Tag: ರಾಜ್ಕೋಟ್

  • ನಡುರಸ್ತೆಯಲ್ಲಿ ಜೀಪ್‍ಗೆ ಬೆಂಕಿ – ಟಿಕ್‍ಟಾಕ್‍ಗೆ ವಿಡಿಯೋ ಅಪ್‍ಲೋಡ್

    ನಡುರಸ್ತೆಯಲ್ಲಿ ಜೀಪ್‍ಗೆ ಬೆಂಕಿ – ಟಿಕ್‍ಟಾಕ್‍ಗೆ ವಿಡಿಯೋ ಅಪ್‍ಲೋಡ್

    ರಾಜ್‍ಕೋಟ್: ನಡುರಸ್ತೆಯಲ್ಲಿಯೇ ಜೀಪ್ ಸ್ಟಾರ್ಟಾಗದೆ ನಿಂತ ಪರಿಣಾಮ ಕೋಪಗೊಂಡ ವ್ಯಕ್ತಿ ತನ್ನ ಜೀಪಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಗುಜರಾತ್‍ನ ರಾಜಕೋಟ್‍ನಲ್ಲಿ ಘಟನೆ ನಡೆದಿದ್ದು, ಇಂದ್ರಜೀತ್ ಸಿಂಗ್ ತನ್ನ ಜೀಪಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವ್ಯಕ್ತಿ. ಈ ಎಲ್ಲಾ ದೃಶ್ಯಗಳನ್ನು ಆತನ ಸ್ನೇಹಿತ ಹಾಗೂ ಸಾರ್ವಜನಿಕರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೇ ಟಿಕ್‍ಟಾಕ್‍ನಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ವೈರಲ್ ಮಾಡಿದ್ದಾರೆ. ವಿಡಿಯೋದಲ್ಲಿ ಇಂದ್ರಜೀತ್ ತನ್ನ ಇಷ್ಟದಂತೆ ಜೀಪ್‍ಗೆ ಹೊಸ ವಿನ್ಯಾಸಗಳನ್ನು ಮಾಡಿಸಿರುವುದು ಕಾಣಬಹುದಾಗಿದೆ. ಅಲ್ಲದೇ ಜೀಪ್‍ಗೆ ಬೆಂಕಿ ಹಚ್ಚಿ ವಿಡಿಯೋ ಮಾಡುತ್ತಿರುವ ಸ್ನೇಹಿತ ಕಡೆ ಇಂದ್ರಜೀತ್ ನಡೆದು ಬಂದಿದ್ದಾನೆ.

    https://twitter.com/dineshjoshi70/status/1168817621891870720

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದು, ಇಂದ್ರಜೀತ್ ಸಿಂಗ್ ಸೇರಿದಂತೆ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ. ನಡುರಸ್ತೆಯಲ್ಲಿ ಜೀಪ್‍ಗೆ ಬೆಂಕಿ ಹಚ್ಚುವ ಮೂಲಕ ಸರ್ಕಾರಿ ಆಸ್ತಿಗೆ ನಷ್ಟ ಉಂಟುಮಾಡಿರುವ ಆರೋಪದಲ್ಲಿ ಅವರನ್ನು ಬಂಧಿಸಿದ್ದಾರೆ.

    ಈ ಘಟನೆ ಕುರಿತು ಮಾಹಿತಿ ನೀಡಿರುವ ರಾಜ್‍ಕೋಟ್ ಎಸ್‍ಪಿ ಎಎನ್ ರಾಥೋಡ್, ಜೀಪಿನ ಬ್ಯಾಟರಿ ಕೆಲಸ ಮಾಡದ ಕಾರಣ ಅದು ಸ್ಟಾರ್ಟ್ ಆಗಿರಲಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡ ಇಂದ್ರಜೀತ್ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ಅಕ್ರಮ ಸಂಬಂಧ ಹೊಂದಿದ್ದ ಮೂವರ ಜೊತೆ ಸೇರಿ ಪತಿಯನ್ನೇ ಕೊಂದ್ಲು!

    ಅಕ್ರಮ ಸಂಬಂಧ ಹೊಂದಿದ್ದ ಮೂವರ ಜೊತೆ ಸೇರಿ ಪತಿಯನ್ನೇ ಕೊಂದ್ಲು!

    ರಾಜ್‍ಕೋಟ್: ಅಕ್ರಮ ಸಂಬಂಧ ಹೊಂದಿದ್ದ ಮೂವರ ಜೊತೆಗೆ ಸೇರಿ ಪತಿಯನ್ನೇ ಪತ್ನಿಯೊಬ್ಬಳು ಕೊಲೆ ಮಾಡಿದ ಘಟನೆ ಗುಜರಾತ್‍ನಲ್ಲಿ ನಡೆದಿದ್ದು, ಮೂರು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

    ಗಾಂಧಿದಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಪ್ರಹ್ಲಾದ್ ಕೊಲೆಯಾದ ಪತಿ. ಪ್ರಹ್ಲಾದ್ ಪತ್ನಿ ಧನ್ಬಾಯಿ ಮಹೇಶ್ವರಿ ಆಕೆಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ನರಸಿಂಹ ಕೊಲಿ, ರವಿ ಶಂಕರ್ ಮಹೇಶ್ವರಿ ಮತ್ತು ಮಹೇಶ್ ಮಹೇಶ್ವರಿ ಆರೋಪಿಗಳು.

