Tag: ರಾಜೇಶ್ ಕೃಷ್ಣನ್

  • ‘ಪರಂವಃ’ ಸಿನಿಮಾದ ಲಿರಿಕಲ್ ವಿಡಿಯೋ ರಿಲೀಸ್ ಮಾಡಿದ ಡಾಲಿ

    ‘ಪರಂವಃ’ ಸಿನಿಮಾದ ಲಿರಿಕಲ್ ವಿಡಿಯೋ ರಿಲೀಸ್ ಮಾಡಿದ ಡಾಲಿ

    ಕ್ಕಳ ಬೆಳವಣಿಗೆಯಲ್ಲಿ ತಾಯಿಯಷ್ಟೇ ತಂದೆಯ ಪಾತ್ರ ಕೂಡ ದೊಡ್ಡದು. ಇಂತಹ ತಂದೆ – ಮಗನ ಬಾಂಧವ್ಯದ ಕುರಿತಾದ ಕಥಾಹಂದರ ಹೊಂದಿರುವ  ಚಿತ್ರ ‘ಪರಂವಃ’ (Paramvah). ಸಂತೋಷ್ ಕೈದಾಳ ನಿರ್ದೇಶಿಸಿರುವ ಈ ಚಿತ್ರಕ್ಕಾಗಿ ನಾಗೇಶ್ ಕುಂದಾಪುರ, ಶ್ರೀ ತಲಗೇರಿ ಹಾಗೂ ಶಿವರಾಜ್ ಸೇರಿ ಬರೆದಿರುವ ‘ಭೂರಮೆಲಿ ಮತ್ಯಾರು’ ಎಂಬ ತಂದೆ ಮಗನ ಭಾವನಾತ್ಮಕ ಪಯಣಕ್ಕೆ ಮುನ್ನುಡಿಯಾಗಿರುವ ಈ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.

    ಅಪರಾಜಿತ್ ಹಾಗೂ ಜೋಸ್ ಜೋಸ್ಸೆ ಸಂಗೀತ ನೀಡಿದ್ದಾರೆ. ಖ್ಯಾತ ಗಾಯಕ ರಾಜೇಶ್ ಕೃಷ್ಣನ್ (Rajesh Krishnan) ಹಾಡಿದ್ದಾರೆ. ನಟ ರಾಕ್ಷಸ ಡಾಲಿ ಧನಂಜಯ (Dolly Dhananjay) ಚಿತ್ರದ ಈ ಮೊದಲ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.  ಚಿತ್ರದ ನಾಯಕ ವೀರಗಾಸೆ ಕಲಾವಿದ. ಅವರ ಕುಟಂಬವೇ ವೀರಗಾಸೆ ಕುಟುಂಬ. ನಾಯಕನಿಗೆ ತಂದೆಯಂದರೆ ಪ್ರಾಣ. ತಂದೆಗೆ ಮಗನೇ ಜೀವ. ಇಂತಹ ವಿಭಿನ್ನ ಕಥಾಹಂದರ ಹೊಂದಿರುವ ‘ಪರಂವಃ’ ಚಿತ್ರದ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಮುಕ್ತಾಯವಾಗಿದೆ. ಜುಲೈನಲ್ಲಿ ಚಿತ್ರವನ್ನು  ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ನಿರ್ದೇಶಕ ಸಂತೋಷ್ ಕೈದಾಳ  (Santosh Kaidala) ತಿಳಿಸಿದ್ದಾರೆ. ಇದನ್ನೂ ಓದಿ:ಚಡ್ಡಿ ಧರಿಸಿ ದೇವಸ್ಥಾನಕ್ಕೆ ಬಂದ ಹುಡುಗಿ: ನೀತಿ ಪಾಠ ಮಾಡಿದ ಕಂಗನಾ

    ಪೀಪಲ್ ವಲ್ಡ್ ಫಿಲಂಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಎ.ಎಸ್ ಶೆಟ್ಟಿ ಛಾಯಾಗ್ರಹಣ, ಅಪರಾಜಿತ್ – ಜೋಸ್ ಜೋಸ್ಸೆ ಸಂಗೀತ ನಿರ್ದೇಶನ, ಪೂರ್ಣಚಂದ್ರ ತೇಜಸ್ವಿ ಹಿನ್ನೆಲೆ ಸಂಗೀತ ಹಾಗೂ ವೆಂಕಿ ಯು ಡಿ ವಿ – ವಿಕಾಸ್ ಚಂದ್ರ ಅವರ ಸಂಕಲನ ಈ ಚಿತ್ರಕ್ಕಿದೆ. ಪ್ರೇಮ್ ಸಿಡ್ಗಲ್, ಮೈತ್ರಿ ಜೆ ಕಶ್ಯಪ್, ಗಣೇಶ್ ಹೆಗ್ಗೋಡು, ನಾಜರ್, ಶೃತಿ, ಮುಕುಂದ್, ಅವಿನಾಶ್, ಶಬರೀಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಒಲವೇ ಜೀವನ ಲೆಕ್ಕಾಚಾರ ಅಂತಿದ್ದಾರೆ ಯುವ ಜೋಡಿ

