Tag: ರಾಜ್ಕೋಟ್

  • ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಇಂದು ಮಾಜಿ ಸಿಎಂ ವಿಜಯ್ ರೂಪಾನಿ ಅಂತ್ಯಕ್ರಿಯೆ

    ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಇಂದು ಮಾಜಿ ಸಿಎಂ ವಿಜಯ್ ರೂಪಾನಿ ಅಂತ್ಯಕ್ರಿಯೆ

    ಅಹಮದಾಬಾದ್: ಏರ್ ಇಂಡಿಯಾ (Air India) ವಿಮಾನ ದುರಂತದಲ್ಲಿ ಮೃತಪಟ್ಟ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ (Vijay Rupani) ಅವರ ಅಂತ್ಯಕ್ರಿಯೆ ಇಂದು ಗುಜರಾತ್‌ನ ರಾಜ್‌ಕೋಟ್‌ನಲ್ಲಿ (Rajkot) ನಡೆಯಲಿದೆ.

    ವಿಜಯ್ ರೂಪಾನಿ ರಾಜ್‌ಕೋಟ್ ಪ್ರತಿನಿಧಿಸುತ್ತಿದ್ದರು. ಭಾನುವಾರ ವಿಜಯ್ ರೂಪಾನಿ ಡಿಎನ್‌ಎ ಮ್ಯಾಚ್ ಆಗಿತ್ತು. ಅವರ ಸಹೋದರಿ ಡಿಎನ್‌ಎ ಜೊತೆಗೆ ವಿಜಯ್ ರೂಪಾನಿ ಡಿಎನ್‌ಎ ಮ್ಯಾಚ್ ಆಗಿತ್ತು. ಇಂದು ಬೆಳಗ್ಗೆ 11:30ಕ್ಕೆ ಸಿವಿಲ್ ಆಸ್ಪತ್ರೆಯಿಂದ ಮೃಹದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ಬಳಿಕ ಮೃತದೇಹವನ್ನು ವಿಮಾನದ ಮೂಲಕ ರಾಜ್‌ಕೋಟ್‌ಗೆ ಕೊಂಡೊಯ್ಯಲಾಗುವುದು. ಇದನ್ನೂ ಓದಿ: ಅವಳ ಮಾತು ಕೇಳಿದ್ದಕ್ಕೆ ಜೀವ ಉಳಿಯಿತು.. ಥ್ಯಾಂಕ್ಸ್ ಹೆಂಡ್ತಿ: ಪತನವಾದ ಫ್ಲೈಟ್‌ನಲ್ಲೇ ಹೋಗ್ಬೇಕಿದ್ದ ವೈದ್ಯ ಪಾರು

    ಮಧ್ಯಾಹ್ನ 2 ಗಂಟೆಯ ವೇಳೆಗೆ ರಾಜ್‌ಕೋಟ್ ತಲುಪುವ ನಿರೀಕ್ಷೆಯಿದೆ. ಸಂಜೆ 5 ಗಂಟೆಗೆ ಅಂತಿಮ ಯಾತ್ರೆ ಆರಂಭವಾಗಲಿದ್ದು, 6 ಗಂಟೆಯ ವೇಳೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ವಿಜಯ್ ರೂಪಾನಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಗಾಳಿ-ಮಳೆಗೆ ಧರೆಗುರುಳಿದ ಮರ; ಮುಳ್ಳಯ್ಯನಗಿರಿ-ದತ್ತಪೀಠ ಮಾರ್ಗ ಬಂದ್

  • ಚಿನ್ನಸ್ವಾಮಿ ಕಾಲ್ತುಳಿತ ದುರಂತ – ಬೆಂಗಳೂರಿನಿಂದ ಪಂದ್ಯಗಳು ಸ್ಥಳಾಂತರ

    ಚಿನ್ನಸ್ವಾಮಿ ಕಾಲ್ತುಳಿತ ದುರಂತ – ಬೆಂಗಳೂರಿನಿಂದ ಪಂದ್ಯಗಳು ಸ್ಥಳಾಂತರ

    ಬೆಂಗಳೂರು: ಜೂನ್ 4ರಂದು ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಾಲ್ತುಳಿತ (Chinnaswamy Stampede) ದುರಂತದ ಪರಿಣಾಮ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನ ಬಿಸಿಸಿಐ (BCCI) ಬೇರೆಡೆ ಸ್ಥಳಾಂತರ ಮಾಡಿದೆ. ದುರಂತದ ಬಳಿಕ ಬಿಸಿಸಿಐ ಪಂದ್ಯಗಳ ಸ್ಥಳಾಂತರಕ್ಕೆ ಮುಂದಾಗಿದೆ.

    ನವೆಂಬರ್ 13 ರಿಂದ 19ರವರೆಗೆ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಭಾರತ ಎ ಮತ್ತು ಸೌಥ್ ಆಫ್ರಿಕಾ ಎ ನಡುವಣ ಪಂದ್ಯಗಳ ಆಯೋಜನೆ ಮಾಡಲಾಗಿತ್ತು. ಆದರೆ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ದುರಂತ ಬಳಿಕ ಬಿಸಿಸಿಐ ಬೆಂಗಳೂರಿನಿಂದ ರಾಜ್ ಕೋಟ್‌ಗೆ ಪಂದ್ಯಗಳನ್ನು ಸ್ಥಳಾಂತರ ಮಾಡಿದೆ. ಇದನ್ನೂ ಓದಿ:  Assam | 45 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್ – ನಾಲ್ವರು ಅರೆಸ್ಟ್

    ನವೆಂಬರ್‌ನಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಬೇಕಿತ್ತು. ಆದರೆ ಈಗ ಬೆಂಗಳೂರಿನಿಂದ ರಾಜ್ ಕೋಟ್‌ಗೆ ಪಂದ್ಯಗಳು ಸ್ಥಳಾಂತರ ಆಗಿದ್ದು, ಈ ಬಗ್ಗೆ ನಿರ್ದಿಷ್ಟ ಕಾರಣ ನೀಡದ ಬಿಸಿಸಿಐ, ಪಂದ್ಯ ಸ್ಥಳಾಂತರ ಬಗ್ಗೆಯಷ್ಟೇ ಮಾಹಿತಿ ನೀಡಿದೆ. ಇದನ್ನೂ ಓದಿ: ದೆಹಲಿಯ ಶಾಬಾದ್ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ – ಪಾರಾಗಲು ಮಹಡಿಯಿಂದ ಹಾರಿದ ಜನ

  • ರಾಜ್‍ಕೋಟ್‍ನ ಗೇಮಿಂಗ್ ಝೋನ್ ಅಗ್ನಿ ಅವಘಡ ಪ್ರಕರಣ – ಪ್ರಮುಖ ಆರೋಪಿ ಅರೆಸ್ಟ್

    ರಾಜ್‍ಕೋಟ್‍ನ ಗೇಮಿಂಗ್ ಝೋನ್ ಅಗ್ನಿ ಅವಘಡ ಪ್ರಕರಣ – ಪ್ರಮುಖ ಆರೋಪಿ ಅರೆಸ್ಟ್

    ಗಾಂಧಿನಗರ: ಗುಜರಾತ್‍ನ (Gujarat) ರಾಜ್‍ಕೋಟ್‍ನ ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ (Rajkot Game Zone Fire) 27 ಮಂದಿಯ ಸಾವಿಗೆ ಕಾರಣವಾದ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರಕರಣದ ಪ್ರಮುಖ ಆರೋಪಿ ಧವಲ್ ಠಕ್ಕರ್‌ (Dhawal Thakkar) ರಾಜಸ್ಥಾನದ ಅಬು ರಸ್ತೆಯಲ್ಲಿ ಬಂಧಿಸಲಾಗಿದೆ. ಈತ ರಾಜಸ್ಥಾನದ ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಮಾಹಿತಿಯ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಗೇಮಿಂಗ್ ಝೋನ್‌ನಲ್ಲಿ ಅಗ್ನಿ ಅವಘಡ ಪ್ರಕರಣ – 7 ಅಧಿಕಾರಿಗಳು ಅಮಾನತು

    ಗೇಮಿಂಗ್ ಝೋನ್‍ನ ಆರು ಪಾಲುದಾರರ ವಿರುದ್ಧವೂ ಎಫ್‍ಐಆರ್ ದಾಖಲಿಸಲಾಗಿದೆ. ಈ ವಲಯವನ್ನು ನಿರ್ವಹಿಸುತ್ತಿದ್ದ ರೇಸ್‍ವೇ ಎಂಟರ್‌ಪ್ರೈಸಸ್ ಇಬ್ಬರು ಪಾಲುದಾರರಾದ ಯುವರಾಜ್‍ಸಿಂಹ ಸೋಲಂಕಿ ಮತ್ತು ರಾಹುಲ್ ರಾಥೋಡ್ ಮತ್ತು ವ್ಯವಸ್ಥಾಪಕ ನಿತಿನ್ ಜೈನ್‍ನನ್ನು ಇಂದು ಮುಂಜಾನೆ (ಮೇ 28) ಬಂಧಿಸಲಾಗಿದೆ. ಬಂಧಿತ ಮೂವರನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ವೇಳೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ತುಷಾರ್ ಗೋಕನಿ ಆರೋಪಿಗಳ ಬಳಿ ಗೇಮಿಂಗ್ ಝೋನ್‍ನ ದಾಖಲೆಗಳನ್ನು ಕೇಳಿದಾಗ ಬೆಂಕಿಯಲ್ಲಿ ಸುಟ್ಟುಹೋಗಿವೆ ಎಂದಿದ್ದಾರೆ.

    ಹೆಚ್ಚಿನ ತನಿಖೆಗಾಗಿ ಸರ್ಕಾರ ನೇಮಿಸಿದ ವಿಶೇಷ ತನಿಖಾ ತಂಡ (SIT) ಟಿಆರ್‌ಪಿ ಗೇಮಿಂಗ್ ಝೋನ್‍ಗೆ ಸಂಬಂಧಿಸಿದ ಎಲ್ಲಾ ಫೈಲ್‍ಗಳನ್ನು ವಶಪಡಿಸಿಕೊಂಡಿದೆ ಎಂದು ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಾಂಘ್ವಿ  (Harsh Sanghavi) ಹೇಳಿದ್ದಾರೆ.

    ರಾಜ್‍ಕೋಟ್‍ನ ಟಿಆರ್‌ಪಿ ಗೇಮಿಂಗ್ ಝೋನ್‍ನಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಮುನ್ಸಿಪಲ್ ಕಾರ್ಪೋರೇಷನ್ ಅನ್ನು ಗುಜುರಾತ್ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಅಧಿಕಾರಿಗಳ ನಿರ್ಲಕ್ಷ್ಯ ಆಡಳಿತ ಯಂತ್ರದ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತಾಗಿದೆ ಎಂದು ಹೇಳಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ಬಿರೇನ್ ವೈಷ್ಣವ್ ಮತ್ತು ನ್ಯಾ.ದೇವನ್ ದೇಸಾಯಿ ಅವರನ್ನೊಳಗೊಂಡ ವಿಶೇಷ ಪೀಠ, ಗೇಮಿಂಗ್ ವಲಯ ನಿರ್ವಾಹಕರು ರಾಜ್‍ಕೋಟ್ ಮುನ್ಸಿಪಲ್ ಕಾರ್ಪೋರೇಷನ್‌ನಿಂದ ಕಡ್ಡಾಯ ಅನುಮತಿಗಳು ಮತ್ತು ಪರವಾನಗಿಗಳನ್ನು ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ. ಅಧಿಕಾರಿಗಳು ಏನು ನಿದ್ದೆ ಮಾಡುತ್ತಿದ್ದಾರಾ ಎಂದು ಖಾರವಾಗಿ ಪ್ರಶ್ನಿಸಿತ್ತು. ಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಸರ್ಕಾರ 7 ಅಧಿಕಾರಿಗಳನ್ನ ಅಮಾನತುಗೊಳಿಲಾಗಿದೆ. ಇದನ್ನೂ ಓದಿ: ಮಡಿಕೇರಿಯಲ್ಲಿ 5 ವರ್ಷ ಕಳೆದರೂ ನೆರೆಸಂತ್ರಸ್ತರಿಗೆ ಸಿಗದ ಶಾಶ್ವತ ಸೂರು – ಸರ್ಕಾರದ ವಿರುದ್ಧ ಆಕ್ರೋಶ

  • ಗೇಮಿಂಗ್ ಝೋನ್‌ನಲ್ಲಿ ಅಗ್ನಿ ಅವಘಡ ಪ್ರಕರಣ – 7 ಅಧಿಕಾರಿಗಳು ಅಮಾನತು

    ಗೇಮಿಂಗ್ ಝೋನ್‌ನಲ್ಲಿ ಅಗ್ನಿ ಅವಘಡ ಪ್ರಕರಣ – 7 ಅಧಿಕಾರಿಗಳು ಅಮಾನತು

    – ಹೈಕೋರ್ಟ್‌ ತರಾಟೆ ಬಳಿಕ ಎಚ್ಚೆತ್ತ ಗುಜರಾತ್‌ ಸರ್ಕಾರ

    ಗಾಂಧಿನಗರ: ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಮೇ 25ರಂದು ಗೇಮಿಂಗ್‌ ಝೋನ್‌ನಲ್ಲಿ ನಡೆದ ಅಗ್ನಿ ಅವಘಡ (Gaming Zone Fire Accident) ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ ಸರ್ಕಾರ (Gujarat Govt) ಸೋಮವಾರ 7 ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

    ಅಗತ್ಯ ಅನುಮೋದನೆಗಳಿಲ್ಲದೇ ಗೇಮಿಂಗ್‌ ಝೋನ್‌ ಕಾರ್ಯನಿರ್ವಹಿಸಲು ಅನುಮತಿ ನೀಡಿದ್ದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸಿದೆ. ಹಾಗಾಗಿ ವಿಶೇಷ ತನಿಖಾ ತಂಡ (SIT) ಸಲ್ಲಿಸಿದ ವರದಿ ಆಧರಿಸಿ 7 ಅಧಿಕಾರಿಗಳನ್ನ ಅಮಾನತುಗೊಳಿಸಲಾಗಿದೆ. ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಕೆಲವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಅವರನ್ನ ಪತ್ತೆ ಮಾಡಿ ಬಂಧಿಸಲು 17 ತಂಡಗಳನ್ನ ರಚಿಸಲಾಗಿದೆ ಎಂದು ಗೃಹ ಸಚಿವ ಹರ್ಷ ಸಾಂಘ್ವಿ (Harsh Sanghavi) ತಿಳಿಸಿದ್ದಾರೆ. ಇದನ್ನೂ ಓದಿ: ಅದಾನಿ ಗ್ರೂಪ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಮೋದಿ, ರಾಹುಲ್‌ಗೆ ನಿರ್ದೇಶಿಸಿ: ಕೋರ್ಟ್‌ಗೆ ಅರ್ಜಿ ಸಲ್ಲಿಕೆ

    ಹೈಕೋರ್ಟ್‌ ತರಾಟೆ ಬಳಿಕ ಎಚ್ಚೆತ್ತ ಸರ್ಕಾರ:
    ರಾಜ್‌ಕೋಟ್‌ನ ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿಅವಘಡಕ್ಕೆ ಸಂಬಂಧಿಸಿದಂತೆ ಮುನ್ಸಿಪಲ್ ಕಾರ್ಪೊರೇಷನ್ ಅನ್ನು ಗುಜುರಾತ್ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಅಧಿಕಾರಿಗಳ ನಿರ್ಲಕ್ಷ್ಯ ಆಡಳಿತ ಯಂತ್ರದ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತಾಗಿದೆ ಎಂದು ಹೇಳಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ. ಬಿರೇನ್ ವೈಷ್ಣವ್ ಮತ್ತು ನ್ಯಾ.ದೇವನ್ ದೇಸಾಯಿ ಅವರನ್ನೊಳಗೊಂಡ ವಿಶೇಷ ಪೀಠ, ಗೇಮಿಂಗ್ ವಲಯ ನಿರ್ವಾಹಕರು ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್‌ನಿಂದ (Muncipal Corporation) ಕಡ್ಡಾಯ ಅನುಮತಿಗಳು ಮತ್ತು ಪರವಾನಗಿಗಳನ್ನು ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ. ಅಧಿಕಾರಿಗಳು ಏನು ನಿದ್ದೆ ಮಾಡುತ್ತಿದ್ದಾರ ಎಂದು ಖಾರವಾಗಿ ಪ್ರಶ್ನಿಸಿತ್ತು. ಕೋರ್ಟ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಸರ್ಕಾರ 7 ಅಧಿಕಾರಿಗಳನ್ನ ಅಮಾನತುಗೊಳಿದೆ. ಇದನ್ನೂ ಓದಿ: ಮುಂಬೈ ತಾಜ್‌ ಹೋಟೆಲ್‌, ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ – ಉತ್ತರ ಪ್ರದೇಶದಲ್ಲಿ ಲೊಕೇಶನ್‌ ಪತ್ತೆ!

