Tag: ರಾಜೇಂದ್ರ ಸಿಂಗ್ ಬಾಬು

  • ಗ್ಯಾಂಗ್‌ಸ್ಟರ್ ಆದಿತ್ಯಗೆ ರಾಜೇಂದ್ರ ಸಿಂಗ್ ಬಾಬು ಆ್ಯಕ್ಷನ್ ಕಟ್

    ಗ್ಯಾಂಗ್‌ಸ್ಟರ್ ಆದಿತ್ಯಗೆ ರಾಜೇಂದ್ರ ಸಿಂಗ್ ಬಾಬು ಆ್ಯಕ್ಷನ್ ಕಟ್

    ಸ್ಯಾಂಡಲ್‌ವುಡ್‌ನಲ್ಲಿ ಡೆಡ್ಲಿ, ವಿಲನ್, ಎದೆಗಾರಿಕೆ ಸಿನಿಮಾಗಳ ಮೂಲಕ ಗಮನ ಸೆಳೆದ ನಟ ಆದಿತ್ಯ ಈಗ ಗ್ಯಾಂಗ್‌ಸ್ಟರ್ ಆಗಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ಹೊಸ ಸಿನಿಮಾಗೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ್ದಾರೆ.

    ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಚಿತ್ರ ನಿರ್ದೇಶನ ಮಾಡುವುದರ ಮೂಲಕ ಸೈ ಎನಿಸಿಕೊಂಡಿರೋ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರ ಆದಿತ್ಯಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ವಿಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡಿರೋ ಆದಿತ್ಯ ಕರಾವಳಿ ಭಾಗದ ಜನಪ್ರಿಯ ಕಂಬಳದ ಕಥೆ ಹೇಳಲು ಹೊರಟಿದ್ದಾರೆ.

    ರಾಜೇಂದ್ರ ಸಿಂಗ್ ಬಾಬು ಮತ್ತು ಆದಿತ್ಯ ಡೆಡ್ಲಿ ಕಾಂಬಿನೇಷನ್‌ನಲ್ಲಿ `ವೀರ ಕಂಬಳ’ ಚಿತ್ರ ಮೂಡಿ ಬಂದಿದೆ. ಗ್ಯಾಂಗ್‌ಸ್ಟರ್ ಪಾತ್ರಕ್ಕೆ ನಟ ಆದಿತ್ಯ ಜೀವತುಂಬಿದ್ದಾರೆ. ತುಳು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರೋ ಕಂಬಳ ಜನಾಂಗವನ್ನು ಬೆಂಬಲಿಸುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ `ವೀರ ಕಂಬಳ’ ಚಿತ್ರದ ಬಹುತೇಕ ಚಿತ್ರೀಕರಣ ಮಂಗಳೂರಿನಲ್ಲಿ ನಡೆದಿದೆ. ಜತೆಗೆ ನಟ ಆದಿತ್ಯ ಅವರ ಚಿತ್ರದ ಫಸ್ಟ್ ಲುಕ್‌ನ್ನು ಮೇ ಮೊದಲ ವಾರದಲ್ಲಿ ಬಿಡುಗಡೆ ಮಾಡಲಿದೆ ಚಿತ್ರತಂಡ. ಇದನ್ನೂ ಓದಿ: ಪುನೀತ್‌ಗೆ ಅವಮಾನ: ತಿರುಪತಿ ತಿರುಮಲ ದೇವಸ್ಥಾನಕ್ಕೆ ಅಭಿಮಾನಿಗಳು ಮುತ್ತಿಗೆ

    ʻವೀರ ಕಂಬಳʼ ಚಿತ್ರದಲ್ಲಿ ಲವ್‌ಸ್ಟೋರಿ ಜತೆ ಆ್ಯಕ್ಷನ್ ಕಥಾಹಂದರವಿರುವ ವಿಭಿನ್ನ ಚಿತ್ರವಾಗಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ. ಇನ್ನು ಗ್ಯಾಂಗ್‌ಸ್ಟರ್ ಪಾತ್ರಕ್ಕೂ ಕಂಬಳದ ಎನು ಸಂಬಂಧ ಅಂತಾ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ನಟ ಆದಿತ್ಯ ಅವರ ರೆಬೆಲ್ ಅವತಾರ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

