Tag: ರಾಜೀವ್ ಖಂಡೇಲ್ವಾಲ್

  • ಕಾಸ್ಟಿಂಗ್ ಕೌಚ್ ಬಗ್ಗೆ ಕಿಡಿಕಾರಿದ ನಟ ರಾಜೀವ್ ಖಂಡೇಲ್ವಾಲ್

    ಕಾಸ್ಟಿಂಗ್ ಕೌಚ್ ಬಗ್ಗೆ ಕಿಡಿಕಾರಿದ ನಟ ರಾಜೀವ್ ಖಂಡೇಲ್ವಾಲ್

    ಬಾಲಿವುಡ್‌ (Bollywood) ಹೀರೋ ರಾಜೀವ್ ಖಂಡೇಲ್ವಾಲ್ (Rajeev Khandelwal) ಅವರು ಈ ಹಿಂದೆ ತಾವು ಎದುರಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಚಾನ್ಸ್‌ಗಾಗಿ ಮಂಚಕ್ಕೆ ಬಾ ಎಂದಿರೋ ಘಟನೆ ಬಗ್ಗೆ ಯುವ ನಟ ರಾಜೀವ್ ಬಾಯ್ಬಿಟ್ಟಿದ್ದಾರೆ.

    ನಟ ರಾಜೀವ್ ಖಂಡೇಲ್ವಾಲ್ ತಾನು ಕೂಡ ಕಾಸ್ಟಿಂಗ್ ಕೌಚ್ ಸಂತ್ರಸ್ತ ಎಂದಿದ್ದಾರೆ. ಪುರುಷರಿಗೆ ಹೀಗಾದರೆ ಇನ್ನು ನಟಿಯರ ಗತಿಯೇನು ಎಂದು ಅವರು ಪ್ರಶ್ನಿಸಿದ್ದಾರೆ. ಅಂದಹಾಗೆ, ರಾಜೀವ್ ಖಂಡೇಲ್ವಾಲ್ ಅವರು, ಬಾಲಿವುಡ್‌ನ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಸೈತಾನ್, ವಿಲ್ ಯು ಮ್ಯಾರಿ, ಫೀವರ್, ಪ್ರಣಾಮ್, ಸಲಾಂ ವೆಂಕಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಕಿರುತೆರೆಯಲ್ಲೂ ಆಕ್ಟೀವ್‌ ಆಗಿದ್ದಾರೆ.

    ಅಂದು ನಿರ್ದೇಶಕರೊಬ್ಬರು ಮಂಚಕ್ಕೆ ಕರೆದಿದ್ದರು, ಅಸಭ್ಯವಾಗಿ ಮಾತನಾಡುತ್ತಿದ್ದರು ಎಂದು ಅವರ ಹೆಸರು ಹೇಳದೇ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ರಾಜೀವ್ ಮಾತನಾಡಿದ್ದಾರೆ. ನಾನು ಅಲ್ಲಿಂದ ಬೈದು ಹೊರಕ್ಕೆ ಬಂದೆ ಎಂದಿರುವ ಅವರು, ನನಗೆ ಅದೊಂದು ಕೆಟ್ಟ ಅನುಭವ. ಆದರೆ ಅವರನ್ನು ಬೈದು ಹೊರಕ್ಕೆ ಬರುವಲ್ಲಿ ಯಾವುದೇ ಹಿಂಜರಿಕೆ ಇರಲಿಲ್ಲ ಎಂದಿದ್ದಾರೆ. ಸಾರಿ ಬಾಸ್, ನೀವು ಹೇಳಿದ ಹಾಗೆ ನಾನು ಮಾಡಲಾರೆ ಎಂದು ಹೊರಕ್ಕೆ ಬಂದೆ ಎಂದು ಅಂದು ನಡೆದ ಘಟನೆಯನ್ನು ನೆನಪಿಸಿಕೊಂಡಿರುವ ನಟ ರಾಜೀವ್, ಮಹಿಳೆಯರ ಗತಿಯೇನು ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:ಕೆಂಪು ಬಣ್ಣದ ಸೀರೆಯಲ್ಲಿ ಗ್ಲ್ಯಾಮರಸ್ ಆಗಿ ಮಿಂಚಿದ ಮಾನ್ವಿತಾ

    ಮಹಿಳೆಯರು ಅಂತಹ ಸಂದರ್ಭಗಳನ್ನು ಪುರುಷರಂತೆ ನಿಭಾಯಿಸಲು ಸಾಧ್ಯವಿಲ್ಲ. ಪುರುಷರು ಇದನ್ನು ಧೈರ್ಯದಿಂದ ಎದುರಿಸಬಹುದು. ಆದರೆ ಮಹಿಳೆಯರಿಗೆ ಆ ಸಂದರ್ಭಗಳನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು  ರಾಜೀವ್ ಮಾತನಾಡಿದ್ದಾರೆ. ಕೆಲವೊಮ್ಮೆ ಹುಡುಗಿಯರು ಅದರಲ್ಲಿಯೂ ನಟಿಯರು ಅಂಥ ಸಂದರ್ಭಗಳಿಗೆ ಮಣಿಯಲೇ ಬೆಕಾಗುತ್ತದೆ. ಅವರಿಗೆ ಬೇರೆ ವಿಧಿ ಇರುವುದಿಲ್ಲ.ಆದರೆ ಅಂತಹ ವಿಷಯಗಳನ್ನು ಹೊರಗೆ ಹೇಳುವುದಿಲ್ಲ. ಆದರೆ ಚಿತ್ರರಂಗದಲ್ಲಿ ಮಹಿಳೆಯರ ರಕ್ಷಣೆಯ ಬಗ್ಗೆಯೇ ಸದಾ ಮಾತನಾಡುತ್ತಾರೆ.ಪುರುಷರ ರಕ್ಷಣೆಯ ಬಗ್ಗೆ ಯಾರಿಗೂ ಕಾಳಜಿಯಿಲ್ಲ ಎಂದೂ ರಾಜೀವ್ ಹೇಳಿದ್ದಾರೆ.