Tag: ರಾಜೇಗೌಡ

  • ಅಕ್ರಮ ಆಸ್ತಿ ಗಳಿಕೆ ಆರೋಪ; ಕಾಂಗ್ರೆಸ್‌ ಶಾಸಕ ರಾಜೇಗೌಡ ವಿರುದ್ಧ ತನಿಖೆಗೆ ಕೋರ್ಟ್‌ ಆದೇಶ

    ಅಕ್ರಮ ಆಸ್ತಿ ಗಳಿಕೆ ಆರೋಪ; ಕಾಂಗ್ರೆಸ್‌ ಶಾಸಕ ರಾಜೇಗೌಡ ವಿರುದ್ಧ ತನಿಖೆಗೆ ಕೋರ್ಟ್‌ ಆದೇಶ

    ಬೆಂಗಳೂರು/ಚಿಕ್ಕಮಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಕಾಂಗ್ರೆಸ್ ಶಾಸಕ ರಾಜೇಗೌಡ ವಿರುದ್ಧ ತನಿಖೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

    ಶೃಂಗೇರಿ ಶಾಸಕ ರಾಜೇಗೌಡ ವಿರುದ್ಧ ಬಿಜೆಪಿ ಮುಖಂಡ ದಿನೇಶ್‌ ಹೊಸೂರು ಅರ್ಜಿ ಸಲ್ಲಿಸಿದ್ದರು. ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಸೂಚಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು.

    ಅರ್ಜಿ ಸಂಬಂಧ ಬುಧವಾರ ವಿಚಾರಣೆ ನಡೆಸಿದ್ದ ಕೋರ್ಟ್ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಆದೇಶ ಹೊರಡಿಸಿದೆ. ಶಾಸಕರ ಪತ್ನಿ ಹಾಗೂ ಮಗನ ವಿರುದ್ಧವೂ ಪ್ರಕರಣ ದಾಖಲಿಸಿ ತನಿಖೆಗೆ ಆದೇಶ ನೀಡಿದೆ.

    60 ದಿನದ ಒಳಗೆ ತನಿಖಾ ವರದಿ ಸಲ್ಲಿಸಲು ಚಿಕ್ಕಮಗಳೂರು ಲೋಕಾಯುಕ್ತ ಅಧಿಕಾರಿಗಳಿಗೆ ಕೋರ್ಟ್‌ ಸೂಚನೆ ನೀಡಿದೆ.

  • 200 ಕೋಟಿ ರೂ. ಅಕ್ರಮ ಆಸ್ತಿ ಖರೀದಿ – ಶಾಸಕ ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು

    200 ಕೋಟಿ ರೂ. ಅಕ್ರಮ ಆಸ್ತಿ ಖರೀದಿ – ಶಾಸಕ ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು

    ಚಿಕ್ಕಮಗಳೂರು: ಶೃಂಗೇರಿಯ ಶಾಸಕ ರಾಜೇಗೌಡ (RajeGowda) ಆದಾಯಕ್ಕೂ ಮೀರಿ ಅಕ್ರಮವಾಗಿ 200 ಕೋಟಿ ರೂ.ಗೂ ಅಧಿಕ ಆಸ್ತಿ ಸಂಪಾದಿಸಿದ್ದಾರೆ, ಜೊತೆಗೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ಮೋಸ ಮಾಡಿದ್ದಾರೆ ಎಂದು ಇಂದು ಲೋಕಾಯುಕ್ತದಲ್ಲಿ (Lokayukta)  ದೂರು ದಾಖಲಾಗಿದೆ.

    ರಾಜೇಗೌಡ ಮತ್ತು ಕುಟುಂಬಸ್ಥರ ವಿರುದ್ಧ ವಿಜಯಾನಂದ ಸಿಪಿ ದೂರು ನೀಡಿದ್ದು ಶಬಾನ್ ರಂಜಾನ್ ಫಾರ್ಮ್‍ನ 266 ಎಕರೆಯಲ್ಲಿ ವಿವಿಧ ಪ್ಲಾಂಟ್‌ ಇರುವ ಭೂಮಿಯನ್ನು ರಾಜೇಗೌಡ ಕುಟುಂಬ ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಇದು ಈ ಮೊದಲ ಮೃತ ಸಿದ್ದಾರ್ಥ ಅವರ ಹೆಸರಿನಲ್ಲಿ ಇತ್ತು. ಅವರ ಮರಣದ ಬಳಿಕ ಅವರ ಪತ್ನಿ ಮತ್ತು ಮಗನ ಹೆಸರಿನಲ್ಲಿ ಇತ್ತು ಅದನ್ನ ರಾಜೇಗೌಡರು ತಮ್ಮ ಪ್ರಭಾವ ಬೀರಿ ಅವರ ಪತ್ನಿ ಹಾಗೂ ಮಗನ ಹೆಸರನ್ನು ಫಾರ್ಮ್‍ಗೆ ಸೇರಿಸಿದ್ದಾರೆ ಎಂದು ವಕೀಲ ದಿನೇಶ್ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ಗೋಲ್ಮಾಲ್ – ಚಿಲುಮೆ ಸಂಸ್ಥೆಯ ನಾಲ್ವರು ಪೊಲೀಸರ ವಶಕ್ಕೆ

    ಸಿದ್ದಾರ್ಥ ಕುಟುಂಬ 1992ರಲ್ಲಿ ಶಾಬನ್ ರಂಜನ್ ಟ್ರಸ್ಟ್‌ನಿಂದ ಸುಮಾರು 266 ಎಕರೆ 38 ಗುಂಟೆ, ಬಂಗ್ಲೆ, ಸಿಬ್ಬಂದಿ ಕ್ವಾಟರ್ಸ್ ಸೇರಿದಂತೆ ಖರೀದಿ ಮಾಡಿದ್ರು, ಇದನ್ನು ಖರೀದಿ ಮಾಡಲು ಶಾಬನ್ ರಂಜನ್ ಪಾಲುದಾರಿಕೆಗೆ ಸೇರಿಕೊಂಡಿದ್ರು, ಆದ್ರೆ ಇದೀಗ ಸಿದ್ದಾರ್ಥ ಅವರ ಪತ್ನಿ ಮಗನ ಹೆಸರಿನಲ್ಲಿದ್ದ ಪ್ರಾಪರ್ಟಿ ರಾಜೇಗೌಡರ ಕುಟುಂಬಕ್ಕೆ ಹಸ್ತಾಂತರ ಅಗಿದೆ. ಹಸ್ತಾಂತರ ಮಾಡಿಕೊಂಡಿದ್ದಕ್ಕೆ ಯಾವುದೇ ಹಣಕಾಸು ವ್ಯವಹಾರದ ಲೆಕ್ಕಪತ್ರ ಇಲ್ಲ. ಜೊತೆಗೆ ಈ ಹಿಂದೆ 2018 ಚುನಾವಣೆಗೆ ಸ್ಪರ್ಧೆ ಮಾಡುವಾಗ ಒಟ್ಟು 30 ಕೋಟಿ ಪ್ರಾಪರ್ಟಿ ಕ್ಲೈಮ್ ಮಾಡಿದ್ರು, ಅದರಲ್ಲಿ 25 ಕೋಟಿ ಬೇರೆ ಬೇರೆ ಹೊಣೆಗಾರಿಕೆ ಇರುವುದಾಗಿ ದಾಖಲೆ ನೀಡಿದ್ರು, ಈ ಹಿನ್ನೆಲೆ ಸರ್ಕಾರದ ಬೊಕ್ಕಸಕ್ಕೆ ಮತ್ತು ಅಕ್ರಮ ಹಣ ಗಳಿಕೆ, ಅಧಿಕಾರ ದುರುಪಯೋಗ ಪಡಿಸಿಕೊಂಡು ಭ್ರಷ್ಟಾಚಾರ ಮಾಡಿ ಹಣ ಆಸ್ತಿ ಪಾಸ್ತಿ ಮಾಡುವ ಮೂಲಕ ನಷ್ಟ ಮಾಡಿರುವುದಾಗಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಆದಾಯ ತೆರಿಗೆ ಮತ್ತು ಇಡಿ ಕಚೇರಿಗೆ ದಾಖಲೆಗಳ ಸಮೇತ ದೂರು ನೀಡಲು ವಕೀಲರು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ರಾಮನಿಗಿಂತ ರಾವಣ ಜ್ಞಾನಿ – ವಿವೇಕ ಇರುವುದರಿಂದ ಜನ ರಾಮನನ್ನು ಪೂಜಿಸುತ್ತಾರೆ: ರಾಜನಾಥ್ ಸಿಂಗ್

    Live Tv
    [brid partner=56869869 player=32851 video=960834 autoplay=true]