    ಕೃತ್ಯ ಸೆಪ್ಟೆಂಬರ್ 13ರಂದು ನಡೆದಿದ್ದು, ಆರಂಭದಲ್ಲಿ ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು. ಆದರೆ ಪೊಲೀಸ್ ತನಿಖೆಯಿಂದಾಗಿ ಪತ್ನಿಯ ಅಮಾನವೀಯ ಕೃತ್ಯ ಬಯಲಾಗಿದೆ. ಆರೋಪಿಗಳನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.

    ಏನಿದು ಪ್ರಕರಣ?:
    ಧನ್ಬಾಯಿ ಮಹೇಶ್ವರಿಯು ನರಸಿಂಹ, ರವಿ ಶಂಕರ್, ಹಾಗೂ ಮಹೇಶ್ ಎಂಬವರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಷಯವು ಪ್ರಹ್ಲಾದ್ ಗಮನಕ್ಕೆ ಬಂದಿದ್ದರಿಂದ ಧನ್ಬಾಯಿಯನ್ನು ವಿಚಾರಿಸಿದ್ದಾನೆ. ಎಲ್ಲಿ ಈ ಅಕ್ರಮ ಸಂಬಂಧ ಬಯಲಿಗೆ ಬರುತ್ತದೆ ಅಂತಾ ಅಕ್ರಮ ಸಂಬಂಧ ಹೊಂದಿದ್ದ ಮೂವರ ಜೊತೆಗೆ ಸೇರಿ ಕೊಲೆಗೆ ಹಂಚು ರೂಪಿಸಿದ್ದಾಳೆ. ನಾಲ್ವರು ಸೇರಿ ಪ್ರಹ್ಲಾದ್‍ಗೆ ಕಿರುಕುಳ ನೀಡಿ, ವಿದ್ಯುತ್ ಶಾಕ್ ಕೊಟ್ಟು ಕೊಲೆ ಮಾಡಿದ್ದಾರೆ.

    ಕೊಲೆಯನ್ನು ಮುಚ್ಚಿ ಹಾಕುವ ಉದ್ದೇಶದಿಂದ ಪತಿ ವಿದ್ಯುತ್ ಸ್ಪರ್ಶ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಧನ್ಬಾಯಿ ಹೇಳಿದ್ದಾಳೆ. ಆದರೆ ಪ್ರಹ್ಲಾದ್ ಸಹೋದರಿಯ ಪತಿ ಲಾಲ್‍ಜಿ ಕೊಲೆ ಶಂಕೆ ವ್ಯಕ್ತಪಡಿಸಿ ಗಾಂಧಿದಾಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ಧನ್ಬಾಯಿಯನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಆಕೆಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಮೂವರನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಜ್ಞೆ ಇಲ್ಲದ ವೇಳೆ ಪತ್ನಿಗೆ ತಲಾಖ್- ಪತಿಯ ವಿರುದ್ಧ ಎಫ್‍ಐಆರ್ ದಾಖಲು

    ಪ್ರಜ್ಞೆ ಇಲ್ಲದ ವೇಳೆ ಪತ್ನಿಗೆ ತಲಾಖ್- ಪತಿಯ ವಿರುದ್ಧ ಎಫ್‍ಐಆರ್ ದಾಖಲು

    ಅಹಮದಾಬಾದ್: ಪ್ರಜ್ಞೆ ಕಳೆದುಕೊಂಡಿದ್ದ ಸಂದರ್ಭದಲ್ಲಿ ತನ್ನ ಪತಿ ತಲಾಖ್ ನೀಡಿದ್ದಾರೆಂದು ಆರೋಪಿಸಿ 23 ವರ್ಷದ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    3 ವರ್ಷದ ಮಗುವಿನ ತಾಯಿಯಾದ ರುಬಿನಾ ಅಫ್ಜಲ್ ಲಖಾನಿ ತನ್ನ ಪತಿ ಅಫ್ಜಲ್ ಹುಸೈನ್ ವಿರುದ್ಧ ರಾಜ್ಕೋಟ್‍ನಲ್ಲಿ ಗುರುವಾರದಂದು ಎಫ್‍ಐಆರ್ ದಾಖಲಿಸಿದ್ದಾರೆ. 18 ತಿಂಗಳ ಹಿಂದೆ ರುಬಿನಾಗೆ ಪ್ರಜ್ಞೆ ಹೋಗಿದ್ದ ವೇಳೆ ತನ್ನ ಪತಿ ತ್ರಿವಳಿ ತಲಾಖ್ ನೀಡಿದ್ದು, ಮನೆಯಿಂದ ಹೊರಹಾಕಿದ್ದಾಗಿ ಆರೋಪ ಮಾಡಿದ್ದಾರೆ.

    5 ವರ್ಷಗಳ ಹಿಂದೆ ರುಬಿನಾ (23) ಅಫ್ಜಲ್ ನನ್ನು ವಿವಾಹವಾಗಿದ್ದರು. ತನ್ನ ಅತ್ತೆ ಮನೆಯವರು ಹಾಗೂ ಗಂಡನಿಂದ ಶೋಷಣೆಗೊಳಗಾಗಿದ್ದಾಗಿ ದೂರಿದ್ದಾರೆ. 18 ತಿಂಗಳ ಹಿಂದೆ ಮನೆಕೆಲಸದ ವಿಚಾರಕ್ಕೆ ಸಂಬಂಧಿಸಿದಂತೆ ಅಫ್ಜಲ್ ರುಬಿನಾಗೆ ಥಳಿಸಿದ್ದು, ಈ ವೇಳೆ ಆಕೆ ಪ್ರಜ್ಞೆ ಕಳೆದುಕೊಂಡಿದ್ದರು. ಈ ಸಂದರ್ಭದಲ್ಲಿ ರುಬಿನಾ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ. ಆಕೆಗೆ ಪ್ರಜ್ಞೆ ಬಂದ ನಂತರ, ತನ್ನ ಅತ್ತೆ ತಲಾಖ್ ಬಗ್ಗೆ ತಿಳಿಸಿದ್ದಾಗಿ ರುಬಿನಾ ಹೇಳಿದ್ದಾರೆ.

    ಅಫ್ಜಲ್ ನನಗೆ ಮೂರು ಬಾರಿ ತಲಾಖ್ ಹೇಳಿದ್ದು ವಿಚ್ಛೇದನ ಆಗಿದೆ ಅಂತ ಅತ್ತೆ ಹೇಳಿದ್ರು. ಹೀಗಾಗಿ ನಾನು ಮನೆಯಿಂದ ಹೊರಗೆ ಹೋಗಬೇಕೆಂದು ಎಂದು ಹೇಳಿದ್ರು. ನನಗೆ ಪ್ರಜ್ಞೆ ಇರಲಿಲ್ಲ. ಹಾಗೂ ಆ ರೀತಿ ಏನೂ ನನಗೆ ಕೇಳಿಸಲಿಲ್ಲ ಎಂದು ವಾದ ಮಾಡಿದೆ. ಆದ್ರೆ ಅವರು ಯಾವುದನ್ನೂ ಕೇಳಿಸಿಕೊಳ್ಳಲೇ ಇಲ್ಲ. ಮನೆಯಿಂದ ಹೊರಹೋಗಲು ಹೇಳಿದ್ರು ಎಂದು ರುಬಿನಾ ತಿಳಿಸಿದ್ದಾರೆ.

    ಮನೆಯಿಂದ ಹೊರಬಂದ ರುಬಿನಾ ಅಂದಿನಿಂದ ಮೊಬಿ ಬಜಾರ್‍ನಲ್ಲಿಯ ತನ್ನ ತಂದೆಯ ಮನೆಯಲ್ಲಿ ವಾಸವಾಗಿದ್ದರು. ಕುಟುಂಬದ ಸದಸ್ಯರು ಮತ್ತು ಸಮುದಾಯದ ಮುಖಂಡರು ಪತಿ ಪತ್ನಿಯರ ನಡುವಿನ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದರಾದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ.

    ಇದೀಗ ಅಫ್ಜಲ್ ಸೇರಿದಂತೆ ಅವನ ತಾಯಿ ರಶೀದಾ, ತಂದೆ ಹುಸೇನ್ ಜಮಾಲ್, ಸಹೋದರಿ ಸುಹಾನಾ ಅಕ್ರಮ್ ಖೊರಾನಿ ಹಾಗೂ ರಿಶೀದಾ ತಂದೆ ಕರೀಮ್ ಒಸ್ಮಾನ್ ವಿರುದ್ಧ ಐಪಿಸಿ ಸೆಕ್ಷನ್‍ನಡಿ ಮಾನಸಿಕ ಮತ್ತು ದೈಹಿಕ ಕಿರುಕುಳದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

    ಅವರಿಗೆ ಕೌಟುಂಬಿಕ ಸಮಸ್ಯೆಗಳಿದ್ದು, ಅದರಿಂದ ಆಗಾಗ ದೈಹಿಕ ಹಲ್ಲೆಯೂ ನಡೆದಿದೆ. ಮಹಿಳೆಯ ದೂರಿನನ್ವಯ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.