    ಒಲವೇ ಜೀವನ ಲೆಕ್ಕಾಚಾರ ಅಂತಿದ್ದಾರೆ ಯುವ ಜೋಡಿ

    ಹೊಸಬರೇ ಸೇರಿಕೊಂಡು ’ಲೆಕ್ಕಾಚಾರ’ ಎನ್ನುವ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ಈ ಹಿಂದೆ ’ಸಖತ್ ರಿಸ್ಕ್ ’ಎನ್ನುವ ಚಿತ್ರ ನಿರ್ದೇಶನ ಮಾಡಿರುವ ಎಂ.ಜಿ.ರಾಜು ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಸೀಮಾ ಪಿಕ್ಚರ‍್ಸ್ ಬ್ಯಾನರ್ ಅಡಿಯಲ್ಲಿ ರಾಜೇಶ್‌ಗೌಡ ಮತ್ತು ಗಗನ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.

    ಇಬ್ಬರು ಪ್ರೇಮಿಗಳ ಮುಗ್ದ ಪ್ರೇಮಕಥೆ, ಪ್ರೀತಿಯಲ್ಲಿ ಲೆಕ್ಕಾಚಾರ ಸಹಜ. ಆದರೆ ಪ್ರೇಮದಲ್ಲಿ ಲೆಕ್ಕಾಚಾರವಿದ್ದರೆ ಅದು ನಿಜವಾದ ಪ್ರೀತಿಯಲ್ಲ. ನಿಷ್ಕಲ್ಮಶವಾಗಿರುವುದೇ ಪ್ರೀತಿ. ಒಲವೇ ಜೀವನ ಲೆಕ್ಕಾಚಾರ. ನಾಲ್ಕು ಹುಡುಗರು ಗ್ಯಾರೇಜ್‌ದಲ್ಲಿ ಕೆಲಸ ಮಾಡುತ್ತಾ ಪ್ರೀತಿಯಲ್ಲಿ ಬೀಳುತ್ತಾರೆ. ಅವರುಗಳ ಲೆಕ್ಕಾಚಾರ ಏನಾಗುತ್ತದೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ನಾಲ್ಕು ಹಾಡುಗಳಿಗೆ ಸಾಹಿತ್ಯ ಸಂಗೀತ ಒದಗಿಸಿರುವ ಕಾರ್ತಿಕ್‌ವೆಂಕಟೇಶ್ ಅವರು ಗ್ಯಾಪ್ ನಂತರ ರಾಜೇಶ್‌ಕೃಷ್ಣನ್-ಅನುರಾಧಭಟ್ ಜೋಡಿಯಲ್ಲಿ ಗೀತೆಯನ್ನು ಹಾಡಿಸಿರುವುದು ವಿಶೇಷ. ಇದನ್ನೂ ಓದಿ:ದಿಗಂತ್ ಗೆ ಮೂರು ಗಂಟೆಗಳ ಶಸ್ತ್ರ ಚಿಕಿತ್ಸೆ : ಅಬ್ಸರ್ವೇಶನ್ ನಲ್ಲಿ ನಟ

    ಹುಡುಗಿಯರನ್ನು ರೇಗಿಸಿಕೊಂಡು ಕಾಲ ಕಳೆಯುವ ಹುಡುಗನಾಗಿ ಹರೀಶ್ ನಾಯಕ. ಬೆಂಗಳೂರಿನ ಯಶಸ್ವಿ..ಸಿ.ಆರ್ ನಾಯಕಿ. ಇವರೊಂದಿಗೆ ಕುಮಾರ್.ಎಂ.ಎಸ್., ಪ್ರೀತಂ, ಹರ್ಷಿತಾ, ಬಲರಾಂ, ಚಂದ್ರು ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಉಡುಪಿ, ಮೂಡಿಗೆರೆ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಛಾಯಾಗ್ರಹಣ ರಾಜೇಶ್‌ಗೌಡ-ಗಗನ್, ಸಂಕಲನ ದುರ್ಗಾಪ್ರಸಾದ್.ಪಿ.ಎಸ್, ಸಾಹಸ ರಾಮ್‌ದೇವ್, ನೃತ್ಯ ಪ್ರಶಾಂತ್ ಅವರದಾಗಿದೆ. ಪ್ರಚಾರದ ಸಲುವಾಗಿ ಮೊನ್ನೆ ಆಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೆಗೌಡ, ಗಾಯಕಿ ಸಮನ್ವಿತಾಶರ್ಮಾ, ಸಿರಿಚಿಕ್ಕಣ್ಣ ಹಾಜರಿದ್ದು ತಂಡಕ್ಕೆ ಶುಭ ಹಾರೈಸಿದರು. ಸಿರಿ ಮ್ಯೂಸಿಕ್ ಸಂಸ್ಥೆಯು ಹಾಡುಗಳನ್ನು ಹೊರ ತಂದಿದೆ. ಇದಕ್ಕೂ ಮುನ್ನ ಹಾಡುಗಳು ಮತ್ತು ಟ್ರೈಲರ್‌ನ್ನು ತೋರಿಸಲಾಯಿತು.

    Live Tv

  • ಫಿನಾಲೆ ವೇದಿಕೆಯಲ್ಲಿ ಸುದೀಪ್‍ಗೆ ಬಿಗ್ ಸರ್ಪ್ರೈಸ್ ಕೊಟ್ಟ ರಘು ದೀಕ್ಷಿತ್, ರಾಜೇಶ್ ಕೃಷ್ಣನ್

    ಫಿನಾಲೆ ವೇದಿಕೆಯಲ್ಲಿ ಸುದೀಪ್‍ಗೆ ಬಿಗ್ ಸರ್ಪ್ರೈಸ್ ಕೊಟ್ಟ ರಘು ದೀಕ್ಷಿತ್, ರಾಜೇಶ್ ಕೃಷ್ಣನ್

    ಬಿಗ್‍ಬಾಸ್ ಸೀಸನ್-8 ಗ್ರ್ಯಾಂಡ್ ಫಿನಾಲೆ ಭಾನುವಾರ ಅದ್ದೂರಿಯಾಗಿ ನೆರವೇರಿದೆ. ಈ ವೇಳೆ ಫಿನಾಲೆ ವೇದಿಕೆಗೆ ಗಾಯಕ ರಘು ದೀಕ್ಷಿತ್ ಹಾಗೂ ರಾಜೇಶ್ ಕೃಷ್ಣನ್ ಎಂಟ್ರಿ ಕೊಡುವ ಮೂಲಕ ಸುದೀಪ್‍ಗೆ ಸರ್ಪ್ರೈಸ್ ನೀಡಿದ್ದಾರೆ.

    ವೇದಿಕೆ ಮೇಲೆ ಬಂದು ಸುದೀಪ್‍ರನ್ನು ಭೇಟಿ ಮಾಡಿದ ರಘು ದೀಕ್ಷಿತ್, ಜಸ್ಟ್ ಮಾತ್ ಮಾತಲ್ಲಿ ಸಿನಿಮಾದ ಮ್ಯೂಸಿಕ್ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಬಳಿಕ ಇದೇ ಮೊದಲ ಬಾರಿಗೆ ಗಾಯಕ ರಾಜೇಶ್ ಕೃಷ್ಣನ್‍ರವರು ಬಿಗ್‍ಬಾಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

    ಈ ವೇಳೆ ರಘು ದೀಕ್ಷಿತ್, ನಾನು ಯಾವುದಾರೂ ಮ್ಯೂಸಿಕ್ ಕಂಪೋಸ್ ಮಾಡಲು ಹೋದರೆ, ಜನ ನನಗೆ ಜಸ್ಟ್ ಮಾತ್ ಮಾತಲ್ಲಿ ಸಿನಿಮಾದ ರೀತಿ ಮ್ಯೂಸಿಕ್ ನೀಡಿ ಎಂದು ಹೇಳುತ್ತಾರೆ. ಆದರೆ ನನಗೆ ಮತ್ತೆ ಆ ರೀತಿ ಮ್ಯೂಸಿಕ್ ನೀಡಲು ಸಾಧ್ಯವಿಲ್ಲ. ನಾನು ಮ್ಯೂಸಿಕ್ ನೀಡಿದ ಸೈಕೋ ಸಿನಿಮಾ ಇನ್ನೂ ತೆರೆ ಕಂಡಿರಲಿಲ್ಲ. ಆಗ ಯಾವುದೋ ರೇಡಿಯೋ ಜಿಂಗಲ್‍ನನ್ನು ಕೇಳಿ ವಿನಾಯಕ್ ಜೋಶಿಗೆ ಕರೆ ಮಾಡಿ ಸುದೀಪ್‍ರವರು ನಂಬರ್ ತೆಗೆದುಕೊಂಡು ಸ್ಕ್ರಿಪ್ಟ್ ನೀಡಿ ಏನಾದರೂ ಮಾಡು ಎಂದು ಹೇಳಿ ಅವಕಾಶ ನೀಡಿದರು ಎಂದು ಹೇಳುತ್ತಾ, ಮೊದಲ ಬಾರಿಗೆ ಸುದೀಪ್‍ಗೆ ಸಾಂಗ್ ಕಂಪೋಸ್ ಮಾಡಿದ ಜಸ್ಟ್ ಮಾತ್ ಮಾತಲ್ಲಿ ಹಾಡನ್ನು ಹಾಡಿದ್ದಾರೆ.

    ಸುಮಾರು 25 ವರ್ಷಕ್ಕಿಂತ ಹೆಚ್ಚು ವರ್ಷಗಳ ಕಾಲ ಸುದೀಪ್ ನಾನು ಸ್ನೇಹಿತರು ಆ ಸ್ನೇಹದ ಪ್ರತಿಕವಾಗಿ ಸುದೀಪ್ ಎಷ್ಟೋ ಹಾಡುಗಳನ್ನು ನನಗೆ ನೀಡಿದ್ದಾರೆ. ನನ್ನ ಮೇಲೆ ವಿಶ್ವಾಸ ಇಟ್ಟು, ನನ್ನ ಧ್ವನಿ ಹಾಗೂ ಎಕ್ಸ್ ಪ್ರೆಶನ್‍ನ್ನು ತುಂಬಾ ಇಷ್ಟಪಟ್ಟು, ಒಂದಷ್ಟು ಮುತ್ತುಗಳನ್ನು ನೀಡಿದ್ದಾರೆ. ಅದರಲ್ಲಿ ಎರಡು ಹಾಡುಗಳನ್ನು ಹಾಡುತ್ತೇನೆ ಎಂದು ಚಂದು ಹಾಗೂ ಪಾರ್ಥ ಸಿನಿಮಾದ ಹಾಡುಗಳನ್ನು ಹಾಡಿದ್ದಾರೆ.

