ಬೆಂಗಳೂರು: ಕೆಎನ್ ರಾಜಣ್ಣ (KN Rajanna) ಏನು ತಪ್ಪು ಹೇಳಿದ್ದಾರೆ ಎಂದು ಪುತ್ರ, ಪರಿಷತ್ ಸದಸ್ಯ ರಾಜೇಂದ್ರ (Rajendra) ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ (Lok Sabha Election) ವೇಳೆ ನಮ್ಮದೇ ಸರ್ಕಾರ ಇತ್ತು, ಲೋಪ ಸರಿಪಡಿಸಿಕೊಳ್ಳಬಹುದಿತ್ತು ಅಂದಿದ್ದಾರೆ. ಅದರಲ್ಲಿ ಏನು ತಪ್ಪಿದೆ ಎಂದು ಕೇಳಿದ್ದಾರೆ.
ಪಕ್ಷ ರಾಜೀನಾಮೆ ಕೊಡು ಎಂದರೆ ರಾಜಣ್ಣ ರಾಜೀನಾಮೆ ಕೊಡುತ್ತಾರೆ. ನಾನು ಸಿಎಂ ಜೊತೆ ಮಾತನಾಡುತ್ತೇನೆ. ರಾಜಣ್ಣ ಎನ್ ಚಿಕ್ಕವರಲ್ಲ. ಯಾರೋ ಪತ್ರ ಬರೆದಿದ್ದಕ್ಕೆ ಅವರು ರಾಜೀನಾಮೆ ಯಾಕೆ ಕೊಡಬೇಕು ಎಂದು ಪ್ರಶ್ನಿಸಿದ್ದಾರೆ.
ನಮಗೂ ಹೆಚ್ಚಿನ ಮಾಹಿತಿ ಇಲ್ಲ. ರಾಜೀನಾಮೆ ವಿಚಾರ ಮಾಧ್ಯಮದ ಮೂಲಕವೇ ತಿಳಿದಿದೆ. ತಂದೆ ಮತ್ತು ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
– ಕುಣಿಗಲ್ ರೈತರಿಗೆ ಅನ್ಯಾಯ ಮಾಡಬೇಡಿ ಎಂದ ಶಾಸಕ
– ವಿಪಕ್ಷದವರಿಗೆ ನಾವು ಆಹಾರ ಆಗಬಾರದು ಎಂದು ಕಿವಿಮಾತು
ಬೆಂಗಳೂರು: ಕುಣಿಗಲ್ ನೀರಿನ ಸಮಸ್ಯೆ ಪರಿಹರಿಸಲು ಡಿಕೆ ಶಿವಕುಮಾರ್ (DK Shivakumar) ಅವರು ಕ್ಯಾಬಿನೆಟ್‌ನಲ್ಲಿ ನಮಗೆ ಸಹಾಯ ಮಾಡೋದಾಗಿ ಹೇಳಿದ್ದಾರೆ. ಇದಕ್ಕೆ ರಾಜೇಂದ್ರ ರಾಜಣ್ಣ ಅವರು ಯಾಕೆ ಮಾತಾಡ್ತಾರೆ. ನಾನು ಫೋನ್ ಮಾಡಿ ಬೆದರಿಕೆ ಹಾಕ್ತೀನಿ ಅಂತಾರೆ, ಒಬ್ಬ ಮಂತ್ರಿ ಮಗನಿಗೆ ಬೆದರಿಕೆ ಹಾಕೋಕೆ ಆಗುತ್ತಾ? ನಾನು ಸಾಮಾನ್ಯ ರೈತನ ಮಗ ಅಂತ ಕುಣಿಗಲ್ ಶಾಸಕ ರಂಗನಾಥ್ (HD Ranganath) ಅವರು ಸಚಿವ ರಾಜಣ್ಣ ಪುತ್ರನ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಫೋನ್‌ನಲ್ಲಿ ಮಾತಾಡಿದ್ರೆ ಅದು ಬೆದರಿಕೆ ಹೇಗೆ ಆಗಬೇಕು? ನಮ್ಮ ಸರ್ಕಾರ ಬಂದಿದೆ. ಜನರ ಪರ ನಾವು ಕೆಲಸ ಮಾಡೋಣ. ಶಿರಸಾವಹಿಸಿ ಕೆಲಸ ಮಾಡೋಣ. ಸಹಕಾರ ಸಂಘದಲ್ಲಿ ಬಿಜೆಪಿ-ಜೆಡಿಎಸ್ ಸದಸ್ಯರೇ ಅನೇಕ ವರ್ಷಗಳಿಂದ ಇದ್ದಾರೆ. ನಾನು ಕಾಂಗ್ರೆಸ್ ಬೆಂಬಲಿಗರನ್ನ ತರೋಕೆ ಪ್ರಯತ್ನ ಮಾಡ್ತಿದ್ದೇನೆ. ಹೀಗಾಗಿ ಸಹಕಾರಿ ಸಂಘದಿಂದ ಸಾಲ ಕೊಡಿ ಅಂತ ಸದನದಲ್ಲಿ ಕೇಳಿದ್ದೇನೆ. ರಾಜಣ್ಣ ಜೊತೆ ನನಗೆ ವೈಮನಸ್ಯ ಇಲ್ಲ. ಅವರ ಜೊತೆ ಸಲುಗೆಯಿಂದ ಬಂದಿದ್ದೇನೆ. ಯಾಕೆ ನನ್ನ ಮೇಲೆ ಭಿನ್ನಾಭಿಪ್ರಾಯ ಮಾಡ್ತಿದ್ದಾರೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಕುಣಿಗಲ್‌ಗೆ ಕೊರಟಗೆರೆಯಿಂದ ನೀರು ತೆಗೆದುಕೊಂಡು ಹೋಗ್ತಿದ್ದಾರೆ, ಮಧುಗಿರಿಗೆ ಕೊಡ್ತಿಲ್ಲ ಅಂತ ರಾಜೇಂದ್ರ ರಾಜಣ್ಣ ಅರೋಪ ಮಾಡಿದ್ದಾರೆ. ನನ್ನನ್ನ ಜನ ಎರಡು ಬಾರಿ ಗೆಲ್ಲಿಸಿದ್ದಾರೆ ಅವರಿಗೆ ನೀರು ಕೊಡಬೇಕು. ಕುಣಿಗಲ್‌ಗೆ 90% ನೀರು ಹರಿದಿಲ್ಲ. ಕುಣಿಗಲ್‌ಗೆ ಹಾಸನದಿಂದ ನೀರು ಬೇಕು, ನೀರು ತರಲು ನಾನು ಹೋರಾಟ ಮಾಡ್ತೀನಿ ಅಂದಿದ್ದಾರೆ. ಇದನ್ನೂ ಓದಿ: ರಾಜಣ್ಣರನ್ನ `ಹನಿ’ ಬಲೆಗೆ ಬೀಳಿಸಲು ಲೇಡಿ ಸೇರಿ ಮೂರ್ನಾಲ್ಕು ಜನ ಪ್ರಯತ್ನಿಸಿದ್ದಾರೆ – ಪುತ್ರ ರಾಜೇಂದ್ರ
ಅಲ್ಲದೇ ರಾಜಣ್ಣ ಬಗ್ಗೆ ನಾನೇನು ಹೇಳೊಲ್ಲ. ರಾಜಣ್ಣ ಹಿರಿಯರು. ಅವರ ಬಗ್ಗೆ ನಾನು ಹೇಳೊಲ್ಲ. ನನ್ನ ತಾಲೂಕಿನ ರೈತರಿಗೆ ಸಾಲ ಕೊಡಿಸೋದು ತಪ್ಪಾ? ಯಾಕೆ ರಾಜಣ್ಣ ಹೀಗೆ ಹೇಳಿಕೆ ಕೊಡ್ತಾರೆ ಗೊತ್ತಿಲ್ಲ. ಯಾರು ಎಷ್ಟೇ ಪ್ರವೋಕ್ ಮಾಡಿದ್ರು ನಾನು ಪ್ರವೋಕ್ ಆಗೊಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಯಾಕೆ ಗೊಂದಲದ ಹೇಳಿಕೆ ಕೊಡ್ತೀರಾ? ಸಿಎಂ, ಡಿಸಿಎಂ ಅವರು ಉತ್ತಮ ಕೆಲಸ ಮಾಡ್ತಾರೆ ಅಂತ ಜನರು ನಿರೀಕ್ಷೆ ಇಟ್ಟಿದ್ದಾರೆ. ಜನರಿಗೆ ನಮ್ಮ ಸರ್ಕಾರದ ಬಗ್ಗೆ ನಿರೀಕ್ಷೆ ಇದೆ, ಅದನ್ನ ಮಾಡಬೇಕು. ಬೀದಿಯಲ್ಲಿ ಮಾತಾಡೋದಕ್ಕಿಂತ ಪಕ್ಷದ ವೇದಿಕೆಯಲ್ಲಿ ಮಾತಾಡಬೇಕು. ಮದುಗಿರಿಯವರಿಗೆ ನೀರು ತರೋಕೆ ನಾವು ಪ್ರಯತ್ನ ಮಾಡ್ತೀನಿ. ನಾನೇ ನಿಂತು ಮಧುಗಿರಿ ರೈತರಿಗೆ ನೀರು ಕೊಡ್ತೀನಿ. ಕುಣಿಗಲ್ ರೈತರಿಗೆ ಅನ್ಯಾಯ ಮಾಡಬೇಡಿ ಎಂದು ಹೇಳಿದ್ದಾರೆ.
