Tag: ರಾಜೇಶ್

  • ಹಿರಿಯ ನಟ ರಾಜೇಶ್ ಆರೋಗ್ಯದಲ್ಲಿ ಚೇತರಿಕೆ

    ಹಿರಿಯ ನಟ ರಾಜೇಶ್ ಆರೋಗ್ಯದಲ್ಲಿ ಚೇತರಿಕೆ

    ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಹಿರಿನ ನಟ ರಾಜೇಶ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

    ಉಸಿರಾಟದ ತೊಂದರೆಯಿಂದ ಬಳಲ್ತಿದ್ದ ರಾಜೇಶ್ ಅವರ ಆರೋಗ್ಯ ಸ್ಥಿತಿ ಎರಡು ದಿನಗಳ ಹಿಂದೆ ಗಂಭೀರವಾಗಿತ್ತು. ಸದ್ಯ ವೈದ್ಯರು ಇಂದಿನ ಆರೊಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂದು ರಾಜೇಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಹೆಣ್ಣುಮಕ್ಕಳ ಶಿಕ್ಷಣ, ರಕ್ಷಣೆ ಸರ್ಕಾರದ ಕರ್ತವ್ಯ: ಡಿಕೆ ಸುರೇಶ್

    82 ವರ್ಷ ವಯಸ್ಸಿನ ರಾಜೇಶ್, ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಕಸ್ತೂರಿ ಬಾ ನಗರದ ನ್ಯೂ ಜನಪ್ರಿಯ ಆಸ್ಪತ್ರೆಯಲ್ಲಿ ದಾಖಲಾಗಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತಿಚೆಗೆ ಪತ್ನಿಯನ್ನ ಕಳೆದುಕೊಂಡಿರುವ ರಾಜೇಶ್ ಅವರಿಗೆ 5 ಜನ ಮಕ್ಕಳಿದ್ದಾರೆ.

  • ಹಿರಿಯ ನಟ ರಾಜೇಶ್ ಸ್ಥಿತಿ ಗಂಭೀರ

    ಹಿರಿಯ ನಟ ರಾಜೇಶ್ ಸ್ಥಿತಿ ಗಂಭೀರ

    ಬೆಂಗಳೂರು: ಹಿರಿಯ ನಟ ರಾಜೇಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 82 ವರ್ಷ ವಯಸ್ಸಿನ ರಾಜೇಶ್, ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಕಸ್ತೂರಿ ಬಾ ನಗರದ ನ್ಯೂ ಜನಪ್ರಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸದ್ಯ ವೆಂಟಿಲೇಟರ್ ನಲ್ಲಿ ಉಸಿರಾಡುತ್ತಿದ್ದಾರೆ. ಇತ್ತಿಚೆಗೆ ಪತ್ನಿಯನ್ನ ಕಳೆದುಕೊಂಡಿರುವ ರಾಜೇಶ್ ಅವರಿಗೆ 5 ಜನ ಮಕ್ಕಳಿದ್ದಾರೆ.

    ರಾಜೇಶ್ ಆರೋಗ್ಯದ ಬಗ್ಗೆ ಆಸ್ಪತ್ರೆ ನಿರ್ದೇಶಕ ಡಾಕ್ಟರ್ ಗಂಗಾಧರ್ ಮಾತನಾಡಿ, ಫೆಬ್ರವರಿ 9 ಕ್ಕೆ ರಾಜೇಶ್ ಅವರು ದಾಖಲಾಗಿದ್ದಾರೆ. ಉಸಿರಾಟದ ಸಮಸ್ಯೆ ಅಂತ ಆಸ್ಪತ್ರೆಗೆ ಬಂದಿದ್ರು. ಚಿಕಿತ್ಸೆಗೆ ರಾಜೇಶ್ ಅವರು ಸ್ಪಂದಿಸ್ತಿದ್ದಾರೆ. ಸ್ವಲ್ಪ ಕಾಲಾವಕಾಶ ಬೇಕಾಗುತ್ತೆ. ಸಂಬಂಧಪಟ್ಟ ವೈದ್ಯರು ಕೂಡ ಬಂದು ಚಿಕಿತ್ಸೆ ಕೊಡ್ತಿದ್ದಾರೆ ಎಂದರು. ಇದನ್ನೂ ಓದಿ: ಹಿಜಬ್ ಧರಿಸಿ ನರ್ಸಿಂಗ್ ಪರೀಕ್ಷೆ ಬರೆದ ವಿದ್ಯಾರ್ಥಿನಿಯರು – ಬ್ರೀಮ್ಸ್ ಮೆಡಿಕಲ್ ಕಾಲೇಜು ಅನುಮತಿ

    ಅಡ್ಮಿಟ್ ಆಗಿ ನಾಲ್ಕೈದು ದಿನಗಳಾಗಿದೆ. ಇನ್ನೂ ಎರಡ್ಮೂರು ದಿನ ಚಿಕಿತ್ಸೆ ಕೊಡಬೇಕಾಗುತ್ತೆ. ಅವರ ಮಗಳು ಮತ್ತು ಮೊಮ್ಮಗ ರಾಜೇಶ್ ಅವರನ್ನ ನೋಡಿಕೊಳ್ತಿದ್ದಾರೆ. ಉಳಿದ ಕುಟುಂಬಸ್ಥರಿಗೆ ಫೋನ್ ಮೂಲಕ ಮಾಹಿತಿ ಕೊಡಲಾಗ್ತಿದೆ. ಚೇತರಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಕಾಣ್ತಿದೆ ಎಂದು ಭರತ್ ವಿವರಿಸಿದ್ದಾರೆ.

