Tag: ರಾಜೇಂದ್ರ ಪ್ರಸಾದ್

  • ಈ ಶಾಲೆಯಲ್ಲಿ 100 ವಿದ್ಯಾರ್ಥಿಗಳು ಏಕಕಾಲದಲ್ಲಿಯೇ ಎರಡು ಕೈಯಲ್ಲೂ ಬರೀತಾರೆ!

    ಈ ಶಾಲೆಯಲ್ಲಿ 100 ವಿದ್ಯಾರ್ಥಿಗಳು ಏಕಕಾಲದಲ್ಲಿಯೇ ಎರಡು ಕೈಯಲ್ಲೂ ಬರೀತಾರೆ!

    ಭೋಪಾಲ್: ಮಧ್ಯಪ್ರದೇಶದ (Madhya Pradesh) ಸಿಂಗ್ರೌಲಿಯಲ್ಲಿರುವ (Singrauli) ಶಾಲೆಯೊಂದರಲ್ಲಿ 100 ವಿದ್ಯಾರ್ಥಿಗಳು ಎರಡೂ ಕೈಗಳಲ್ಲಿಯೂ ಏಕಕಾಲದಲ್ಲಿಯೇ ಬರೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಜೊತೆಗೆ ಅವರೆಲ್ಲರೂ ಐದು ಭಾಷೆಗಳಲ್ಲಿಯೂ ಪಾರಂಗತರಾಗಿದ್ದಾರೆ.

    ಹೌದು, ಸಿಂಗ್ರೌಲಿಯ ಬುಧೇಲಾ ಗ್ರಾಮದಲ್ಲಿರುವ (Budhela village) ವೀಣಾ ವಾದಿನಿ ಪಬ್ಲಿಕ್ ಸ್ಕೂಲ್‍ನ (Veena Vadini Public School)ವಿದ್ಯಾರ್ಥಿಗಳು ಹಿಂದಿ, ಸಂಸ್ಕೃತ, ಇಂಗ್ಲಿಷ್, ಉರ್ದು ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಪ್ರವೀಣರಾಗಿದ್ದಾರೆ. ಇದನ್ನೂ ಓದಿ: ಪೋಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ – ಇಬ್ಬರು ಸಾವಿನ ಬೆನ್ನಲ್ಲೇ ಅಮೆರಿಕ ತುರ್ತು ಸಭೆ

    ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡನಾಡಿದ 8ನೇ ತರಗತಿ ವಿದ್ಯಾರ್ಥಿ ಪಂಕಜ್ ಯಾದವ್, ಮೊದಲು ಬಲಗೈ ಬಳಸಿ ಬರೆಯುತ್ತಿದ್ದೆ, ನಂತರ ಎಡಗೈಯಲ್ಲಿ ಬರೆಯಲು ಕಲಿತೆ. ಮೂರನೇ ತರಗತಿಯಲ್ಲಿ ಎರಡೂ ಕೈಗಳನ್ನು ಬಳಸಿ ಬರೆಯುವುದು ಗೊತ್ತಾಯಿತು ಎಂದು ತಿಳಿಸಿದರೆ, ಮತ್ತೋರ್ವ ವಿದ್ಯಾರ್ಥಿ ಆದರ್ಶ್ ಕುಮಾರ್ ನಾನು ಪ್ರಾಥಮಿಕ ತರಗತಿಯಲ್ಲಿದ್ದಾಗ ಬಲಗೈನಲ್ಲಿ ಬರೆಯುತ್ತಿದ್ದೆ. ನಂತರ ಎಡಗೈನಲ್ಲಿ ಬರೆಯಲು ಪ್ರಾರಂಭಿಸಿದೆ. ನಮಗೆ ಐದು ಭಾಷೆಗಳು ಕೂಡ ಗೊತ್ತು ಎಂದಿದ್ದಾರೆ.

    ವಿದ್ಯಾರ್ಥಿಗಳ ಈ ಕೌಶಲ್ಯದ ಹಿಂದೆ ಮಾಜಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ (Rajendra Prasad) ಅವರೇ ಸ್ಫೂರ್ತಿಯಾಗಿದ್ದಾರೆ. ರಾಜೇಂದ್ರ ಪ್ರಸಾದ್ ದ್ವಂದ್ವಾರ್ಥಿ, ಎರಡೂ ಕೈ ಬಳಸಿ ಬರೆಯಬಲ್ಲರು. ನಾವು ಅದನ್ನು ಸ್ಫೂರ್ತಿಯಾಗಿ ತೆಗೆದುಕೊಂಡಿದ್ದೇವೆ ಮತ್ತು ನಮ್ಮ ಮಕ್ಕಳಿಗೆ ಅದೇ ರೀತಿಯ ಕೌಶಲ್ಯವನ್ನು ಕಲಿಯಲು ಸಹಾಯ ಮಾಡಿದೆವು ಎಂದು ಶಾಲೆಯ ಪ್ರಾಂಶುಪಾಲ ವಿರಂಗದ್ ಶರ್ಮಾ ತಿಳಿಸಿದ್ದಾರೆ.