ಮುಂದುವರಿದು.. ವಿರೋಧ ಪಕ್ಷದವರಿಗೆ ನಾವು ಆಹಾರ ಆಗಬಾರದು. ನಮ್ಮಲ್ಲಿ ಶಿಸ್ತು ಬರಬೇಕು. ಇಲ್ಲದೇ ಹೋದ್ರೆ ಜನ ಆಡಿಕೊಳ್ತಾರೆ. ಜನರ ಪರ ನಾವು ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಬೆಂಗಳೂರು: ಹೇಮಾವತಿ ಕೆನಾಲ್ ವಿಚಾರದಲ್ಲಿ ಡಿಕೆಶಿ (DK Shivakumar) ಸಂಬಂಧಿ ಕುಣಿಗಲ್ ಶಾಸಕ ರಂಗನಾಥ್ (Kunigal Ranganath) ನಂಗೆ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ ಎಂದು ಎಂಎಲ್‌ಸಿ ರಾಜೇಂದ್ರ ರಾಜಣ್ಣ (Rajendra Rajanna) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮಧುಗಿರಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ನನಗೆ ಫೋನ್ ಮಾಡಿ ಧಮ್ಕಿ ಹಾಕಿದ್ದಾರೆ. 2 ತಿಂಗಳಿಂದ ಕುಣಿಗಲ್ ಕ್ಷೇತ್ರದವರು ಲಿಂಕ್ ಕೆನಾಲ್ ವಿಚಾರವಾಗಿ ಫೋನ್ ಮಾಡುತ್ತಿದ್ದರು. ಲಿಂಕ್ ಕೆನಾಲ್ ಕಾಮಗಾರಿ ನಾನು ಹಾಗೂ ಸಚಿವರು ನಿಲ್ಲಿಸುತ್ತೇವೆ. ನೀವು ತಡೆಯುತ್ತೀರಾ? ನಮ್ಮ ತಾಲೂಕಿಗೆ ನೀರು ಬರುವುದನ್ನು ನೀವು ಅಪ್ಪ, ಮಗ ಯಾಕೆ ಅಡಚಣೆ ಮಾಡ್ತೀರಾ? ಎಂದು ಧಮ್ಕಿ ಹಾಕಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ತೊಗರಿ ಹೊಟ್ಟಿನಲ್ಲಿ ಬಚ್ಚಿಟ್ಟಿದ್ದ 7 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ಪತ್ತೆ ಹಚ್ಚಿದ ಶ್ವಾನ
ಡಿಕೆಶಿ ಕನಸಿನ ಕೂಸು ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ (Hemavathi Express Canal) ಪರೋಕ್ಷವಾಗಿ ವಿರೋಧಿಸಿದ ಅವರು, ಲಿಂಕ್ ಕೆನಾಲ್‌ನ್ನು ನಾವು ತಡೆದಿಲ್ಲ. ಟೆಂಡರ್ ಆಗಿದೆ ಕಾಮಗಾರಿ ನಡೆಯುತ್ತಿದೆ. ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್‌ನಿಂದ ಮಧುಗಿರಿ ಹಾಗೂ ಕೊರಟಗೆರೆ ತಾಲೂಕಿಗೆ ತೊಂದರೆ ಆಗುತ್ತದೆ. ನಮ್ಮ ಕುಡಿಯುವ ನೀರನ್ನು ನೀವು ದಾರಿ ಮಧ್ಯದಲ್ಲೇ ತೆಗೆದುಕೊಂಡರೆ ನಮ್ಮ ಪರಿಸ್ಥಿತಿ ಏನಾಗಬೇಕು? ಎಂದು ಕಿಡಿಕಾರಿದರು.
ಇನ್ನೂ ಸಹಕಾರಿ ಸಚಿವರಿಂದ ಸಹಕಾರ ಸಿಗುತ್ತಿಲ್ಲ ಎಂದು ಸದನದಲ್ಲಿ ಆರೋಪಿಸಿದ್ದ ಕುಣಿಗಲ್ ಶಾಸಕ ರಂಗನಾಥ್‌ಗೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಸಂಬಂಧಿ ಪ್ರಭಾವಿ ಸಚಿವರಿದ್ದಾರೆ ಎಂದು ಹೇಳಿ ನೀವು ನೀರು ತೆಗೆದುಕೊಂಡು ಹೋಗಬಹುದಾ? ಎಕ್ಸ್‌ಪ್ರೆಸ್ ಕೆನಾಲ್ ವಿಚಾರದಲ್ಲಿ ಜಿಲ್ಲೆಗೆ ಆಗುವ ಅನ್ಯಾಯವನ್ನು ರಾಜಣ್ಣ ಅವರು ಕ್ಯಾಬಿನೆಟ್‌ನಲ್ಲಿ ಹೇಳಿದ್ದಾರೆ. ಅದನ್ನೇ ನೆಪ ಮಾಡಿಕೊಂಡು ನಮ್ಮ ಮೇಲೆ ಮಾತನಾಡೋದು ಸರಿನಾ? ಎಂದು ಟಾಂಗ್ ಕೊಟ್ಟರು.
ಡಿಕೆಶಿ ಪ್ರತಿಕ್ರಿಯೆ ಏನು?
ಹೇಮಾವತಿ ಕೆನಾಲ್ (Hemavathi Canal) ವಿಚಾರದಲ್ಲಿ ರಾಜೇಂದ್ರ ಏನು ಬೇಕಾದರು ಮಾತನಾಡಲಿ, ಕಳೆದ 20-30 ವರ್ಷದಿಂದ ವೈ.ಕೆ ರಾಮಯ್ಯ ಕಾಲದಿಂದ ಎಲ್ಲಾ ನಡೆಯುತ್ತಿದೆ. ಕುಮಾರಸ್ವಾಮಿ (HD Kumaraswamy) ಸರ್ಕಾರದಲ್ಲೇ ಪಾಸ್ ಮಾಡಿದ್ದೆವು. ರೈತರಿಗೆ ನೀರು ಸಿಗಬೇಕಾದ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದಿದ್ದಾರೆ.ಇದನ್ನೂ ಓದಿ: ‘ನಿನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಪಾಲಿರಲಿ’ ಎನ್ನುತ್ತಿದ್ದಾರೆ ಸಪ್ತಮಿ ಗೌಡ
ನವದೆಹಲಿ: ಆರ್‌ಎಸ್‌ಎಸ್ (RSS) ಸಂಘಟನೆ ಮೊದಲಿನಂತಿಲ್ಲ, ಈಗಿನ ನಾಯಕರು ಅದರ ಹೆಸರಿನಲ್ಲಿ ಕಾರಿನಲ್ಲಿ ಓಡಾಡಿಕೊಂಡು ಶೋಕಿ ಮಾಡುತ್ತಿದ್ದಾರೆ, ಈಗಿರುವ ಆರ್‌ಎಸ್‌ಎಸ್ ಕಳ್ಳರ ಆರ್‌ಎಸ್‌ಎಸ್ ಆಗಿದೆ ಎಂದು ಬಿಜೆಪಿ ನಾಯಕರನ್ನು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಟೀಕಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಸಿ.ಟಿ ರವಿ (CT Ravi), ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಸಿದ್ದರಾಮಉಲ್ಲಾ ಖಾನ್ ಎಂದಿದ್ದಾರೆ, ಸಿ.ಟಿ ರವಿ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಬೇಕು. ಸಿಟಿ ರವಿ ಅವರು, ನಾಲ್ಕು ಬಾರಿ ಶಾಸಕರು ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ ಗೌರವಯುತವಾಗಿ ಮಾತನಾಡಬೇಕು ಎಂದರು.
ಸಿ.ಟಿ ರವಿ ಹಿಟ್ ಅಂಡ್ ರನ್ ಕೇಸ್ ಗಿರಾಕಿ ಅಂತಾರೆ, ಲೂಟಿ ರವಿ ಅಂತಾ ಅವರ ಕ್ಷೇತ್ರದ ಜನರು ಹೇಳುತ್ತಾರೆ. ಬಿಜೆಪಿ ನಾಯಕರು ಹತಾಶರಾಗಿ ನಮ್ಮ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಹಿಂದೂಳಿದ ವರ್ಗಗಳ ನಾಯಕ, 5 ವರ್ಷ ಉತ್ತಮ ಆಡಳಿತ ನೀಡಿದ ನಾಯಕ, ಮುಸಲ್ಮಾನರ ಬೇರೆ ದೇಶದಿಂದ ಬಂದಿದ್ದಾರಾ ಎಂದು ಪ್ರಶ್ನಿಸಿದ ಅವರು, ನಮ್ಮ ರಾಜ್ಯ, ದೇಶದ ಪ್ರಜೆಗಳೇ ಅಲ್ವ? ಕೋಮು ಸೌಹಾರ್ದ ಹಾಳುಗೇಡವಲು ಬಿಜೆಪಿ ನಾಯಕರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದನ್ನೂ ಓದಿ:ಗೆಳತಿಗೆ ಹತ್ತಿರವಾಗಿದ್ದ ಹುಡುಗನ ವಿರುದ್ಧ ಸೇಡು – ಮೋದಿಗೆ ಬೆದರಿಕೆ ಹಾಕಿದ್ದ ಟೆಕ್ಕಿ ಅರೆಸ್ಟ್
ಬಿಜೆಪಿ ನಡೆ ನುಡಿಯಲ್ಲಿ ವ್ಯತಾಸಗಳಿದೆ, ಹಿಂದಿನ ಸೈದ್ಧಾಂತಿಕ ಆರ್‌ಎಸ್‌ಎಸ್ ಈಗಿಲ್ಲ, ಆರ್‌ಎಸ್‌ಎಸ್ ಹೆಸರಿನಲ್ಲಿ ಐಷಾರಾಮಿ ಕಾರ್‌ನಲ್ಲಿ ಓಡಾಡ್ಕೊಂಡು ಶೋಕಿ ಮಾಡುತ್ತಿದ್ದಾರೆ. ಈಗಿರುವ ಆರ್‌ಎಸ್‌ಎಸ್ ಕಳ್ಳರ ಆರ್‌ಎಸ್‌ಎಸ್ ಎಂದು ಟೀಕಿಸಿದರು. ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಬೇಕಾಬಿಟ್ಟಿ ಮಾತನಾಡಿದ್ರೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಎಲ್ಲರಿಗೂ ರೌಡಿ ಶೀಟರ್ ಅಂತ ನಾಮಕರಣ ಮಾಡೋದು ತಪ್ಪು – ರೌಡಿಗಳ ಬಿಜೆಪಿ ಸೇರ್ಪಡೆ ಸಮರ್ಥಿಸಿಕೊಂಡ ಅಶ್ವಥ್ ನಾರಾಯಣ
Live Tv
[brid partner=56869869 player=32851 video=960834 autoplay=true]