  • ಮನಸ್ಸು ನೋಡಿ ಪ್ರೀತಿ ಮಾಡಿದ್ದೇನೆ, ವಿಚ್ಛೇದನ ಕೊಡಲ್ಲ: ರಾಜೇಶ್ ಪತ್ನಿ

    ಮನಸ್ಸು ನೋಡಿ ಪ್ರೀತಿ ಮಾಡಿದ್ದೇನೆ, ವಿಚ್ಛೇದನ ಕೊಡಲ್ಲ: ರಾಜೇಶ್ ಪತ್ನಿ

    ಬೆಂಗಳೂರು: ನಾನು ಅವರ ಫೇಮ್ ನೋಡಿ ಪ್ರೀತಿ ಮಾಡಿ ಮದುವೆಯಾಗಿಲ್ಲ. ಅವರ ಮನಸ್ಸು ನೋಡಿ ಮದುವೆಯಾಗಿದ್ದೇನೆ. ಹೀಗಾಗಿ ನಾನು ಅವರಿಗೆ ವಿಚ್ಛೇದನ ಕೊಡಲ್ಲ ಎಂದು ಕಿರುತೆರೆ ನಟ ರಾಜೇಶ್ ಪತ್ನಿ ಶೃತಿ ಹೇಳಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶೃತಿ, ಅಂದು ನಾನೇನು ಮಾಡಿಲ್ಲ ಸುಳ್ಳು ಹೇಳುತ್ತಿದ್ದಾಳೆ ಎಂದು ನನ್ನ ಮೇಲೆ ಆರೋಪ ಮಾಡಿದ್ದರು. ಈಗ ಪೊಲೀಸರು ತನಿಖೆ ಮಾಡಿ ಜಾರ್ಚ್ ಶೀಟ್ ಸಲ್ಲಿಸಿದ್ದಾರೆ. ಇಬ್ಬರ ಮಧ್ಯೆ ಗಲಾಟೆಯಾದಗಿನಿಂದ ನಾನು ಒಬ್ಬಳೆ ಇದ್ದೀನಿ. ಇದುವರೆಗೂ ನನಗೆ ಅವರು ಒಂದು ಬಾರಿಯೂ ಫೋನ್ ಮಾಡಿಲ್ಲ. ನನ್ನನ್ನು ಪೊಲೀಸರು ವಿಚಾರಣೆ ಮಾಡಿಲ್ಲ. ನಮ್ಮ ಪೋಷಕರನ್ನು ಪೊಲೀಸರು ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಗ್ನಿಸಾಕ್ಷಿ ರಾಜೇಶ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ-ಬಯಲಾಯ್ತು ನಟನ ಅಸಲಿ ಮುಖ!

    ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಿಲ್ಲ. ಆದರೆ ಅವರ ಕಡೆಯಿಂದ ವಿಚ್ಛೇಧನಕ್ಕೆ ಅಪ್ಲೈ ಮಾಡಿದ್ದಾರೆ. ವಿಚ್ಛೇದನ ನೀಡುವ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಆದರೆ ನಾನು ವಿಚ್ಛೇದನ ಕೊಡಲ್ಲ. ಅವರ ಜೊತೆಯೇ ನಾನು ಬದುಕಬೇಕು ಎಂದರು.

    ನಾನು ಪ್ರೀತಿ ಮಾಡಿ ಮದುವೆಯಾಗಿದ್ದೇನೆ. ಅವರು ಸೀರಿಯಲ್ ಮತ್ತು ಫೇಮ್‍ನಿಂದ ಈ ರೀತಿ ಮಾಡುತ್ತಿದ್ದಾರೆ. ಆದರೆ ನಾನು ಅವರ ಫೇಮ್ ನೋಡಿ ಮದುವೆಯಾಗಿಲ್ಲ. ಅವರ ಮನಸ್ಸು ನೋಡಿ ಪ್ರೀತಿಸಿ ಮದುವೆಯಾಗಿದ್ದಾನೆ. ಅವರು ಸೀರಿಯಲ್‍ಗೆ ಹೋಗುವ ಮೊದಲೇ ನಮ್ಮಿಬ್ಬರ ಮದುವೆಯಾಗಿತ್ತು. ಆದ್ದರಿಂದ ನಾನು ಯಾವುದೇ ಪರಿಹಾರ, ಎಷ್ಟು ಹಣ ಕೊಟ್ಟರು ವಿಚ್ಛೇದನಕ್ಕೆ ಒಪ್ಪಿಕೊಳ್ಳಲ್ಲ ಎಂದು ಶೃತಿ ಅವರು ತಿಳಿಸಿದರು.