    ಡಿಎನ್‌ಎ ಮೂಲಕ ಗುರುತು ಪತ್ತೆ ಕಾರ್ಯ:
    ಅಗ್ನಿ ದುರಂತಕ್ಕೆ ಸಿಕ್ಕಿ ಸಜೀವ ಹೊಂದಿರುವವರ ಗುರುತನ್ನು ಡಿಎನ್‌ಎ ಮೂಲಕ ಪತ್ತೆ ಮಾಡುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಶನಿವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ 7 ಅಪ್ರಾಪ್ತರು ಸೇರಿ 28 ಮಂದಿ ಸಾವನ್ನಪ್ಪಿದ್ದರು. ಈ ಪೈಕಿ ಒಬ್ಬರ ಮೃತದೇಹ ಮಾತ್ರ ನಾಪತ್ತೆಯಾಗಿದ್ದು, ಉಳಿದ ಮೃತದೇಹಗಳನ್ನ ಹೊರತೆಗೆಯಲಾಗಿದೆ. ಸೋಮವಾರವಾದ ಇಂದು ಟಿಆರ್‌ಪಿ ಗೇಮಿಂಗ್ ಝೋನ್ ಫೈರ್ ಸೈಟ್‌ನಿಂದ ಪತ್ತೆಯಾದ ಕನಿಷ್ಠ 5 ಸುಟ್ಟ ದೇಹಗಳ ಗುರುತುಗಳನ್ನು ಡಿಎನ್‌ಎ ಮೂಲಕ ದೃಢಪಡಿಸಲಾಗಿದೆ. ಉಳಿದ ಮಾದರಿಗಳ ಪರೀಕ್ಷೆ ನಡೆಯುತ್ತಿದ್ದು, ಶೀಘ್ರವೇ ಎಲ್ಲ ಮೃತ ದೇಹಗಳ ಗುರುತು ಪತ್ತೆಯಾಗಲಿದೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಣಾಳಿಕೆ ಭರವಸೆಯಿಂದಾಗುವ ಆರ್ಥಿಕ ಲಾಭ ಅಭ್ಯರ್ಥಿಯ ಭ್ರಷ್ಟಾಚಾರವಲ್ಲ – ಜಮೀರ್‌ಗೆ ಸುಪ್ರೀಂ ರಿಲೀಫ್

  • ಗೇಮಿಂಗ್ ಝೋನ್‌ನಲ್ಲಿ ಅಗ್ನಿ ಅವಘಡ ಪ್ರಕರಣ – ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

    ಗೇಮಿಂಗ್ ಝೋನ್‌ನಲ್ಲಿ ಅಗ್ನಿ ಅವಘಡ ಪ್ರಕರಣ – ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

    ಅಹಮದಾಬಾದ್: ರಾಜ್‌ಕೋಟ್‌ನ (Rajkot) ಟಿಆರ್‌ಪಿ ಗೇಮಿಂಗ್ ಝೋನ್‌ನಲ್ಲಿ (Gaming Zone) ಸಂಭವಿಸಿದ ಅಗ್ನಿಅವಘಡಕ್ಕೆ (Fire Accident) ಸಂಬಂಧಿಸಿದಂತೆ ಮುನ್ಸಿಪಲ್ ಕಾರ್ಪೊರೇಷನ್ (Muncipal Corporation) ಅನ್ನು ಗುಜುರಾತ್ ಹೈಕೋರ್ಟ್ (Gujarat Highcourt) ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅಧಿಕಾರಿಗಳ ನಿರ್ಲಕ್ಷ್ಯ ಆಡಳಿತ ಯಂತ್ರದ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತಾಗಿದೆ ಎಂದು ಹೇಳಿದೆ.

    ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಬಿರೇನ್ ವೈಷ್ಣವ್ ಮತ್ತು ನ್ಯಾ.ದೇವನ್ ದೇಸಾಯಿ ಅವರನ್ನೊಳಗೊಂಡ ವಿಶೇಷ ಪೀಠ, ಗೇಮಿಂಗ್ ವಲಯ ನಿರ್ವಾಹಕರು ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಕಡ್ಡಾಯ ಅನುಮತಿಗಳು ಮತ್ತು ಪರವಾನಗಿಗಳನ್ನು ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ. ಅಧಿಕಾರಿಗಳು ಏನು ನಿದ್ದೆ ಮಾಡುತ್ತಿದ್ದಾರ ಎಂದು ಖಾರವಾಗಿ ಪ್ರಶ್ನಿಸಿದೆ. ಇದನ್ನೂ ಓದಿ: ನಕ್ಸಲರಿಂದ ನಿರಂತರ ಬೆದರಿಕೆ- ಪದ್ಮಶ್ರೀ ಹಿಂದಿರುಗಿಸಲು ಹೇಮಚಂದ್ ಮಾಂಝಿ ನಿರ್ಧಾರ

    ನಮ್ಮ ಆದೇಶದ ನಾಲ್ಕು ವರ್ಷಗಳ ನಂತರವೂ ಅಗ್ನಿ ಸುರಕ್ಷತೆಯ ವಿಷಯದಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಆರ್‌ಎಂಸಿ ಹೇಗೆ ಹೊಣೆಯಾಗುವುದಿಲ್ಲ? ಇದಕ್ಕೆ ಅಧಿಕಾರಿಗಳು ಹೊಣೆ. ಈ ಬಗ್ಗೆ ಪರಿಶೀಲನೆ ನಡೆಯದಿರುವುದು ಯಾರ ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿತು. ಇದನ್ನೂ ಓದಿ: ಇವಿಎಂ ಯಂತ್ರಗಳು ಏನು ಆಗದೇ ಹೋದರೆ ಸರಿ, ಜನ ನಮ್ಮ ಪರವಾಗಿದ್ದಾರೆ: ಡಿಕೆಶಿ

    ಗೇಮಿಂಗ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಒಂಭತ್ತು ಮಕ್ಕಳು ಸೇರಿ 28 ಮಂದಿ ಸಾವನ್ನಪ್ಪಿದ್ದರು. ಘಟನೆ ಬಳಿಕ ಮಾಲೀಕ ಸೇರಿ ಮೂವರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಆರು ಅಧಿಕಾರಿಗಳನ್ನು ಅಮಾನತುಗೊಳಿಸಿ ಗುಜರಾತ್ ಸರ್ಕಾರ ಸೋಮವಾರ ಆದೇಶ ಹೊರಡಿಸಿತ್ತು. ಇದನ್ನೂ ಓದಿ:  ಶಾರ್ಟ್‌ಸರ್ಕ್ಯೂಟ್‌ನಿಂದ ಎಲೆಕ್ಟ್ರಿಕ್‌ ಚಾರ್ಜಿಂಗ್ ಬ್ಯಾಟರಿ ಅಂಗಡಿ ಧಗಧಗ

  • 27 ಮಂದಿ ಬಲಿಯಾದ ರಾಜ್‌ಕೋಟ್‌ ಗೇಮಿಂಗ್‌ ಸೆಂಟರ್‌ಗೆ ಇರಲಿಲ್ಲ Fire NOC

    27 ಮಂದಿ ಬಲಿಯಾದ ರಾಜ್‌ಕೋಟ್‌ ಗೇಮಿಂಗ್‌ ಸೆಂಟರ್‌ಗೆ ಇರಲಿಲ್ಲ Fire NOC

    ಗಾಂಧಿನಗರ: 22 ಮಂದಿ ಸಾವನ್ನಪ್ಪಿದ ಗುಜರಾತ್‌ ರಾಜ್‌ಕೋಟ್‌ನಲ್ಲಿರುವ ಗೇಮಿಂಗ್‌ ಸೆಂಟರ್‌ (Rajkot TRP Game Zone Fire) ಬಳಿ ಅಗ್ನಿಶಾಮಕ ನಿರಾಕ್ಷೇಪಣಾ ಪ್ರಮಾಣಪತ್ರ (Fire NOC) ಇರಲಿಲ್ಲ ಎಂಬ ಶಾಕಿಂಗ್‌ ವಿಚಾರ ಬೆಳಕಿಗೆ ಬಂದಿದೆ.

    ಟಿಆರ್‌ಪಿ ಅಮ್ಯೂಸ್‌ಮೆಂಟ್ ಮತ್ತು ಥೀಮ್ ಪಾರ್ಕ್‌ನ ಎರಡು ಅಂತಸ್ತಿನ ಗೇಮಿಂಗ್ ಝೋನ್‌ನಲ್ಲಿ ನಡೆದ ಬೆಂಕಿ ದುರಂತದಲ್ಲಿ 27 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ತನಿಖೆ ಚುರುಕುಗೊಂಡಿದೆ. ತನಿಖೆಯ ವೇಳೆ ಮಾಲೀಕರು ಎನ್‌ಒಸಿಗಾಗಿ ಯಾವುದೇ ಅರ್ಜಿ ಸಲ್ಲಿಸದೇ ಇರುವ ವಿಚಾರ ತಿಳಿದು ಬಂದಿದೆ.

    ಅಗ್ನಿಶಾಮಕ ಎನ್‌ಒಸಿಗಾಗಿ ಟಿಆರ್‌ಪಿ ಅರ್ಜಿ ಸಲ್ಲಿಸಿಲ್ಲ ಎಂದು ರಾಜ್‌ಕೋಟ್‌ನ ಉಪ ಮುನ್ಸಿಪಲ್ ಕಮಿಷನರ್ ಸ್ವಪ್ನಿಲ್ ಖರೆ ಹೇಳಿದ್ದಾರೆ. ನಾವು ಗೇಮಿಂಗ್ ವಲಯದ ವಿವರಗಳನ್ನು ಪರಿಶೀಲಿಸುತ್ತಿದ್ದೇವೆ. ನಿರ್ವಾಹಕರು ಅಗ್ನಿಶಾಮಕ ಎನ್‌ಒಸಿಗೆ ಅರ್ಜಿ ಸೇರಿದಂತೆ ಬೇರೆ ಯಾವುದೇ ಕ್ಲಿಯರೆನ್ಸ್‌ಗೆ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಅರ್ಜಿ ಸಲ್ಲಿಸಿಲ್ಲ ಎಂದು ತಿಳಿಸಿದರು.

    ಪೊಲೀಸರು ಘಟಕದ ವ್ಯವಸ್ಥಾಪಕ ಮತ್ತು ಸಹ-ಮಾಲೀಕನನ್ನು ಬಂಧಿಸಿದ್ದಾರೆ. ಫೈರ್‌ ಎನ್‌ಒಸಿ ಇಲ್ಲದೇ ಇಷ್ಟು ದೊಡ್ಡ ಗೇಮಿಂಗ್ ಝೋನ್ ಹೇಗೆ ಕಾರ್ಯನಿರ್ವಹಿಸುತ್ತಿತ್ತು ಎಂಬ ಬಗ್ಗೆ ತನಿಖೆ ನಡೆಸುವುದಾಗಿ ರಾಜ್‌ಕೋಟ್ ಮೇಯರ್ ನಯ್ನಾ ಪೆಧಾಡಿಯಾ ಶನಿವಾರ ಹೇಳಿದ್ದಾರೆ.


    ನಿತಿನ್ ಜೈನ್ ಮತ್ತು ಯುವರಾಜ್ ಸಿಂಗ್ ಸೋಲಂಕಿ ಅವರನ್ನು ಬಂಧನ ಮಾಡಲಾಗಿದೆ. ಮೂರನೇ ವ್ಯಕ್ತಿಗಾಗಿ ಶೋಧ ನಡೆಸಲಾಗುತ್ತಿದೆ. ಗೇಮಿಂಗ್ ವಲಯವನ್ನು ಎರಡು ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತು.

    ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹದು ಎಂದು ಅಧಿಕಾರಿಗಳ ಶಂಕೆ ವ್ಯಕ್ತಪಡಿಸಿದ್ದಾರೆ. ಗೇಮಿಂಗ್‌ ಕೇಂದ್ರವನ್ನು ಶೆಡ್‌ನ ಅಡಿಯಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ಸಾಕಷ್ಟು ಹವಾನಿಯಂತ್ರಣಗಳನ್ನು ಅಳವಡಿಸಲಾಗಿದೆ. ಬಿಸಿಯಿಂದಾಗಿ ವಿದ್ಯುತ್ ವೈರಿಂಗ್ ಲೋಡ್ ನಿಭಾಯಿಸಲು ಸಾಧ್ಯವಾಗದೇ ಇದ್ದಾಗ ಶಾರ್ಟ್-ಸರ್ಕ್ಯೂಟ್‌ಗೆ ಕಾರಣವಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಅನುಮಾನನ್ನು ವ್ಯಕ್ತಪಡಿಸಿದ್ದಾರೆ.

     

  • ರಾಜ್‌ಕೋಟ್‌ ಅಗ್ನಿ ದುರಂತಕ್ಕೆ 25 ಸಾವು – ತುಂಬಾ ನೊಂದಿದ್ದೇನೆ ಎಂದು ಮೋದಿ ಸಂತಾಪ!

    ರಾಜ್‌ಕೋಟ್‌ ಅಗ್ನಿ ದುರಂತಕ್ಕೆ 25 ಸಾವು – ತುಂಬಾ ನೊಂದಿದ್ದೇನೆ ಎಂದು ಮೋದಿ ಸಂತಾಪ!

    – ಸಂತ್ರಸ್ತರಿಗೆ ಅಗತ್ಯ ನೆರವು ಸಿಗಲಿದೆ ಎಂದ ಪ್ರಧಾನಿ
    – ಅಗ್ನಿ ದುರಂತದಲ್ಲಿ ಸಾವಿನ ಸಂಖ್ಯೆ 25ಕ್ಕೆ ಏರಿಕೆ

    ಗಾಂಧಿನಗರ: ಗುಜರಾತ್‌ ರಾಜ್‌ಕೋಟ್‌ನ ಗೇಮಿಂಗ್ ಝೋನ್‌ನಲ್ಲಿ (Rajkot Gaming Zone) ಶನಿವಾರ ಸಂಜೆ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ರಾಜ್‌ಕೋಟ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡ ಕಂಡು ತೀವ್ರ ನೊಂದಿದ್ದೇನೆ. ನನ್ನ ಆಲೋಚನೆಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರೊಂದಿಗೂ ಇದೆ. ಮೃತರಿಗೆ ನನ್ನ ಸಂತಾಪ ಸಲ್ಲಿಸುತ್ತೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ನೀಡಲು ಸ್ಥಳೀಯ ಆಡಳಿತ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದ್ದಾರೆ.

    ಸಾವಿನ ಸಂಖ್ಯೆ 25ಕ್ಕೆ ಏರಿಕೆ:
    ರಾಜ್‌ಕೋಟ್‌ನ ಗೇಮಿಂಗ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಜ್‌ಕೋಟ್‌ನ ಗೇಮ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ (Rajkot Fire Incident) ತಕ್ಷಣದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಮುನ್ಸಿಪಲ್ ಕಾರ್ಪೊರೇಷನ್ ಹಾಗೂ ಆಡಳಿತಕ್ಕೆ ಸೂಚನೆ ನೀಡಲಾಗಿದೆ. ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆಗೆ ಆದ್ಯತೆ ನೀಡಲು ಸೂಚನೆ ನೀಡಲಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.

    ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ನಾವು ಸಾಧ್ಯವಾದಷ್ಟು ಶವಗಳನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದೇವೆ. ಸದ್ಯಕ್ಕೆ ಸುಮಾರು 20 ಶವಗಳನ್ನು ಹೊರತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ರಾಜ್‌ಕೋಟ್ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.

    ಬೆಂಕಿ ಅವಘಡ ಸಂಬಂಧ ತನಿಖೆ ನಡೆಸಲಾಗುವುದು. ಗೇಮಿಂಗ್ ವಲಯವು ಯುವರಾಜ್ ಸಿಂಗ್ ಸೋಲಂಕಿ ಎಂಬ ವ್ಯಕ್ತಿಯ ಮಾಲೀಕತ್ವದಲ್ಲಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ನಾವು ಅಗ್ನಿಶಾಮಕ ದಳದ ಅಧಿಕಾರಿಗಳೊಂದಿಗೆ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದರ ಕುರಿತು ಚರ್ಚಿಸುತ್ತೇವೆ. ಸದ್ಯಕ್ಕೆ ನಗರದ ಎಲ್ಲಾ ಗೇಮಿಂಗ್ ವಲಯಗಳನ್ನು ಮುಚ್ಚುವಂತೆ ಸಂದೇಶ ನೀಡಲಾಗಿದೆ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ಹೇಳಿದ್ದಾರೆ.

  • ಗುಜರಾತ್‌ನ ರಾಜ್‌ಕೋಟ್‌ ಗೇಮಿಂಗ್‌ ವಲಯದಲ್ಲಿ ಅಗ್ನಿ ದುರಂತ – 20 ಮಂದಿ ಸಾವು

    ಗುಜರಾತ್‌ನ ರಾಜ್‌ಕೋಟ್‌ ಗೇಮಿಂಗ್‌ ವಲಯದಲ್ಲಿ ಅಗ್ನಿ ದುರಂತ – 20 ಮಂದಿ ಸಾವು

    ಗಾಂಧೀನಗರ: ಗುಜರಾತ್‌ (Gujarat) ರಾಜ್‌ಕೋಟ್‌ನ (Rajkot) ಗೇಮಿಂಗ್ ಝೋನ್‌ನಲ್ಲಿ ಶನಿವಾರ ಸಂಜೆ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ 20 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಜ್‌ಕೋಟ್‌ನ ಗೇಮ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ತಕ್ಷಣದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಮುನ್ಸಿಪಲ್ ಕಾರ್ಪೊರೇಷನ್ ಹಾಗೂ ಆಡಳಿತಕ್ಕೆ ಸೂಚನೆ ನೀಡಲಾಗಿದೆ. ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆಗೆ ಆದ್ಯತೆ ನೀಡಲು ಸೂಚನೆ ನೀಡಲಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ. ಇದನ್ನೂ ಓದಿ: ಮಹಿಳೆಯ ಧ್ವನಿಯಲ್ಲಿ ಮಾತನಾಡಿ 7 ವಿದ್ಯಾರ್ಥಿನಿಯರ ಅತ್ಯಾಚಾರ – ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ

    ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ನಾವು ಸಾಧ್ಯವಾದಷ್ಟು ಶವಗಳನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದೇವೆ. ಸದ್ಯಕ್ಕೆ ಸುಮಾರು 20 ಶವಗಳನ್ನು ಹೊರತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ರಾಜ್‌ಕೋಟ್‌ ಪೊಲೀಸ್‌ ಕಮಿಷನರ್‌ ಮಾಹಿತಿ ನೀಡಿದ್ದಾರೆ.

    ಬೆಂಕಿ ಅವಘಡ ಸಂಬಂಧ ತನಿಖೆ ನಡೆಸಲಾಗುವುದು. ಗೇಮಿಂಗ್ ವಲಯವು ಯುವರಾಜ್ ಸಿಂಗ್ ಸೋಲಂಕಿ ಎಂಬ ವ್ಯಕ್ತಿಯ ಮಾಲೀಕತ್ವದಲ್ಲಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ನಾವು ಅಗ್ನಿಶಾಮಕ ದಳದ ಅಧಿಕಾರಿಗಳೊಂದಿಗೆ ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದರ ಕುರಿತು ಚರ್ಚಿಸುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ಕಲ್ಲು ತೂರಾಟ

    ವಲಯದೊಳಗೆ ಬೆಂಕಿಯನ್ನು ನಿಯಂತ್ರಿಸಿದ ನಂತರ ನಿಖರವಾದ ಸಾವು-ನೋವುಗಳ ಸಂಖ್ಯೆಯನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ. ನಾವು ಬೆಂಕಿ ಅವಘಡದ ಕಾರಣವನ್ನು ಸಹ ತನಿಖೆ ಮಾಡುತ್ತೇವೆ. ನಗರದ ಎಲ್ಲಾ ಗೇಮಿಂಗ್ ವಲಯಗಳನ್ನು ಮುಚ್ಚುವಂತೆ ಸಂದೇಶ ನೀಡಲಾಗಿದೆ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ಹೇಳಿದ್ದಾರೆ.

  • ಅಶ್ಲೀಲ ವೀಡಿಯೋದಲ್ಲಿರುವುದು ಪತ್ನಿ ಎಂದು ಶಂಕಿಸಿ ಕೊಲೆಗೆ ಯತ್ನಿಸಿದ ಪತಿ

    ಅಶ್ಲೀಲ ವೀಡಿಯೋದಲ್ಲಿರುವುದು ಪತ್ನಿ ಎಂದು ಶಂಕಿಸಿ ಕೊಲೆಗೆ ಯತ್ನಿಸಿದ ಪತಿ

    ಗಾಂಧಿನಗರ: ವ್ಯಕ್ತಿಯೊಬ್ಬ ತಾನು ವೀಕ್ಷಿಸುತ್ತಿದ್ದ ಅಶ್ಲೀಲ ವೀಡಿಯೋದಲ್ಲಿರುವ ಮಹಿಳೆಯನ್ನು (Woman) ತನ್ನ ಪತ್ನಿ ಎಂದು ಶಂಕಿಸಿ ಚೂಪಾದ ವಸ್ತುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ ಘಟನೆ ಗುಜರಾತ್‍ನ ರಾಜ್‍ಕೋಟ್‍ನಲ್ಲಿ (Rajkot) ನಡೆದಿದೆ.

    ಹರೇಶ್ ಭೂಪ್ಕರ್ (51) ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪಿ ಎಂದು ಗುರುತಿಸಲಾಗಿದೆ. ಗೀತಾ ಭೂಪ್ಕರ್ (45) ಹಲ್ಲೆಗೊಳಗಾದ ಮಹಿಳೆ. ಈ ವೇಳೆ ದಂಪತಿಯ ಪುತ್ರಿ ತಾಯಿಯ ರಕ್ಷಣೆಗೆ ಬಂದಿದ್ದು, ಅವರು ಸಹ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಾಸಕ ಅಜಯ್ ಸಿಂಗ್ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮನೆ ಕೆಲಸದಾತನ ಶವ ಪತ್ತೆ

    ಮಾರ್ಕೆಟಿಂಗ್ ಉದ್ಯೋಗದಲ್ಲಿರುವ ಆರೋಪಿ ಹರೇಶ್ ಇತ್ತೀಚೆಗೆ ಹೊಸ ಮೊಬೈಲ್ ಖರೀದಿಸಿದ್ದ. ಮೊಬೈಲ್ ಖರೀದಿ ಬಳಿಕ ಅಶ್ಲೀಲ ವೀಡಿಯೋ ವ್ಯಸನಕ್ಕೆ ಅಂಟಿಕೊಂಡಿದ್ದ. ಈ ಹಿಂದೆಯೂ ಗೀತಾ ಅವರ ಮೇಲೆ ತಮ್ಮ ಗೆಳೆಯನೊಂದಿಗೆ ಪೋರ್ನ್ ವೀಡಿಯೊಗಳಲ್ಲಿ ನಟಿಸುತ್ತಿದ್ದಾರೆ ಎಂದು ಆರೋಪಿಸಿ ಜಗಳವಾಡಿದ್ದ. ಇದೇ ವಿಚಾರವಾಗಿ ಮಹಿಳೆ ಕಳೆದ ವಾರ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಎಫ್‍ಐಆರ್ ದಾಖಲಿಸುವ ಮೊದಲು ಕುಟುಂಬವು ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಂಡಿತ್ತು.

    ಇದೀಗ ಹಲ್ಲೆಯ ಬಳಿಕ ಗೀತಾ ನೀಡಿದ ದೂರಿನ ಮೇರೆಗೆ ವಿಶ್ವವಿದ್ಯಾನಿಲಯ ಠಾಣೆ ಪೊಲೀಸರು (Police) ಐಪಿಸಿ ಸೆಕ್ಷನ್ 324ರ (ಹಲ್ಲೆ) ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಗೀತಾ ಮತ್ತು ಅವರ ಮಗಳನ್ನು ಚಿಕಿತ್ಸೆಗಾಗಿ ರಾಜ್‍ಕೋಟ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂ ಕೀಳಲು ಕೆರೆಗೆ ಇಳಿದ ತಂದೆ-ಮಗ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಂಥ್ ಸ್ಥಾನಕ್ಕೆ ಆಂಧ್ರದ ಕೆ.ಎಸ್.ಭರತ್ ಆಯ್ಕೆ

    ಪಂಥ್ ಸ್ಥಾನಕ್ಕೆ ಆಂಧ್ರದ ಕೆ.ಎಸ್.ಭರತ್ ಆಯ್ಕೆ

    ರಾಜ್‍ಕೋಟ್: ಗಾಯಗೊಂಡು ವಿಶ್ರಾಂತಿ ಪಡೆಯುತ್ತಿರುವ ರಿಷಭ್ ಪಂತ್ ಅವರ ಸ್ಥಾನದಲ್ಲಿ ಆಂಧ್ರ ಪ್ರದೇಶದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆ.ಎಸ್.ಭಾರತ್ ರಾಜ್‍ಕೋಟ್ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಅವರಿಗೆ ಆಡಲು ಅವಕಾಶ ಸಿಗಲಿಲ್ಲ.

    ರಿಷಭ್ ಪಂತ್ ಬದಲಿಗೆ ಮನೀಶ್ ಪಾಂಡೆ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದರು. ಇತ್ತ ಕೆಎಲ್ ರಾಹುಲ್ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಭಾರತ-ಎ ಪ್ರವಾಸಕ್ಕೆ ನ್ಯೂಜಿಲೆಂಡ್‍ಗೆ ಹೋಗುವುದರೊಂದಿಗೆ, ಅವರನ್ನು ಪಂತ್ ಅವರ ಬ್ಯಾಕಪ್ ಆಗಿ ಸೇರಿಸಲು ಮಂಡಳಿ ನಿರ್ಧರಿಸಿದೆ.

    ಪಂತ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಚೇತರಿಕೆ ಬಗ್ಗೆ ಇಲ್ಲಿ ನಿಗಾ ವಹಿಸಲಾಗುತ್ತಿದೆ. ಭಾನುವಾರ ಮೂರನೇ ಏಕದಿನ ಪಂದ್ಯದಲ್ಲಿ ಅವರು ಆಡಬೇಕೋ, ಬೇಡವೋ ಎಂದು ನಿರ್ಧರಿಸಲಾಗುತ್ತದೆ. ಮುಂಬೈನಲ್ಲಿ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಪಂತ್ ತಲೆಗೆ ಪೆಟ್ಟಾಗಿತ್ತು. ಈ ಪಂದ್ಯದಲ್ಲಿ ಪಂತ್ 28ರನ್ ಸಿಡಿಸಿದ್ದರು. ಪಂತ್ ವಿಶ್ರಾಂತಿ ಹಿನ್ನೆಲೆಯಲ್ಲಿ ಮನೀಶ್ ಪಾಂಡೆ ಮೈದಾನಕ್ಕಿಳಿದರು. ಆ ಪಂದ್ಯದಲ್ಲಿ ಕೆ.ಎಲ್.ರಾಹುಲ್ ವಿಕೆಟ್ ಕೀಪಿಂಗ್ ಮಾಡಿದ್ದರು.

    ರಾಜ್‍ಕೋಟ್ ಏಕದಿನ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಗಾಯಗೊಂಡರೆ, ಆ ಸಂದರ್ಭದಲ್ಲಿ ಭರತ್ ಅವರನ್ನು ಕಣಕ್ಕಿಳಿಸಬಹುದು. ತಂಡಕ್ಕೆ ಬ್ಯಾಕಪ್ ಆಗಿ ಭರತ್ ಅವರನ್ನು ಕರೆಸಿಕೊಳ್ಳುವುದು ಇದೇ ಮೊದಲಲ್ಲ. ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧ ಕೋಲ್ಕತ್ತಾದಲ್ಲಿ ನಡೆದ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ವೃದ್ಧಿಮಾನ್ ಸಹಾ ಅವರ ಬ್ಯಾಕಪ್ ಆಗಿ ಭರತ್ ಅವರನ್ನು ಉಳಿಸಿಕೊಳ್ಳಲಾಗಿತ್ತು.

    ಆಂಧ್ರಪ್ರದೇಶ ಪರ ಆಡಿದ ಭಾರತ್ 71 ಪ್ರಥಮ ದರ್ಜೆ ಪಂದ್ಯಗಳಲ್ಲಿ 37.66 ಸರಾಸರಿಯಲ್ಲಿ 4,143 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಅವರು 51 ಗ್ರೇಡ್-ಎ ಪಂದ್ಯಗಳಲ್ಲಿ 1,351 ರನ್ ಗಳಿಸಿದ್ದಾರೆ.