Tag: ರಾಜ್ಕುಮಾರ್ ಪಾಟೀಲ್ ತೇಲ್ಕೂರ್

  • ಶಾಸಕರು ಮಗು ನಂದು ಅಂತ ಒಪ್ಪಿಕೊಂಡಿದ್ದಾರೆ: ಮಹಿಳೆ

    ಶಾಸಕರು ಮಗು ನಂದು ಅಂತ ಒಪ್ಪಿಕೊಂಡಿದ್ದಾರೆ: ಮಹಿಳೆ

    ಬೆಂಗಳೂರು: ಬಿಜೆಪಿ ಶಾಸಕನಿಗೆ ಮಹಿಳೆ ಬ್ಲಾಕ್ ಮೇಲ್ ಕುರಿತು ಶಾಸಕ ರಾಜ್ಕುಮಾರ್ ಪಾಟೀಲ್ ತೇಲ್ಕೂರ್ ಅವರು ಮಗು ತಮ್ಮದು ಎಂದು ಒಪ್ಪಿಕೊಂಡಿದ್ದಾರೆ ಎಂದು ಮಹಿಳೆ ಹೇಳಿದರು.

    ತಮ್ಮ ವಕೀಲ ಜಗದೀಶ್ ಜೊತೆ ಸುದ್ದಿಗೋಷ್ಠಿ ನಡೆಸಿದ ಅವರು, ಶಾಸಕರು ಚೈಲ್ಡ್‍ವುಡ್‍ನಿಂದಲೂ ಪರಿಚಯ. ಅವರು ಮಗು ನಂದು ಎಂದು ಒಪ್ಪಿಕೊಂಡಿದ್ದಾರೆ. ಖಾಸಗಿ ಹೋಟೆಲ್‍ನಲ್ಲಿ ಆರು ತಿಂಗಳ ಹಿಂದೆ ಭೇಟಿ ಆಗಿದ್ದರು. ಅಲ್ಲಿ ಮಗನಿಗೆ ನ್ಯಾಯಕೊಡಿಸುವ ಭರವಸೆ ಪತ್ನಿ ಮುಂದೆಯೇ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ನನ್ನ ಮಗುವಿಗೆ ನ್ಯಾಯಬೇಕು. ನನ್ನ ಮೇಲೆ ಕೇಸ್ ಹಾಕಲಿ ನನಗೆ ತೊಂದರೆ ಇಲ್ಲ ಎಂದು ಹೇಳಿದರು.

    ಸಿಎಂಗೆ ಟ್ವೀಟ್ ಮಾಡಿದ್ದರಿಂದ ನಿನ್ನೆ ಕೆಲವು ಕಾರ್ಯಕರ್ತರು ಬಂದು ಕಾಂಗ್ರೆಸ್‍ನವರು ಮಾಡಿಸಿದ್ದಾರೆ ಅಂತಾ ಹೇಳು ಎಂದು ಒತ್ತಡ ಹಾಕುತ್ತಿದ್ದಾರೆ. ಜೊತೆಗೆ ವಿಧಾನಸೌಧ ಪೊಲೀಸರು ನನ್ನನ್ನು ಕರೆದುಕೊಂಡು ಹೋಗಿ ನಿನ್ನೆ ಇಡೀ ದಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿದ್ದಾರೆ ಎಂದರು. ಇದನ್ನೂ ಓದಿ: ಕಳೆದ ಎರಡು ವರ್ಷದಿಂದ ನ್ಯಾಯಕ್ಕಾಗಿ ಹೋರಾಟ ಮಾಡ್ತಿದ್ದೇನೆ: ಮಹಿಳೆ

    ಈ ಬಗ್ಗೆ ವಿಚಾರ ಏನು ಕೇಳಿದರೂ, ಪೊಲೀಸರು ಸಮಯಕ್ಕೆ ಸರಿಯಾಗಿ ಊಟ ತಿಂಡಿ ಬರುತ್ತದೆ. ತಿಂದು ಸುಮ್ಮನೆ ಕೂರುವಂತೆ ಹೇಳಿದ್ದಾ ರೆ ಹೊರತು ಯಾವ ವಿಚಾರಕ್ಕಾಗಿ ಕೆರದುಕೊಂಡು ಬಂದಿದ್ದೇವೆ ಎನ್ನುವುದರ ಬಗ್ಗೆ ಹೇಳಲೇ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಯಾರ ಮೇಲೂ ಆರೋಪ ಮಾಡಲ್ಲ, ಕಾನೂನು ಹೋರಾಟಕ್ಕೆ ಸಿದ್ಧ: ತೇಲ್ಕೂರ್

    ರಾತ್ರಿ 9 ಗಂಟೆಗೆ ಪೊಲೀಸ್ ಠಾಣೆಯಿಂದ ಹೊರಗೆ ಬಿಟ್ಟಿದ್ದಾರೆ. ಆದರೆ ಈಗಲೂ ಮನೆ ಹತ್ತಿರ ಪೊಲೀಸರು ಇದ್ದಾರೆ. ಈ ಎಲ್ಲಾ ವ್ಯವಸ್ಥೆಯಿಂದ ನಾನು ಬದುಕಿದರೆ ಸಾಕು ಎನಿಸುತ್ತಿದೆ. ನನಗೆ ಮೋಸ ಆಗಿದೆ, ನನಗೆ ನ್ಯಾಯಕೊಡಿಸಿ ಎಂದು ಸಿಎಂಗೆ ಟ್ವೀಟ್ ಮಾಡಿದ್ದರಿಂದ ಇಷ್ಟೆಲ್ಲ ಸಮಸ್ಯೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

  • ಮಹಿಳೆ ಬ್ಲಾಕ್‍ಮೇಲ್ ಮಾಡ್ತಿದ್ದು, ನನ್ನದೇನೂ ತಪ್ಪಿಲ್ಲ: ಶಾಸಕ ತೇಲ್ಕೂರ್ ಕಣ್ಣೀರು

    ಮಹಿಳೆ ಬ್ಲಾಕ್‍ಮೇಲ್ ಮಾಡ್ತಿದ್ದು, ನನ್ನದೇನೂ ತಪ್ಪಿಲ್ಲ: ಶಾಸಕ ತೇಲ್ಕೂರ್ ಕಣ್ಣೀರು

    – 2 ಕೋಟಿ ಹಣಕ್ಕಾಗಿ ಮಹಿಳೆ ಬೇಡಿಕೆ
    – ಎಲ್ಲರಿಗೂ ಕುಟುಂಬವಿದ್ದು, ಅವರ ಜೊತೆ ಬದುಕ್ತಿದ್ದೇವೆ

    ಬೆಂಗಳೂರು: ಮಹಿಳೆ ಬ್ಲಾಕ್ ಮೇಲ್ ವಿಷಯಕ್ಕೆ ಸಂಬಂಧಿಸಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಕುರಿತು ದೂರು ದಾಖಲಿಸಿದ್ದೇನೆ ಎಂದು ಶಾಸಕ ರಾಜ್ಕುಮಾರ್ ಪಾಟೀಲ್ ತೇಲ್ಕೂರ್ ಹೇಳುತ್ತಾ ಕಣ್ಣಿರು ಹಾಕಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ದಿನಗಳಿಂದ ಮಹಿಳೆ ಹಾಗೂ ಆಕೆಯ ಪತಿಯಿಂದ ಬ್ಲಾಕ್ ಮೇಲ್ ಆಗುತ್ತಿದೆ. ಈ ಪ್ರಕರಣದಿಂದ ನಾನು ಭಾರೀ ನೊಂದಿದ್ದೇನೆ. ನನ್ನ ಕುಟುಂಬ ಕೂಡ ಮುಜುಗರ ಅನುಭವಿಸುತ್ತಿದೆ. ನಾನು ಬಹಳಷ್ಟು ಸಮಾಜಕ್ಕೆ ಒಳಿತಾಗುವ ಕೆಲಸ ಮಾಡಿಕೊಂಡು ಬಂದಿದ್ದೇನೆ. ಇದೊಂದು ಪ್ರಕರಣದಿಂದ ನನ್ನ ಹೆಸರಿಗೆ ಬಹಳಷ್ಟು ಮಸಿ ಬಳಿಯುವ ಕೆಲಸವಾಗುತ್ತಿದೆ ಎಂದ ಅವರು, ಮಹಿಳೆ ಮತ್ತು ಆಕೆಯ ಪತಿ ಕಳೆದ ಹಲವು ದಿನಗಳಿಂದ 2 ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ಹೇಳಿದರು.

    ನನ್ನ ವಿರುದ್ಧ ಈವರೆಗೆ ಯಾವುದೇ ಆರೋಪವಿಲ್ಲ. ನನ್ನ ವಿರುದ್ಧ ಬಂದ ಆರೋಪವನ್ನು ಸ್ವತಂತ್ರವಾಗಿ ಎದುರಿಸುತ್ತೇನೆ. ಸರ್ಕಾರ ಹಾಗೂ ಪಕ್ಷ ಇದರ ಬಗ್ಗೆ ಹಸ್ತಕ್ಷೇಪ ಮಾಡುವುದಿಲ್ಲ. ಕಾರ್ಯಕರ್ತರು ಈ ಘಟನೆಗೆ ಸಂಬಂಧಿಸಿ ಹಸ್ತಕ್ಷೇಪ ಮಾಡಬೇಡಿ. ನನ್ನ ಮೇಲೆ ಬಂದಿರುವಂತಹ ಎಲ್ಲಾ ಆರೋಪಗಳನ್ನು ನಾನೊಬ್ಬನೇ ಅದನ್ನು ಎದುರಿಸುತ್ತೇನೆ ಎಂದರು. ಇದನ್ನೂ ಓದಿ: ಯಾರ ಮೇಲೂ ಆರೋಪ ಮಾಡಲ್ಲ, ಕಾನೂನು ಹೋರಾಟಕ್ಕೆ ಸಿದ್ಧ: ತೇಲ್ಕೂರ್

    ಈ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ. ಎಲ್ಲರಿಗೂ ಕುಟುಂಬವಿದೆ. ಕುಟುಂಬದ ಜೊತೆಗೆ ನಾವು ಬದುಕುತ್ತಿದ್ದೇವೆ. ಇಂತಹ ವಿಷಯಗಳನ್ನು ಆರೋಪಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಪ್ರಶ್ನಿಸಿದ ಅವರು ಕಣ್ಣೀರು ಹಾಕಿದರು.

    ಮಹಿಳೆಯೊಬ್ಬರಿಂದ ನಿರಂತರವಾಗಿ ಬ್ಲಾಕ್ ಮೇಲ್ ಗೆ ಒಳಗಾಗಿದ್ದೇನೆ ಎಂದು ಶಾಸಕರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಾಸಕರು ದೂರು ನೀಡುತ್ತಿದ್ದಂತೆಯೇ ಮಹಿಳೆ ಕೂಡ ಪ್ರತ್ಯಾರೋಪ ಮಾಡಿದ್ದಾರೆ. ಶಾಸಕರಿಂದ ನನಗೆ ಅನ್ಯಾಯ ಆಗಿದೆ. ನ್ಯಾಯಕ್ಕಾಗಿ ಕಳೆದೆರಡು ವರ್ಷಗಳಿಂದ ಹೋರಾಡುತ್ತಿದ್ದೇನೆ ಎಂದು ಮಹಿಳೆ ವಕೀಲ ಜಗದೀಶ್ ಮೂಲಕ ಠಾಣೆಗೆ ತೆರಳಿದ್ದಾರೆ. ಇದನ್ನೂ ಓದಿ: ಕಳೆದ ಎರಡು ವರ್ಷದಿಂದ ನ್ಯಾಯಕ್ಕಾಗಿ ಹೋರಾಟ ಮಾಡ್ತಿದ್ದೇನೆ: ಮಹಿಳೆ

  • ಮಹಿಳೆಯಿಂದ ಬ್ಲಾಕ್‍ಮೇಲ್ ಆರೋಪ- ತೇಲ್ಕೂರ್‌ರಿಂದ ವಿವರಣೆ ಕೇಳಿದ ಕಟೀಲ್

    ಮಹಿಳೆಯಿಂದ ಬ್ಲಾಕ್‍ಮೇಲ್ ಆರೋಪ- ತೇಲ್ಕೂರ್‌ರಿಂದ ವಿವರಣೆ ಕೇಳಿದ ಕಟೀಲ್

    ಬೆಂಗಳೂರು: ಮಹಿಳೆಯೊಬ್ಬರು ಬ್ಲಾಕ್ ಮೇಲೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ರಾಜ್ಕುಮಾರ್ ಪಾಟೀಲ್ ತೇಲ್ಕೂರ್ ಅವರಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿವರಣೆ ಕೇಳಿದ್ದಾರೆ.

    ಮಹಿಳೆ ಬ್ಲಾಕ್ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೊಡಿ. ಮಾಧ್ಯಮಗಳಲ್ಲಿ ನಿಮ್ಮ ಬಗ್ಗೆ ಪ್ರಸಾರ ಆಗುತ್ತಿರುವ ಆರೋಪ ಬಗ್ಗೆ ಮಾಹಿತಿ ನೀಡುವಂತೆ ಕಟೀಲ್ ಅವರು ಶಾಸಕರಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಯಾರ ಮೇಲೂ ಆರೋಪ ಮಾಡಲ್ಲ, ಕಾನೂನು ಹೋರಾಟಕ್ಕೆ ಸಿದ್ಧ: ತೇಲ್ಕೂರ್

    ಮಹಿಳೆಯೊಬ್ಬರಿಂದ ನಿರಂತರವಾಗಿ ಬ್ಲಾಕ್ ಮೇಲ್ ಗೆ ಒಳಗಾಗಿದ್ದೇನೆ ಎಂದು ಶಾಸಕರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಾಸಕರು ದೂರು ನೀಡುತ್ತಿದ್ದಂತೆಯೇ ಮಹಿಳೆ ಕೂಡ ಪ್ರತ್ಯಾರೋಪ ಮಾಡಿದ್ದಾರೆ. ಶಾಸಕರಿಂದ ನನಗೆ ಅನ್ಯಾಯ ಆಗಿದೆ. ನ್ಯಾಯಕ್ಕಾಗಿ ಕಳೆದೆರಡು ವರ್ಷಗಳಿಂದ ಹೋರಾಡುತ್ತಿದ್ದೇನೆ ಎಂದು ಮಹಿಳೆ ವಕೀಲ ಜಗದೀಶ್ ಮೂಲಕ ಠಾಣೆಗೆ ತೆರಳಿದ್ದಾರೆ. ಇದನ್ನೂ ಓದಿ: ಕಳೆದ ಎರಡು ವರ್ಷದಿಂದ ನ್ಯಾಯಕ್ಕಾಗಿ ಹೋರಾಟ ಮಾಡ್ತಿದ್ದೇನೆ: ಮಹಿಳೆ

  • ಯಾರ ಮೇಲೂ ಆರೋಪ ಮಾಡಲ್ಲ, ಕಾನೂನು ಹೋರಾಟಕ್ಕೆ ಸಿದ್ಧ: ತೇಲ್ಕೂರ್

    ಯಾರ ಮೇಲೂ ಆರೋಪ ಮಾಡಲ್ಲ, ಕಾನೂನು ಹೋರಾಟಕ್ಕೆ ಸಿದ್ಧ: ತೇಲ್ಕೂರ್

    – ಪಕ್ಷ ನನಗೆ ತುಂಬಾ ಕೆಲಸವನ್ನು ಕೊಟ್ಟಿದೆ

    ಕಲಬುರಗಿ: ಪ್ರಕರಣದ ಬಗ್ಗೆ ನಾನು ಯಾರ ಮೇಲೂ ಆರೋಪವನ್ನು ಮಾಡುವುದಿಲ್ಲ. ಕಾನೂನು ಹೋರಾಟಕ್ಕೆ ಸಿದ್ಧನಿದ್ದೇನೆ ಎಂದು ಬಿಜೆಪಿ ಶಾಸಕ ರಾಜ್ಕುಮಾರ್ ಪಾಟೀಲ್ ತೇಲ್ಕೂರ್ ಪ್ರತಿಕ್ರಿಯಿಸಿದರು.

    ಮಹಿಳೆ ಬ್ಲಾಕ್ ಮೇಲ್ ಪ್ರಕರಣ ಸಂಬಂಧ ಮೊದಲ ಬಾರಿಗೆ ಪ್ರತಿಕ್ರಿಯಿಸಿ, ನಾನು ಯಾವುದೇ ತಪ್ಪು ಮಾಡಿಲ್ಲ. ಸರ್ಕಾರ ಯಾವುದೇ ರೀತಿಯ ತನಿಖೆ ನಡೆಸಲಿ ನಾನು ಸಿದ್ಧನಿದ್ದೇನೆ. ತಪ್ಪಿತಸ್ಥರು ಯಾರೇ ಇದ್ರೂ ಕ್ರಮಕೈಗೊಳ್ಳಲಿ. ನಾನು ನಿರಂತರ ಬ್ಲಾಕ್ ಮೇಲ್ ಗೆ ಒಳಗಾಗಿದ್ದೇನೆ. ಈ ಬಗ್ಗೆ ನಾನು ಯಾರ ಮೇಲೂ ಆರೋಪವನ್ನು ಮಾಡುವುದಿಲ್ಲ ಎಂದು ವಿವರಿಸಿದರು. ಇದನ್ನೂ ಓದಿ: ಸೇಡಂ ಬಿಜೆಪಿ ಶಾಸಕ ತೇಲ್ಕೂರ್‌ಗೆ ಮಹಿಳೆ ಬ್ಲಾಕ್‍ಮೇಲ್

    ನಾನು ಈ ಕುರಿತು ಯಾವುದೇ ರೀತಿ ಮಾತನಾಡುವುದಿಲ್ಲ. ಈ ಬಗ್ಗೆ ನೀವು ಸಹ ಕೂಲಂಕುಶವಾಗಿ ನೀವು ಸಹ ತನಿಖೆಯನ್ನು ಮಾಡಬೇಕು. ನೀವು ಸತ್ಯ ಏನಿದೆ ಎಂಬುದನ್ನು ಪ್ರಕಟ ಮಾಡಬೇಕು. ಮಾಧ್ಯಮದವರ ಮೇಲೆ ನನಗೆ ವಿಶ್ವಾಸವಿದೆ. ನಿಮಗೆ ನಿಮ್ಮದೇ ಆದ ವಿಂಗ್ ಇದೆ. ನೀವೇ ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಸತ್ಯವನ್ನು ತೋರಿಸಿ. ನಾನು ಈ ಬಗ್ಗೆ ಬೆಂಗಳೂರಿನಲ್ಲಿ ಪೊಲೀಸರಿಗೆ ದೂರು ದಾಖಲಿಸಿದ್ದೇನೆ ಎಂದರು.

    ಫೆ.4ರಂದು ಸಿಎಂ ಅವರ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಟ್ವೀಟ್ ಬಂದಿದೆ ಎಂದು ನನಗೆ ಮಾಹಿತಿ ಬಂತು. ಆಗ ನಾನು ಕಲಬುರಗಿಯಲ್ಲಿ ಮೇಯರ್ ಚುನಾವಣೆಯಲ್ಲಿದ್ದೆ. ತಕ್ಷಣ ಫೆ.5ರಂದು ಬೆಂಗಳೂರಿಗೆ ನಾನು ಬಂದು ವಿಧಾನಸಭೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದೇನೆ ಎಂದು ಹೇಳಿದರು.

    ಕೇಸ್ ದಾಖಲಿಸುವುದಕ್ಕೂ ಮುನ್ನ ಸಿಎಂ ಜೊತೆ ಚರ್ಚೆ ಮಾಡಿದ್ರಾ ಎಂಬ ಪ್ರಶೆಗೆ ಉತ್ತರಿಸಿದ ಅವರು, ಪ್ರಕರಣದಲ್ಲಿ ಸುಖಾ ಸುಮ್ಮನೆ ಸಿಎಂ ಬೊಮ್ಮಾಯಿ ಹೆಸರು ತರವುದು ಸರಿ ಅಲ್ಲ. ನಾನು ಯಾರ ಬಳಿಯೂ ಈ ದೂರಿನ ಕುರಿತು ಮಾತುಕತೆ ಮಾಡಿಲ್ಲ. ಮೊದಲು ನಾನು ದೂರು ಕೊಟ್ಟಿದ್ದೇನೆ. ಉಳಿದಿದ್ದು ಪೊಲೀಸರು ನೋಡಿಕೊಳ್ಳುತ್ತಾರೆ ಎಂದರು.

    ಪ್ರಾಥಮಿಕ ಮಾಹಿತಿ ಏನೂ ಸಿಕ್ಕಿಲ್ಲ. ಪ್ರಸ್ತುತ ನಾನು ಎಫ್‍ಐಆರ್ ದಾಖಲಿಸಿದ್ದೇನೆ. ಇನ್ನುಳಿದಂತೆ ಪೊಲೀಸರು ನೋಡಿಕೊಳ್ಳುತ್ತಾರೆ. ಈ ಬಗ್ಗೆ ನಾನು ಪೊಲೀಸರ ಜೊತೆ ಯಾವುದೇ ರೀತಿಯ ಸಂಪರ್ಕವನ್ನು ಮಾಡುವುದಿಲ್ಲ. ಅವರು ಈ ಕುರಿತು ತನಿಖೆ ಮಾಡಲು ಸಂಪೂರ್ಣ ಸ್ವಾತಂತ್ರ್ಯವಿದೆ. ನಾನು ಅವರಿಗೆ ರಾಜಕೀಯ ಒತ್ತಡಗಳನ್ನು ಏರುವುದಿಲ್ಲ. ಈ ಹಿಂದೆ ಯಾರು ಇದ್ದಾರೆ ಎಂದು ನಾನು ಆರೋಪಗಳನ್ನೂ ಮಾಡುವುದಿಲ್ಲ. ನನಗೆ ಕಾನೂನಿನ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದರು.

    ನನಗೂ ಸಹ ಕುಟುಂಬವಿದೆ, ಹೀಗಾಗಿ ತುಂಬಾ ನೊಂದಿದ್ದೇನೆ. ನಾನು ಈ ಬಗ್ಗೆ ಹೆಚ್ಚು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ನನಗೂ ಕುಟುಂಬವಿದೆ. ತನಿಖೆ ವೇಳೆ ಸಿಕ್ಕ ಮಾಹಿತಿಯನ್ನು ನೀವು ಸಹ ನೋಡಬಹುದು. ಇಂತಹ ಕೆಲಸ ನಾನು ಮಾಡುವುದೂ ಇಲ್ಲ. ಪಕ್ಷಕ್ಕೆ, ಕಾರ್ಯಕರ್ತರಿಗೆ, ಮತದಾರರಿಗೆ ಮುಜುಗರ ತರುವ ಕೆಲಸ ನನ್ನಿಂದ ಆಗಿಲ್ಲ. ನಾನು ಕಾನೂನು ಹೋರಾಟಕ್ಕೆ ಸಿದ್ಧನಿದ್ದೇನೆ ಎಂದು ಹೇಳಿದರು.

    ನಾನು ಪರಿಪಾಲಕ. ಕಾನೂನು ಏನೇ ತೀರ್ಮಾನ ತೆಗೆದುಕೊಂಡರು ನಾನು ಅದನ್ನು ಪಾಲಿಸುತ್ತೇನೆ. ಹೆಚ್ಚಿನ ಮಾಹಿತಿ ಬೇಕಾದರೆ ಪೊಲೀಸರ ಬಳಿ ತೆಗೆದುಕೊಳ್ಳಿ. ಇದಕ್ಕಿಂತ ಹೆಚ್ಚು ನಾನು ಏನನ್ನು ಹೇಳಲು ಇಷ್ಟಪಡುವುದಿಲ್ಲ. ನೀವು ಸಹ ಈ ಕುರಿತು ಹೆಚ್ಚಿನ ತನಿಖೆ ಮಾಡಿ ನಂತರ ವರದಿ ಮಾಡಿ ಎಂದು ಮಾಧ್ಯಮ ಮಿತ್ರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು. ಇದನ್ನೂ ಓದಿ: 40 ವರ್ಷಗಳ ಹಿಂದೆ ಅವರನ್ನು ಭೇಟಿಯಾಗಿದ್ದೆ- ಸಿಧು ಜೊತೆಗಿನ ಮೊದಲ ಭೇಟಿ ನೆನೆದ ರಾಗಾ

    ಪಕ್ಷ ನನಗೆ ತುಂಬಾ ಕೆಲಸವನ್ನು ಕೊಟ್ಟಿದೆ. ಜನರಿಗಾಗಿ ನಾನು ತುಂಬಾ ಕೆಲಸ ಮಾಡಬೇಕಾಗಿದೆ. ಈ ಬಗ್ಗೆ ನಾನು ಯಾವುದೇ ರೀತಿ ತಲೆಯನ್ನು ಕೆಡಿಸಿಕೊಳ್ಳುವುದಿಲ್ಲ. ಪಕ್ಷವನ್ನು ಸಂಫಟನೆ ಮಾಡುವಂತಹ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ. ಪಕ್ಷ ಮತ್ತು ಜನರು ನನಗೆ ಕೊಟ್ಟ ಅಧಿಕಾರವನ್ನು ನಾನು ನೋಡಿಕೊಳ್ಳುತ್ತೇನೆ. ಅದಕ್ಕೆ ನನ್ನ ಸಂಪೂರ್ಣ ಸಮಯವನ್ನು ಮೀಸಲಿಡುತ್ತೇನೆ ಎಂದರು.

  • ಸೇಡಂ ಬಿಜೆಪಿ ಶಾಸಕ ತೇಲ್ಕೂರ್‌ಗೆ ಮಹಿಳೆ ಬ್ಲಾಕ್‍ಮೇಲ್

    ಸೇಡಂ ಬಿಜೆಪಿ ಶಾಸಕ ತೇಲ್ಕೂರ್‌ಗೆ ಮಹಿಳೆ ಬ್ಲಾಕ್‍ಮೇಲ್

    ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಪದೇ ಪದೇ ಸಿಡಿ ಕೇಸ್ ಸೇರಿದಂತೆ ಹಲವು ಬ್ಲಾಕ್‍ಮೇಲ್ ಕೇಸ್ ಸದ್ದು ಮಾಡುತ್ತಿದೆ. ಈ ನಡುವೆ ಇದೀಗ ಮತ್ತೊಂದು ಬ್ಲಾಕ್‍ಮೇಲ್ ಕೇಸ್ ವರದಿಯಾಗಿದ್ದು, ಸೇಡಂ ಬಿಜೆಪಿ ಶಾಸಕ ರಾಜ್ಕುಮಾರ್ ಪಾಟೀಲ್‍ಗೆ ಮಹಿಳೆಯೊಬ್ಬರು ಬ್ಲಾಕ್ ಮೇಲ್ ಮಾಡಿರುವ ಆರೋಪ ಕೇಳಿ ಬಂದಿದೆ.

    ಶಾಸಕರು ಉತ್ತರ ಕರ್ನಾಟಕ ಮೂಲದವರಾಗಿದ್ದು, ಮಹಿಳೆ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈಗಾಗಲೇ ಶಾಸಕರ ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಪೊಲೀಸರು ತಮಿಳುನಾಡಿನಲ್ಲಿ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕನಿಗೆ ಮಹಿಳೆಯಿಂದ ಬ್ಲ್ಯಾಕ್‍ಮೇಲ್ – ತಮಿಳುನಾಡಿನಲ್ಲಿ ನಾಲ್ವರು ವಶ

    ಸಿಎಂ ಫೇಸ್‍ಬುಕ್ ಪೇಜ್‍ನಲ್ಲಿ ಬಹಿರಂಗವಾಗಿ ಮಹಿಳೆ ಮೆಸೇಜ್ ಮಾಡಿದ್ದರು. ಮಹಿಳೆಯ ಬ್ಲ್ಯಾಕ್‍ಮೇಲ್ ಬೆದರಿಕೆಯಿಂದ ಎಂಎಲ್‍ಎ ದೂರು ನೀಡಿದ್ದಾರೆ. ಇತ್ತ ಪ್ರಕರಣ ಸಂಬಂಧ ಮಹಿಳೆಯು ವಕೀಲ ಜಗದೀಶ್ ಜೊತೆ ವಿಧಾನ ಸೌಧ ಪೊಲೀಸ್ ಠಾಣೆಗೆ ತೆರಳಿದ್ದಾರೆ.