  • ಹಿರಿಯ ಕಲಾವಿದೆ ಪ್ರತಿಮಾ ದೇವಿ ನಿಧನ

    ಹಿರಿಯ ಕಲಾವಿದೆ ಪ್ರತಿಮಾ ದೇವಿ ನಿಧನ

    ಬೆಂಗಳೂರು: ಹಿರಿಯ ಕಲಾವಿದೆ ಪ್ರತಿಮಾ ದೇವಿ (88) ಬೆಂಗಳೂರಿನ ಮನೆಯಲ್ಲಿ ನಿಧನರಾಗಿದ್ದಾರೆ.

    ನಿರ್ದೇಶಕ ಎಸ್‍ವಿ ರಾಜೇಂದ್ರ ಸಿಂಗ್ ಬಾಬು ಅವರ ತಾಯಿ ಪ್ರತಿಮ ದೇವಿ ಇಂದು ಮಧ್ಯಾಹ್ನ ಮನೆಯಲ್ಲಿ ವಿಧಿವಶರಾಗಿದ್ದಾರೆ. 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಪ್ರತಿಮಾ ದೇವಿ ಅವರ ಅಂತ್ಯ ಸಂಸ್ಕಾರ ನಾಳೆ ಮೈಸೂರಿನಲ್ಲಿ ನಡೆಯಲಿದೆ.

    ಮೂಲತಃ ಉಡುಪಿಯ ಪ್ರತಿಮಾ ದೇವಿಯವರ ಮೂಲ ಹೆಸರು ಮೋಹಿನಿ. ಸಣ್ಣಪ್ರಾಯದಲ್ಲೇ ರಂಗಭೂಮಿಯಲ್ಲಿ ಅಭಿನಯಿಸಿದ್ದ ಇವರು 1947ರಲ್ಲಿ ತಮ್ಮ 14ನೇ ವಯಸ್ಸಿನಲ್ಲಿ ಕೃಷ್ಣಲೀಲಾ ಸಿನಿಮಾ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಜಗನ್ಮೋಹಿನಿ ಚಿತ್ರದ ಮುಖಾಂತರ ನಾಯಕಿಯಾಗಿ ಹೊರಹೊಮ್ಮಿದ್ದರು.

    ಚಂಚಲ ಕುಮಾರಿ, ನಾಗಕನ್ಯಾ, ದಲ್ಲಾಳಿ, ಧರ್ಮಸ್ಥಳ ಮಹಾತ್ಮೆ, ವರದಕ್ಷಿಣೆ, ಮುಟ್ಟಿದ್ದೆಲ್ಲಾ ಚಿನ್ನ, ರಾಜ್‍ಕುಮಾರ್ ಅವರ ಜತೆಗೆ ಭಕ್ತಚೇತ ಹೀಗೆ ಒಟ್ಟು 60 ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.

    ಖ್ಯಾತ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಸಂಗ್ರಾಮ್ ಸಿಂಗ್, ಜಯರಾಜ್ ಸಿಂಗ್ ಹಾಗೂ ನಟಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಇವರ ಮಕ್ಕಳು.