    ರಾಜೇಶ್ ಮತ್ತು ಅವರ ಅಮ್ಮ ಪದೇ ಪದೇ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಊಟನೂ ಕೊಡದೆ ಕಿರುಕುಳ ಕೊಡುತ್ತಿದ್ದರು. ನೀನು ನಮಗೆ ಏನು ವರದಕ್ಷಿಣೆ ಕೊಟ್ಟಿಲ್ಲ. ನಮ್ಮ ಮನೆಗೆ ಹೊಂದಿಕೊಳ್ಳುತ್ತಿಲ್ಲ. ನನ್ನ ಮಗನಿಗೆ ಎರಡನೇ ಮದುವೆ ಮಾಡಿಸುತ್ತೇನೆ ಎಂದು ಕಿರುಕುಳ ಕೊಡುತ್ತಿದ್ದರು. ನಾನು ಪ್ರೀತಿಸಿ ಮದುವೆಯಾಗಿದ್ದರಿಂದ ನಮ್ಮ ಪೋಷಕರ ಬಳಿ ಏನು ಹೇಳಿಕೊಳ್ಳುತ್ತಿರಲಿಲ್ಲ ಎಂದಿದ್ದಾರೆ.

    ಕೊನೆಗೆ ಇವರ ಕಿರುಕುಳ ಸಹಿಸಿಕೊಳ್ಳಲಾಗದೇ ಮನೆಯಲ್ಲಿ ಹೇಳಿದೆ. ಆಗ ನಮ್ಮ ತಂದೆ ಎರಡು ಬಾರಿ ಮಾತನಾಡಿ ಸರಿ ಮಾಡಲು ಪ್ರಯತ್ನಿಸಿದ್ದರು. ಆದರೂ ರಾಜೇಶ್ ಕೇಳಿಲ್ಲ. ಸೀರಿಯಲ್‍ಗೆ ಹೋಗುವ ಮೊದಲೇ ನಮ್ಮ ಕುಟುಂಬಕ್ಕೆ ಧಾರಾವಾಹಿ ಬೇಡ ಎಂದು ಹೇಳಿದ್ದೆ. ಆದರೆ ಅವರು ನನ್ನ ಮಾತು ಕೇಳಿಲ್ಲ. ಈಗ ಸೀರಿಯಲ್, ಫೇಮ್‍ನಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಶೃತಿ ತಿಳಿಸಿದರು.

    https://www.youtube.com/watch?v=z83AFF9LPEY

  • ಅಗ್ನಿಸಾಕ್ಷಿ ರಾಜೇಶ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ-ಬಯಲಾಯ್ತು ನಟನ ಅಸಲಿ ಮುಖ!

    ಅಗ್ನಿಸಾಕ್ಷಿ ರಾಜೇಶ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ-ಬಯಲಾಯ್ತು ನಟನ ಅಸಲಿ ಮುಖ!

    ಬೆಂಗಳೂರು: ಕಿರುತೆರೆ ನಟ ರಾಜೇಶ್ ಧ್ರುವ ವಿರುದ್ಧ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. 49 ಪುಟಗಳ ದೋಷಾರೋಪ ಪಟ್ಟಿಯಲ್ಲಿ ರಾಜೇಶ್ ನ ಅಸಲಿ ಮುಖ ಬಯಲಾಗಿದೆ. ಕೆಲವು ತಿಂಗಳ ಹಿಂದೆ ರಾಜೇಶ್ ಪತ್ನಿ ಪೊಲೀಸ್ ಠಾಣೆಯ ಮೆಟ್ಟಿಲೇರಿ ಪತಿಯ ವಿರುದ್ಧ ದೂರು ಸಲ್ಲಿಕೆ ಮಾಡಿದ್ರು. ಈ ಸಂಬಂಧ ಇಬ್ಬರು ಪರಸ್ಪರ ಆರೋಪ -ಪ್ರತ್ಯಾರೋಪ ಮಾಡಿ ಕೆಲವು ವಿಡಿಯೋಗಳನ್ನು ಬಿಡುಗಡೆ ಮಾಡಿಕೊಂಡಿದ್ದರು.

