Tag: ರಾಜುಗೌಡ

  • ರಾಜಣ್ಣ ವಜಾ ಹಿಂದೆ ಮಹಾನಾಯಕನ ಪಾತ್ರ ಇದೆ: ರಾಜುಗೌಡ ಹೊಸಬಾಂಬ್

    ರಾಜಣ್ಣ ವಜಾ ಹಿಂದೆ ಮಹಾನಾಯಕನ ಪಾತ್ರ ಇದೆ: ರಾಜುಗೌಡ ಹೊಸಬಾಂಬ್

    – ನಾಗೇಂದ್ರ, ರಾಜಣ್ಣ ಆಯ್ತು, ನೆಕ್ಸ್ಟ್‌ ಸತೀಶ್ ಜಾರಕಿಹೊಳಿ ಮುಗಿಸಲು ಪ್ಲ್ಯಾನ್- ಮಾಜಿ ಸಚಿವ

    ಯಾದಗಿರಿ: ಕೆ.ಎನ್.ರಾಜಣ್ಣ (K.N.Rajanna) ಅವರು ಪ್ರಭಾವಿ ನಾಯಕ. ಅವರ ವಜಾ ಹಿಂದೆ ಮಹಾನಾಯಕನ ಪಾತ್ರ ಇದೆ ಎಂದು ಮಾಜಿ ಸಚಿವ ರಾಜುಗೌಡ (Rajugowda) ಹೊಸ ಬಾಂಬ್ ಸಿಡಿಸಿದ್ದಾರೆ.

    ಸುರಪುರದಲ್ಲಿ ಮಾತನಾಡಿದ ಅವರು, ರಾಜಣ್ಣನ ಬಳಿಕ ಸತೀಶ್ ಜಾರಕಿಹೊಳಿ ಮುಗಿಸಲು ಪ್ಲಾನ್ ಇದೆ. ನಾಗೇಂದ್ರ, ರಾಜಣ್ಣ ಆಯ್ತು ನೆಕ್ಸ್ಟ್ ಸತೀಶ್ ಜಾರಕಿಹೊಳಿ ಸರದಿ. ಓಪನ್ ಆಗಿಯೇ ಹೇಳ್ತೀನಿ. ನಮ್ಮ ಕಮ್ಯುನಿಟಿಯಲ್ಲಿ ನಾವು ಹುಟ್ಟತ್ತಲೇ ನಾಯಕರು. ನಮ್ಮಲ್ಲಿ ಒಬ್ಬರೇ ನಾಯಕರಾಗಬೇಕು ಅಂತೇನಿಲ್ಲ. ರಾಜಣ್ಣ ಮಂತ್ರಿ ಸ್ಥಾನದಿಂದ ಇಳಿದರು ಅಂದ್ರೆ ನಮ್ಮಲ್ಲೇ ಒಬ್ಬರಿಗೆ ಸಿಗುತ್ತೆ ಅಂತ ಪ್ಲ್ಯಾನ್ ಹಾಕ್ತೀವಿ. ಮಂತ್ರಿ ಸ್ಥಾನ ಕೊಡುವ ಆಸೆಯನ್ನ ಮೇಲಿನವರು ತೋರಿಸಿ ಬಿಡ್ತಾರೆ. ನಾನ್ ಮಂತ್ರಿ ಆಗ್ತೀನಿ, ಯಾಕ್ ಇದನ್ನ ಮಾಡೋಣ ಅಂತೀವಿ. ನಮ್ಮಲ್ಲಿ ಒಗ್ಗಟ್ಟು ಇಲ್ಲದೇ ಇರೋದಕ್ಕೆ ರಮೇಶ್ ಜಾರಕಿಹೊಳಿ ಮೇಲೂ ಆ ಕೆಲಸ ಆಯ್ತು. ನಾಗೇಂದ್ರನ ಮೇಲೂ ಆಯ್ತು.. ಇವತ್ತು ರಾಜಣ್ಣಂದು ಇದೆ. ನೆಕ್ಸ್ಟ್ ಸತೀಶ್ ಅಣ್ಣಂದೂ ಇದೆ. ಬೇಕಾದರೇ ನಾಳೆ ಸತೀಶ್ ಅಣ್ಣಂಗೂ ಈ ರೀತಿ ಆದಾಗ ಪ್ಲೇ ಮಾಡಿ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರು ಹಗೆ ಸಾಧಿಸ್ತಾರೆ ಎಚ್ಚರಿಕೆಯಿಂದ ಇರಬೇಕು: ಸತೀಶ್ ಜಾರಕಿಹೊಳಿ

    ಕಾಂಗ್ರೆಸ್‌ನಲ್ಲಿರುವ 15 ಜನ ವಾಲ್ಮೀಕಿ ಶಾಸಕರು ರಾಜಣ್ಣನ ಪರ ಹೇಳಿಕೆ ಕೊಡ್ರಿ. ಅವಾಗ ಕಾಂಗ್ರೆಸ್ ಹೈಕಮಾಂಡ್ ಬಂದು ಯಥಾಸ್ಥಿತಿ ರಾಜಣ್ಣನಿಗೆ ಸಚಿವ ಸ್ಥಾನ ಕೊಡ್ತಾರೆ. ವಾಲ್ಮೀಕಿ ನಾಯಕರಿಗೆ ನೆಕ್ಸ್ಟ್ ನೀನೆ ಸಿಎಂ ಅಂತ ಕಿವಿಯಲ್ಲಿ ಹೋವಿಟ್ಟು ಹೇಳ್ತಾರೆ. ಆ ಆಸೆಗೆ ಬಿದ್ದು ಇವತ್ತು ಸಮಾಜವೇ ರಾಜಣ್ಣನ ಬಲಿ ಕೊಡುವ ಕೆಲಸ ಆಗ್ತಿದೆ. ರಾಜಣ್ಣನ ದೆಹಲಿಗೆ ಕರೆದುಕೊಂಡು ಹೋಗ್ತಾರೆ, ಸ್ವಲ್ಪ ದಿನ ಹೋಗಲಿ ಅಂತ ರಾಜಣ್ಣನ ಸಮಾಧಾನ ಮಾಡ್ತಾರೆ. ಅದಕ್ಕೇನಾದ್ರೂ ರಾಜಣ್ಣ ಸಮಾಧಾನವಾದರೆ, ಅವರ ರಾಜಕೀಯ ಭವಿಷ್ಯ ಮುಗಿದ ಅಧ್ಯಾಯ. ಸತೀಶಣ್ಣನ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದ ಶಾಸಕರು ರಾಜಣ್ಣ ಪರ ಪ್ರತಿಭಟಿಸಬೇಕು. ಹಾಗೇನಾದರೂ ಮಾಡಿದರೆ ನಾವು ಮುಂದೆ ರಾಜ್ಯದಲ್ಲಿ ರಾಜಕೀಯ ಮಾಡಬಹುದು. ಇಲ್ಲದಿದ್ದರೆ ಈ ಸಮಾಜದವರಲ್ಲಿ ಒಗ್ಗಟ್ಟಿಲ್ಲ, ಇವರಲ್ಲಿ ಹೊಂದಾಣಿಕೆ ಇಲ್ಲ. ಇವರನ್ನ ಹೇಗೆ ಬೇಕಾದರೂ ಬಲಿ ಕಾ ಬಕ್ರಾ ಮಾಡಬಹುದು ಅಂತ ತೆಗೆದುಕೊಂಡು ಹೋಗ್ತಾರೆ ಎಂದು ಎಚ್ಚರಿಸಿದ್ದಾರೆ.

    ರಾಜಣ್ಣ ವಜಾ ಹಿಂದೆ ಮಹಾನಾಯಕನ ಪಾತ್ರ ಇದೆ. ಹಿಂದೆ ಪ್ಲ್ಯಾನ್ ಮಾಡಿ ರಮೇಶ್ ಜಾರಕಿಹೊಳಿ ಅವರನ್ನ ಕೇಳಗೆ ಇಳಿಸಿದ್ರು. ಈಗ ರಾಜಣ್ಣ ಅವರಿಗೆ ಪ್ಲ್ಯಾನ್ ಮಾಡಿದ್ರು, ಆದ್ರೆ ಅವರು ಹನಿಟ್ರ್ಯಾಪ್ ನಿಂದ ಬಚಾವ್ ಆದ್ರು. ಅವರನ್ನ ಹೇಗೆ ಮುಗಿಸಬೇಕು ಅಂತ ಪ್ಲಾö್ಯನ್ ಮಾಡಿದ್ರು. ಯಾಕೆಂದರೆ ರಾಜಣ್ಣ ಅವರ ಕ್ಷೇತ್ರದಲ್ಲಿ ಪ್ರಭಾವಿ ನಾಯಕ. ಅವರ ಮಗನನ್ನ ಪರಿಷತ್ ಸದಸ್ಯನಾಗಿ ಆಯ್ಕೆ ಮಾಡಿಸಿದ್ರು.‌ ಮಹಾನಾಯಕನಿಗೆ ಯಾರು ಎದುರು ಆಗ್ತಾರೆ, ಎಲ್ಲರನ್ನೂ ಮುಗಿಸ್ತಾರೆ. ರಾಹುಲ್ ಗಾಂಧಿಗೆ ಕನ್ನಡ ಬರಲ್ಲ.. ಹೀಗಾಗಿ, ಅವರ ಸ್ಟೇಟ್ಮೆಂಟ್ ತಿರುಚಿ ಅವರಿಗೆ ಹೇಳಿದ್ದಾರೆ. ರಾಜಣ್ಣ ಅವರಿಗೆ ಯಾವ ಪಕ್ಷವೂ ಸಹ ಬೇಡ ಅಂತ ಹೇಳಲ್ಲ. ಮೂರ್ನಾಲ್ಕು ಕ್ಷೇತ್ರದಲ್ಲಿ ಅವರದ್ದು ಪ್ರಭಾವವಿದೆ. ರಾಜಣ್ಣ ಅವರು ಸಾಮಾನ್ಯ ನಾಯಕ ಅಲ್ಲ, ಪ್ರಭಾವಿ ನಾಯಕ. ಕೆಲವರು ಪಕ್ಷದಿಂದ ಮಹಾನಾಯಕ ಆಗಿದ್ದಾರೆ, ಆದ್ರೆ ರಾಜಣ್ಣ ಜನರಿಂದ ಮಹಾನಾಯಕರಾಗಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಕೆ.ಎನ್.ರಾಜಣ್ಣರನ್ನ ಸಂಪುಟದಿಂದ ತೆಗೆದದ್ದು ದುರದೃಷ್ಟಕರ, ಹೀಗೆ ಆಗಬಾರದಿತ್ತು: ಬಿ.ಕೆ.ಹರಿಪ್ರಸಾದ್‌

    ರಾಜಣ್ಣಗೆ ಪಕ್ಷ ಅವಶ್ಯಕತೆ ಇಲ್ಲ, ಪಕ್ಷಕ್ಕೆ ಅವರ ಅವಶ್ಯಕತೆಯಿದೆ. ರಾಜಣ್ಣ ಈ ಅನ್ಯಾಯದ ವಿರುದ್ಧ ಪ್ರತಿಭಟಿಸಿಲ್ಲ ಅಂದ್ರೆ ಅವರದ್ದು ಅಷ್ಟೇ ಅಲ್ಲ ಅವರ ಮಗನ ರಾಜಕೀಯ ಕೂಡ ಮುಗಿದು ಹೋಗುತ್ತದೆ. ಗಟ್ಟಿಯಾಗಿ ಹುಲಿ ತರಹ ಹೊರಗೆ ಬಂದು ಪ್ರತಿಭಟಿಸಿದ್ರು ಹೀರೊ ಆಗ್ತೀರಾ ಎಂದು ಮಾತನಾಡಿದ್ದಾರೆ.

