Tag: ರಾಜು ಕಾಗೆ

  • DCC Bank Election| ಮೇಲೆ ಕುಳಿತವನು ಆಟ ಆಡಿಸ್ತಾನೆ, ನಾವೆಲ್ಲ ಗೊಂಬೆಗಳು: ಲಕ್ಷ್ಮಣ ಸವದಿ

    DCC Bank Election| ಮೇಲೆ ಕುಳಿತವನು ಆಟ ಆಡಿಸ್ತಾನೆ, ನಾವೆಲ್ಲ ಗೊಂಬೆಗಳು: ಲಕ್ಷ್ಮಣ ಸವದಿ

    – ರೋಚಕತೆ ಪಡೆದ ಡಿಸಿಸಿ ಬ್ಯಾಂಕ್‌ ಚುನಾವಣೆ
    – ನಾಮಪತ್ರ ಸಲ್ಲಿಕೆ ಮಾಡಿದ ಸವದಿ, ರಾಜು ಕಾಗೆ
    – ಮೊದಲ ಬಾರಿಗೆ ಡಿಸಿಸಿ ಚುನಾವಣೆಗೆ ಕಾಗೆ ಎಂಟ್ರಿ

    ಬೆಳಗಾವಿ: ನಮ್ಮ ಸಮಿತಿ ಸದಸ್ಯರ ಸಂಖ್ಯೆ ಒಂಬತ್ತಾಗುತ್ತೋ? ಹನ್ನೊಂದಾಗುತ್ತೋ? ಹದಿನೈದಾಗುತ್ತೋ ನೋಡೋಣ. ಮೇಲೆ ಕುಳಿತವನು ಆಟ ಆಡಿಸ್ತಾನೆ. ನಾವೆಲ್ಲ ಗೊಂಬೆಗಳು, ಹೇಳಿದಂತೆ ಆಟ ಆಡುತ್ತೇವೆ ಎಂದು ಮಾಜಿ ಡಿಸಿಎಂ, ಅಥಣಿ ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ (Laxman Savadi) ಹೇಳಿದ್ದಾರೆ.

    ಡಿಸಿಸಿ ಬ್ಯಾಂಕ್ ಚುನಾವಣೆ (DCC Bank Election) ದಿನದಿಂದ ದಿನಕ್ಕೂ ರೋಚಕತೆ ಪಡೆಯುತ್ತಿದೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಅಖಾಡದಲ್ಲಿ ಈಗಾಗಲೇ ಕತ್ತಿ ಜಾರಕಿಹೊಳಿ, ಹಾಗೂ ಹುಕ್ಕೇರಿ, ಜೊಲ್ಲೆ ಮನೆತನಗಳಿದ್ದು ಈಗ ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ (Raju Kage) ಶಕ್ತಿ ಪ್ರದರ್ಶನ ಮಾಡಿದ್ದಾರೆ.

    ಅಥಣಿ ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಕಾಗವಾಡ ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ‌ರಾಜು ಕಾಗೆ ಸ್ಪರ್ಧೆ ಮಾಡುತ್ತಿದ್ದಾರೆ. ಇಂದು ಇಬ್ಬರೂ ಏಕಾಕಾಲಕ್ಕೆ ಆಗಮಿಸಿ ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ:  ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ – ವಾಲಿಬಾಲ್‌ ಕೋಚ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ

    ನಾವೂ ಯಾರ ಬಣದಲ್ಲೂ ಇಲ್ಲ ಎನ್ನುವ ಮೂಲಕ ಜಾರಕಿಹೊಳಿ ಸಹೋದರರಿಗೆ (Jarkiholi Brothers) ಶಾಸಕ ಕಾಗೆ ಶಾಕ್ ಕೊಟ್ಟಿದ್ದಾರೆ. ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್ ಅಖಾಡಕ್ಕೆ ಶಾಸಕ ರಾಜು ಕಾಗೆ ಎಂಟ್ರಿಯಾಗುತ್ತಿದ್ದು ರಾಜು ಕಾಗೆಯವರನ್ನು ಗೆಲ್ಲಿಸುವ ಹೊಣೆ ಅಥಣಿ ಶಾಸಕ ಲಕ್ಷ್ಮಣ ಸವದಿ ಹೊತ್ತಿದ್ದಾರೆ. ಕಾಗೆ ವಿರುದ್ಧ ಮಾಜಿ ಸಚಿವ ಶ್ರೀಮಂತ ಪಾಟೀಲ ಪುತ್ರ ಕಣಕ್ಕಿಳಿದಿದ್ದು ಲಕ್ಷ್ಮಣ ಸವದಿ ವಿರುದ್ಧ ಮಾಜಿ ಶಾಸಕ ಮಹೇಶ ಕುಮಟಳ್ಳಿ ಸ್ಪರ್ಧೆ ಮಾಡುತ್ತಿದ್ದಾರೆ.

    ಈ ವೇಳೆ ಮಾತನಾಡಿದ ಲಕ್ಷ್ಮಣ ಸವದಿ, ನಾನು ಹಾಗೂ ರಾಜು ಕಾಗೆ ಒಂದೇ ಸಮಿತಿಯಲ್ಲಿದ್ದು ನಮ್ಮ ಸಮಿತಿಗೆ ಬರುವ ಎಲ್ಲರಿಗೂ ಸ್ವಾಗತ ಮಾಡುತ್ತೇವೆ. ಹೋಗುವವರಿಗೂ ಧನ್ಯವಾದ ಹೇಳಿ ಕಳಿಸುತ್ತೇವೆ ಎಂದರು. ಇದನ್ನೂ ಓದಿ: ಕುಕ್ಕರ್ ಬ್ರ್ಯಾಂಡ್ ಪ್ರೆಸ್ಟೀಜ್ ಸಂಸ್ಥಾಪಕ ಟಿಟಿ ಜಗನ್ನಾಥನ್ ನಿಧನ

    ನಮ್ಮ ಜೊತೆ ಯಾರೂ ಇಲ್ಲ ಎನ್ನುತ್ತೀರಿ. ಆದರೆ ಬಣ ಮಾಡುತ್ತಿರುವುದು ಯಾಕೆ ಎಂಬ ಪ್ರಶ್ನೆಗೆ, ಸಸಿ ನೆಡುವ ವೇಳೆ ಒಂದೇ ಇರುತ್ತೆ. ಬಳಿಕ ಎಲೆ, ಕಾಯಿ, ಹೂವು ಎಲ್ಲವೂ ಬರುತ್ತದೆ ಎನ್ನುವ ಮೂಲಕ ಮಾರ್ಮಿಕವಾಗಿ ತಮ್ಮ ಗುಂಪಿನ ಸದಸ್ಯರ ಸಂಖ್ಯೆ ಹೆಚ್ಚಾಗಲಿದೆ ಎಂಬ ಸುಳಿವು ನೀಡಿದರು.

  • ಭ್ರಷ್ಟಾಚಾರ ಬಾಂಬ್‌ ಸಿಡಿಸಿದ ಶಾಸಕ ಬಿ.ಆರ್ ಪಾಟೀಲ್‌ಗೆ ಸಿಎಂ ಫುಲ್‌ ಕ್ಲಾಸ್‌

    ಭ್ರಷ್ಟಾಚಾರ ಬಾಂಬ್‌ ಸಿಡಿಸಿದ ಶಾಸಕ ಬಿ.ಆರ್ ಪಾಟೀಲ್‌ಗೆ ಸಿಎಂ ಫುಲ್‌ ಕ್ಲಾಸ್‌

    – ಬಹಿರಂಗ ಹೇಳಿಕೆ ನೀಡದಂತೆ ರಾಜು ಕಾಗೆಗೆ, ಬಾಲಕೃಷ್ಣಗೆ ವಾರ್ನಿಂಗ್‌

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಂದು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಬಳಿಕ ಅಸಮಾಧಾನಿತ ಶಾಸಕ ರಾಜು ಕಾಗೆ ಹಾಗೂ ಭ್ರಷ್ಟಾಚಾರ ಬಾಂಬ್‌ ಸಿಡಿಸಿದ ಶಾಸಕ ಬಿ.ಆರ್‌ ಪಾಟೀಲ್‌ ಅವರನ್ನ ಭೇಟಿಯಾಗಿದ್ದಾರೆ. ಸುಮಾರು 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ಸಿಎಂ ಬಿ.ಆರ್ ಪಾಟೀಲ್‌ಗೆ ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.

    ʻನೀನು ಪದೇ ಪದೇ ಈ ರೀತಿ ಮಾತನಾಡಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿದ್ದೀಯಾ, ಇದು ಸರಿಯಲ್ಲ. ಇದೇ ವೇಳೆ ಆಡಿಯೋ ಬಗ್ಗೆ ಸಮಾಜಾಯಿಷಿ ಕೊಡಲು ಮುಂದಾಗಿದ್ದ ಬಿಆರ್ ಪಾಟೀಲ್‌ಗೆ ಆಡಿಯೋ ಬಹಿರಂಗ ಪಡಿಸಿದ್ದು ಯಾರು..? ನೀನಲ್ವಾ ಎಂದು ಸಿಎಂ ಗರಂ ಆಗಿದ್ದರು. ನೀನು ಆಡುವ ಮಾತು ಈ ಬೆಳವಣಿಗೆ ಸರ್ಕಾರ ಹಾಗೂ ಪಕ್ಷ ಎರಡಕ್ಕೂ ಡ್ಯಾಮೇಜ್ ಮಾಡಿದೆ. ನನಗೆ ವೈಯುಕ್ತಿಕವಾಗಿ ಪದೇ ಪದೇ ಮುಜುಗರ ಆಗುವಂತೆ ಮಡುತ್ತಿದ್ದೀಯಾ ಎಂದು ತೀವ್ರ ಅಸಮಧಾನ ವ್ಯಕ್ತಪಡಿಸಿದರು.

    ಇನ್ನೂ ಶಾಸಕರಾದ ರಾಜು ಕಾಗೆ ಹಾಗೂ ಮಾಗಡಿ ಬಾಲಕೃಷ್ಣ ಇಬ್ಬರಿಗೂ ಬಹಿರಂಗವಾಗಿ ಹೇಳಿಕೆ ನೀಡದಂತೆ ಸಿಎಂ ಸೂಚನೆ ಕೊಟ್ಟಿದ್ದಾರೆ. ನಿಮ್ಮ ಅಭಿಪ್ರಾಯ ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ನಾಲ್ಕು ಗೋಡೆಯ ಮಧ್ಯೆ ಇರಲಿ. ಯಾವುದೇ ಹಿರಂಗ ಹೇಳಿಕೆ ಬೇಡ. ಹೈಕಮಾಂಡ್ ಈ ಬೆಳವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ನಿಮ್ಮ‌ ಮಾತು ನಡೆನುಡಿಯಿಂದ ಸಮಸ್ಯೆ ಮಾಡಿಕೊಳ್ಳಬೇಡಿ, ಏನೇ ಇದ್ದರು ನನ್ನನ್ನು ನೇರವಾಗಿ ಭೇಟಿ ಮಾಡಿ ಎಂದು ಸಿಎಂ ತಾಕೀತು ಮಾಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

  • ಸಿಎಂ ಅನುದಾನ ಅಂತ ಬಜೆಟ್‌ನಲ್ಲಿ ಇಲ್ಲ, ರಾಜು ಕಾಗೆಯನ್ನ ಕರೆದು ಮಾತಾಡ್ತೀನಿ: ಸಿದ್ದರಾಮಯ್ಯ

    ಸಿಎಂ ಅನುದಾನ ಅಂತ ಬಜೆಟ್‌ನಲ್ಲಿ ಇಲ್ಲ, ರಾಜು ಕಾಗೆಯನ್ನ ಕರೆದು ಮಾತಾಡ್ತೀನಿ: ಸಿದ್ದರಾಮಯ್ಯ

    – ಕೇಂದ್ರದಿಂದ ನಮಗೆ 11,495 ಕೋಟಿ ರೂ. ನಷ್ಟವಾಗಿದೆ; ಸಿಎಂ

    ರಾಯಚೂರು: ಸಿಎಂ ಅನುದಾನ ಅಂತ ಬಜೆಟ್‌ನಲ್ಲಿ ಇಲ್ಲ, ನಾವು ಗ್ರ‍್ಯಾಂಟ್ ಕೊಡುವುದೆಲ್ಲಾ ವಿಶೇಷ ಅನುದಾನ ಅಂತಿರುತ್ತದೆ. ಅವರು ಹೇಳುತ್ತಾರೆ, ಶಾಸಕ ರಾಜು ಕಾಗೆಯನ್ನ (Raju Kage) ಕರೆದು ಮಾತನಾಡ್ತಿನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.

    ಜಿಲ್ಲೆಯ ಯರಗೇರಾದಲ್ಲಿ ಸರ್ಕಾರದ ವಿರುದ್ಧ ಮತ್ತೊಬ್ಬ ಕಾಂಗ್ರೆಸ್ (Congress) ಶಾಸಕ ರಾಜು ಕಾಗೆ ಆಕ್ರೋಶ ವ್ಯಕ್ತಪಡಿಸಿರುವ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅನುದಾನದ ವರ್ಕ್ ಆರ್ಡರ್ ಸಿಗುತ್ತಿಲ್ಲ ಎಂದು ಎರಡು ದಿನದಲ್ಲಿ ರಾಜೀನಾಮೆ ನೀಡಿದ್ದರೂ ಅಚ್ಚರಿಯಿಲ್ಲ ಎಂದಿದ್ದಾರೆ. ಅವರು ಹೇಳುತ್ತಾರೆ, ಅವರಿಗೇನು? ಸಿಎಂ ಅನುದಾನ ಅಂತಾ ಇದೀಯಾ? ರಾಜು ಕಾಗೆಯನ್ನು ಕರೆದು ಮಾತಾಡುತ್ತೇನೆ ಎಂದರು.ಇದನ್ನೂ ಓದಿ: ಭಾರತದ ವಾಯುಸೀಮೆಯನ್ನು ಅಮೆರಿಕ ಬಳಸಿ ಇರಾನ್‌ ಮೇಲೆ ದಾಳಿ ಮಾಡಿತ್ತಾ? – ಉತ್ತರ ನೀಡಿದ ಪಿಐಬಿ

    ಇನ್ನೂ ವಸತಿ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದು ನನಗೆ ಗೊತ್ತಿಲ್ಲ. ಯಾವ ಸನ್ನಿವೇಶದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅದರ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದರು. ಇದೇ ವೇಳೆ ರಾಯಚೂರಿನಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಬಿ.ಆರ್ ಪಾಟೀಲ್ (BR Patil)  ಅವರನ್ನ ಸಿಎಂ ಕರೆದರೂ ಬಂದಿಲ್ಲ ಎನ್ನುವ ವಿಚಾರವಾಗಿ ಮಾತನಾಡಿದ ಅವರು, ನಾನು ಅವರನ್ನು ಇಲ್ಲಿಗೆ ಕರೆದಿದ್ದೆ, ಆದರೆ ಅವರು ಆಯೋಜಕರು ನನ್ನನ್ನು ಕರೆದಿಲ್ಲ ಬರಲ್ಲ ಎಂದರು. ಜೂ.25ಕ್ಕೆ ಭೇಟಿ ಮಾಡುತ್ತೇನೆ ಎಂದಿದ್ದಾರೆ ಎಂದು ಹೇಳಿದರು.

    ಸಚಿವ ಹೆಚ್‌ಕೆ ಪಾಟೀಲ್ (HK Patil) ಪತ್ರ ಬರೆದ ವಿಚಾರವಾಗಿ ಮಾತನಾಡಿದ ಅವರು, ಅದು ನಮ್ಮ ಕಾಲದಲ್ಲಿ ನಡೆದಿಲ್ಲ. ವಿಶೇಷ ಕೋರ್ಟ್ ಮಾಡಿ ತ್ವರಿತಗತಿಯಲ್ಲಿ ಇತ್ಯರ್ಥ ಮಾಡಿ ಎಂದಿದ್ದಾರೆ. ಅಕ್ರಮ ಗಣಿಗಾರಿಗೆ ನಡೆಯುತ್ತಿರುವುದಕ್ಕಾಗಿ ಪಾದಯಾತ್ರೆ ಮಾಡಿದ್ದಾರೆ. ಲೋಕಾಯುಕ್ತ ಸಂತೋಷ ಹೆಗಡೆ ವರದಿ ಆಧರಿಸಿ ನಾನು ಅಸೆಂಬ್ಲಿ ಅಲ್ಲಿ ಪ್ರಸ್ತಾಪಿಸಿದ್ದೆ. ಆದರೆ ಅಂದಿನ ಸರ್ಕಾರದಿಂದ ಸರಿಯಾದ ಉತ್ತರ ಬರಲಿಲ್ಲ. ಹೀಗಾಗಿ ನಡೆದುಕೊಂಡೇ ಬರುತ್ತೇನೆ ಅಂತ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೆವು ಎಂದರು.

    ದೆಹಲಿಗೆ ತೆರಳಿ ರಾಷ್ಟ್ರಪತಿ ಹಾಗೂ ಪ್ರಧಾನಿಯನ್ನ ಭೇಟಿ ಮಾಡಬೇಕು ಅಂದುಕೊಂಡಿದ್ದೀನಿ. 16ನೇ ಹಣಕಾಸಿನ ಸಂಬಂಧ ಬಿಲ್‌ಗಳು ಬಾಕಿಯಿವೆ. ಅವುಗಳ ಬಗ್ಗೆ ಮಾತನಾಡಲು ನಾಳೆ ರಾಷ್ಟ್ರಪತಿ ಸಮಯ ಕೊಟ್ಟಿದ್ದಾರೆ ಎಂದು ತಿಳಿಸಿದರು.

    ರಾಜ್ಯಕ್ಕೆ ಪ್ರಹ್ಲಾದ್ ಜೋಶಿ (Prahlad Joshi) ಏನೆಲ್ಲಾ ಮಾಡಿದ್ದಾರಂತೆ? ಅವರನ್ನು ಪವರ್ ಫುಲ್ ಅಂತಾರೆ, ಪ್ರಧಾನಿಗೆ ಬಹಳ ಹತ್ತಿರವಿದ್ದಾರೆ. 15ನೇ ಹಣಕಾಸಿನಲ್ಲಿ 5,435 ಕೋಟಿ ರೂ. ವಿಶೇಷ ಅನುದಾನ ಶಿಫಾರಸು ಮಾಡಿದ್ದರು. ಶಿಫಾರಸು ಮಾಡಿ ಆಮೇಲೆ ಏನು ಮಾಡಿದರು? ಕರ್ನಾಟಕದ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕ ಹಕ್ಕಿದೆ? ಬಿಜೆಪಿಯ ಒಬ್ಬ ಸಂಸದನಾದರೂ ಮಾತನಾಡಿದ್ದಾರಾ? 11,495 ಕೋಟಿ ರೂ. ನಮಗೆ ನಷ್ಟವಾಗಿದೆ. 14 ರಿಂದ 15ನೇ ಹಣಕಾಸು ಯೋಜನೆಗೆ ಲೆಕ್ಕ ಹಾಕಿದರೆ, ರಾಜ್ಯಕ್ಕೆ 89 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಜೋಶಿ ವಿರುದ್ಧ ಕಿಡಿಕಾರಿದರು.ಇದನ್ನೂ ಓದಿ: ಸರ್ದಾರ್ ಜಿ 3 ಸಿನಿಮಾ ವಿರುದ್ಧ ಭುಗಿಲೆದ್ದ ಆಕ್ರೋಶ

  • ದುಡ್ಡು ಕೊಟ್ಟರೆ ಮಾತ್ರ ವರ್ಕ್‌ ಆರ್ಡರ್‌:  ಬಿಆರ್‌ ಪಾಟೀಲ್‌ ಬಳಿಕ ರಾಜು ಕಾಗೆ ದಂಗೆ

    ದುಡ್ಡು ಕೊಟ್ಟರೆ ಮಾತ್ರ ವರ್ಕ್‌ ಆರ್ಡರ್‌: ಬಿಆರ್‌ ಪಾಟೀಲ್‌ ಬಳಿಕ ರಾಜು ಕಾಗೆ ದಂಗೆ

    – ಸಿದ್ದರಾಮಯ್ಯ ಸರ್ಕಾರ ಸಂಪೂರ್ಣ ವಿಫಲ

    ಚಿಕ್ಕೋಡಿ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಸರ್ಕಾರದ ಆಡಳಿತ ಸಂಪೂರ್ಣ ವಿಫಲವಾಗಿದ್ದು ದುಡ್ಡು ಕೊಟ್ಟರೇ ಮಾತ್ರ ವರ್ಕ ಆರ್ಡರ್ ಸಿಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್‌ ಶಾಸಕ ರಾಜು ಕಾಗೆ (MLA Raju Kage) ಆಕ್ರೋಶ ಹೊರಹಾಕಿದ್ದಾರೆ.

    ಕಾಗವಾಡ ತಾಲೂಕಿನ ಐನಾಪೂರ ಗ್ರಾಮದಲ್ಲಿ ಮಾತನಾಡಿದ ಅವರು, ಕಾಮಗಾರಿ ವರ್ಕ್ ಆರ್ಡರ್‌ ಪಡೆಯಲು ಸರ್ಕಾರದಿಂದ ವಿಳಂಬ ಆಗುತ್ತಿದೆ. 13 ಕೋಟಿ ರೂ. ವೆಚ್ಚದಲ್ಲಿ 75 ಸಮುದಾಯದ ಭವನಗಳಿಗೆ ಅನುಮೋದನೆ ಸಿಕ್ಕಿದೆ. ಆದರೆ ಎರಡು ವರ್ಷದಿಂದ ವರ್ಕ್ ಆರ್ಡರ್ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: 40 ಸಾವಿರ ನೀಡಿದ್ರೂ ಶೋ ಸಿಕ್ಕಿಲ್ಲ – ಡ್ಯಾನ್ಸ್‌ ಆಯೋಜಕಿಗೆ ಪೋಷಕರ ತರಾಟೆ

     

    ನಾನು ಎರಡು ದಿನಗಳಲ್ಲಿ ಮುಖ್ಯಮಂತ್ರಿ ಭೇಟಿ ರಾಜೀನಾಮೆ ಸಲ್ಲಿಸಿದರೆ ಅಚ್ಚರಿಯಿಲ್ಲ ಬಿ ಆರ್ ಪಾಟೀಲ್ ಅವರಂತ ಪರಿಸ್ಥಿತಿ ನನ್ನದಾಗಿದೆ. ಬಿ ಆರ್ ಪಾಟೀಲ್ ಅವರ ಹೇಳಿಕೆಯನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ ಎಂದು ಸರಕಾರದ ವಿರುದ್ದವೇ ಬಹಿರಂಗವಾಗಿ ಕಿಡಿಕಾರಿದರು.

  • ಶಾಸಕ ರಾಜು ಕಾಗೆ ಸಹೋದರನ ಪುತ್ರನಿಂದ ಕಾರು ಅಪಘಾತ – ಬೈಕ್ ಸವಾರ ಸಾವು

    ಶಾಸಕ ರಾಜು ಕಾಗೆ ಸಹೋದರನ ಪುತ್ರನಿಂದ ಕಾರು ಅಪಘಾತ – ಬೈಕ್ ಸವಾರ ಸಾವು

    ಬೆಳಗಾವಿ: ಶಾಸಕ ರಾಜು ಕಾಗೆ (Raju Kage) ಸಹೋದರನ ಪುತ್ರನಿಂದ ಕಾರು ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಬೆಳಗಾವಿ (Belgavi) ಜಿಲ್ಲೆಯ ಕಿತ್ತೂರು (Kitturu) ಪಟ್ಟಣದ ಹೊರವಲಯದ ಬೆಂಗಳೂರು-ಪುಣೆ (Bengaluru-Pune) ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಗೋಕಾಕ್ ಮೂಲದ ಬಸವರಾಜ ಪುಡಕಲಕಟ್ಟಿ (22) ಎಂದು ಗುರುತಿಸಲಾಗಿದೆ.ಇದನ್ನೂ ಓದಿ:ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ದರ್ಶನ್ ತಾಯಿ

    ಮೃತ ಬಸವರಾಜ ಹಾಗೂ ಆತನ ಇಬ್ಬರು ಸ್ನೇಹಿತರು ಬೆಳಗಾವಿಯಿಂದ ಕಿತ್ತೂರಿಗೆ ಬೈಕ್‌ನಲ್ಲಿ ಕೆಲಸಕ್ಕೆ ಹೊರಟ್ಟಿದ್ದರು. ಈ ವೇಳೆ ಶಾಸಕ ರಾಜು ಕಾಗೆ ಸಹೋದರನ ಪುತ್ರ ಶ್ರೀಪ್ರಸಾದ್ ಸಿದ್ದನಗೌಡ ಕಾಗೆ ಪ್ರಯಾಣಿಸುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸವರಾಜ ಪುಡಕಲಕಟ್ಟಿ ಸಾವನ್ನಪ್ಪಿದ್ದು, ಸಣ್ಣವಿಠ್ಠಲ್ ದುರದುಂಡಿ, ನಿಂಗಪ್ಪ ಹೆಬ್ಬಾಳ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಮೃತ ದೇಹವನ್ನು ಬಿಮ್ಸ್ (BIMS) ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಗಾಯಾಳುಗಳನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಿತ್ತೂರು ಠಾಣೆ ಪೊಲೀಸರು (Kitturu Police Station) ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.ಇದನ್ನೂ ಓದಿ:ಚಿಕ್ಕಬಳ್ಳಾಪುರ| ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ಮೂವರು ದುರ್ಮರಣ

  • ಶಾಸಕ ರಾಜು ಕಾಗೆ ಹಿರಿಯ ಪುತ್ರಿ ಅನಾರೋಗ್ಯದಿಂದ ಸಾವು

    ಶಾಸಕ ರಾಜು ಕಾಗೆ ಹಿರಿಯ ಪುತ್ರಿ ಅನಾರೋಗ್ಯದಿಂದ ಸಾವು

    ಚಿಕ್ಕೋಡಿ: ಕಾಗವಾಡ ಶಾಸಕ ರಾಜು ಕಾಗೆ ಹಿರಿಯ ಪುತ್ರಿ ಕೃತಿಕಾ ಅನಾರೋಗ್ಯದಿಂದ ನಿಧನರಾಗಿದ್ದಾರೆ.

    ನೇರಲಿ ಗ್ರಾಮದ ನಿವಾಸಿ ಡಾ.ಅನಿಲ ಪಾಟೀಲ್‌ ಅವರ ಪತ್ನಿ ಕೃತಿಕಾ ಅವರು ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

    ನಾಳೆ ಬೆಳಗ್ಗೆ 10 ಗಂಟೆಗೆ ಕಾಗವಾಡ ಶಾಸಕ ರಾಜು ಕಾಗೆ ಸ್ವಗ್ರಾಮದಲ್ಲಿ‌ ಅಂತ್ಯಕ್ರಿಯೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಪಟ್ಟಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

  • ನಾನು ಸಚಿವ ಸ್ಥಾನದ ಆಕಾಂಕ್ಷಿ : ಶಾಸಕ ರಾಜು ಕಾಗೆ

    ನಾನು ಸಚಿವ ಸ್ಥಾನದ ಆಕಾಂಕ್ಷಿ : ಶಾಸಕ ರಾಜು ಕಾಗೆ

     ಬೆಳಗಾವಿ: ಸಚಿವ ಸಂಪುಟ ವಿಸ್ತರಣೆಯಾದರೆ ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿ ಎಂದು ಕಾಗವಾಡ (Kagawad) ಕ್ಷೇತ್ರದ ಕಾಂಗ್ರೆಸ್‌ ಶಾಸಕ ರಾಜು ಕಾಗೆ(Raju Kage) ಹೇಳಿದ್ದಾರೆ.

    ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಶಿರೂರ ಗ್ರಾಮದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು ಯಾವುದೇ ಖಾತೆ ಕೊಟ್ಟರೂ ಸೂಕ್ತವಾಗಿ ನಿಭಾಯಿಸುವೆ ಎಂದರು.

     

    ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ (Panchamasali Reservation) ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ಎಲ್ಲ ಪಂಚಮಸಾಲಿ ಸಮುದಾಯದ ಶಾಸಕರು, ಸಚಿವರು ಮುಖ್ಯಮಂತ್ರಿಗಳನ್ನು ಭೇಟಿ ಆಗಲಿದ್ದೇವೆ. ಅಧಿವೇಶನದ ಸಮಯದಲ್ಲಿ ಸ್ವಾಮೀಜಿ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಆಗುತ್ತೇವೆ. ಎಲ್ಲಾ ನಾಯಕರು ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾಯಕರುಗಳು ಚರ್ಚಿಸಿ ಒಂದು ಹಂತಕ್ಕೆ ಬರುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮಧು ಬಂಗಾರಪ್ಪ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ್ದವನ ವಿರುದ್ಧ ಸುಮೊಟೋ ಕೇಸ್

    ಲಕ್ಷ್ಮಣ ಸವದಿ (Laxman Savadi) ಸಹ ಹಿರಿಯರಿದ್ದಾರೆ. ಈ ಹಿಂದೆ ಡಿಸಿಎಂ ಸ್ಥಾನವನ್ನು ನಿಭಾಯಿಸಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಿದರೆ ನನಗೂ ಸಂತೋಷವಿದೆ. ಹಾಸನದಲ್ಲಿ ಸಿದ್ರಾಮೋತ್ಸವ ಮಾದರಿಯಲ್ಲಿ ಕಾರ್ಯಕ್ರಮಕ್ಕೆ ಆಯೋಜನೆ ವಿಚಾರ ಇದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

     

  • ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಿಂತಿಲ್ಲ- ಪ್ರಿಯಾಂಕ್ ಖರ್ಗೆ

    ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಿಂತಿಲ್ಲ- ಪ್ರಿಯಾಂಕ್ ಖರ್ಗೆ

    ಬೆಂಗಳೂರು: ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಿಂತಿಲ್ಲ ಎಂದು ಕಾಂಗ್ರೆಸ್ (Congress) ಶಾಸಕ ರಾಜು ಕಾಗೆ ಹೇಳಿಕೆ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರತಿಕ್ರಿಯಿಸಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕ ರಾಜು ಕಾಗೆ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಿಂತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ಗೋಮುಖ ವ್ಯಾಘ್ರ – ವಿಪಕ್ಷ ನಾಯಕ ಅಶೋಕ್‌ ಲೇವಡಿ

    ಪ್ರತಿಕ್ರಿಯಿಸಿದ ಅವರು, ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ಕಾಗೆ ಅವರ ಹೇಳಿಕೆ ನಾನು ನೋಡಿಲ್ಲ. ನಮ್ಮ ಸರ್ಕಾರ ಬಂದಾಗಿನಿAದ ಬರಕ್ಕೆ ಅನುದಾನ ಕೊಟ್ಟಿದ್ದೇವೆ. ರೈತರಿಗೆ ವಿಮೆ ಕೂಡಾ ಜಾಸ್ತಿ ಕ್ಲೈಮ್ ಆಗಿದೆ. ಯಾವ ಹಿನ್ನಲೆಯಲ್ಲಿ ಅವರು ಹೇಳಿದ್ದಾರೆ ಗೊತ್ತಿಲ್ಲ. ರಾಜ್ಯದಲ್ಲಿ ಯಾವ ಕೆಲಸವೂ ನಿಂತಿಲ್ಲ. ಜಲಜೀವನ್ ಮಿಷನ್, ಪ್ರಗತಿ ಪಥ, ಕಲ್ಯಾಣ ಪಥ ಸೇರಿ ಎಲ್ಲಾ ಕೆಲಸಗಳು ನಡೆಯುತ್ತಿದೆ ಎಂದರು.

    ನಮಗೆ ಗ್ಯಾರಂಟಿ ಯೋಜನೆಗಳ ಜವಾಬ್ದಾರಿ ಇದೆ. ಗ್ಯಾರಂಟಿಯಿಂದ ಜನರಿಗೆ ಆರ್ಥಿಕ ಸ್ಥಿರತೆ ಬರುತ್ತಿದೆ. ಜನರ ಜೀವನ ಉತ್ತಮವಾಗಿ ನಡೆಯುತ್ತಿದೆ. ಅಭಿವೃದ್ಧಿ ನಿಂತ ನೀರು ಆಗುವುದಿಲ್ಲ. ಶಾಸಕರು ಏನೇ ಸಮಸ್ಯೆಯಿದ್ದರೂ ಸಿಎಂ ಜೊತೆ ಮಾತಾಡಲಿ ಎಂದು ಸಲಹೆ ಕೊಟ್ಟಿದ್ದಾರೆ. ಇದನ್ನೂ ಓದಿ: ಬಿಜೆಪಿ ಎಂಪಿಗಳಿಗೆ ಮೋದಿ, ಅಮಿತ್ ಶಾ ಕಂಡ್ರೆ ಭಯ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

     

  • ಬಸ್ ಟಿಕೆಟ್‌ ದರ ಏರಿಕೆ ಸದ್ಯಕ್ಕಿಲ್ಲ : ರಾಮಲಿಂಗಾ ರೆಡ್ಡಿ

    ಬಸ್ ಟಿಕೆಟ್‌ ದರ ಏರಿಕೆ ಸದ್ಯಕ್ಕಿಲ್ಲ : ರಾಮಲಿಂಗಾ ರೆಡ್ಡಿ

    ಬೆಂಗಳೂರು: ಬಸ್ ಟಿಕೆಟ್‌ ದರ ಏರಿಕೆ ಸದ್ಯಕ್ಕಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜು ಕಾಗೆ (Raju Kage) ದರ ಏರಿಕೆ ಬಗ್ಗೆ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಸದ್ಯ ಬಸ್ ಟಿಕೆಟ್ ದರ ಏರಿಕೆ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದು ತಿಳಿಸಿದರು.

    ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ರಾಜು ಕಾಗೆ ಮತ್ತು ಕೆಎಸ್‌ಆರ್‌ಟಿಸಿ ನಿಗಮ ಅಧ್ಯಕ್ಷ ಶ್ರೀನಿವಾಸ್‌ (Srinivas) ಅವರು ದರ ಏರಿಕೆಯ ಬಗ್ಗೆ ಮಾತನಾಡಿದ್ದರು. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂಗೆ 10,121 ಕ್ಯುಸೆಕ್‌ ಒಳಹರಿವು

    ರಾಜು ಕಾಗೆ ಹೇಳಿದ್ದೇನು?
    ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಡಿಸೇಲ್ ಹಾಗೂ ಬಸ್ ಬಿಡಿ ಭಾಗಗಳ ದರ ಕೂಡ ಹೆಚ್ಚಾಗಿದೆ. ಕಳೆದ 10 ವರ್ಷಗಳಿಂದ ಟಿಕೆಟ್ ದರ ಏರಿಕೆ ಮಾಡಿಲ್ಲ. ಶಕ್ತಿ ಯೋಜನೆಯಿಂದ ನಾವು ನಷ್ಟದಲ್ಲಿದ್ದೇವೆ. ಆದರೂ ನಾವು ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಭಾರೀ ಮಳೆಗೆ ಕುಮಾರಧಾರ ಸ್ನಾನಘಟ್ಟ ಮುಳುಗಡೆ – ನದಿಗೆ ಇಳಿಯದಂತೆ ಭಕ್ತಾದಿಗಳಿಗೆ ಸೂಚನೆ

    ಶ್ರೀನಿವಾಸ್‌ ಹೇಳಿದ್ದೇನು?
    ಕಳೆದ ತ್ರೈಮಾಸಿಕದಲ್ಲಿ 295 ಕೋಟಿ ರೂ. ನಷ್ಟವಾಗಿದೆ. ಟಿಕೆಟ್‌ ದರ (Ticket Price) ಏರಿಸದೇ ಇದ್ದರೆ ಕೆಎಸ್‌ಆರ್‌ಟಿಸಿ (KSRTC) ಸಂಸ್ಥೆ ಉಳಿಯುವುದಿಲ್ಲ. ಸದ್ಯದಲ್ಲೇ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗುವುದು. ಮೊನ್ನೆ ನಿಗಮದ ಮೀಟಿಂಗ್ ಮುಗಿದಿದ್ದು 15-20% ದರ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಸಿಎಂ ಮುಂದೆ ಇಟ್ಟಿದ್ದೇವೆ ಎಂದು ಮಾಹಿತಿ ನೀಡಿದ್ದರು.

     

  • ಶಕ್ತಿ ಯೋಜನೆಯಿಂದ ನಷ್ಟದಲ್ಲಿದ್ದೇವೆ, ಬಸ್ ಟಿಕೆಟ್ ದರ ಹೆಚ್ಚಿಸುವ ಚಿಂತನೆ: ರಾಜು ಕಾಗೆ

    ಶಕ್ತಿ ಯೋಜನೆಯಿಂದ ನಷ್ಟದಲ್ಲಿದ್ದೇವೆ, ಬಸ್ ಟಿಕೆಟ್ ದರ ಹೆಚ್ಚಿಸುವ ಚಿಂತನೆ: ರಾಜು ಕಾಗೆ

    ಬೆಳಗಾವಿ: ಬಸ್ ಟಿಕೆಟ್ ದರ ಹೆಚ್ಚಿಸುವ ಚಿಂತನೆಯಲ್ಲಿದ್ದೇವೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ (Raju Kage) ತಿಳಿಸಿದ್ದಾರೆ.

    ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಂತರ ಬಸ್ ಟಿಕೆಟ್ ದರ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿರುವ ಬಗ್ಗೆ ರಾಜು ಕಾಗೆ ಸುಳಿವು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಡಿಸೇಲ್ ಹಾಗೂ ಬಸ್ ಸ್ಪೇರ್ ಪಾರ್ಟ್ಸ್‌ಗಳ ದರ ಕೂಡ ಹೆಚ್ಚಾಗಿದೆ. ಕಳೆದ 10 ವರ್ಷಗಳಿಂದ ಟಿಕೆಟ್ ದರ ಏರಿಕೆ ಮಾಡಿಲ್ಲ. ಶಕ್ತಿ ಯೋಜನೆಯಿಂದ ನಾವು ನಷ್ಟದಲ್ಲಿದ್ದೇವೆ. ಆದರೂ ನಾವು ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ಶಂಕರ್‌ ನಾಗ್‌, ಅಪರ್ಣಾ ಹೆಸರಿಡಿ: ಸರ್ಕಾರಕ್ಕೆ ಯತ್ನಾಳ್‌ ಆಗ್ರಹ

    ನಿಗಮದ ಆಸ್ತಿಗಳನ್ನು ಪರಭಾರೆ ಮಾಡ್ತೀವಿ. ಸಂಸ್ಥೆಗೆ ಸೇರಿದ ಹಳೆ ಬಿಲ್ಡಿಂಗ್ ನವೀಕರಿಸಿ ಬಾಡಿಗೆ ಕೊಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

    ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಕೆಲ ವಾರಗಳ ಹಿಂದೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಟ್ಯಾಕ್ಸ್ ಹೆಚ್ಚಳ ಹಿನ್ನೆಲೆ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂ. ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಿಸಿದೆ. ಈ ಹಿಂದೆ ಟ್ಯಾಕ್ಸ್ ದರ ಪೆಟ್ರೋಲ್- 25.92% ಇದ್ದದ್ದು, ಈಗ 29.84% ಗೆ ಏರಿಕೆ (3.9% ಹೆಚ್ಚಳ)ಯಾಗಿದೆ. ಅಂತೆಯೇ ಡಿಸೇಲ್ ಈ ಹಿಂದೆ- 14.34% ಇದ್ದದ್ದು, ಈಗ 18.44%ಗೆ ಏರಿಕೆ ಕಂಡಿದೆ (4.1% ರಷ್ಟು ಏರಿಕೆ). ಇದನ್ನೂ ಓದಿ: ಯಾದಗಿರಿಯಲ್ಲಿ ಕಲುಷಿತ ನೀರು ಸೇವಿಸಿ 9 ಮಂದಿ ಅಸ್ವಸ್ಥ – ಕಾಕಲವಾರ ಗ್ರಾಪಂ ಪಿಡಿಒ ಅಮಾನತು