Tag: ರಾಜೀವ್ ಗಾಂಧಿ ಫೌಂಡೇಶನ್

  • ರಾಜೀವ್ ಗಾಂಧಿ ಫೌಂಡೇಶನ್‍ಗೆ ಚೀನಾದ ಹಣ?

    ರಾಜೀವ್ ಗಾಂಧಿ ಫೌಂಡೇಶನ್‍ಗೆ ಚೀನಾದ ಹಣ?

    ನವದೆಹಲಿ: ರಾಜೀವ್ ಗಾಂಧಿ ಫೌಂಡೇಶನ್‍ಗೆ ಪೀಪಲ್ಸ್ ಆಫ್ ರಿಪಬ್ಲಿಕ್ ಆಫ್ ಚೀನಾ ಮತ್ತು ಚೈನಿಸ್ ರಾಯಭಾರಿ ಕಚೇರಿಯಿಂದ ಹಣ ಹರಿದು ಬಂದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

    ಈ ವರದಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೆಲ ಸಮಯದ ಹಿಂದೆ ಟಿವಿಯಲ್ಲಿ ಬಿತ್ತರವಾಗುತ್ತಿದ್ದ ಸುದ್ದಿ ನೋಡಿ ಶಾಕ್ ಆಯ್ತು. 2005-06ನೇ ಸಾಲಿನಲ್ಲಿ ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿ ಫೌಂಡೇಶನ್ ಗೆ ದೇಣಿಗೆ ರೂಪದಲ್ಲಿ ಚೀನಾದಿಂದ ಮೂರು ನೂರು ಸಾವಿರ ಡಾಲರ್ ಹಣ ಸಿಕ್ಕಿದೆ. ಇದು ಕಾಂಗ್ರೆಸ್ ಮತ್ತು ಚೀನಾದ ನಡುವಿನ ಗುಪ್ತ ಸಂಬಂಧ ಎಂದು ಆರೋಪಿಸಿದ್ದಾರೆ.

    ರಾಜೀವ್ ಗಾಂದಿ ಫೌಂಡೇಷನ್ ತನ್ನ ವೆಬ್‍ಸೈಟ್‍ನಲ್ಲಿ ಪೀಪಲ್ಸ್ ಆಫ್ ರಿಪಬ್ಲಿಕ್ ಆಫ್ ಚೀನಾ ತನ್ನ ಪಾಲುಗಾರ ಮತ್ತು ದೇಣಿಗೆಗಾರ ಎಂದು ಪ್ರಕಟಿಸಿಕೊಂಡಿದೆ. ಈ ಫೌಂಡೇಶನ್ ನಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಚಿದಂಬರಂ ಸೇರಿದಂತೆ ಹಲವರು ಸದಸ್ಯತ್ವ ಪಡೆದುಕೊಂಡಿದ್ದಾರೆ.