    ಪತ್ನಿಯ ಆರೋಪವೇನು?
    2013 ನವೆಂಬರ್ ನಲ್ಲಿ ರಾಜೇಶ್ ಯುವತಿಯೊಂದಿಗೆ ರಿಜಿಸ್ಟರ್ ಮದುವೆ ಆಗಿದ್ದನು. ಮದುವೆ ಬಳಿಕ ಇಬ್ಬರು ಬಿಪಿಒದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಕೆಲ ದಿನಗಳ ಬಳಿಕ ಶಾರ್ಟ್ ಫಿಲಂ ಮಾಡೋದಾಗಿ ಕೆಲಸ ತೊರೆದಿದ್ದನು. ಅನಂತರ ಧಾರಾವಾಹಿಯ ಅವಕಾಶಗಳು ರಾಜೇಶ್ ಗೆ ಸಿಕ್ಕಿತ್ತು. ಧಾರಾವಾಹಿಯಲ್ಲಿಯ ಹಲವು ಸಹನಟಿಯರೊಂದಿಗೆ ರಾಜೇಶ್ ಲವ್ವಿಡವ್ವಿ ಆರಂಭಿಸಿಕೊಂಡಿದ್ದನು. ಕೆಲ ಯುವತಿಯರ ಜೊತೆ ಅಕ್ರಮ ಸಂಬಂಧ ಸಹ ಹೊಂದಿದ್ದ, ಈ ಸಂಬಂಧ ಇಬ್ಬರ ನಡುವೆ ಮನೆಯಲ್ಲಿ ಸದಾ ಗಲಾಟೆ ನಡೆಯುತ್ತಿತ್ತು ಎಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ರಿಜಿಸ್ಟರ್ ಮದುವೆ ಬಳಿಕ ರಾಜೇಶ್ ಕೆಲಸಕ್ಕೆ ಹೋಗಿ ಸಂಬಳ ತರಬೇಕೆಂದು ಪತ್ನಿಗೆ ಷರತ್ತು ಹಾಕಿದ್ದ. ಪತ್ನಿಯ ಪೋಷಕರು ಸಂಪ್ರದಾಯಕವಾಗಿ ಮದುವೆ ಆಗುವಂತೆ ಮನವಿ ಮಾಡಿಕೊಂಡಿದ್ದರು. ಈ ವೇಳೆ ಮದುವೆಗೆ ಧಾರಾವಾಹಿಯ ಕಲಾವಿದರೆಲ್ಲಾ ಆಗಮಿಸುತ್ತಾರೆ. ಹಾಗಾಗಿ ಮದುವೆ ಅದ್ಧೂರಿಯಾಗಿ ನಡೆಬೇಕೆಂಬ ಕಂಡೀಷನ್ ರಾಜೇಶ್ ಹಾಕಿದ್ದ ಎನ್ನಲಾಗಿದೆ. ರಾಜೇಶ್ ಷರತ್ತು ಒಪ್ಪಿದ ಪೋಷಕರು 2017 ಮೇ 21ರಂದು ಮದುವೆಯನ್ನು ಅದ್ಧೂರಿಯಾಗಿಯೆ ಮಾಡಿದ್ದರು.

    ಮದುವೆ ಬಳಿಕ ವರಸೆ ಬದಲಿಸಿದ ರಾಜೇಶ್, ವರೋಪಚಾರ ಸರಿಯಾಗಿ ನೀಡಿಲ್ಲ. ಸರಿಯಾಗಿ ವರದಕ್ಷಿಣೆಯನ್ನು ನೀಡಿಲ್ಲ. ಯಾಕೋ ನನಗೂ, ನಿನಗೂ ಸರಿಯಾಗಿ ಹೊಂದಾಣಿಕೆ ಆಗುತ್ತಿಲ್ಲ. ತವರು ಮನೆಯಿಂದ ಹಣ ತಂದ್ರೆ ಮಾತ್ರ ನನ್ನ ಜೊತೆಯಲ್ಲಿರು ಎಂದು ಪತ್ನಿಗೆ ರಾಜೇಶ್ ಹೇಳಿದ್ದನಂತೆ. ಹಣ ತರದೇ ಇದ್ದರೆ ಕಟ್ಟಿರುವ ತಾಳಿಯನ್ನು ಬಿಚ್ಚಿಕೊಡುವಂತೆ ಮಾನಸಿಕವಾಗಿ ರಾಜೇಶ್ ಕಿರುಕುಳ ನೀಡುತ್ತಿದ್ದ ಪತ್ನಿ ತಿಳಿಸಿದ್ದಾರೆ.

    ಏನಿದು ಪ್ರಕರಣ?
    ರಾಜೇಶ್ ಧ್ರುವ 2017ರಲ್ಲಿ ನನ್ನನ್ನು ಮದುವೆಯಾಗಿ ಬಳಿಕ ಅವರಿಗೆ ವರದಕ್ಷಿಣೆ ತರುವಂತೆ ಟಾರ್ಚರ್ ನೀಡಿದ್ದಾರೆ. ಅಲ್ಲದೆ ಮಾನಸಿಕ ಹಿಂಸೆ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಪತ್ನಿ ಶೃತಿ ತಮ್ಮ ಪತಿ ರಾಜೇಶ್ ಮೇಲೆ ಆರೋಪ ಮಾಡಿದ್ದಾರೆ. ಮದುವೆ ಆದ ಬಳಿಕ ಮುಖ್ಯಮಂತ್ರಿ ಚಂದ್ರು ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಮದುವೆ ಆದರೂ ನನಗೆ ಮದುವೆಯಾಗಿಲ್ಲ ಎಂದು ಧ್ರುವ ಹೇಳಿಕೊಂಡು ತಿರುಗಾಡುತ್ತಿದ್ದರು. ಮದುವೆಯಾದ ಬಳಿಕ ಧ್ರುವ ಬೇರೆ ಯುವತಿಯರ ಜೊತೆ ಅಫೈರ್ ಇಟ್ಟುಕೊಂಡಿದ್ದರು. ಯುವತಿ `ತಕಧಿಮಿತ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಆಗಿ ಭಾಗವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಶೃತಿ ಕುಮಾರಸ್ವಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು

    ಪತ್ನಿ ಆರೋಪಕ್ಕೆ ತಿರುಗೇಟು:
    ನಮ್ಮದು ಸಂಪ್ರದಾಯ ಕುಟುಂಬವಾಗಿದ್ದು, ಪತ್ನಿ ಹೊರಗಡೆ ಮಾಂಸ ತಿಂದು ಮಾನಸಿಕವಾಗಿ ನನ್ನ ತಾಯಿಗೆ ಹಿಂಸೆ ನೀಡುತ್ತಿದ್ದರು. ನಾನು ಯಾವುದೇ ಕಿರುಕುಳ ನೀಡಿಲ್ಲ. ನಮ್ಮ ತಾಯಿಗೆ ಯಾರಿಂದ ಕಿರುಕುಳ ಆಗುತ್ತಿದೆ ಅಂತ ದೂರಿನಲ್ಲಿದೆ. ಒಟ್ಟು ಮೂರು ದೂರು ದಾಖಲಾಗಿದೆ. 2018 ಜುಲೈನಲ್ಲಿ ವಿಚ್ಛೇದನ ಕೋರಿ ಪತ್ನಿ ಅರ್ಜಿ ಹಾಕಿದ್ದಾರೆ. ಆಗ ಯಾಕೆ ಶ್ರುತಿ ವರದಕ್ಷಿಣೆ ಕೇಸ್ ಹಾಕಿಲ್ಲ. ನಾನು ಕಿರುಕುಳ ನೀಡಿದ್ದಕ್ಕೆ ಸಾಕ್ಷಿ ನೀಡಲಿ ಎಂದು `ಅಗ್ನಿಸಾಕ್ಷಿ’ ಧಾರಾವಾಹಿಯ ಅಖಿಲ್ ಪಾತ್ರಧಾರಿಯಾಗಿರುವ ನಟ ರಾಜೇಶ್ ಧ್ರುವ ಅವರು ಶ್ರುತಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

    https://www.youtube.com/watch?v=z83AFF9LPEY

  • #MeToo ಅನ್ನೋದು ದೊಡ್ಡ ರೋಗ-ಶೃತಿ ಹರಿಹರನ್ ವಿರುದ್ಧ ಹಿರಿಯ ನಟ ರಾಜೇಶ್ ಕಿಡಿ

    #MeToo ಅನ್ನೋದು ದೊಡ್ಡ ರೋಗ-ಶೃತಿ ಹರಿಹರನ್ ವಿರುದ್ಧ ಹಿರಿಯ ನಟ ರಾಜೇಶ್ ಕಿಡಿ

    ಬೆಂಗಳೂರು: ದೇಶಾದ್ಯಂತ #MeToo ಗಾಳಿ ಹವಾ ಎದ್ದಿದ್ದು, ಇದೀಗ ಸ್ಯಾಂಡಲ್ ವುಡ್ ನಲ್ಲಿಯೂ #MeToo ಆರೋಪಗಳು ಒಂದೊಂದಾಗಿಯೇ ಹೊರಬರುತ್ತಿದೆ. ಸಂಜನಾ ಗಲ್ರಾಣಿಯ ಬೆನ್ನಲ್ಲೇ ನಟಿ ಶೃತಿ ಹರಿಹರನ್ ಅವರು ಇಂದು ನಟ ಅರ್ಜುನ್ ಸರ್ಜಾ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಈ ಕುರಿತು ಹಿರಿಯ ನಟ ಹಾಗೂ ಅರ್ಜುನ್ ಸರ್ಜಾ ಅವರ ಮಾವ ರಾಜೇಶ್ ಅವರು ಶೃತಿ ಹರಿಹರನ್ ವಿರುದ್ಧ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಜೇಶ್, ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನನಗೆ ತಿಳಿದಿರುವಂತೆ ಅರ್ಜುನ್ ಅವರನ್ನು ಸುಮಾರು ವರ್ಷಗಳಿಂದ ನೋಡುತ್ತಿದ್ದೇನೆ. ಸೌಂದರ್ಯ ಹಾಗೂ ಇನ್ನಿತರ ಕಲಾವಿದರ ಜೊತೆ ಅಭಿನಯಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ಇಂದಿನ ಅಲ್ಲ ಹಳೆಯ ಕನ್ನಡ ಹಿರೋಯಿನ್ ಗಳ ಜೊತೆ ಅರ್ಜುನ್ ನಟನೆ ಮಾಡಿದ್ದಾರೆ. ಆದ್ರೆ ಅವರ ವಿರುದ್ಧ ಒಂದೂ ದೂರು ಇಲ್ಲ. ಇದೊಂದು ರೋಗ ಶುರುವಾಗಿದೆ. 8-10 ವರ್ಷದ ಹಿಂದಿನದ್ದನ್ನು ತೆಗೆದು ರಗಳೆ ಮಾಡುವುದು ಸರಿಯೇ? ಈ ಮೂಲಕ ಸಿನಿಮಾ ರಂಗಕ್ಕೆ ಕೆಟ್ಟ ಹೆಸರು. ಸಿನಿಮಾ ಹೀರೋಗಳು ಕೆಟ್ಟವರು ಅಂತ ಆಪಾದನೆ ಮಾಡುವುದು ಯಾವ ನ್ಯಾಯ ಅಂತ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು #MeToo- ಅರ್ಜುನ್ ಸರ್ಜಾ ವಿರುದ್ಧ ಶೃತಿ ಹರಿಹರನ್ ಆರೋಪ

    ಅರ್ಜುನ್ ಅಂತ ಹುಡುಗ ಅಲ್ಲ. ಒಳ್ಳೆಯ ಹುಡುಗ. ಸಂಭಾವಿತ ವ್ಯಕ್ತಿ ನಮ್ಮ ಅರ್ಜುನ್. ಇನ್ನೊಬ್ಬರ ಬಗ್ಗೆ ಕೆಣಕೋದಾಗಲಿ, ಆಪಾದನೆ ಮಾಡೋದಾಗಲಿ ಅಥವಾ ಕಾಮುಕ ದೃಷ್ಟಿಯಿಂದ ನೋಡೋದಾಗಲಿ ಸರಿಯಲ್ಲ ಅಂತ ಶೃತಿ ವಿರುದ್ಧ ರಾಜೇಶ್ ಕೆಂಡಾಮಂಡಲರಾಗಿದ್ದಾರೆ.

    ನಿನ್ನೆ-ಮೊನ್ನೆ ಬಂದ ನಟಿಯರು. ಇವರಿಗೆಲ್ಲ ಸರಿಯಾಗಿ ಕನ್ನಡ ಮಾತಾಡೋಕೆ ಬರಲ್ಲ. ಇವರೆಲ್ಲ ಅರ್ಜುನ್ ಮೇಲೆ ಏನು ಆಪಾದನೆ ಮಾಡೋದು. ಇವಳ ಮೇಲೆ ಕೇಸ್ ಹಾಕಿ ಮಾನನಷ್ಟ ಮೊಕದ್ದಮೆ ಹೂಡಲು ಬಾಕಿಯಿದೆ ಅಂತ ಹೇಳಿದ್ರು.

    8-10 ವರ್ಷದ ಹಿಂದಿನ ಕೇಸನ್ನು ಮೆಲುಕು ಹಾಕುವ ಇವರು ಆ ಸಂದರ್ಭಗಳಲ್ಲಿ ಯಾಕೆ ಹೇಳಿಲ್ಲ ಅಂತ ಕಿಡಿಕಾರಿದ್ರು. ಇದನ್ನೂ ಓದಿ: #MeToo ಅಭಿಯಾನವನ್ನು ಸಮರ್ಥಿಸಿಕೊಂಡ್ರು ಶೃತಿ ಹರಿಹರನ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=Pvb9crCfEe4

  • ಶಾಸಕ ಸುರೇಶ್‍ಗೌಡ ತಲೆ ಹಿಡಿಯೋದರಲ್ಲಿ ಎತ್ತಿದ ಕೈ: ಕಾಂಗ್ರೆಸ್ ಮುಖಂಡ ರಾಜೇಶ್

    ಶಾಸಕ ಸುರೇಶ್‍ಗೌಡ ತಲೆ ಹಿಡಿಯೋದರಲ್ಲಿ ಎತ್ತಿದ ಕೈ: ಕಾಂಗ್ರೆಸ್ ಮುಖಂಡ ರಾಜೇಶ್

    ಮಂಡ್ಯ: ಮಂಡ್ಯ ಲೋಕಸಭೆ ಉಪಚುನಾವಣೆ ಘೋಷಣೆಯಾದ ನಂತರ ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರ ನಡುವೆ ಮಾತಿನ ಸಮರ ತಾರಕಕ್ಕೇರಿದ್ದು, ಶಾಸಕ ಸುರೇಶ್‍ಗೌಡ ತಲೆ ಹಿಡಿಯೋದರಲ್ಲಿ ಎತ್ತಿದ ಕೈ ಎಂದು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ವಾಗ್ದಾಳಿ ನಡೆಸಿದ್ದಾರೆ.

    ಶಾಸಕ ಸುರೇಶ್‍ಗೌಡ, ಮಾಜಿ ಶಾಸಕ ಚೆಲುವರಾಯಸ್ವಾಮಿಯವರನ್ನು ರಾಜಕೀಯ ವ್ಯಭಿಚಾರಿ ಎಂದು ಜರಿದಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು, ಶಾಸಕ ಸುರೇಶ್‍ಗೌಡ ತಲೆ ಹಿಡಿಯೋದರಲ್ಲಿ ಎತ್ತಿದ ಕೈ. ತಾಲೂಕಿನ ನಾವು ಇದನ್ನು ಹತ್ತಿರದಿಂದ ನೋಡಿದ್ದೇವೆ. ಸುರೇಶ್‍ಗೌಡ ಗೆಲ್ಲಲು ಮಾಜಿ ಶಾಸಕ ಶಿವರಾಮೇಗೌಡ, ಎಂಎಲ್‍ಸಿ ಅಪ್ಪಾಜಿಗೌಡ ಸೇರಿದಂತೆ ಹಲವರು ಕಾರಣರಾಗಿದ್ದಾರೆ.

    ಸುರೇಶ್‍ಗೌಡ ಈಗಾಗಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರರಾಗಿ ನಿಲ್ಲುವ ಮೂಲಕ ಅವರ ಗಂಡಸ್ತನ ತೋರಿಸಲಿ. ಸುರೇಶ್‍ಗೌಡ ಎಣ್ಣೆ ಕುಡಿದು ನಾಲೆ ಮೇಲೆ ಓಡಾಡುತ್ತಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಸುರೇಶ್‍ಗೌಡ ಇನ್ನು ಮುಂದಾದರೂ ಚಿಕ್ಕ ಚಿಕ್ಕ ಮಾತುಗಳನ್ನಾಡುವುದು ಬಿಟ್ಟು ಅಭಿವೃದ್ಧಿ ಕೆಲಸ ಮಾಡಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಇದೇ ವೇಳೆ ಮಾಡನಾಡಿದ ಕಾಂಗ್ರೆಸ್ ಮುಖಂಡ ತುರುಬನಹಳ್ಳಿ ರಾಜೇಗೌಡ ಅವರು ಶಾಸಕ ಸುರೇಶ್‍ಗೌಡ ಅವರನ್ನು ಅಪ್ಪ ಇಲ್ಲದೆ ಹುಟ್ಟಿದ ಮಗು ತರಹ ಎಂದು ಜರಿದು, ಇನ್ನು ಮುಂದೆ ಮಾತನಾಡುವಾಗ ಎಚ್ಚರಿಕೆಯಿಂದ ಇರುವಂತೆ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಫ್ಲಾಪ್ ಆದ್ರೆ ಚಿತ್ರಕ್ಕೆ ಹೂಡಿದ ಹಣ ವಾಪಸ್ ನೀಡ್ತೀನಿ: ನಿರ್ಮಾಪಕರಿಗೆ ಚಾಲೆಂಜ್ ಹಾಕಿದ್ದ ಕರುಣಾನಿಧಿ

    ಫ್ಲಾಪ್ ಆದ್ರೆ ಚಿತ್ರಕ್ಕೆ ಹೂಡಿದ ಹಣ ವಾಪಸ್ ನೀಡ್ತೀನಿ: ನಿರ್ಮಾಪಕರಿಗೆ ಚಾಲೆಂಜ್ ಹಾಕಿದ್ದ ಕರುಣಾನಿಧಿ

    – ಸಿನಿ ಬದುಕಿನ ಬಗ್ಗೆ ಹಿರಿಯ ನಟ ರಾಜೇಶ್ ಮಾತು

    ಮೈಸೂರು: ತಮಿಳುನಾಡಿನ ಮಾಜಿ ಸಿಎಂ ಡಿಎಂಕೆ ನಾಯಕ ಕರುಣಾನಿಧಿ ಅವರ ಬಗ್ಗೆ ಹಿರಿಯ ನಟ ರಾಜೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಕಂಬನಿ ಮಿಡಿದಿದ್ದಾರೆ.

    ಹಿರಿಯ ನಟ ರಾಜೇಶ್ ನೆನಪಿಸಿದ್ದು ಹೀಗೆ:
    ನಾನು ಕರುಣಾನಿಧಿ ಅವರನ್ನು 70- 75 ವರ್ಷದಿಂದ ನೋಡಿದ್ದೇನೆ. ಅವರು 20ನೇ ಶತಮಾನದ 50ನೇ ದಶಕದಲ್ಲಿ ಅವರು ಚಿತ್ರ ಸಾಹಿತಿಯಾಗಿ ಬಹಳ ಪ್ರಖ್ಯಾತಿ ಪಡೆದಿದ್ದರು. ‘ಪರಾಶಕ್ತಿ’ ಚಿತ್ರದ ಮೂಲಕ ಶಿವಾಜಿ ಗಣೇಶನ್‍ರನ್ನು ಕರುಣಾನಿಧಿ ಅವರೇ ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಆಗ ನಿರ್ಮಾಪಕರು ಈತ ಬೇಡ ಎಂದು ಹೇಳಿದ್ದರು. ಆಗ ಕರುಣಾನಿಧಿ, ಇವರು ಬಹಳ ಶ್ರೇಷ್ಟ ನಟ ಎಂದು ಹೇಳಿದ್ದರು.

    ಕರುಣಾನಿಧಿ ಮಾತನ್ನು ಕೇಳದ ನಿರ್ಮಾಪಕ ನನಗೆ ಈತ ಬೇಡ, ಈತನಿಗೆ ಪರ್ಸನಾಲಿಟಿ ಕೂಡ ಇಲ್ಲ, ಈತ ನನ್ನ ಚಿತ್ರದಲ್ಲಿ ನಟಿಸಿದ್ದರೆ ನನ್ನ ಚಿತ್ರ ಫ್ಲಾಪ್ ಆಗುತ್ತೆ ಎಂದು ಹೇಳಿದ್ದರು. ಆಗ ಕರುಣಾನಿಧಿ ನಿನ್ನ ಚಿತ್ರ ಫ್ಲಾಪ್ ಆದರೆ ನಾನು ನಿನ್ನ ಚಿತ್ರದ ಹಣ ನೀಡುವೆ ಎಂದು ಚಾಲೆಂಜ್ ಹಾಕಿದ್ದರು. ಚಾಲೆಂಜ್ ಹಾಕಿದ ನಂತರ ಪರಾಶಕ್ತಿ ಸಿನಿಮಾ ಬಿಡುಗಡೆಯಾಗಿ ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಬಹಳ ಯಶಸ್ಸು ಕಂಡಿತ್ತು.

    ತಮಿಳು ಭಾಷೆ, ತಮಿಳು ಸಾಹಿತ್ಯ ಹಾಗೂ ತಮಿಳು ಸಿನಿಮಾ ಡೈಲಾಗ್ ಬರೆಯುತ್ತಿದ್ದ ಕರುಣಾನಿಧಿ ಅವರಿಗೆ ಸಾಕಷ್ಟು ಯಶಸ್ಸು ದೊರೆಯಿತು. ಅವರ ಗುರು ಅಣ್ಣಾದೊರೈ ಇಬ್ಬರು ತಮಿಳು ಭಾಷೆಗಾಗಿ ಚಾರಿತ್ರಿಕವಾಗಿ ದುಡಿದ್ದು, ಯಶಸ್ಸನ್ನು ಸಂಪಾದನೆ ಮಾಡಿದ್ದರು. ಅಣ್ಣಾದೊರೈ ಹಾಗೂ ಕರುಣಾನಿಧಿ ಸಿನಿಮಾದಲ್ಲಿ ಬೆಳೆದರು. ನಂತರ ಕರುಣಾನಿಧಿ ರಾಜಕೀಯದತ್ತ ಮುಖ ಮಾಡಿದ್ದರು.

    ಕರುಣಾನಿಧಿಗೆ ರಾಜಕೀಯದಲ್ಲಿ ಒಂದು ನೆಲೆ ಸಿಕ್ತು. ಹೀಗಾಗಿ ಅವರು ನೆಲ ಕಂಡುಕಂಡ ಮೇಲೆ ರಾಜಕೀಯದಲ್ಲಿ ಪ್ರಭುತ್ವವನ್ನು ಸಾಧಿಸುತ್ತಾ ಹೋದರು. ಬಳಿಕ ಜನರು ಡಿಎಂಕೆ ಪಕ್ಷವನ್ನು ಕಟ್ಟಿದ್ದರು. ಜನರು ಸಹಾಯ ಮಾಡಿ ಡಿಎಂಕೆ ಅಭ್ಯರ್ಥಿಗಳನ್ನು ಗೆಲ್ಲಿಸಿ, ಡಿಎಂಕೆ ಸ್ಥಾನಮಾನ ಕಂಡುಕೊಟ್ಟರು. ಬಳಿಕ ಅಣ್ಣಾದೊರೈ ಮುಖ್ಯಮಂತ್ರಿಯಾಗಿ ರಾಜ್ಯದ ಜನರಿಗೆ ಹಾಗೂ ಸಿನಿಮಾ ಚಿತ್ರರಂಗಕ್ಕೆ ಸಹಾಯ ಮಾಡುತ್ತಿದ್ದರು. ಹೀಗಿರುವಾಗ ಅಣ್ಣಾದೊರೈ ಗಂಟಲ ಬೇನೆಯಾಗಿ ಆಪರೇಶನ್ ಯಶಸ್ಸು ಕಾಣದೇ ಅಲೇ ನಿಧನರಾದರು. ಬಳಿಕ ಅಣ್ಣಾದೊರೈ ಮೃತದೇಹವನ್ನು ತಮಿಳುನಾಡಿಗೆ ಕರೆತಂದು ಅದ್ಭುತ ಗೌರವದಿಂದ ಅವರ ಅಂತ್ಯಕ್ರಿಯೆ ಮಾಡಿದ್ದರು. ಅಣ್ಣದೊರೈ ನಿಧನ ಹೊಂದಿನ ಬಳಿಕ ಸ್ಥಾನಕ್ಕೆ ಕರುಣಾನಿಧಿ ಬಂದರು. ಕರುಣಾನಿಧಿ ಡಿಎಂಕೆ ಕಟ್ಟಿ ಪ್ರಚಂಡ ಯಶಸ್ಸು ಕಂಡು ಮುಖ್ಯಮಂತ್ರಿಯಾದರು. ಕರುಣಾನಿಧಿ ಮುಖ್ಯಮಂತ್ರಿ ಆದ ಬಳಿಕವೂ ಒಳ್ಳೆಯ ಕೆಲಸ ಮಾಡಿದ್ದಾರೆ.