  • ತಯಾರಾಗುತ್ತಿದೆ ಅಂತರಾಷ್ಟ್ರೀಯ ಗಂಧದ ಗುಡಿ- ಐಎಫ್‍ಎಸ್ ಅಧಿಕಾರಿ ಪಾತ್ರದಲ್ಲಿ ಡಿ ಬಾಸ್

    ತಯಾರಾಗುತ್ತಿದೆ ಅಂತರಾಷ್ಟ್ರೀಯ ಗಂಧದ ಗುಡಿ- ಐಎಫ್‍ಎಸ್ ಅಧಿಕಾರಿ ಪಾತ್ರದಲ್ಲಿ ಡಿ ಬಾಸ್

    ಬೆಂಗಳೂರು: ಲಾಕ್‍ಡೌನ್ ಮಧ್ಯೆ ಹಲವು ನಿರ್ದೇಶಕರು, ಬರಹಗಾರರಿಗೆ ಒಳ್ಳೊಳ್ಳೆ ಐಡಿಯಾಗಳು ಬರುತ್ತಿದ್ದು, ಬಹುತೇಕ ಸಿನಿಮಾ ತಾರೆಯರು ಲಾಕ್‍ಡೌನ್ ಮಧ್ಯೆಯೇ ಹೊಸ ಸಿನಿಮಾಗಳಿಗೆ ಕಥೆಗಳನ್ನು ಹೆಣೆದಿದ್ದಾರೆ. ಚಿತ್ರೀಕರಣಕ್ಕೆ ಅವಕಾಶ ಸಿಗುತ್ತಿದ್ದಂತೆ ಫೀಲ್ಡ್‍ಗೆ ಇಳಿಯಲು ತಯಾರಿ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸಹ ಕೆಲಸ ಮಾಡಿದ್ದು, ಲಾಕ್‍ಡೌನ್ ಹೊತ್ತಲ್ಲಿ ಡಿ ಬಾಸ್‍ಗಾಗಿ ಮತ್ತೊಂದು ಕಥೆ ಹೆಣೆದಿದ್ದಾರೆ.

    ರಾಜೇಂದ್ರ ಸಿಂಗ್ ಬಾಬು ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗಾಗಿ ಈಗಾಗಲೇ ಐತಿಹಾಸಿಕ ರಾಜ ವೀರ ಮದಕರಿ ನಾಯಕ ಚಿತ್ರ ಮಾಡುತ್ತಿದ್ದು, ಇದರ ಮಧ್ಯೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೌದು ದರ್ಶನ್ ಅಭಿನಯ ರಾಬರ್ಟ್ ಸಿನಿಮಾ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದ್ದು, ಇದರ ಬೆನ್ನಲ್ಲೇ ರಾಜ ವೀರ ಮದಕರಿ ನಾಯಕ ಚಿತ್ರೀಕರಣಕ್ಕೆ ಯೋಜನೆ ರೂಪಿಸಿದ್ದಾರೆ. ಆದರೆ ಇದು ಐತಿಹಾಸಿಕ ಸಿನಿಮಾ ಆಗಿರುವುದರಿಂದ ಸಿನಿಮಾ ತಯಾರಿ ಸ್ವಲ್ಪ ತಡವಾಗಬಹುದು. ಹೀಗಾಗಿ ಇದರ ಮಧ್ಯೆಯೇ ರಾಜೇಂದ್ರ ಸಿಂಗ್ ಬಾಬು ಹಾಗೂ ದರ್ಶನ್ ಜೋಡಿ ಮತ್ತೊಂದು ಸಿನಿಮಾ ಮಾಡಲು ತಯಾರಿ ನಡೆಸಿದೆ.

