Tag: ರಾಜೀವ್ ಸೇನ್

  • ಸುಶ್ಮಿತಾ ಸೇನ್ ಮಾಜಿ ಅತ್ತಿಗೆಗೆ ಆರ್ಥಿಕ ಸಂಕಷ್ಟ- ಆನ್‌ಲೈನ್‌ನಲ್ಲಿ ನಟಿ ಸೀರೆ ಮಾರಾಟ

    ಸುಶ್ಮಿತಾ ಸೇನ್ ಮಾಜಿ ಅತ್ತಿಗೆಗೆ ಆರ್ಥಿಕ ಸಂಕಷ್ಟ- ಆನ್‌ಲೈನ್‌ನಲ್ಲಿ ನಟಿ ಸೀರೆ ಮಾರಾಟ

    ಬಾಲಿವುಡ್ ನಟಿ ಸುಶ್ಮಿತಾ ಸೇನ್ (Sushmita Sen) ಮಾಜಿ ಅತ್ತಿಗೆ ಚಾರು ಅಸೋಪಗೆ (Charu Asopa) ಆರ್ಥಿಕ ಸಂಕಷ್ಟ ಎದುರಾದ ಹಿನ್ನೆಲೆ ಮುಂಬೈ ತೊರೆದಿದ್ದಾರೆ. ಇದರ ನಡುವೆ ಆನ್‌ಲೈನ್‌ನಲ್ಲಿ ಸೀರೆ ಮಾರಾಟ ಮಾಡ್ತಿರೋ ನಟಿ ಚಾರು ವಿಡಿಯೋ ಭಾರೀ ವೈರಲ್ ಆಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ತಾವು ಹೊಸ ಬ್ಯುಸಿನೆಸ್ ಶುರು ಮಾಡಿರುವ ಬಗ್ಗೆ ಅವರು ಮಾತನಾಡಿದ್ದಾರೆ. ಇದನ್ನೂ ಓದಿ:ಸಿಂಗಾಪುರದಲ್ಲಿ ಅಗ್ನಿ ಅವಘಡ: ಪವನ್ ಕಲ್ಯಾಣ್ ಪುತ್ರನ ಆರೋಗ್ಯದ ಬಗ್ಗೆ ಅಪ್‌ಡೇಟ್ ಕೊಟ್ರು ಚಿರಂಜೀವಿ

    ಸಂದರ್ಶನವೊಂದರಲ್ಲಿ ನಟಿ ಚಾರು ಅಸೋಪ ಮಾತನಾಡಿ, ಆನ್‌ಲೈನ್‌ನಲ್ಲಿ ಬಟ್ಟೆ ಮಾರಾಟ ಮಾಡ್ತಿರೋದು ನಿಜ. ಮುಂಬೈ ಬಿಟ್ಟು ನನ್ನ ಪೋಷಕರೊಂದಿಗೆ ನಾನು ಮತ್ತು ಮಗಳು ರಾಜಸ್ಥಾನದ ಬಿಕಾನೇರ್‌ಗೆ ವಾಸಿಸುತ್ತಿದ್ದೇನೆ ಎಂದಿದ್ದಾರೆ. ಮುಂಬೈನಲ್ಲಿ ವಾಸಿಸೋದು ಸುಲಭವಲ್ಲ. ಮನೆಯ ಬಾಡಿಗೆ ಮತ್ತು ಇತರೆ ಖರ್ಚು ಸೇರಿ 1 ಲಕ್ಷದಿಂದ 1.5 ಲಕ್ಷ ರೂ. ಆಗುತ್ತಿತ್ತು. ಅದನ್ನು ನಿಭಾಯಿಸುವುದು ಅಷ್ಟು ಸುಲಭವಾಗಿರಲಿಲ್ಲ. ಮಗಳನ್ನು ಒಂಟಿಯಾಗಿ ದಾದಿ ಜೊತೆ ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಶೂಟಿಂಗ್ ಇದ್ದ ಸಂದರ್ಭದಲ್ಲಿ ಕಷ್ಟವಾಗುತ್ತಿತ್ತು. ಹಾಗಾಗಿ ನನ್ನೂರಿಗೆ ಬಂದು ಸ್ವಂತ ಬ್ಯುಸಿನೆಸ್ ಆರಂಭಿಸಿದೆ. ಇದು ಆತುರದಲ್ಲಿ ಕೈಗೊಂಡ ನಿರ್ಧಾರವಲ್ಲ ಎಂದಿದ್ದಾರೆ.

     

    View this post on Instagram

     

    A post shared by Charu Asopa (@asopacharu)

    ಅವರ ಆರ್ಥಿಕ ಸ್ಥಿತಿಯನ್ನು ಟ್ರೋಲ್ ಮಾಡಿದ್ದರ ಕುರಿತು ನಟಿ ಮಾತನಾಡಿ, ನೀವು ಹೊಸದನ್ನು ಶುರು ಮಾಡಿದಾಗ ಎಲ್ಲರೂ ಕಷ್ಟಪಡುತ್ತಾರೆ. ನನ್ನ ವಿಚಾರದಲ್ಲೂ ಅದೇ ಆಗಿದೆ. ಆರ್ಡರ್ ತೆಗೆದುಕೊಳ್ಳುವುದರಿಂದ ಹಿಡಿದು ಈಗ ಎಲ್ಲವನ್ನು ನಿಭಾಯಿಸುತ್ತಿದ್ದೇನೆ. ನನ್ನ ಮಗುವಿನ ಕಡೆ ಗಮನ ಹರಿಸಲು ಈ ನಿರ್ಧಾರ ಕೈಗೊಂಡಿದ್ದೇನೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ. ಈ ವೇಳೆ, ಶೂಟಿಂಗ್ ಇದ್ದಾಗ ಮಾತ್ರ ಮುಂಬೈಗೆ ಬರೋದಾಗಿ ಚಾರು ಹೇಳಿದ್ದಾರೆ. ಇದನ್ನೂ ಓದಿ:ಸಿನಿಮಾ ಸೋತ್ರೂ ಶ್ರೀವಲ್ಲಿಗೆ ಬೇಡಿಕೆ- ಶಾಹಿದ್ ಕಪೂರ್‌ಗೆ ರಶ್ಮಿಕಾ ಜೋಡಿ

    ಅಂದಹಾಗೆ, ಬಾಲಿವುಡ್ ನಟಿ ಸುಶ್ಮಿತಾ ಸೇನ್ ಸಹೋದರ ರಾಜೀವ್ ಸೇನ್‌ರನ್ನು ಚಾರು ಅಸೋಪ ಮದುವೆಯಾಗಿದ್ದರು. ಈ ಜೋಡಿಗೆ ಜಿಯಾನಾ ಎಂಬ ಮಗಳಿದ್ದಾಳೆ. ಕೆಲ ಮನಸ್ತಾಪಗಳಿಂದ ರಾಜೀವ್ ಮತ್ತು ಚಾರು ಡಿವೋರ್ಸ್ ಪಡೆದರು.

  • ಡಿವೋರ್ಸ್ ಆಗಿ ಒಂದು ವಾರ ಕಳೆದಿಲ್ಲ ಹೆಂಡ್ತಿ ಬೇಕು ಎಂದ ಸುಶ್ಮಿತಾ ಸೇನ್ ಅಣ್ಣ

    ಡಿವೋರ್ಸ್ ಆಗಿ ಒಂದು ವಾರ ಕಳೆದಿಲ್ಲ ಹೆಂಡ್ತಿ ಬೇಕು ಎಂದ ಸುಶ್ಮಿತಾ ಸೇನ್ ಅಣ್ಣ

    ಬಾಲಿವುಡ್ (Bollywood) ಸ್ಟಾರ್ ನಟಿ ಸುಶ್ಮಿತಾ ಸೇನ್ (Sushmitha Sen) ಅವರ ಸಹೋದರ ರಾಜೀವ್ ಸೇನ್ (Rajeev Sen) ಮತ್ತು ಅವರ ಪತ್ನಿ ಕಿರುತೆರೆ ನಟಿ ಚಾರು ಅಸೋಪಾ (Charu) ಅಧಿಕೃತವಾಗಿ ಡಿವೋರ್ಸ್ ಪಡೆದಿದ್ದರು. ಈ ಮೂಲಕ 4 ವರ್ಷಗಳ ದಾಂಪತ್ಯ ಬದುಕಿಗೆ ಜೂನ್ 8ರಂದು ಅಂತ್ಯ ಹಾಡಿದ್ದರು. ಹೀಗಿರುವಾಗ ಈಗ ಬೇರೇ ಕಥೆ ಶುರುವಾಗಿದೆ. ಡಿವೋರ್ಸ್ ಆಗಿ ಒಂದು ವಾರ ಕಳೆದಿಲ್ಲ ಹೆಂಡ್ತಿ ಬೇಕು ಅಂತಾ ಸ್ಟಾರ್‌ನಟಿ ಸುಶ್ಮಿತಾ ಸೇನ್ ಅಣ್ಣ ರಾಜೀವ್ ಬಾಯ್ಬಿಟ್ಟಿದ್ದಾರೆ.

    ಮಗಳನ್ನೂ ಒಳಗೊಂಡಿರುವ ಸಂಬಂಧ ಇದಾಗಿರುವುದರಿಂದ ನಮ್ಮಲ್ಲಿ ಗೆಳೆತನ ಮುಖ್ಯ. ನಾವಿಬ್ಬರೂ ಎಂದಿಗೂ ಪರಸ್ಪರ ಒಬ್ಬರಿಗೊಬ್ಬರ ಒಳ್ಳೆಯದನ್ನೇ ಬಯಸುತ್ತೇವೆ ಎಂದು ಚಾರು ಅಸೋಪಾ ಈ ಸಂದರ್ಶನವೊಂದರಲ್ಲಿ ಹೇಳಿದ್ದರು. ಈ ಬೆನ್ನಲ್ಲೇ ರಾಜೀವ್ ಮಾತನಾಡಿ ತಾವಿಬ್ಬರೂ ಪರಸ್ಪರ ಸಪೋರ್ಟ್ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ತಂದೆಯಾಗಿ ಮಗಳಿಗೆ ಹೆಚ್ಚಿನ ಸಮಯ ಕೊಡುವುದು ನನ್ನ ಆದ್ಯತೆ. ಹಾಗೆಯೇ ಚಾರುವನ್ನು ಚೆನ್ನಾಗಿ ನೋಡಿಕೊಳ್ಳುವುದು ಕೂಡಾ ಅಗತ್ಯ. ನನ್ನ ಪ್ರೀತಿ ಹಾಗೂ ಬೆಂಬಲ ಹೀಗೆಯೇ ಇರುತ್ತದೆ. ಒಂದು ದಿನ ನಾನು ಚಾರು ಒಂದಾಗುತ್ತೇವೆ ಎನ್ನುವ ಭರವಸೆ ಇದೆ ಎಂದಿದ್ದಾರೆ. ಈ ಮೂಲಕ ಮಾಜಿ ಪತ್ನಿ ಜೊತೆ ಮತ್ತೆ ಒಂದಾಗುವ ಬಗ್ಗೆ ರಾಜೀವ್ ಸೇನ್ ಮಾತನಾಡಿದ್ದಾರೆ. ಜೂನ್‌ 16ಕ್ಕೆ ಮದುವೆ ವಾರ್ಷಿಕೋತ್ಸವದ ಸಂಭ್ರಮವಾಗಿದ್ದು, ಈ ಬೆನ್ನಲ್ಲೇ ನಟ ಈ ಹೇಳಿಕೆ ನೀಡಿರೋದು ಅಚ್ಚರಿ ಮೂಡಿಸಿದೆ. ಇದನ್ನೂ ಓದಿ:ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚಿತ್ರಕ್ಕೆ ಟೈಟಲ್ ಫಿಕ್ಸ್