    1999ರಲ್ಲಿ ವೀಣಾ ವಾದಿನಿ ಪಬ್ಲಿಕ್ ಸ್ಕೂಲ್ ಸ್ಥಾಪಿಸಲಾಯಿತು. ಇಲ್ಲಿಯವರೆಗೆ ಸುಮಾರು 480 ವಿದ್ಯಾರ್ಥಿಗಳು ಇಲ್ಲಿಂದ ಪದವಿ ಪಡೆದಿದ್ದಾರೆ ಮತ್ತು ಅವರೆಲ್ಲರೂ ಎರಡೂ ಕೈಗಳನ್ನು ಬಳಸಿ ಬರೆಯಬಲ್ಲರು. ಈ ಶಾಲೆಯಲ್ಲಿ ನಿಯಮಿತ ತರಗತಿಗಳ ಜೊತೆಗೆ, ವಿದ್ಯಾರ್ಥಿಗಳಿಗೆ ಒಂದು ಗಂಟೆ ಯೋಗ ಮತ್ತು ಧ್ಯಾನವನ್ನು ಸಹ ಕಲಿಸಲಾಗುತ್ತದೆ. ಈ ಶಾಲೆಯ ವಿದ್ಯಾರ್ಥಿಗಳು ಒಂದು ನಿಮಿಷದಲ್ಲಿ 250 ಪದಗಳ ಪಠ್ಯವನ್ನು ಭಾಷಾಂತರಿಸು ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ಬಡ ಪ್ರತಿಭಾವಂತನ ಬೆನ್ನಿಗೆ ನಿಂತ ಶಾಸಕ ಪರಣ್ಣ ಮುನವಳ್ಳಿ

    ಈ ವಿಚಾರವಾಗಿ ಸ್ಥಳೀಯ ಮನಃಶಾಸ್ತ್ರಜ್ಞ ಆಶಿಶ್ ಪಾಂಡೆ ಅವರು ಮಾತನಾಡಿ, ನಮ್ಮ ಮೆದುಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಮೆದುಳಿನ ಎರಡೂ ಭಾಗಗಳನ್ನು ಏಕಕಾಲದಲ್ಲಿ ಬಳಸುವಂತೆ ಮತ್ತು ಎರಡೂ ಕೈಗಳನ್ನು ಬಳಸಿ ಬರೆಯಲು ಸಾಧ್ಯವಾಗುವ ರೀತಿಯಲ್ಲಿ ತರಬೇತಿ ನೀಡಿದ್ದಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾನು ಲಕ್ಕಿ ಎಂದು ನನಗೆ ಗೊತ್ತಿದೆ: ರಚಿತಾ ರಾಮ್

    ನಾನು ಲಕ್ಕಿ ಎಂದು ನನಗೆ ಗೊತ್ತಿದೆ: ರಚಿತಾ ರಾಮ್

    ಬೆಂಗಳೂರು: ನಟಿ ರಚಿತಾ ರಾಮ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದ ಹೆಚ್ಚಾಗಿ ಸ್ಟಾರ್ ನಟರ ಜೊತೆಯೇ ಅಭಿಮಾನಿಸುವ ಮೂಲಕ ಲಕ್ಕಿ ನಟಿ ಎನ್ನಿಸಿಕೊಂಡಿದ್ದರು. ಇದೀಗ ಸ್ವತಃ ಅವರೇ ನಾನು ಲಕ್ಕಿ ಎಂದು ನನಗೆ ಗೊತ್ತಿದೆ ಎಂದು ಹೇಳಿಕೊಂಡಿದ್ದಾರೆ.

    ರಚಿತಾ ಇನ್‌ಸ್ಟಾಗ್ರಾಂ “ನಾನು ಲಕ್ಕಿ ಎಂದು ನನಗೆ ಗೊತ್ತಿದೆ” ಎಂದು ಬರೆದುಕೊಂಡಿದ್ದಾರೆ. ರಚಿತಾ ತೆಲುಗಿನ ಸೂಪರ್ ಸ್ಟಾರ್ ಎನ್ನಿಸಿಕೊಂಡಿರುವ ಹಿರಿಯ ನಟ ರಾಜೇಂದ್ರ ಪ್ರಸಾದ್‍ರನ್ನು ಭೇಟಿ ಮಾಡಿದ್ದಾರೆ. ಅವರೊಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ರಚಿತಾ “ನಾನು ಲಕ್ಕಿ ಎಂದು ನನಗೆ ಗೊತ್ತಿದೆ” ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ರಾಜೇಂದ್ರ ಪ್ರಸಾದ್ ಅವರನ್ನು ಭೇಟಿಯಾಗಿರುವುದು ನನ್ನ ಅದೃಷ್ಟ ಎಂದು ಹೇಳಿಕೊಂಡಿದ್ದಾರೆ.

    https://www.instagram.com/p/B6fiIheAdJI/

    ರಾಜೇಂದ್ರ ಪ್ರಸಾದ್ ಇದುವರೆಗೆ 240ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಟಾಲಿವುಡ್‍ನ ಜನಪ್ರಿಯ ನಟ ಎನ್ನಿಸಿಕೊಂಡಿದ್ದಾರೆ. ರಚಿತಾ ಇದೇ ಮೊದಲ ಬಾರಿಗೆ ತೆಲುಗು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಸಿನಿಮಾಗೆ ‘ಸೂಪರ್ ಮಚ್ಚಿ’ ಟೈಟಲ್ ಇಡಲಾಗಿದೆ.

    ಚಿರಂಜೀವಿ ಅಳಿಯ ಕಲ್ಯಾಣ್ ದೇವ್‍ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ತಂದೆ ಮಗಳ ನಡುವಿನ ಭಾವನಾತ್ಮಕ ಕಥೆಯಾಗಿದೆ. ಈ ಸಿನಿಮಾ ಕನ್ನಡದಲ್ಲೂ ಡಬ್ ಆಗಿ ಬರಲಿದ್ದು, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿದಿದೆ.

    https://www.instagram.com/p/B5-TWyZgqEG/

  • ಈ ಶಾಲೆಯ ಎಲ್ಲಾ ಮಕ್ಕಳು ಒಮ್ಮೆಲೆ ಎರಡೂ ಕೈಯ್ಯಲ್ಲಿ ಸರಾಗವಾಗಿ ಬರೆಯುತ್ತಾರೆ!

    ಈ ಶಾಲೆಯ ಎಲ್ಲಾ ಮಕ್ಕಳು ಒಮ್ಮೆಲೆ ಎರಡೂ ಕೈಯ್ಯಲ್ಲಿ ಸರಾಗವಾಗಿ ಬರೆಯುತ್ತಾರೆ!

    ಭೋಪಾಲ್: ಬಹುತೇಕ ಮಂದಿ ಬರೆಯಲು ಬಲಗೈ ಬಳಸುತ್ತಾರೆ. ಅಲ್ಲದೆ 10% ಜನಸಂಖ್ಯೆ ಎಡಗೈಯ್ಯಲ್ಲಿ ಬರೆಯುವವರಾಗದ್ದಾರೆ. ಆದ್ರೆ ಎರಡೂ ಕೈಯ್ಯಲ್ಲಿ ಬರೆಯಬಲ್ಲವರು 1% ಜನ ಮಾತ್ರ. ಹೀಗಿರುವಾಗ ಮಧ್ಯಪ್ರದೇಶದ ಗ್ರಾಮವೊಂದರ ಈ ಶಾಲೆಯ ಎಲ್ಲಾ ಮಕ್ಕಳು ಎರಡೂ ಕೈಯ್ಯಲ್ಲಿ ಸರಾಗವಾಗಿ ಬರೆಯುತ್ತಾರೆ.

    ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಗ್ರಾಮವೊಂದರಲ್ಲಿರುವ ವೀಣಾ ವಂದಿನಿ ಶಾಲೆಯ ಎಲ್ಲಾ 300 ಮಕ್ಕಳು ಎಡಗೈ ಹಾಗೂ ಬಲಗೈ ಎರಡರಲ್ಲೂ ಬರೆಯುತ್ತಾರೆ. ಅದರಲ್ಲೂ ಕೆಲವು ಮಕ್ಕಳು ವಿವಿಧ ಭಾಷೆಗಳಲ್ಲಿ ಒಂದೇ ಸಲಕ್ಕೆ ಎರಡು ಕೈಯ್ಯಲ್ಲಿ ಸರಾಗವಾಗಿ ಬರೆಯುತ್ತಾರೆ.

    ಈ ಶಾಲೆಯಲ್ಲಿ 45 ನಿಮಿಷದ ತರಗತಿಯಲ್ಲಿ 15 ನಿಮಿಷವನ್ನ ಬರವಣಿಗೆ ಅಭ್ಯಾಸ ಮಾಡುವುದಕ್ಕಾಗಿಯೇ ಮೀಸಲಿಡಲಾಗಿದೆ. ಶಾಲೆಯ ಎಲ್ಲಾ ಮಕ್ಕಳು ಎರಡೂ ಕೈಯ್ಯಲ್ಲಿ ಬರೆಯುವ ಕುಶಲತೆಯನ್ನ ಕರಗತ ಮಾಡಿಕೊಳ್ಳಬೇಕು ಎನ್ನುವುದು ಇದರ ಉದ್ದೇಶವಾಗಿದೆ.

    ಮಾಜಿ ಯೋಧರು ಹಾಗೂ ಶಾಲೆಯ ಸಂಸ್ಥಾಪಕರಾಗಿರುವ ವಿಪಿ ಶರ್ಮಾ ಈ ಬಗ್ಗೆ ಮಾತನಾಡಿ, ಎರಡೂ ಕೈಯ್ಯಲ್ಲಿ ಬರೆಯುತ್ತಿದ್ದ ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರೇ ಇದಕ್ಕೆ ಸ್ಫೂರ್ತಿ ಎಂದಿದ್ದಾರೆ. ಇದರಿಂದ ಸ್ಫೂರ್ತಿ ಪಡೆದು ನಾನೂ ಪ್ರಯತ್ನ ಮಾಡಿದೆ. ನಂತರ ನನ್ನ ಸ್ವಗ್ರಾಮದಲ್ಲಿ ಶಾಲೆ ಆರಂಭಿಸಿದಾಗ ವಿದ್ಯಾರ್ಥಿಗಳಿಗೂ ಎರಡು ಕೈಯ್ಯಲ್ಲಿ ಬರೆಯಲು ತರಬೇತಿ ನೀಡುವ ಪ್ರಯತ್ನ ಮಾಡಿದೆ ಎಂದು ಅವರು ಹೇಳಿದ್ದಾರೆ.

    ಒಂದನೇ ತರಗತಿ ಮಕ್ಕಳಿಗೆ ಇದರ ತರಬೇತಿ ಶುರು ಮಾಡಿದೆವು. ಅವರು 3ನೇ ತರಗತಿಗೆ ಬರುವಷ್ಟರಲ್ಲಿ ಎರಡೂ ಕೈಯ್ಯಲ್ಲಿ ಬರೆಯುವ ಸಾಮಥ್ರ್ಯವನ್ನ ಹೊಂದಿರುತ್ತಿದ್ದರು. 7 ಮತ್ತು 8ನೇ ತರಗತಿಯ ಮಕ್ಕಳು ವೇಗವಾಗಿ ಮತ್ತು ಸ್ಪಷ್ಟವಾಗಿ ಎರಡೂ ಕೈಯ್ಯಲ್ಲಿ ಬರೆಯಬಲ್ಲರು. ನಂತರ ಒಂದೇ ಸಲಕ್ಕೆ ಎರಡು ಪ್ರತ್ಯೇಕ ಪಠ್ಯವನ್ನ ಬರೆಯಬಲ್ಲರು ಎಂದು ಅವರು ಹೇಳಿದ್ದಾರೆ.

    ಈ ಶಾಲೆಯ ಮಕ್ಕಳು ಉರ್ದು ಸೇರಿದಂತೆ ವಿವಿಧ ಭಾಷೆಗಳನ್ನ ಬಲ್ಲವರಾಗಿದ್ದಾರೆ. ಈ ಶಾಲೆಯನ್ನ 1999ರಲ್ಲಿ ಆರಂಭಿಸಲಾಗಿದೆ. ಎರಡೂ ಕೈಯ್ಯಲ್ಲಿ ಬರೆಯುವ ಕುಶಲತೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಎರಡು ವರ್ಷಗಳ ಹಿಂದೆ ದಕ್ಷಿಣ ಕೊರಿಯಾದ ಸಂಶೋಧಕರೂ ಕೂಡ ಶಾಲೆಗೆ ಭೇಟಿ ನೀಡಿದ್ರು ಎಂದು ಶರ್ಮಾ ತಿಳಿಸಿದ್ದಾರೆ.