Tag: ರಾಜೂ ಗೌಡ

  • ಮನುಷ್ಯ ಅಂದ್ಮೇಲೆ ಕೆಲ ವೀಕ್ನೆಸ್‍ಗಳು ಇರ್ತವೆ, ಅದನ್ನೇ ಬಂಡವಾಳ ಮಾಡ್ಕೊಳ್ಳೋದು ಸರಿಯಲ್ಲ: ರಾಜೂ ಗೌಡ

    ಮನುಷ್ಯ ಅಂದ್ಮೇಲೆ ಕೆಲ ವೀಕ್ನೆಸ್‍ಗಳು ಇರ್ತವೆ, ಅದನ್ನೇ ಬಂಡವಾಳ ಮಾಡ್ಕೊಳ್ಳೋದು ಸರಿಯಲ್ಲ: ರಾಜೂ ಗೌಡ

    ಬೆಂಗಳೂರು: ಮನುಷ್ಯ ಅಂದ ಮೇಲೆ ಕೆಲವೊಂದು ವೀಕ್ ನೆಸ್ ಗಳು ಇರುತ್ತವೆ. ಆದರೆ ಅದನ್ನೇ ಬಂಡವಾಳ ಮಾಡಿಕೊಳ್ಳುವುದು ಸರಿಯಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರ ಶಾಸಕ ರಾಜೂ ಗೌಡ ಬ್ಯಾಟ್ ಬೀಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಾಗೂ ರಮೇಶಣ್ಣ ಸಂಬಂಧಿಕರು. 2000 ರಿಂದಲೂ ಉತ್ತಮ ಒಡನಾಟ ಇದೆ. ಇದೊಂದು ನೋವಿನ ಸಂಗತಿ. ಯುವತಿಗೆ ಕೆಲಸ ಕೊಡಿಸುವ ನೆಪದಲ್ಲಿ ಮೋಸ ಅಂತ ಮಾಧ್ಯಮಗಳಲ್ಲಿ ಬರುತ್ತಿದೆ. ವೀಡಿಯೋ ನೋಡಿದ್ರೆ ಮೋಸ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತಾ ಅಂತ ಪ್ರಶ್ನಿಸಿದರು.

    ವ್ಯವಸ್ಥಿತವಾಗಿ ಇದನ್ನ ಮಾಡಿದ್ದಾರೆ. ಹನಿಟ್ರ್ಯಾಪ್ ರೀತಿ ಇದನ್ನ ಮಾಡಿದ್ದಾರೆ. ಸಿಬಿಐನಿಂದ ತನಿಖೆ ಆಗಬೇಕು ಅಂತ ಆಗ್ರಹ ಮಾಡುತ್ತೇನೆ. ರಮೇಶಣ್ಣ ತಪ್ಪು ಮಾಡಿದ್ರೆ ಅವ್ರನ್ಮ ಗಲ್ಲಿಗೇರಿಸಲಿ. ರಾಜಕಿಯ ದೊಡ್ಡ ಹುನ್ನಾರ ನಡೆದಿದೆ ಅನ್ನೋ ಅನುಮಾನ ಕಾಡ್ತಿದೆ ಎಂದು ತಿಳಿಸಿದರು.

    ರಷ್ಯಾದಿಂದ ಅಪ್ ಲೋಡ್ ಆಗಿದೆ ಅನ್ನೋ ಮಾಹಿತಿ ಇದೆ. ರಾಜಕೀಯವಾಗಿ ಬೆಳೆಯುತ್ತಾರೆ ಅನ್ನೋದನ್ನ ಸಹಿಸೋಕೆ ಆಗದೆ ಇಂಥದನ್ನ ಮಾಡಿದ್ದಾರೆ. ರಾಜಕೀಯ ಷಡ್ಯಂತ್ರಕ್ಕೆ ರಮೇಶಣ್ಣನ ಕುಟುಂಬ ಕಣ್ಣೀರು ಹಾಕ್ತಿದೆ. ರಮೇಶ್ ಜಾರಕಿಹೊಳಿ ಅವ್ರನ್ನ ತುಂಬಾ ದಿನದಿಂದ ಬಲ್ಲವರೇ ಇಂಥದನ್ನ ಮಾಡಿದ್ದಾರೆ. ದಿನೇಶ್ ಕಲ್ಲಹಳ್ಳಿ ಕೇವಲ ದಾಳವನ್ನಾಗಿ ಬಳಕೆ ಮಾಡಿಕೊಂಡಿದ್ದಾರೆ. ನಾಲ್ಕೈದು ಸರ್ವರ್ ನಲ್ಲಿ ಇದು ಅಪ್ ಲೋಡ್ ಮಾಡಿದ್ದಾರೆ ಎಂದು ರಾಜೂ ಗೌಡ ಹೇಳಿದರು.

    ಒಂದೊಂದು ಸರ್ವರ್ ಬುಕ್ ಮಾಡ್ಬೇಕು ಅಂದ್ರೆ ಕೋಟಿ ಕೋಟಿ ಹಣ ಕೊಡಬೇಕು. ಹೀಗೆ ಹಣವನ್ನ ದಿನೇಶ್ ಕಲ್ಲಹಳ್ಳಿ ನೀಡಲು ಸಾಧ್ಯವಿಲ್ಲ. ಕೋಟಿ ಕೋಟಿ ಯಾರು ಕೊಟ್ಟಿದ್ದಾರೆ ಅನ್ನೋದು ತನಿಖೆ ಆಗಬೇಕು. ಆರೋಪ ಮುಕ್ತರಾಗಿ ಆಚೆ ಬರ್ತಾರೆ ಅನ್ನೋ ವಿಶ್ವಾಸವಿದೆ ಎಂದರು.

    ಪಕ್ಷಕ್ಕೆ ಮುಜುಗರ ಆಗಬಾರದು ಅಂತ ರಾಜೀನಾಮೆ ಕೊಟ್ಟಿದ್ದಾರೆ. ಯಾವುದೇ ಕಂಡೀಷನ್ ಇಲ್ಲದೆ ರಾಜೀನಾಮೆ ಕೊಟ್ಟಿದ್ದಾರೆ. ನಾನು ರಮೇಶ್ ಜಾರಕಿಹೊಳಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದೇನೆ. ರಮೇಶ್ ಅವರ ಮಗನಿಗೆ ಕೂಡ ಧೈರ್ಯ ತುಂಬಿದ್ದೀನಿ ಎಂದು ಹೇಳಿದರು.

  • ಪಬ್ಲಿಕ್ ಟಿವಿ ಚಾಲೆಂಜ್ ಸ್ವೀಕರಿಸಿದ ಸುರಪುರ ಬಿಜೆಪಿ ಶಾಸಕ

    ಪಬ್ಲಿಕ್ ಟಿವಿ ಚಾಲೆಂಜ್ ಸ್ವೀಕರಿಸಿದ ಸುರಪುರ ಬಿಜೆಪಿ ಶಾಸಕ

    – 1 ಸಾವಿರ ನಿರ್ಗತಿಕರಿಗೆ ಮೂರು ಹೊತ್ತು ಊಟ

    ಯಾದಗಿರಿ: ಉಡುಪಿ, ಮಹದೇವಪುರ ಶಾಸಕರ ಬಳಿಕ ಇದೀಗ ಯಾದಗಿರಿಯ ಸುರಪುರ ಬಿಜೆಪಿ ಶಾಸಕ ರಾಜೂಗೌಡ ಅವರು ಪಬ್ಲಿಕ್ ಟಿವಿ ಚಾಲೆಂಜ್ ಸ್ವೀಕರಿಸಿದ್ದಾರೆ.

    ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್ ರಂಗನಾಥ್ ಅವರು ಬಿಗ್ ಬುಲೆಟಿನ್ ನಲ್ಲಿ ನೀಡಿದ್ದ ಚಾಲೆಂಜ್ ಅನ್ನು ಶಾಸಕರು ಜವಾಬ್ದಾರಿಯುತವಾಗಿ ಸ್ವೀಕರಿಸಿ ಜನರ ಕಷ್ಟಕ್ಕೆ ಮರುಗಿದ್ದಾರೆ. ಈ ಮೂಲಕ ಭಾರತ್ ಬಂದ್ ಇರುವಷ್ಟು ದಿನ ತಮ್ಮ ವಿಧಾನಸಭಾ ಕ್ಷೇತ್ರದ 1000 ನಿರ್ಗತಿಕರಿಗೆ ದಿನದ 3 ಹೊತ್ತು ಉಚಿತ ಊಟ ನೀಡಲು ಶಾಸಕರು ಮುಂದಾಗಿದ್ದಾರೆ.

    ಸ್ವತಃ ತಾವೇ ಮುಂದೆ ನಿಂತು ಆಹಾರ ಸಿದ್ಧತೆ ಕಾರ್ಯ ನೋಡಿಕೊಳ್ಳುತ್ತಿರುವ ಶಾಸಕ ರಾಜೂಗೌಡ, ಆಹಾರ ಸಿದ್ಧಗೊಂಡ ಬಳಿಕ ಕಾರ್ಯಕರ್ತರ ಸಹಾಯದಿಂದ ಆಹಾರ ಹಂಚಿಕೆ ಕಾರ್ಯವನ್ನು ನಡೆಸುತ್ತಿದ್ದಾರೆ. ಮುಂಜಾಗ್ರತೆಯಾಗಿ ಅಧಿಕಾರಿಗಳ ನೇತೃತ್ವದಲ್ಲಿ ಆಹಾರ ತಯಾರಿಕೆಯಾಗುತ್ತಿದ್ದು, ಅಧಿಕಾರಿಗಳು ಸಮ್ಮತಿ ನೀಡಿದ ಬಳಿಕವೇ ಆಹಾರವನ್ನು ಪೂರೈಸಲಾಗುತ್ತಿದೆ. ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಟ- ಹೆಚ್.ಆರ್ ರಂಗನಾಥ್ ಚಾಲೆಂಜ್ ಸ್ವೀಕರಿಸಿದ ಶಾಸಕ ರಘುಪತಿ ಭಟ್

    ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಈ ಸಮಯದಲ್ಲಿ ನಿರ್ಗತಿಕರಿಗೆ ಮತ್ತು ಬಡ ಕೂಲಿ ಕಾರ್ಮಿಕರಿಗೆ ಒಂದು ಹೊತ್ತು ಊಟ ಸಹ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸ್ಥಿತಿವಂತರು ತಮ್ಮ ಕೈಲಾದ ಸಹಾಯವನ್ನು ಮಾಡುವಂತೆ ಮತ್ತು ಈ ಕೆಲಸವನ್ನು ಚಾಲೆಂಜ್ ಆಗಿ ಸ್ವೀಕರಿಸುವಂತೆ ಪಬ್ಲಿಕ್ ಟಿವಿ ರಾಜ್ಯದ ಜನತೆಯಲ್ಲಿ ಮನವಿ ಮಾಡಿತ್ತು. ಇದೀಗ ಈ ಚಾಲೆಂಜ್ ಅನ್ನು ಕೆಲವರು ಸ್ವೀಕರಿಸುತ್ತಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಹೆಲಿಕಾಪ್ಟರ್ ಗೌಡ, ಯುಕೆ ಟ್ವೆಂಟಿಸೆವನ್ ಎಂದು ಶಾಸಕರನ್ನು ಕರೆದ ಸ್ಪೀಕರ್

    ಹೆಲಿಕಾಪ್ಟರ್ ಗೌಡ, ಯುಕೆ ಟ್ವೆಂಟಿಸೆವನ್ ಎಂದು ಶಾಸಕರನ್ನು ಕರೆದ ಸ್ಪೀಕರ್

    ಬೆಳಗಾವಿ: ಬಿಜೆಪಿ ಶಾಸಕ ರಾಜುಗೌಡ ಹಾಗೂ ಮಾಜಿ ಸಚಿವ ಉಮೇಶ್ ಕತ್ತಿ ಅವರನ್ನು ವಿಶೇಷ ಹೆಸರಿನ ಮೂಲಕ ಕರೆದು ಅಧಿವೇಶನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ನಗೆ ಹರಿಸಿದ್ದಾರೆ.

    ಅಧಿವೇಶನದಲ್ಲಿ ಇಂದು ಬೆಳಗ್ಗೆ ಆರಂಭವಾಗಿದ್ದ ಪ್ರಶ್ನೋತ್ತರ ಕಲಾಪದ ವೇಳೆ ಒಬ್ಬೊಬ್ಬ ಶಾಸಕರ ಪ್ರಶ್ನೆಗಳನ್ನು ಆಲಿಸಿ ಸಂಬಂಧಪಟ್ಟ ಸಚಿವರಿಂದ ಸ್ಪೀಕರ್ ಉತ್ತರ ಕೊಡಿಸುತ್ತಿದ್ದರು. ಈ ವೇಳೆ ಬಿಜೆಪಿ ಶಾಸಕ ರಾಜೂ ಗೌಡ ಅವರನ್ನು ಹೆಲಿಕಾಪ್ಟರ್ ಗೌಡ ಎಂದು ಸ್ಪೀಕರ್ ಕರೆದರು. ನಗುತ್ತಲೇ ರಾಜೂ ಗೌಡ ಎದ್ದು ನಿಂತು ಮಾತನಾಡುತ್ತಿದ್ದಾಗ ಹೆಲಿಕಾಪ್ಟರ್ ಬಂತಾ ಎಂದು ಮತ್ತೊಮ್ಮೆ ಕೇಳಿದ ಸಭೆಯಲ್ಲಿ ಎಲ್ಲರ ಮುಖದಲ್ಲಿಯೂ ನಗೆ ಬೀರಿದರು.

    ಯುಕೆ ಟ್ವೆಂಟಿಸೆವೆನ್ ಅವರು ತಮ್ಮ ಪ್ರಶ್ನೆ ಕೇಳಬಹುದು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳುತ್ತಿದ್ದಂತೆ ಯಾರನ್ನು ಉದ್ದೇಶಿಸಿ ಕರೆದಿದ್ದಾರೆ ಎನ್ನುವ ಬಗ್ಗೆ ಸ್ವಲ್ಪಹೊತ್ತು ಗೊಂದಲ ಉಂಟಾಗಿತ್ತು. ರೀ ನಾನು ಕರೆದಿದ್ದು, ಆತ್ಮೀಯ ಹಾಗೂ ಸಹೋದ್ಯೋಗಿಯಾದ ಮಾಜಿ ಸಚಿವ ಉಮೇಶ್ ಕತ್ತಿ ಅವರನ್ನು ಅಂತ ಹೇಳಿದರು. ಹಾಗೇ ಹೇಳುತ್ತಿದ್ದಂತೆ ಸದನದಲ್ಲಿದ್ದ ಎಲ್ಲರೂ ನಕ್ಕುಬಿಟ್ಟರು.

    ಈಗಾಗಲೇ ನನ್ನ ಪ್ರಶ್ನೆ ಉತ್ತರ ಕೊಟ್ಟಿದ್ದಾರೆ ಎಂದು ಉಮೇಶ್ ಕತ್ತಿ ಅವರು ಹೇಳುತ್ತಿದ್ದಂತೆ, ಬಹಳ ಚೆನ್ನಾಗಿದೆಯಂತೆ ಟ್ವೆಂಟಿಸೆವನ್ ಎಂದು ಹೇಳಿ ಮತ್ತೊಮ್ಮೆ ಸ್ಪೀಕರ್ ಕಾಲೆಳೆದರು. ನಮ್ಮ ಭಾಗದ ಕಾಲೇಜುಗಳ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಉಮೇಶ್ ಕತ್ತಿ ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಮೇಶ್ ಕುಮಾರ್ ಅವರು, ರೀ ಕಾಲೇಜುಗಳನ್ನು ಎಲ್ಲದ್ರೂ ಶುಗರ್ ಫ್ಯಾಕ್ಟರಿಯಲ್ಲಿ ತೆರೆದು ಬಿಟ್ಟೀರಾ ಎಂದು ಚಟಾಕಿ ಹಾರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv