Tag: ರಾಜು ಕನ್ನಡ ಮೀಡಿಯಂ

  • ಬಿಟೌನ್‍ಗೆ ಪಯಣ ಬೆಳೆಸಿದ ರಾಜು ಕನ್ನಡ ಮೀಡಿಯಂ

    ಬಿಟೌನ್‍ಗೆ ಪಯಣ ಬೆಳೆಸಿದ ರಾಜು ಕನ್ನಡ ಮೀಡಿಯಂ

    ಬೆಂಗಳೂರು: ಕನ್ನಡ ಕಂಪಿನ ಅಚ್ಚಕನ್ನಡದ ‘ರಾಜು ಕನ್ನಡ ಮೀಡಿಯಂ’ ಸಿನಿಮಾ ಈಗ ಬಾಲಿವುಡ್ ಬೆಳ್ಳಿಪರದೆಗೆ ರಿಮೇಕ್ ಆಗಿ ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ಹಿಂದಿ ವರ್ಷನ್‍ನಲ್ಲಿ ಬಿಟೌನ್ ದಂಗಲ್ ಸ್ಟಾರ್ ಅಮೀರ್ ಖಾನ್ ಬಣ್ಣಹಚ್ಚೋ ಸಾಧ್ಯತೆಗಳಿವೆ ಎಂಬ ಸುದ್ದಿ ಸಿನಿ ಅಂಗಳದಲ್ಲಿ ಹರಿದಾಡುತ್ತಿದೆ.

    ಕನ್ನಡದ ಸಿನಿಮಾಗಳಿಗೆ ಮಾರುಕಟ್ಟೆ ಇಲ್ಲ, ಬಿಗ್ ಬಜೆಟ್‍ನಲ್ಲಿ ಸಿನಿಮಾ ಮಾಡಿದ್ರೆ ಹಾಕಿದ ಬಂಡವಾಳ ವಾಪಸ್ ಬರಲ್ಲ ಎಂಬ ಮಾತುಗಳಿಗೆ ಕನ್ನಡದ ರಾಜು ಉತ್ತರ ಕೊಟ್ಟಿದ್ದಾನೆ. ಈಗಾಗಲೇ ರಿಲೀಸ್ ಆಗಿರುವ ಕನ್ನಡದ ಹಲವು ಸಿನಿಮಾಗಳು ಬಾಕ್ಸ್ ಆಫೀಸ್‍ನಲ್ಲಿ ದಾಖಲೆ ಬರೆಯುತ್ತಿವೆ. ದಾಖಲೆ ಬರೆಯುವುದರ ಜೊತೆಗೆ ಪರಭಾಷೆಯ ಫಿಲ್ಮ್ ಮೇಕರ್ಸ್ ಕನ್ನಡದತ್ತ ತಿರುಗಿ ನೋಡುವಂತೆ ಮಾಡುತ್ತಿವೆ.

    ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ, ಗೋಧಿಬಣ್ಣ ಸಾಧಾರಣ ಮೈಕಟ್ಟು ಕನ್ನಡಿಗರನ್ನು ಮಾತ್ರವಲ್ಲ ತೆಲುಗು, ತಮಿಳು ಮೂವಿ ಮೇಕರ್ಸ್ ಮೆಚ್ಚುವಂತೆ ಮೂಡಿಬಂದಿತ್ತು. ಶುಕ್ರವಾರ ಭರ್ಜರಿ ಓಪನಿಂಗ್ ಪಡೆದುಕೊಂಡ ನರೇಶ್ ಸಾರಥ್ಯದ ರಾಜು ಕನ್ನಡ ಮೀಡಿಯಂ ಸಿನಿಮಾ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ. ರಾಜು ಕಥೆ ಸಕ್ಸಸ್ ಆಯ್ತು ಅನ್ನೋ ಖುಷಿಯಲ್ಲಿದ್ದ ಚಿತ್ರತಂಡಕ್ಕೆ ಮತ್ತೊಂದು ಬಂಪರ್ ಆಫರ್ ಸಿಕ್ಕಿದೆ. ಬಿಟೌನ್‍ನ ಅಮೀರ್ ಖಾನ್ ನಿರ್ಮಾಣ ಸಂಸ್ಥೆಯ ಸದಸ್ಯರು ರಾಜು ಕನ್ನಡ ಮೀಡಿಯಂ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

