Tag: ರಾಜೇಶ್ವರಿ ಗಾಯಕ್ವಾಡ್

  • ಆಸೀಸ್‍ನಲ್ಲಿ ಪಂದ್ಯ – ವಿಜಯಪುರದಲ್ಲಿ ದೇವರ ಮೊರೆಹೋದ ಗಾಯಕ್ವಾಡ್ ತಾಯಿ

    ಆಸೀಸ್‍ನಲ್ಲಿ ಪಂದ್ಯ – ವಿಜಯಪುರದಲ್ಲಿ ದೇವರ ಮೊರೆಹೋದ ಗಾಯಕ್ವಾಡ್ ತಾಯಿ

    ವಿಜಯಪುರ: ಕಾಂಗೂರುಗಳ ನಾಡು ಆಸ್ಟ್ರೇಲಿಯಾದಲ್ಲಿ ಮಹಿಳಾ ಟಿ-20 ವರ್ಲ್ಡ್ ಕಪ್ ಫೈನಲ್ ಪಂದ್ಯ ಇಂದು ನಡೆಯುತ್ತಿದೆ. ಹೀಗಾಗಿ ಭಾರತ ತಂಡದ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಅವರ ತಾಯಿ ದೇವರ ಮೊರೆ ಹೋಗಿದ್ದಾರೆ.

    ಭಾರತದ ಮಹಿಳಾ ಟೀಂ ಇದೇ ಮೊದಲ ಬಾರಿಗೆ ಫೈನಲ್‍ಗೆ ತಲುಪಿದೆ. ಫೈನಲ್ ತಲುಪಿರುವ ಭಾರತದ ತಂಡದಲ್ಲಿ ನಮ್ಮ ಕರ್ನಾಟಕದವರಾದ ರಾಜೇಶ್ವರಿ ಗಾಯಕ್ವಾಡ್ ಮತ್ತು ವೇದಾ ಕೃಷ್ಣಮೂರ್ತಿ ಕೂಡ ಇದ್ದಾರೆ. ಇದರ ಹಿನ್ನೆಲೆ ವಿಜಯಪುರ ಜಿಲ್ಲೆಯಲ್ಲಿ ಕ್ರೀಡಾ ಆಸಕ್ತರಲ್ಲಿ ಭಾರಿ ಕುತೂಹಲ ಮನೆ ಮಾಡಿದೆ. ಗಾಯಕ್ವಾಡ್ ತಾಯಿ ಮನೆಯಲ್ಲೇ ಕುಳಿತು ದೇವರ ಮೊರೆ ಹೋಗಿದ್ದಾರೆ.

    ಭಾರತದ ಟೀಂ ಗೆದ್ದು ಬರಲೆಂದು ರಾಜೇಶ್ವರಿ ಗಾಯಕ್ವಾಡ್ ತಾಯಿ ಸವಿತಾ ಗಾಯಕ್ವಾಡ್ ದೇವರ ಮೊರೆ ಹೋಗಿದ್ದಾರೆ. ವಿಜಯಪುರದ ಗ್ಯಾಂಗ್ ಬಾಡಿಯಲ್ಲಿರುವ ತಮ್ಮ ಮನೆಯಲ್ಲಿ ರಾಜೇಶ್ವರಿ ತಾಯಿ ಸವಿತಾ ಮನೆ ದೇವರಿಗೆ ಪೂಜೆ ಸಲ್ಲಿಸಿದರು. ಅಲ್ ದಿ ಬೆಸ್ಟ್ ಟೀಂ ಇಂಡಿಯಾ ಎಂದು ಗಾಯಕ್ವಾಡ್ ಕುಟುಂಬಸ್ಥರು ಭಾರತದ ಟೀಂಗೆ ಶುಭ ಕೋರಿದರು.

    ಈಗಾಗಲೇ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ಮಹಿಳಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಉತ್ತಮ ಆರಂಭ ಪಡೆದಿರುವ ಆಸ್ಟ್ರೇಲಿಯಾ, ಆರಂಭಿಕರಾದ ಅಲಿಸಾ ಹೀಲಿ ಮತ್ತು ಬೆತ್ ಮೂನಿ 10 ಓವರ್ ಮುಗಿಯುವುದರೊಳಗೆ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಆದರೆ 75 ರನ್ ಗಳಿಸಿ ಆಡುತ್ತಿದ್ದ ಹೀಲಿ ಔಟ್ ಆಗಿದ್ದಾರೆ.