  • ಸುರಪುರ ಉಪಚುನಾವಣೆ; ಬಿಜೆಪಿಯಿಂದ ಮಾಜಿ ಶಾಸಕ ರಾಜುಗೌಡ ಕಣಕ್ಕೆ

    ಸುರಪುರ ಉಪಚುನಾವಣೆ; ಬಿಜೆಪಿಯಿಂದ ಮಾಜಿ ಶಾಸಕ ರಾಜುಗೌಡ ಕಣಕ್ಕೆ

    ಯಾದಗಿರಿ: ಜಿಲ್ಲೆಯ ಸುರಪುರ (Surapura) ವಿಧಾನಸಭೆಗೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ (BJP) ಇಂದು ತನ್ನ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಿದೆ. ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನರಸಿಂಹನಾಯಕ ರಾಜುಗೌಡ (Raju Gowda) ಅವರಿಗೆ ಟಿಕೆಟ್ ನೀಡಿದೆ.

    ನಿರೀಕ್ಷೆಯಂತೆ ರಾಜುಗೌಡಗೆ ಬಿಜೆಪಿ ಪಕ್ಷ ಸುರಪುರ ಉಪಚುನಾವಣೆ ಟಿಕೆಟ್ ನೀಡಿದೆ. ಕಾಂಗ್ರೆಸ್‌ನ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಅಕಾಲಿಕ ನಿಧನದಿಂದ ಸ್ಥಾನ ತೆರವಾಗಿತ್ತು. ಈ ಹಿನ್ನೆಲೆ ಸುರಪುರಕ್ಕೆ ಉಪಚುನಾವಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಮೋದಿ.. ಮೋದಿ ಎನ್ನುವವರ ಕಪಾಳಕ್ಕೆ ಹೊಡೆಯಿರಿ: ಕಾಂಗ್ರೆಸ್‌ ಸಚಿವರ ಹೇಳಿಕೆಗೆ ಬಿಜೆಪಿ ಕಿಡಿ

    ಫೆಬ್ರವರಿ 25ರಂದು ರಾಜಾ ವೆಂಕಟಪ್ಪ ನಾಯಕ ನಿಧನರಾಗಿದ್ದು, ಕಾಂಗ್ರೆಸ್‌ನಿಂದ ರಾಜಾ ವೆಂಕಟಪ್ಪ ನಾಯಕ ಪುತ್ರ ರಾಜಾ ವೇಣುಗೋಪಾಲ ನಾಯಕ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಇತ್ತ ಬಿಜೆಪಿಯಿಂದ ಮಾಜಿ ಶಾಸಕ ರಾಜುಗೌಡ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಮೇ 7ರಂದು ಮತದಾನ ನಡೆಯಲಿದೆ. ಇದನ್ನೂ ಓದಿ: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ – ಅಧಿಕೃತ ಘೋಷಣೆ ಮಾತ್ರ ಬಾಕಿ

  • ಬಿಜೆಪಿ ಶಾಸಕನ ಗೆಲುವಿಗೆ ವಿಚಿತ್ರ ಹರಕೆ – 16 ಕಿಮೀ ದೀರ್ಘದಂಡ ನಮಸ್ಕಾರ ಹಾಕಿದ ಫ್ಯಾನ್ಸ್

    ಬಿಜೆಪಿ ಶಾಸಕನ ಗೆಲುವಿಗೆ ವಿಚಿತ್ರ ಹರಕೆ – 16 ಕಿಮೀ ದೀರ್ಘದಂಡ ನಮಸ್ಕಾರ ಹಾಕಿದ ಫ್ಯಾನ್ಸ್

    ಯಾದಗಿರಿ: ಬಿಜೆಪಿ (BJP) ಶಾಸಕ ರಾಜುಗೌಡ (Raju Gowda) ಚುನಾವಣೆಯಲ್ಲಿ (Election) ಗೆಲ್ಲಬೇಕು ಎಂದು ಅಭಿಮಾನಿಗಳಿಬ್ಬರು ವಿಚಿತ್ರ ಹರಕೆ ಒಪ್ಪಿಸಿದ ಘಟನೆ ಯಾದಗಿರಿಯಲ್ಲಿ (Yadgiri) ನಡೆದಿದೆ.

    ಸುಡುವ ಬಿಸಿಲನ್ನು ಲೆಕ್ಕಿಸದೆ ಅಭಿಮಾನಿಗಳಿಬ್ಬರು ತಮ್ಮ ನೆಚ್ಚಿನ ನಾಯಕನ ಗೆಲುವಿಗಾಗಿ 16 ಕಿಮೀ ದೀರ್ಘದಂಡ ನಮಸ್ಕಾರ ಹಾಕಿದ್ದಾರೆ. ಸುರಪುರ (Surapur) ಮತಕ್ಷೇತ್ರದ ಶಾಸಕ ರಾಜುಗೌಡ ಮತ್ತೊಮ್ಮೆ ಗೆದ್ದು ಬರಲಿ ಎಂದು ಕರ್ನಾಳ ಗ್ರಾಮದ ಮಲ್ಲನಗೌಡ ಹಾಗೂ ಭೀಮಣ್ಣ ಎಂಬ ಇಬ್ಬರು ಅಭಿಮಾನಿಗಳು ಗ್ರಾಮದಿಂದ ಸುರಪುರ ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಹಾಕಿಕೊಂಡು ಬಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮುಳುಗುತ್ತಿರುವ ಹಡಗು: ಬಿಎಸ್‌ವೈ ಕಿಡಿ

    ನಂತರ ಅಭಿಮಾನಿಗಳು ದೇವಾಲಯದಲ್ಲಿ ತಮ್ಮ ನಾಯಕನ ಗೆಲುವಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅಭಿಮಾನಿಗಳು ಶಾಸಕ ರಾಜುಗೌಡ ಅವರ ಪೋಟೋ ಹಿಡಿದು ಅಭಿಮಾನ ಮೆರೆದಿದ್ದಾರೆ.

    ಹರಕೆ ಹೊತ್ತಿದ್ದ ಅಭಿಮಾನಿ ಮಲ್ಲನಗೌಡ ಸುದ್ದಿಗಾರೊಂದಿಗೆ ಮಾತನಾಡಿ, ಸುರಪುರ ಮತಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ರಾಜುಗೌಡ ಮತ್ತೊಮ್ಮೆ ಜನರಿಂದ ಆರಿಸಿ ಬರಬೇಕೆಂದು ಸಂಕಲ್ಪ ಮಾಡಿದ್ದೇವೆ. ಅವರು ಗೆದ್ದು ಬಂದ ನಂತರ ಮತ್ತೊಮ್ಮೆ ದೀರ್ಘದಂಡ ನಮಸ್ಕಾರ ಹಾಕುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ಚುನಾವಣಾ ಪ್ರಚಾರಕ್ಕೆ ಅಮೆರಿಕಾ, ರಷ್ಯಾ ಪ್ರೆಸಿಡೆಂಟ್‍ನ್ನು ಕರ್ಕೊಂಡು ಬರಲಿ: ಹೆಚ್‍ಡಿ ರೇವಣ್ಣ ಟಾಂಗ್

  • ವಾಲ್ಮೀಕಿ ಜಾತ್ರೆಯಲ್ಲಿ ಕಿಚ್ಚನ ಫ್ಯಾನ್ಸ್ ಗಲಾಟೆ : ಸುದೀಪ್ ಬೆನ್ನಿಗೆ ನಿಂತ ಶಾಸಕ ರಾಜುಗೌಡ

    ವಾಲ್ಮೀಕಿ ಜಾತ್ರೆಯಲ್ಲಿ ಕಿಚ್ಚನ ಫ್ಯಾನ್ಸ್ ಗಲಾಟೆ : ಸುದೀಪ್ ಬೆನ್ನಿಗೆ ನಿಂತ ಶಾಸಕ ರಾಜುಗೌಡ

    ನ್ನಡದ ಖ್ಯಾತ ನಟ ಸುದೀಪ್ (Sudeep) ಅಭಿಮಾನಿಗಳು (Fans) ವಾಲ್ಮೀಕಿ (Valmiki) ಜಾತ್ರೆಯಲ್ಲಿ (Jatre) ಮಾಡಿದ ಗಲಾಟೆಗೆ ಸಂಬಂಧಿಸಿದಂತೆ ಸುರಪುರ ಶಾಸಕ ರಾಜುಗೌಡ ಸ್ಪಷ್ಟನೆ ನೀಡಿದ್ದಾರೆ. ಈ ಘಟನೆಗೂ ಸುದೀಪ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದಿರುವ ಅವರು, ಪದೇ ಪದೇ ಆಯೋಜಕರು ಸುದೀಪ್ ಅವರ ಹೆಸರನ್ನು ಹೇಳುತ್ತಿದ್ದರು. ಹಾಗಾಗಿ ಅಭಿಮಾನಿಗಳಿಗೆ ನಿರಾಸೆಯಾಗಿದೆ ಎಂದಿದ್ದಾರೆ. ಸುದೀಪ್ ಅವರಿಗೆ ಆಹ್ವಾನವಿದ್ದರೆ ಯಾವುದೇ ಕಾರಣಕ್ಕೂ ಅವರು ತಪ್ಪಿಸುತ್ತಿರಲಿಲ್ಲ ಎಂದು ನಟನ ಬೆನ್ನಿಗೆ ನಿಂತಿದ್ದಾರೆ.

    ತಮ್ಮ ನೆಚ್ಚಿನ ನಟ ಸುದೀಪ್ ವಾಲ್ಮೀಕಿ ಜಾತ್ರೆಗೆ ಆಗಮಿಸಲಿಲ್ಲ ಎನ್ನುವ ಕಾರಣಕ್ಕಾಗಿ ಕಾರ್ಯಕ್ರಮದಲ್ಲಿ ಹಾಕಿದ್ದ ಕುರ್ಚಿಗಳನ್ನು ಹೊಡೆದು ಹಾಕಿದ್ದಾರೆ. ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿ ನಡೆಯುತ್ತಿದ್ದ ವಾಲ್ಮೀಕಿ ಜಾತ್ರೆಗೆ ಕಿಚ್ಚ ಸುದೀಪ್ ಬರುತ್ತಾರೆ ಎಂದು ಸುತ್ತಲಿನ ಅಭಿಮಾನಿಗಳು ಆಗಮಿಸಿದ್ದರು. ಬೆಳಗ್ಗೆಯಿಂದಲೇ ಸುದೀಪ್ ಫೋಟೋ ಹಿಡಿದುಕೊಂಡು ಜಯಘೋಷ ಮಾಡುತ್ತಿದ್ದರು. ಇದನ್ನೂ ಓದಿ: ಮಾಜಿ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಸಾರಾ; ವಿಶೇಷ ಬೇಡಿಕೆಯಿಟ್ಟ ಫ್ಯಾನ್ಸ್

    ಬೆಳಗ್ಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸುದೀಪ್ ಬರಲಿದ್ದಾರೆ ಎಂದು ಸುದ್ದಿ ಆಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗಿ ಆಗಿದ್ದರು. ಆಗಲೂ ಅಭಿಮಾನಿಗಳು ಕಿಚ್ಚ ಕಿಚ್ಚ ಎಂದು ಘೋಷಣೆ ಕೂಗುತ್ತಿದ್ದರು. ವಾಲ್ಮೀಕಿ ಶ್ರೀಗಳು ಅಭಿಮಾನಿಗಳನ್ನು ಎಷ್ಟೇ ಸಮಾಧಾನಿಸಿದರು. ಪ್ರಯೋಜನಕ್ಕೆ ಬರಲಿಲ್ಲ. ಕೊನೆಯಲ್ಲಿ ಶ್ರೀಗಳು ತಾಳ್ಮೆ ಕಳೆದುಕೊಂಡು ಅಭಿಮಾನಿಗಳ ಮೇಲೆ ಕೋಪಿಸಿಕೊಂಡರು.

    ಅಭಿಮಾನಿಗಳ ಕೂಗು ಹೆಚ್ಚಾದ ಕಾರಣದಿಂದಾಗಿ ಸಂಜೆ ಸುದೀಪ್ ಬರಲಿದ್ದಾರೆ ಎಂದು ಘೋಷಿಸಲಾಯಿತು. ಸಂಜೆಯಾದರೂ ಸುದೀಪ್ ಬಾರದೇ ಇರುವ ಕಾರಣಕ್ಕಾಗಿ ಆಕ್ರೋಶಗೊಂಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಕಿದ್ದ ಕುರ್ಚಿಗಳನ್ನು ಹೊಡೆದು ಹಾಕಿ ಆಕ್ರೋಶ ಹೊರಹಾಕಿದರು. ಅಭಿಮಾನಿಗಳನ್ನು ಸಮಾಧಾನಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುದೀಪ್, ‘ನನಗೆ ಕಾರ್ಯಕ್ರಮಕ್ಕೆ ಯಾವುದೇ ಆಹ್ವಾನವಿರಲಿಲ್ಲ ಮತ್ತು ಕಾರ್ಯಕ್ರಮದ ಬಗ್ಗೆ ಗೊತ್ತೂ ಇರಲಿಲ್ಲ. ಹಾಗಾಗಿ ಬರುವದಕ್ಕೆ ಆಗಲಿಲ್ಲ. ಅಭಿಮಾನಿಗಳ ಈ ನಡೆ ಬೇಸರ ತರಿಸಿದೆ. ಒಪ್ಪಿಕೊಂಡ ಕಾರ್ಯಕ್ರಮವನ್ನು ನಾನು ಯಾವತ್ತೂ ತಪ್ಪಿಸಲಿಲ್ಲ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಿಮಗೆಲ್ಲ ಸ್ವಾತಂತ್ರ್ಯ 1947ರಲ್ಲಿ ಸಿಕ್ಕರೆ ನಮಗೆ 1948ರಲ್ಲಿ ಸಿಕ್ಕಿರೋದು: ರಾಜುಗೌಡ ಆಕ್ರೋಶ

    ನಿಮಗೆಲ್ಲ ಸ್ವಾತಂತ್ರ್ಯ 1947ರಲ್ಲಿ ಸಿಕ್ಕರೆ ನಮಗೆ 1948ರಲ್ಲಿ ಸಿಕ್ಕಿರೋದು: ರಾಜುಗೌಡ ಆಕ್ರೋಶ

    ಬೆಂಗಳೂರು: ರಾಯಚೂರಿನ ನವೋದಯ ಮೆಡಿಕಲ್ ಕಾಲೇಜಿನಲ್ಲಿ 371ಜೆ ಪ್ರಕಾರ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡದ ವಿಚಾರವಾಗಿ ನಿಮಗೆಲ್ಲ ಸ್ವಾತಂತ್ರ್ಯ 1947ರಲ್ಲಿ ಸಿಕ್ಕರೆ ನಮಗೆ 1948ರಲ್ಲಿ ಸಿಕ್ಕಿರೋದು ಎಂದು ವಿಧಾನಸಭೆಯಲ್ಲಿ ಶಾಸಕ ರಾಜುಗೌಡ ಆಕ್ರೋಶ ಹೊರಹಾಕಿದ್ದಾರೆ.

    ರಾಯಚೂರಿನ ನವೋದಯ ಮೆಡಿಕಲ್ ಕಾಲೇಜಿನಲ್ಲಿ 371ಜೆ ಪ್ರಕಾರ ಮೀಸಲಾತಿ ನೀಡದ ವಿಚಾರವಾಗಿ ಶೂನ್ಯವೇಳೆಯಲ್ಲಿ ಶಿವರಾಜ್ ಪಾಟೀಲ್ ಪ್ರಸ್ತಾಪ ಮಾಡಿದರು. ರಾಯಚೂರು ನವೋದಯ ವೈದ್ಯಕೀಯ ಕಾಲೇಜು ಮಂಡಳಿ 371-ಜೆ ಕುತ್ತು ತರುವಂತೆ ನಡೆದುಕೊಂಡಿದೆ. ಹೈದರಾಬಾದ್ ಕರ್ನಾಟಕಕ್ಕೆ ಪ್ರತ್ಯೇಕ ಮೀಸಲಾತಿ ಕೊಡುವುದಕ್ಕೆ ಆಗಲ್ಲ ಎಂದು ಕೋರ್ಟ್‍ನಿಂದ ತಡೆಯಾಜ್ಞೆ ತಂದಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳ ಹಿತ ಕಾಪಾಡಬೇಕೆಂದು ಆಗ್ರಹಿಸಿದರು. ಈ ವೇಳೆ ಧ್ವನಿಗೂಡಿಸಿದ ಶಾಸಕ ರಾಜುಗೌಡ, ನಿಮಗೆಲ್ಲ ಸ್ವಾತಂತ್ರ್ಯ 1947ರಲ್ಲಿ ಸಿಕ್ಕರೆ ನಮಗೆ 1948ರಲ್ಲಿ ಸಿಕ್ಕಿರೋದು 371ಜೆ ನಮಗೆ ಹೋರಾಟದಿಂದ ಬಂದಿರುವುದು, ಇದನ್ನು ಪಡೆದುಕೊಳ್ಳಲು ಬಲಿದಾನ ಆಗಿದೆ ನಮ್ಮ ಸೌಲಭ್ಯ ತೆಗೆದುಕೊಂಡು ನಮ್ಮ ಮಕ್ಕಳಿಗೆ ಮೀಸಲಾತಿ ಕೊಡಲ್ಲ ಅಂದ್ರೆ ಹೇಗೆ? ಪ್ರಶ್ನಿಸಿದರು. ಇದನ್ನೂ ಓದಿ: ಜನ ಆಡಳಿತ ಪಕ್ಷದಲ್ಲಿ ಏನಾಗ್ತಿದೆ ಅಂತ ನೋಡ್ತಿದ್ದಾರೆ: ಯುಟಿ ಖಾದರ್

    ನಮ್ಮ ಕ್ಷೇತ್ರದಲ್ಲಿ ನಾವು ಜನರ ಮುಂದೆ ಹೇಗೆ ಮುಖ ತೋರಿಸುವುದು? ಸರ್ಕಾರದ ವಕೀಲರು ಕೋರ್ಟ್‍ನಲ್ಲಿ ಸಮರ್ಥವಾಗಿ ವಾದ ಮಂಡನೆ ಮಾಡಬೇಕು. ಈ ಬಗ್ಗೆ ಸದನ ಸಮಿತಿ ರಚನೆ ಮಾಡಿ ಎಂದು ರಾಜುಗೌಡ ಆಗ್ರಹಿಸಿದರು.  ಇದನ್ನೂ ಓದಿ: ಫಲಿತಾಂಶಕ್ಕೂ ಮೊದಲೇ ಕಾಂಗ್ರೆಸ್ ಹೈಕಮಾಂಡ್‍ನಿಂದ ಡಿಕೆಶಿಗೆ ಟಾಸ್ಕ್

    ಇದಕ್ಕೆ ಉತ್ತರಿಸಿದ ಸಚಿವ ಡಾ.ಸುಧಾಕರ್, ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಈಗಾಗಲೇ ವಿಧ್ಯಾರ್ಥಿಗಳು ಪ್ರತಿಭಟನೆ ಮಾಡಿದ ಬಳಿಕ ಪ್ರವೇಶಾತಿ ಮಾಡಿಸಿಕೊಂಡಿದ್ದಾರೆ. ಇಂದು ಕೋರ್ಟ್‍ಲ್ಲಿ ಕೇಸ್ ಸಹ ಇದೆ. ಅಡ್ವೋಕೇಟ್ ಜನರಲ್ ಖುದ್ದು ಇಂದು ಕೋರ್ಟ್‍ಲ್ಲಿ ಇದ್ದಾರೆ. ಯಾವುದೇ ಕಾರಣಕ್ಕೂ ಹೈದ್ರಾಬಾದ್ ಕರ್ನಾಟಕಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಸದನಕ್ಕೆ ಭರವಸೆ ನೀಡಿದರು.

  • ರಾಜುಗೌಡ, ಕುಮಾರ್ ಬಂಗಾರಪ್ಪಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಗಳ ಆಗ್ರಹ

    ರಾಜುಗೌಡ, ಕುಮಾರ್ ಬಂಗಾರಪ್ಪಗೆ ಸಚಿವ ಸ್ಥಾನ ನೀಡುವಂತೆ ಅಭಿಮಾನಿಗಳ ಆಗ್ರಹ

    – ರಾಜುಗೌಡ ಅಭಿಮಾನಿಗಳಿಂದ ಎಚ್ಚರಿಕೆಯ ಸಂದೇಶ

    ಯಾದಗಿರಿ/ಶಿವಮೊಗ್ಗ: ಶಾಸಕರಾದ ರಾಜೂಗೌಡ ಮತ್ತು ಕುಮಾರ್ ಬಂಗಾರಪ್ಪ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಕುಮಾರ್ ಬಂಗಾರಪ್ಪ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ಸಚಿವ ಸ್ಥಾನ ಸಿಗುವಂತೆ ಪ್ರಾರ್ಥಿಸಿದರು.

    ಸೊರಬ ತಾಲೂಕಿನ ಮತ್ತು ರಾಜ್ಯದ ಅಭಿವೃದ್ಧಿ, ಪಕ್ಷದ ಸಂಘಟನೆಗಾಗಿ, ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ಅವರಿಗೆ ಸಚಿವ ಸ್ಥಾನ ಸಿಗಬೇಕು ಎಂಬ ಹಿನ್ನೆಲೆಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಅವರ ಹೆಸರಿನಲ್ಲಿ ಅವರ ಕುಲ ದೇವರಾದ ತಾಲೂಕಿನ ಮಂಚಿ ಆಂಜನೇಯ ಸ್ವಾಮಿಗೆ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು. ಈ ಸಂಧರ್ಭದಲ್ಲಿ ಉದ್ರಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಹನುಮಂತಪ್ಪ, ಸುರೇಶ್, ಸುರೇಂದ್ರ, ಶಿವಮೂರ್ತಿ ಹಲವರು ಹಾಜರಿದ್ದರು. ಇದನ್ನೂ ಓದಿ: ಶೆಟ್ಟರ್ ರೀತಿ ಮಂತ್ರಿ ಸ್ಥಾನ ಬೇಡ ಎನ್ನಲ್ಲ: ಈಶ್ವರಪ್ಪ

     

    ರಾಜುಗೌಡ ಅಭಿಮಾನಿಗಳಿಂದ ಪ್ರತಿಭಟನೆ: ಸುರಪುರ ಶಾಸಕ ರಾಜುಗೌಡ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿ ಯಾದಗಿರಿಯಲ್ಲಿ ಶಾಸಕ ರಾಜುಗೌಡ ಅಭಿಮಾನಿ ಬಳಗವು ಪ್ರತಿಭಟನೆ ನಡೆಸಲಾಯಿತು. ನಗರದ ವಾಲ್ಮೀಕಿ ವೃತ್ತದಲ್ಲಿ ಬಳಗದ ಸದಸ್ಯರು ಸೇರಿ ಹಿಂದುಳಿದ ಜಿಲ್ಲೆ ಯಾದಗಿರಿ ಸಮಗ್ರ ಅಭಿವೃದ್ಧಿ ಗಾಗಿ ಶಾಸಕ ರಾಜುಗೌಡ ಅವರಿಗೆ ಸಚಿವ ಸ್ಥಾನ ನೀಡಿ ಯಾದಗಿರಿ ಜಿಲ್ಲೆಗೆ ಪ್ರಾಮುಖ್ಯತೆ ನೀಡಬೇಕೆಂದು ಬಿಜೆಪಿ ಹೈಕಮಾಂಡಗೆ ಒತ್ತಾಯ ಮಾಡಿದರು.

    ಸಿಎಂ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ರಾಜುಗೌಡ ಅವರಿಗೆ ಸೂಕ್ತ ಸಚಿವ ಸ್ಥಾನ ಒದಗಿಸಿ ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿಗೆ ಸಚಿವ ಸ್ಥಾನ ಒದಗಿಸಬೇಕು. ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಪ್ರತಿಭಟನೆ ನಿರತರು ಎಚ್ಚರಿಕೆ ನೀಡಿದರು.  ಇದನ್ನೂ ಓದಿ: ಡಿಸಿಎಂ ಪಟ್ಟಕ್ಕಾಗಿ ಮತ್ತೆ ಗಡೇ ದುರ್ಗಾದೇವಿ ಮೊರೆಹೋದ ಶ್ರೀರಾಮುಲು

  • ಜನರಿಗೆ ಮೋಸ ಮಾಡುವ ಪಡಿತರ ಅಂಗಡಿಗಳ ಮೇಲೆ 420 ಕೇಸ್

    ಜನರಿಗೆ ಮೋಸ ಮಾಡುವ ಪಡಿತರ ಅಂಗಡಿಗಳ ಮೇಲೆ 420 ಕೇಸ್

    ಯಾದಗಿರಿ: ಕೊರೊನಾ ಲಾಕ್‍ಡೌನ್ ಸಮಯವನ್ನು ದುರ್ಬಳಕೆ ಮಾಡಿಕೊಳ್ಳುವ ಪಡಿತರ ಅಂಗಡಿಗಳ ಮೇಲೆ 420 ಕೇಸ್ ದಾಖಲು ಮಾಡಲಾಗುತ್ತದೆ ಎಂದು ಪಶುಸಂಗೋಪನೆ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾನ್ ಎಚ್ಚರಿಕೆ ನೀಡಿದ್ದಾರೆ.

    ಯಾದಗಿರಿಯ ಸುರಪುರ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಅವರು, ಪಡಿತರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಉಚಿತವಾಗಿ ಜನರಿಗೆ ನೀಡುತ್ತಿವೆ. ಜನರು ತೀರಾ ಕಷ್ಟದಲ್ಲಿದ್ದಾರೆ. ಈ ಸಮಯದಲ್ಲಿ ಜನರಿಗೆ ಮೋಸ ಆಗುವುದನ್ನ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಕಿಡಿಕಾರಿದರು.

    ಸಚಿವರ ಮಾತಿಗೆ ಧ್ವನಿಗೂಡಿಸಿದ ಶಾಸಕ ರಾಜುಗೌಡ ಪಡಿತರ ಅಂಗಡಿಗಳು ಕೊರೊನಾ ಕರ್ಫೂ ಇದ್ದರೂ ಜನರಿಗೆ ಪಡಿತರ ಹಂಚಿಕೆಯಲ್ಲಿ ಮಹಾ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು. ಅಲ್ಲದೇ ಇದನ್ನು ಮಟ್ಟಹಾಕಬೇಕು ಅಂದರೆ ಕೇವಲ ಕ್ರಮ ತೆಗೆದುಕೊಂಡ್ರೆ ಸಾಲದು, ಮುಲಾಜಿಲ್ಲದೆ 420 ಕೇಸ್ ಹಾಕಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.

  • ಭರ್ಜರಿ ಕಬಡ್ಡಿ ಆಡಿದ ಸುರಪುರ ಬಿಜೆಪಿ ಶಾಸಕ ರಾಜುಗೌಡ

    ಭರ್ಜರಿ ಕಬಡ್ಡಿ ಆಡಿದ ಸುರಪುರ ಬಿಜೆಪಿ ಶಾಸಕ ರಾಜುಗೌಡ

    ಯಾದಗಿರಿ: ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಮತ್ತು ತಮ್ಮ ತಾಯಿ ನಿಧನದಿಂದ ಇಷ್ಟು ದಿನ ಮಂಕಾಗಿದ್ದ ಸುರಪುರ ಬಿಜೆಪಿ ಶಾಸಕ ರಾಜುಗೌಡ, ತಮ್ಮ ನೋವನೆಲ್ಲಾ ಮರೆತು ಭರ್ಜರಿ ಕಬಡ್ಡಿಯಾಡಿ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ.

    ಜಿಲ್ಲೆಯ ಸುರಪುರ ಪಟ್ಟಣದ ಕುಂಬಾರಪೇಟೆ ಈಶ್ವರ ದೇವರ ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನ ಮಂಡಳಿ ಹಮ್ಮಿಕೊಂಡಿದ್ದ, ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಗಳ ಉದ್ಘಾಟನೆಗೆ ಶಾಸಕ ರಾಜುಗೌಡ ತೆರಳಿದ್ದರು.

    ಈ ವೇಳೆ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ರಾಜುಗೌಡ ಕೆಲ ಹೊತ್ತು ಕಬಡ್ಡಿ ಆಡಿದ್ದಾರೆ. ಪ್ರೊಫೆಷನಲ್ ಕಬಡ್ಡಿ ಆಟಗಾರರಂತೆ ಡೈ ಹೊಡೆದು ಕಬಡ್ಡಿಯಾಡಿದ ಶಾಸಕ ರಾಜುಗೌಡ ತಮ್ಮ ಅಭಿಮಾನಿಗಳಿಂದ ಸಿಳ್ಳೆ ಚಪ್ಪಾಳೆಗಿಟ್ಟಿಸಿಕೊಂಡರು.

    ಮೂಲತಃ ಕ್ರೀಡಾಪಟುವಾಗಿರುವ ರಾಜುಗೌಡ ಅವರು ಯುವಕರೊಂದಿಗೆ ನುರಿತ ಕಬಡ್ಡಿ ಆಟಗಾರರಂತೆ ಆಟವಾಡುವ ಮೂಲಕ ನೆರೆದಿದ್ದ ಕ್ರೀಡಾಭಿಮಾನಿಗಳನ್ನು ರಂಜಿಸಿ, ಅವರ ಮನ ಗೆದ್ದಿದ್ದಾರೆ. ಈ ಹಿಂದೆಯೂ ರಾಜುಗೌಡ ಮಧ್ಯರಾತ್ರಿ ಯುವಕರೊಂದಿಗೆ ಕಬ್ಬಡಿ ಆಟವಾಡಿದ್ದರು.

  • ಶಾಸಕ ರಾಜು ಗೌಡಗೆ ಮಾತೃ ವಿಯೋಗ

    ಶಾಸಕ ರಾಜು ಗೌಡಗೆ ಮಾತೃ ವಿಯೋಗ

    ಯಾದಗಿರಿ: ಸುರಪುರ ಬಿಜೆಪಿ ಶಾಸಕ, ಮಾಜಿ ಸಚಿವ ರಾಜುಗೌಡ ಅವರ ತಾಯಿ ನಿಧನರಾಗಿದ್ದಾರೆ.

    ಬೆಂಗಳೂರಿನ ಕೋಲಂಬಿಯಾ ಆಸ್ಪತ್ರೆಯಲ್ಲಿ ತಿಮ್ಮಮ್ಮ ಶಂಬನಗೌಡ ನಾಯಕ್ ಕೊನೆಯುಸಿರೆಳೆದಿದ್ದಾರೆ. ಪಾಶ್ರ್ವವಾಯುಗೆ ತುತ್ತಾಗಿದ್ದ ತಿಮ್ಮಮ್ಮ ನಾಯಕ್ ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

    ಇತ್ತೀಚೆಗೆ ತಿಮ್ಮಮ್ಮ ಬಿದ್ದು ಗಾಯಗೊಂಡಿದ್ದರು. ಅಲ್ಲದೆ ತಿಮ್ಮಮ್ಮ ಶಸ್ತ್ರಚಿಕಿತ್ಸೆಗೆ ಕೂಡ ಒಳಗಾಗಿದ್ದರು. ಒಟ್ಟಿನಲ್ಲಿ ದೀರ್ಘ ಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ತಿಮ್ಮಮ್ಮ ಕೊನೆಯುಸಿರೆಳೆದಿದ್ದಾರೆ.

    ತಿಮ್ಮಮ್ಮ ಪಾರ್ಥಿವ ಶರೀರವನ್ನು ಸುರಪುರಕ್ಕೆ ಕರೆತರಲು ವ್ಯವಸ್ಥೆ ಮಾಡಲಾಗಿದ್ದು, ಸ್ವಗ್ರಾಮ ಕೊಡೆಕಲ್ ನಲ್ಲಿ ನಾಳೆ(ಮಂಗಳವಾರ) ಮಧ್ಯಾಹ್ನ ಅಂತ್ಯಕ್ರಿಯೆ ನಡೆಯುವುದಾಗಿ ಕುಟುಂಬ ಮೂಲಗಳ ಮಾಹಿತಿ ನೀಡಿವೆ.

  • ಬಿಎಸ್‍ವೈ ಅವಧಿ ಮುಗಿದ ನಂತ್ರ ದಲಿತರಿಗೆ ಸಿಎಂ ಪಟ್ಟ: ರಾಜು ಗೌಡ

    ಬಿಎಸ್‍ವೈ ಅವಧಿ ಮುಗಿದ ನಂತ್ರ ದಲಿತರಿಗೆ ಸಿಎಂ ಪಟ್ಟ: ರಾಜು ಗೌಡ

    ಯಾದಗಿರಿ: ಸಿಎಂ ಬಿಎಸ್‍ವೈ ಅವಧಿ ಮುಗಿದ ನಂತರ ರಾಜ್ಯದಲ್ಲಿ ದಲಿತರಿಗೆ ಸಿಎಂ ಪಟ್ಟ ಸಿಗಲಿದೆ ಎಂದು ಶಾಸಕ ರಾಜುಗೌಡ ಭವಿಷ್ಯ ನುಡಿದಿದ್ದಾರೆ.

    ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದಲಿತರ ಪರ ರಾಜುಗೌಡ ಬ್ಯಾಟಿಂಗ್ ಮಾಡಿದ್ದಾರೆ. ದಲಿತರು ಸಿಎಂ ಆಗಬೇಕಾದರೆ ಅದು ಬಿಜೆಪಿಯಿಂದಲೇ ಸಾಧ್ಯ. ಬೇರೆ ಪಕ್ಷದಲ್ಲಿ ಆಗುವುದಿಲ್ಲ. ಈಗ ನಾವೆಲ್ಲ ಸಿಎಂ ಬಿಎಸ್‍ವೈ ಅವರ ಹೆಸರಿನಲ್ಲಿ ಶಾಸಕರಾಗಿದ್ದೇವೆ ಎಂದರು.

    ಯಡಿಯೂರಪ್ಪನವರ ಅವಧಿ ಮುಗಿದ ನಂತರ ಬಿಜೆಪಿ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ದಲಿತರಿಗೆ ಸಿಎಂ ಸ್ಥಾನ ಸಿಗುತ್ತದೆ. ಬಿಜೆಪಿಯಿಂದಲೇ ದಲಿತರಿಗೆ ಒಳ್ಳೆಯ ಸ್ಥಾನಮಾನ ಸಿಗಲು ಸಾಧ್ಯ. ಕಾಂಗ್ರೆಸ್ ದಲಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ದಲಿತರ ಅಭಿವೃದ್ಧಿಯ ಬಗ್ಗೆ ಕಾಳಜಿ ತೋರಿಲ್ಲ. ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದರೂ ದಲಿತರಿಗೆ ಸಿಎಂ ಹಾಗೂ ಡಿಸಿಎಂ ಸ್ಥಾನವನ್ನು ನೀಡಿಲ್ಲ ಎಂದು ವಾಗ್ದಾಳಿ ಮಾಡಿದರು.

    ಮಲ್ಲಿಕಾರ್ಜುನ ಖರ್ಗೆ ಅವರು ಹಲವಾರು ವರ್ಷ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಆದರೆ ದುಡಿದವರಿಗೆ ಸಿಎಂ ಸ್ಥಾನ ನೀಡಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಅನಿವಾರ್ಯ ಪರಿಸ್ಥಿತಿಯಲ್ಲಿ ಜಿ.ಪರಮೇಶ್ವರಗೆ ಡಿಸಿಎಂ ಸ್ಥಾನ ಕೊಟ್ಟಿದ್ದಾರೆ. ಆದರೆ 2013 ರಲ್ಲಿಯೇ ಪರಮೇಶ್ವರ್ ಅವರಿಗೆ ಕಾಂಗ್ರೆಸ್ ಸಿಎಂ ಮಾಡಿಲ್ಲವೆಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.