಯಿರಿ ಎಂದು ಮನವಿ ಮಾಡಿದರು.

    ಲೋಕಸಭೆಗಿಂತ ರಾಜ್ಯಸಭೆ ಭಿನ್ನವಾಗಿದ್ದು, ಇದು ಶಾಶ್ವತ ಸಂಸ್ಥೆಯಾಗಿದ್ದು, ಇದನ್ನು ವಿಸರ್ಜಿಸಲಾಗುವುದಿಲ್ಲ. ಆದರೂ ಎರಡು ವರ್ಷಕ್ಕೊಮ್ಮೆ ರಾಜ್ಯಸಭೆಯಲ್ಲಿ ಮೂರನೇ ಒಂದು ಭಾಗದಷ್ಟು ಸದಸ್ಯರು ನಿವೃತ್ತಿಯನ್ನು ಹೊಂದುತ್ತಾರೆ. ಖಾಲಿಯಾದ ಸ್ಥಾನಗಳನ್ನು ಚುನಾವಣೆ ಮತ್ತು ಅಧ್ಯಕ್ಷೀಯ ನಾಮನಿರ್ದೇಶನಗಳ ಮೂಲಕ ಭರ್ತಿ ಮಾಡಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ನಿಮಗೆ ಗಂಡಸ್ತನ ಇದ್ದರೆ, ಏನು ಗೊತ್ತಿಲ್ಲದಂತೆ ಮೌನವಾಗಿರಬೇಡಿ: ಸಿಎಂಗೆ ಹೆಚ್‍ಡಿಕೆ ಸವಾಲ್

    ಏಪ್ರಿಲ್‍ನಲ್ಲಿ ಕಾಂಗ್ರೆಸ್‍ನ ಉಪ ನಾಯಕ ಆನಂದ್ ಶರ್ಮಾ, ಎ.ಕೆ. ಆಂಟನಿ, ಸುಬ್ರಮಣಿಯನ್ ಸ್ವಾಮಿ, ಎಂ.ಸಿ. ಮೇರಿ ಕೋಮ್ ಮತ್ತು ಸ್ವಪನ್ ದಾಸ್‍ಗುಪ್ತಾ ಅವರು ನಿವೃತ್ತರಾಗಲಿದ್ದಾರೆ. ನಿರ್ಮಲಾ ಸೀತಾರಾಮನ್, ಸುರೇಶ್ ಪ್ರಭು, ಎಂಜೆ ಅಕ್ಬರ್, ಜೈರಾಮ್ ರಮೇಶ್, ವಿವೇಕ್ ತಂಖಾ, ವಿ. ವಿಜಯಸಾಯಿ ರೆಡ್ಡಿ ಅವರ ಅವಧಿ ಜೂನ್‍ನಲ್ಲಿ ಕೊನೆಗೊಳ್ಳಲಿದೆ. ಜುಲೈನಲ್ಲಿ ಪಿಯೂಷ್ ಗೋಯಲ್, ಮುಕ್ತಾರ್ ಅಬ್ಬಾಸ್ ನಖ್ವಿ, ಪಿ ಚಿದಂಬರಂ, ಅಂಬಿಕಾ ಸೋನಿ, ಕಪಿಲ್ ಸಿಬಲ್, ಸತೀಶ್ ಚಂದ್ರ ಮಿಶ್ರಾ, ಸಂಜಯ್ ರಾವುತ್, ಪ್ರಫುಲ್ ಪಟೇಲ್ ಮತ್ತು ಕೆ.ಜೆ. ಅಲ್ಫೋನ್ಸ್ ನಿವೃತ್ತಿ ಹೊಂದಲಿದ್ದಾರೆ. ಇದನ್ನೂ ಓದಿ: ಪಾಕ್‌ ಪರ ಘೋಷಣೆ ಕೂಗಿದ್ದ ಕಾಶ್ಮೀರ ವಿದ್ಯಾರ್ಥಿಗಳಿಗೆ ಅಲಹಾಬಾದ್‌ ಹೈಕೋರ್ಟ್‌ ಜಾಮೀನು

  • ಸರ್ಕಾರದಿಂದ ದೇವೇಗೌಡರ ಓಡಾಟಕ್ಕೆ 60 ಲಕ್ಷ ಬೆಲೆಯ ಕಾರು

    ಸರ್ಕಾರದಿಂದ ದೇವೇಗೌಡರ ಓಡಾಟಕ್ಕೆ 60 ಲಕ್ಷ ಬೆಲೆಯ ಕಾರು

    ಬೆಂಗಳೂರು: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರಿಗೆ ರಾಜ್ಯ ಸರ್ಕಾರ ದುಬಾರಿ ಬೆಲೆಯ ಕಾರನ್ನು ನೀಡಿದೆ.

    ದೇವೇಗೌಡರ ಓಡಾಟಕ್ಕೆ ಸರ್ಕಾರ ಸುಮಾರು 60 ಲಕ್ಷ ಬೆಲೆಯ ವೋಲ್ವೋ ಹೊಸ ಕಾರನ್ನ ನೀಡಿದೆ. ದೇವೇಗೌಡರು ರಾಜ್ಯಸಭಾ ಸದಸ್ಯರಾದ ನಂತರ ಪ್ರೋಟೊ ಕಾಲ್ ಪ್ರಕಾರ ಕಾರು ನೀಡಬೇಕಿತ್ತು. ಈ ಹಿನ್ನೆಲೆ ಹೊಸ ವೋಲ್ವೋ ಕಾರನ್ನ ಸರ್ಕಾರ ನೀಡಿದೆ. 15 ದಿನಗಳ ಹಿಂದಷ್ಟೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೆಸರಿನಲ್ಲಿ ಕಾರು ಖರೀದಿ ಮಾಡಲಾಗಿದೆ.

    ದೇವೇಗೌಡರ ಈ ಹೊಸ ಕಾರಿಗೆ ನೋಂದಣಿ ಕೆಎ 53 ಜಿ 3636 ನೀಡಲಾಗಿದೆ. ಈ ಮೂಲಕ ದೇವೇಗೌಡರು ರಾಜ್ಯದಲ್ಲಿ ಅತಿ ದುಬಾರಿ ಸರ್ಕಾರಿ ಕಾರು ಹೊಂದಿರುವ ಜನಪ್ರತಿನಿಧಿ ಎನಿಸಿಕೊಂಡಿದ್ದಾರೆ. Volvo XC60 D5 ಮಾಡೆಲ್ ಕಾರಿನ ಮೂಲ ಬೆಲೆ 59.90 ಲಕ್ಷ ರೂಪಾಯಿ ಆಗಿದೆ. ತೆರಿಗೆ, ವಿಮೆ ಮೊತ್ತ ಸೇರಿದರೆ 74.90 ಲಕ್ಷ ರೂಪಾಯಿ ಆಗುತ್ತದೆ. ಆದರೆ ಸರ್ಕಾರದ ಹೆಸರಿನಲ್ಲಿ ಖರೀದಿಸುವಾಗ ತೆರಿಗೆ ಇಲ್ಲದಿರುವುದರಿಂದ ಸುಮಾರು 60 ಲಕ್ಷ ರೂಪಾಯಿ ಆಗಿದೆ.

    ಈಗಾಗಲೇ ಸಿಎಂ ಯಡಿಯೂರಪ್ಪ ಬಳಿ ಎರಡು ಫಾರ್ಚೂನರ್ ಕಾರುಗಳಿವೆ. ಇನ್ನೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ವಿಧಾನಸಭಾ ಸಚಿವಾಲಯದಿಂದ ಫಾರ್ಚೂನರ್ ಕಾರು ನೀಡಲಾಗಿದೆ. ದೇವೇಗೌಡರು ಇನ್ನೂ ಸರ್ಕಾರದ ಕಾರನ್ನು ಪಡೆಯಲಿಲ್ಲ. ಹೀಗಾಗಿ ಸದ್ಯಕ್ಕೆ ಕಾರು ಕುಮಾರಕೃಪದಲ್ಲಿದೆ.

  • ಸರ್ಕಾರಿ ಗೌರವದೊಂದಿಗೆ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅಂತ್ಯಕ್ರಿಯೆ

    ಸರ್ಕಾರಿ ಗೌರವದೊಂದಿಗೆ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅಂತ್ಯಕ್ರಿಯೆ

    ರಾಯಚೂರು: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನರಾದ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅಂತ್ಯಸಂಸ್ಕಾರವನ್ನ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

    ರಾಯಚೂರಿನ ಪೋತಗಲ್ ಬಳಿ ನಿಗದಿತ ಸ್ಥಳದಲ್ಲಿ ಕೋವಿಡ್ ನಿಯಮಾವಳಿ ಜೊತೆಗೆ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲಾಗಿದೆ. ಅಂತಿಮ ಸಂಸ್ಕಾರವನ್ನ ಅಶೋಕ್ ಗಸ್ತಿಯವರ ಪುತ್ರಿ ನೇಹಾ ಗಸ್ತಿ ನೆರವೇರಿಸಿದರು. ಅಂತ್ಯಕ್ರಿಯೆಯಲ್ಲಿ ಶಾಸಕ ಶಿವರಾಜ್ ಪಾಟೀಲ್, ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಸೇರಿದಂತೆ ಸುಮಾರು 30 ಜನ ಭಾಗವಹಿಸಿದ್ದರು.

    ಅಗಲಿದ ನಾಯಕನಿಗೆ ಜಿಲ್ಲೆಯಾದ್ಯಂತ ಅಭಿಮಾನಿಗಳು, ಬಿಜೆಪಿ ಪಕ್ಷದ ಕಾರ್ಯಕರ್ತರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ವಿವಿಧ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ. ಕೋವಿಡ್ 19 ಸೋಂಕಿಗೆ ತುತ್ತಾಗಿದ್ದ ಗಸ್ತಿ ಅವರಿಗೆ ಕಳೆದ 15 ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ 10.31ರ ವೇಳೆಗೆ ಮೃತಪಟ್ಟಿದ್ದರು.

    ಬಡತನದಲ್ಲಿ ಬೆಳೆದ ಅಶೋಕ್ ಗಸ್ತಿ ಈಗಲೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಎಬಿವಿಪಿಯಿಂದ ಶುರುವಾಗಿ ಆರ್‌ಎಸ್‌ಎಸ್ ಗುರುತಿಸಿಕೊಂಡಿದ್ದ ಗಸ್ತಿ ಈಗ ರಾಯಚೂರು ಬಳ್ಳಾರಿ ಕೊಪ್ಪಳ ಪ್ರಭಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಎರಡು ರಾಯಚೂರು ನಗರ ಕ್ಷೇತ್ರದ ಟಿಕೆಟ್ ಗೆ ಯತ್ನಿಸಿದ್ದರೂ ಸಿಕ್ಕಿರಲಿಲ್ಲ. ಬಿಜೆಪಿ ಹೈಕಮಾಂಡ್ ಅಶೋಕ್ ಗಸ್ತಿಯವರಿಗೆ ರಾಜ್ಯಸಭಾ ಟಿಕೆಟ್ ನೀಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಜುಲೈ 22 ರಂದು ಅಶೋಕ್ ಗಸ್ತಿ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

    ಈ ಹಿಂದೆ ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ, ರಾಯಚೂರು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. 2001ರಲ್ಲಿ ರಾಯಚೂರು ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. 2010ರಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿಯೂ ಪಕ್ಷಕ್ಕಾಗಿ ದುಡಿದಿದ್ದಾರೆ. 30 ವರ್ಷ ಹೋರಾಟ, ಸಂಘಟನೆ ಚತುರನಾಗಿ ಅಶೋಕ್ ಗಸ್ತಿ ಸೇವೆ ಸಲ್ಲಿಸಿದ್ದರು.

  • ಸರಳ ಬಹುಮತವೂ ಸಿಗಲ್ಲ, ಗುಜರಾತ್‍ನಲ್ಲಿ ನಮಗೆ ಸೋಲಾಗಲಿದೆ: ಬಿಜೆಪಿ ರಾಜ್ಯಸಭಾ ಸದಸ್ಯ

    ಸರಳ ಬಹುಮತವೂ ಸಿಗಲ್ಲ, ಗುಜರಾತ್‍ನಲ್ಲಿ ನಮಗೆ ಸೋಲಾಗಲಿದೆ: ಬಿಜೆಪಿ ರಾಜ್ಯಸಭಾ ಸದಸ್ಯ

    ಪುಣೆ: ಗುಜರಾತ್ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಜೆಪಿ ಭರ್ಜರಿ ಜಯಗಳಿಸಲಿದೆ ಎಂದು ಹೇಳಿದರೆ, ಬಿಜೆಪಿಯ ರಾಜ್ಯ ಸಭಾ ಸದಸ್ಯ ಸಂಜಯ್ ಕಾಕಡೆ ಮಾತ್ರ ನಮ್ಮ ಪಕ್ಷ ಸೋಲಲಿದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

    ಗುಜರಾತ್ ಚುನಾವಣೆಯಲ್ಲಿ ನಮ್ಮ ಪಕ್ಷವು ಸ್ಪಷ್ಟ ಬಹುಮತ ಪಡೆಯುವುದಿರಲಿ, ಸರ್ಕಾರ ರಚನೆ ಮಾಡಲು ಬೇಕಾದ ಸರಳ ಬಹುಮತವನ್ನು ಪಡೆಯುವುದಿಲ್ಲ. ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಪಡೆಯಲಿದೆ ಎಂದು ಅವರು ಹೇಳಿದ್ದಾರೆ.

    ಒಂದು ವೇಳೆ ಪಕ್ಷವು ಗುಜರಾತ್‍ನಲ್ಲಿ ಬಹುಮತ ಪಡೆದು ಅಧಿಕಾರ ವಹಿಸಿಕೊಂಡರೆ, ಅದು ಕೇವಲ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯೇ ಹೊರತು ಬೇರೆ ಯಾವುದೇ ಕಾರಣದಿಂದ ಅಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

    ಗುಜರಾತ್ ರಾಜ್ಯಸಭಾ ಸದಸ್ಯರಾಗಿರುವ ಕಾಕಡೆ ಅವರ ನೇತೃತ್ವದ ತಂಡವು ಚುನಾವಣೆ ಸಮೀಕ್ಷೆ ನಡೆಸಿದ್ದು, ಈ ಸಮೀಕ್ಷೆ ಆಧಾರ ಮೇಲೆ ಅವರು ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲದೇ ಗುಜರಾತ್ ನಲ್ಲಿ ಆಡಳಿತ ವಿರೋಧಿ ಅಲೆ ಇರುವುದೇ ಪಕ್ಷ ಸೋಲಿಗೆ ಪ್ರಮುಖ ಕಾರಣವಾಗಲಿದೆ ಎಂದು ತಿಳಿಸಿದ್ದಾರೆ.

    ಸ್ವತಂತ್ರ್ಯ ಪಡೆದ ನಂತರ ಗುಜರಾತ್ ನಲ್ಲಿ ಬಿಜೆಪಿ ಸುಮಾರು 22 ವರ್ಷಗಳ ಕಾಲ ಆಡಳಿತ ನಡೆಸಿದೆ. ಪಶ್ಚಿಮ ಬಂಗಾಳ ಹೊರತು ಪಡಿಸಿ ದೇಶದ ಬೇರಾವುದೇ ರಾಜ್ಯದಲ್ಲಿ ಒಂದೇ ಪಕ್ಷ 25 ವರ್ಷಗಳ ಕಾಲ ಆಡಳಿತ ನಡೆಸಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಗುಜರಾತ್, ಹಿಮಾಚಲದಲ್ಲಿ ಮೋದಿ, ಶಾ ಮುಂದೆ ಕಾಂಗ್ರೆಸ್ ಧೂಳೀಪಟ: ಟುಡೇಸ್ ಚಾಣಕ್ಯ

    ಚುನಾವಣೆ ಪ್ರಚಾರದ ವೇಳೆ ಗುಜರಾತ್ ನ ಯಾವುದೇ ನಾಯಕರು ಸಹ ಅಭಿವೃದ್ಧಿಯ ಅಂಶಗಳ ಆಧಾರದ ಮೇಲೆ ಮಾತನಾಡಿಲ್ಲ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸರ್ಕಾರ ಉದ್ಯೋಗ ಸೃಷ್ಟಿಗೆ ನೀಡಿದ ಕ್ರಮಗಳ ಕುರಿತು ತಿಳಿಸಿಲ್ಲ. ಕೇವಲ ವಿರೋಧಿ ಪಕ್ಷಗಳನ್ನು ಮಾತ್ರ ಗುರಿಯಾಗಿಸಿಕೊಂಡು, ಭಾವನಾತ್ಮಕವಾಗಿ ಮತದಾರರಲ್ಲಿ ಮನವಿ ಮಾಡಿ ಪ್ರಚಾರ ನಡೆಸಲಾಗಿದೆ ಎಂದು ಅವರು ಆರೋಪಿಸಿದರು. ಇದನ್ನೂ ಓದಿ: Exit Poll: ಗುಜರಾತ್, ಹಿಮಾಚಲದಲ್ಲಿ ಮೋದಿ, ಶಾ ‘ಓಖಿ’