    ಈ ಚಿತ್ರದಲ್ಲಿ ಡಿ ಬಾಸ್ ಅರಣ್ಯ ಅಧಿಕಾರಿ(ಐಎಫ್‍ಎಸ್) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಮೂಲಕ ಸುಧೀರ್ಘ ಸಮಯದ ಬಳಿಕ ಗಂಧದ ಗುಡಿ ಸಿನಿಮಾ ರೀತಿಯ ಪರಿಪೂರ್ಣ ಅರಣ್ಯ ಕಥಾನಕವಿರುವ ಸಿನಿಮಾ ಮಾಡಲು ರಾಜೇಂದ್ರ ಸಿಂಗ್ ಬಾಬು ಮುಂದಾಗಿದ್ದಾರೆ. ಇನ್ನೂ ವಿಶೇಷವೆಂದರೆ ಈ ಸಿನಿಮಾಗೆ ಗಂಧದ ಗುಡಿ ಎಂದೇ ಹೆಸರಿಡಲು ನಿರ್ಧರಿಸಿದ್ದಾರಂತೆ. ಅರಣ್ಯ ಹಾಗೂ ವನ್ಯ ಜೀವಿಗಳ ಕುರಿತು ಈಗಾಗಲೇ ಗಂಧದ ಗುಡಿ ಭಾಗ-1, ಭಾಗ-2 ಸಿನಿಮಾಗಳು ಬಂದಿದ್ದು, ಮೊದಲ ಭಾಗದಲ್ಲಿ ಡಾ.ರಾಜ್‍ಕುಮಾರ್ ಹಾಗೂ ವಿಷ್ಣುವರ್ಧನ್ ಕಾಣಿಸಿಕೊಂಡರೆ, ಎರಡನೇ ಭಾಗದಲ್ಲಿ ಶಿವರಾಜ್‍ಕುಮಾರ್ ನಟಿಸಿದ್ದರು. ಇದೀಗ ಹೊಸ ಚಿತ್ರ ಅಂತರಾಷ್ಟ್ರೀಯ ಗಂಧದ ಗುಡಿಯಾಗಿರಲಿದೆ ಎಂದು ರಾಜೇಂದ್ರ ಸಿಂಗ್ ಬಾಬು ಮಾಹಿತಿ ನೀಡಿದ್ದಾರೆ.

    ರಾಜೇಂದ್ರ ಸಿಂಗ್ ಬಾಬು ಅವರಿಗೆ ಈ ರೀತಿಯ ಸಿನಿಮಾ ಮಾಡುವ ಆಲೋಚನೆ ಹೊಳೆದದ್ದೇ ಅಚ್ಚರಿಯಂತಾಗಿದ್ದು, ಆಫ್ರಿಕಾ ಖಂಡದ ತಾಂಜೇನಿಯಾದ ಅರಣ್ಯದಲ್ಲಿನ ಬೇಟೆಯ ಹಾವಳಿಗಳ ಕುರಿತ ಪುಸ್ತಕಗಳನ್ನು ಓದುವಾಗ ಅವರಿಗೆ ಇಂತಹ ವಸ್ತು ಇಟ್ಟುಕೊಂಡು ಸಿನಿಮಾ ಮಾಡುವ ಆಲೋಚನೆ ಮೂಡಿದೆಯಂತೆ. ಹೀಗಾಗಿ ಈ ಕುರಿತು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

    ಆಫ್ರಿಕಾ, ಹಾಂಕಾಂಗ್ ಮತ್ತು ಲಂಡನ್ ನಡುವೆ ಕಥೆ ಸಾಗಲಿದೆಯಂತೆ. ಆಫ್ರಿಕಾದ ಕಾಡುಗಳಲ್ಲಿ ಚಿತ್ರೀಕರಣ ನಡೆಸಲು ಉದ್ದೇಶಿಸಲಾಗಿದೆ. ಹೀಗಾಗಿ ಇದನ್ನು ಅಂತರಾಷ್ಟ್ರೀಯ ಗಂಧದ ಗುಡಿ ಎಂದು ಕರೆಯಲಾಗಿದೆ. ಅಧಿಕಾರಿ ಪಾತ್ರದಲ್ಲಿ ಡಿ ಬಾಸ್ ಕಾಣಿಸಿಕೊಳ್ಳುವುದರಿಂದ ಆ್ಯಕ್ಷನ್ ಯಾವ ರೀತಿ ಇರಲಿದೆ ಎಂಬುದು ಅಭಿಮಾನಿಗಳ ಕುತೂಹಲ. ಅಲ್ಲದೆ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ. ಹೀಗಾಗಿ ಐಎಫ್‍ಎಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕುತೂಹಲ ಮೂಡಿಸಿದೆ.

