Tag: ರಾಜೀವ್ ಸಾತವ್

  • ಕೊರೊನಾದಿಂದ ಗುಣಮುಖರಾದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸಂಸದ ರಾಜೀವ್ ಶತವ್ ನಿಧನ

    ಕೊರೊನಾದಿಂದ ಗುಣಮುಖರಾದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸಂಸದ ರಾಜೀವ್ ಶತವ್ ನಿಧನ

    ಮುಂಬೈ: ಕೊರೊನಾದಿಂದ ಗುಣಮುಖರಾದ ಕೆಲವೇ ದಿನಗಳಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಶತವ್ (46) ವಿಧಿವಶರಾಗಿದ್ದಾರೆ.

    ಕೊರೊನಾದಿಂದ ಗುಣಮುಖರಾದರೂ ರಾಜೀವ್ ಶತವ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿಲ್ಲ. ಹೀಗಾಗಿ ವೆಂಟಿಲೇಟರ್ ಸಹಾಯದಿಂದಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

    ರಾಜೀವ್ ಶತವ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅತ್ಯಾಪ್ತರಾಗಿದ್ದರು. ಏಪ್ರಿಲ್ 22ರಂದು ಇವರಿಗೆ ಕೊರೊನಾ ಸೋಂಕು ತಗುಲಿತ್ತು. ಕೊರೊನಾ ಬಳಿಕ ಸಾತವ್ ಅವರಿಗೆ ಹೊಸ ವೈರಲ್ ಇನ್ಫೆಕ್ಷನ್ ತಗುಲಿದ್ದು, ಗಂಭೀರ ಪರಿಸ್ಥಿತಿಯಲ್ಲಿದ್ದರು. ಹೀಗಾಗಿ ಇಂದು ಇಹಲೋಕ ತ್ಯಜಿಸಿದ್ದಾರೆ.

    ರಾಜೀವ್ ಶತವ್ ಅವರ ಸಾವಿಗೆ ಕಾಂಗ್ರೆಸ್ ನಾಯಕ ಅಣದೀಪ್ ಸುರ್ಜೇವಾಲಾ ಸಂತಾಪ ಸೂಚಿಸಿದ್ದು, ಯೂತ್ ಕಾಂಗ್ರೆಸ್ ಮೂಲಕ ನನ್ನೊಂದಿಗೆ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿದ್ದ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಸಹ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಫ್ರಂಟ್‍ಲೈನ್ ವಾರಿಯರ್ ನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸದಸ್ಯ, ರಾಜ್ಯಸಭಾ ಸದಸ್ಯ ಯಂಗ್ ಲೀಡರ್ ಆತ್ಮೀಯ ಸ್ನೇಹಿತ ರಾಜೀವ್ ಶತವ್ ಅವರನ್ನು ಕಳೆದುಕೊಂಡಿರುವುದು ತುಂಬಲಾರದ ನಷ್ಟವಾಗಿದೆ. ಪಕ್ಷವು ಅವರ ಸಮರ್ಪಣಾ ಮನೋಭಾವ, ಬಾಂಧವ್ಯ ಹಾಗೂ ಅಪಾರ ಜನಪ್ರಿಯತೆಯನ್ನು ಶ್ವಾಶ್ವತವಾಗಿ ಕಳೆದುಕೊಂಡಿದೆ. ಹೃತ್ಪೂರ್ವಕ ಸಂತಾಪ ಸೂಚಿಸುತ್ತೇನೆ ಎಂದು ಕೆ.ಸಿ.ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ.