Tag: ರಾಜೇಶ್ವರಿ

  • ಅಭಿಮಾನಿಗಳ ಹೃದಯ ಗೆದ್ದ ಮೆಗಾ ಸ್ಟಾರ್ – ಚಿರಂಜೀವಿ ರಿಯಲ್ ಹೀರೋ ಎಂದ ಫ್ಯಾನ್ಸ್

    ಅಭಿಮಾನಿಗಳ ಹೃದಯ ಗೆದ್ದ ಮೆಗಾ ಸ್ಟಾರ್ – ಚಿರಂಜೀವಿ ರಿಯಲ್ ಹೀರೋ ಎಂದ ಫ್ಯಾನ್ಸ್

    – ಅಭಿಮಾನಿಯಿಂದ ರಾಕಿ ಕಟ್ಟಿಸಿಕೊಂಡು ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತ ಚಿರಂಜೀವಿ

    ತೆರೆಮೇಲೆ ಮಾತ್ರವಲ್ಲದೇ ತೆರೆಹಿಂದೆಯೂ ಮೆಗಾಸ್ಟಾರ್ ಚಿರಂಜೀವಿ (Chiranjeevi) ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ರಾಜೇಶ್ವರಿ ಹೆಸರಿನ ಮಹಿಳೆ ಚಿರು ಅವರ ಡೈಹಾರ್ಡ್ ಫ್ಯಾನ್ ಆಗಿದ್ದು, ಮೆಗಾಸ್ಟಾರ್ ಮೇಲಿನ ಅಭಿಮಾನದಿಂದಾಗಿ ಸುಮಾರು 300 ಕಿಲೋಮೀಟರ್ ಸೈಕಲ್ ತುಳಿದು‌ ತನ್ನಷ್ಟಿದ ತಾರೆಯನ್ನು ಭೇಟಿಯಾಗಿ ಖುಷಿಪಟ್ಟಿದ್ದಾರೆ.

    ರಾಜೇಶ್ವರಿಯವರು ಅದೋನಿ ನಗರದವರು. ಅದೋನಿಯಿಂದ ಹೈದ್ರಾಬಾದ್‌ಗೆ (Hyderabad) ಬರೋಬ್ಬರಿ 300‌ ಕಿಮೀ ಸೈಕಲ್ ಸವಾರಿಯಲ್ಲಿ ಬಂದ ರಾಜೇಶ್ವರಿಯವರನ್ನು ಚಿರಂಜೀವಿ ಪ್ರೀತಿಯಿಂದಲೇ ತಮ್ಮ ಮನೆಗೆ ಸ್ವಾಗತಿಸಿದ್ದಾರೆ. ಆಕೆಯ ಅಭಿಮಾನ ಕಂಡು ಪುಳಕಿತರಾಗಿದ್ದಾರೆ. ಅಭಿಮಾನಿಯಿಂದ (Chiranjeevi Fan) ರಾಕಿ ಕಟ್ಟಿಸಿಕೊಂಡು ಅಣ್ಣನ ಜವಾಬ್ದಾರಿ ಹೊತ್ತರಲ್ಲದೇ ಆಕೆಗೆ ತಂಗಿಯ ಸ್ಥಾನ ನೀಡಿದ್ದಾರೆ. ಇದನ್ನೂ ಓದಿ: ಸೆ.3ರಿಂದ ಶಿವಣ್ಣ – ಪವನ್ ಒಡೆಯರ್ ಕಾಂಬಿನೇಷನ್ ಚಿತ್ರ ಶುರು; ಮಂಡ್ಯದಲ್ಲೂ ಶೂಟಿಂಗ್‌ಗೆ ಪ್ಲ್ಯಾನ್‌

    ರಾಜೇಶ್ವರಿಯಂತಹ ಅಪರೂಪದ ಅಭಿಮಾನಕ್ಕೆ ಚಿರಂಜೀವಿ ಚಿಕ್ಕ ಕಾಣಿಕೆ ಕೂಡ ನೀಡಿದ್ದಾರೆ. ರಾಜೇಶ್ವರಿಗೆ ಸೀರೆ ಕೊಟ್ಟು ಸತ್ಕರಿಸಿದ್ದಾರೆ. ಇನ್ನೊಂದು ಹೆಜ್ಜೆ ಮುಂದೆ ಇಟ್ಟ ಚಿರಂಜೀವಿ ರಾಜೇಶ್ವರಿ ಅವರ ಇಬ್ಬರ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊರುವ ಭರವಸೆ ಕೊಟ್ಟು ಕಳುಹಿಸಿದ್ದಾರೆ. ಇದನ್ನೂ ಓದಿ: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಸಭ್ಯ ಕಾಮೆಂಟ್ – 5 ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ FIR

  • ರಾಷ್ಟ್ರಕವಿ ಕುವೆಂಪುರವರ ಸೊಸೆ ರಾಜೇಶ್ವರಿ ತೇಜಸ್ವಿ ಇನ್ನಿಲ್ಲ

    ರಾಷ್ಟ್ರಕವಿ ಕುವೆಂಪುರವರ ಸೊಸೆ ರಾಜೇಶ್ವರಿ ತೇಜಸ್ವಿ ಇನ್ನಿಲ್ಲ

    ಚಿಕ್ಕಮಗಳೂರು: ಚಿಕ್ಕಮಗಳೂರು: ರಾಷ್ಟ್ರಕವಿ ಕುವೆಂಪು ಅವರ ಸೊಸೆ, ಕವಿ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರು ಇಂದು ವಿಧಿವಶರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ಅವರಿಗೆ ಬಿಳಿ ರಕ್ತದ ಕಣಗಳು ಕಡಿಮೆಯಾಗಿದ್ದವು. ಹೀಗಾಗಿ ಕಳೆದ ಮೂರ್ನಾಲ್ಕು ದಿನದಿಂದ ಚಿಕಿತ್ಸೆಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆ ರಾಜಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ದನ್ನೂ ಓದಿ: `ದಿವ್ಯ ಕಾಶಿ, ಭವ್ಯ ಕಾಶಿ’ ಪ್ರಧಾನಿ ಮೋದಿ ಕನಸಿನ ಯೋಜನೆ ಲೋಕಾರ್ಪಣೆ – ವಿಶೇಷತೆ ಏನು?

    1937ರಲ್ಲಿ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ತೀರಾ ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ರಾಜೇಶ್ವರಿ ತೇಜಸ್ವಿ 1966ರಲ್ಲಿ ತನಗಿಂತ ಒಂದು ವರ್ಷದ ಕಿರಿಯ ಪೂರ್ಣಚಂದ್ರ ತೇಜಸ್ವಿ ಅವರನ್ನ ಮದುವೆಯಾಗಿದ್ದರು. ಹೆಣ್ಣು ಮಕ್ಕಳು ಕೂಡ ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವ ವಿದ್ಯಾಭ್ಯಾಸ ಕೊಡಬೇಕೆನ್ನುವ ತಮ್ಮ ತಂದೆಯ ಉದಾತ್ತ ಧ್ಯೇಯದಿಂದಾಗಿ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ತತ್ವಶಾಸ್ತ್ರದಲ್ಲಿ ಆನರ್ಸ್ (ಡಿಗ್ರಿ) ಮತ್ತು ಎಂ.ಎ ಮಾಡಿದ್ದರು. ಅಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಪರಿಚಯವಾಗಿ ಪ್ರೀತಿಸಿ ಮದುವೆಯಾದರು. ಆ ನಂತರ ಇವರ ಬದುಕಿನ ದಿಕ್ಕೇ ಬದಲಾಯಿತು.

    1966ರಲ್ಲಿ ತೇಜಸ್ವಿ ಅವರನ್ನ ಮದುವೆಯಾದ ವಿವಾಹವಾದರು. ಬಳಿಕ ಪತಿ ಜೊತೆ ಸೇರಿ ಪುಸ್ತಕ ಪ್ರೇಮವನ್ನ ಬೆಳೆಸಿಕೊಂಡಿದ್ದರು. ಹಲವು ಪುಸ್ತಕಗಳನ್ನ ಬರೆದಿದ್ದರು. ‘ನನ್ನ ತೇಜಸ್ವಿ’ ರಾಜೇಶ್ವರಿ ಅವರು ಬರೆದ ಮೊದಲ ಪುಸ್ತಕ. ಈಗ ಆ ಪುಸ್ತಕ ಐದನೇ ಮುದ್ರಣ ಕಂಡಿದೆ. ‘ನಮ್ಮ ಮನೆಗೂ ಬಂದರು ಗಾಂಧೀಜಿ’ ರಾಜೇಶ್ವರಿ ವರ ಎರಡನೆಯ ಪುಸ್ತಕ. ಪುಸ್ತಕ ಪ್ರೇಮದ ಜೊತೆ ಇವರ ಹವ್ಯಾಸವೂ ವಿಭಿನ್ನವಾಗಿದೆ. ಟೈಲರಿಂಗ್, ಮೊಮ್ಮಕ್ಕಳು ಮತ್ತು ನೆರೆಹೊರೆಯ ಮಕ್ಕಳಿಗೆ ಸ್ಟ್ಯಾಂಪ್ ಕಲೆಕ್ಟ್ ಮಾಡಲು ಪ್ರೇರೇಪಿಸುತ್ತಿದ್ದರು. ಜಗತ್ತು ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಂಡಿದ್ದರು ಇ.ಮೇಲ್ ಇದ್ದರೂ ಅಪರೂಪದ ಸ್ಟ್ಯಾಂಪ್ ಕಲೆಕ್ಟ್ ಮಾಡಿದ್ದಾರೆ.

    ರಾಜೇಶ್ವರಿ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಇಬ್ಬರೂ ಸಾಫ್ಟ್ ವೇರ್ ಇಂಜಿಯರ್ ಆಗಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪತಿ ತೇಜಸ್ವಿ ನಿಧನದ ನಂತರ ರಾಜೇಶ್ವರಿ ತೇಜಸ್ವಿಯವರು ಅಪರೂಪದ ಹವ್ಯಾಸಗಳೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹ್ಯಾಂಡ್ ಪೋಸ್ಟ್ ಸಮೀಪದ ಕಾಫಿ ತೋಟದ ಮನೆಯಲ್ಲಿ ವಾಸವಿದ್ದರು. ತೇಜಸ್ವಿ ಅವರ ನಿಧನದ ದಿನ ಅವರ ಕೊಠಡಿ ಹೇಗಿತ್ತೋ ಇಂದಿಗೂ ಹಾಗೆ ಇದೆ. ಒಂದೇ ಒಂದು ಪೇಪರ್ ಕೂಡ ಅಲುಗಾಡದಂತೆ ನೋಡಿಕೊಂಡಿದ್ದಾರೆ. ತೇಜಸ್ವಿ ಅವರಿಗೆ ಪ್ರಾಣಿಗಳೆಂದರೆ ಬಲು ಇಷ್ಟ. ಅದಕ್ಕಾಗಿ ರಾಜೇಶ್ವರಿ ಅವರು ಕೂಡ ಮನೆಯಲ್ಲಿ ನಾಲ್ಕೈದು ನಾಯಿಗಳನ್ನ ಸಾಕಿಕೊಂಡು ಪ್ರೀತಿಯಿಂದ ಸಾಕುತ್ತಿದ್ದಾರೆ. ದನ್ನೂ ಓದಿ: ಒಳ್ಳೆಯ ಫಲಿತಾಂಶ ಬರುವ ನಿರೀಕ್ಷೆ ಇದೆ: ಬೊಮ್ಮಾಯಿ

    ತೇಜಸ್ವಿ ಅವರ ನೆನಪಿನಲ್ಲಿ ಏಕಾಂಗಿಯಾಗಿ ಬದುಕುತ್ತಿರುವ ರಾಜೇಶ್ವರಿ ಅವರ ಮನೆಗೆ ಆ ನಾಯಿಗಳೇ ಕಾವಲುಗಾರರು. ತೇಜಸ್ವಿ ಅವರು ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಕೆರೆ ಬಳಿ ವಾಕ್ ಮಾಡಿಕೊಂಡು ಬದುಕುತ್ತಿದ್ದರು. ತೇಜಸ್ವಿ ಅವರ ನೆಚ್ವಿನ ಸ್ಕೂಟರ್ ರನ್ನ ದಿನಕ್ಕೆ ಹತ್ತಾರು ಬಾರಿ ನೋಡುತ್ತಿದ್ದರು. ತೇಜಸ್ವಿ ಅವರು ಬಳಸುತ್ತಿದ್ದ ಪ್ರತಿಯೊಂದು ವಸ್ತುವನ್ನೂ ಜೋಪಾನ ಮಾಡಿದ್ದಾರೆ. ಮನೆಗೆ ಭೇಟಿ ನೀಡುತ್ತಿದ್ದ ಯುವಜನತೆ ” ನೀವು ಪುಸ್ತಕ ಓದುತ್ತೀರಾ, ಯಾವ ಪುಸ್ತಕ ಓದಿದ್ದೀರಾ, ಏನು ಸ್ಟೋರಿ ಎಂದು ಕೇಳುತ್ತಿದ್ದರು. ಪುಸ್ತಕ ಓದುವುದಿಲ್ಲ ಎಂದರೆ ಬೈಯುತ್ತಿದ್ದರು. 2007ರಲ್ಲಿ ಪತಿ ತೇಜಸ್ವಿ ಅವರ ನಿಧನದ ಬಳಿಕ ಅವರ ನೆನಪಲ್ಲಿ ತೇಜಸ್ವಿ ಅವರು ಬದುಕುತ್ತಿದ್ದ ಜಾಗದಲ್ಲೇ ಬದುಕುತ್ತಿದ್ದರು. ಮಕ್ಕಳು ಕರೆದರೂ ಬೆಂಗಳೂರಿಗೆ ಹೋಗಿರಲಿಲ್ಲ. ಇಂದು ಅವರು ಇಹಲೋಕ ತ್ಯಜಿಸಿರೋದು ಲಕ್ಷಾಂತರ ಅಭಿಮಾನಿಗಳಿಗೆ ನೋವು.ತಂದಿದೆ.

  • ಹೆಣ್ಣು ಮಗುವಿನ ತಾಯಿಯಾಗಿದ್ದಾರೆ `ಅಗ್ನಿಸಾಕ್ಷಿಯ’ ಚಂದ್ರಿಕಾ

    ಹೆಣ್ಣು ಮಗುವಿನ ತಾಯಿಯಾಗಿದ್ದಾರೆ `ಅಗ್ನಿಸಾಕ್ಷಿಯ’ ಚಂದ್ರಿಕಾ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಈ ಹಿಂದೆ ಚಂದ್ರಿಕಾ ಪಾತ್ರಧಾರಿಯಾಗಿ ರಾಜೇಶ್ವರಿ ಪಾರ್ಥಸಾರ್ಥಿ ಅವರು ಅಭಿನಯಿಸುತ್ತಿದ್ದರು. ಅವರು ಈ ಧಾರಾವಾಹಿಯಿಂದ ಹೊರಬಂದು ಕೆಲವು ವರ್ಷಗಳಾಗಿದ್ದು, ಇದೀಗ ಅವರು ಸಂಪೂರ್ಣ ಬದಲಾಗಿದ್ದಾರೆ.

    ರಾಜೇಶ್ವರಿ ಅವರು ಮದುವೆಯಾದ ನಂತರ ಸೀರಿಯಲ್‍ನಿಂದ ಹೊರಬಂದು ಪತಿ ಕಲ್ಯಾಣ್ ಕ್ರಿಶ್ ಅವರೊಂದಿಗೆ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ. ಈ ದಂಪತಿಗೆ ಹೆಣ್ಣು ಮಗುವಾಗಿದ್ದು, ಮಗುವಿಗೆ ಹವ್ಯಾ ಕೃಷ್ಣ ಎಂದು ನಾಮಕರಣವನ್ನೂ ಮಾಡಿದ್ದಾರೆ. ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದರು.

    ರಾಜೇಶ್ವರಿ ಅವರು ಮದುವೆಯಾದ ನಂತರ ಸಿನಿಮಾರಂಗದಿಂದ ದೂರ ಸರಿದಿದ್ದು, ಇದೀಗ ಆಸ್ಟ್ರೇಲಿಯಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜೇಶ್ವರಿ ಅವರ ವೇಷ ಭೂಷಣ ಕೂಡ ಸಂಪೂರ್ಣ ಬದಲಾಗಿದೆ.

    ಧಾರಾವಾಹಿಯಲ್ಲಿ ರಾಜೇಶ್ವರಿ ಅವರು ತಮ್ಮ ಉದ್ದವಾದ ಕೂದಲಿನಿಂದಲೇ ಎಲ್ಲರ ಗಮನ ಸೆಳೆದಿದ್ದರು. ಆದರೆ ಈಗ ಕೂದಲನ್ನು ಕತ್ತರಿಸಿ ವಿಭಿನ್ನವಾಗಿ ಕಾಣುತ್ತಿದ್ದಾರೆ. ನಟಿ ರಾಜೇಶ್ವರಿ ಅವರು ‘ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಖಳನಟಿಯಾಗಿ ಅಭಿನಯಿಸುತ್ತಿದ್ದು, ಚಂದ್ರಿಕಾ ಹೆಸರಿನಲ್ಲಿ ಪ್ರೇಕ್ಷಕರ ಮನದಲ್ಲಿದ್ದರು.