  • ವಿಚಾರಣೆಗೆ ಹಾಜರಾಗಿ – ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬುಗೆ ಪೊಲೀಸ್ ನೋಟಿಸ್

    ವಿಚಾರಣೆಗೆ ಹಾಜರಾಗಿ – ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬುಗೆ ಪೊಲೀಸ್ ನೋಟಿಸ್

    ಬೆಂಗಳೂರು: ಹಲವು ಬಾರಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರೂ ಕ್ಯಾರೆ ಅನ್ನದ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಕುಟುಂಬದ ಸದಸ್ಯರು ವಿಚಾರಣೆಗೆ ಹಾಜರಾಗುವಂತೆ ಸದಾಶಿವನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

    ಬಾಡಿಗೆ ಕಟ್ಟದೇ ಮನೆಯ ಮಾಲೀಕ ಜಿ.ಆರ್.ಪ್ರಸನ್ನ ಜೊತೆ ಜಗಳ ಮಾಡಿ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿರುವ ಆರೋಪ ರಾಜೇಂದ್ರ ಸಿಂಗ್ ಬಾಬು ಮೇಲಿದೆ. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು 12 ದಿನಗಳಿಂದ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

    ಪೊಲೀಸ್ ಸೂಚನೆಗೆ ರಾಜೇಂದ್ರ ಸಿಂಗ್ ಬಾಬು ಕುಟುಂಬ, ನಾವು ಹೊರದೇಶದಲ್ಲಿ ಇರುವ ಕಾರಣ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಉತ್ತರ ನೀಡಿದ್ದಾರೆ. ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಈಗ ಪೊಲೀಸ್ ಆಯುಕ್ತರಿಗೆ ದೂರು ನೀಡಲು ಮುಂದಾಗಿದ್ದೇನೆ ಎಂದು ಮನೆ ಮಾಲೀಕ ಪ್ರಸನ್ನ ತಿಳಿಸಿದ್ದಾರೆ.

    ಏನಿದು ಪ್ರಕರಣ?
    ರಾಜೇಂದ್ರ ಸಿಂಗ್ ಬಾಬು ಮತ್ತು ಅವರ ಮಗ ಆದಿತ್ಯ ಮತ್ತು ಮಗಳು ಹಾಗೂ ಅವರ ಪತ್ನಿ ಕಳೆದ ನಾಲ್ಕು ವರ್ಷದಿಂದ ಸದಾಶಿವನಗರದ ಆರ್‍ಎಂವಿ ಎಕ್ಷಟೆನ್ಷನ್‍ನಲ್ಲಿರುವ ಪ್ರಸನ್ನ ಎಂಬುವವರ ಮನೆಯಲ್ಲಿ ಬಾಡಿಗೆಯಲ್ಲಿದ್ದಾರೆ. ನಾಲ್ಕು ವರ್ಷದಿಂದ ತಿಂಗಳಿಗೆ 40 ಸಾವಿರ ಬಾಡಿಗೆ ನೀಡಲಾಗುತ್ತಿತ್ತು. ಆದರೆ ಮನೆಯ ಮಾಲೀಕ ಮನೆಯ ಬಾಡಿಗೆಯನ್ನು ಏರಿಕೆ ಮಾಡಿ 48 ಸಾವಿರ ಕೊಡಲು ಹೇಳಿದ್ದಾರೆ. ಇದಕ್ಕೆ ಒಪ್ಪದ ರಾಜೇಂದ್ರ ಸಿಂಗ್ ಬಾಬು ಅವರು ಕಳೆದ 7 ತಿಂಗಳಿನಿಂದ 2 ಲಕ್ಷ 88 ಸಾವಿರ ಬಾಡಿಗೆ ಹಣವನ್ನು ಬಾಕಿ ಉಳಿಸಿಕೊಂಡಿದ್ದರು. ಈ ಸಂಬಂಧ ಮನೆ ಮಾಲೀಕ ಪ್ರಸನ್ನ ಅವರು ಕೋರ್ಟ್‍ಗೆ ಎವಿಕ್ಷನ್ ಕೇಸ್ ನೀಡಿದ್ದರು. ಸದ್ಯ ಈಗ ಮನೆ ಖಾಲಿ ಮಾಡಿಸಿ ಕೊಡುವಂತೆ ಪೊಲೀಸರಿಗೆ ಮೇ 2 ರಂದು ದೂರು ನೀಡಿದ್ದಾರೆ.

  • ಕಿಚ್ಚನಿಗಿಂತ ಮೊದಲೇ ಮದಕರಿಯಾಗ್ತಾರಾ ದರ್ಶನ್?

    ಕಿಚ್ಚನಿಗಿಂತ ಮೊದಲೇ ಮದಕರಿಯಾಗ್ತಾರಾ ದರ್ಶನ್?

    ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಡುವೆ ವೀರ ಮದಕರಿ ಚಿತ್ರದ ವಿಚಾರವಾಗಿ ಪೈಪೋಟಿ ಶುರುವಾಗಿದೆ. ಇವರಿಬ್ಬರೂ ಮದಕರಿ ನಾಯಕನ ಜೀವನಾಧಾರಿತ ಚಿತ್ರದಲ್ಲಿ ನಟಿಸಿಯೇ ತೀರುವ ಪಣ ತೊಟ್ಟಿದ್ದಾರೆ. ಅತ್ತ ಸುದೀಪ್ ಚಿತ್ರದ ತಯಾರಿ ನಡೆಯುತ್ತಿರೋವಾಗಲೇ ಇತ್ತ ದರ್ಶನ್ ಸುದೀಪ್ ಅವರಿಗಿಂತ ಮೊದಲೇ ಮದಕರಿಯಾಗಿ ಆರ್ಭಟಿಸೋ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.

    ವಿಚಾರವೇನಂದ್ರೆ ಸುದೀಪ್ ಚಿತ್ರಕ್ಕಿಂತಲೂ ಮೊದಲೇ ದರ್ಶನ್ ಚಿತ್ರ ಶುರುವಾಗಲಿದೆ. ಇಂಥಾದ್ದೊಂದು ವಿಚಾರ ಅಧಿಕೃತವೆಂಬಂತೆಯೇ ಹೊರ ಬಿದ್ದಿದೆ. ಈ ಬಗ್ಗೆ ದರ್ಶನ್ ಚಿತ್ರದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸ್ಪಷ್ಟಪಡಿಸಿದ್ದಾರೆ. ಅವರ ಮಾತಿನ ಆಧಾರದಲ್ಲಿ ಹೇಳೋದಾದರೆ ಈಗಾಗಲೇ ಸ್ಕ್ರಿಪ್ಟ್ ವರ್ಕ್ ಕೂಡಾ ಸಂಪೂರ್ಣವಾಗಿದೆ. ಇನ್ನೇನು ಒಂದೂವರೆ ತಿಂಗಳಲ್ಲಿಯೇ ಈ ಚಿತ್ರದ ಚಿತ್ರೀಕರಣ ಚಾಲೂ ಆಗಲಿದೆ.

    ಈ ಚಿತ್ರಕ್ಕೆ ಹಂಸಲೇಖಾ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರಂತೆ. ಅವರು ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದ್ದಾರೆ. ಆ ಬಳಿಕ ಚಿತ್ರಕ್ಕಾಗಿ ಅದ್ಧೂರಿ ಸೆಟ್‍ಗಳನ್ನು ಹಾಕಲು ರಾಕ್ ಲೈನ್ ವೆಂಕಟೇಶ್ ಅವರು ಯೋಜನೆ ಹಾಕಿಕೊಂಡಿದ್ದಾರೆ. ಒಟ್ಟಾರೆಯಾಗಿ ಸುದೀಪ್ ಚಿತ್ರಕ್ಕಿಂತಲೂ ವೇಗವಾದ ಕೆಲಸ ಕಾರ್ಯಗಳು ದರ್ಶನ್ ಚಿತ್ರಕ್ಕಾಗಿ ಚಾಲ್ತಿಯಲ್ಲಿವೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv