Tag: ರಾಜು ಗೌಡ

  • ಅವೈಜ್ಞಾನಿಕ ವಾರಬಂದಿ ಪದ್ಧತಿ ರದ್ದು ಮಾಡಿ ರೈತರ ಹಿತ ಕಾಪಾಡಬೇಕು: ರಾಜೂ ಗೌಡ

    ಅವೈಜ್ಞಾನಿಕ ವಾರಬಂದಿ ಪದ್ಧತಿ ರದ್ದು ಮಾಡಿ ರೈತರ ಹಿತ ಕಾಪಾಡಬೇಕು: ರಾಜೂ ಗೌಡ

    ಯಾದಗಿರಿ: ರಾಜ್ಯ ರ್ಕಾರದ ರೈತ ವಿರೋಧಿ ನೀತಿ ಹಾಗೂ ಬಿಜೆಪಿ ಮುಖಂಡರ ಮೇಲೆ ಹಾಕಿರುವ ಸುಳ್ಳು ಕೇಸ್ ರದ್ದು ಪಡಿಸಬೇಕೆಂದು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹುಣಸಗಿ ಪಟ್ಟಣದಲ್ಲಿ ಮಾಜಿ ಸಚಿವ ರಾಜೂಗೌಡ (Raju Gowda) ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ್ ಕಚೇರಿವರಗೆ ಮಾಜಿ ಸಚಿವ ರಾಜೂ ಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು.

    ಹುಣಸಗಿ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮಾಜಿ ಸಚಿವರು ಮಾತನಾಡಿ, ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಲ್ಲಿ ನೀರು ಇದ್ದರೂ ಸರ್ಕಾರ ಅವೈಜ್ಞಾನಿಕ ವಾರಬಂದಿ ಜಾರಿಗೆ ತಂದಿದ್ದಾರೆ. ಅವೈಜ್ಞಾನಿಕ ವಾರಬಂದಿ ಪದ್ಧತಿ ರದ್ದು ಮಾಡಿ ರೈತರ ಹಿತ ಕಾಪಾಡಬೇಕೆಂದರು. ಸುರಪುರ ಭಾಗದ ಶಾಸಕ ಹಾಗೂ ಈ ಭಾಗದ ಜನಪ್ರತಿನಿಧಿಗಳು ಈ ಬಗ್ಗೆ ನೀರು ಹರಿಸುವ ಕೆಲಸ ಮಾಡುತ್ತಿಲ್ಲ. ಶಾಸಕರು ಟೇಬಲ್ ಗುದ್ದಿ ನೀರು ಬಿಡಿಸಬೇಕೆಂದರು.

    ವಿದ್ಯುತ್ ಕೊರತೆಯಿಂದ ರೈತರ ಜಮೀನಿಗೆ ನೀರು ಹರಿಸಿಕೊಳ್ಳಲು ರೈತರಿಗೆ ಸಾಧ್ಯವಾಗುತ್ತಿಲ್ಲ ಐಪಿಸೆಟ್ ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಿ ರೈತರ ಬೆಳೆ ಬೆಳೆಯಲು ಅನುಕೂಲ ಮಾಡಬೇಕೆಂದರು. ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಲಾಗಿದ್ದು .ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ರಾಜಕೀಯ ದ್ವೇಷಕ್ಕೆ ಸುಳ್ಳು ಕೇಸ್ ಹಾಕಲಾಗಿದೆ.ತಪ್ಪಿತಸ್ಥ ಪಿಎಸ್ ಐ ಅವರನ್ನು ಅಮಾನತು ಮಾಡಬೇಕೆಂದು ರಾಜುಗೌಡ ಒತ್ತಾಯ ಮಾಡಿದ್ದಾರೆ. ನ್ಯಾಯಕ್ಕಾಗಿ ನಾವು ರಾಜ್ಯಪಾಲರ ಹತ್ತಿರ ಹೋಗುತ್ತೆವೆ. ಇಂದಿನ ಪ್ರತಿಭಟನೆ ಟ್ರೈಲರ್ ಇದ್ದು ಇನ್ನೂ ಮುಂದೆ ಪಿಕ್ಚರ್ ಬಾಕಿ ಇದೆ.ವಾರ ಬಂದಿ ರದ್ದು ಮಾಡದಿದ್ದರೆ ಬೃಹತ್ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ವಿಧಾನಸಭೆಯೊಳಗೆ ಮಾತ್ರ ಗಲಾಟೆ, ಹೊರಗಡೆ ಎಲ್ಲರೂ ಸ್ನೇಹಿತರೇ ಆಗಿರ್ತಾರೆ: ಯು.ಟಿ. ಖಾದರ್

    ಈ ವೇಳೆ ಬಿಜೆಪಿ ಮುಖಂಡ ಬಬ್ಲುಗೌಡ ಅವರು ಮಾತನಾಡಿ, ಸರಕಾರ ರೈತರಿಗೆ ಮೋಸ ಮಾಡುವ ಕೆಲಸ ಮಾಡಿದೆ.ರಾಜಕೀಯ ಲಾಭಕ್ಕಾಗಿ ರೈತರ ಜತೆ ಚಲ್ಲಾಟವಾಡಬೇಡಿ ವಾರಬಂದಿ ರದ್ದು ಮಾಡಬೇಕು. ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸ್ ಅಧಿಕಾರಿಗಳು ಅಧಿಕಾರ ದುರುಪಯೋಗ ಪಡಿಸಿಕೊಂಡು ಸುಳ್ಳು ಕೇಸ್ ಹಾಕಿದ್ದ ರದ್ದು ಮಾಡಬೇಕೆಂದು ಆಗ್ರಹಿಸಿದ್ರು.

    ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಸುರೇಶ್ ಸಜ್ಜನ್, ಎಚ್.ಸಿ.ಪಾಟೀಲ್ ಸ್ಥಾವರಮಠ, ಕೃಷ್ಣಾ ಮುದನೂರು, ರಂಗಣ್ಣಗೌಡ ದೇವಿಕೇರಿ, ವೆಂಕಟೇಶ ಸಾಹುಕಾರ, ರಾಜಾ ಹಣಮಪ್ಪ ನಾಯಕ ತಾತಾ, ವಿರೇಶ್ ಚಿಂಚೋಳಿ, ಗದ್ದೆಪ್ಪ ಪೂಜಾರಿ ಸೇರಿದಂತೆ ಅನೇಕರು ಇದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಲಾಕ್‍ಡೌನ್ ಮುಂದುವರಿಸಿ- ರಾಜುಗೌಡ

    ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಲಾಕ್‍ಡೌನ್ ಮುಂದುವರಿಸಿ- ರಾಜುಗೌಡ

    ಯಾದಗಿರಿ: ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿರುವ ಹೊತ್ತಲ್ಲಿ ಅನ್‍ಲಾಕ್ ಮಾಡಬಾರದು. ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಮತ್ತೆ ಲಾಕ್‍ಡೌನ್ ವಿಸ್ತರಣೆ ಮಾಡಬೇಕೆಂದು ಸುರಪುರ ಶಾಸಕ ರಾಜುಗೌಡ ಸಿಎಂ ಬಿಎಸ್‍ವೈಗೆ ಒತ್ತಾಯ ಮಾಡಿದ್ದಾರೆ.

    ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜುಗೌಡ, ಲಾಕ್‍ಡೌನ್‍ನಿಂದ ಬಡ ಜನರು ಕಷ್ಟದಲ್ಲಿದ್ದಾರೆ. ಬಡವರಿಗೆ ಆರ್ಥಿಕ ಸಹಾಯದ ಪ್ಯಾಕೇಜ್ ಘೋಷಣೆ ಮಾಡಿ ಸಿಎಂ ಅವರು ಲಾಕ್‍ಡೌನ್ ವಿಸ್ತರಣೆ ಮಾಡಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದರು. ಇದನ್ನೂ ಓದಿ:ಬೇರೆ ರಾಜ್ಯದಿಂದ ಬಂದ ಕಾರ್ಮಿಕರಿಗಾಗಿ ಸ್ವಂತ ಮನೆ ಬಿಟ್ಟುಕೊಡಲೂ ಸಿದ್ಧ: ಶಾಸಕ ರಾಜುಗೌಡ

    ತಜ್ಞರ ವರದಿ ಆಧರಿಸಿ ಮತ್ತೆ ಲಾಕ್‍ಡೌನ್ ವಿಸ್ತರಣೆ ಮಾಡುವುದು ಒಳಿತು. ಲಾಕ್‍ಡೌನ್ ವಿಸ್ತರಣೆ ಮಾಡಿದರೆ ದಿನಸಿ ಸಾಮಾಗ್ರಿಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಬೇಕು, ಲಾಕ್‍ಡೌನ್ ವಿಸ್ತರಿಸದೆ ಇದ್ದರೆ ಬಹಳ ಕಷ್ಟವಾಗುತ್ತದೆ. ಯಡಿಯೂರಪ್ಪ ಅವರು ಸಮರ್ಥವಾಗಿ ಕೋವಿಡ್ ನಿರ್ವಹಣೆ ಮಾಡುತ್ತಿದ್ದು, ಬಿಎಸ್‍ವೈ ಬಿಟ್ಟು ಬೇರೆ ಯಾರೇ ಸಿಎಂ ಇಗಿದ್ದರು ಕೂಡ ಸರ್ಕಾರ ನಡೆಸಲು ಬಹಳ ಕಷ್ಟವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.

  • ಸಿಎಂ ಮೇಲೆ ವಿಶ್ವಾಸ ಇಲ್ಲದವರನ್ನು ಸಂಪುಟದಿಂದ ತೆಗೆದು ಹಾಕಿ: ರಾಜು ಗೌಡ

    ಸಿಎಂ ಮೇಲೆ ವಿಶ್ವಾಸ ಇಲ್ಲದವರನ್ನು ಸಂಪುಟದಿಂದ ತೆಗೆದು ಹಾಕಿ: ರಾಜು ಗೌಡ

    – ಸಿ.ಪಿ ಯೋಗೇಶ್ವರ್ ವಿರುದ್ಧ ಶಾಸಕ ತಿರುಗೇಟು

    ಯಾದಗಿರಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ವಿಶ್ವಾಸ ಇಲ್ಲದವರನ್ನು ಸಂಪುಟದಿಂದ ತೆಗೆದು ಹಾಕಬೇಕು ಎಂದು ಮತ್ತೆ ಸಿ.ಪಿ ಯೋಗೇಶ್ವರ್ ವಿರುದ್ಧ ಸುರಪುರ ಶಾಸಕ ರಾಜು ಗೌಡ ಅವರು ವಾಗ್ದಾಳಿ ನಡೆಸಿದ್ದಾರೆ.

    ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜು ಗೌಡ, ಸಿಎಂ ಮೇಲೆ ಹಾಗೂ ರಾಜ್ಯದ ಜನರ ಮೇಲೆ ಯಾರು ವಿಶ್ವಾಸ ಇಟ್ಟು ಕೆಲಸ ಮಾಡುತ್ತಾರೆ ಅಂತವರನ್ನು ಸಂಪುಟದಲ್ಲಿ ಮುಂದುವರೆಸಬೇಕು. ವಿಶ್ವಾಸ ಇಲ್ಲದವರನ್ನು ಸಂಪುಟದಿಂದ ತೆಗೆದು ಹಾಕಿ ಎಂದು ಮತ್ತೆ ಯೋಗೇಶ್ವರ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ. ಕಳ್ಳ, 420 ಯೋಗೇಶ್ವರ್‌ರನ್ನು ವಜಾ ಮಾಡಬೇಕು, ನಾಯಕತ್ವ ಬದಲಾವಣೆ ಸುಳ್ಳು: ರೇಣುಕಾಚಾರ್ಯ

    ರಾಜು ಗೌಡರ ಹಿಂದೆ ಒಂದು ಶಕ್ತಿ ಇದೆ ಎಂಬ ಸಿ.ಪಿ ಯೋಗೇಶ್ವರ್ ಹೇಳಿಕೆ ತಿರುಗೇಟು ನೀಡಿದ ಶಾಸಕರು, ನನ್ನ ಹಿಂದೆ ಸುರಪುರ ಜನತೆ ಶಕ್ತಿ ಇದೆ, ಮತಬಾಂಧವರ ಶಕ್ತಿ ಇದೆ. ಈ ಧೈರ್ಯದ ಮೇಲೆ ಮಾತನಾಡುತ್ತೇನೆ. ಅಲ್ಲದೇ ನಾನು ಒಳ್ಳೆ ಕೆಲಸ ಮಾಡುತ್ತೇನೆ. ನನಗೆ ಬಕೆಟ್ ಹಿಡಿಯೋಕೆ ಬರುವುದಿಲ್ಲ. ಬಕೆಟ್ ಹಿಡಿಯುವ ಮನುಷ್ಯ ಆದ್ರೆ ಮಾತನಾಡುವುದಕ್ಕೆ ಧೈರ್ಯ ಬರೋದಿಲ್ಲ ಎಂದರು.

    ಯೋಗೇಶ್ವರ್ ವಿರುದ್ಧ ಮೊದಲು ಮಾತಾಡಿದ್ದೇನೆ. ಈಗಲೂ ಮಾತಾಡುತ್ತೇನೆ. ಯೋಗೇಶ್ವರ್ ಒಳ್ಳೆ ಕೆಲಸ ಮಾಡಿದರೆ ಶಹಬ್ಬಾಶ್ ಗಿರಿ ಕೊಡುತ್ತೇವೆ. ಈ ರೀತಿ ಕೆಟ್ಟ ಕೆಲಸ ಮಾಡಿದರೆ ತಕ್ಕ ಉತ್ತರ ಕೊಡುವ ಶಕ್ತಿ ಸುರಪುರ ಮತ ಕ್ಷೇತ್ರದ ಜನತೆ ಕೊಟ್ಟಿದೆ, ಹಾಗಾಗಿ ಮಾತನಾಡುತ್ತಿದ್ದೇನೆ. ಸುರಪುರ ಜನರು ಕೈ ಹಿಡಿದರೆ ರಾಜು ಗೌಡ ಶಾಸಕರಾಗ್ತಾರೆ. ಬೇರೆ ಯಾರೋ ಯೋಗೇಶ್ವರ್ ಮಾತು ಕೇಳಿ ಶಾಸಕ ಆಗಲ್ಲ ಎಂದರು.

  • ಇನ್ಮುಂದೆ ನಾನು ಸಚಿವ ಸ್ಥಾನ ಕೇಳಲ್ಲ – ರೇಣುಕಾಚಾರ್ಯ ಗೇಮ್ ಚೇಂಜ್

    ಇನ್ಮುಂದೆ ನಾನು ಸಚಿವ ಸ್ಥಾನ ಕೇಳಲ್ಲ – ರೇಣುಕಾಚಾರ್ಯ ಗೇಮ್ ಚೇಂಜ್

    – ನಾವು ಬಂಡಾಯಗಾರರಲ್ಲ : ರಾಜುಗೌಡ
    – ಮಂತ್ರಿ ಸ್ಥಾನ ಸಿಗದಿದ್ದರೂ ಬಿಜೆಪಿ ಪರ ಕೆಲಸ

    ಬೆಂಗಳೂರು: ಬಿಜೆಪಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಮುಂಚೆ ಒಂದು ವಿದ್ಯಮಾನ. ಸಂಪುಟ ವಿಸ್ತರಣೆ ಆದ ನಂತರ ಮತ್ತೊಂದು ವಿದ್ಯಮಾನ ನಡೆಯುತ್ತಿದೆ. ಕಳೆದ ಒಂದು ವಾರದಿಂದ ಮಧ್ಯ ಕರ್ನಾಟಕಕ್ಕೆ ಸಚಿವ ಸ್ಥಾನ ಕೊಡಲೇಬೇಕು ಅಂತ ಬೇಡಿಕೆ ಇಟ್ಟಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಂಪುಟ ವಿಸ್ತರಣೆ ಆದ ತಕ್ಷಣವೇ ಮಾತಿನ ವರಸೆಯೇ ಬದಲಾವಣೆ ಮಾಡಿದ್ದು, ನನಗೆ ಸಚಿವ ಸ್ಥಾನ ಬೇಡ. ನಾನು ಇನ್ಯಾವತ್ತು ಮಂತ್ರಿ ಸ್ಥಾನ ಕೇಳುವುದಿಲ್ಲ ಅಂತ ರಾಗ ಬದಲಿಸಿದ್ದಾರೆ.

    ರಾಜಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಮುಗಿದ ಬಳಿ ಮಾತನಾಡಿದ ರೇಣುಕಾಚಾರ್ಯ ನಾನು ಮಂತ್ರಿ ಸ್ಥಾನ ಕೇಳುವುದಿಲ್ಲ ಅಂತ ತಿಳಿಸಿದರು. ಸಂಪುಟ ವಿಸ್ತರಣೆ ವೇಳೆ ಮೂಲ ಬಿಜೆಪಿಯ ಪಟ್ಟಿಯಲ್ಲಿ ಸೋತ ಯೋಗೇಶ್ವರ್ ಹೆಸರು ಬಂದ ಕೂಡಲೇ ರೇಣುಕಾಚಾರ್ಯ ರೆಬಲ್ ಚಟುವಟಿಕೆ ಪ್ರಾರಂಭ ಮಾಡಿದ್ರು. ಯಾವುದೇ ಕಾರಣಕ್ಕೂ ಸೋತವರಿಗೆ ಮಂತ್ರಿ ಮಾಡಬೇಡಿ ಅಂತ ಬಹಿರಂಗವಾಗಿ ಯೋಗೇಶ್ವರ್ ವಿರುದ್ದ ಮಾತಾಡಿದ್ರು. ಯೋಗೇಶ್ವರ್ ಪರ ಮಾತಾಡಿದ್ದ ಡಿಸಿಎಂ ಅಶ್ವಥ್ ನಾರಾಯಣ ಕೂಡಾ ನಿಮ್ಮ ಸ್ಥಾನ ಬಿಟ್ಟುಕೊಡಿ ಅಂತ ನೇರವಾಗಿಯೇ ಹೇಳಿದ್ರು. ಈ ಎಲ್ಲ ಗೊಂದಲ ದಿಂದ ಬಿಜೆಪಿ ಹೈಕಮಾಂಡ್ ಮೂಲ ಶಾಸಕರ ಮಂತ್ರಿ ಪಟ್ಟಿಯನ್ನು ತಡೆಹಿಡಿದು ಕೇವಲ ವಲಸಿಗರಿಗೆ ಮಾತ್ರ ಇವತ್ತು ಮಂತ್ರಿ ಮಾಡಿತು. ಹೊಸ ಸಚಿವರ ಪ್ರಮಾಣ ವಚನ ಆದ ಕೂಡಲೇ ರೇಣುಕಾಚಾರ್ಯ ಯೂಟರ್ನ್ ಹೊಡೆದು ನಾನು ಪಕ್ಷದ ಶಿಸ್ತಿನ ಸಿಪಾಯಿ ಅಂತಿದ್ದಾರೆ.

    ರೇಣುಕಾಚಾರ್ಯ ಅಂಡ್ ಟೀಂ ನ ಆಸೆ ಈಡೇರಿದ ಕೂಡಲೇ ಬಂಡಾಯದ ಚಟುವಟಿಕೆಗಳು ನಿಂತಂತೆ ಕಾಣುತ್ತಿದೆ. ಸ್ವತಃ ರೇಣುಕಾಚಾರ್ಯ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದರು. ನಾವು ಯಾವತ್ತು ಬಂಡಾಯ ಸಭೆ ಮಾಡಲೇ ಇಲ್ಲ. ನಮಗೆ ಯಾರು ಶತ್ರುಗಳು ಅಲ್ಲ ಅಂತ ಯೋಗೇಶ್ವರ್ ವಿಚಾರಕ್ಕೆ ಪರೋಕ್ಷ ಉತ್ತರ ಕೊಟ್ಟರು. ನಾವು ಪಕ್ಷ ಮತ್ತು ಸಿಎಂ ಹೇಳಿದಂತೆ ಕೇಳುತ್ತೇವೆ. ಪಕ್ಷಕ್ಕೆ ಮುಜುಗರ ತರುವ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.

    ಮಧ್ಯ ಕರ್ನಾಟಕ ಭಾಗಕ್ಕೆ ಮತ್ತೆ ಮಂತ್ರಿ ಸ್ಥಾನ ಕೇಳ್ತೀರಾ ಸರ್ ಅಂದ್ರೆ ಅದೆಲ್ಲ ಮುಗಿದು ಹೋದ ಅಧ್ಯಾಯ. ನಾನು ಇನ್ಯಾವತ್ತು ಮಂತ್ರಿ ಸ್ಥಾನ ಕೇಳೋದಿಲ್ಲ ಅಂತ ತಿಳಿಸಿದ್ರು. ಕೆಲಸ ಆದ ಮೇಲೆ ಎಲ್ಲರೂ ಹೀಗೆ. ಯೋಗೇಶ್ವರ್‍ಗೆ ಸ್ಥಾನ ತಪ್ಪಿಸುವ ರೇಣುಕಾಚಾರ್ಯ ಅಂಡ್ ಟೀಂ ಕೆಲಸ ಯಶಸ್ವಿಯಾದಂತೆ ಕಾಣ್ತಿದೆ. ಹೀಗಾಗಿ ರೆಬಲ್ ಟೀಂ ಕೂಡಾ ಕೂಲ್ ಆದಂತೆ ಕಾಣುತ್ತಿದೆ.

    https://twitter.com/MPRBJP/status/1224730594208145408

    ನಾವು ಬಂಡಾಯಗಾರರಲ್ಲ: ಮೂಲ ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ತಪ್ಪಲು ಪರೋಕ್ಷವಾಗಿ ಕಾರಣರಾಗಿದ್ದ ಶಾಸಕ ರಾಜುಗೌಡ ಮತ್ತೆ ನಾವು ಬಂಡಾಯಗಾರರಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ನಾವು ಬೇಡಿಕೆ ಇಟ್ಟಿದ್ದೇವೆ. ಅದನ್ನ ಯಾರು ಬಂಡಾಯ ಎನ್ನಬೇಡಿ ಅಂತ ಮನವಿ ಮಾಡಿದ್ದಾರೆ.

    ರಾಜಭವನದಲ್ಲಿ ಮಾತನಾಡಿದ ಶಾಸಕ ರಾಜುಗೌಡ, ನನಗೆ ಸಚಿವ ಸ್ಥಾನ ಕೊಡಿ ಅಂತ ನಾನು ಯಾರಿಗೂ ಒತ್ತಡ ಹಾಕಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಅವಕಾಶ ಕೊಡಿ ಅಂತ ಮಾತ್ರ ಕೇಳಿದ್ದು ಅಷ್ಟೇ. ಆದರೆ ನಾವೇ ಮೂಲ ಶಾಸಕರಿಗೆ ಸ್ಥಾನ ತಪ್ಪಿಸಿದೆವು ಅನ್ನೋದು ಸುಳ್ಳು ಅಂದರು. ಅಷ್ಟೇ ಅಲ್ಲ ನಾವು ಯಾರಿಗೂ ಸಚಿವ ಸ್ಥಾನ ಕೊಡಬೇಡಿ ಅಂತ ಹೇಳಿಲ್ಲ ಎನ್ನುವ ಮೂಲಕ ಯೋಗೇಶ್ವರ್ ಗೆ ಸ್ಥಾನ ತಪ್ಪಲು ನಾನು ಕಾರಣ ಅಲ್ಲ ಅಂದರು.

    ಹೈಕಮಾಂಡ್ ನಿರ್ದೇಶನದಂತೆ ಸಂಪುಟ ವಿಸ್ತರಣೆ ಆಗಿದೆ. ಈಗ ಆಗಿರುವ 10 ಜನ ಮಂತ್ರಿಗಳು ಬಿಜೆಪಿಯವರು. ಈಗ ಕೊಡದೇ ಇದ್ದರು ಮುಂದೆ ವಿಸ್ತರಣೆ ಮಾಡಿದರೆ ಕಲ್ಯಾಣ ಕರ್ನಾಟಕಕ್ಕೆ ಸ್ಥಾನ ಕೊಡಲೇಬೇಕು ಅಂತ ಮತ್ತೆ ಒತ್ತಡ ಹಾಕಿದ್ರು. ಒಂದು ವೇಳೆ ಬಿಜೆಪಿ ಸ್ಥಾನ ಕೊಡಲಿಲ್ಲ ಅಂದ್ರೆ ಬಿಜೆಪಿ ಶಾಲು ಹಾಕಿಕೊಂಡು, ಬಿಜೆಪಿಗೆ ಜೈ ಎಂದು ಮೋದಿ ಪರ ಕೆಲಸ ಮಾಡುತ್ತೇನೆ ಎಂದು ಹೇಳಿದರು.

  • ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡದಿದ್ದರೆ, 15 ಶಾಸಕರ ರಾಜೀನಾಮೆ ಖಚಿತ- ರಾಜು ಗೌಡ

    ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡದಿದ್ದರೆ, 15 ಶಾಸಕರ ರಾಜೀನಾಮೆ ಖಚಿತ- ರಾಜು ಗೌಡ

    ಯಾದಗಿರಿ: ವಾಲ್ಮೀಕಿ ಸಮಾಜಕ್ಕೆ ಡಿಸಿಎಂ ಸ್ಥಾನ ಬೇಕಿಲ್ಲ ಡಿಸಿಎಂ ಸ್ಥಾನದ ಅವಶ್ಯಕತೆಯೂ ಇಲ್ಲ ಎಂದು ಸುರಪುರ ಬಿಜೆಪಿ ಶಾಸಕ ರಾಜು ಗೌಡ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ವಾಲ್ಮೀಕಿ ಸಮಾಜದಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಚರ್ಚೆ ನಡೆಯುತ್ತಿರುವಾಗಲೇ ರಾಜು ಗೌಡ ಹೇಳಿಕೆ ಮಹತ್ವ ಪಡೆದುಕೊಂಡಿದೆ.

    ಈ ಬಗ್ಗೆ ಯಾದಗಿರಿಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜಕ್ಕೆ ಡಿಸಿಎಂ ಸ್ಥಾನಕ್ಕಿಂತ ಶೇ.7.5ರಷ್ಟು ಮೀಸಲಾತಿ ಬೇಕು, ಮಾಧ್ಯಮಗಳಲ್ಲಿ ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ಎಂದು ತೋರಿಸುತ್ತಿದ್ದಾರೆ. ಅವರಿಬ್ಬರೂ ನನಗೆ ಆತ್ಮೀಯರು ಅವರಿಬ್ಬರಿಗೂ ನಾನು ಕೇಳಿಕೊಳ್ಳುವುದು ಇಷ್ಟೇ ಡಿಸಿಎಂ ಸ್ಥಾನದ ಬದಲು ಮೀಸಲಾತಿಗೆ ಆಗ್ರಹಿಸಿ, ಮೀಸಲಾತಿ ಸಿಕ್ಕರೆ ನಮ್ಮ ಸಮಾಜಕ್ಕೆ ಮುಖ್ಯಮಂತ್ರಿ ಸ್ಥಾನ ಸಿಕ್ಕಂತೆ ಎಂದರು.

    ಮೀಸಲಾತಿ ನೀಡದಿದ್ದರೆ ನಮ್ಮ ಜನಾಂಗದ 15 ಶಾಸಕರು ರಾಜೀನಾಮೆ ಸಿದ್ಧ ಎಂಬ ವಾಲ್ಮೀಕಿ ಶ್ರೀಗಳ ಹೇಳಿಕೆಗೆ ಧ್ವನಿಗೂಡಿಸಿದ ರಾಜು ಗೌಡ, ಮೀಸಲಾತಿ ವಿಚಾರದಲ್ಲಿ ಶ್ರೀಗಳ ಆದೇಶಕ್ಕೆ ನಾನು ಬದ್ಧ. ಬಿಎಸ್‍ವೈ ನಮ್ಮನ್ನು ರಾಜೀನಾಮೆ ಕೊಡುವ ಮಟ್ಟಕ್ಕೆ ತೆಗೆದುಕೊಂಡು ಹೋಗುವುದಿಲ್ಲ ಎಂಬ ನಂಬಿಕೆ ನನಗಿದೆ ಎಂದರು.

    ವಾಲ್ಮೀಕಿ ಶ್ರೀಗಳು ಸಚಿವ ಸ್ಥಾನಕ್ಕೆ ತಮ್ಮ ಹೆಸರು ಸೂಚಿಸಿದ ಕುರಿತು ಮಾತನಾಡಿದ ಅವರು, ನಾನು ಶ್ರೀಗಳ ಮಾತಿಗೆ ಚಿರಋಣಿ ಶ್ರೀಗಳು ನನ್ನ ಮೇಲೆ ಪ್ರೀತಿ, ವಿಶ್ವಾಸ ಇಟ್ಟು ನನ್ನ ಹೆಸರು ಸೂಚಿಸಿದ್ದಾರೆ. ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ 12 ಜನ ಶಾಸಕರಿಗೆ ಕೊಟ್ಟು ಉಳಿದ ನಂತರ ನನಗೂ ಸಚಿವ ಸ್ಥಾನ ನೀಡಿ, ಬಹುತೇಕ ಶಾಸಕರು ಮತ್ತು ಸಂಸದರು ಸಚಿವ ಸ್ಥಾನಕ್ಕೆ ನನ್ನ ಹೆಸರು ಸೂಚಿಸುತ್ತಿದ್ದಾರೆ. ಹೀಗಾಗಿ ನನಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

    ಎನ್‍ಆರ್ ಸಿ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ಸಿನವರಿಗೆ ತಾಕತ್ತಿದ್ದರೆ ನಮ್ಮ ಎದೆಗೆ ಗುಂಡು ಹೊಡೆಯಲಿ, ಇನ್ನೊಬ್ಬರ ಹೆಗಲ ಮೇಲೆ ಗನ್ ಇಟ್ಟು ಯಾಕೆ ಹೊಡೆಯುತ್ತೀರಿ. ಅಮಾಯಕರನ್ನು ಯಾಕೆ ಬಲಿ ಕೊಡತ್ತೀರಿ. ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಹೋರಾಟ ಬಳಸಿಕೊಳ್ಳುವುದನ್ನು ಬಿಡಬೇಕು. ಉರಿಯೋ ಬೆಂಕಿಗೆ ತುಪ್ಪ ಹಾಕಿ ಆ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳುವ ಕೆಲಸ ರಾಜಕಾರಣಿಗಳಿಗೆ ಶೋಭೆ ತರುವುದಿಲ್ಲ. ಕೆಲವು ಸಂಘಟನೆಗಳು ಕರ್ನಾಟಕದಲ್ಲಿ ಗಲಾಟೆ ಎಬ್ಬಿಸುವ ಉದ್ದೇಶದಿಂದ ಕೇರಳದಿಂದ ಬಂದಿವೆ, ಮೋದಿಯವರ ಬೆಳವಣಿಗೆ ಸಹಿಸಲಾರದೆ ಈ ರೀತಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಂಸದ ತೇಜಸ್ವಿ ಸೂರ್ಯ ವಿವಾದಾತ್ಮಕ ಹೇಳಿಕೆ ಕುರಿತು ಮಾತನಾಡಿದ ಅವರು, ದುಡಿಯುವ ವರ್ಗಕ್ಕೆ ಯಾವತ್ತೂ ಅವಹೇಳನವಾಗಿ ಮಾತನಾಡಬಾರದು. ಯಾರು ಯಾವ ಉದ್ಯೋಗ ಮಾಡುತ್ತಾರೋ ಅದು ಅವರಿಗೆ ಶ್ರೇಷ್ಠ, ತೇಜಸ್ವಿ ಸೂರ್ಯ ನನಗೆ ತಮ್ಮ ಇದ್ದ ಹಾಗೆ ನಾನು ಅವರಿಗೆ ಬುದ್ಧಿ ಹೇಳುತ್ತೇನೆ ಎಂದರು.

  • ನೋಬಾಲ್‍ಗೆ ರನೌಟ್ ಆಗಿದ್ದೇ ಬೇಜಾರು- ರಾಜು ಗೌಡ

    ನೋಬಾಲ್‍ಗೆ ರನೌಟ್ ಆಗಿದ್ದೇ ಬೇಜಾರು- ರಾಜು ಗೌಡ

    ಬೆಂಗಳೂರು: ಮೂರು ವಾರಗಳ ನಂತರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಅರ್ಧ ಸಚಿವ ಸಂಪುಟ ರಚನೆಯಾಗಿದೆ. ಈ ಬೆನ್ನಲ್ಲೇ ಹಲವರು ತಮ್ಮ ಅಸಮಾಧಾನ ಹೊರಹಾಕಿದ್ದು ಶಾಸಕ ರಾಜು ಗೌಡ ಕೂಡ ಕೊನೆ ಗಳಿಗೆಯಲ್ಲಿ ನೋಬಾಲ್ ಗೆ ರನೌಟ್ ಆಗಿದ್ದೇ ಬೇಜಾರು ಎಂದು ಹೇಳಿದ್ದಾರೆ.

    ಮುಖ್ಯಮಂತ್ರಿಗಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಅದು ಕೈ ತಪ್ಪಿದೆ. ಹೀಗಾಗಿ ನೋಬಾಲ್ ಗೆ ರನೌಟ್ ಆಗಿರುವುದು ನನಗೆ ಬೇಜಾರಾಗಿದೆ ಎಂದು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

    ಬಹಳಷ್ಟು ಜನ ನನಗೆ ಮಂತ್ರಿ ಸ್ಥಾನ ಸಿಗಲಿ ಎಂದು ಸಹಕರಿಸಿದರು. ಅವರೆಲ್ಲರೂ ಆಸೆ ಪಟ್ಟಿದ್ದರು. ಆದರೆ ನಾನು ಸಚಿವನಾಗಲಿಲ್ಲ. ಇದರಿಂದೇನೂ ಸಮಸ್ಯೆ ಆಗಲ್ಲ. ಯಾರು ನಮಗೆ ಅಡ್ಡ ಬಂದಿದ್ದಾರೋ ಅವರ ಜೊತೆಗೆ ಎಲ್ಲರಿಗೂ ಒಳ್ಳೆಯದಾಗಲಿ. ಯಾರಿಗೂ ಕೆಟ್ಟದು ಬಯಸಲ್ಲ ಎಂದರು.

    ನಾನು ಕ್ರೀಡಾಪಟುವಾಗಿದ್ದು, ಹೀಗಾಗಿ ಆಟದಲ್ಲಿ ಸೋಲು-ಗೆಲುವು ಅನುಭವಿಸಿದ್ದೇನೆ. ಆದರೆ ಕ್ರಿಕೆಟ್ ಆಡುವಾಗ ನೋಬಾಲ್ ಗೆ ರನೌಟ್ ಆಗಿದ್ದೇನೆ ಅಂತಷ್ಟೇ ಬೇಜಾರು ಬಿಟ್ಟರೆ ಬೇರಾವುದೂ ಇಲ್ಲ. ಪರವಾಗಿಲ್ಲ ಇನ್ನೊಂದು ಮ್ಯಾಚ್ ಆಡುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.

  • ಬಿಜೆಪಿಯಿಂದ ವಿಪರೀತ ಒತ್ತಡ ಬಂದಿದೆ: ಕೈ ಶಾಸಕ ರಾಜುಗೌಡ

    ಬಿಜೆಪಿಯಿಂದ ವಿಪರೀತ ಒತ್ತಡ ಬಂದಿದೆ: ಕೈ ಶಾಸಕ ರಾಜುಗೌಡ

    ಮಂಗಳೂರು: ಬಿಜೆಪಿಯಿಂದ ನನಗೆ ವಿಪರೀತ ಒತ್ತಡ ಬಂದಿದೆ ಎಂದು ಶೃಂಗೇರಿ ಕಾಂಗ್ರೆಸ್ ಶಾಸಕ ರಾಜು ಗೌಡ ಆಪರೇಶನ್ ಕಮಲದ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದಾರೆ.

    ಶಾಸಕ ರಾಜು ಗೌಡ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ದೂರವಾಣಿ ಮೂಲಕ ರಾಜು ಗೌಡ ಅವರನ್ನು ಸಂಪರ್ಕಿಸಿದ್ದಾರೆ.

    ಈ ಬಗ್ಗೆ ರಾಜು ಗೌಡ ಮಾತನಾಡಿ, ರಾಜಕಾರಣದಲ್ಲಿ ಹಣ, ಅಧಿಕಾರ ಮುಖ್ಯ ಅಲ್ಲ. ಜನರಿಗೆ ಸೇವೆ ಮಾಡುವುದು ಮುಖ್ಯ. ನಾವು ಸೇವೆ ಮಾಡುವ ದೃಷ್ಟಿಯಿಂದ ರಾಜಕಾರಣಕ್ಕೆ ಬಂದಿದ್ದೇವೆ ಹೊರತು ಹಣ, ಅಧಿಕಾರಕ್ಕೆ ಬಂದಿಲ್ಲ. ಒಂದು ಪಕ್ಷದಲ್ಲಿ ನಾವು ಗೆದ್ದ ಮೇಲೆ ಆ ಪಕ್ಷದ ಋಣ ತೀರಿಸಬೇಕಿರುವುದು ನಮ್ಮ ಕರ್ತವ್ಯ. ಏಕೆಂದರೆ ನಮ್ಮನ್ನು ನಂಬಿ ಟಿಕೆಟ್ ನೀಡುತ್ತಾರೆ. ಟಿಕೆಟ್ ನೀಡಬೇಕು ಎಂದರೆ ಅವರಿಗೆ ಒತ್ತಡ ಇರುತ್ತದೆ. ಬಹಳಷ್ಟು ಆಕಾಂಕ್ಷಿಗಳು ಇರುತ್ತಾರೆ. ಅಂತಹದರಲ್ಲಿ ಅವರು ನಮ್ಮನ್ನು ಆಯ್ಕೆ ಮಾಡಿ ಟಿಕೆಟ್ ನೀಡುತ್ತಾರೆ.

    ನಾನು ಮೊದಲ ಬಾರಿಗೆ ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನಸಭೆಗೆ ಹೋಗಿದ್ದೇನೆ. ನನ್ನನ್ನು ಮಲೆನಾಡ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷನಾಗಿಯೂ ಮಾಡಿದ್ದಾರೆ. ನಾನು ಅಲ್ಲಿಯೂ ಕೂಡ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ. ಸಿಎಂ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಡಿಸಿಎಂ ಎಲ್ಲರೂ ಅಭಿವೃದ್ಧಿ ಕೆಲಸಕ್ಕೆ ಸಹಕಾರ ನೀಡಿದ್ದಾರೆ. ಶಾಸಕರು ಚರ್ಚೆ ಮಾಡಿ ತೀರ್ಮಾನ ಮಾಡಬಹುದಿತ್ತು. ಆದರೆ ಅದನ್ನು ಬಿಟ್ಟು ಏಕಾಏಕಿಯಾಗಿ ರಾಜೀನಾಮೆ ನೀಡಿ ಸರ್ಕಾರವನ್ನು ಅಭದ್ರಗೊಳಿಸುವುದು ಪ್ರಜಾಪ್ರಭ್ವುತ ವ್ಯವಸ್ಥೆಯಲ್ಲಿ ಇದು ಸರಿಯಲ್ಲ ಎಂದರು.

    ನನಗೂ ಎಲ್ಲರಿಂದಲೂ ಸಾಕಷ್ಟು ಒತ್ತಡ ಬಂದಿದೆ. ನಾನು ಅವರ ಹೆಸರನ್ನು ಹೇಳಲು ಇಷ್ಟಪಡುವುದಿಲ್ಲ. ನನಗೆ ತಡೆಯೋಕ್ಕಾಗದಷ್ಟು ಒತ್ತಡ ನೀಡಿ ಆಮೀಷವೊಡ್ಡಿದ್ದರು. ಆದರು ಕೂಡ ನಾನು ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧನಾಗಿದ್ದೇನೆ. ನಮ್ಮ ಹೈಕಮಾಂಡ್ ಸೋನಿಯಾ ಗಾಂಧಿ ಅವರು ತ್ಯಾಗಿಮಯಿ. ಏಕೆಂದರೆ ಅವರಿಗೆ ಪ್ರಧಾನಿ ಆಗುವ ಅವಕಾಶ ಇತ್ತು. ಅವರು ಆರಾಮಾಗಿ ಪ್ರಧಾನಿ ಆಗಬಹುದಿತ್ತು. ಆ ಸಮಯದಲ್ಲಿ ವಿದೇಶಿ ಎಂದು ಹೇಳಿದ್ದ ಕಾರಣ ಸೋನಿಯಾ ತಮ್ಮ ಹುದ್ದೆಯನ್ನು ತ್ಯಾಗ ಮಾಡಿದ್ದರು. ಆಗ ಅವರು ಮನ್‍ಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಮಾಡಿದ್ದರು ಎಂದು ರಾಜು ಗೌಡ ತಿಳಿಸಿದರು.