    ನಾನು ಸುದೀಪ್‍ಗೆ ದೊಡ್ಡ ಬಿಗ್ ಫ್ಯಾನ್. ನಿನ್ನ ಈಗ ಸಿನಿಮಾವನ್ನು ಯಾವ ಭಾಷೆಯಲ್ಲಿ ಬಂದರೂ ನಾನು ನೋಡುತ್ತಲೆ ಇರುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಒಟ್ಟಾರೆ ಬಿಗ್‍ಬಾಸ್ ವೇದಿಕೆಯಲ್ಲಿ ಬರೀ ಡ್ಯಾನ್ಸ್ ಮಾತ್ರವಲ್ಲದೇ ಸಂಗೀತ ರಸಮಂಜರಿಯನ್ನು ಕೂಡ ಏರ್ಪಡಿಸುವ ಮೂಲಕ ಸ್ಪರ್ಧೀಗಳಿಗೆ ಮನರಂಜನೆಯನ್ನು ನೀಡಲಾಯಿತು. ಇದನ್ನೂ ಓದಿ:ದಿವ್ಯಾ ಸುರೇಶ್ ಬಗ್ಗೆ ಲ್ಯಾಗ್ ಮಂಜು ಹೇಳಿದ್ದೇನು..?

  • ಎಲ್ಲರಲ್ಲಿ ತಂದೆಯನ್ನ ನೋಡಿದೆ: ಅಭಿಮಾನಿಗಳಿಗೆ ಅರ್ಜುನ್ ಜನ್ಯ ಧನ್ಯವಾದ

    ಎಲ್ಲರಲ್ಲಿ ತಂದೆಯನ್ನ ನೋಡಿದೆ: ಅಭಿಮಾನಿಗಳಿಗೆ ಅರ್ಜುನ್ ಜನ್ಯ ಧನ್ಯವಾದ

    -ರಾಜೇಶ್ ಕೃಷ್ಣನ್ ಸಹಾಯ, ವಿಜಯ್ ಪ್ರಕಾಶ್ ಮಮತೆ ತಿಳಿಸಿದ್ರು

    ಬೆಂಗಳೂರು: ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ಗುಣಮುಖರಾಗಿದ್ದು, ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗೆ ಕಮ್ ಬ್ಯಾಕ್ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಅರ್ಜುನ್ ಜನ್ಯ, ತಮ್ಮ ಚೇತರಿಕೆಗಾಗಿ ಪ್ರಾರ್ಥಿಸಿದ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

    ತಮಗಾಗಿ ಪ್ರಾರ್ಥಿಸಿದವರಿಗೆ ಎಷ್ಟು ಧನ್ಯವಾದ ಹೇಳಿದ್ರೂ ಕಡಿಮೆ. ನಾಡಿನ ಪ್ರತಿಯೊಬ್ಬರ ಆಶೀರ್ವಾದ, ಪ್ರಾರ್ಥನೆಯಿಂದ ಗುಣಮುಖವಾಗಿದ್ದೇನೆ. ಈ ವೇದಿಕೆಯನ್ನು ಸಹ ಮಿಸ್ ಮಾಡಿಕೊಂಡಿದ್ದೇನೆ. ಆರೋಗ್ಯದಲ್ಲಿ ಏರುಪೇರು ಕಂಡ ತಕ್ಷಣ ಎಲ್ಲರೂ ನನ್ನ ಬಳಿ ಬಂದರು. ನಾನು ಒಪ್ಪಿಕೊಂಡಿದ್ದ ಕಾರ್ಯಕ್ರಮವನ್ನ ರಾಜೇಶ್ ಕೃಷ್ಣನ್ ನಡೆಸಿಕೊಟ್ಟರು. ಇನ್ನು ವಿಜಯ್ ಪ್ರಕಾಶ್ ಮನೆಗೆ ಬಂದು ಗಾಳಿ ಆಂಜನೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ತಾಯತ ಕಟ್ಟಿಸಿದರು ಎಂದು ಅರ್ಜುನ್ ಜನ್ಯ ಹೇಳಿದರು. ಇದನ್ನೂ ಓದಿ:   ಅರ್ಜುನ್ ಜನ್ಯ ಆರೋಗ್ಯದ ಬಗ್ಗೆ ರಾಜೇಶ್ ಕೃಷ್ಣನ್ ಹೇಳಿದ್ದು ಹೀಗೆ

    ನಮ್ಮ ತಂದೆ ಅಗಲಿ 25 ರಿಂದ 26 ವರ್ಷ ಆಯ್ತು. ಕೆಲವು ದಿನಗಳಲ್ಲಿ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಮತ್ತು ನನಗಾಗಿ ಹಾರೈಸಿದವರಲ್ಲಿ ನಮ್ಮ ತಂದೆಯನ್ನು ನೋಡಿದೆ ಎಂದು ಭಾವುಕರಾದರು. ಕೊನೆಗೆ ನಿರೂಪಕಿ ಅನುಶ್ರೀ, ಸ್ನೇಹಿತರಲ್ಲಿ ತಂದೆಯನ್ನು ಕಾಣುವ ನಿಮ್ಮ ಮನಸ್ಸು ನಿಜಕ್ಕೂ ದೊಡ್ಡದು ಚಪ್ಪಾಳೆ ಮೂಲಕ ಕೊಂಡಾಡಿದರು. ಇದನ್ನೂ ಓದಿ: I am OK, Nothing to Worry: ಅರ್ಜುನ್ ಜನ್ಯ

  • ಅರ್ಜುನ್ ಜನ್ಯ ಆರೋಗ್ಯದ ಬಗ್ಗೆ ರಾಜೇಶ್ ಕೃಷ್ಣನ್ ಹೇಳಿದ್ದು ಹೀಗೆ

    ಅರ್ಜುನ್ ಜನ್ಯ ಆರೋಗ್ಯದ ಬಗ್ಗೆ ರಾಜೇಶ್ ಕೃಷ್ಣನ್ ಹೇಳಿದ್ದು ಹೀಗೆ

    ಬೆಂಗಳೂರು: ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿರುವ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯ ಬಗ್ಗೆ ಮೆಲೋಡಿ ಕಿಂಗ್, ಗಾಯಕ ರಾಜೇಶ್ ಕೃಷ್ಣನ್ ಮಾತನಾಡಿದ್ದು, ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸಂಗೀತ ಕಾರ್ಯಕ್ರಮದಲ್ಲಿ ರಾಜೇಶ್ ಕೃಷ್ಣನ್ ಮತ್ತು ಅರ್ಜುನ್ ಜನ್ಯ ತೀರ್ಪುಗಾರರಾಗಿದ್ದಾರೆ. ಶನಿವಾರ ಪ್ರಸಾರವಾದ ಸಂಚಿಕೆಯಲ್ಲಿ ಅರ್ಜುನ್ ಜನ್ಯ, ಕಾರ್ಯಕ್ರಮಕ್ಕೆ ಗೈರಾಗುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿ ವಿಡಿಯೋ ಸಂದೇಶ ರವಾನಿಸಿದ್ದರು. ವಿಡಿಯೋ ನೋಡಿದ ಬಳಿಕ ಮಾತನಾಡಿದ ರಾಜೇಶ್ ಕೃಷ್ಣನ್, ಇಷ್ಟೆಲ್ಲ ಸಾಧನೆ ಮಾಡಿದ್ದರೂ ಅರ್ಜುನ್ ಜನ್ಯ ಬೆಳೆಯವ ಹುಡುಗ. ಇನ್ನು ಸಾಕಷ್ಟು ಸಾಧನೆ ಮಾಡುವುದು ಬಾಕಿ ಉಳಿದಿದೆ. ಆದಷ್ಟು ಬೇಗ ಗುಣಮುಖರಾಗಿ ಈ ವೇದಿಕೆಗೆ ಬರಲಿ. ಆರೋಗ್ಯದಲ್ಲಿ ಚೇತರಿಕೆ ಕಾಣಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.

    ಅರ್ಜುನ್ ಜನ್ಯ ವಿಡಿಯೋ ಸಂದೇಶ: ಕಾರಣಾಂತರಗಳಿಂದ ಆರೋಗ್ಯ ತಪ್ಪಿತ್ತು. ನಿಮ್ಮೆಲ್ಲರ ಪ್ರೀತಿ, ಪ್ರಾರ್ಥನೆ ಮತ್ತು ಆಶೀರ್ವಾದದಿಂದ ಚೇತರಿಸಿಕೊಳ್ಳುತ್ತಿದ್ದೇನೆ. ಸರಿಗಮಪ ವೇದಿಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ವೇದಿಕೆಗೆ ಬರುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿ ಹೀಗೆ ಇರಲಿ. ನನಗೋಸ್ಕರ ಮತ್ತು ನನ್ನ ಕುಟುಂಬಕ್ಕಾಗಿ ಬಹಳಷ್ಟು ಪ್ರಾರ್ಥನೆ ಮಾಡಿದ್ದೀರಿ. ಎಲ್ಲರಿಗೂ ನನ್ನ ಧನ್ಯವಾದಗಳು. ಶೀಘ್ರದಲ್ಲಿಯೇ ಎಲ್ಲರನ್ನು ಭೇಟಿಯಾಗುತ್ತೇನೆ. ಆಯ್ ಆ್ಯಮ್ ಓಕೆ, ನಥಿಂಗ್ ಡೋಂಟ್ ವರಿ ಎಂದು ವಿಡಿಯೋ ಸಂದೇಶವನ್ನು ಅರ್ಜುನ್ ಜನ್ಯ ಕಳುಹಿಸಿದ್ದಾರೆ.

    ಅರ್ಜುನ್ ಜನ್ಯರಿಗೆ ಚಿಕಿತ್ಸೆ ನೀಡಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಹೃದ್ರೋಗ ತಜ್ಞ ಡಾ. ಆದಿತ್ಯ ಉಡುಪ, ಭಾನುವಾರ ಮಧ್ಯಾಹ್ನ ಅರ್ಜುನ್ ಜನ್ಯ ಅವರು ಗ್ಯಾಸ್ಟ್ರಿಕ್, ತಲೆ ನೋವು, ಎದೆ ನೋವು ಹಾಗೂ ಬೆನ್ನು ನೋವು ಎಂದು ಆಸ್ಪತ್ರೆಗೆ ದಾಖಲಾದಾಗ ಇಸಿಜಿ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಂಗಳವಾರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಇಸಿಜಿ ಮಾಡಿಸಿದಾಗ ಸ್ವಲ್ಪ ಏರುಪೇರಾಗಿರುವ ವಿಷಯ ತಿಳಿಯಿತು. ಇಸಿಜಿಯಲ್ಲಿ ವ್ಯತ್ಯಾಸ ಕಾಣುತ್ತಿದ್ದಂತೆ ಆ್ಯಂಜಿಯೋಗ್ರಾಮ ಮಾಡಿದಾಗ ಹೃದಯ ಶೇ.99ರಷ್ಟು ಬ್ಯಾಕ್ ಆಗಿತ್ತು. ಕೂಡಲೇ ಕುಟುಂಬಸ್ಥರ ಅನುಮತಿ ಪಡೆದು ಆ್ಯಂಜಿಯೋಪ್ಲಾಸ್ಟಿ ಮಾಡಲಾಗಿತ್ತು ಎಂದು ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು.

    ಫೆಬ್ರವರಿ 28ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ವಿಶ್ರಾಂತಿಯಲ್ಲಿದ್ದಾರೆ. ವೈದ್ಯರು ಎರಡು ತಿಂಗಳು ವಿಶ್ರಾಂತಿ ಸೂಚಿಸಿದ ಹಿನ್ನೆಲೆಯಲ್ಲಿ ಸಿನಿಮಾ ಮತ್ತು ಸಂಗೀತ ಕಾರ್ಯಕ್ರಮಗಳಿಂದ ದೂರ ಉಳಿದುಕೊಂಡಿದ್ದಾರೆ.

  • ಚಿತ್ರ ಕಲಾವಿದನಿಗೆ ಸಹಾಯ ಹಸ್ತ ಚಾಚಿದ್ರು ರಾಜೇಶ್ ಕೃಷ್ಣನ್

    ಚಿತ್ರ ಕಲಾವಿದನಿಗೆ ಸಹಾಯ ಹಸ್ತ ಚಾಚಿದ್ರು ರಾಜೇಶ್ ಕೃಷ್ಣನ್

    ಬೆಂಗಳೂರು: ಸ್ಯಾಂಡಲ್‍ವುಡ್ ಗಾಯಕ ರಾಜೇಶ್ ಕೃಷ್ಣನ್ ಅವರು ಚಿತ್ರ ಕಲಾವಿದ ನಾಗರಾಜ್ ಅವರಿಗೆ ಸಹಾಯ ಹಸ್ತ ಚಾಚಿದ್ದಾರೆ.

    ಚಿತ್ರಕಲೆಯನ್ನೇ ನಂಬಿ ಬದುಕಿದ್ದ ನಾಗರಾಜ್ ಅವರಿಗೆ ಓಪನ್ ಹಾರ್ಟ್ ಸರ್ಜರಿ ಆಗಿದ್ದು, ವೈದ್ಯರು ಅವರಿಗೆ ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ಆದರೆ ನಾಗರಾಜ್ ಅವರ ಮನೆಯಲ್ಲಿ ಅವರು ಬಿಟ್ಟರೆ ಬೇರೆ ಯಾರೂ ದುಡಿಯುವವರಿಲ್ಲ.

    ನಾಗರಾಜ್ ಈ ಕಲೆಯಿಂದಲೇ ತಮ್ಮ ಪತ್ನಿ ಹಾಗೂ ಮಕ್ಕಳನ್ನು ಸಾಕುತ್ತಿದ್ದರು. ಈಗ ಕೂಡ ಈ ಕಲೆಯಿಂದಲೇ ತಮ್ಮ ಪತ್ನಿ ಹಾಗೂ ಮಕ್ಕಳನ್ನು ಸಾಕಬೇಕಿದೆ. ಹೀಗಾಗಿ ಆರ್ಥಿಕ ಸಂಕಷ್ಟದಲ್ಲಿರುವ ನಾಗರಾಜ್ ಅವರಿಗೆ ಸಹಾಯ ಮಾಡಲು ರಾಜೇಶ್ ಕೃಷ್ಣನ್ ಅವರು ಶೇಷಾದ್ರಿಪುರಂ ಕಾಲೇಜಿನಲ್ಲಿ ಸಂಗೀತಾ ಕಾರ್ಯಕ್ರಮವನ್ನು ನಡೆಸಿದ್ದಾರೆ. ಅಲ್ಲದೇ ಆ ಕಾರ್ಯಕ್ರಮದಲ್ಲಿ ಬಂದ ಹಣವನ್ನು ನಾಗರಾಜ್ ಅವರ ಕುಟುಂಬಕ್ಕೆ ನೀಡಿ ಸಹಾಯ ಮಾಡಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸದಾ ನಿಮ್ಮೊಂದಿಗೆ’ ಕಾರ್ಯಕ್ರಮದಲ್ಲಿ ಈ ವಾರ ಗಾಯಕ ರಾಜೇಶ್ ಕೃಷ್ಣನ್ ಭಾಗವಹಿಸುತ್ತಿದ್ದಾರೆ. ಸದ್ಯ ಈ ಕಾರ್ಯಕ್ರಮದ ಶೀರ್ಷಿಕೆ ಹಾಡನ್ನು ಕೂಡ ರಾಜೇಶ್ ಕೃಷ್ಣನ್ ಅವರೇ ಹಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅನುಶ್ರೀ ಕೇಳಿದ ಪ್ರಶ್ನೆಗೆ ವೇದಿಕೆಯಲ್ಲೇ ಭಾವುಕರಾದ ಹನುಮಂತ

    ಅನುಶ್ರೀ ಕೇಳಿದ ಪ್ರಶ್ನೆಗೆ ವೇದಿಕೆಯಲ್ಲೇ ಭಾವುಕರಾದ ಹನುಮಂತ

    ಬೆಂಗಳೂರು: ತರಬೇತಿ ಪಡೆಯದೆ, ಓದದೆ ಇಂದು ಸರಿಗಮಪ ಶೋ ಮೂಲಕ ಖ್ಯಾತಿ ಪಡೆದಿರುವ ಹಾವೇರಿ ಜಿಲ್ಲೆಯ ಹನುಮಂತ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀ ಕೇಳಿದ ಪ್ರಶ್ನೆಗೆ ಭಾವುಕರಾಗಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ ಸೀಸನ್ 15’ ಆವೃತ್ತಿಯಲ್ಲಿ ಹಾವೇರಿ ಜಿಲ್ಲೆಯ ಕುರಿಗಾಯಿ ಹನುಮಂತ ಆಯ್ಕೆಯಾಗಿದ್ದರು. ಹನುಮಂತ ಸುಮಧುರವಾಗಿ ಹಾಡು ಹಾಡುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಆದರೆ ಶನಿವಾರ ಪ್ರಸಾರವಾದ ಕಾರ್ಯಕ್ರಮದಲ್ಲಿ ನಿರೂಪಕಿ ಅನುಶ್ರೀ ಅವರು ಕೇಳಿದ ಪ್ರಶ್ನೆಗೆ ಹನುಮಂತ ಕೆಲ ಹೊತ್ತು ಮಾತನಾಡದೆ ಭಾವುಕರಾಗಿದ್ದರು.

    ಶನಿವಾರ ಪ್ರಸಾರವಾದ ಮಹಾಸಂಚಿಕೆ ಕಾರ್ಯಕ್ರಮದಲ್ಲಿ ಹನುಮಂತ ‘ದುಡ್ಡು ಕೊಟ್ಟರೆ ಬೇಕಾದು ಸಿಗುತೈತೇ ಈ ಜಗದಲಿ ತಮ್ಮ’ ಎಂಬ ಹಾಡನ್ನು ಹಾಡಿದ್ದರು. ಈ ಹಾಡನ್ನು ಹಾಡಿದ ನಂತರ ಅನುಶ್ರೀ ಅವರು ವೇದಿಕೆಯ ಮೇಲೆ ಬಂದು ಈ ಹಾಡನ್ನು ಹಾಡುವ ಮೂಲಕ ನಮ್ಮ ತಾಯಿಯನ್ನು ನೆನಪಿಸಿದ್ದೀರಿ ಎಂದು ಹೇಳಿದರು. ಈ ವೇಳೆ ನಿಮಗೆ ನಿಮ್ಮ ತಾಯಿ ನೆನಪಾಗುತ್ತಿದ್ದಾರಾ ಎಂದು ಪ್ರಶ್ನೆ ಕೇಳಿದ್ದಾರೆ.

    ಅನುಶ್ರೀ ಕೇಳಿದ ಪ್ರಶ್ನೆಗೆ ಹನುಮಂತ ಕೆಲ ಸೆಕೆಂಡ್ ಮಾತನಾಡದೆ ಭಾವುಕರಾಗಿ ಅಮ್ಮನನ್ನು ನೆನಪಿಸಿಕೊಂಡಿದ್ದಾರೆ. ನಾನು ನಮ್ಮ ಅಮ್ಮ, ಅಪ್ಪ ಮತ್ತು ಕುರಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇದೇ ಮೊದಲ ಬಾರಿಗೆ ನಾನು ಅಮ್ಮನಿಂದ ದೂರ ಇದ್ದೀನಿ. ತುಂಬಾ ನೆನಪಾಗುತ್ತಿದ್ದಾರೆ ಎಂದು ಅಮ್ಮನ ನೆನಪಿಸಿಕೊಂಡು ಭಾವುಕರಾಗಿದ್ದಾರೆ.

    ಈ ನಡುವೆ ಅನುಶ್ರೀ ಅವರು ಕ್ಯಾಮೆರಾ ಮುಂದೆ ನಿಮ್ಮ ತಾಯಿಗೆ ಒಂದು ಮಾತು ಹೇಳಿ ಅಂತ ಹೇಳಿದ್ದಾರೆ. ಆಗ ಹನುಮಂತ ತಮ್ಮ ಭಾಷೆಯಲ್ಲಿ ‘ಯವ್ವ ನಾನ್ ಆರಾಮಿದ್ದೀನಿ, ನೀನು ಆರಾಮಾಗಿ ಇರು’ ಎಂದು ಹೇಳಿದ್ದಾರೆ. ಹನುಮಂತ ಹಾಡನ್ನು ಕೇಳಿ ವೇದಿಕೆಯ ಮೇಲಿದ್ದ ಎಲ್ಲರು ತಮ್ಮ ತಾಯಿಯನ್ನು ನೆನಪಿಸಿಕೊಂಡಿದ್ದಾರೆ.

    ತೀರ್ಪುಗಾರರಾಗಿದ್ದ ಸಂಗೀತ ನಿರ್ದೇಶಕ ಹಂಸಲೇಖ, ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣ ಅವರು ಅವರವರ ತಾಯಿಯನ್ನು ನೆನಪಿಸಿಕೊಂಡು ಹನುಮಂತಗೆ ಚೆನ್ನಾಗಿ ಹಾಡಿದ್ದೀಯಾ ಎಂದು ಗೋಲ್ಡನ್ ಬಜಾರ್ ಒತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ತಂದೆ ನಿಧನ

    ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ತಂದೆ ನಿಧನ

    ಬೆಂಗಳೂರು: ಸ್ಯಾಂಡಲ್‍ವುಡ್ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಅವರ ತಂದೆ ಕೃಷ್ಣಮೂರ್ತಿ ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಈ ಬಗ್ಗೆ ಗಾಯಕಿ ಶಮಿತಾ ಮಲ್ನಾಡ್ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

    ಮಿತ್ರರೇ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಅವರ ತಂದೆ ನಮ್ಮ ಪ್ರೀತಿಯ ಕೃಷ್ಣಮೂರ್ತಿ ಅಂಕಲ್ ನಿಧನರಾಗಿದ್ದಾರೆ. ಶನಿವಾರ ಬೆಳಗ್ಗೆ ದೈವಾಧೀನರಾದ್ರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಆಂಟಿ, ರಾಜೇಶ್ ಹಾಗೂ ಸುಜಾತ ನಿಮಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ. ಅಂಕಲ್ ನಾವು ಎಂದಿಗೂ ನಿಮ್ಮನ್ನು ಹಾಗೂ ನಿಮ್ಮ ನಗುಮುಖವನ್ನು ಮರೆಯುವುದಿಲ್ಲ ಎಂದು ಶಮಿತಾ ಮಲ್ನಾಡ್ ತಮ್ಮ ಫೇಸ್‍ಬುಕ್ ಫೇಜ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಕೃಷ್ಣಮೂರ್ತಿ ಅವರು ಪತ್ನಿ ಮೀರಾ ಹಾಗೂ ಇಬ್ಬರು ಮಕ್ಕಳಾದ ಗಾಯಕ ರಾಜೇಶ್ ಕೃಷ್ಣನ್, ಸುಜಾತರನ್ನು ಅಗಲಿದ್ದಾರೆ. ರಾಜೇಶ್ ಕೃಷ್ಣನ್ ಸಂಗೀತ ಕ್ಷೇತ್ರಕ್ಕೆ 1991ರಲ್ಲಿ ಎಂಟ್ರಿ ಕೊಟ್ಟಿದ್ದರು. 2016ರಲ್ಲಿ 25 ವರ್ಷ ಪೂರೈಸಿ ಸಿಲ್ವರ್ ಜ್ಯುಬಿಲಿ ಆಚರಿಸಿಕೊಂಡಿದ್ದರು. ಇದೇ ವೇಳೆ ಮಾತನಾಡಿದ ತಂದೆ ಕೃಷ್ಣಮೂರ್ತಿ, ರಾಜೇಶ್ 5 ವರ್ಷ ಇದ್ದಾಗಲೇ ಹಾಡು ಹಾಡುವುದನ್ನು ಪ್ರಾರಂಭಿಸಿದ್ದರು ಎಂದು ಹೇಳಿದ್ದರು.

    ಸಾವಿರಾರು ಅಭಿಮಾನಿಗಳು ರಾಜೇಶ್ ಕೃಷ್ನನ್ ಅವರ ಫೇಸ್‍ಬುಕ್ ನಲ್ಲಿ ಸಂತಾಪ ಸೂಚಿಸಿದ್ದಾರೆ.