Tag: ರಾಜಾ ವೆಂಕಟಪ್ಪ ನಾಯಕ್

  • ಪೊಲೀಸ್ ಠಾಣೆಗೆ ಬೆಂಕಿ ಹಚ್ಚತ್ತೀನಿ-ಮಾಜಿ ಶಾಸಕನ ಅವಾಜ್

    ಪೊಲೀಸ್ ಠಾಣೆಗೆ ಬೆಂಕಿ ಹಚ್ಚತ್ತೀನಿ-ಮಾಜಿ ಶಾಸಕನ ಅವಾಜ್

    ಯಾದಗಿರಿ: ಸುರಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ್ ಪೊಲೀಸರ ಮೇಲೆ ದರ್ಪ ಮೆರೆದಿದ್ದಾರೆ. ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಮಾಜಿ ಶಾಸಕರು ಸೇರಿದಂತೆ 8 ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಶುಕ್ರವಾರ ಬೆಳಗ್ಗೆ ಠಾಣೆಗೆ ಮಾಜಿ ಶಾಸಕರ ಪುತ್ರ ರಾಜಾ ವೇಣುಗೋಪಾಲ ನಾಯಕ ಹಾಗು ಸಂಗಡಿಗರು ಕರ್ತವ್ಯ ನಿರತ ಶಂಭುರಾವ್, ಬಸವರಾಜ್ ಮತ್ತು ಶರಣಗೌಡ ಎಂಬವರಿಗೆ ಅವಾಚ್ಯಪದಗಳಿಂದ ನಿಂದಿಸಿದ್ದಾರೆ. ಕೆಲ ಸಮಯದ ಬಳಿಕ ಠಾಣೆಗೆ ಬಂದ ರಾಜಾ ವೆಂಕಟಪ್ಪ ನಾಯಕ, ಡಿಎಸ್‍ಪಿ ಮತ್ತು ಸಿಪಿಐ ಎಲ್ಲಿ? ಅವರನ್ನು ಕರೆಸಿ ಎಂದು ಅವಾಚ್ಯಪದಗಳನ್ನು ಬಳಕೆ ಮಾಡಿ ಬೈದಿದ್ದಾರೆ. ಇಡೀ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ ಎಂದು ಕರ್ತವ್ಯ ನಿರತ ಪೊಲೀಸರಿಗೆ ಅವಾಜ್ ಹಾಕಿ ಎಲ್ಲರೂ ಹಿಂದಿರುಗಿದ್ದಾರೆ.

    ಘಟನೆ ಬಳಿಕ ಪೊಲೀಸ್ ಸಿಬ್ಬಂದಿ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಜೀವಬೆದರಿಕೆ ಹಿನ್ನೆಲೆಯಲ್ಲಿ ಮಾಜಿ ಶಾಸಕರು ಸೇರಿದಂತೆ 8 ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv