Tag: ರಾಜೌರಿ

  • ರಜೌರಿಯಲ್ಲಿ ಸೇನಾ ವಾಹನದ ಮೇಲೆ ದಾಳಿ – ಪಠಾಣ್‌ಕೋಟ್‌ನಲ್ಲಿ ಅಕ್ರಮ ನುಸುಳುಕೋರನ ಹತ್ಯೆ

    ರಜೌರಿಯಲ್ಲಿ ಸೇನಾ ವಾಹನದ ಮೇಲೆ ದಾಳಿ – ಪಠಾಣ್‌ಕೋಟ್‌ನಲ್ಲಿ ಅಕ್ರಮ ನುಸುಳುಕೋರನ ಹತ್ಯೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu&Kashmir) ರಾಜೌರಿಯ (Rajouri) ಸುಂದರ್‌ಬನಿ ಮಲ್ಲಾ ರಸ್ತೆಯ ಅರಣ್ಯ ಪ್ರದೇಶದ ಫಾಲ್ (Phal) ಗ್ರಾಮದ ಬಳಿ ಸೇನಾ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ.

    ವರದಿಗಳ ಪ್ರಕಾರ ಸೇನಾ ವಾಹನವು ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಗುಂಡಿನ ದಾಳಿ ಮಾಡಲಾಗಿದೆ. ಯಾವುದೇ ಸಾವುನೋವು ಸಂಭವಿಸಿಲ್ಲ, ಸೈನಿಕರು ಗಾಯಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ತಮಿಳುನಾಡಿಗೆ ಅಮಿತ್ ಶಾ ಭೇಟಿ – ಕೊಯಮತ್ತೂರಿನಲ್ಲಿ ಬಿಜೆಪಿ ಕಚೇರಿ ಉದ್ಘಾಟಿಸಿದ ಅಮಿತ್ ಶಾ

    ಕಾಡಿನಲ್ಲಿ ಅವಿತುಕೊಂಡಿದ್ದ ಭಯೋತ್ಪಾದಕರು, ಸೇನಾ ವಾಹನದ ಮೇಲೆ ಗುಂಡು ಹಾರಿಸಿದ್ದಾರೆ. ಈ ಮಾರ್ಗವನ್ನು ಉಗ್ರರ ಒಳನುಸುಳುವಿಕೆ ಮಾರ್ಗವೆಂದು ವರದಿಯಾಗಿದೆ.

    ಸೇನೆಯು ಭಯೋತ್ಪಾದಕರ ಮೇಲೆ ಪ್ರತಿದಾಳಿ ನಡೆಸಿದೆ. ದಾಳಿ ನಡೆದ ಸ್ಥಳದಲ್ಲಿ ಸೇನೆಯು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಭಕ್ತಿ ಪ್ರಿಯ ಶಿವ.. ಪರಮೇಶ್ವರನ ಅಚ್ಚುಮೆಚ್ಚಿನ ಭಕ್ತರಿವರು

    ಪಂಜಾಬ್‌ನ ಪಠಾಣ್‌ಕೋಟ್‌ನ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಬಿಎಸ್‌ಎಫ್ ಸಿಬ್ಬಂದಿ ಪಾಕಿಸ್ತಾನಿ ಒಳನುಸುಳುಕೋರನನ್ನು ಹತ್ಯೆ ಮಾಡಿದ್ದಾರೆ. ಪಠಾಣ್‌ಕೋಟ್ ಮೂಲಕ ವ್ಯಕ್ತಿಯೊಬ್ಬ ಭಾರತಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದ. ಆರಂಭದಲ್ಲಿ ಬಿಎಸ್‌ಎಫ್ ಸಿಬ್ಬಂದಿ ಆತನಿಗೆ ಎಚ್ಚರಿಕೆ ನೀಡಿದ್ದರು. ಇದನ್ನು ನಿರ್ಲಕ್ಷಿಸಿ ಮುಂದೆ ಸಾಗುತ್ತಲೇ ಇದ್ದ ನುಸುಳುಕೋರರನನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಕೌಂಟರ್‌ಗೆ ಉಗ್ರರಿಬ್ಬರು ಬಲಿ

    ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಕೌಂಟರ್‌ಗೆ ಉಗ್ರರಿಬ್ಬರು ಬಲಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಜೌರಿಯಲ್ಲಿ (Rajouri) ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ (Terrorists) ನಡುವೆ ನಡೆದ 24 ಗಂಟೆಗಳ ಸುದೀರ್ಘ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.

    ರಾಜೌರಿಯ ಕಲಕೋಟ್ ಅರಣ್ಯದಲ್ಲಿ ನಿನ್ನೆ (ಬುಧವಾರ) ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಸೇನಾ ಯೋಧರು ಹುತಾತ್ಮರಾಗಿದ್ದರೆ. ಗಾಯಗೊಂಡಿದ್ದ ಮತ್ತೊಬ್ಬ ಯೋಧ ಇಂದು ಸಾವನ್ನಪ್ಪಿದ್ದಾರೆ.

    ಹತ್ಯೆಯಾಗಿರುವ ಉಗ್ರರಲ್ಲಿ ಒಬ್ಬನನ್ನು ಪಾಕಿಸ್ತಾನ ಮೂಲದವನು ಎಂಬುದು ತಿಳಿದುಬಂದಿದೆ. ಆತನನ್ನು ಕ್ವಾರಿ ಎಂದು ಗುರುತಿಸಲಾಗಿದೆ. ಆತ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ತರಬೇತಿ ಪಡೆದಿದ್ದು, ಲಷ್ಕರ್-ಎ-ತೊಯ್ಬಾದ ಹಿರಿಯ ನಾಯಕನಾಗಿದ್ದ. ಆತ ತನ್ನ ಸಹಚರರೊಂದಿಗೆ ಕಳೆದ ವರ್ಷದಿಂದ ರಾಜೌರಿ-ಪೂಂಚ್ ಪ್ರದೇಶದಲ್ಲಿ ಸಕ್ರಿಯನಾಗಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: 18.70 ಲಕ್ಷ ವಂಚನೆ- ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ ದೂರು ದಾಖಲು

    ಈತ ಧಂಗ್ರಿ ಮತ್ತು ಕಂಡಿಯಲ್ಲಿ ನಡೆದ ಅವಳಿ ದಾಳಿಯ ಮಾಸ್ಟರ್‌ಮೈಂಡ್ ಎಂದು ನಂಬಲಾಗಿದೆ. ಈ ಪ್ರಕರಣದಲ್ಲಿ 7 ಜನರು ಸಾವನ್ನಪ್ಪಿದ್ದರು ಮತ್ತು 14 ನಾಗರಿಕರು ಗಾಯಗೊಂಡಿದ್ದರು. ಈ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಮುಂದುವರಿಸಲು ರಾಜೌರಿ-ಪೂಂಚ್‌ಗೆ ತಂಡವನ್ನು ಕಳುಹಿಸಿದ್ದಾಗಿ ಮೂಲಗಳು ತಿಳಿಸಿವೆ.

    ಕ್ವಾರಿ ಸುಧಾರಿತ ಸ್ಫೋಟಕ ಸಾಧನ (IED) ಎಕ್ಸ್‌ಪರ್ಟ್ ಆಗಿದ್ದು, ಅಲ್ಲಿನ ಗುಹೆಗಳಲ್ಲಿ ಅಡಗಿಕೊಂಡು ಕಾರ್ಯನಿರ್ವಹಿಸುತ್ತಿದ್ದ ಮತ್ತು ತರಬೇತಿ ಪಡೆದ ಸ್ನೈಪರ್ ಕೂಡ ಆಗಿದ್ದ. ಬುಧವಾರ ರಾಜೌರಿಯಲ್ಲಿ ಎನ್‌ಕೌಂಟರ್ ಪ್ರಾರಂಭವಾಗಿದ್ದು, ಇದರಲ್ಲಿ ವಿಶೇಷ ಪಡೆಗಳ ಇಬ್ಬರು ಕ್ಯಾಪ್ಟನ್‌ಗಳು ಸೇರಿದಂತೆ ನಾಲ್ವರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಇದನ್ನೂ ಓದಿ: ಹುತಾತ್ಮ ಯೋಧ ಪ್ರಾಂಜಲ್‌ ಕುಟುಂಬದಲ್ಲಿ ನೀರವ ಮೌನ – ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ

  • ರಾಜೌರಿ ಉಗ್ರರ ದಾಳಿ ಪ್ರಕರಣ – 50 ಜನರನ್ನು ವಶಕ್ಕೆ ಪಡೆದು ವಿಚಾರಣೆ

    ರಾಜೌರಿ ಉಗ್ರರ ದಾಳಿ ಪ್ರಕರಣ – 50 ಜನರನ್ನು ವಶಕ್ಕೆ ಪಡೆದು ವಿಚಾರಣೆ

    ಶ್ರೀನಗರ: ಹೊಸ ವರ್ಷದಂದೇ ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಾಜೌರಿಯಲ್ಲಿ (Rajouri) ಉಗ್ರರ ದಾಳಿಗೆ (Terrorists Attack) 7 ಜನರು ಸಾವನ್ನಪ್ಪಿದ್ದರು. ಈ ಘಟನೆಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಬೃಹತ್ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. 50ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

    ಜನವರಿ 1 ರಂದು ಜಮ್ಮು ಮತ್ತು ಕಾಶ್ಮೀರದ ಧಂಗ್ರಿ ಗ್ರಾಮದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ 7 ಜನರು ಸಾವನ್ನಪ್ಪಿದ್ದರು. 14 ಜನರು ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಭಯೋತ್ಪಾದಕರ ಬಗ್ಗೆ ವಿಶ್ವಾಸಾರ್ಹ ಮಾಹಿತಿ ನೀಡುವವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿರುವುದಾಗಿ ನಗರದಲ್ಲಿ ಪೊಲೀಸರು ಪೋಸ್ಟರ್‌ಗಳನ್ನು ಅಳವಡಿಸಿದ್ದಾರೆ.

    ದಾಳಿಗೂ ಮೊದಲು ಭಯೋತ್ಪಾದಕರ ಉಪಸ್ಥಿತಿಯ ವರದಿಗಳಿದ್ದ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸೇನೆ, ಪೊಲೀಸರು ಹಾಗೂ ಸಿಆರ್‌ಪಿಎಫ್ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರಾಜೌರಿಯ ಹೊರಗಿನಿಂದ ಜಮ್ಮು ಮತ್ತು ಕಾಶ್ಮೀರದ ಪೊಲೀಸರ ವಿಶೇಷ ತಂಡವನ್ನೂ ಕಾರ್ಯಾಚರಣೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮ್ಯೂಸಿಕ್‌ ಸೌಂಡ್‌ ಕಡಿಮೆ ಮಾಡಿ ಎಂದಿದ್ದಕ್ಕೆ ಸೇನಾಧಿಕಾರಿ ಕಾರಿಗೆ ಬೆಂಕಿ ಇಟ್ಟವರ ಹೋಟೆಲ್‌ಗೆ ಬಿತ್ತು ಬೀಗ

    ಧಂಗ್ರಿ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರನ್ನು ಸೆರೆಹಿಡಿಯಲು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದೆ. ವಿಚಾರಣೆ ವೇಳೆ ಕೆಲವು ಪ್ರಮುಖ ಸುಳಿವುಗಳು ದೊರಕಿವೆ. ಉಗ್ರರನ್ನು ಸೆರೆಹಿಡಿಯಲು ಎಲ್ಲಾ ರೀತಿಯ ಕೆಲಸಗಳು ನಡೆಯುತ್ತಿವೆ ಎಂದು ರಾಜೌರಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಅಸ್ಲಾಮ್ ಹೇಳಿದ್ದಾರೆ.

    ಶಂಕಿತ ವ್ಯಕ್ತಿಗಳ ವಿಚಾರಣೆ ವೇಳೆ ಹಲವು ಪ್ರಮುಖ ಸುಳಿವುಗಳು ಪತ್ತೆಯಾಗಿವೆ. ದಾಳಿ ನಡೆಸುವ ಮುನ್ನ ಭಯೋತ್ಪಾದಕರು ಇದೇ ಊರಿನಲ್ಲಿದ್ದರು ಎಂಬುದು ಬಹುತೇಕ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಜೋಶಿಮಠದ ಅಪಾಯಕಾರಿ ಕಟ್ಟಡ ನೆಲಸಮ ಕಾರ್ಯಾಚರಣೆ ಪ್ರಾರಂಭ – 600ಕ್ಕೂ ಹೆಚ್ಚು ಕಡೆ ಗುರುತು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜೌರಿಯಲ್ಲಿ ಗುಂಡಿನ ದಾಳಿ ನಡೆದ ಮನೆ ಬಳಿ ಮತ್ತೊಂದು ಸ್ಫೋಟ – ಮಗು ಸಾವು

    ರಾಜೌರಿಯಲ್ಲಿ ಗುಂಡಿನ ದಾಳಿ ನಡೆದ ಮನೆ ಬಳಿ ಮತ್ತೊಂದು ಸ್ಫೋಟ – ಮಗು ಸಾವು

    ಶ್ರೀನಗರ: ಭಾನುವಾರ ಭಯೋತ್ಪಾದಕರ (Terrorists) ಗುಂಡಿನ ದಾಳಿಗೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಾಜೌರಿಯಲ್ಲಿ (Rajouri) ನಡೆದಿತ್ತು. ಇಂದು ದಾಳಿ ನಡೆದ ಮನೆ ಬಳಿಯೇ ಇನ್ನೊಂದು ಸ್ಫೋಟ (Blast)  ಸಂಭವಿಸಿದ್ದು, ಮಗು ಸಾವನ್ನಪ್ಪಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

    ನಿನ್ನೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಉಗ್ರರು ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಮೂರು ಮನೆಗಳಲ್ಲಿ ದಾಳಿ ನಡೆಸಿದ್ದ ಉಗ್ರರು ನಾಲ್ವರನ್ನು ಕೊಂದಿದ್ದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಶಂಕಿತ ಉಗ್ರರ ದಾಳಿ- ಮೂವರು ನಾಗರಿಕರು ಸಾವು

    ಇಂದು ನಡೆದ ಸ್ಫೋಟ ಡ್ಯಾಂಗ್ರಿ ಗ್ರಾಮದಲ್ಲಿ ವರದಿಯಾಗಿದೆ. ಇದು ನಿನ್ನೆ ಗುಂಡಿನ ದಾಳಿ ನಡೆದ ಮನೆಗಳ ಸಮೀಪವಿದೆ ಎನ್ನಲಾಗಿದೆ. ಘಟನೆಯಲ್ಲಿ ಮಗು ಸಾವನ್ನಪ್ಪಿದೆ. ಗಾಯಗೊಂಡಿರುವ ಐವರ ಪೈಕಿ ಇನ್ನೊಂದು ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಸ್ಫೋಟದಲ್ಲಿ ಗಾಯಗೊಂಡ ಎಲ್ಲರನ್ನೂ ಚಿಕಿತ್ಸೆಗೆ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಜೈಲಿನ ಮೇಲೆ ಗುಂಡಿನ ದಾಳಿ – 10 ಭದ್ರತಾ ಸಿಬ್ಬಂದಿ ಸೇರಿ 14 ಮಂದಿ ಸಾವು, 24 ಕೈದಿಗಳು ಎಸ್ಕೇಪ್‌

    ಭದ್ರತಾ ಪಡೆಗಳು ಘಟನಾ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದು, ಈ ವೇಳೆ ಇನ್ನೊಂದು ಶಂಕಿತ ಸುಧಾರಿತ ಸ್ಫೋಟಕ ಸಾಧನವನ್ನು (IED) ಪತ್ತೆಮಾಡಿದ್ದಾರೆ. ಭಯೋತ್ಪಾದಕರು ನಿರ್ದಿಷ್ಟ ಸಮುದಾಯದವರ ಮೇಲೆ ದಾಳಿ ನಡೆಸುತ್ತಿದ್ದು, ಅವರ ಪತ್ತೆ ಹಚ್ಚಲು ಹೆಚ್ಚುವರಿ ಸಿಬ್ಬಂದಿಯನ್ನು ಸೇರಿಸಿ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಾಳಿ ನಡೆಸಲು ಪಾಕ್ ಸೇನೆ ಹಣ ನೀಡಿದ್ದಾಗಿ ಸತ್ಯ ಬಾಯ್ಬಿಟ್ಟಿದ್ದ ಉಗ್ರ ಹೃದಯಾಘಾತದಿಂದ ಸಾವು

    ದಾಳಿ ನಡೆಸಲು ಪಾಕ್ ಸೇನೆ ಹಣ ನೀಡಿದ್ದಾಗಿ ಸತ್ಯ ಬಾಯ್ಬಿಟ್ಟಿದ್ದ ಉಗ್ರ ಹೃದಯಾಘಾತದಿಂದ ಸಾವು

    ಶ್ರೀನಗರ: 2 ವಾರಗಳ ಹಿಂದೆ ಭಾರತದ ಗಡಿ ಪ್ರವೇಶಕ್ಕೆ ಯತ್ನಿಸಿ, ಬಂಧಿತನಾಗಿದ್ದ ಭಯೋತ್ಪಾದಕ ಶನಿವಾರ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಗುಂಡು ತಗುಲಿಸಿಕೊಂಡು ಬಂಧಿತನಾಗಿದ್ದ ಭಯೋತ್ಪಾದಕ ತಬ್ರಕ್ ಹುಸೇನ್ ರಾಜೌರಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆತನಿಗೆ ಪಾಕಿಸ್ತಾನಿ ಸೇನೆ ಇಲ್ಲಿ ಆತ್ಮಾಹುತಿ ಕಾರ್ಯಾಚರಣೆ ನಡೆಸಲು 30,000 ರೂ. ನೀಡಿದ್ದಾಗಿಯೂ, ತನ್ನೊಂದಿಗೆ 4-5 ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸಿದ್ದಾಗಿಯೂ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದ. ಇದನ್ನೂ ಓದಿ: ಯೋಗಿಜೀ ಇನ್ನು ಮುಂದೆ ತಪ್ಪು ಮಾಡಲ್ಲ, ಪ್ಲೀಸ್ ಕ್ಷಮಿಸಿ ಬಿಡಿ: ಗೋಳಾಡಿದ ಆರೋಪಿ

    ಪಾಕ್ ಆಕ್ರಮಿತ ಕಾಶ್ಮೀರದ ಸಬ್ಜ್‌ಕೋಟ್ ಗ್ರಾಮದ ನಿವಾಸಿ ಹುಸೇನೆ ಭಾರತೀಯ ಸೇನಾ ಪೋಸ್ಟ್ ಮೇಲೆ ದಾಳಿ ಮಾಡುವ ಯೋಜನೆಯನ್ನು ಒಪ್ಪಿಕೊಂಡಿದ್ದ. ಆತ ಕಳೆದ ತಿಂಗಳು ರಾಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್‌ನಲ್ಲಿ ಗಡಿ ಪ್ರವೇಶಿಸಲು ಪ್ರಯತ್ನಿಸಿದ್ದ. ಈ ವೇಳೆ ಗುಂಡಿನ ದಾಳಿಗೆ ಗಾಯಗೊಂಡಿದ್ದ ಆತನನ್ನು ಬಂಧಿಸಿ, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ತನ್ನನ್ನು ಪಾಕ್ ಸೇನೆ ಕಳುಹಿಸಿದ್ದಾಗಿ ತಿಳಿಸಿದ್ದ. ಇದನ್ನೂ ಓದಿ: ಸರ್ಕಾರಿ ಬಸ್ ಚಾಲಕನ ಮೇಲೆ ಟ್ರಾಫಿಕ್ ಸಿಬ್ಬಂದಿಯಿಂದ ಹಲ್ಲೆ

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಯೋತ್ಪಾದಕ ಹಲವು ಸ್ಫೋಟಕ ಸತ್ಯಗಳನ್ನು ಬಾಯ್ಬಿಟ್ಟು ಇದೀಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

    Live Tv
    [brid partner=56869869 player=32851 video=960834 autoplay=true]