    ಈಗಾಗಲೇ ಅಮೀರ್ ಖಾನ್ ಚಿತ್ರ ಸಂಸ್ಥೆ ಜೊತೆ ಒಂದು ಸುತ್ತಿನ ಮಾತುಕತೆ ಆಗಿದೆ ಎನ್ನಲಾಗಿದೆ. ಅಮೀರ್ ಆಪ್ತ ಸಲಹೆಗಾರ ವರುಣ್ ಓಕೆ ಮಾಡಿದ್ರೆ ರಾಜು ಬಾಲಿವುಡ್‍ಗೆ ಹಾರೋದು ಕನ್ಫರ್ಮ್ ಆಗಲಿದೆ. ಇನ್ನು ಕನ್ನಡದಲ್ಲಿ ಕಿಚ್ಚ ಸುದೀಪ್ ಮಾಡಿರೋ ಪಾತ್ರವನ್ನ ಅಮೀರ್ ಖಾನ್ ಮಾಡ್ತಾರೆ ಅನ್ನೋ ಸುಳಿವು ಕೂಡ ಸಿಕ್ಕಿದೆ.

  • `ರಾಜು ಕನ್ನಡ ಮೀಡಿಯಂ’ ಸಿನಿಮಾ ರಿಲೀಸ್ ಗೆ ಮತ್ತೆ ಎದುರಾಯ್ತು ವಿಘ್ನ

    `ರಾಜು ಕನ್ನಡ ಮೀಡಿಯಂ’ ಸಿನಿಮಾ ರಿಲೀಸ್ ಗೆ ಮತ್ತೆ ಎದುರಾಯ್ತು ವಿಘ್ನ

    ಬೆಂಗಳೂರು: ಚಂದನವನದಲ್ಲಿ ಟ್ರೇಲರ್ ನಿಂದ ಸಖತ್ ಸದ್ದು ಮಾಡುತ್ತಿರುವ `ರಾಜು ಕನ್ನಡ ಮೀಡಿಯಂ’ ಸಿನಿಮಾ ತೆರೆಗೆ ಬರಲು ಮತ್ತೊಂದು ಕಂಟಕ ಎದುರಾಗಿದೆ. ಸಿನಿಮಾ ರಿಲೀಸ್ ಬಿಡುಗಡೆಗೆ ತಡೆಯಾಜ್ಞೆ ಕೋರಿ ನಿರ್ಮಾಪಕ ಡಾ.ಎನ್.ಲಕ್ಷ್ಮೀಪತಿ ಬಾಬು ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

    ಸಿನಿಮಾದ ನಿರ್ಮಾಣದ ಸಮಯದಲ್ಲಿ ನಿರ್ಮಾಪಕರಾದ ಸುರೇಶ್ ಮತ್ತು ಲಕ್ಷ್ಮೀಪತಿ ಬಾಬು ಇಬ್ಬರು ಒಪ್ಪಂದದ ಮೇರೆಗೆ ಸುರೇಶ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತರಲು ಯೋಚಿಸಿದ್ದರು. ಸುರೇಶ್ ಬ್ಯಾನರ್ ಅಡಿಯಲ್ಲಿ ಇಬ್ಬರು ನಿರ್ಮಾಪಕರು 60:40 ಅನುಪಾತದಲ್ಲಿ ಬಂಡವಾಳವನ್ನು ಹೂಡಿಕೆ ಮಾಡಿ ಸಿನಿಮಾ ಮಾಡಲು ನಿರ್ಧರಿಸಿದ್ದರು ಎಂದು ಹೇಳಲಾಗುತ್ತಿದೆ.

    ಸದ್ಯ ಸುರೇಶ್ ಅವರು ನನ್ನಿಂದ ಶೇ.60ರಷ್ಟು ಬಂಡವಾಳವನ್ನು ಪಡೆದುಕೊಂಡು, ಸಿನಿಮಾವನ್ನು `ಸುರೇಶ್ ಆರ್ಟ್ಸ್’ನಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ ಎಂದು ಲಕ್ಷ್ಮೀಪತಿ ಬಾಬು ಆರೋಪಿಸುತ್ತಿದ್ದಾರೆ. ಇತ್ತ ಸುರೇಶ್ ಇಂದು ಕೋರ್ಟ್ ರಜೆಯಿದ್ದು, ನಾಳೆ ಎಲ್ಲವನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

    ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ಗುರುನಂದನ್ ನಾಯಕ ನಟನಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್, ಸಾಧು ಕೋಕಿಲ, ಓಂ ಪ್ರಕಾಶ್, ಚಿಕ್ಕಣ್ಣ, ಕುರಿ ಪ್ರತಾಪ್ ಸೇರಿದಂತೆ ದೊಡ್ಡ ತಾರಾಬಳಗವನ್ನು ಸಿನಿಮಾ ಹೊಂದಿದೆ. ಸಿನಿಮಾದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನವನ್ನು ಸೆಳೆಯಲಿದ್ದಾರೆ. ಸಿನಿಮಾ ನರೇಶ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಕಿರಣ್ ರವೀಂದ್ರನಾಥ್ ಸಂಗೀತ ನೀಡಿದ್ದಾರೆ.

     

  • ನಗೆಗಡಲಿನಲ್ಲಿ ಕನ್ನಡದ ಕಂಪು ಪಸರಿಸಲು ಬರ್ತಿದ್ದಾನೆ `ಕನ್ನಡ ಮೀಡಿಯಂ ರಾಜು’

    ನಗೆಗಡಲಿನಲ್ಲಿ ಕನ್ನಡದ ಕಂಪು ಪಸರಿಸಲು ಬರ್ತಿದ್ದಾನೆ `ಕನ್ನಡ ಮೀಡಿಯಂ ರಾಜು’

    ಬೆಂಗಳೂರು: ಫಸ್ಟ್ ರ‍್ಯಾಂಕ್ ಖ್ಯಾತಿಯ ಗುರುನಂದನ್ ಅಭಿನಯದ `ರಾಜು ಕನ್ನಡ ಮೀಡಿಯಂ’ ಟ್ರೇಲರ್ ಇಂದು ಬಿಡುಗಡೆಯಾಗಿದ್ದು, ನೋಡುಗರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ.

    ಕನ್ನಡ ಮೀಡಿಯಂ ನಲ್ಲಿ ಕಲಿತಿರುವ ಹುಡುಗ ರಾಜಧಾನಿಗೆ ಬಂದು ಹೇಗೆ ಜೀವನ ನಡೆಸುವುದರ ಜೊತೆಗೆ ಕನ್ನಡದ ಕಂಪನ್ನು ಹೇಗೆ ಪಸರಿಸುತ್ತಾನೆ ಎಂಬುದೇ ಕಥೆಯ ಜೀವಾಳವಾಗಿದೆ. ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡಿದಾಗಿನಿಂದಲೂ ಸ್ಯಾಂಡಲ್‍ವುಡ್ ನಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿತ್ತು.