    ರಾಜೀವ್ ಸೇನ್- ಚಾರು ಜೋಡಿ 2019ರಲ್ಲಿ ಜೂನ್ 16ರಂದು ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಇಬ್ಬರ ನಡುವೆ ಹಲವು ವಿಚಾರಗಳಲ್ಲಿ ಹೊಂದಾಣಿಕೆ ಸಮಸ್ಯೆ ಎದುರಾಯಿತು. ಚಾರು, ನನ್ನ ಪತಿಗೆ ಮೊದಲೇ ಮುದುವೆಯಾಗಿತ್ತು ಆದರೂ ತಿಳಿಸದೇ ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ರೆ, ನನ್ನ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ರಾಜೀವ್ ಆರೋಪ ಮಾಡಿದ್ರು. ಇಬ್ಬರ ದಾಂಪತ್ಯದ ಗುದ್ದಾಟಕ್ಕೆ ಜೂನ್ ೮ರಂದು ತೆರೆ ಬಿದ್ದಿತ್ತು. ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದಿರೋದಾಗಿ ಅಧಿಕೃತವಾಗಿ ತಿಳಿಸಿದ್ದರು. ಹಾಗೆಯೇ ಮಗಳು ಜಿಯಾ ಪೋಷಕರಾಗಿ ಇರುತ್ತೇವೆ ಎಂದು ತಿಳಿಸಿದ್ದಾರೆ.

    ತಮ್ಮ ಡಿವೋರ್ಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಾಜೀವ್ ತಿಳಿಸಿದ್ದಾರೆ. ಚಾರು ಅಸೋಪಾ ಅವರೊಂದಿಗಿನ ವಿಚ್ಛೇದನ ಮತ್ತು ನಾಲ್ಕು ವರ್ಷಗಳ ವಿವಾಹದ ಅಂತ್ಯಪಡಿಸುತ್ತಿರುವುದಾಗಿ ಹೇಳಿದ್ದರು. ನಾವು ಒಬ್ಬರಿಗೊಬ್ಬರು ಜೊತೆ ಇರಲು ಸಾಧ್ಯವಾಗದ ವ್ಯಕ್ತಿಗಳು. ಆದರೆ, ಪ್ರೀತಿ ಉಳಿಯುತ್ತದೆ. ನಾವು ಯಾವಾಗಲೂ ನಮ್ಮ ಮಗಳಿಗೆ ತಾಯಿ ಮತ್ತು ತಂದೆಯಾಗಿರುತ್ತೇವೆ ಎಂದು ಪೋಸ್ಟ್ ಹಾಕಿರುವ ರಾಜೀವ್ ಅವರು, ಪೋಸ್ಟ್ ಜೊತೆಗೆ ರಾಜೀವ್ ಚಾರು ಅವರೊಂದಿಗಿನ ಚಿತ್ರವನ್ನು ಸಹ ಕಳೆದ ವಾರ ಹಂಚಿಕೊಂಡಿದ್ದರು.

    ಇತ್ತೀಚಿಗೆ ಬಿಗ್ ಬಾಸ್ ಒಟಿಟಿ ಸೀಸನ್ 2ಕ್ಕೆ ರಾಜೀವ್ ಸೇನ್ ಹೋಗುವ ಬಗ್ಗೆ ಸುದ್ದಿಯಾಗಿತ್ತು. ಈ ಬಗ್ಗೆ ರಾಜೀವ್ ಸ್ಪಷ್ಟನೆ ನೀಡಿದ್ದಾರೆ. ತಾವು ಬಿಗ್ ಬಾಸ್ ಮನೆಗೆ ಹೋಗುತ್ತಿಲ್ಲ. ಪ್ರೇಕ್ಷಕನಾಗಿ ಈ ಶೋ ನೋಡಲು ಇಷ್ಟ. ಆದರೆ ನನಗೆ ಇಷ್ಟು ಲಾಂಗ್ ಕಮೀಟ್‌ಮೆಂಟ್ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಬಿಗ್ ಬಾಸ್‌ಗೆ ನಟ ಬರಲಿದ್ದಾರೆ ಎಂಬ ವದಂತಿಗೆ ರಾಜೀವ್ ಸ್ಪಷ್ಟನೆ ನೀಡಿದ್ದರು.

  • 4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಸುಶ್ಮಿತಾ ಸೇನ್ ಸಹೋದರ ರಾಜೀವ್

    4 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಸುಶ್ಮಿತಾ ಸೇನ್ ಸಹೋದರ ರಾಜೀವ್

    ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ (Sushmitha Sen) ಅವರ ಸಹೋದರ ರಾಜೀವ್ ಸೇನ್ (Rajeev sen) ಇದೀಗ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. 4 ವರ್ಷಗಳ ಮದುವೆ ದಾಂಪತ್ಯಕ್ಕೆ ರಾಜೀವ್ ಸೇನ್ ಅಂತ್ಯ ಹಾಡಿದ್ದಾರೆ. ಪತ್ನಿ ಚಾರು ಅಸೋಪಾಗೆ (Charu Asopa) ರಾಜೀವ್ ಸೇನ್ ಡಿವೋರ್ಸ್ (Divorce) ನೀಡಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ.

    ರಾಜೀವ್ ಸೇನ್- ಚಾರು ಜೋಡಿ 2019ರಲ್ಲಿ ಜೂನ್ 16ರಂದು ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಇಬ್ಬರ ನಡುವೆ ಹಲವು ವಿಚಾರಗಳಲ್ಲಿ ಹೊಂದಾಣಿಕೆ ಸಮಸ್ಯೆ ಎದುರಾಯಿತು. ಚಾರು, ನನ್ನ ಪತಿಗೆ ಮೊದಲೇ ಮುದುವೆಯಾಗಿತ್ತು ಆದರೂ ತಿಳಿಸದೇ ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ರೆ, ನನ್ನ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ರಾಜೀವ್ ಆರೋಪ ಮಾಡಿದ್ರು.

    ಇಬ್ಬರ ದಾಂಪತ್ಯದ ಗುದ್ದಾಟಕ್ಕೆ ಇದೀಗ ತೆರೆ ಬಿದ್ದಿದೆ. ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆಯೋದಾಗಿ ಅಧಿಕೃತವಾಗಿ ತಿಳಿಸಿದ್ದಾರೆ. ಹಾಗೆಯೇ ಮಗಳು ಜಿಯಾ ಪೋಷಕರಾಗಿ ಇರುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ನನ್ನನ್ನು ಕೊಲ್ಲಲು ನಟ ಅಕ್ಷಯ್ ಕುಮಾರ್ ಸುಪಾರಿ ಕೊಟ್ಟಿದ್ದಾರೆ: ಖಾನ್ ಟ್ವೀಟ್

    ತಮ್ಮ ಡಿವೋರ್ಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಾಜೀವ್ ತಿಳಿಸಿದ್ದಾರೆ. ಚಾರು ಅಸೋಪಾ ಅವರೊಂದಿಗಿನ ವಿಚ್ಛೇದನ ಮತ್ತು ನಾಲ್ಕು ವರ್ಷಗಳ ವಿವಾಹದ ಅಂತ್ಯಪಡಿಸುತ್ತಿರುವುದಾಗಿ ಹೇಳಿದ್ದಾರೆ. ಯಾವುದೇ ಗುಡ್ ಬೈ ಇಲ್ಲ. ನಾವು ಒಬ್ಬರಿಗೊಬ್ಬರು ಇರಲು ಸಾಧ್ಯವಾಗದ ಇಬ್ಬರು ವ್ಯಕ್ತಿಗಳು. ಆದರೆ, ಪ್ರೀತಿ ಉಳಿಯುತ್ತದೆ. ನಾವು ಯಾವಾಗಲೂ ನಮ್ಮ ಮಗಳಿಗೆ ತಾಯಿ ಮತ್ತು ತಂದೆಯಾಗಿರುತ್ತೇವೆ ಎಂದು ಪೋಸ್ಟ್ ಹಾಕಿರುವ ರಾಜೀವ್ ಅವರು, ಪೋಸ್ಟ್ ಜೊತೆಗೆ ರಾಜೀವ್ ಚಾರು ಅವರೊಂದಿಗಿನ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನನ್ನನ್ನು ಕೊಲ್ಲಲು ನಟ ಅಕ್ಷಯ್ ಕುಮಾರ್ ಸುಪಾರಿ ಕೊಟ್ಟಿದ್ದಾರೆ: ಖಾನ್ ಟ್ವೀಟ್

    ಇತ್ತೀಚಿಗೆ ಬಿಗ್ ಬಾಸ್ ಒಟಿಟಿ ಸೀಸನ್ 2ಕ್ಕೆ ರಾಜೀವ್ ಸೇನ್ ಹೋಗುವ ಬಗ್ಗೆ ಸುದ್ದಿಯಾಗಿತ್ತು. ಈ ಬಗ್ಗೆ ರಾಜೀವ್ ಸ್ಪಷ್ಟನೆ ನೀಡಿದ್ದಾರೆ. ತಾವು ಬಿಗ್ ಬಾಸ್ ಮನೆಗೆ ಹೋಗುತ್ತಿಲ್ಲ. ಪ್ರೇಕ್ಷಕನಾಗಿ ಈ ಶೋ ನೋಡಲು ಇಷ್ಟ. ಆದರೆ ನನಗೆ ಇಷ್ಟು ಲಾಂಗ್ ಕಮೀಟ್‌ಮೆಂಟ್ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಬಿಗ್ ಬಾಸ್‌ಗೆ ನಟ ಬರಲಿದ್ದಾರೆ ಎಂಬ ವದಂತಿಗೆ ರಾಜೀವ್ ಬ್ರೇಕ್ ಹಾಕಿದ್ದಾರೆ.

  • ರಾಜೀವ್ ಸೇನ್ ಪತ್ನಿ ಜೊತೆ ನನಗೆ ಅನೈತಿಕ ಸಂಬಂಧವಿಲ್ಲ: ನಟ ಕರಣ್ ಮೆಹ್ರಾ

    ರಾಜೀವ್ ಸೇನ್ ಪತ್ನಿ ಜೊತೆ ನನಗೆ ಅನೈತಿಕ ಸಂಬಂಧವಿಲ್ಲ: ನಟ ಕರಣ್ ಮೆಹ್ರಾ

    ತನ್ನ ಪತ್ನಿಯ ಜೊತೆ ಕಿರುತೆರೆಯ ಖ್ಯಾತ ನಟ ಕರಣ್ ಮೆಹ್ರಾಗೆ (Karan Mehra) ಅನೈತಿಕ ಸಂಬಂಧವಿದೆ ಎಂದು ಸುಸ್ಮಿತಾ ಸೇನ್ ಸಹೋದರ ರಾಜೀವ್ ಸೇನ್ ಆರೋಪ ಮಾಡಿದ್ದರು. ತಮ್ಮ ಪತ್ನಿ ಚಾರು(Charu) ಮತ್ತು ಕರಣ್ ಮೆಹ್ರಾ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಕರಣ್ ಪ್ರತಿಕ್ರಿಯೆ ನೀಡಿದ್ದಾರೆ. ‘ನನಗೂ ಚಾರುಗೂ ಯಾವುದೇ ಸಂಬಂಧವಿಲ್ಲ. ಹತ್ತು ವರ್ಷಗಳಿಂದ ಅವರನ್ನು ನಾನು ಭೇಟಿ ಕೂಡ ಆಗಿರಲಿಲ್ಲ. ಜೂನ್ ನಲ್ಲಿ ಪ್ರಚಾರದ ವೇಳೆ ಕೆಲವೇ ನಿಮಿಷಗಳ ಭೇಟಿ ಆಗಿತ್ತು ಅಷ್ಟೆ. ಆದರೆ, ಅವರು ಯಾವ ಸಂಬಂಧದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ನನಗೆ ತಿಳಿದಿಲ್ಲ’ ಎಂದಿದ್ದಾರೆ.  ಅಲ್ಲದೇ ರಾಜೀವ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.

    ರಾಜೀವ್ (Rajeev Sen) ಮತ್ತು ಚಾರು ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ದಾಂಪತ್ಯ ಕಲಹ ಬೀದಿಗೂ ಬಿದ್ದಿದೆ. ರಾಜೀವ್ ಜೊತೆಗಿನ ಸಂಬಂಧವನ್ನು ಮುರಿದುಕೊಳ್ಳುವುದಕ್ಕಾಗಿ ಚಾರು ವಿಚ್ಚೇದನಕ್ಕೆ ಮುಂದಾಗಿದ್ದಾರೆ. ಹೀಗಾಗಿ ರಾಜೀವ್ ಪತ್ನಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪತಿ ಚಾರುಗೆ ಟಿವಿ ನಟ ಕರಣ್ ಮೆಹ್ರಾ ಎನ್ನುವವರ ಜೊತೆ ಸಂಬಂಧ ಇರುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಚಾರು ತಾಯಿಯೇ ತಮಗೆ ತಿಳಿಸಿರುವುದಾಗಿ ಹೇಳಿದ್ದಾರೆ. ಅವಳಿಂದಾಗಿ ನನಗೆ ಮೋಸವಾಗಿದೆ ಎನ್ನುವ ಆರೋಪ ಕೂಡ ರಾಜೀವ್ ಅವರದ್ದು. ಇದನ್ನೂ ಓದಿ:ಶೂಟಿಂಗ್‌ಗೆ ಬ್ರೇಕ್, ತಾಂಜಾನಿಯಾ ಕಾಡಿನಲ್ಲಿ ಪತ್ನಿ ಜೊತೆ ರಾಮ್‌ಚರಣ್

    ಚಾರು ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ತಾನು ಗರ್ಭಿಣಿ ಆಗಿದ್ದಾಗ ರಾಜೀವ್ ಮೋಸ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. ಈ ಕಾರಣಕ್ಕಾಗಿಯೇ ಪತಿಯಿಂದ ತಾವು ಪ್ರತ್ಯೇಕವಾಗಿ ವಾಸಿಸುತ್ತಿರುವ ವಿಚಾರವನ್ನೂ ತಿಳಿಸಿದ್ದಾರೆ. ದಾಂಪತ್ಯದಲ್ಲಿ ನನಗೆ ದ್ರೋಹ ಮಾಡಿದ್ದನ್ನು ಕ್ಷಮಿಸುವುದಿಲ್ಲ ಎಂದು ಚಾರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಇಬ್ಬರ ಜಗಳ ಈಗಾಗಲೇ ಬೀದಿರಂಪ ಆಗಿದೆ. ಆರೋಪ ಪ್ರತ್ಯಾರೋಪ ಇಬ್ಬರ ಜೀವನವನ್ನು ಯಾವ ಕಡೆ ತಗೆದುಕೊಂಡು ಹೋಗುತ್ತದೆಯೋ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಪತ್ನಿಗೆ ಟಿವಿ ಸ್ಟಾರ್ ಜೊತೆ ಸಂಬಂಧವಿದೆ ಎಂದು ಗಂಭೀರ ಆರೋಪ ಮಾಡಿದ ಸುಶ್ಮಿತಾ ಸೇನ್ ಸಹೋದರ

    ಪತ್ನಿಗೆ ಟಿವಿ ಸ್ಟಾರ್ ಜೊತೆ ಸಂಬಂಧವಿದೆ ಎಂದು ಗಂಭೀರ ಆರೋಪ ಮಾಡಿದ ಸುಶ್ಮಿತಾ ಸೇನ್ ಸಹೋದರ

    ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ (Sushmita Sen) ಮೊನ್ನೆ ಮೊನ್ನೆಯಷ್ಟೇ ಲಲಿತ್ ಮೋದಿ ವಿಚಾರಕ್ಕಾಗಿ ಸುದ್ದಿಯಾಗಿದ್ದರು. ಲಲತ್ ಮೋದಿ (Lalit Modi) ಮತ್ತು ಸುಶ್ಮಿತಾ ಸೇನ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ  ಅವರ ಸಹೋದರ ಕೂಡ ಸುದ್ದಿಗೆ ಕಾರಣರಾಗಿದ್ದಾರೆ. ಸುಶ್ಮಿತಾ ಸೇನ್ ಸಹೋದರ ರಾಜೀವ್, ಸ್ವತಃ ತನ್ನ ಪತ್ನಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪತ್ನಿ ಚಾರು ಅಸೋಪಾ ಟಿವಿ ಸ್ಟಾರ್ ಜೊತೆಗೆ ಅಫೇರ್ (Affair) ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

    ರಾಜೀವ್ (Rajeev Sen) ಮತ್ತು ಚಾರು ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ದಾಂಪತ್ಯ ಕಲಹ ಬೀದಿಗೂ ಬಿದ್ದಿದೆ. ರಾಜೀವ್ ಜೊತೆಗಿನ ಸಂಬಂಧವನ್ನು ಮುರಿದುಕೊಳ್ಳುವುದಕ್ಕಾಗಿ ಚಾರು ವಿಚ್ಛೇದನಕ್ಕೆ (Divorce) ಮುಂದಾಗಿದ್ದಾರೆ. ಹೀಗಾಗಿ ರಾಜೀವ್ ಪತ್ನಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪತ್ನಿ ಚಾರುಗೆ ಟಿವಿ ನಟ ಕರಣ್ ಮೆಹ್ರಾ ಎನ್ನುವವರ ಜೊತೆ ಸಂಬಂಧ ಇರುವುದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಚಾರು ತಾಯಿಯೇ ತಮಗೆ ತಿಳಿಸಿರುವುದಾಗಿ ಹೇಳಿದ್ದಾರೆ. ಅವಳಿಂದಾಗಿ ನನಗೆ ಮೋಸವಾಗಿದೆ ಎನ್ನುವ ಆರೋಪ ಕೂಡ ರಾಜೀವ್ ಅವರದ್ದು. ಇದನ್ನೂ ಓದಿ:‘ಜುಗಲ್ ಬಂದಿ’ಗಾಗಿ ಕನ್ನಡಕ್ಕೆ ಬಂದ ಅಪರೂಪದ ತಮಿಳು ಗಾಯಕಿ ವೈಕಂ ವಿಜಯಲಕ್ಷ್ಮಿ

    ಚಾರು (Charu) ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ತಾನು ಗರ್ಭಿಣಿ ಆಗಿದ್ದಾಗ ರಾಜೀವ್ ಮೋಸ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. ಈ ಕಾರಣಕ್ಕಾಗಿಯೇ ಪತಿಯಿಂದ ತಾವು ಪ್ರತ್ಯೇಕವಾಗಿ ವಾಸಿಸುತ್ತಿರುವ ವಿಚಾರವನ್ನೂ ತಿಳಿಸಿದ್ದಾರೆ. ದಾಂಪತ್ಯದಲ್ಲಿ ನನಗೆ ದ್ರೋಹ ಮಾಡಿದ್ದನ್ನು ಕ್ಷಮಿಸುವುದಿಲ್ಲ ಎಂದು ಚಾರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಇಬ್ಬರ ಜಗಳ ಈಗಾಗಲೇ ಬೀದಿರಂಪ ಆಗಿದೆ. ಆರೋಪ ಪ್ರತ್ಯಾರೋಪ ಇಬ್ಬರ ಜೀವನವನ್ನು ಯಾವ ಕಡೆ ತಗೆದುಕೊಂಡು ಹೋಗುತ್ತದೆಯೋ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]