    ಈ ಹಿಂದೆ ಗುರುನಂದನ್ ನಟನೆಯ `ಫಸ್ಟ್ ರ‍್ಯಾಂಕ್ ರಾಜು’ ಭರ್ಜರಿ ಯಶಸ್ಸನ್ನು ಕಂಡಿತ್ತು. ಕನ್ನಡ ಮೀಡಿಯಂ ರಾಜು ಮೊದಲ ಸಿನಿಮಾದ ಮುಂದುವೆರಿದ ಭಾಗವೇ ಎಂದು ಹೇಳಲಾಗಿತ್ತು, ಆದರೆ ಇದು ಸಂಪೂರ್ಣ ವಿಭಿನ್ನ ಕಥೆಯನ್ನು ಒಳಗೊಂಡಿದೆ. ಗುರು ಅವರ ಕನ್ನಡದ ಬಗೆಗಿನ ಒಲವು, ಸಿನಿಮಾದಲ್ಲಿ ಬರುವ ಕಾಮಿಡಿ ದೃಶ್ಯಗಳು ಎಲ್ಲರನ್ನು ನಗಿಸುವುದು ಪಕ್ಕಾ ಆಗಿದೆ.

    ಚಿಕ್ಕಣ್ಣ, ಕುರಿ ಪ್ರತಾಪ್ ನಗಿಸಲು ರಾಜುವಿಗೆ ಸಾಥ್ ನೀಡಿದ್ದಾರೆ. ಸಿನಿಮಾದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನವನ್ನು ಸೆಳೆಯಲಿದ್ದಾರೆ. ಸಿನಿಮಾ ನರೇಶ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಕಿರಣ್ ರವೀಂದ್ರನಾಥ್ ಸಂಗೀತ ನೀಡಿದ್ದಾರೆ. ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್, ಸಾಧು ಕೋಕಿಲ, ಓಂ ಪ್ರಕಾಶ್ ಸೇರಿದಂತೆ ದೊಡ್ಡ ತಾರಾಬಳಗವನ್ನು ಸಿನಿಮಾ ಹೊಂದಿದೆ.

  • ಕಿಚ್ಚ ಬರ್ತ್ ಡೇಗೆ ಸ್ಪೆಷಲ್ ಟೀಸರ್ ರಿಲೀಸ್!

    ಕಿಚ್ಚ ಬರ್ತ್ ಡೇಗೆ ಸ್ಪೆಷಲ್ ಟೀಸರ್ ರಿಲೀಸ್!

    ಬೆಂಗಳೂರು: ನಾಳೆ 43ನೇ ಬರ್ತ್ ಡೇ ಆಚರಿಸಿಕೊಳ್ಳುತ್ತಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ರಾಜು ಕನ್ನಡ ಮೀಡಿಯಂ ತಂಡ ಭರ್ಜರಿಯಾಗಿ ವಿಷ್ ಮಾಡಿದೆ.

    ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ರಾಜು ಕನ್ನಡ ಮೀಡಿಯಂ ತಂಡ ಕಿಚ್ಚ ಸುದೀಪ್ ಗೆ ವಿಷ್ ಮಾಡಿದ್ದು ಸುದೀಪ್ ಟೀಸರ್ ವಿಡಿಯೋ ಅಭಿಮಾನಿಗಳಲ್ಲಿ ಕಿಚ್ಚು ಮೂಡಿಸಿದೆ. ರಾಜು ಕನ್ನಡ ಮೀಡಿಯಂ ಟೀಸರ್ ನಲ್ಲಿ ಸುದೀಪ್ ನೋಡಿದ ಅಭಿಮಾನಿಗಳು ಕಿಚ್ಚನ ವಿಶೇಷ ಗೆಟಪ್ ನೋಡಿ ಸಂಭ್ರಮಿಸುತ್ತಿದ್ದಾರೆ.

    ಟೀಸರ್ ಬಿಡುಗಡೆಯಾಗುತ್ತಿದ್ದಂತೆ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಕಿಚ್ಚನ ಫೋಟೋವನ್ನು ಶೇರ್ ಮಾಡುತ್ತಿದ್ದಾರೆ.